Saturday, December 24, 2011

ರಫಿ ಯಾಕೋ ಇಂದು ನಿನ್ನ ನೆನಪಾಗಿದೆ.ನನ್ನ ಮನದಲ್ಲಿ ನಿನ್ನ ಹಾಡುಗಳ ನೆನಪಿನ ಚಿಲುಮೆ ಉಕ್ಕಿದೆ.!!!!

ಇವತ್ತು   {೨೪ ಡಿಸೆಂಬರ್ ೨೦೧೧ } ಮುಂಜಾನೆ ಎದ್ದವನಿಗೆ , ಯಾಕೋ ಬೇಸರವಾಗಿ  ಮನಸ್ಸಿಗೆ ಹಿತವಾದ ಹಾಡು ಕೇಳುವ ಆಸೆಯಾಗಿ  ಬಾನ್ಸುರಿ ಸಿ.ಡೀ. ಹುಡುಕುತ್ತಿದ್ದೆ. ಅಲ್ಲೇ ಇದ್ದ ಪತ್ರಿಕೆಯಲ್ಲಿ  ಒಂದು ಹೆಡ್ ಲೈನ್ ಕಣ್ಣಿಗೆ ಬಿತ್ತು.  "ಮೊಹಮದ್ ರಫಿ ಜನುಮದಿನ  ೨೪ ನೆ ಡಿಸೆಂಬರ್ ರಂದು  ಮರೆಯಲಾರದ ಮಹಾ ಗಾಯಕ ಎಂದು". ನೋಡಿದ ತಕ್ಷಣ ಮೊಹಮದ್ ರಫಿ ಹಾಡಿನ  ಸಿ.ಡೀ ತೆಗೆದು ಮುಂಜಾನೆಯೇ ಹಾಕಿಕೊಂಡು ಕುಳಿತೆ. ಮನಸಿಗೆ ಹಿತವಾಯಿತು.ಮನದಲ್ಲಿ ರಫಿ ಹಾಡಿನ ನೆನಪುಗಳ ಚಿಲುಮೆಗೆ ಜೀವಬಂದು ಚಿಮ್ಮಲು ಶುರುವಾಯಿತು. ಆ ಚಿಲುಮೆಯ ಫಲ ಶ್ರುತಿಯೇ ಈ ಲೇಖನ.ಹೌದು ನನ್ನ ಜೀವಿತ ಕಾಲದಲ್ಲಿ ಕಂಡ ಒಬ್ಬ ಅಪ್ರತಿಭ ಗಾಯಕ , ಇವರ ಯಾವ ಹಾಡು ಇಷ್ಟಾ ಆಗೋಲ್ಲಾ ಹೇಳಿ. ಶಾಸ್ತ್ರೀಯ ಸಂಗೀತಕ್ಕೂ ಸೈ, ಪ್ರೇಮ ಸಂಗೀತಕ್ಕೂ ಸೈ, ಘಜಲ್ ಹಾಡಲೂ ಸೈ, ಯಾಹೂ ಅಂತಾ ಕುಣಿತದ ಹಾಡಿಗೂ ಸೈ, ಯಾವ ಭಾಷೆಯ ಹಾಡಾದರೂ ಹಾಡಲು ಸೈ. ಯಾರೂ ಏನೇ ಅಂದ್ರೂ ಈ ಗಾಯಕನ ನಂತರ ಮತ್ತೊಬ್ಬ ರಫಿ ಹುಟ್ಟಲು ಸಾಧ್ಯವಿಲ್ಲಾ ಬಿಡಿ. ಹೌದು ಸಾರ್ ರಫಿ ಯಾ ಹಾಡನ್ನು ಕೇಳುತ್ತಿದ್ದರೆ  ಆತನ  ನಿಷ್ಕಲ್ಮಶ ನಗು ಮುಖದ ಚಿತ್ರಗಳೇ  ಕಾಣುತ್ತವೆ. ಕಪಟ ಅರಿಯದ  ಸಭ್ಯ ಜೀವನ ನಡೆಸಿದ , ಅಜಾತ ಶತ್ರು ಇವರು.
ಮೊಹಮದ್ ರಫಿ
ಮೊಹಮ್ಮದ್ ರಫಿ ಅವರು ಹಜ್ಜಿ ಅಲಿ ಮೊಹಮ್ಮದ್ ಅವರ ಆರನೆಯ ಕಿರಿಯ ಪುತ್ರರಾಗಿದ್ದಾರೆ.ಅವರು ಪಂಜಾಬ್ ರಾಜ್ಯದ (ಬ್ರಿಟಿಶ್ ಭಾರತ)  ಅಮೃತಸರ   ಬಳಿಯ "ಕೊಟ್ಲಾ ಸುಲ್ತಾನ್ ಸಿಂಗ್ "ಗ್ರಾಮದಲ್ಲಿ ಜನಿಸಿದ್ದಾರೆ ಮೊಹಮದ್  ರಫಿ ಅವರನ್ನು ಚಿಕ್ಕವರಿರುವಾಗ ಫೀಕಾ ಎಂದು ಸಂಕ್ಷಿಪ್ತ ನಾಮದಿಂದ ಕರೆಯಲಾಗುತ್ತಿತ್ತು.ಅವರು ಹಳ್ಳಿಯಲ್ಲಿ ಫಕೀರ್ ಅವರ ಹಾಡುಗಳ ಮೂಲಗಳನ್ನು ಅನುಕರಿಸುತ್ತಿದ್ದರು. ರಫಿ ಅವರ ತಂದೆ ೧೯೩೫-೩೬, ರಲ್ಲಿ ಲಾಹೋರ್,ಗೆ ಹೋಗಿ ನೆಲೆಸಿದರು,ನಂತರ ಅವರ ಕುಟುಂಬ ಅವರನ್ನು ಹಿಂಬಾಲಿಸಿತು. ರಫಿ ಅವರ ಕುಟುಂಬವು ಲಾಹೋರ್ ನ ನೂರ್ ಮೊಹಲ್ಲಾದಲ್ಲಿ ಒಂದು ಪುರುಷರಿಗಾಗಿ ಸಲೂನ್ ನನ್ನು ಹೊಂದಿದೆ. ಅವರ ಅಳಿಯ ಸಂಬಂಧಿ ಮೊಹಮ್ಮದ್ ಹಮೀದ್ ಇದರ ಒಡೆಯರಾಗಿದ್ದು ಅವರೇ ರಫಿಯವರಲ್ಲಿನ ಪ್ರತಿಭೆ ಗುರ್ತಿಸಿ ಸಂಗೀತ ಲೋಕಕ್ಕೆ ಪ್ರೊತ್ಸಾಹಿಸಿದರು. ನಂತರ ರಫಿ ಅವರು ಶಾಸ್ತ್ರೀಯ ಸಂಗೀತವನ್ನು ಉಸ್ತಾದ್ ಬಡೆ ಗುಲಾಮ್ ಅಲಿ ಖಾನ್, ಉಸ್ತಾದ್ ಅಬ್ದುಲ್ ವಹೀದ್ ಖಾನ್ , ಪಂಡಿತ ಜೀವನ್ ಲಾಲ್ ಮಟ್ಟೂ ಮತ್ತು ಫಿರೋಜ್ ನಿಜಾಮ್ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು.
ರಫಿ ಅವರು ೧೩ನೇಯ ವರ್ಷ ವಯಸ್ಸಿನವರಗಿದ್ದಾಗ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಸಂಗೀತ ಕಚೇರಿ ನೀಡಿದ್ದಾರೆ.ಕೆ.ಎಲ್ ಸೈಗಲ್ ಅವರ ಸಂಗೀತ ಕಚೇರಿಯಲ್ಲಿ ಅವರಿಗೆ ಈ ಪ್ರದರ್ಶನದ ಅವಕಾಶ ದೊರೆಕಿತು. ರಫಿ ಅವರು ಶ್ಯಾಮ್ ಸುಂದರ ಅವರ ಮಾರ್ಗದರ್ಶನದಲ್ಲಿ ಚೊಚ್ಚಿಲ ಹಿನ್ನಲೆಗಾಯಕರಾಗಿ "ಸೊನಿಯೆ ನೀ,ಹೀರಿಯೆ ನೀ" ಎಂಬ ಹಾಡನ್ನು  ಪಂಜಾಬಿ  ಚಿತ್ರ ಗುಲ್ ಬಲೊಚ್ ನಲ್ಲಿ ಜೀನತ್ ಬೇಗಮ್ ರೊಂದಿಗೆ ಹಾಡಿದ್ದಾರೆ. ಅದೇ ವರ್ಷ ರಫಿ ಅವರನ್ನು ಲಾಹೋರ್ ನ ಆಲ್ ಇಂಡಿಯಾ ರೇಡಿಯೊ ಕೇಂದ್ರದಲ್ಲಿ ಅವರಿಗಾಗಿ ಹಾಡಲು ಆಮಂತ್ರಿಸಲಾಗಿತ್ತು. ಅವರು ತಮ್ಮ ವೃತ್ತಿಪರತೆಯನ್ನು ಚೊಚ್ಚಿಲ ಚಿತ್ರ ಶ್ಯಾಮ್ ಸುಂದರ್ ಅವರ-ನಿರ್ದೇಶಿತ ೧೯೪೧ ರಲ್ಲಿನ ಗುಲ್ ಬಲೊಚ್ ಮತ್ತು ಅದರ ಬೆನ್ನ ಹಿಂದೆಯೇ ಬಾಂಬೆ ಚಿತ್ರ ಗಾಂವೊ ಕಿ ಗೌರಿ,ಯಲ್ಲಿಯೂ ಹಿನ್ನಲೆ ಗಾಯಕರಾಗಿದ್ದಾರೆ.

