Saturday, March 2, 2013

ದೊಡ್ಡವರೆಲ್ಲಾ ಜಾಣರಲ್ಲಾ ...............!!! ಮಗ ಕಲಿಸಿದ ಜೀವನ ಪಾಠ


ಜ್ಞಾನದ ಹಣತೆ  ಬೆಳಗಿಸಲು ಕಿರಿಯರಾದರೇನು  ??


ನಮಸ್ತೆ ಬಹಳ ದಿನಗಳ ನಂತರ ಮತ್ತೆ ಬರೆಯಲು ಕುಳಿತೆ. ಹೌದು ಎರಡು ವಾರಗಳ ಹಿಂದೆ  ಪ್ರೀತಿಯ ಗೆಳೆಯ ಮಣಿಕಾಂತ್ ರವರ ಪುಸ್ತಕ ಬಿಡುಗಡೆ  ಕಾರ್ಯಕ್ರಮ ಮುಗಿಸಿ ಬೆಂಗಳೂರಿನಿಂದ ಬ್ಲಾಗ್ ಮಿತ್ರರ ಸ್ನೇಹದಲ್ಲಿ ಮಿಂದು ಹೊಸ ಹುರುಪಿನಿಂದ ಮೈಸೂರಿಗೆ ಬಂದೆ. ಮನೆ ಪ್ರವೇಶಿಸುತ್ತಿದ್ದಂತೆ ನನ್ನ ಸಹೋದರ ಭಾನು ಪ್ರಸಾದ್ ಕಾಣಿಸಿದ. ಉಭಯ  ಕುಶಲೋಪರಿ ಮುಗಿಸಿ , ಮಾತಾಡುತ್ತಾ ಕುಳಿತೆವು. ಆ ಮಾತಿನ ನಡುವೆ ಅವನು ಒಂದು ಸನ್ನಿವೇಶವನ್ನು  ಬಿಚ್ಚಿಟ್ಟ. ಮನಸಿಗೆ ಹೌದಲ್ವಾ ಅನ್ನಿಸಿತು, ಹಾಗಾಗಿ ಇದಕ್ಕೆ ಒಂದು ಕಥಾ ರೂಪ ಕೊಟ್ಟಿದ್ದೇನೆ , ಒಮ್ಮೆ ಓದಿ ನಿಮಗೆ ಇಷ್ಟವಾಗಬಹುದು.


ಆಗತಾನೆ ಕಂಪನಿಯ ಕೆಲಸ ಮುಗಿಸಿ ಮನೆಗೆ ಬಂದು ಕುಳಿತೆ, ಬೆಳಗ್ಗಿನಿಂದಾ ಒಂದೇ ಸಮಾ ಕೆಲಸ  ಒತ್ತಡ ಒತ್ತಡ  ಒತ್ತಡ , ಹೌದು ನನ್ನ ಕೆಲಸವೇ ಹಾಗೆ ನನ್ನ ಕಂಪನಿಯವರು ಹೆಚ್ಚಿನ ಹೊರೆ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ಮೊದಲೇ ನಮ್ಮ ಕಂಪನಿ  ಒಂದು. ಎಂ. ಏನ್. ಸಿ.  ನನ್ನ ಒಡನಾಟ ಹಲವಾರು ವಿದೇಶಿ ಕಂಪನಿಗಳೊಂದಿಗೆ ,  ಗ್ರಾಹಕರ ಬೇಡಿಕೆ ಪೂರೈಸುವ , ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜವಾಬ್ದಾರಿ ನನ್ನದು. ನನ್ನ ಕೆಲಸದ ಬಗ್ಗೆ ನನ್ನ ಕಂಪನಿಯವರಿಗೆ ಅತೀವ ನಂಬಿಕೆ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತೇನೆ ಎಂಬ ಭರವಸೆ ಹಾಗಾಗಿ  ನನಗೆ ಹೆಚ್ಚಿನ ಹೊರೆ ಹೊರಿಸಿದ್ದಾರೆ. ನಾನೂ ಸಹ ನನ್ನ ಕೆಲಸದ ಬಗ್ಗೆ ಅತೀವ ಕಾಳಜಿ ವಹಿಸುತ್ತೇನೆ, ನನ್ನ ಕೆಲಸದಲ್ಲಿ ನನ್ನನ್ನೇ ಮರೆಯುತ್ತೇನೆ. ಇಂತಹ ಸನ್ನಿವೇಶದಲ್ಲಿ ಮನೆಗೆ ಬರುವ ವೇಳೆ ನಿರ್ದಿಷ್ಟ ವಾಗಿರುವುದಿಲ್ಲ .ಈ ಎಲ್ಲಾ ವರ್ತುಲದಲ್ಲಿ ಜೀವಿಸುತ್ತಿರುವ ಇರುವ ನನ್ನ ಹೆಸರು "ಆನಂದ"  .


