ಇವತ್ತು ಭಾನುವಾರ ಎಲ್ಲವೂ ನಿಧಾನ , ಸರಿ ಅಂತಾ ಕಂಪ್ಯೂಟರ್ ಆನ್ ಮಾಡಿ ಬ್ಲಾಗ್ ಗೆಳೆಯರ ಬ್ಲಾಗ್ ಬರಹಗಳನ್ನು ಓದೋಣ ಅಂತಾ ಕುಳಿತೆ. ಜೊತೆಗೆ ನನ್ನ ಕಂಪ್ಯೂಟರ್ ನಲ್ಲಿ ಹಳೆಯ ಕನ್ನಡ ಚಿತ್ರ ಗೀತೆಗಳ ಹಾಡುಗಳು ಮನಸನ್ನು ಪ್ರಸನ್ನ ಗೊಳಿಸಿತ್ತು. ಹಲವರ ಬರಹಗಳು ಜ್ಞಾನದೀಪಗಳಾಗಿದ್ದವು . ಮತ್ತೆ ಕೆಲವರು ಕೆಲವು ಜಾತಿಗಳ , ಪಂಗಡಗಳ , ವಿರುದ್ಧ ಕೆಂಡ ಕಾರಿದ್ದರು, ಓದಿ ಮನಸ್ಸು ರಾಡಿಯಾಯಿತು . ಯಾಕೋ ಕಾಣೆ ನನ್ನಂಥ ಕೆಲವರಿಗೆ ತಾನು ಎಲ್ಲವನ್ನೂ ತಿಳಿದು ಬಿಟ್ಟಿದ್ದೇನೆ , ಜ್ಞಾನದಲ್ಲಿ ನನ್ನನ್ನು ಮೀರಿಸುವವರಿಲ್ಲಾ ಎಂಬ ಅಹಂ.......!! ನಾನೊಬ್ಬ ಮಾತ್ರಾ ಸರಿ ಉಳಿದವರೆಲ್ಲಾ ದಡ್ಡರು, ನಾನು ತಿಳಿದು ಕೊಂಡದ್ದು ಮಾತ್ರಾ ಸತ್ಯ, ಉಳಿದವರು ಅಜ್ಞಾನಿಗಳು ಎನ್ನುವ ಭಾವನೆ ಮೂಡತೊಡಗಿ, ಪ್ರವಾಧಿಗಳಂತೆ ಆಡುತ್ತಾರೆ. ತಮ್ಮಷ್ಟಕ್ಕೆ ತಾವೇ ಸಮಾಜದ ಗುತ್ತಿಗೆ ಪಡೆದ ಇವರು ತಾಯಿ ಸರಸ್ವತಿ ನೀಡಿದ ಅಮೃತದಂತ ಜ್ಞಾನವನ್ನು ವಿಷವಾಗಿ ಕಕ್ಕಿ ಸಮಾಜ ಒಡೆಯಲು ಉಪಯೋಗಿಸುತ್ತಾ , ವಿಕೃತ ಆನಂದಾ ಅನುಭವಿಸುತ್ತಾರೆ. "ಯಾವ ಧರ್ಮವೂ ಹಿಂಸೆ ಯನ್ನು ಪ್ರಚೋದಿಸುವುದಿಲ್ಲಾ ", ಹಾಗು ದೈಹಿಕ ಹಿಂಸೆ ಮಾತ್ರವೇ ಹಿಂಸೆ ಯಲ್ಲಾ ವಿಕೃತ ಜ್ಞಾನದ ಬರವಣಿಗೆ ಮೂಲಕ ಸಮಾಜವನ್ನು ಒಡೆಯುವುದೂ ಸಹ ಹಿಂಸೆಯೇ.. ಪ್ರತಿಯೊಂದು ಧರ್ಮವೂ ಸಹ ಒಂದೊಂದು ಪವಿತ್ರ ನದಿಯಂತೆ ಅದು ತನ್ನದೇ ಆವಿಷ್ಕಾರದ ಹಾದಿಯಲ್ಲೇ ಸಾಗಿ ಜ್ಞಾನ ಸಾಗರವನ್ನು