ಲೈಲಾ ಮಜ್ನೂ (೧೯೪೫)ಮತ್ತು ಜುಗ್ನು ಚಿತ್ರಗಳಲ್ಲಿ ರಫಿ ಅವರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಲೈಲಾ-ಮಜ್ನೂ ದಲ್ಲಿ ಅವರು 'ತೇರಾ ಜಲ್ವಾ'ದ ಗೀತೆಯಲ್ಲಿನ ಕೋರಸ್ ನಲ್ಲಿ ಕಾಣಿಸಿಕೊಂಡಿದ್ದರು.
ರಫಿ ಅವರು ೧೯೪೪ ರಲ್ಲಿ ಬಾಂಬೆಗೆ (ಈಗಿನ ಮುಂಬಯಿ)ಬಂದು ಸಹೋದರರೊಂದಿಗೆ ಬೆಹೆಂಡಿ ಬಜಾರ್ ನ ವಾಣಿಜ್ಯ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಹತ್ತಡಿಯ ಚಿಕ್ಕ ಕೋಣೆಯೊಂದನ್ನು ಬಾಡಿಗೆ ಪಡೆದರು. ಇಲ್ಲಿ ತನ್ವೀರ್ ನಕ್ವಿ ಅವರು ಅವರನ್ನು ಕೆಲವು ಚಲನಚಿತ್ರ ನಿರ್ಮಾಪಕರಿಗೆ ಪರಿಚಯಿಸಿದರು.ಅದರಲ್ಲಿ ಅಬ್ದುರ್ ರಶೀದ್ ಕರ್ದಾರ್,ಮೆಹಬೂಬ್ ಖಾನ್ ಮತ್ತು ನಟ-ನಿರ್ದೇಶಕ ನಜೀರ್ ಅವರನ್ನು ಪರಿಚಯಿಸಿದರು. ಚೌಪಾಟಿಯ ಸಮುದ್ರಕ್ಕೆ ಮುಖಮಾಡಿ ಅವರು ಪ್ರತಿ ನಿತ್ಯ ಮುಂಜಾನೆ ರಿಯಾಜ್ ಮಾಡುವುದು ಅವರ ದಿನದ ರೂಢಿಯಾಗಿತ್ತು. ಮುಂಬಯಿನಲ್ಲಿಯೂ ಸಹ ಶ್ಯಾಮ್ ಸುಂದರ್ ಅವರು ರಫಿ ಅವರಿಗೆ ಜಿ.ಎಂ.ದುರಾನಿಯವರೊಂದಿಗೆ ಅವರಿಗೆ 'ಅಜಿ ದಿಲ್ ಹೊ ಕಾಬು ಮೈ ತೊ ದಿಲದಾರ್ ಕಿ ಐಸಿ ತೈಸಿ..'ಹಾಡಿನಲ್ಲಿ ಯುಗಳ ಗೀತೆ ಹಾಡಿದ್ದು ಗಾವೊಂ ಕಿ ಗೌರಿ ಚಿತ್ರದ್ದು ಮೊದಲ ಹಿಂದಿ ಹಾಡಿದ ಧ್ವನಿ ಮುದ್ರಣದ ಚಲನಚಿತ್ರವಾಗಿತ್ತು. ಹಲವು ಹಾಡುಗಳೂ ಆಗ ಧ್ವನಿಮುದ್ರಣಗೊಂಡವು.
ಮಹಾತ್ಮಾ ಗಾಂಧಿ ಅವರ ಹತ್ಯೆಯ ನಂತರ ಹುಸನ್ಲಾಲ್ ಭಗತರಾಮ್-ರಾಜೆಂದ್ರ ಕೃಷ್ಣನ್-ಅವರ 'ಸುನೊ ಸುನೊ ಏಯೆ ದುನಿಯಾವಾಲೊ,ಬಾಪೂಜಿ ಕಿ ಅಮರ್ ಕಹಾನಿ..'ಎಂಬ ಹಾಡನ್ನು ಹಾಡಿದ್ದಾರೆ. ಭಾರತದ ಪ್ರಧಾನ ಮಂತ್ರಿ "ಜವಾಹರ ಲಾಲ್ ನೆಹರೂ " ಅವರು ರಫಿಯವರನ್ನು ಕರೆದು ಮನೆಯಲ್ಲಿ ಹಾಡಲು ಆಮಂತ್ರಿಸಿದ್ದರು. ರಫಿ ಅವರು ನೆಹರೂ  ಅವರಿಂದ ಭಾರತದ ಸ್ವಾತಂತ್ರ್ಯ ದಿನದಂದು ರಜತ ಪದಕ ಪಡೆದುಕೊಂಡರು. ಆಗ ೧೯೪೯, ರಲ್ಲಿ ರಫಿ ಹಲವು ಜನಪ್ರಿಯ ಹಾಡುಗಳನ್ನು ಸಂಗೀತ ನಿರ್ದೇಶಕರಾದ ನೌಶಾದ್ ರೊಂದಿಗೆ (ಚಾಂದಿನಿ ರಾತ್ , ದಿಲ್ಲಗಿ ಮತ್ತುದುಲಾರಿ ) ಶ್ಯಾಮ್ ಸುಂದರ್ ಅವರ (ಬಜಾರ್ ) ಮತ್ತು ಹುಸ್ನಲಾಲ್ ಭಗತರಾಮ್ (ಮೀನಾ ಬಜಾರ್ ).
ರಫಿ ಅವರ ಮೊದಲ ಹಾಡು ನೌಶಾದ್ ರೊಂದಿಗೆ "ಹಿಂದುಸ್ತಾನ್ ಕೆ ಹಮ್ ಹೈ",ಶ್ಯಾಮ್ ಕುಮಾರ್ ಅವರೊಂದಿಗೆ ಅಲಾಉದ್ದೀನ್ ಮತ್ತು ಇನ್ನುಳಿದವರೊಂದಿಗೆ ಸಾಥ್ ನೀಡಿದ್ದಾರೆ.ಎ.ಆರ್ ಕರ್ದಾರ್ ಅವರ ಪೆಹೆಲೆ ಆಪ್ (೧೯೪೪)ರಲ್ಲಿ ಮೂಡಿ ಬಂತು. ಅದೇ ವೇಳೆಗೆ ೧೯೪೫ ರ ಚಲನಚಿತ್ರ ಗಾವೊಂ ಕೆ ಗೊರಿ ಗಾಗಿ "ಅಜಿದಿಲ್ ಹೊ ಕಾಬೂ ಮೈ"ಹಾಡನ್ನು ಹಾಡಿದರು. ಅವರು ಈ ಹಾಡನ್ನೇ ತಮ್ಮ ಮೊದಲ ಹಿಂದಿ ಭಾಷೆಯ ಹಾಡೆಂದು ಪರಿಗಣಿಸುತ್ತಾರೆ.
ರಫಿ ಎರಡು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಫಿ ಅವರು ೧೯೪೫ ರಲ್ಲಿ "ತೇರೆ ಜಲ್ವಾ ಜಿಸ್ ನೆ ದೇಖಾ"ದಲ್ಲಿನ ಸಮೂಹ ಗಾಯಕರೊಂದಿಗೆ ಚಿತ್ರ ಲೈಲಾ ಮಜ್ನೂ ದಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ನೌಶಾದ್ ರಿಗಾಗಿ ಹಲವು ಹಾಡಿಗೆ ಅವರು ಕೋರಸ್ ಆಗಿದ್ದಾರೆ.ಅದರಲ್ಲಿ "ಮೇರೆ ಸಪ್ನೊಂ ಕಿ ರಾಣಿ,ರೂಹಿ ರೂಹಿ"ಇದನ್ನು ಕೆ.ಎಲ್ ಸೈಗಲ್ ಅವರೊಂದಿಗೆ ಶಹಾಜಾನ್ (೧೯೪೬)ಚಿತ್ರದಲ್ಲಿ ಹಾಡಿದ್ದಾರೆ. ರಫಿ ಅವರು "ತೇರೆ ಖಿಲೊನಾ ಟೂಟಾ ಬಲಕ್"ಹಾಡನ್ನು ಮೆಹಬೂಬ್ ಖಾನ್ ಅವರಅನ್ ಮೋಲ್ ಘಡಿ (೧೯೪೬) ಮತ್ತು ಯುಗಳ ಗೀತೆಯೊಂದನ್ನು ನೂರ್ ಜಹಾನ್ ಅವರೊಂದಿಗೆ ೧೯೪೭ ರ ಚಿತ್ರಜುಗ್ನು ,ದಲ್ಲಿ "ಯಹಾ ಬದ್ಲಾ ವಫಾ ಕಾ" ಹಾಡಿಗೂ ಧ್ವನಿ ನೀಡಿದ್ದಾರೆ. ಭಾರತ ಪಾಕಿಸ್ತಾನ ಇಬ್ಬಾಗದ  ನಂತರ ರಫಿ ಭಾರತದಲ್ಲಿರಲು ನಿರ್ಧರಿಸಿ ತಮ್ಮ ಕುಟುಂಬವನ್ನು ಮುಂಬಯಿಗೆ ಸ್ಥಳಾಂತರಿಸಿದರು. ಅದೇ ರೀತಿ ನೂರ್ ಜಹಾನ್  ಪಾಕಿಸ್ತಾನಕ್ಕೆ ಕ್ಕೆ ಮರಳಿ ಹಾಡುಗಾರ ಅಹ್ಮದ್ ರಶ್ದಿವರೊಂದಿಗೆ ಜೋಡಿಯಾದರು.

ರಫಿ ಆಗಿನ ಹಲವು ಗಾಯಕರ ಪ್ರಭಾವಕ್ಕೊಳಗಾದರು.ಉದಾಹರಣೆಗೆ ಕೆ.ಎಲ್ ಸೈಗಲ್,ತಲತ್ ಮೆಹಮೂದ್ ಮತ್ತು ಅಧಿಕವಾಗಿ ಜಿ.ಎಂ ದುರಾನಿಯವರ ಶೈಲಿಗಳನ್ನು ಅವರ ಹಾಡುಗಳಲ್ಲಿ ಕೇಳಬಹುದಾಗಿದೆ. ಅವರು ತಮ್ಮ ಇಂತಹ ಮಾದರಿಗಳಲ್ಲಿ "ಹಮ್ಕೊ ಹಸ್ತೆ ದೇಖ್ ಜಮಾನಾ ಜಲತಾ ಹೈ (ಹಮ್ ಸಬ್ ಚೋರ್ ಹೈ, ೧೯೫೬)] ಮತ್ತು"ಖಬರ್ ಕಿಸಿ ಕೊ ನಹಿ, ವೊ ಕಿಧರ್ ದೇಖತೆ (ಬೆಕಸೂರ್, ೧೯೫೦), ಇತ್ಯಾದಿಗಳಲ್ಲಿ ತಮ್ಮನ್ನು ಪ್ರಭಾವಿಸಿದವರೊಂದಿಗೆ ಹಾಡಿದ್ದಾರೆ.
ಕುಟುಂಬದೊಡನೆ ರಫಿ

