Tuesday, December 6, 2011

ವೈ ದಿಸ್ ಕೊಲ ವೇರಿ, ಕೊಲವೇರಿ ಕೊಲವೇರಿ ..............ಅ ಡೀ ..............???????[urged to kill ]


ಇದೇನಿದು ಇವನಿಗೂ ಕೊಲವೇರಿ ಮೇನಿಯಾ ಅಂಟಿಕೊಂಡಿತಾ ಅನ್ನಬೇಡಿ!!. ಹೌದು ಸರ್ ಹೊರಜಗತ್ತಿಗೆ ಕಿವಿ ತೆರೆದರೆ ಇವತ್ತು ನಿಮಗೆ ಬೇಕಿರಲಿ, ಬೇಡದಿರಲಿ ಬೀದಿಯಲ್ಲಿ, ಮೊಬೈಲ್ ಗಳ ರಿಂಗ್ ಟೋನಿನಲ್ಲಿ, ಪಡ್ಡೆ ಹೈಕಳ ಐ ಪಾಡಿನಲ್ಲಿ , ಟೆಕ್ಕಿಗಳ ಲ್ಯಾಪ್ ಟಾಪ್, ಬಾತ್ ರೂಂ ನಲ್ಲಿ ಸ್ನಾನ ಮಾಡುತ್ತಾ ಹಾಡುವ ಕಲಾವಿದರಲ್ಲಿ,ಶಾಲೆ , ಕಾಲೇಜುಗಳ ಸಮಾರಂಭದಲ್ಲಿ, ಎಫ್. ಎಂ ಗಳಲ್ಲಿ , ಹಳ್ಳಿಯ ಮೂಲೆಗಳಲ್ಲಿ , ಮಕ್ಕಳ ಬಾಯಿಯಲ್ಲಿ, ಟಿ. ವಿ. ಚಾನಲುಗಳಲ್ಲಿ , ರೆಸ್ಟೋರೆಂಟ್ ನಲ್ಲಿ, ತೇಲಿಬರುವ ಹಾಡು ಇದೆ ಆಗಿದೆ. ನಿಮಗೆಇನ್ನು "ಯೂ ಟ್ಯೂಬ್", "ಫೇಸ್ ಬುಕ್ " ನಲ್ಲಿ ಈ ಹಾಡಿನ ಹಿಟ್ ಬಗ್ಗೆ ದಾಖಲೆಯಂತೆ,ಹಲವಾರು ದೇಶ ವಿದೇಶಗಳಲ್ಲಿಯೂ ಇದರ ಕಮಾಲ್ ಜೋರಂತೆ , ವಿದೇಶಿಯರಿಗೂ ಈ ಹಾಡು ಇಷ್ಟವಂತೆ!! ಈಗ ನೋಡಿ ಸೋನು ನಿಗಮ್ ಮಗ ಹಾಡಿದಾ ಅಂತಾ , ಬ್ರೆಕಿಂಗ್ ನ್ಯೂಸ್ ಕೊಡ್ತಾ ಇವೆ ಮಾಧ್ಯಮಗಳು, ಇದರ ಯಶಸ್ಸನ್ನು ನೋಡಿ ಇದು ಇವತ್ತಿನ ರಾಷ್ಟ್ರ ಗೀತೆ ಅಂತಾ ಯಾರೋ ನಾಚಿಕೆ ಬಿಟ್ಟು ಹೇಳುತ್ತಿದ್ದರು ಈ ಹಾಡು ಒಂದು ಭಗ್ನ ಪ್ರೇಮದ ಹಾಡಂತೆ, ಭಗ್ನ ಪ್ರೇಮಿಗಳ ನೋವು ಇದರಲ್ಲಿ ಇದೆಯಂತೆ, ಇತ್ಯಾದಿ ವಿಶ್ಲೇಷಣೆಗಳು ಇವೆ. ಆದರೆ ಈ ಹಾಡಿನ ಸಂಪೂರ್ಣ ಅರ್ಥ ಆಗದೆ "ವೈ ದಿಸ್ ಕೊಲವೇರಿ" ಅಂತಾ ಇರೋವರೆ ಜಾಸ್ತಿ ಆದರೂ ಅದನ್ನು ತೋರಿಸಿಕೊಳ್ಳದೆ ತಮಗೂ ಅರ್ಥಾ ಆಗಿದೆ ಎಂಬ ಕೃತಕತೆ ಇಂದಾ ಜನರು ನಟಿಸುತ್ತಿರುವಂತೆ ಅನ್ನಿಸುತ್ತಿದೆ. [ ನನ್ನ ಅನಿಸಿಕೆಗೆ ಕೊಲವೇರಿ ಹಾಡು ಅರ್ಥವಾದ  ನಿಮ್ಮಂತವರನ್ನು  ಹೊರತು ಪಡಿಸ ಬಹುದು . ಆದ್ರೆ ಒಂದಂತೂ ನಿಜ ತಮಿಳು ಚಿತ್ರ ರಂಗದಲ್ಲಿ ನಡೆಯುತ್ತಿರುವ ಹಲವು ಪ್ರಯೋಗಗಳ , ಬೆಳೆಯುತ್ತಿರುವ ಯುವ ಪ್ರತಿಭೆಗಳ , ಅದರಿಂದ ತಮಿಳು ಚಿತ್ರ ರಂಗಕ್ಕೆ ಆಗುತ್ತಿರುವ ಲಾಭಗಳ ,ಒಂದು ಚಿತ್ರಣ ಕಲ್ಪಿಸಿಕೊಂಡರೆ ಕನ್ನಡ ಚಿತ್ರ ರಂಗದ ಕರುಳು ಹಿಂಡಿದಂತೆ ಆಗುತ್ತದೆ. ಕೊಲವೇರಿ ಹಾಡನ್ನೇ ಉದಾಹರಣೆಗೆ ತೆಗೆದು ಕೊಂಡರೆ ಕೊಲವೇರಿ ಹಾಡು ಒಂದು ಸಾಮಾನ್ಯ ಹಾಡು ಅಷ್ಟೇ ಅದರ ರಚನೆಕಾರರಿಗೆ, ಹಾಡುಗಾರರಿಗೂ, ಸಂಗೀತಗಾರರಿಗೂ ಈ ಹಾಡಿನ ಯಶಸ್ವಿ ಬಗ್ಗೆ ಅರಿವಿರಲಿಲ್ಲ. ಆದರೆ ಇದರಲ್ಲಿ ಬಹಳ ಇಷ್ಟಪಟ್ಟು, ಕಷ್ಟಪಟ್ಟು, ಒಂದು ಟೀಮ್ ವರ್ಕ್ ಮಾಡಿದಾರೆ.ಶೀರ್ಷಿಕೆ ಸೇರಿಸಿ

