Friday, September 3, 2010

ಶ್ರೀ ರಂಗ ಪಟ್ಟಣದ ರಾಕೆಟುಗಳು ಹಾಗು ಅದರ ತಂತ್ರ ಜ್ಞಾನ ವಿದೇಶಿಯರನ್ನು ಬೆಚ್ಚಿ ಬೀಳಿಸಿ ಅಚ್ಚರಿ ಗೊಳಿಸಿದ್ದವು !!!!

ಹೌದು ಸ್ವಾಮೀ ಶ್ರೀ ರಂಗ ಪಟ್ಟಣದಲ್ಲಿ ಶತ್ರುಗಳನ್ನು ಎದುರಿಸಲು ಪ್ರಥಮ ಭಾರಿಗೆ ಯುದ್ದದಲ್ಲಿ ರಾಕೆಟುಗಳನ್ನು ಉಪಯೋಗಿಸಲಾಯಿತು. ಇದು ಆಂಗ್ಲರನ್ನು ಬೆಚ್ಚಿ ಬೀಳಿಸಿತ್ತು.ವಿಶ್ವದಲ್ಲಿ ಎಲ್ಲೂ ಇಂತಹ ಪ್ರತಿರೋದ ತೋರಿಸುವ ರಾಕೆಟುಗಳನ್ನು ಆಂಗ್ಲರು ಕಂಡಿರಲಿಲ್ಲ.ಯುದ್ದದಲ್ಲಿ ಮೇಲೆರಗಿದ ರಾಕೆಟುಗಳು ಅಪಾರ ಪ್ರಮಾಣದ ಹಾನಿಯನ್ನು ಶತ್ರುಗಳಿಗೆ ಮಾಡಿದ್ದವು. ಇದರ ತಂತ್ರಜ್ಞಾನದ ಬಗ್ಗೆ ತಲೆಕೆಡಿಸಿಕೊಂಡ ಆಂಗ್ಲರು 1799 ರಲ್ಲಿ ಶ್ರೀ ರಂಗ ಪಟ್ಟಣ ಪತನದ ನಂತರ ಶ್ರೀ ರಂಗ ಪಟ್ಟಣದ ರಾಕೆಟುಗಳ ತಂತ್ರ ಜ್ಞಾನದ ಬಗ್ಗೆ ಅಧ್ಯಯನ ನಡೆಸಿದರು ನಂತರ ಇದನ್ನು ತಾವು ವಿಶ್ವದಲ್ಲಿ ನಡೆಸಿದ ಇತರ ಯುದ್ದಗಳಲ್ಲಿ ಅಳವಡಿಸಿಕೊಂಡರು ಅಮೆರಿಕಾದ ನಾಸಾ ದಲ್ಲಿಯೂ ಸಹ ಈ ಬಗ್ಗೆ ಮಾಹಿತಿ ಕಂಡಿದ್ದಾಗಿ ಮಾಜಿ ರಾಷ್ಟ್ರಪತಿಗಳಾದ ಶ್ರೀ ಅಬ್ದುಲ್ ಕಲಾಮ್ ರವರೂ ತಮ್ಮ" wings of fire " ನಲ್ಲಿಯೂ ಉಲ್ಲೇಖಿಸಿದ್ದಾರೆ.ಅದೇರೀತಿ " history t .v . ನವರು ಬ್ರಿಟೀಶ್ ವಿಜ್ಞಾನಿಗಳು ಶ್ರೀ ರಂಗ ಪಟ್ಟಣದ ರಾಕೆಟುಗಳ ಬಗ್ಗೆ ನಡೆಸಿದ ಒಂದು ಅಧ್ಯಯನದ ಮಾಹಿತಿಯನ್ನು ನೀಡಿದ್ದಾರೆ. ಬನ್ನಿ ನೋಡಿ ನಮ್ಮ ದೇಶದಲ್ಲಿ ಹುಟ್ಟಿದ ಒಂದು ತಂತ್ರಜ್ಞಾನದ ಮಹಿಮೆಯ.ಇನ್ನೂ ಹೆಚ್ಚಿನ ಮಾಹಿತಿಗೆ http://www.answers.com/topic/congreve-rocket ನೋಡಬಹುದು.