ತಲುಪುತ್ತದೆ. ಎಲ್ಲಾ ನದಿಗಳು ಒಂದೇ ರೀತಿ ಹರಿಯುವುದಿಲ್ಲಾ , ಆದರೆ ಸೇರುವ ತಾಣ ಮಾತ್ರ ಭೂಮಿಯಲ್ಲಿನ ಮಹಾ ಸಾಗರಗಳನ್ನೇ , ಹಾಗೆ ನಮ್ಮ ಎಲ್ಲಾ ಧರ್ಮಗಳೂ ಕೂಡ ತಮ್ಮದೇ ಹರಿವಿನಲ್ಲಿ ಹರಿದು ಕೊನೆಗೆ ಜನರಿಗೆ ನೀಡುವುದು ಜ್ಞಾನದ ಬೆಳಕನ್ನೇ...... ಇದನ್ನು ಅರಿಯದೆ ತಾವೇ ಮಹಾ ಜ್ಞಾನಿಯಂತೆ ಬೀಗುತ್ತಾ ಯಾವುದೋ ಧರ್ಮದ, ಜಾತಿಯ , ಏಜೆಂಟ್ ರಂತೆ ಸಮಾಜದ ಸ್ವಾಸ್ಥ್ಯ ಕದಡುವ ಬರಹ ಬರೆಯುವುದು ಸಾಮಾಜಿಕ ತಾಣಲ್ಲಿ ಕಂಡು ಬರುತ್ತಿದೆ. ಬ್ಲಾಗ್ ತಾಣದಲ್ಲಿ ವ್ಯಕ್ತಿಯ ಜ್ಞಾನಕ್ಕೆ, ಪ್ರೀತಿಯ ಹೃದಯಕ್ಕೆ , ಸಮಾಜ ಕಟ್ಟುವ ಕೆಲಸಕ್ಕೆ, ಮಾತ್ರ ಬೆಲೆ ಇರಬೇಕೆ ಹೊರತು ಪಡಿಸಿ, ಸಮಾಜ ಒಡೆದು ತನ್ನ ಜ್ಞಾನ ಪ್ರದರ್ಶನ ಮಾಡಿ ದೇಶವನ್ನು ದುರ್ಬಲ ಗೊಳಿಸುವುದಲ್ಲಾ . ಒಳ್ಳೆಯ ಭಾನುವಾರ ಒಳ್ಳೆಯ ಯೋಚನೆ ಮೂಡಿಸುವ ಬದಲು ಇಂತಹ ಬರಹ ಕಟ್ಟ ಮುನ್ನುಡಿ ಬರೆದಿತ್ತು. ಅಷ್ಟರಲ್ಲಿ ನನ್ನ ಗೆಳೆಯ ಲೆಫ್ಟಿನೆಂಟ್ ನಂದಕುಮಾರ್ ಕರೆ ಬಂತೂ ಮೊಬೈಲ್ ನಲ್ಲಿ ಮಾತಾಡುತ್ತಾ ಇದೆ ವಿಚಾರ ಪ್ರಸ್ಥಾಪ ಮಾಡಿದೆ , ಅವನೂ ಒಂದೇ ಮಾತಿನಲ್ಲಿ ನನ್ನ ಮುಖದ ನೀರಿಳಿಸಿದ. ಅಲ್ಲಾ ಕಣೋ ನೀವೆಲ್ಲಾ ಏನಂತಾ ಭಾವಿಸಿದೀರ ನಾನು,ನನ್ನಂತಾ ಹಲವರು , ನಮ್ಮ ಲಕ್ಷಾಂತರ ಸೈನಿಕರು ದೇಶದ ಗಡಿಯಲ್ಲಿ ಕಷ್ಟಪಟ್ಟು ಹಗಲೂ ರಾತ್ರಿ ದೇಶದ ವೈರಿಗಳ ಜೊತೆ ಸೆಣೆಸಾಡುತ್ತಿದ್ದರೆ , ನೀವಿಲ್ಲಿ ಒಬ್ಬರಿಗೊಬ್ಬರು ಕಿತ್ತಾಡುತ್ತಾ ದೇಶವನ್ನು ಕಾಡುತ್ತಿದ್ದೀರಾ , ನೀವು ಯಾವ ವೈರಿಗಳಿಗೂ ಕಮ್ಮಿಯಿಲ್ಲಾ ಬಿಡಿ, ಗಡಿ ಕಾಯುತ್ತಿರುವ ಒಬ್ಬೊಬ್ಬ ಸೈನಿಕನೂ ಇಂತಹ ಕೆಟ್ಟ ಮನಸಿನ ಜನಗಳನ್ನು ನಾವು ಯಾಕೆ ಕಾಯಬೇಕೂ ಅಂತಾ ವಾಪಸ್ಸು ಬಂದರೆ ದೇಶ ಕಾಯುವ ತಾಕತ್ತು ನಿಮಗಿದೆಯಾ ??? ಮೊದಲು ದೇಶ ನಂತರಾ ಮಿಕ್ಕೆಲ್ಲಾ ಆಲ್ವಾ ....!!! ಮೊದಲು ಎಲ್ಲರೂ ಸಂತೋಷದಿಂದಾ ಬಾಳಲು ಕಲಿಯೋಣ ಆಲ್ವಾ .....??? ಅಂತಾ ಹೇಳಿ ಚಾಟಿ ಬೀಸಿದ. ಮಾತು ಕೇಳಿದ ಮನಸ್ಸು ನಾಚಿ ನೀರಾಯಿತು, ನನ್ನ ಬಗ್ಗೆ ಹೇಸಿಗೆಯಾಗಿ .........ತಲೆ ತಗ್ಗಿಸಿದೆ . ಕಂಪ್ಯೂಟರ್ ನಲ್ಲಿ ತ್ರಿಮೂರ್ತಿ ಚಿತ್ರದಲ್ಲಿ ರಾಜ್ ಕುಮಾರ್ ಹಾಡಿದ "ಎಲ್ಲ ಬಲ್ಲವರಿಲ್ಲಾ , ಬಲ್ಲವರು ಯಾರಿಲ್ಲ ...., ಎಲ್ಲವನ್ನು ಬಲ್ಲವರು ...ಎಲ್ಲವನು ಬಲ್ಲವರು ಇಲ್ಲವೇ ಇಲ್ಲಾ " ಹಾಡು ಬಂದು ನನ್ನನ್ನು ಅಣಕಿಸುತ್ತಿತ್ತು,.....!!!!!!!!!!!! ಮನಸು ಭಾರವಾಗಿ ಎಲ್ಲವನ್ನು ನುಂಗಿ ಮನಸಿನಲ್ಲಿ ನನ್ನ ಬಗ್ಗೆ ನಾನೇ "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ " ಎಂಬ ಹಾಡನ್ನು ಗೊಣಗುತ್ತಾ ಕಂಪ್ಯೂಟರ್ ಆಫ್ ಮಾಡಿದೆ.
14 comments:
ಎಲ್ಲ ಸರಿಯಿತ್ತು ಅವರಲ್ಲಿ ಗೌರವವೂ ಇತ್ತು ಅವರ ಧೋರಣೆ ಅಸಹ್ಯ ತಂದಿದೆ
ನಗುವವರ ಮುಂದೆ ಎಡವಿ ಬಿದ್ದ ಸ್ಥಿತಿ ನಮ್ಮದಾಗಿದೆ (ಬ್ಲಾಗಿಗರದು..)
ಒಳ್ಳೆಯ ವಿಚಾರವನ್ನು ಬರೆದಿದ್ದೀರಿ ಒಳಜಗಳ, ಕೋಪ ತಾಪ ಎಲ್ಲವನ್ನು ಬಿಟ್ಟು ಜನ ಬಾಳಬೇಕು ಎಂಬ ಸಾರಾಂಶ ಚೆನ್ನಾಗಿದೆ.
ಉತ್ತಮ ಕಳಕಳಿ ಹೊಂದಿದ ಬರಹ..