ಶೀರ್ಷಿಕೆ ಸೇರಿಸಿಅವರುಗಳಿಗೆ ಆಸರೆಯಾಗಿ ತಮಿಳು ಚಿತ್ರರಂಗದ ದಿಗ್ಗಜಗಳು ನಿಂತಿದ್ದಾರೆ ಅಷ್ಟೇ. [ ನಮ್ಮ ಚಿತ್ರ ರಂಗದಲ್ಲಿ ಕಾಲೆಳೆಯುವ ಮಂದಿಗೆ ಇಂತಹ ಘಟನೆ ಕಾಣೋದಿಲ್ಲಾ ಬಿಡಿ ] ಇಲ್ಲದಿದ್ದರೆ ವಿಶ್ವಕ್ಕೆ ಪರಿಚಯವೇ ಇಲ್ಲದಿದ್ದ ಅನಿರುದ್ಹ್ ಎಂಬಾ ಒಬ್ಬ ಹೊಸ ಸಂಗೀತ ನಿರ್ದೇಶಕ ತನ್ನ ಮೊದಲ ಚಿತ್ರಕ್ಕೆ ಈ ಮಟ್ಟಿನ ಯಶಸ್ಸು ಸಾಧಿಸಲು ಸಾಧ್ಯವಾಗುತಿರಲಿಲ್ಲ. ಇನ್ನೂ ಅಧಿಕೃತ ವಾಗಿ ಹಾಡುಗಳು,ಬಿಡುಗಡೆ ಆಗದೆ, ಚಿತ್ರ ಚಿತ್ರೀಕರಣ ಕೂಡ ಆಗದೆ ಈ ಹಾಡಿನ ರೆಕಾರ್ಡಿಂಗ್ ಚಿತ್ರಣದ ಮೂಲಕ ಹಾಡನ್ನು ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸಿ ಯಶಸ್ವಿಯಾಗಿದ್ದಾರೆ ಆ ತಂಡದವರು. ಇದರಿಂದ ನಮ್ಮ ಕನ್ನಡ ಚಿತ್ರ ರಂಗದ ಮಾರ್ಕೆಟಿಂಗ್ ಹಾಗು ಅವರ ಮಾರ್ಕೆಟಿಂಗ್ ಗೆ ಇರುವ ವೆತ್ಯಾಸ ತಿಳಿಯುತ್ತದೆ. ಇನ್ನೂ ಇತ್ತೀಚಿಗೆ ಪ್ರಾಂತೀಯ ದ್ರಾವಿಡ ಭಾಷೆ ಹಾಡುಗಳನ್ನು ಸಾಲಾ ಮದ್ರಾಸಿ ಅನ್ನುತಿದ್ದ ಉತ್ತರ ಭಾರತೀಯರೂ ಸಹ ಅಪ್ಪಿಕೊಂಡು ಮುದ್ದಾದುತ್ತಿರುವುದು ಹಾಗು ಅದೇ ಟ್ಯೂನ್ ಕಾಪಿ ಮಾಡಿ ತಮ್ಮ ಮಾತನ್ನು ಸೇರಿಸಿ ಹಾಡುತ್ತಿರುವುದು ವಿಸ್ಮಯವೇ ಸರಿ . ನಾನು ಇಲ್ಲಿ ತಮಿಳನ್ನು ವೈಭವೀಕರಿಸುತ್ತಿಲ್ಲಾ , ಆದರೆ ಒಂದು ಭಾಷೆ ಯಲ್ಲಿ ನಿಜ ಪ್ರತಿಭೆಗಳಿಗೆ ಸರಿಯಾದ ಪ್ರೋತ್ಸಾಹ ಸಿಕ್ಕರೆ ಭಾಷೆ ಹೇಗೆ ಬೆಳೆಯುತ್ತದೆ ಹಾಗು ಆ ಭಾಷೆಯ ಚಿತ್ರರಂಗ ಹೇಗೆ ಉನ್ನತಿ ಸಾಧಿಸುತ್ತದೆ ಎಂಬ ಬಗ್ಗೆ ನನ್ನ ಆಸಕ್ತಿ ಇದೆ. ನಮ್ಮ ಕನ್ನಡ ಚಿತ್ರ ರಂಗದಲ್ಲಿಯೂ ಪ್ರತಿಭೆಗಳಿಗೆ ಬರವಿಲ್ಲ , ಆದರೆ ನಾವೂ ಮೊದಲೇ ಒಂದು ಚೌಕಟ್ಟನ್ನು ಹಾಕಿಕೊಂದು ಬಿಟ್ಟಿದ್ದೇವೆ ಅದರ ಆಚೆ ಯೋಚಿಸುತ್ತಿಲ್ಲ ಅನ್ನಿಸುತ್ತೆ.