ರಫಿ ಅವರು ೧೯೪೫ ರಲ್ಲಿ ತಮ್ಮ ಸಂಭಂಧಿ ಬಶಿರಾ,ಅವರ ಸಂಕ್ಷಿಪ್ತವಾದ "ಮಾಝಿ"ಅವರನ್ನು ತಮ್ಮ ಹಳ್ಳಿಯಲ್ಲಿಯೇ ವಿವಾಹವಾದರು.ಅವರು ನಾಲ್ಕು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ಅವರು ಅತ್ಯಂತ ಶಿಸ್ತಿನ ವ್ಯಕ್ತಿ ಧಾರ್ಮಿಕ ಸ್ವಭಾವದ ಉತ್ತಮ ವ್ಯಕ್ತಿಯಾಗಿದ್ದರು  ಅವರು ಕುಟುಂಬದ ವ್ಯಕ್ತಿ,ಧ್ವನಿ ಮುದ್ರಣದ ಕೊಠಡಿಯಿಂದ ಅಲ್ಲಿನ ವರೆಗೂ ಅವರು ಶಿಸ್ತಿನ ಸಿಪಾಯಿ ಆಗಿದ್ದಾರೆ. ಅವರು ಚಲನಚಿತ್ರಗಳ ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ,ಅವರು ಧೂಮಪಾನ ಅಥವಾ ಮದ್ಯಪಾನ ಮಾಡುತ್ತಿರಲಿಲ್ಲ. ಅವರು ತಮ್ಮ ರಿಯಾಜ್ (ಸಂಗೀತ ಅಭ್ಯಾಸ)ವನ್ನು ಮುಂಜಾನೆ ೩ ರಿಂದ ೭ ರವರೆಗೆ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದರು. ಅವರ ಹವ್ಯಾಸಗಳೆಂದರೆ ಕೇರಮ್ ಮತ್ತು ಬ್ಯಾಂಡ್ಮಿಟನ್ ಮತ್ತು ಪತಂಗ ಹಾರಿಸುವಿಕೆ.  
ಸರ್ವಪಲ್ಲಿ ರಾಧಾಕೃಷ್ಣನ್  ರೊಂದಿಗೆ ರಫಿ
ತಮ್ಮ ೪೦ ವರ್ಷಗಳ ವೃತ್ತಿ ಜೀವನದಲ್ಲಿ ರಫಿ ಸುಮಾರು ೨೬,೦೦೦ ಚಲನಚಿತ್ರಗೀತೆಗಳಿಗೆ ಕಂಠದಾನ ಮಾಡಿದ್ದಾರೆ ಅವರ ಹಾಡುಗಳಲ್ಲಿ ಶಾಸ್ತ್ರೀಯದಿಂದ ಹಿಡಿದು ದೇಶಭಕ್ತಿ ಗೀತೆಗಳ ವರೆಗೆ ವಿಸ್ತರಿಸಿವೆ.ಕವಾಲಿಗಳಿಂದ ಹಿಡಿದು ಘಜಲ್ಸ್ ಮತ್ತು ಭಜನ್ಸ್ ಮತ್ತು ಮೃದು ಮಧುರ ಪ್ರೇಮ ಗೀತೆಗಳು ಅವರ ಪ್ರಮುಖ ಕೊಡುಗೆಗಳಾಗಿವೆ. ಅವರು ಹಿಂದಿ  ಮತ್ತು ಉರ್ದು  ಭಾಷೆಗಳಲ್ಲಿ ಅತ್ಯುತ್ತಮ ಹಿಡಿತ ಹೊಂದಿದ್ದರಿಂದ ಅವರಿಗೆ ಈ ವಿಭಿನ್ನತೆ ಸಾಧನೆ ಸಾಧ್ಯವಾಗಿದೆ. ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ,ಅದರಲ್ಲಿ  ಹಿಂದಿ ,ಕೊಂಕಣಿ,  ಉರ್ದು , ಭೋಜಪುರ್,ಒರಿಯಾ,ಬೆಂಗಾಲಿ, ಪಂಜಾಬಿ,ಮರಾಠಿ,ಸಿಂಧಿ, ಕನ್ನಡ,ಗುಜರಾತಿ, ,ಮಾಘಿ, ಮತ್ತು ಇನ್ನೂ ಹಲವಾರು ಭಾಷೆ  ಗಳಲ್ಲಿಯೂ ಕಂಠದಾನ ಮಾಡಿದ ಖ್ಯಾತಿ ಅವರದು. ಅವರು ಕೆಲವು ಇಂಗ್ಲೀಶ್ ಪರ್ಸಿಯನ್,  ಸ್ಪಾನಿಶ್  ಮತ್ತು ಡಚ್ ಹಾಡುಗಳನ್ನೂ ಧ್ವನಿ ಮುದ್ರಣ ಮಾಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಜುಲೈ ೨೪,೨೦೧೦ ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಅವರ ಧ್ವನಿ ಎಂದರೆ "ಸುಮಾರು೧೦೧ ಪ್ರಕಾರದಲ್ಲಿ "ಐ ಲೌ ಯು"ವನ್ನು ಒಂದೇ ಹಾಡಿನಲ್ಲಿ ಹೇಳಿಸಬೇಕೆಂದರೆ ಮೊಹಮ್ಮದ ರಫಿ ಅವುಗಳನ್ನೆಲ್ಲಾ ಬಲ್ಲರು ಎಂದು ವರ್ಣಿಸಿದೆ. ಅತ್ಯಂತ ಸಣ್ಣ ಪ್ರಕಾರದ ಮರಿ ಪ್ರೀತಿ,ಎಳೆಯ ವಯಸ್ಸಿನ ಅಪಕ್ವ ಪ್ರೇಮದ ರೋಮಾಂಚನ,ಯಾವುದೇ ನಿರೀಕ್ಷೆಗಳಿಲ್ಲದ ಪ್ರೀತಿಯ ತತ್ವ ಮತ್ತು ಹೃದಯ ಭಗ್ನವಾದ ದುರಂತ ಪ್ರೇಮ-ಹೀಗೆ ಯಾವುದನ್ನೂ ಅವರು ಸಮರ್ಪಕ ಭಾವಗಳಲ್ಲಿ ಅಭಿವ್ಯಕ್ತಿಗೊಳಿಸುವಲ್ಲಿ ಸಫಲರಾಗಿದ್ದಾರೆ. ಅದು ಬರೀ ಪ್ರೇಮವಲ್ಲ,ಅದು ಜೀವನದ ನವರಸಗಳ ಸಂಗಮವಿದ್ದಂತೆ ತೋರಿಸಿದ್ದಾರೆ-ವಿಫಲ ಕವಿಯೊಬ್ಬನ ಮರೆವುಗಳಿವೆ,ಕವಿಯೊಬ್ಬನ ಸಕ್ರಿಯ ಕ್ರಿಯಾಶೀಲತೆ ಇದೆ,ಓರ್ವ ಸಾಲದ ಹೊರೆಹೊತ್ತ ರೈತನೊಬ್ಬನ ನಿರಾಸೆ ಇದೆ,ಹೀಗೆ ಇವರೆಲ್ಲರ ಸೂಕ್ತ ಸಂದರ್ಭದ ಧ್ವನಿಯಾಗಿದ್ದಾರೆ.ರಫಿ ಅವರ ನಾಲ್ಕು ದಶಕಗಳ ಈ ವೃತ್ತಿ ಜೀವನವು ಪ್ರತಿ ಋತು ಮತ್ತು ಪ್ರತಿ ಕಾರಣಕ್ಕೂ ಸೂಕ್ತವಾಗಿತ್ತು."ಅವರು ೫ ನ್ಯಾಶನಲ್ ಅವಾರ್ಡ್ಸ್ ರಾಷ್ಟ್ರೀಯ ಪುರಸ್ಕಾರ ಮತ್ತು ಆರು ಬಾರಿ ಫಿಲಂ ಫೇರ್ ಅವಾರ್ಡ್ ಗೆ ಪಾತ್ರರಾಗಿದ್ದಾರೆ.  ೧೯೬೭ ರಲ್ಲಿ ಪಧ್ಮ ಶ್ರೀ  ಪ್ರಶಸ್ತಿಯನ್ನು ಭಾರತ ಸರ್ಕಾರ ರಫಿಯವರಿಗೆ ನೀಡಿ ಸತ್ಕರಿಸಿತು.
 ರಫಿಯವರ ವ್ರುತ್ತಿಬದ್ದತೆಗೆ  ಸಾಕ್ಷಿಯಾಗಿ ಹಲವಾರು ಘಟನೆಗಳು ನಡೆದಿದ್ದರೂ  ಲತಾ ಮಂಗೇಶ್ಕರ್ ಹಾಗು ರಫಿಯವರ ಈ ಘಟನೆ ಮರೆಯಲಾಗದ್ದು . ಇದು ಹಿಂದಿ ಚಿತ್ರರಂಗದ ಐತಿಹಾಸಿಕ ಘಟನೆಯಾಗಿ ಉಳಿದಿದೆ.
ಮೊಹಮದ್ ರಫಿ ಹಾಗು ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಆಗ ರಫಿಯ ಬೇಡಿಕೆ ಪರಿಗಣಿಸಿ ೧೯೬೨-೧೯೬೩ ರಲ್ಲಿ ತಮ್ಮ ಬೇಡಿಕೆಯಡಿ ತಮ್ಮ ರಾಜಧನದ ಪ್ರಮಾಣದ ಶೇಕಡಾ ೫ ರಷ್ಟರ ಪಾಲು ಕೇಳಲು ಅದೇ ಅರ್ಧದಷ್ಟು ಪಾಲು ಕೇಳಲು ಆಗ್ರಹಿಸಿದಾಗ ಅದು ಸಂಯೋಜಕರ ಗಲಿಬಿಲಿಗೆ ಕಾರಣವಾಗುತ್ತದೆ. ಲತಾ ಅವರ ಬೇಡಿಕೆ ಹಿನ್ನಲೆಯಲ್ಲಿ ಈ ಜೋಡಿ ಹಾಡಿಗಾಗಿ ಸಂಗೀತ ನಿರ್ದೇಶಕರುಗಳು ಅರ್ಧ ಸಂಭಾವನಾ ರಾಜಧನಕ್ಕೊಪ್ಪಬೇಕಲ್ಲದೇ ೫ ರ ಶೇಕಡಾವನ್ನು ಸಂಯೋಜನಕನ ಪಾಲಿಗಿರಲೆಂದು ಹೇಳಿದ್ದರು. ರಫಿ ಹೇಳುವಂತೆ ತಮ್ಮ ಹಾಡಿಗಾಗಿನ ಬೇಡಿಕೆಯ ಸಂಭಾವನೆ ನೀಡಿದ ಅನಂತರ ನಿರ್ಮಾಪಕ-ತಮ್ಮ ಜವಾಬ್ದಾರಿ ಕೊನೆಯಾಗುವುದೆಂದು ಹೇಳಿಕೆ ನೀಡಿದ್ದಾರೆ. ಅದರ ನಂತರ ಚಿತ್ರ ಯಶಸ್ಸಾದರೆ ಚಿತ್ರ ನಿರ್ಮಾಪಕನಿಗೆ ಉತ್ತಮ ಅದೃಷ್ಟ,ಅದಕ್ಕೆ ಗ್ರಾಮ್ಕೊ (HMV)ದ ಸಂಭಾವನೆಯನ್ನು ಅವರೇ ಪಡೆಯುವ ಅವಕಾಶ ಪಡೆಯುತ್ತಾರೆ.
ಒಂದು ಚಿತ್ರ ವಿಫಲವಾದರೆ ಈಗಾಗಲೇ ತಾನು ತನ್ನ ಹಾಡಿಗೆ ಸಂಭಾವನೆ ಪಡೆದಿದ್ದು ಹೀಗಾಗಿ ಚಿತ್ರ ನಿರ್ಮಾಪಕ ಮತ್ತು ತಾವು ಆ ಜವಾಬ್ದಾರಿ ಕಳೆದುಕೊಳ್ಳುತ್ತೇವೆ,ಎನ್ನುತ್ತಾರೆ. ರಫಿ ಹೇಳುವಂತೆ "ನಾವು ಹಿನ್ನಲೆ ಗಾಯಕರಾಗಿ ಹಾಡನ್ನು ಸೃಜಿಸಲಾರೆವು,ನಾವು ಕೇವಲ ಅದನ್ನು ಪರದೆ ಮೇಲೆ ಸಂಗೀತ ನಿರ್ದೇಶಕ ಹೇಳಿದಂತೆ ಮರು-ಸೃಷ್ಟಿ ಮಾಡುತ್ತೇವೆ. ನಾವು ಹಾಡುತ್ತೇವೆ,ಅವರು ಸಂಭಾವನೆ ನೀಡುತ್ತಾರೆ,ಅಲ್ಲಿಗೆ ನಮ್ಮಿಬ್ಬರ ಬದ್ದತೆ ಮುಗಿಯಿತು