ಮನೆಗೆ  ಸುಸ್ತಾಗಿ ಬಂದ  ನಾನು  ಲ್ಯಾಪ್ ಟಾಪ್  ಕಿಟ್ಟನ್ನು ಒಂದೆಡೆ  ಬಿಟ್ಟು , ಅಲ್ಲೇ ಇದ್ದ ಸೋಫಾದ ಮೇಲೆ ಒರಗಿದೆ. ಒಳಗಿಂದ ಬಂದ  ನನ್ನ ಪ್ರಿಯ ಪತ್ನಿ     ಅನುರೂಪ   ನಗು ನಗುತ್ತಾ ಬಂದು ಪಕ್ಕದಲ್ಲಿ ಕುಳಿತು  ರಮಿಸಿ , "ಆನಂದ್ ಫ್ರೆಶ್ ಆಗಿಬನ್ನಿ  ಕಾಫಿ ಕೊಡ್ತೀನಿ'  ಅಂದಳು . ನಾನೂ ಸಹ ಯಾಂತ್ರಿಕವಾಗಿ  ಬಾತ್ ರೂಂ ಗೆ ಹೋಗಿ ಫ್ರೆಶ್ ಆಗಿ ಬಂದೆ ,

ಡೈನಿಂಗ್ ಟೇಬಲ್ ಮೇಲೆ ಬಿಸಿ ಬಿಸಿ ಪಕೋಡ  ಜೊತೆ ನಮ್ಮ ಹರಟೆ ನಡೆದಿತ್ತು. ಬಿಸಿ ಬಿಸಿ ಪಕೋಡದ ಜೊತೆ ಕಾಫಿಹೀರುತ್ತಿದಂತೆ  ಕಂಪನಿಯ ಕೆಲಸದ ಆಯಾಸ  ಆವಿಯಾಗಿ ಮಾಯವಾಗಿತ್ತು. ಅಷ್ಟರಲ್ಲಿ ನನ್ನ ಒಬ್ಬನೇ ಮಗ "ಅನೂಪ್ " ಒಳಗೆ ಬಂದವನೇ  ಪಪ್ಪಾ ಅಂತಾ ಬಂದು ಅಪ್ಪಿ ಕೊಂಡ ,


          ಅನೂಪ್ :-) "ಏನ್ ಪಪ್ಪಾ ಎಷ್ಟು ದಿನ ಆಯ್ತು ನಿಮ್ಮನ್ನ ನೋಡಿ   , ಕಳೆದ ಒಂದು ವಾರದಿಂದ    ನೀವು                   ನನಗೆ       ಸಿಕ್ತಾ ಇಲ್ಲ.                           ನಿಮ್ಮಬಳಿ  ಅರ್ಜೆಂಟ್  ಮಾತಾಡ್  ಬೇಕಾಗಿತ್ತು , ನಿಮ್ಮ ಮೊಬೈಲ್ ಗೆ ಟ್ರೈ ಮಾಡಿದೆ ನೀವು ಸಿಗಲಿಲ್ಲ ಅದಕ್ಕೆ                    ಮೇಲ್  ನಲ್ಲಿ ಮೆಸೇಜ್ ಇಟ್ಟೆ"        

ನಾನು :-)  
                "ಸಾರಿ ಮಗನೆ , ಬಹಳ ಬ್ಯುಸಿ ಕಣೋ  , ಟೈಮ್ ಸಿಕ್ತಾಇಲ್ಲ , ಕಂಪನಿ  ಮ್ಯಾನೇಜ್ಮೆಂಟ್  ಬಹಳ ಕಷ್ಟ ಆಗಿದೆ.                         ಅದಕ್ಕೆ ನೋಡು ಮನೆ ಕಡೆ ಬರೋಕೆ ಆಗ್ತಾ ಇಲ್ಲ. " ಮತ್ತೆ ಏನ್ ಸಮಾಚಾರ ?