 ೧] ಕನ್ನಡ ಭಾಷೆಗೆ ಸೀಮಿತ ವ್ಯಾಪ್ತಿ ಇದೆ , ಕನ್ನಡ ಚಿತ್ರಗಳನ್ನು ಕರ್ನಾಟಕದಲ್ಲೇ ಸುಮಾರು ಮೂರು ಕೋಟಿ ಜನ ನೋಡುವುದಿಲ್ಲ ಅದಕ್ಕೆ ಎಂಬ ವಾದ[ ಇದು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರೇಕ್ಷಕನ ಮೇಲೆ ಅಪವಾದ ಹೊರಿಸುವ ಹುನ್ನಾರ ]
2] ಕನ್ನಡದಲ್ಲಿ ಒಳ್ಳೆ ಕಲಾವಿದರ ಕೊರತೆ ಇದೆ .[ ಇದಕ್ಕೆ ಕನ್ನಡಿಗರೇ ಉತ್ತರಿಸ ಬೇಕೂ , ಎಷ್ಟೋ ಜನ ಉತ್ತಮ ಕಲಾವಿದರು ಕಣ್ಣಿಗೆ ಕಾಣುತ್ತಿದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ ಅನ್ನಿಸುವುದಿಲ್ಲವೇ ]

೩ ] ಕನ್ನಡ ದಲ್ಲಿ ಉತ್ತಮ ಕಥೆಗಳ ಕೊರತೆ ಇದೆ [ ತಪ್ಪು ತಪ್ಪು ಕನ್ನಡ ದಲ್ಲಿರುವ ಉತ್ತಮ ಕಥೆಗಳನ್ನು ಓದುವ ನಿರ್ಮಾಪಕ, ನಿರ್ದೇಶಕ, ಕಲಾವಿದರು ಕನ್ನಡ ಚಿತ್ರ ರಂಗದಲ್ಲಿ ಕಡಿಮೆ ಇದ್ದ್ದಾರೆ]ಇವು ಕೇಳಿ ಬರುತ್ತಿರುವ ಹಳೆ ಸವಕಲು ಆರೋಪಗಳು, ನಿಜವಾಗಿಯೂ ಇಂದು ಕನ್ನಡ ಚಿತ್ರರಂಗದಲ್ಲಿ ಕಲಾವಿದರ ನಡುವೆ, ತಂತ್ರಜ್ನರ ನಡುವೆ, ನಿರ್ಮಾಪಕರ ನಡುವೆ, ಕಥೆಗಾರರ ನಡುವೆ ಹೊಂದಾಣಿಕೆ ಇಲ್ಲಾ , ಇಲ್ಲಿ ಮಾರ್ಕೆಟಿಂಗ್ ತಂತ್ರ ಸರಿಯಾಗಿ ಬಳಸಿ ಕನ್ನಡ ಚಿತ್ರಗಳ ಗುಣ ಮಟ್ಟ ಹೆಚ್ಚಿಸಿ ತಮಿಳು ಚಿತ್ರರಂಗದ ಸರಿ ಸಮನಾಗಿ ಅಥವಾ ಅವರನ್ನೂ ಮೀರಿಸಿ ಕನ್ನಡ ಚಿತ್ರಗಳ ಹಿರಿಮೆಯನ್ನು ಮೆರೆಸುವುದು ಎಲ್ಲರ ಕರ್ತವ್ಯವಾಗಬೇಕು ಅದಕ್ಕೆ ಈ ಕೊಲವೇರಿ ಹಾಡು ಕನ್ನಡಿಗರಿಗೆ ಕನ್ನಡ ಚಿತ್ರ ರಂಗಕ್ಕೆ ಒಳ್ಳೆಯ ಉದಾಹರಣೆ ಆಗಲಿ ಆಲ್ವಾ !!! ಕನ್ನಡಕ್ಕೆ ಇಂದು ಮತ್ತಷ್ಟು ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್, ಬಿ. ಆರ್.ಪಂತುಲು , ಆರ್. ನಾಗೇಂದ್ರ ರಾವ್,ಸಿದ್ದಲಿಂಗಯ್ಯ ಗಳ ಅವಶ್ಯಕತೆ ಜರೂರಾಗಿದೆ. ಅಲ್ಲಿಯ ವರೆಗೆ ಕನ್ನಡ ಚಿತ್ರರಂಗ ವನ್ನುನೋಡಿಕೊಂಡು "ವೈದಿಸ್ ಕೊಲವೇರಿ ಕೊಲವೇರಿ ಕೊಲವೇರಿ, ಆ ಡೀ.............. " ಅಂತಾ ಹಾಡ್ತಾ ಇರೋಣ. ಯಾಕೆಂದ್ರೆ ಕನ್ನಡಿಗರೂ ಸಹ ಒಂದುರೀತಿಯಲ್ಲಿ ಒಳ್ಳೆಯ ಕನ್ನಡ ಚಿತ್ರಗಳಿಂದ ವಂಚಿತರಾದ ಭಗ್ನ ಚಿತ್ರ ಪ್ರೇಮಿಗಳೇ ಆಲ್ವಾ???

 oh.... boys i am singing song
soup song
flop song
why this kolaveri kolaveri kolaveri di
why this kolaveri kolaveri kolaveri di
rhythm correct
why this kolaveri kolaveri kolaveri di
maintain please
why this kolaveri..di

distance la moon-u moon-u
moon-u color-u white-u
white background night-u nigth-u
night-u color-u black-u

why this kolaveri kolaveri kolaveri di
why this kolaveri kolaveri kolaveri di

white skin-u girl-u girl-u
girl-u heart-u black-u
eyes-u eyes-u meet-u meet-u
my future dark

why this kolaveri kolaveri kolaveri di
why this kolaveri kolaveri kolaveri di

maama notes eduthuko
apdiye kaila snacks eduthuko
pa pa paan pa pa paan pa pa paa pa pa paan
sariya vaasi
super maama ready
ready 1 2 3 4

whaa wat a change over maama

ok maama now tune change-u

kaila glass
only english..

hand la glass
glass la scotch
eyes-u full-aa tear-u
empty life-u
girl-u come-u
life reverse gear-u
lovvu lovvu
oh my lovvu
you showed me bouv-u
cow-u cow-u holi cow-u
i want u hear now-u
god i m dying now-u
she is happy how-u

this song for soup boys-u
we dont have choice-u

why this kolaveri kolaveri kolaveri di
why this kolaveri kolaveri kolaveri di
why this kolaveri kolaveri kolaveri di
why this kolaveri kolaveri kolaveri di

flop song

---------------

Almost everyone can understand this song..
anyway here are the meaning for few words

Kolaveri - Killer rage or Murderous Rage.
"Soup Song" - Love failure Song
"Soup Boys" - Boys who failed in love { all photos used in this article are from internet. with lot of thanks to the original photographers for their effort }

28 comments:

ಮನಸು said...

nija sir nimma maatu...

ಜಲನಯನ said...

