ನಮ್ಮ ಮನಸ್ಸು ಶುದ್ದವಿದ್ದರೆ ಜಗವೇ ಸುಂದರ!!!!{ if our heart and mind is pure everything is pure}
Friday, April 9, 2010
ಮನುಷ್ಯ ಯಂತ್ರಗಳ ದಾಸನಾದಾಗ ಆಗುವ ಅನಾಹುತ ತೋರಿಸುವ ಈ ಊಟ ಮಾಡಿಸುವ ಯಂತ್ರ!!!
ಜಗತ್ತಿಗೆ ನಗು ನಗು ತ್ತಲೇ ದುರಂತಗಳ ಧುಕ್ಕ ತೋರಿದ ಈ ಮಹಾನುಭಾವ ಚಾರ್ಲಿ ಚಾಪ್ಲಿನ್ ೧೯೩೬ ರಲ್ಲಿ ಮಾಡರ್ನ್ ಟೈಮ್ಸ್ ಚಿತ್ರದ ಮೂಲಕ ಜಗತ್ತಿಗೆ ಮನುಷ್ಯ ಯಂತ್ರಗಳ ದಾಸನಾದರೆ ಆಗುವ ಅನಾಹುತಗಳ ಬಗ್ಗೆ ವಿಡಂಬನಾತ್ಮಕವಾಗಿ ವಿವರಿಸಿದ್ದಾನೆ. ಚಲನ ಚಿತ್ರವೆಂದರೆ ಜಗತ್ತಿಗೆ ಹಾಗು ಸಮಾಜಕ್ಕೆ ಪೂರಕವಾದ ಮಾಹಿತಿ ಸಂದೇಶ ನೀಡಬೇಕಾದ ಮಾಧ್ಯಮ ಎಂಬುದನ್ನು ತೋರಿಸಿಕೊಟ್ಟ ಮಹನೀಯ. ಇವನೆಂದರೆ ಸತ್ಯವಾಗಿಯೂ ಹೌದು.ಈ ವೀಡಿಯೊ ನೋಡಿ ಇಲ್ಲಿ ಸಮಯ ಉಳಿಸಲು ನೌಕರನಿಗೆ ಆಹಾರ ತಿನ್ನಿಸುವ ಯಂತ್ರ ತಯಾರಿಸಿದ್ದಾರೆ. ಯಂತ್ರದ ತಾಂತ್ರಿಕ ದೋಷದಿಂದ ಉಂಟಾಗುವುದರಿಂದ ಚಾರ್ಲಿ ಪಡುವ ಪಾಡಿನ ಅಭಿನಯ ನಿತ್ಯ ನೂತನ .ಈಗಿನ ಕಾಲದ ವಿಶ್ವದ ಯಾವುದೇ ಭಾಷೆಯ ಚಲನ ಚಿತ್ರದಲ್ಲಿ ಕಾಣಸಿಗದ ಕಥೆ ,ಅಭಿನಯ , ಹಾಗುಯಂತ್ರಗಳನ್ನು ಹೆಚ್ಚು ಅವಲಂಬಿಸಿದರೆ ವಿಶ್ವಕ್ಕೆ ಒದಗಬಹುದಾದ ವಿಪತ್ತು ಇವುಗಳ ಮುನ್ಸೂಚನೆ ಯನ್ನು ಸರ್ವಕಾಲಕ್ಕೂ ಸಲ್ಲುವಂತೆ ಈ ಚಲನ ಚಿತ್ರದಲ್ಲಿ ತಿಳಿಸಿ ಚಾರ್ಲಿ ಚಾಪ್ಲಿನ್ ಅಮರನಾಗಿ ಉಳಿದ್ದಿದ್ದಾನೆ.ನೀವು ಒಮ್ಮೆ ನೋಡಿ ಅಚ್ಚರಿಪಡಿ!!!! ಹಾಗು ಇಂದು ನಾವು ನಿರ್ಮಿಸಿರುವ ಯಂತ್ರಗಳು ಮಾಡುತ್ತಿರುವ ಅನಾಹುತ ಎಷ್ಟುಜನರ ಬದುಕ ಹಾಳುಮಾದುತ್ತಿವೆ ಗಮನಿಸಿ.ಇಂದು ಉಪಯೋಗಿಸುವ ಒಂದು ಜೆ.ಸಿ.ಬಿ.ಯಂತ್ರ ಕನಿಷ್ಠ ಹತ್ತು ಕುಟುಂಬಗಳ ಆನ್ನ ಕಸಿದಿದೆ ,ಮುಂದೊಮ್ಮೆ ಯಂತ್ರಗಳೇ ನಮ್ಮನ್ನು ಹುರಿದು ಮುಕ್ಕುವ ಮುನ್ನ ಎಚ್ಚರಗೊಳ್ಳುವುದು ಒಳಿತು!!!ಅಲ್ವ ???
Subscribe to:
Post Comments (Atom)
4 comments:
Hahahha
good one
ಚಾರ್ಲಿ ಚಾಪ್ಲಿನ ಚಿತ್ರ ಚೆನ್ಆಗಿದೆ.
ಆದರೆ,...
ಮೊದಲು ಕಂಪ್ಯುಟರುಗಳ ಉಪಯೋಗ ಶುರುವಾದಾಗಲೂ ಅವು ಮನುಷ್ಯರ ುದ್ಯೋಗ ಕಸಿಯುತ್ತವೆ ಎಂದೆ ಎಲ್ಲರೂ ಹೇಳುತ್ತಿದ್ದರು. ಇಂದು, ಅತಿ ಹೆಚ್ಚು ಉದ್ದಯೋಗ ಕೊಡುತ್ತಿರುವವು. ಮನುಷ್ಯನ ಸಾಮರ್ಥ್ಯ ಕೇವಲ ಯಂತ್ರದ ಹಾಗೆ ಕೆಲಸ ಮಾಡುವುದೆ? ಆ ಶಕ್ತಿಯನ್ನು ಬುದ್ದಿಗೆ ಉಪಯೋಗಸಲಿ. ಏನಂತೀರಿ?
sir,,,
super.....
Nice message from Charlie Chaplin!!
Post a Comment