ಬಾಲು ಅಕ್ಷರಶಃ ನಿಜ ನಿಮ್ಮ ಮಾತು, ಧರ್ಮ-ಧರ್ಮದ ಮಧ್ಯೆ, ಪಂಥ-ಪಂಥದ ಮಧ್ಯೆ ತಿಕ್ಕಾಟ ವೈರಿಗಳಿಗೆ ಮೇವು, ಯೋಧನಿಗೆ ದೇಶಕಾಯುವುದು ಸುಲಭ ಈ ದೇಶದ್ರೋಹಿಗಳ ಕ್ರಿಯೆಯಿಂದ ಹೊರ ಮತ್ತು ಒಳ ವೈರಿಗಳ ಶಕ್ತಿ ವೃದ್ಧಿಯಾಗುವ್ದಂತೂ ದಿಟ,,,, ಕಾಳಜಿಯುಕ್ತ ಲೇಖನ. ಬರವಣಿಗೆ ಮನಮುದಗೊಳಿಸಬೇಕೇ ಹೊರತು ಮನ-ಮೃತ ಗೊಳಿಸಬಾರದು.
Sir, salute to you. After going through what has been said in "THAT" blog,you have responded like a true "GNANI" We need people like you in this world more than anything else. MAY YOUR TRIBE GROW...
Guru
ಬಾಲಣ್ಣ...
ನಮ್ಮೆಲ್ಲರ ಮನದ ಭಾವನೆಯನ್ನು ನೀವು ಬರೆದಿದ್ದೀರಿ....
ಅಣ್ಣಾವ್ರ ಅದೇ ಹಾಡಿನ ಸಾಲುಗಳು.."ಏನು ಮಾಡಲಿ ನಾನು ಏನು ಹೇಳಲಿ..ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನಡೆಯುವರು..ಎಲ್ಲ ಬಲ್ಲೆನು ಎನ್ನುತ ಹೋಗಿ ಹಳ್ಳಕೆ ಬೀಳುವರು.."
ಇದೆ...ಬ್ಲಾಗ್ ಗಳು..ಕನ್ನಡಿಯ ಬಿಂಬದಂತೆ...ನೋಡಿದು ನಿಜ, ಕೇಳಿದ್ದು ನಿಜ..ಎಲ್ಲಿವರೆಗೆ ಅದರ ಮುಂದೆ ಒಂದು ವಸ್ತುವಿರುತ್ತೆ ಅಲ್ಲಿಯ ತನಕ...ಬರೆಯುವ ವಸ್ತು ವಷ್ಟುನಿಷ್ಟವಾದಾಗ..ಭಾವನಲಹರಿ..ಮನಲಹರಿಗೆ ಸಾತ್ ಕೊಡುತ್ತೆ...ಅವರವರ ಭಾವಕ್ಕೆ..ಅನ್ನುವ ಹಾಗೆ..ಅಪಾಯವಿಲ್ಲದೆ ಉಪಯೋಗಿಸುವ ಕಲೆ ಇರಬೇಕು..
ಸುಂದರ ಲೇಖನ ಬಾಲು ಸರ್...
ಸಾಮಾಜಿಕ ತಾಣಗಳು ಮತ್ತು ಬ್ಲಾಗ್ ಲೋಕ ಮನುಷ್ಯ ಮನುಷ್ಯನ ನಡುವಿನ ಅಂತರವನ್ನು ಕುಗ್ಗಿಸಿ, ಜ್ಞಾನ ದೀವಿಗೆಯನ್ನು ಬೆಳಗಿಸಬೇಕು. ಒಬ್ಬರಿಂದ ಮತ್ತೊಬ್ಬರು ಒಳಿತನ್ನೇ ಪಡೆದು ಕೊಡುತ್ತಾ ಹೋಗ ಬೇಕು. ಅದನ್ನು ಬಿಟ್ಟು ಈ ಜಾತಿ, ರಾಜಕಾರಣ ಮತ್ತು ವ್ಯಕ್ತಿ ನಿಷ್ಟ ಬರಹಗಳಿಂದ ಹೊಲಸು ಕೆಡಿಸಬಾರದು.
ಅಲ್ಲಿ ನಮಗಾಗಿ ಹೋರಾಡುವ ಸೈನಿಕನ ಮನಸ್ಥಿತಿ ಇಲ್ಲಿ ನಮ್ಮಲ್ಲೂ ಮೂಡ ಬೇಕು.
ಒಂದು ಒಳ್ಳೆಯ ಸಂದೆಶಾತ್ಮ ಲೇಖನಕ್ಕಾಗಿ ಧನ್ಯವಾದಗಳು.