ಬಾಲು ಕನ್ನಡದಲ್ಲಿ ಪ್ರತಿಭೆಗಳಿಲ್ಲ ಎನ್ನುವವರು ಏಕತಾನ ಎನಿಸಿದರೂ ಈಗಿನ ರಿಯಾಲಿಟಿ ಶೋ ಗಳನ್ನು ನೋಡಲಿ, ಪುಟ್ಟ ಮಕ್ಕಳಲ್ಲಿ ಎಂಥ ಪ್ರತಿಭೆಯಿದೆ??!!! ಇನ್ನು ಕಥೆ ಕಥಾವಸ್ತು ಇಲ್ಲವೆನ್ನುವವರು ತಮಗೆ ಬೇಕಾದ ಕಥಾವಸ್ತು ಇಲ್ಲವೆಂದರೆ ಸ್ವಲ್ಪ ಅದೂ ಸ್ವಲ್ಪ ಮಟ್ಟಿಗೆ ಒಪ್ಪಬಹುದು, ಗಿರೀಶ್ ಕಾಸರವಳ್ಳಿ, ಪುಟ್ಟಣ್ಣ, ನಮ್ಮ ಕಾದಂಬರಿ ಕಾರರ ಕಥಾಕಾರರ ಕಥಾವಸ್ತು ಉಪಯೋಗಿಸಿ ಅಂತರಾಷ್ಟ್ರೀಯ ಮನ್ನಣೆಪಡೆದ ಚಿತ್ರ ನಿರ್ಮಿಸಿದ್ದಾರೆ, ಎಂಟು ಜ್ಞಾನಪೀಠಗಳ ಸಿರಿವಂತ ಕನ್ನಡ ಸಾಹಿತ್ಯದಲ್ಲಿ ಕಥೆಗೆ ಬರವೇ...?? ಎಲ್ಲಾ ನೆವಗಳು ಸರ್, ನಮ್ಮ ಗಾಯಕರನ್ನು ಮೂಲೆಗುಂಪು ಮಾಡಿ ಈ ಸೋನು, ಮೋನು, ಉದಿತ್, ಬಿದಿತ್ ಗಳನ್ನ ಕರೆತರ್ತಾ ಇರೋದು ನಮ್ಮ ಕನ್ನಡದವರೇ..?? ಹೇಳಿ ಈಗ ಯಾರನ್ನ ದೂಷಿಸೋದು...ನಿಮ್ಮನ್ನ ನೀವು ಬೆಳೆಸುಕೊಳ್ಳದೇ ಇದ್ರೆ ಆಗೋದೇ ಹೀಗೆ.
ಒಳ್ಲೆ ಲೇಖನ ಬಾಲು.

manjunath said...

ನಾವು ನಮ್ಮ ಜಡತ್ವದಿಂದ ಹೊರಬಂದು ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಂಬ್ರಮಿಸುವರಾಗಬೇಕು. ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಹಾಗೂ ಒಲವು ಇರಬೇಕು. ಇದಕ್ಕೆ ವಿಶಾಲ ಮನೋ ಭೂಮಿಕೆ ಹಾಗೂ ಹೃದಯ ಸಿರಿವಂತಿಕೆಯನ್ನು ಅಪೇಕ್ಷಿಸುತ್ತದೆ. ನಮ್ಮ ತನವನ್ನೇ ಮರೆತ ನಾವು ಕನ್ನಡದ ನೆನಪು ನವೆಂಬೆರ್ ತಿಂಗಳಿಗೆ ಮೀಸಲಿಟ್ಟವರು, ಒಳ್ಳೆ ಗುಣಮಟ್ಟದ ಕಾವ್ಯ ವನ್ನಾಗಲೀ / ಸಾಹಿತ್ಯವನ್ನಾಗಲೀ ಹೆಕ್ಕಿ ತೆಗೆಯುವ ಕಲೆಯ ತಿರಸ್ಕರಿಸಿದ್ದೇವೆ. ನಮ್ಮ ಭಾಷೆ ಸಂಸ್ಕೃತಿಯ ಸರ್ವಾಂಗೀಣ ಅಭಿವೃದ್ದಿಗೆ ಪಣತೊಟ್ಟು ಶ್ರಮವಹಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕನಸು ಎಂದಾದರೂ ಫಲಿಸಬಹುಂದೆಂದು ಕಾಯೋಣ.

Dr.D.T.Krishna Murthy. said...

ಬಾಲೂ ಸರ್;ಕೊಲವೇರಿ ಸಾಂಗ್ ಬಗ್ಗೆ ಲ್ಲೆಖನ ಸಖತ್ತಾಗಿದೆ-ಹಾಡಿನ ಹಾಗೇ!

ಸೀತಾರಾಮ. ಕೆ. / SITARAM.K said...

ಕೊಳವೇರಿ ಏನು ನಾನು ಕೇಳಿಲ್ಲ. ಈಗ ಕೇಳಬೇಕು. ಲೇಖನ ಚೆನ್ನಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ಬಾಲೂ ಸರ್...

ಕನ್ನಡದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ..
ಅವಕಾಶಬೇಕಷ್ಟೆ..

ಬೇಸರ ಪಡಬೇಡಿ...
ನಮ್ಮ ಕನ್ನಡಿಗರದ್ದೂ ಒಂದು ಕಾಲ ಬರುತ್ತದೆ..

ಕೊಲವೆರಿ..ಕೊಲವೆರಿ ಅಲ್ಲದೇ ಇದ್ರೂ..

"ಕೊಲಬೇಡ್ರಿ.. ಕೊಲಬೇಡ್ರಿ...
ನಮ್ಮ ಪಾಡಿಗೆ ನಾವ್ ಇರ್ತಿವ್ರೀ..
ನಿಮ್ಮ ಪಾಡಿಗೆ ನಿಮ್ಮ ದಬ್ಬಾಳಿಕೆ ಮಾಡ್ಕೊಳ್ರೀ..
ಕೊಲಬೇಡ್ರೀ.. ಕೊಲಬೇಡ್ರೀ...."

ಇಂಥದ್ದೊಂದು ಹಾಡು ನಮ್ಮದೂ ಹಿಟ್ ಆಗುತ್ತದೆ ನೋಡ್ತಾ ಇರಿ...

ಚಂದದ ಲೇಖನ.. ಅಭಿನಂದನೆಗಳು...

Badarinath Palavalli said...