ಅನೂಪ್ :-) 
                 "ಪಪ್ಪಾ  ನಮ್ಮ ಶಾಲೆಯಲ್ಲಿ  ಸ್ಟೂಡೆಂಟ್ಸ್ ಅಪ್ಪಂದಿರ  ಒಂದು ಮೀಟಿಂಗ್ ಕರೆದಿದ್ದಾರೆ , ಅಪ್ಪಂದಿರು ಮಾತ್ರಾ                         ಬರಬೇಕಂತೆ"  
                 
ನಾನು:-)  
              "ನಿಮ್ಮ ಸ್ಕೂಲ್ ನವರಿಗೆ ಬೇರೆ ಕೆಲಸ ಇಲ್ವಂತಾ  , ಮನೆಯಲ್ಲಿ  ಇರುವ ಪೇರೆಂಟ್ಸ್ ಪೈಕಿ  ಅಪ್ಪ ಅಥವಾ ಅಮ್ಮ                 ಇಬ್ಬರಲ್ಲಿ  ಒಬ್ಬರು ಬಂದ್ರೆ  ಸಾಲದಂತಾ ?? "

ಅನೂಪ್ :-) 
               "ಇಲ್ಲಾ ಪಪ್ಪಾ  ಅಪ್ಪಂದಿರು ಮಾತ್ರ ಬರಬೇಕಂತೆ , ಮುಂದಿನ ಶುಕ್ರವಾರ, ಪ್ಲೀಸ್ ಪಪ್ಪಾ ಇಲ್ಲಾ ಅಂತ  ಅನ್ನ                           ಬೇಡಿ  , ನೀವು ಬರಲೇ ಬೇಕು" 

ನಾನು :-)              
                "ಇಲ್ಲಾ ಅನೂಪ್  ನನಗೆ ಸಾಧ್ಯವಿಲ್ಲ  ನಿಮ್ಮ ಸ್ಕೂಲ್ ನವರಿಗೆ ಒಂದು ಲೆಟರ್ ಕೊಡ್ತೀನಿ  ಅದನ್ನು ಅವರಿಗೆ ಕೊಡು                  , ನನಗೆ ಕಂಪನಿಯ ಕೆಲಸ ಜಾಸ್ತಿ  ಬಿಡುವು ಸಿಗೋಲ್ಲ. ಕಂಪನಿ ಮ್ಯಾನೇಜ್ಮೆಂಟ್ ಬಗ್ಗೆ  ನಾನು                                            ಒಂದುಟ್ರೇನಿಂಗ        ಕೊಡಬೇಕಾಗಿದೆ,  ವಿದೇಶಿ ಕಂಪನಿಯ ಹಲವರು ಬರುತ್ತಾರೆ. ಮುಂದೊಮ್ಮೆ ನೋಡೋಣ ಸಾಧ್ಯಾ ಆದಾಗ. " ಅಂದೆ .

ಅನೂಪ್ :-)  
               ಇಲ್ಲಾ ಪಪ್ಪಾ ನೀವು ಬರದಿದ್ದರೆ , ನನಗೆ ಕಷ್ಟಾ ಆಗುತ್ತೆ, 

ನಾನು:-)
            " ಯಾಕೋ ಸ್ಕೂಲಿನಲ್ಲಿ ಏನಾದ್ರು ಯಡವಟ್ಟು ಮಾಡಿಕೊಂಡ್ಯ ?? ಏನ್ ಸಮಾಚಾರ ,                                          ಸ್ಕೂಲಿನವರು ಯಾಕೆ     ನನ್ನನ್ನು ಕರೆಯುತ್ತಿದ್ದಾರೆ"?  ಅಂದೇ ,
                ಮಗ ರಾಯ ಕೋಪ ಮಾಡಿಕೊಂಡು ಅಳುತ್ತಾ ತನ್ನ ರೂಮಿಗೆ ಹೋಗಿ  ಬಾಗಿಲನ್ನು  ರಪ್                                                 ಅಂತಾ ಬಾಗಿಲು ಮುಚ್ಚಿಕೊಂಡಾ 

ಇದನ್ನು ಗಮನಿಸಿದ ಪತ್ನಿ " ರೀ ನಿಮಗೆ ಮಗನಿಗಿಂತಾ  ನಿಮ್ಮ ಕಂಪನಿಯೇ ಜಾಸ್ತಿಯಾಯ್ತಾ ?"
ಅಂತಾ ನನ್ನನ್ನು  ಗದರಿ ಪಾಪ ಅನೂಪ್  ಇನ್ನೂ ಏನೂ ತಿಂದಿಲ್ಲ  ಅದೇನ್ ಮಾಡ್ತೀರೋ ಗೊತ್ತಿಲ್ಲಾ  ನೀವು ಶುಕ್ರವಾರ ಅನೂಪ್ ಸ್ಕೂಲಿಗೆ ಹೋಗ್ತೀರಾ ಅಷ್ಟೇ  ಅನ್ನುತ್ತಾ  ಮಗನನ್ನು  ಸಂತೈಸಲು  ನಡೆದಳು.  ನಾನೂ ಸಹ ಅವಳ ಹಿಂದೆ ನಡೆದೇ. 

