Sunday, April 18, 2010

ಖಾಜಿ ರಂಗ ನ್ಯಾಷನಲ್ ಪಾರ್ಕ್ ಅಡವಿಯಲ್ಲಿ ಹುಲಿ ಮಾಡಿದ ಅನಾಹುತ !!! ಸತ್ಯ ದರ್ಶನ !!

ಭಾರತದ ಖಾಜಿರನ್ಗ ಅಭಯಾರಣ್ಯ ದಲ್ಲಿ ದಿನಾಂಕ ೧೯ /೦೫/೨೦೦೪ ರಂದು ಒಂದು ಹೆಬ್ಬುಲಿ ಆನೆಯ ಮಾವುತನ ಮೇಲರಗಿ ಮಾಡಿದ ಅನಾಹುತದ ದರ್ಶನ ಇಲ್ಲಿದೆ. ಕಾಡಿನಲ್ಲಿ ಹುಲಿ ಹೇಗೆ ಚಾಣಾಕ್ಷ ತಾಣದಿಂದ ತನಗೆ ಒದಗಿಬರುವ ಅಪಾಯವನ್ನು ಎದುರಿಸುತ್ತದೆ ಎಂಬ ಬಗ್ಗೆ ಈ ವೀಡಿಯೊ ಚಿತ್ರಣ ನೀಡಿದೆ. ಕ್ಷಣಾರ್ಧದಲ್ಲಿ ಮೇಲೆರಗಿ ಆನೆಯ ಮೇಲೆ ಕುಳಿತಿದ್ದ ಮಾವುತನ ಮೇಲೆ ನಡೆಸಿದ ಹಲ್ಲೆ ನಿಜಕ್ಕೂ ಭಯಂಕರವಾಗಿದೆ. ಹುಲಿ ಎಷ್ಟಾದರೂ ಹುಲಿಯೇ ಅದಕ್ಕೆ ಧೈರ್ಯವನ್ತರನ್ನು ಹುಲಿಗೆ ಹೋಲಿಸುತ್ತಾರೆ ಆಲ್ವಾ!! ಬನ್ನಿ ನೀವು ನೋಡಿ ಈ ಹುಲಿಯ ಪ್ರತಾಪ!!

3 comments:

ಸಾಗರದಾಚೆಯ ಇಂಚರ said...

ಭಯಾನಕವಾಗಿದೆ
ಆದರೆ ಖಾಜಿ ರಂಗ ಉದ್ಯಾನವನಕ್ಕೆ ನಾನು ಹೋಗಿದ್ದೆ,
ತುಂಬಾ ತುಂಬಾ ಚಂದದ ಉದ್ಯಾನವನ ಅದು

ಮನಮುಕ್ತಾ said...

ಒಮ್ಮೆ ಬೆಚ್ಚಿದೆ. ಕೆಲದಿನಗಳ ಹಿ೦ದೆ ನನ್ನ ಮಗಳು ಕಾನ್ಹಾ ನ್ಯಾಶನಲ್ ಪಾರ್ಕ್ ಗೆ ಹೋಗಿದ್ದಳು.ಅನೇಕ ವನ್ಯ ಪ್ರಾಣಿಗಳನ್ನು ನೋಡಿದಳ೦ತೆ. ಜೊತೆಗೆ ಹುಲಿಯನ್ನು ತೀರಾ ಹತ್ತಿರದಿ೦ದ ನೋಡಲು ಸಿಕ್ಕಿತ೦ತೆ.
ಮೂಕಪ್ರಾಣಿಗಳಿಗೆ ಕೆಲವೊಮ್ಮೆ ಏನೆನ್ನಿಸಿ ಹಾಗೆ ಮಾಡಿಬಿಡುತ್ತವೋ..ಆಗೊಮ್ಮೆ ಈಗೊಮ್ಮೆ ಇ೦ತಹ ಪ್ರಕರಣ್ಗಳು ಕೇಳಿಬರುತ್ತವೆ.ಭಯವಾಗುತ್ತದೆ.

shivu.k said...

ಸರ್,

ವಿಡಿಯೋ ನೋಡಿದ ಮೇಲೆ ನಮಗೂ ಒಮ್ಮೆ ದಿಗಿಲಾಯಿತು. ನಾವು ಫೋಟೊಗ್ರಫಿಗೆ ಹೀಗೆ ಹೋಗುತ್ತಿರುತ್ತೇವೆ.
ನಾವು ಹುಷಾರಾಗಿರಬೇಕು ಅನ್ನಿಸುತ್ತೆ...