ಕನ್ನಡ ಚಿತ್ರರಂಗವೂ ಶಕ್ತ ಮಾಧ್ಯಮವೇ ಬಾಲು ಸಾರ್. ಕೆಲವು ಅಪಕ್ವರ ಮತ್ತು ಲಾಬಿಗಳಿಂದ ಮೊನಚು ಕಳೆದು ಕೊಳ್ಳುತ್ತಿದೆ. ನಾನು ಗಮನಿಸಿದಂತೆ:

1. ಒಬ್ಬ ತಂತ್ರಜ್ಙ ಅಥವಾ ಕಲಾವಿದ ಹೇಗೆ ತರಬೇತಿ ಪಡೆದು ಚಿತ್ರರಂಗದಲ್ಲಿ ಮಿಂಚುತ್ತಾನೋ ಹಾಗೆಯೇ ನಿರ್ಮಾಪಕನಿಗೂ ತರಬೇತಿ ಇರಬೇಕು. ಇಲ್ಲದಿದ್ದರೆ ಹಣವಿದೆ ಎಂದು ಸಿನಿಮಾ ಮಾಡಲು ಹೊರಟರೆ ಬಕ್ರಾ ಮಾಡುವವರ ಕೈಲಿ ಸಿಕ್ಕು ಕೆಟ್ಟ ಚಿತ್ರ ಮಾಡಿ, ಅದು ತೋಪೆದ್ದು ಕನ್ನಡಕ್ಕೆ ಮತ್ತೊಂದು ಕೆಟ್ಟ ಸಿನಿಮಾ ಬಂದು ಕಣ್ಮರೆಯಾಗುತ್ತದೆ.

2. ನಿರ್ಮಾಪಕನಿಗೆ ತಾನು ಮಾಡಿದ ಸಿನಿಮಾವನ್ನು ಬಿಡುಗಡೆ ಹೇಗೆ ಮಾಡುವುದು ಎಂಬ ರಹಸ್ಯ ಗೊತ್ತಿರಬೇಕು. ಈಗಾಗಲೇ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳು ಒಂದೋ ನೆಲಸಮವಾಗಿವೆ ಅಥವಾ ಪರ ಭಾಷೆ ಚಿತ್ರಗಳನ್ನು ಪ್ರದರ್ಶಿಸುತ್ತಿವೆ. ಹೀಗಾಗಿ ಅಳಿದುಳಿದ ಚಿತ್ರಮಂದಿರಗಳನ್ನು ಪಡೆಯುವ ಮತ್ತು ಪ್ರೇಕ್ಷಕನನ್ನು ಎಳೆತರುವ ಕಲೆ ಗೊತ್ತಿರಬೇಕು. ಒಳ್ಳೆ ಆಕರ್ಷಕ ಜಾಹೀರಾತು ಮತ್ತು ಉತ್ತಮ ಸಂಗೀತದ ಮೂಲಕ ಜನರನ್ನು ಆಕರ್ಷಿಸಬೇಕು.
ಇಲ್ಲವಾದರೆ ದುರ್ಗಾ ಪೂಜೆಗೆ ಗಣಪತಿ ಮೂರ್ತಿ ನಿರ್ಮಿಸುವ ಪೆದ್ದು ಕಲಾವಿದನ ಸ್ಥಿತಿಯಾಗುತ್ತದೆ!

[ಸಶೇಷ...]

nimmolagobba said...

@ ಮನಸು :- ವಂದನೆಗಳು ನಿಮಗೆ ಹಾಗು ನಿಮ್ಮ ಅನಿಸಿಕೆಗೆ.

nimmolagobba said...

@ ಅಜಾದ್ ಸರ್ :- ನಿಮ್ಮ ಮಾತುಗಳು ಅಕ್ಷರ ಸಹ ನಿಜ. ಕನ್ನಡದ ಅವನತಿಗೆ ಕನ್ನಡಿಗರೇ ಕಾರಣ , ನಮ್ಮಲ್ಲಿನ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡದೆ ಹೊರ ರಾಜ್ಯದ ಕಲಾವಿದರನ್ನು ಹಾದಿ ಹೊಗಳಿ ಅಟ್ಟಕ್ಕೇರಿಸಿ ಮೆರೆಸಿ ನಮ್ಮ ರಾಜ್ಯದ ಬಹಳಷ್ಟು ಉತ್ತಮ ಕಲಾವಿದರಿಗೆ ಕನಿಷ್ಠ ಮರ್ಯಾದೆಯನ್ನೂ ಕೊಡದೆ ಇರೋದು ಎಲ್ಲರಿಗೂ ಗೊತ್ತಿರುವ ವಿಚಾರ ಆಲ್ವಾ ಸರ್.ನಿಮ್ಮ ಅನಿಸಿಕೆಗಳಿಗೆ ವಂದನೆಗಳು.

nimmolagobba said...

@ ಮಂಜುನಾಥ್ :- ನಿಮ್ಮ ಉತ್ತಮ ವಿಚಾರವನ್ತಿಕೆಯ ಅನಿಸಿಕೆಗೆ ಜೈ ಹೋ ಸರ್.

nimmolagobba said...

@ ಡಿ.ಟಿ.ಕೆ.ಮೂರ್ತಿ ಸರ್ :- ಪ್ರೀತಿ ತುಂಬಿದ ಮಾತಿಗೆ ಅಭಾರಿ, ವಂದನೆಗಳು ನಿಮಗೆ.

nimmolagobba said...

@ ಸೀತಾರಾಮ್ :- ಸರ್ ಬಹಳ ದಿನಗಳ ನಂತರದ ಭೇಟಿ ಹೇಗಿದ್ದೀರಿ. ಕೊಳವೇರಿ ಹಾಡು ಕೇಳಿ ಬಂದು ಆಮೇಲಿ ಕಾಮೆಂಟ್ ಹಾಕಿ ಪರವಾಗಿಲ್ಲಾ.ಲೇಖನ ಮೆಚ್ಚಿದ್ದಕ್ಕೆ ವಂದನೆಗಳು.

nimmolagobba said...