ಲತಾ,ಈ ಹೇಳಿಕೆಯು ಸಂಭಾವನಾ ವಿಷಯದಲ್ಲಿ ಇದು ಅಸ್ಥಿರತೆಯನ್ನು ಹುಟ್ಟು ಹಾಕುತ್ತದೆ ಎನ್ನುತ್ತಾರೆ. ಲತಾ ಅವರು ನಂತರ ತಾವು ರಫಿಯೊಂದಿಗೆ ಹಾಡುವುದಿಲ್ಲ ಎಂದು ಹೇಳಿದರು,ಆದರೆ ರಫಿ ಒಬ್ಬರೇ ಆಗ ಲತಾ ಜೊತೆ ಹಾಡಲು ಉತ್ಸುಕತೆ ತೋರಿದ್ದರು. ಅದಾದ ನಂತರ ಎಸ್.ಡಿ ಬರ್ಮನ್ ಅವರ ಸಂಧಾನದ ಮೂಲಕ ತಮ್ಮ ನಿರ್ಧಾರ ಬದಲಿಸಿ ಜೊತೆಯಾಗಿ ಹಾಡಲು ಒಪ್ಪಿದರು.
ಮೋಹದ ರಫಿ  ಹಾಡುಗಳು ಇಂದಿಗೂ ಅಮರ.
ರಫಿ ಅವರು ಜುಲೈ೩೧,೧೯೮೦,ಗುರುವಾರ ರಾತ್ರಿ ೧೦:೫೦ ರ ಸುಮಾರು ಹೃದಯಾಘಾತಕ್ಕೊಳಗಾಗಿ ಮೃತರಾದರುಅವರ ಕೊನೆಯ ಹಾಡು "ಶ್ಯಾಮ್ ಫಿರ್ ಕ್ಯುಂವ್ ಉದಾಸ್ ಹೈ ದೋಸ್ತ್"(ಆಸ್ ಪಾಸ್ )ಇದಕ್ಕಾಗಿ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಅವರ ಹಾಡಿಗೆ ಧ್ವನಿ ನೀಡಿದ್ದು ತಮ್ಮ ಸಾವಿನ ಕೆಲವು ಗಂಟೆಗಳ ಮುಂಚೆ ಧ್ವನಿಮುದ್ರಣ ಮಾಡಿದ್ದರು. ಅವರು ನಾಲ್ವರು ಪುತ್ರರು (ಸಈದ್ ರಫಿ,ಖಲೀಲ್ ರಫಿ,ಹಮಿದ್ ರಫಿ,ಶಾಹಿದ್ ರಫಿ)ಮೂವರು ಪುತ್ರಿಯರಾದ (ಪರವೀನ್,ನಸ್ರೀನ್,ಯಾಸ್ಮಿನ್)ಮತ್ತು ೧೮ ಮೊಮ್ಮಕ್ಕಳನ್ನು ಅಗಲಿದ್ದಾರೆ.ಅಂದು ಭಾರತೀಯ ಸಂಗೀತ ರಂಗದಲ್ಲಿ ಒಂದು ಮರೆಯಲಾರದ ದ್ವನಿ ಅಸ್ತಂಗತವಾಯಿತು. ಆದರೆ ಅವರು ಹಾಡಿರುವ ಹಾಡುಗಳು ಪ್ರತಿಕ್ಷಣವೂ  ವಿಶ್ವದೆಲ್ಲೆಡೆ ಪ್ರಸರಿಸುತ್ತಾ ಅವರನ್ನು ಜೀವಂತವಾಗಿ ಇಟ್ಟಿವೆ. ರಫಿಯ ಬಗ್ಗೆ ಎಷ್ಟು ಬರೆದರೂ ಸಾಲದಷ್ಟು ಮಾಹಿತಿಗಳು ನಮ್ಮ ಸುತ್ತ ಹರಡಿವೆ. ರಫಿಯ ನೆನಪಲ್ಲಿ  ಅಂತರಜಾಲದಿಂದ  ಮಾಹಿತಿ ಹೆಕ್ಕಿ , ಚಿತ್ರಗಳನ್ನು ಗೂಗಲ್ ಸರ್ಚ್ ನಲ್ಲಿ ಇಳಿಸಿ, ವಿಕಿ ಪೀಡಿಯಾ ಸಹಕಾರ ಪಡೆದು  ಈ ಲೇಖನವನ್ನು ಭಟ್ಟಿ ಇಳಿಸಿದ್ದೇನೆ. ಇವರಿಗೆಲ್ಲಾ  ಕೃತಜ್ಞತೆಗಳು . ರಫಿಯನೆನಪಿನಲ್ಲಿ ಇವತ್ತು ರಫಿ ಹಾಡನ್ನು ಕೇಳುತ್ತಾ ಅಗಲಿದ ಭಾರತದ ನಕ್ಷತ್ರಕ್ಕೆಪ್ರೀತಿಯ  ನಮನ  ಸಲ್ಲಿಸೋಣ ಬನ್ನಿ
ಗೌರವ ಪ್ರಶಸ್ತಿಗಳು
  • ೧೯೪೮ - ರಫಿ ಅವರು ಭಾರತ ಪ್ರಧಾನಿ ಯವರಿಂದ  ಭಾರತದ ಮೊದಲ ಸ್ವಾತಂತ್ರ್ಯ ದಿನದಂದು ಬೆಳ್ಳಿ ಪದಕ ಪಡೆದರು
  • ೧೯೬೭ -  ಪಧ್ಮ ಶ್ರೀ  ಪುರಸ್ಕಾರ ಭಾರತ ಸರ್ಕಾರದಿಂದ  ನೀಡಲಾಯಿತು.
  • ೧೯೭೪ - ಫಿಲ್ಮ್ ವರ್ಲ್ಡ್ ಮ್ಯಾಗ್ಜಿನ್ ನಿಂದ ಬೆಸ್ಟ್ ಸಿಂಗರ್ ಅವಾರ್ಡ್ ನ್ನು "ತೇರೀ ಗಲಿಯೊಮೆ ನಾ ರಖೆಂಗೇ ಕದಮ್ ಆಜ್ ಕೆ ಬಾದ್" ಹಾಡಿಗೆ ಪ್ರಶಸ್ತಿ ಬಂತು (ಹವಸ್,೧೯೭೪).
  • ೨೦೦೧ - ರಫಿ ಅವರನ್ನು "ಸಹಸ್ರಮಾನದ ಅತ್ಯುತ್ತಮ ಗಾಯಕ" ಪ್ರಶಸ್ತಿಯನ್ನು ಮುಂಬಯಿನಲ್ಲಿನ ಹೀರೋ ಹೊಂಡಾ  ಮತ್ತು ಸ್ಟಾರ್ ಡಸ್ಟ್ ಮ್ಯಾಗ್ಜಿನ್ ಗಳು ಜನವರಿ ೭, ೨೦೦೧ರಲ್ಲಿ ನೀಡಿದವು. ರಫಿ ಈ ಜನಮತದಲ್ಲಿ ೭೦% ರಷ್ಟು ಮತ ಪಡೆದರು.
ರಾಷ್ಟ್ರೀಯ ಚಲನ ಚಿತ್ರ ಪುರಸ್ಕಾರ :

ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
೧೯೫೭ "ಜಿನ್ಹೆನಾ ನಾಜ್ ಹೈ ಹಿಂದ್ ಪಾರ್r" ಪ್ಯಾಸಾ ಸಚಿನ್ ದೇವ್ ಬರ್ಮನ್ ಸಾಹಿರ್ ಲಿಸಿಯಾನ್ವಿ
೧೯೬೪ "ಚಾಹೂಂಗಾ ಮೈ ತುಜೆ " ದೋಸ್ತಿ ಲಕ್ಷ್ಮೀಕಾಂತ್-ಪ್ಯಾರೇಲಾಲ್ ಮಜ್ರೂಹ್ ಸುಲ್ತಾನ್ ಪುರಿ
೧೯೬೬ "ಬಾಹಾರೋಂ ಫೂಲ್ ಬರಸಾವೊ" ಸೂರಜ್‌‌‌ ಶಂಕರ್ ಜೈಕಿಶನ್ Shailendra
೧೯೬೭] "ಬಾಬುಲ್ ಕಿ ದುವಾಯೆ" ನೀಲ್ ಕಮಲ್‌ ರವಿ ಸಾಹೀರ್ ಲುದಿಯಾನ್ವಿ
೧೯೭೭ "ಕ್ಯಾ ಹುವಾ ತೇರಾ ವಾದಾ" ಹಮ್ ಕಿಸಿಸಿಸೆ ಕಮ್ ನಹಿ ರಾಹುಲ ದೇವ್ ಬರ್ಮನ್ ಮಜ್ರೂಹ್ ಸುಲ್ತಾನ್ ಪುರಿ
ಫಿಲಂ ಫೇರ್ ಪ್ರಶಸ್ತಿಗಳು .:
ಕಿಶೋರ್ ಕುಮಾರ್ ಜೊತೆ ರಫಿ ಸಲ್ಲಾಪ !!!!

ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
೧೯೬೦ "ಚೌದಹ್ವೀಂ ಕಾ ಚಾಂದ್ ಹೊ" "ಚೌದಹ್ವೀಂ ಕಾ ಚಾಂದ್ " ಬಾಂಬೆ ರವಿ ಶಕೀಲ್ ಬದಾಯೂನಿ
೧೯೬೧ "ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ" ಸಸುರಾಲ್ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೪ "ಚಾಹೂಂಗಾ ಮೈ ತುಝೆ" ದೋಸ್ತಿ ಲಕ್ಷ್ಮೀಕಾಂತ-ಪ್ಯಾರೆಲಾಲ್ ಮಜ್ರೂಹ್ ಸುಲ್ತಾನ್ ಪುರಿ
೧೯೬೬ "ಬಹಾರೋ ಫೂಲ್ ಬರಸಾವೊ" ಸೂರಜ್‌‌‌ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೮ "ದಿಲ್ ಕೆ ಝರೋಂಕೆ ಮೆ" ಬ್ರಹ್ಮಚಾರಿ ಶಂಕರ್ ಜೈಕಿಶನ್ ಶೈಲೇಂದ್ರ
೧೯೭೭ "ಕ್ಯಾ ಹುವಾ ತೇರಾ ವಾದಾ" ಹಮ್ ಕಿಸಿಸೆ ಕಮ್ ನಹಿ ರಾಹುಲ ದೇವ್ ಬರ್ಮನ್ ಮಜ್ರೂಹ್ ಸುಲ್ತಂಪುರಿ
ನಾಮನಿರ್ದೇಶಿತಗೊಂಡಿದ್ದು :
ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
1961 "ಹುಸ್ನವಾಲೇ ತೇರಾ ಜವಾಬ್ ನಹೀ" ಘರಾನಾ ರವಿ ಶಕೀಲ್ ಬದಾಯುನಿ
1962 "ಏ ಗುಲಾಬದನ್ ಏ ಗುಲಾಬದನ್" ಪ್ರೊಫೆಸರ್ ಶಂಕರ್ ಜೈಕಿಶನ್ ಶೈಲೇಂದ್ರ
1963 "ಮೇರೆ ಮೆಹಬೂಬ್ ತುಝೆ" ಮೇರೆ ಮೆಹಬೂಬ್ ನೌಶಾದ್ ಶಕೀಲ್ ಬದಾಯುನಿ
1965 "ಛೂ ಲೇನೆ ದೊ ನಾಜುಕ್ ಹೋಂಟೋಂಕೊ" ಕಾಜಲ್ ರವಿ
೧೯೬೮ "ಮೈ ಗಾಂವೂ ತುಮ್ ಸೋ ಜಾವೊ" ಬ್ರಹ್ಮಚಾರಿ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೯ "ಬಡಿ ಮಸ್ತಾನಿ ಹೈ" ಜೀನೆ ಕಿ ರಾಹ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೦ "ಖಿಲೋನಾ, ಜಾನ್ ಕರ್" ಖಿಲೋನಾ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೩ "ಹಮ್ ಕೊ ತೊ ಜಾನ್ ಸೆ ಪ್ಯಾರಿ" ನೈನಾ ಶಂಕರ್ ಜೈಕಿಶನ್ ಹಸರತ್ ಜೈಪುರಿ
೧೯೭೪ "ಅಚ್ಛಾ ಹೀ ಹುವಾ ದಿಲ್ ಟೂಟ್ ಗಯಾ" ಮಾ ಬಹೆನ್ ಓರ್ ಬೀವಿ ಶಾರದಾ ಖಮರ ಜಲಾಲಾಬಾದಿ, ವೇದ್ಪಾಲ್ ವರ್ಮಾ
೧೯೭೭ "ಪರ್ಧಾ ಹೈ ಪರ್ಧಾ" ಅಮರ್ ಅಕ್ಬರ್ ಅಂತೋನಿ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೮ "ಆದಮೀ ಮುಸಾಫಿರ್ ಹೈ" ಅಪ್ನಾಪನ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೯ "ಚಲೋ ರೇ ಡೋಲಿ ಉಠಾವೊ ಕಹಾರ್" ಜಾನಿ ದುಶ್ಮನ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ವರ್ಮಾ ಮಲಿಕ್
೧೯೮೦ "ಮೇರೆ ದೋಸ್ತ್ ಕಿಸ್ಸಾ ಯೆಹೆ" ದೋಸ್ತಾನಾ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೮೦ "ದರ್ದ್-ಎ-ದಿಲ್ ದರ್ದ್-ಎ-ಜಿಗರ್" ಕರ್ಜ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೮೦ "ಮೈನೆ ಪೂಛಾ ಚಾಂದ್ ಸೆ" ಅಬ್ದುಲ್ಲ್ಹಾ ರಾಹುಲ ದೇವ್ ಬರ್ಮನ್ ಆನಂದ್ ಭಕ್ಷಿ (/೦}
ಇತರ ಪ್ರಶಸ್ತಿಗಳು :
ವಿಜೇತ
ವರ್ಷ (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
1957 ತುಮ್ಸಾ ನಹಿ ದೇಖಾ   ಓ.ಪಿ.ನಯ್ಯರ್ ಮಜ್ರೂಹ್ ಸುಲ್ತಂಪುರಿ
೧೯೬೫ ದೋಸ್ತಿ ಲಕ್ಷ್ಮಿಕಾಂತ-ಪ್ಯಾರೆಲಾಲ್ ಮಜ್ರೂಹ್ ಸುಲ್ತಂಪುರಿ
೧೯೬೬ ಆರ್ಜೂ ಶಂಕರ್ ಜೈಕಿಶನ್ ಹಸರತ್ ಜೈಪುರಿ
 
ಸುರ್ ಶೃಂಗಾರ್ ಪ್ರಶಸ್ತಿ 
ವಿಜೇತ
ವರ್ಷ (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ1964ಚಿತ್ರಲೇಖಾರೋಶನ್
ಸಾಹಿರ್ ಲುಧಿಯಾನ್ವಿ    
                                                                                                                      

15 comments:

Pradeep Rao said...