"ನೀ ಯಾರಿಗಾದೆಯೋ
ಎಲೆ ಮಾನವ?"
ಬಾಲು ಸರ್,
ಕೆಲವು ದಿನಗಳ ಹಿಂದೆ ಇದೇ ವಿಚಾರವಾಗಿ ಬರೆಯಬೇಕೆನ್ನಿಸಿದವನು ಕೆಲವು ಕಾರಣಗಳಿಂದಾಗಿ ಬರೆಯಲಾಗಲಿಲ್ಲ. ನೀವು ಬರೆದಿರುವುದು ಸತ್ಯ...ಇದೆಲ್ಲ ತೊಲಗಬೇಕೆನ್ನುವುದು ನನ್ನ ಅಭಿಪ್ರಾಯ...ಇದು ನಿಜಕ್ಕೂ ಸಮಾಜಮುಖಿ ಕಾಳಜಿಯುಕ್ತ ಲೇಖನ.
s.. sir.. ide abhipraaya nannadu kooda..
ಒಪ್ಪತಕ್ಕ ವಿಚಾರ... ಗಡಿಯಲ್ಲಿ ಕಾಯುವದು ಏನು? ಯಾಕೆ ಗಡಿಕಾಯಬೇಕು? ಅಚೆಯವನು ಯಾಕೆ ಈಚೆ ಬರುವ? ಬಂದೆರೆನಾಯಿತು? ಬರದಿದ್ದೆರೆನು? ನೀನು ಯಾಕೆ ಆಚೆ ಹೋಗಬೇಕು/ ಹೋದರೆ ಅವನಿಗೇನು? ಏಕೆ ರಕ್ತಪಾತ? ... ಈಗೆ ಏನೇನೋ ತರ್ಕಗಳು ನಿಮ್ಮ ಲೇಖನ ಓದಿ.
ಆದರೆ ಬ್ಲಾಗ್ ನಲ್ಲೇನು ಹೊಲಸು? ನನಗೆ ತಿಳಿಯಲಿಲ್ಲ? ಉಮೇಶ ದೆಸೈಯವರು ಹೇಳುತ್ತಿರುವದೆನು?
ಬಾಲು ಸರ್....
ಸಕಾಲಿಕ ಲೇಖನ....ನಾವು ನಮ್ಮ ಜ್ಞಾನವನ್ನು ಸಂಬಂಧಗಳನ್ನು ಬೆಳೆಸಲು ಸಹಕರಿಸುವ ಬರಹಗಳ ರೂಪದಲ್ಲಿ ಪ್ರದರ್ಶಿಶಬೇಕೇ ಹೊರತು ದ್ವೇಷವನ್ನು ಹರಡುವ ಉದ್ದೇಶದಿಂದಲ್ಲ....ಯಾರು ಬರೆಯುತಿದ್ದಾರೆ ಎನ್ನುವುದಕ್ಕಿಂತ ಏನು ಬರೆಯುತಿದ್ದೇವೆ ಅನ್ನೋದು ಮುಖ್ಯ.....ಅನೇಕತೆಯಲ್ಲಿ ಏಕತೆಯನ್ನು ಸಾರುವ ಕೆಲಸವನ್ನು ನಾವು ಮಾಡಬೇಕೇ ಹೊರತು ನಮ್ಮನಮ್ಮಲ್ಲೇ ಜಗಳಾಡಲು ಪ್ರಚೋದಿಸುವ ಕೆಲಸವನ್ನು ಮಾಡಬಾರದು....ನಾವೆಲ್ಲರೂ ಒಂದೇ ಹೂದೋಟದ ಬೇರೆ ಬೇರೆ ಜಾತಿ, ಬಣ್ಣದ ಹೂಗಳು ಅಷ್ಟೇ.......
ನಿಮ್ಮ ಸಾಮಾಜಿಕ ಕಾಳಜಿ ಇಷ್ಟ ಆಯಿತು...ಧನ್ಯವಾದಗಳು ಸರ್...
hey your blog design is very nice, clean and fresh and with updated content, make people feel peace and I always like browsing your site.
Very informative post. Thanks for taking the time to share your view with us.
Post a Comment