ಪ್ರಕಾಶಣ್ಣ :- "ಕೊಲಬೇಡ್ರಿ.. ಕೊಲಬೇಡ್ರಿ...
ನಮ್ಮ ಪಾಡಿಗೆ ನಾವ್ ಇರ್ತಿವ್ರೀ..
ನಿಮ್ಮ ಪಾಡಿಗೆ ನಿಮ್ಮ ದಬ್ಬಾಳಿಕೆ ಮಾಡ್ಕೊಳ್ರೀ..
ಕೊಲಬೇಡ್ರೀ.. ಕೊಲಬೇಡ್ರೀ...."
ನಿಮ್ಮ ಮಾತೆ ಚಾಟಿ ಏಟು !!!! ಅನಿಸಿಕೆಗೆ ಜೈ ಹೋ ಸರ್.

nimmolagobba said...

ಬದರಿನಾಥ್ ಪಳವಲ್ಲಿ :- ನಿಮಗಿಂತ ಚಿತ್ರರಂಗದ ಬಗ್ಗೆ ನಮಗೆ ಅರಿವಿಲ್ಲ. ಆದರೆ ನಿಮ್ಮ ಅನಿಸಿಕೆಗಳಲ್ಲಿ ಸ್ಪಷ್ಟವಾದ ನಿದರ್ಶನಗಳನ್ನು ನೀಡುತ್ತಿದ್ದೀರಿ ಅವನ್ನು ಯಾರೂ ಅಲ್ಲಗಳೆಯರಾರರು ,ಸಶೇಷ ಆಗಿರುವ ಮುಂದಿನ ಕಂತುಗಳ ಅಭಿಪ್ರಾಯ ಬರಲಿ ಸರ್ ಮತ್ತಷ್ಟು ಮಾಹಿತಿ ಸಿಗುವ ಆಸೆ ಇದೆ. ಓದುಗರಿಗೂ ಅರ್ಥವಾಗುತ್ತದೆ. ಅಭಿಪ್ರಾಯಕ್ಕೆ ವಂದನೆಗಳು ಅದೂ ಸಹ ಸಶೇಷ ..........!!!!!!

Doddamanimanju said...

ಸಂಗೀತಕ್ಕೆ ಪರಿಮಿತಿ ಅಂತ ಇಲ್ಲಾ.... ಅದು ವಿಶ್ವ ಭಾಷೆ.....ನೀವು ಹೇಳಿದಂತೆ ಮತ್ತೊಬ್ಬ ಶಂಕರ್ ನಾಗ್ ಹುಟ್ಟಬೇಕು....

ಜೈ ಕೊಲವೇರಿ...........

ಸಾಗರದಾಚೆಯ ಇಂಚರ said...

chennagi barediddiraa

adre haadu omme maralu maadodu antu nija,

:)

ಹಳ್ಳಿ ಹುಡುಗ ತರುಣ್ said...

niv heliddu nija sir...

namamvarige bereyavarannu hege tulivudu anta yochistare horatu.... hege chitra madbeku yavariti janarige talupabeku anno bagge chintisode illa..

kannada sahitya lokadalli irova book name gottilla inna kate elli odutare..


yaarige helona namma problemu

nimmolagobba said...

@ ಗುರುಮೂರ್ತಿ ಸರ್ :- ಹಾಡಿನ ಮೋಡಿ ಬಗ್ಗೆ ಎರಡು ಮಾತಿಲ್ಲಾ , ಆದರೆ ಇದನ್ನು ನೋಡಿ ನಮ್ಮವರು ಕಲೀತಿಲ್ಲವಲ್ಲಾ ಅನ್ನೂ ನೋವಿದೆ ಅಷ್ಟೇ. ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು ಸರ್.

nimmolagobba said...

Doddamanimanju :- ಬಹಳ ದಿನಗಳ ಭೇಟಿ ಮಂಜು ಅವರೇ ನಿಮ್ಮ ಅನಿಸಿಕೆಗೆ ಜೈ ಹೋ , ನಿಮ್ಮ ಭೇಟಿ ಮುಂದುವರೆಯಲಿ.

nimmolagobba said...

ಹಳ್ಳಿ ಹುಡುಗ ತರುಣ್ :-) ನಿಮ್ಮ ಅನಿಸಿಕೆಯ ಪ್ರತಿ ಮಾತುಗಳೂ ಸತ್ಯ ಸರ್ . ಅನಿಸಿಕೆಗೆ ವಂದನೆಗಳು

|| ಪ್ರಶಾಂತ್ ಖಟಾವಕರ್ || *Prashanth P Khatavakar* said...

ನಿಮ್ಮ ಈ ಲೇಖನವನ್ನು ಹೆಚ್ಚು ಸಮಯ ಬಿಡುವು ಮಾಡಿಕೊಂಡು.. ಓದಿದೆವು... ಅತ್ಯಂತ ಸುಂದರವಾಗಿ ಬರೆದಿದ್ದೀರಾ..
ಎಲ್ಲೂ ಕೂಡ ಗೊಂದಲ ಎಂಬುವುದು ಇಲ್ಲ.. ಎಲ್ಲವೂ ಸುಲಭವಾಗಿ ಅರ್ಥವಾಗುವ ಲೇಖನ.. ನಮ್ಮ ಕನ್ನಡ ಭಾಷೆ ಮತ್ತು ಪರಭಾಷೆಯ ಹೋಲಿಕೆ ಹಾಗು ಇತ್ತೀಚಿನ ಪರಿಸ್ಥಿತಿಗಳನ್ನು.. ನೈಜ ಘಟನೆಗಳನ್ನು ಸರಾಗವಾಗಿ ನಿಮ್ಮ ಲೇಖನದಲ್ಲಿ ಹಿಡಿದು ಇಟ್ಟಿರುವುದು ಚೆನ್ನಾಗಿದೆ..
ಹಾಗೆಯೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಿಯೊಬ್ಬರ ಅನಿಸಿಕೆ ಅಭಿಪ್ರಾಯಗಳು ಕೂಡ ಮೆಚ್ಚುವಂತಹಾ ಅಂಶಗಳು... ಒಂದು ಹಾಡಿನಿಂದ ಇಷ್ಟೆಲ್ಲಾ ಆಗುವ ಸಾಧ್ಯತೆ ನಮ್ಮ ಕನ್ನಡಕ್ಕೂ ಬರಬೇಕು ಎಂಬುದೇ ನಮ್ಮ ಹಾರೈಕೆ.. ಕೋರಿಕೆ .. ಬಯಕೆ.. ಪ್ರಾರ್ಥನೆ.. ನಿಮಗೆ ನಮ್ಮ ವಂದನೆಗಳು.. :)

nimmolagobba said...