ಮಗನನ್ನು ಸಂತೈಸಿ  ಊಟ ಮಾಡಿಸಿ ಸ್ಕೂಲಿಗೆ ಬರುವುದಾಗಿ ಮಾತುಕೊಟ್ಟೇ .ಮಾರನೆಯ ದಿನ  ಮಗನ ಸ್ಕೂಲಿಗೆ  ಫೋನ್ ಮಾಡಿ  ಅಪ್ಪಂದಿರ ಭೇಟಿ ಕಾರ್ಯಕ್ರಮದ ವಿವರ ಪಡೆದೆ. ಮಧ್ಯಾಹ್ನ  ಹನ್ನೆರಡಕ್ಕೆ  ಕಾರ್ಯಕ್ರಮ ಇರುವುದಾಗಿ ತಿಳಿಸಿದರು.   ಮುಂದಿನ ಶುಕ್ರವಾರ  ಬೆಳಿಗ್ಗೆ  ಇದ್ದ  ಮೀಟಿಂಗ್ ಗಳನ್ನೂ  ಮೂರು ಘಂಟೆಗೆ  ಮುಂದೂಡಲು ಕಂಪನಿಯ ನಿರ್ವಾಹಕರಿಗೆ ಹೇಳಿದೆ. ಆದರೆ ಮನದಲ್ಲಿ ಮಗನ ಶಾಲೆಯಲ್ಲಿ  ಸ್ಟೂಡೆಂಟ್ ಅಪ್ಪಂದಿರನ್ನು  ಯಾಕೆ  ಕರೆದಿದ್ದಾರೆ ? ಎಂಬ ಬಗ್ಗೆ ಅಚ್ಚರಿಯಾಗಿತ್ತು.

ಹಾಗು ಹೀಗೂ ದಿನಗಳು ಸರಿದವು, ಶುಕ್ರವಾರ ಬಂದಿತು  ಮಗನ ಸ್ಕೂಲಿಗೆ ತೆರಳುವ ಸಮಯ ಬಂತು. ಮಗನೂ ಸಹ   ಬಹಳ  ಖುಷಿಯಿಂದ  ಸಿದ್ಧನಾದ , ಸರಿ ನಾನೂ ಮತ್ತು ಅನೂಪ್  ನನ್ನವಳಿಗೆ ವಿಶ್ ಮಾಡಿ ಕಾರಿನಲ್ಲಿ ಹೊರಟೆವು.  ದಾರಿಯಲ್ಲಿ  ಸಾಗುತ್ತಿದ್ದ ಒಂದು ಕಡೆ  ಅನೂಪ್ ಕಾರನ್ನು ನಿಲ್ಲಿಸಲು  ಹೇಳಿದ.  ನನಗೆ ಅಚ್ಚರಿ!   "ಯಾಕೆ ಅನೂಪ್  ಅಂದೇ'.

ಅನೂಪ್ :-) 
                  "ಪಪ್ಪಾ  ಬನ್ನಿ ಪಪ್ಪಾ ಇನ್ನೂ ಟೈಮಿದೆ  , ನಿಮ್ಮ ಹತ್ತಿರ ಸ್ವಲ್ಪ ಮಾತಾಡ ಬೇಕೂ "                                          ಅಂದಾ ಇಬ್ಬರೂ  ಅಲ್ಲೇ ಇದ್ದ ಒಂದು ಪಾರ್ಕಿನಲ್ಲಿ ಕುಳಿತೆವು  ನನಗೆ ಇದೆಲ್ಲಾ  ವಿಚಿತ್ರವಾಗಿತ್ತು. 


ನಾನು  :-) 
                "ಅಲ್ಲಾ ಕಣೋ  ಅನೂಪ್  ಇದೇನು ಇವತ್ತು ನಿನ್ನ ವರ್ತನೆ  ವಿಚಿತ್ರವಾಗಿದೆ, ನೀನಿನ್ನೂ ಹೈಸ್ಕೂಲು ಹುಡುಗ                           ಒಂಬತ್ತನೇ  ಕ್ಲಾಸು , ಏನ್ ವಿಚಾರ  ಹೇಳಪ್ಪ ಅಂದೇ "

ಅನೂಪ್ :-) 
                  ಪಪ್ಪಾ   ನನ್ನ ಸ್ಕೂಲಿನಲ್ಲಿ  ಅಪ್ಪಂದಿರನ್ನು  ಯಾಕೆ ಕರೆಸುತ್ತಿದ್ದಾರೆ ? ಅಂತಾ ತಿಳಿದು ಕೊಳ್ಳುವ ಆಸಕ್ತಿ ಇಲ್ಲವ                         ಪಪ್ಪಾ  ?              ಅಂದಾ 

ನಾನು:-) 
                ಯಾಕೆ ಕರೆಸುತ್ತಾರೆ ಎಲ್ಲೋ  ಫೀಸ್ , ಅಥವಾ ಡೊನೆಶನ್  ಕೇಳೋಕೆ ಇರಬೇಕೂ, ಇನ್ಯಾಕೆ ? ಕರೆಸುತ್ತಾರೆ .