ಅವರ ಹಾಡುಗಳ ಮೂಲಕ ಮೊಹಮ್ಮದ್ ರಫ಼ಿಯವರು ಇಂದಿಗೂ ಅಮರ!

umesh desai said...

ವಾಹ್ ಬಾಲು ಸರ್ ರಫಿ ಬಗ್ಗೆ ಎಷ್ಟೆಲ್ಲ ಮಾಹಿತಿ..ನಿಮಗೊಂದು ಹ್ಯಾಟ್ಸ್ ಆಫ್

sunaath said...

ರಫಿಯವರ ಅನೇಕ ಹಾಡುಗಳು ಇಂದಿಗೂ ನಮ್ಮನ್ನು ರಂಜಿಸುತ್ತವೆ.

nimmolagobba said...

ಪ್ರದೀಪ್ ರಾವ್:-) ಹೌದು ನಿಮ್ಮ ಮಾತು ನಿಜ . ಅವರು ಅಮರ ಗಾಯಕ. ನಿಮ್ಮ ಅನಿಸಿಕೆಗೆ ವಂದನೆಗಳು.

nimmolagobba said...

@ ಉಮೇಶ್ ದೇಸಾಯಿ :- ಸರ್ ಲೇಖನ ಓದಿದ್ದಕ್ಕೆ ವಂದನೆಗಳು. ಈ ಹೊಗಳಿಕೆ ನಿಜವಾಗಲೂ ಲೇಖನದಲ್ಲಿ ತಿಳಿಸಿರುವ ಮಾಹಿತಿ ಮೂಲಗಳಿಗೆ ಸಲ್ಲಬೇಕು.

nimmolagobba said...

@ಸುನಾಥ್ :-) ರಫಿಯವರ ಹಾಡನ್ನು ಇಷ್ಟಪಡದವರು ಯಾರಿದ್ದಾರೆ ಸರ್, ಪ್ರತಿಕ್ಷಣವೂ ಎಲ್ಲೋ ಒಂದುಕಡೆ ನಮ್ಮ ಸುತ್ತಲೂ ಅವರ ಹಾಡು ಕೇಳುತ್ತಲೇ ಇರುತ್ತದೆ.ಇದಕಿಂತ ಧನ್ಯತೆ ಇನ್ನೇನು ಬೇಕು ಆಲ್ವಾ ಸರ್. ನಿಮ್ಮ ಅನಿಸಿಕೆಗೆ ವಂದನೆಗಳು.

prabhamani nagaraja said...

ಮಧುರ ಗೀತೆಗಳ ಗಾಯಕ ರಫಿಯವರ ಬಗ್ಗೆ ಉತ್ತಮ ಲೇಖನವನ್ನು ಬರೆದು ನಮ್ಮೊಡನೆ ಹ೦ಚಿಕೊ೦ಡಿದ್ದಕ್ಕಾಗಿ ಧನ್ಯವಾದಗಳು.

nimmolagobba said...

@ ಪ್ರಭಾಮಣಿ ನಾಗರಾಜ :- ನಿಮ್ಮ ಅನಿಸಿಕೆಗೆ ವಂದನೆಗಳು ಮೇಡಂ

Badarinath Palavalli said...

ಬಹು ಭಾಷಾ ಅಮರ ಗಾಯಕ ರಫೀ ಸಾಬ್ ಬಗೆಗಿನ ಉಪಯುಕ್ತ ಸಚಿತ್ರ ಲೇಖನ ಕೊಟ್ಟಿದ್ದೀರ, ಧನ್ಯವಾದಗಳು ಬಾಲಣ್ಣ.

ಈ ಲೇಖನವನ್ನು print out ತೆಗೆದು ಎತ್ತಿಟ್ಟು ಕೊಳ್ಳುತ್ತೇನೆ.

ರಫಿಯವರನ್ನು ಆರಂಭದಲ್ಲಿ ಪ್ರೋತ್ಸಾಹಿಸಿದ ಮೊಹಮದ್ ಹಮೀದ್ ಅವರ ಸಹೃದಯತೆಗೆ ಶರಣು!

nimmolagobba said...

@ಬದರಿನಾಥ್ ಪಳವಲ್ಲಿ :-) ನಿಮ್ಮ ಪ್ರೀತಿಮಾತುಗಳು ಮನದಲ್ಲಿ ಸೇರಿಹೋಯಿತು.ಲೇಖನ ಓದಿದ್ದಕ್ಕೆ ಜೈ ಹೋ .ಪ್ರಿಂಟ್ ಔಟ್ ತೆಗೆದಿದ್ದು ಒಳ್ಳೆಕೆಲಸ. ವಂದನೆಗಳು.

ashokkodlady said...

ಬಾಲು ಸರ್,

ಮಹಮ್ಮದ್ ರಫಿ...ಸಂಗೀತ ಜತ್ತಿನ ದಿಗ್ಗಜ....ಅವರು ನಮ್ಮೊಂದಿಗೆ ಇಲ್ಲದೆ ಇದ್ದರೂ ಅವರ ಹಾಡುಗಳ ಜೊತೆ ಅವರ ನೆನಪು ಅಮರವಾಗಿರುತ್ತದೆ....ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದ ಗಳು ...

nimmolagobba said...

ashokkodlady:-)ತಮ್ಮ ಅನಿಸಿಕೆಗೆ ವಂದನೆಗಳು ಸರ್

ಸೀತಾರಾಮ. ಕೆ. / SITARAM.K said...

ರಫಿಯವರ ಬಗ್ಗೆ ಸಮಗ್ರ ಸಂಕಿಶ್ಪ್ತ ಮಾಹಿತಿ ನೀಡಿದ್ದೀರಾ. ಅವರೊಬ್ಬ ಮಹಾನ ಗಾಯಕರು..

nimmolagobba said...

@ ಸೀತಾರಾಮ್ :-) ತಮ್ಮ ಮಾತು ನಿಜ ಸರ್ , ಅನಿಸಿಕೆಗೆ ಧನ್ಯವಾದಗಳು

Srikanth Manjunath said...

ಸೂಪರ್ ಮಾಹಿತಿ ...ಸುಮಧುರ ಗಾಯಕ ರಫೀ ಹಾಡುಗಳ ಮೂಲಕ ನಮ್ಮ‌ಜೊತೆ ಇದ್ದಾರೆ