|| ಪ್ರಶಾಂತ್ ಖಟಾವಕರ್ || *Prashanth P Khatavaka :-ಪ್ರೀತಿಯಿಂದ ಪ್ರತಿಯೊಂದು ಅಂಶವನ್ನೂ ಬಿಡದೆ ಹಾಗು ಓದುಗರ ಅನಿಸಿಕೆಯನ್ನೂ ಸಹ ಗಮನಿಸಿ ನಿಮ್ಮ ಸ್ಪಷ್ಟ ಅಭಿಪ್ರಾಯ ಬರೆದಿದ್ದೀರ , ನಿಮ್ಮ ಪ್ರೀತಿಗೆ ಶರಣು ಸರ್ . "ದಾವಣಗೆರೆ ಬೆಣ್ಣೆದೋಸೆ" ಯಂತಹ ನಿಮ್ಮ ಪ್ರೀತಿ ಹೀಗೆ ಇರಲಿ .

ಓ ಮನಸೇ, ನೀನೇಕೆ ಹೀಗೆ...? said...

ನಾನೂ ಕೂಡ ನಿನ್ನೆಯಷ್ಟೇ ಆ ಹಾಡನ್ನು ಯೂಟ್ಯೂಬ್ ನಲ್ಲಿ ನೋಡಿದೆ. ಚೆನ್ನಾಗಿದೆ ಅನಿಸಿತು. ಸರಳ ಸಂಗೀತಕ್ಕೆ ವಿಭಿನ್ನ ಪದಪ್ರಯೋಗ ಮಾಡಿ ಅದ್ಭುತ ಯಶಸ್ಸು ಸಾಧಿಸಿದ್ದಾರೆ ಅನಿಸ್ತು. ಈ ರೀತಿಯ ಪ್ರಯೋಗ ಯಶಸ್ವಿಯಾಗುತ್ತವೆ ಎಂದು ನಮ್ಮ ಯೋಗರಾಜ್ ಭಟ್ ಕೂಡ ಕನ್ನಡದಲ್ಲಿ ಸಾಧಿಸಿ ತೋರಿಸಿಕೊಟ್ಟಿದ್ದಾರೆ. ನೀವು ಹೇಳಿದಂತೆ ಇಲ್ಲಸಲ್ಲದ ನೆವಗಳನ್ನು ಹೇಳುತ್ತಾ ಪರಭಾಷೆಯವರ ನೆರಳಿನಲ್ಲಿ ಮುಂದುವರೆಯುವುದು ಬಿಟ್ಟು ಈಗಲಾದರೂ ಹೊಸ ಹೊಸ ಪ್ರತಿಭೆಗಳಿಗೆ, ಹೊಸ ಪ್ರಯೋಗಗಳಿಗೆ ಅವಕಾಶವಾಗಲಿ ಕನ್ನಡ ಚಿತ್ರರಂಗದಲ್ಲಿ..ಎಂಬುದೇ ನಮ್ಮ ಹಾರೈಕೆ ಅಲ್ವಾ ಸರ್.

nimmolagobba said...

@ ಓ ಮನಸೇ, ನೀನೇಕೆ ಹೀಗೆ...? :-) ನಿಮ್ಮ ಸ್ಪಷ್ಟ ಅನಿಸಿಕೆಗಳಿಗೆ ವಂದನೆಗಳು ಚೇತನ ಭಟ್ ಮೇಡಂ.

umesh desai said...

ಹೌದು ನಿಮ್ಮ ಮಾತು ನಿಜ ಕನ್ನಡದಲ್ಲಿ ಪ್ರಯೋಗಗಳಿಗೆ ಬೆಲೆಯೇ ಇಲ್ಲ

nimmolagobba said...

@umesh desai :-) ನಿಮ್ಮ ಅನಿಸಿಕೆಗಳಿಗೆ ವಂದನ್ರ್ಗಳು ಸರ್

Srikanth Manjunath said...

ಲೇಖನ ತಲೆ ಮೇಲೆ ಹೊಡೆದ ಹಾಗೆ ಇದೆ..
ಕನ್ನಡ ಚಿತ್ರರಂಗ ಉದ್ದಾರ ಆಗ ಬೇಕಾದರೆ ನನ್ನ ಕೆಲವು ಅನಿಸಿಕೆಗಳು..ಇದು ನನ್ನ ವೈಯುಕ್ತಿಕ ಅನಿಸಿಕೆಗಳು
೧. ದುಡ್ಡು ಇದ್ದವರು ತಮ್ಮ ಮಕ್ಕಳನ್ನ ಹೀರೋ ಮಾಡಲು ಹೊರಡುವುದು ತಪ್ಪ ಬೇಕು..
೨. ಅವರ ಮಕ್ಕಳು ಕಪ್ಪು ಕನ್ನಡ ಹಾಕಿಕೊಂಡು ಭಾವಚಿತ್ರಗಳನ್ನ ತೆಗೆಸೋದು ಬಿಡಬೇಕು..ಕಪ್ಪು ಕನ್ನಡ ಹಾಕಿದ್ರೆ ಮಂಗ ಕೂಡ ಚೆನ್ನಾಗಿ ಕಾಣುತ್ತೆ
೩. ಚಿತ್ರರಂಗ ನಮ್ಮ ತಾತನ ಆಸ್ತಿ ಅನ್ನುವ ಧೋರಣೆ ಬಿಡಬೇಕು
೪. ಬರಿ ದುಡ್ಡು ಮಾಡುವುದಷ್ಟೇ ಅಲ್ಲ..ಸಂದೇಶ ಮುಟ್ಟಿಸುವಂತ ಚಿತ್ರಗಳನ್ನ ಮಾಡುವುದು
೫. ಯಾರ ಮೇಲೋ ಯಾರ ಸಿಟ್ಟೋ ತೀರಿಸಿಕೊಳ್ಳಲು, ಅಥವಾ ಹತಾಶೆ ತೋಡಿಕೊಳ್ಳಲು ಮಾಡುವ ಚಿತ್ರಗಳು ಯಾವತ್ತು ಗೆಲ್ಲೋಲ್ಲ
೬. ಡಬ್ಬ ಚಿತ್ರಗಳನ್ನ ಮಾಡಿ..ನಾವು ಏನು ದೊಡ್ಡದು ಸಾಧಿಸಿದ್ದೇವೆ ಅಂತ ಬೀಗುತ್ತ ಪ್ರೇಕ್ಷಕರಿಗೆ ಟೋಪಿ ಹಾಕುವ ಸಂಪ್ರದಾಯ ಬಿಡಬೇಕು
೭. ಇಂದು ಮಲ್ಟಿಪ್ಲೆಕ್ಸ್ಗಳಲ್ಲಿ ೧೫೦-೨೦೦ ರೂಪಾಯಿಗಳನ್ನ ಕೊಟ್ಟು ವಾಕರಿಕೆ ಬರುವ ಲಾಂಗ್, ಮಚ್ಚು, ಫೈಟು ಸಿದ್ದ ಸೂತ್ರಗಳಿಂದ ಹೊರಬರಬೇಕು
೮. ಹೊಸತನ, ಹೊಸ ಯೋಚನೆ, ಹೊಸ ಹುಡುಗರು ಬರಬೇಕು
೯. ನಮ್ಮ ಮಾರುಕಟ್ಟೆ ಸೀಮಿತ ಒಪ್ಪ ಬೇಕಾದ ಮಾತೆ..ಆದ್ರೆ ೬೦-೭೦ರ ದಶಕದಲ್ಲಿ ನಮ್ಮ ಸೀಮಿತ ಮಾರುಕಟ್ಟೆಯಲ್ಲೇ ತೆಗೆದ ಸಿನಿಮಾಗಳು ಇಡಿ ಭಾರತ ದೇಶವನ್ನೇ ನಮ್ಮ ಕರುನಾಡಿನ ಕಡೆ ಮುಖ ಮಾಡಿದ್ದವು..ಎಲ್ಲಿ ಹೋಯಿತು
ಆ ಸೃಜನ ಶೀಲತೆ
೧೦. ಕತೆಗಳನ್ನ, ಪುಸ್ತಕಗಳನ್ನ, ಓದದವರು, ಓದಲು ಇಷ್ಟ ಇಲ್ಲದವರು ಮಾತಾಡುವ ಮಾತುಗಳು ನೀರಿನ ಗುಳ್ಳೆಯಷ್ಟೇ ಕ್ಷಣಿಕ
೧೧. ಒಳ್ಳೆಯ ಸಿನಿಮಾಗಳು ಬಂದಾಗೆಲ್ಲ ನಮ್ಮ ಪ್ರೇಕ್ಷಕ ಪ್ರಭು ಕೈ ಹಿಡಿದು ನಡೆಸಿದ್ದಾನೆ. ಪ್ರೆಕ್ಷನಿಗೆ ಟೋಪಿ ಹಾಕಲು ಪ್ರಯತ್ನಪಟ್ಟ ರಾಜ್, ಜೋಗಯ್ಯ, ಪರಮಾತ್ಮ, ಅಹಂ ಪ್ರೇಮಾಸ್ಮಿ, ಮುಂತಾದ ಅನೇಕ ಚಿತ್ರಗಳು ತೋಪೆದ್ದು ಹೋಗಿವೆ...
೧೨. ನಿಮ್ಮ ಅಂಕಣದಲ್ಲಿ ಬಂದ ಮಾತಂತೆ...ನಿರ್ಮಾಪಕರಿಗೂ ಒಂದು ಕಲಿಕೆಯ ಶಾಲೆ ಇರಬೇಕು..ಎಷ್ಟು ಖರ್ಚು ಮಾಡ್ಬೇಕು, ಯಾಕೆ ಖರ್ಚು ಮಾಡಬೇಕು, ಎಲ್ಲಿ ಖರ್ಚು ಮಾಡ್ಬೇಕು, ಅದಕ್ಕೆ ಏನು ಸಿದ್ದತೆಗಳು ಇವೆಲ್ಲ ಅವರ ತಲೆಯಲ್ಲಿ ನುಸುಳಿದಾಗ ಮಾತ್ರ ಒಳ್ಳೆಯ ಚಿತ್ರಗಳು ಬರುತ್ತವೆ..

ಒಂದು ಸುಳಿಮಿಂಚು ಏನೆಂದರೆ...೧೦೦ ಡಬ್ಬ ಚಿತ್ರಗಳಲ್ಲಿ ಬೆರಳೆಣಿಕೆಯ ಚಿತ್ರಗಳು ತೃಪ್ತಿ, ಸಂದೇಶ ಕೊಡುತ್ತ ತಮ್ಮ ಛಾಪನ್ನು ಮೂಡಿಸುತ್ತ ಇದೆ..ಇದು ನಮ್ಮ ಚಿತ್ರರಂಗ ಉಸಿರಾಡುತ್ತಿದೆ ಎನ್ನುವುದಕ್ಕೆ ಉದಾಹರಣೆ..
ಕನ್ನಡ ಭಾಷೆ, ಸಾಹಿತ್ಯ, ಚಿತ್ರರಂಗ ಎಂದು ಅಮರ...
ದೊಡ್ಡ ಅನ್ನಿಸಿಕೆಗೆ ಕ್ಷಮೆ ಇರಲಿ

nimmolagobba said...

@ Srikanth Manjunath :-) ಬಹಳ ವಿಸ್ತೃತ ವಾದ ನಿಮ್ಮ ಅನಿಸಿಕೆಗಳು , ಕನ್ನಡ ಚಿತ್ರರಂಗದ ಸಮಗ್ರ ಮಾಹಿತಿಯ ಒಂದು ಮುಖವನ್ನು ಪರಿಚಯಿಸುತ್ತಿವೆ . ಬಹಳ ಮಾಹಿತಿ ತಿಳಿಸಿದ್ದೀರಿ ನಿಮ್ಮ ಅನಿಸಿಕೆಗಳಿಗೆ ವಂದನೆಗಳು.