ಅನೂಪ್ :-
                 ಹ ಹ ಹ "ಇಲ್ಲಪ್ಪಾ , ಅದಕ್ಕಲ್ಲಾ ,  ಪ್ಲೀಸ್ ಗಮನ ಇಟ್ಟು  ಕೇಳಿ ,                                                                ಅಪ್ಪಂದಿರು  ತಮ್ಮ ಮಕ್ಕಳ ಬಗ್ಗೆ ಎಷ್ಟು ತಿಳಿದು          ಕೊಂಡಿದ್ದಾರೆ  ಎಂಬ ಬಗ್ಗೆ  ಒಂದು ಸೆಮಿನಾರ್ ಮಾಡ್ತಾ ಇದ್ದಾರೆ , ಅದರಲ್ಲಿ ಅಪ್ಪಂದಿರಿಗೆ  ಸುಮಾರು ಹತ್ತು                      ಪ್ರಶ್ನೆ ಅವರ ಮಕ್ಕಳ ವಿಚಾರದಲ್ಲಿ ಕೇಳುತ್ತಾರೆ  , ಅದರ ಆಧಾರದ ಮೇಲೆ  ಚರ್ಚೆ ನಡೆಯುತ್ತದೆ,                             ಉತ್ತಮ                  ಅಪ್ಪಂದಿರ ಆಯ್ಕೆ ಆಗುತ್ತದೆ. '' 

ನಾನು:-)
             "ಮಾಡೋಕೆ ಬೇರೆ ಕೆಲ್ಸಾ ಇಲ್ವಂತಾ ನಿಮ್ಮ ಸ್ಕೂಲಿನವರಿಗೆ  ಪಾಠ ಮಾಡೋದು ಬಿಟ್ಟು  ಇವಕ್ಕೆಲ್ಲಾ ಟೈಮ್ ಹಾಳು                ಮಾಡ್ತಾರೆ",

ಅನೂಪ್ :-)
                 "ನೋಡಿ ಪಪ್ಪಾ ಈ ಚೀಟಿಯಲ್ಲಿ ನನ್ನ ಬಗ್ಗೆ ಪೂರ್ಣ ವಿವರ ಬರೆದಿದ್ದೇನೆ, ಅದರಲ್ಲಿ ನನಗೆ ಏನು ಇಷ್ಟಾ ನನ್ನ                            ಹವ್ಯಾಸ, ನನಗೆ ಇಷ್ಟಾ ಆಗದ ವಿಚಾರಗಳು, ಇನ್ನೂ ಮುಂತಾದ ಬಹಳಷ್ಟು ವಿಚಾರ ಇಲ್ಲಿದೆ ಪ್ಲೀಸ್                                   ಪ್ಲೀಸ್ ಓದಿಕೊಳ್ಳಿ  ಆಮೇಲೆ  ಮುಂದಿನ ವಿಚಾರ ಮಾತಾಡೋಣ"  

 ಮಗನಿಗೆ ಯಾಕೆ ಬೇಸರ ಅಂತಾ  ಅವನು ಕೊಟ್ಟ ಚೀಟಿಯನ್ನು ಓದಿಕೊಂಡೆ  , ಅರೆ ಇಷ್ಟೆಲ್ಲಾ  ವಿಚಾರ ಇವನಿಗೆ ಗೊತ್ತ  ಅನ್ನಿಸಿತು  . ನಮ್ಮ ಪಯಣ ಮುಂದು ವರೆಯಿತು. ಶಾಲೆ ತಲುಪಿದೆವು. ಕಾರ್ಯಕ್ರಮ  ಶುರು  ಆಯ್ತು  , ಬಹಳಷ್ಟು ಮಕ್ಕಳ ಅಪ್ಪಂದಿರು  ಅಲ್ಲಿ ಬಂದಿದ್ದರು, ಶಾಲೆಯವರು ಅವರ ಮಕ್ಕಳ ಬಗ್ಗೆ  ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪೆಚ್ಚಾಗಿ ನಿಂತರು ಮತ್ತೆ ಕೆಲವರು ಉತ್ತರ ನೀಡಿದರೂ  ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲಾಗದೆ ನಿಂತರು, ನನ್ನ ಸರದಿ ಬಂತು  , ಶಾಲೆಯವರು  ನನ್ನ ಮಗನ ಬಗ್ಗೆ ಕೇಳಿದ   ಹದಿನೈದು  ಪ್ರಶ್ನೆಗಳಿಗೆ ಒಂದಕ್ಕೂ ಬಿಡದೆ  ಸರಿ ಉತ್ತರ ನೀಡಿದ್ದೆ ನನ್ನ ಮಗ ತನ್ನ ಬಗ್ಗೆ  ಆ ಚೀಟಿಯಲ್ಲಿ ನೀಡಿದ್ದ ಅಷ್ಟೂ ವಿವರ  ಆ ಪ್ರಶ್ನೆಗಳಿಗೆ ಉತ್ತರ ನೀಡಲು ಸಹಾಯ ಮಾಡಿತು. ಅಂತಿಮವಾಗಿ  ಅಂದಿನ  ಸೆಮಿನಾರ್ ನಲ್ಲಿ  ನಾನು ನೀಡಿದ ಉತ್ತರದ ಹಲವು  ವಿಚಾರಗಳನ್ನು ವೇದಿಕೆಯಲ್ಲಿದ್ದ ಪಂಡಿತರು  ಚರ್ಚೆ ಮಾಡಿ ನಾನು ನೀಡಿದ  ಉತ್ತರವನ್ನು  ಅನುಮೋದಿಸಿ  ನನ್ನನ್ನು ಮಾದರಿ ಅಪ್ಪಾ ಅಂತಾ ಘೋಷಿಸಿ  ಸತ್ಕಾರ ಮಾಡಿದರು. ಅಂದಿನ ಕಾರ್ಯಕ್ರಮದ ಹೀರೋ ನಾನಾಗಿದ್ದೆ. 


ಸಾಂದರ್ಬಿಕ ಚಿತ್ರ 


ಕಾರ್ಯ ಕ್ರಮ ಮುಗಿಸಿದ ನಾನು ನನ್ನ ಮಗನ  ಜೊತೆ ಆಚೆ ಬಂದೆ, ನನ್ನ ಆತ್ಮ ವಿಮರ್ಶೆ ಮಾಡಲು ಶುರುಮಾಡಿತ್ತು.  ಅಲ್ಲಾ  ನಾನು ನನ್ನ ಮಗನಿಗಿಂತ  ಪ್ರಪಂಚ ಮೊದಲು ನೋಡಿದವನು,  ಒಂದು ದೊಡ್ಡ ಕಂಪನಿಯ ಆಡಳಿತದ  ಜವಾಬ್ದಾರಿ ಹೊತ್ತಿರುವವನು,  ಆದರೆ ನನ್ನ ಮಗನ ಬಗ್ಗೆ ಗೊತ್ತಿಲ್ಲದೇ  ಮನೆಯಿಂದ  ಹೊರಟಿದ್ದೆ !!, ಒಂದು ವೇಳೆ ನನ್ನ ಮಗ  ಅನೂಪ್ ತನ್ನ ಬಗ್ಗೆ ವಿವರವಾದ ವಿಚಾರಗಳ ಬಗ್ಗೆ ಚೀಟಿ ನೀಡದಿದ್ದಲ್ಲಿ  ಇವತ್ತಿನ ಈ ಸಂಭ್ರಮ ಎಲ್ಲಿ ಇರುತ್ತಿತ್ತು ?? ಎಷ್ಟೋ ಕಂಪನಿಗಳ ಜೊತೆ ವ್ಯವಹರಿಸಿ,  ಆಡಳಿತದ ಬಗ್ಗೆ  ಟ್ರೇನಿಂಗ ಕೊಡುವ ನಾನು  ನನ್ನ ಮನೆಯ ಆಡಳಿತದ  ವಿಚಾರದಲ್ಲಿಸ್ವತಹ ಅನುಭವ ಇಲ್ಲದೆ ಸೋತಿದ್ದೆ , ನನ್ನ ಪ್ರೀತಿಯ ಮಗನ ಬಗ್ಗೆಯ ಅರಿಯದೆ  ಯಾಂತ್ರಿಕವಾಗಿ ಬದುಕಿ  , ಸಂಬಂಧಗಳ  ಬಗ್ಗೆ ಅರಿವಿಲ್ಲದೆ  , ಹಣ ಸಂಪಾದಿಸುವ  ಯಂತ್ರವಾಗಿ ಜೀವಿಸಿದ್ದೆ.  ಆದರೆ ನನ್ನ ಮಗ  ಜೀವನದಲ್ಲಿ ನನಗಿಂತಾ ಕಿರಿಯನಾದರೂ ಅಪ್ಪಾ ಮಗನ  ಸಂಬಂಧದ ಅರಿವು  ಮೂಡಿಸಿ ಜೀವನದಲ್ಲಿ  ಜ್ಞಾನದ ಬೆಳಕು ಚೆಲ್ಲಿ ಮೊದಲ ಸಾರಿ ನನ್ನ ಕಣ್ತೆರೆಸಿದ. ನನಗೆ ಅರಿವಿಲ್ಲದೆ ಇದ್ದ ವಿಚಾರಗಳನ್ನು ವಿಮರ್ಶೆ ಮಾಡಿದ ಆತ್ಮ ಮಗನನ್ನು ನನಗಿಂತ  ಎತ್ತರದಲ್ಲಿ ನಿಲ್ಲಿಸಿತು .  ಮಗನನ್ನು ಅಪ್ಪಿ ಮುದ್ದಾಡಿ  "ಪ್ಲೀಸ್ ನನ್ನನ್ನು ಕ್ಷಮಿಸು ಮಗನೆ , ನಿನ್ನ ಬಗ್ಗೆ ಅರಿಯದೆ ತಪ್ಪು ಮಾಡಿದ್ದೆ" ಅಂತಾ ಹೇಳಿ,      ತಕ್ಷಣವೇ  ನನ್ನ ಕಾರ್ಯಕ್ರಮವನ್ನೆಲ್ಲಾ  ಒಂದು ತಿಂಗಳು ಮುಂದೆ ಹಾಕಲು ಕಂಪನಿಗೆ  ತಿಳಿಸಿದೆ , 

ಮಗನ ಜೊತೆ ಮನೆಗೆ ಬಂದ  ನನಗೆ ಪತ್ನಿ ಅನುರೂಪ , "ಇದೇನು ಸೂರ್ಯ ಪಶ್ಚಿಮದಲ್ಲಿ ಮೂಡಿದ್ದಾನಾ ?? ಅಪ್ಪಾ ಮಗಾ ಒಟ್ಟಿಗೆ ಬಂದಿರಿ"  ಅಂದಳು. ನಡೆದ ವಿಚಾರವನ್ನೆಲ್ಲಾ ಹೇಳಿ, ಪತ್ನಿ ಹಾಗು ಮಗನನ್ನು ಕೂರಿಸಿಕೊಂಡು ಹೇಳಿದೆ, "ನೋಡಿ ಇದುವರೆಗೂ ನನ್ನ ಕಂಪನಿ ಕೆಲಸದ ಒತ್ತಡದಲ್ಲಿ ನಿಮ್ಮನ್ನು, ನಿಮ್ಮ ವ್ಯಕ್ತಿತ್ವವನ್ನು  ಅರಿಯದೆ ತಪ್ಪು ಮಾಡಿದ್ದೆ, ಇನ್ನು ಮುಂದೆ ಹಾಗಾಗಬಾರದು  , ಪರಸ್ಪರ ಅರಿತು ಮುನ್ನಡೆಯೋಣ  , ...............!!!!ಅಂತಾ ಹೇಳಿ ಒಂದು ತಿಂಗಳ ನನ್ನ ಸಂಸಾರದ ಅಧ್ಯಯನ ಪ್ರಾರಂಭಿಸಿದೆ.12 comments:

Srikanth Manjunath said...

ಮನಮುಟ್ಟುವ ಘಟನೆ. ಬರಿ ವಸ್ತುನಿಷ್ಠ ಸುಖ, ಸಂತೋಷ ಹಿಂದೆ ಓಡುವ ನಾಗರೀಕತೆಯಲ್ಲಿ ಬರಿ ಯಾಂತ್ರಿಕತೆಯನ್ನು ಧಾರಾಳವಾಗಿ ಕಾಣುವ ಇಂದಿನ ಜಗತ್ತಲ್ಲಿ ಕಿರಿಯರಿಂದ ಕಲಿಯುವ ಪಾಠಗಳು ನಿಜಕ್ಕೂ ಮುಚ್ಚಿದ ಹೃದಯದ ಕಣ್ಣನ್ನು ತೆರೆಸುತ್ತದೆ. ಈ ಕಥೆ ಪ್ರಾಯಶಃ ಪ್ರತಿ ಕುಟುಂಬದಲ್ಲೂ ಒಂದಲ್ಲ ಒಂದು ರೀತಿ ನಡೆಯಬಹುದು ಅಥವಾ ನಡೆದಿರಬಹುದು. ಸುಂದರ ಲೇಖನ. ಮನದ ಕದವನ್ನು ತಟ್ಟುತ್ತದೆ!

ಚಿನ್ಮಯ ಭಟ್ said...

ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...

ಚಿನ್ಮಯ ಭಟ್ said...

ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...

ಚಿನ್ಮಯ ಭಟ್ said...

ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...

ಚಿನ್ಮಯ ಭಟ್ said...

ಚೆಂದದ ಕಥೆ ಬಾಲು ಸರ್..
ಇಷ್ಟವಾಯ್ತು...
ಬಹುಷಃ ಈ ಬದಲಾದ ಜೀವನ ಶೈಲಿಯೇ ಕಾರಣವಾಗಿದೆಯೇನೊ ಈ ರೀತಿಯ ಪ್ರಸಂಗಗಳಿಗೆಲ್ಲಾ.....ರಾತ್ರಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರೆ ಬಹುತೇಕವಾಗಿ ದಿನದ ವಿಶೇಷಗಳೆಲ್ಲಾ ಮಾತಾಡಿ ಮುಗಿಯುತ್ತವೆ...
ಹಮ್..ಶೀರ್ಷಿಕೆ ನೋಡಿ ದ್ವಾರಕೀಶ ಬಳಗದ ನೆನಪು ಬಂತು,ಆದರೆ ನಿಮ್ಮ ಕಥೆಯಲ್ಲಿ ಚಿಕ್ಕವರು ತುಂಬಾ ಬುದ್ಧಿವಂತರೇ ಬಿಡಿ...
ಬರೆಯುತ್ತಿರಿ...
ಮುಂದುವರೆಯಲಿ ಬಾಲು ಸರ್ ಬ್ಲಾಗಾಯಣ...

ಸವಿಗನಸು said...

ಕಿರಿಯರಿಂದ ಸಹ ಎಷ್ಟೋ ಪಾಠಗಳು ಕಲಿಯುತ್ತೇವೆ...ಮುಚ್ಚಿದ ಕಣ್ಣನ್ನು ತೆರೆಸುತ್ತದೆ....
ಚೆನ್ನಾಗಿದೆ ಬಾಲಣ್ಣ...

K.M. Vijay said...

ಇದು ಎಲ್ಲಾ ತಂದೆಯರಿಗೆ ಒಂದು ಪಾಠ....ಜೀವನದಲ್ಲಿ ಪ್ರತಿದಿನ ಪ್ರತಿಯೊಬ್ಬರಿಂದ ಕಲಿಯುವುದು ಇರುತ್ತದೆ....

Badarinath Palavalli said...

ಇಂದಿನ ಯಾಂತ್ರಿಕ ಬದುಕಿನಲ್ಲಿ ಅದು ಎಷ್ಟೇ ಪುಟ್ಟ ಸಂಸಾರಗಳಾಗಿರಲಿ, ಅಲ್ಲಿ ಬರೀ ಗಂಡ ಹೆಂಡತಿ ಮತ್ತು ಮಕ್ಕಳಿದ್ದರೂ ಸಹ. ಅವರವರ ಕೆಲಸದ ಒತ್ತಡದಿಂದ ಎಲ್ಲರೂ ದೂರ ದೂರ. ಒಬ್ಬರನ್ನು ಒಬ್ಬರು ಅರಿತುಕೊಳ್ಳಲೂ ಸಮಯವೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಹಲವರ ಕಣ್ಣು ತೆರೆಸಿದ ಬರಹ ಇದು.

ತುಂಬಾ ನೆಚ್ಚಿಗೆಯಾಯ್ತು.

bhagya bhat said...

ಇಷ್ಟವಾಯ್ತು ಬಾಲು ಸರ್ :)ಮಕ್ಕಳ ಮುಖಗಳನ್ನೂ ನೋಡಲೂ ಪುರುಸೊತ್ತಿಲ್ಲದ ಅಪ್ಪಂದಿರು ಇನ್ನು ಅವರ ಇಷ್ಟಗಳನ್ನ ತಿಳಿದಿರುವುದೆಲ್ಲಿ ??.... ಯಾಂತ್ರಿಕ ಜೀವನವನ್ನು ಚೆನ್ನಾಗಿ ತೋರಿಸಿದ್ದೀರಿ

Kavi Nagaraj said...

ಎಲ್ಲರಿಗೂ ಅಂತಹ ಮಗನೇ ಸಿಕ್ಕರೆ ಚೆನ್ನಾಗಿರುತ್ತದೆ!!

Harini Narayan said...

ಚಿಕ್ಕವರಿಂದಲೂ ದೊಡ್ದವರು ಕಲಿಯುವುದು ಬೇಕಾದಷ್ಟಿದೆ. ಅದು ದಿನ ನಿತ್ಯದ ಬದುಕಲ್ಲಿ ಸ್ಪಷ್ಟ. ಕಥಾರೂಪದ ಅನುಭವದಲ್ಲಿ ಚೆನ್ನಾಗಿ ಮೂಡಿ ಬಂದಿದೆ.

ದಿನಕರ ಮೊಗೇರ said...

ಮನಮುಟ್ಟುವ ಕಥೆ... ಮಗನೇ ಅಪ್ಪನಾದ ಕಥೆ...
ತುಂಬಾ ಸರಳವಾಗಿ, ಮನ ತಟ್ಟುವ ಹಾಗೆ ಬರೆದಿದ್ದೀರಿ...