10 comments:

ಹಳ್ಳಿ ಹುಡುಗ ತರುಣ್ said...

nija vaagiyu ondu hemmaya mattu tilivalikeya vishya...

Ondu mukya visya sir.. halebidina Hoysaleshwara temple nalli saha rocket naa chitrana kettane madiddare sir... adu rocket technology kalpane nammalli 11-12 satamanadalle ittu annodanna naavu nodabahudaagide sir... jai karnataka, jai bharath

balasubramanya said...

ತರುಣ್ ನಿಮ್ಮ ಅನಿಸಿಕೆ ನೋಡಿದೆ. ಹಳೆಬೀಡಿನ ಹೊಯ್ಸಲೆಸ್ವರ ದೇವಾಲಯ ವನ್ನು ನಾನು ಸರಿಯಾಗಿ ನೋಡಿಲ್ಲ ಮುಂದೆ ನಿಮ್ಮ ಮಾಹಿತಿಯನ್ನುಪರಿಶೀಲಿಸುತ್ತೇನೆ. ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಇರಬಹುದಾಗಿದ್ದರೂ ಪೂರಕ ಮಾಹಿತಿ ಕೊರತೆ ಇಂದಾಗಿ ಹಲವು ವಿಚಾರಗಳು ಮರೆಯಾಗಿವೆ. ನನಗೆ ಸಿಕ್ಕ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಹೆಚ್ಚಿನ ಮಾಹಿತಿ ಇದ್ದಲ್ಲಿ ನೀವೂ ಹಂಚಿಕೊಳ್ಳಿ.ಧನ್ಯವಾದಗಳು.

sunaath said...

NASAದಲ್ಲಿ ಇರಿಸಲಾದ ಶಿಲ್ಪದಲ್ಲಿ ಶ್ರೀರಂಗಪಟ್ಟಣದಲ್ಲಿ ಟೀಪು ನಿರ್ಮಸಿದ ರಾಕೆಟ್ಟುಗಳ ಚಿತ್ರವಿದೆ.

ಸೀತಾರಾಮ. ಕೆ. / SITARAM.K said...

Important information.Thanks for sharing.

shivu.k said...

ಬಾಲು ಸರ್,
ಇದು ಪುಸ್ತಕದಲ್ಲಿ ಓದಿದ್ದೆ. ಆದ್ರೆ ಅದನ್ನು ಕದ್ದಿದ್ದು ಬ್ರಿಟಿಷರು ಅಂತ ಗೊತ್ತಿರಲಿಲ್ಲ. ಅದರ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕೆ ಥ್ಯಾಂಕ್ಸ್..

PARAANJAPE K.N. said...

Thanks for sharing this information. Good one.

ಮನಮುಕ್ತಾ said...

ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ.ಧನ್ಯವಾದಗಳು.

Dr.D.T.Krishna Murthy. said...

ಬಾಲೂ ಸರ್;ಒಳ್ಳೆಯ ಮಾಹಿತಿಗೆ ತುಂಬಾ ತುಂಬಾ ಥ್ಯಾಂಕ್ಸ್.

ಸುಬ್ರಮಣ್ಯ said...

ಉತ್ತಮ ಮಾಹಿತಿ.
ಧನ್ಯವಾದ ಬಾಲು ಅಣ್ಣ.

Ittigecement said...

ಬಾಲೂ ಜೀ..

ಈ ಮಾಹಿತಿ ಕನ್ನಡಿಗನಾದ ನನಗೇ ಗೊತ್ತಿರಲಿಲ್ಲ..

ನಾವು ಹೆಮ್ಮೆ ಪಡುವಂಥಹ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು..