Saturday, September 11, 2010

ಈ ಕನ್ನಡ ಹಾಡಿನಲ್ಲಿ ಪ್ರೀತಿಯ ಕವಿತೆ ಚಿತ್ತಾರದ ಚಿಲುಮೆಯಾಗಿ ನರ್ತಿಸಿದೆ.!!!

ನಾನು ಚಿಕ್ಕವನಾಗಿದ್ದಾಗಿನಿಂದಾಗ  ಈ ಹಾಡು ಕೇಳು ತಿದ್ದೇನೆ, ಈ ಹಾಡಿನಲ್ಲಿ ಏನೋ ವಿಶೇಷವಿದೆ.  1970 ರಲ್ಲಿ ಬಿಡುಗಡೆ ಯಾದ" ಕಸ್ತೂರಿ ನಿವಾಸ "ಚಿತ್ರದ ಈ ಹಾಡು ಆರ್ .ಎನ್.ಜಯಗೋಪಾಲ್  ಲೇಖನಿಯಿಂದ  ಹುಟ್ಟಿಬಂದಿದೆ. ಎಂತಹ ಅದ್ಭುತ ಸಾಹಿತ್ಯ ಪ್ರತಿ ಪದದಲ್ಲಿಯೂ ಸಭ್ಯತೆ ಮೀರದಂತೆ ಪ್ರೀತಿಯ ಮಧುರ ಕಾವ್ಯ ಹರಿದಿದೆ.ಈ ಪ್ರೀತಿಯ ಕವಿತೆಗೆ ಪಿ.ಬಿ.ಶ್ರೀನಿವಾಸ್ ಹಾಗು ಪಿ.ಸುಶೀಲ ಹಾಡುಗಾರಿಕೆ  ಮೆರುಗು ನೀಡಿದೆ. ಹಾಡುಗಾರರು ಯಾವುದೇ ಪದದಲ್ಲಿಯೂ ಅನರ್ಥ ವಾಗದಂತೆ ಹಾಡಿದ್ದಾರೆ. ಇನ್ನೂ ಸಂಗೀತ ಸಾಮ್ರಾಟ್   ಜಿ .ಕೆ.ವೆಂಕಟೇಶ್ ಸಂಗೀತದಲ್ಲಿ ಹೊಸತನ ವಿದೆ. ಈ ಹಾಡಿನ ರೆಕಾರ್ಡಿಂಗ್ ಗಮನಿಸಿ ಸಂಗೀತ ವಾಧ್ಯಗಳ ಹಾಗು ಹಾಡುಗಾರರ ಧ್ವನಿ ವಿಶೇಷವಾಗಿ ಕೇಳಿಸುತ್ತದೆ. ಅಂದಿನ ದಿನಕ್ಕೆ ಇದು ಸೂಪರ್ ಆಗಿತ್ತು. stereo ಸೌಂಡ್ ನ ಅದ್ಭುತ  ಅನುಭವ ಈ ಹಾಡಿನಲ್ಲಿ ಮೂಡಿಬಂದಿದೆ. ಕಪ್ಪು ಬಿಳುಪಿನ ಆ ಯುಗದಲ್ಲಿ ಚಿತ್ರೀಕರಣ ತುಂಬಾ ಸುಂದರವಾಗಿ ಮೂಡಿದೆ.ಈ ಹಾಡು ಹೀಗೆ ಇರಬೇಕಿತ್ತೂ ಅನ್ನಿಸದೆ ಇರಲಾರದು ಅಲ್ವ!!ಅದಕ್ಕೆ .ಇನ್ನೂ ಈ ಹಾಡಿನ ಕವಿತೆಯ ಚಿತ್ತಾರದ ಚಿಲುಮೆಗೆ ಶ್ರೀ ರಂಗ ಪಟ್ಟಣ  ತಾಲೂಕಿನ ಕೆ.ಅರ.ಎಸ ಡ್ಯಾಮಿನ ಚಿಲುಮೆಗಳು ಡಾ// ರಾಜ್ ಕುಮಾರ್ ಹಾಗು ಆರತಿ ಜೊತೆಗೆ  ನಟಿಸಿ ನರ್ತಿಸಿವೆ. ಯಾವುದೇ ಪ್ರೇಮಿಗಳ ಮುಂದೆ ಈ ಹಾಡನ್ನು ಹಾಕಿನೋಡಿ ಅವರಿಗೆ ಇದು ತಮ್ಮದೇ ಹಾಡು ಅನ್ನಿಸದಿರದು.ಇಂತಹ ಸಮ್ಮಿಲನದ ಹಾಡು ಇಂದಿಗೂ ಪ್ರೇಮಿಗಳ ಮನಸಿನಲ್ಲಿ ಹಸಿರಾಗಿ , ಮೊಬೈಲಿನ ಎಸ.ಎಂ.ಎಸ.ಗಳಾಗಿ ಹರಿದಾಡಿವೇ. ಬನ್ನಿ ಒಮ್ಮೆ ಹಾಡನ್ನು ನೋಡುತ್ತಾ ಕೇಳುವ.

12 comments:

Ittigecement said...

ಬಾಲೂ ಜೀ...

ಒಂದು ಅದ್ಭುತ ಹಾಡು ಕೇಳಿಸಿದ್ದೀರಿ..
ತಮ್ಮ ಅನುಭವದೊಂದಿಗೆ..

ಈ ಹಾಡು ನನ್ನ ಇಷ್ಟದ ಹಾಡು ಕೂಡ...

ಗಣೇಶ ಹಬ್ಬದ ಶುಭಾಶಯಗ್ಳು..

sunaath said...

ತುಂಬ ಸುಂದರವಾದ ಹಾಡು. ನಮಗೂ ಕೇಳಿಸಿದ್ದಕ್ಕಾಗಿ ಧನ್ಯವಾದಗಳು.

mandanna said...

ನಿಜಕ್ಕೋ ಅದ್ಭುತ ಸಾಹಿತ್ಯ.ಈಗ ಇಂತಹ ರಚನೆ ಮೂಡಲು ಸಾಧ್ಯವೇ? ಮತ್ತೆ ಬರಲಿ ಆ ಕಾಲ

ಮನಮುಕ್ತಾ said...

ಬಾಲು ಅವರೆ,
ನಿಮಗೂ ನನ್ನ ಶುಭಾಶಯಗಳು.
ಚೆ೦ದದ ಹಾಡನ್ನು ಕೇಳಿಸಿದ್ದೀರಿ. ಧನ್ಯವಾದಗಳು.

shivu.k said...

ಇದು ನನ್ನ ಮೆಚ್ಚಿನ ಹಾಡು ಕೂಡ.

ನನಗೆ ಬಿಡುವಾದಾಗಲೆಲ್ಲ MP3 ಹಾಕಿಕೊಂಡು ಕೇಳುತ್ತೇನೆ..

ನಿಮಗೆ ಗಣೇಶ ಹಬ್ಬದ ಶುಭಾಶಯಗಳು.

Badarinath Palavalli said...

Thanks for good melody sir.

thanks for visiting my blog sir

Ashok.V.Shetty, Kodlady said...

Baalu Sir,

One of my fav song....kelisiddakke dhanyavadagalu...

Sriii :-) said...

ಬಾಲು ಸರ್ ಈ ಗೀತೆ ನನ್ನ all time fav .... ಈ ರೀತಿಯ ಸರಳ ಸುಮದುರ ಗೀತೆಗಳು ಬಲು ವಿರಳ. ಕೇಳಿಸಿದ್ದಕ್ಕೆ ದನ್ಯವಾದಗಳು
...ಶ್ರೀ:-)

ಅನಂತ್ ರಾಜ್ said...

ಉತ್ತಮ ಹಾಡು ಕೇಳಿಸಿದಿರಿ. ಈ ಹಾಡು ಉದಯಶ೦ಕರ್ ಅವರ ರಚನೆ ಎ೦ದು ತಿಳಿದಿದ್ದೆ..ಧನ್ಯವಾದಗಳು.

ಅನ೦ತ್

ಸಾಗರದಾಚೆಯ ಇಂಚರ said...

sundara haadu sir

tadavaagi habbada shubhaashayagalu

ಸೀತಾರಾಮ. ಕೆ. / SITARAM.K said...

ತುಂಬಾ ಸುಂದರ ಮತ್ತು ನಾನು ಯಾವಾಗಲು ಗುಣುಗುಡುವ ಹಾಡು.

ಹಳ್ಳಿ ಹುಡುಗ ತರುಣ್ said...

super songs sir... matte adanna jnapisadakke danyavaadagalu.. inna ondu 2 vaaraa nan phone alli ee songs muduvariyutte...