Sunday, January 30, 2011

ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ಇದೆ ಇರ್ಬೇಕು ಅಂದಿತ್ತು ಮನಸು!!!



ಯಾವ   ಕಲಾವಿದನ  ಕಲ್ಪನೆಯೂ  ಕಾಣೆ  !!!

ಕಳೆದ ಎಂಟು ಸಂಚಿಕೆಯಿಂದ ನನ್ನೊಡನೆ ಕಬಿನಿಯ ಕಾಡಲ್ಲಿ ಅಲೆಯುತ್ತಿದ್ದೀರಿ , ಕಳೆದ ಸಂಚಿಕೆಯಲ್ಲಿ ಆನೆಗಳ ಸಾಮ್ರಾಜ್ಯದೊಳಗೆ ಹೊಕ್ಕಿಬಂದ  ನಾವು ಈ ಸಂಚಿಕೆಯಲ್ಲಿ ಕಬಿನಿಯ ಮಡಿಲಲ್ಲಿ ನಡೆಯುವ ಪ್ರಕೃತಿಯ ನರ್ತನ ನೋಡೋಣ ಬನ್ನಿ .ಹೌದು ಸ್ವಾಮೀ ಇದೊಂದು ಮನರಂಜಿಸುವ ನೃತ್ಯವೇ ಸರಿ,ಕಬಿನಿಯ ಹಿನ್ನೀರಿನಲ್ಲಿ  ಒಮ್ಮೆ ತೇಲುತ್ತಾ ಹೊರಟ ನಮಗೆ  ಯಾವುದೇ ಪ್ರಾಣಿಯ ದರ್ಶನ ಆಗಲಿಲ್ಲ , ನಮಗೆ ನಾವೇ ಸಮಾಧಾನ ಮಾಡಿಕೊಂಡ ನಾವು ಯಾವುದನ್ನು ನೋಡಿ ಆನಂದ ಪಡೋಣ ಎಂದುಕೊಳ್ಳುವಷ್ಟರಲ್ಲಿ  ಕಬಿನಿಯ ಹಿನ್ನೀರಿನಲ್ಲಿ  ಮರಗಳ ಮೋಹಕ  ನರ್ತನ ಕಣ್ಣಿಗೆ ಬಿತ್ತು.                                                                         
ಬೇಲೂರ ಬಾಲೆಯರಿಗೆ  ನೃತ್ಯ ಕಲಿಸಿದವರು ನಾವೇ !!!                   
  
ಮುಗಿಲ ಚುಂಬಿಸುವ ಆಸೆ ನಮಗೆ !!!
ಒಂಟೀ ಒಂಟಿಯಾಗಿರುವುದು  ಬೋರೋ ಬೋರು !!
ಬಲು ಅಪರೂಪ ನಮ್ಜೋಡಿ ,ಎಂತ ಕಚೇರಿಗೂ ನಾವ್ ರೆಡಿ !!
ನೀರಿನಲ್ಲಿ ಅರಳಿದ ಕಲೆಯ ಮೋಹಕ ಬಲೆ !!
ಜೋಕೆ ನಾನು ಬಳ್ಳಿಯ ಮಿಂಚು !!!
ಬನ್ನಿ ಕುಣಿಯೋಣ !!ನಲಿದು ನರ್ತಿಸೋಣ!!!

         ತೇಲುತ್ತಾ ಸಾಗಿದ ನಾವು ನೀರಿನ ಸಭಾಂಗಣದಲ್ಲಿ  ಮೆರೆದಿಹ ಅದ್ಭುತ ನೃತ್ಯ ಗಳನ್ನೂ ಸೆರೆಹಿಡಿಯಲು  ಆರಂಭಿಸಿದೆವು.  ಹಾಗೆ ಸಾಗಿದ ನಮಗೆ  ಮೋಹಕ ಜಾಲದಲ್ಲಿ ಮರಗಳ ಸುಂದರ ಹಾವ ಭಾವ ದೊಳಗೆ ಮೆರುಗು ನೀಡಿದ ಹಕ್ಕಿಗಳ ದರ್ಶನ  ಭಾಗ್ಯ ದೊರೆಯಿತು.                                                                                                             
ಸ್ವರ್ಗದಲ್ಲಿ ನಮ್ಮ ಮನೆ !!!
ನಾನು ನೀನು ಜೋಡಿ !!! 
ನಮ್ಮ ಪುಟ್ಟ ಸಂಸಾರ,ಲೋಕದಿಂದ ಬಹುದೂರ !!
ದೂರ ಬಹುದೂರ ಹೋಗುವ ಬಾರಾ !!
ಯಾವ ತಾಳ ಯಾವ ಮರಕೋ !!!
ನಮ್ಮ ಲೋಕ ಯಾವ ಸ್ವರ್ಗಕ್ಕೆ ಕಡಿಮೆ !!
ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ !!!
ಯಾವ ಮೋಹಕ ಕಲಾವಿದನ ಕೈಚಳಕ  ಇದು  !!

ಸ್ವರ್ಗ ಸುಂದರಿಯರ ಸನಿಹದಿಂದ ಬಿಡಿಸಿಕೊಂಡು    ದಡದ ಸನಿಹ ಹೊರಟ ನಮಗೆ  ಮೊಸಳೆಯೊಂದು ನೀರಿಗೆ ಜಾರುತ್ತಿರುವ ನೋಟ ಕಂಡಿತು. 
ನಾನವನಲ್ಲಾ!!! ನಿಮ್ ಸಹವಾಸ ಬೇಡ ನಂಗೆ!!!!
ಹರಿಣಗಳ  ಲೋಕ !!!
  • ಹಾಗೆ ತೇಲುತ್ತಾ ದಡಕ್ಕೆ ಹೊರಟ ನಮಗೆ ದೂರದಲ್ಲಿ ಜಿಂಕೆಗಳ ಹಿಂಡು ಮೇಯುತ್ತಿರುವುದು ಕಾಣಿಸಿತು. ಕಬಿನಿಯ ಸ್ವರ್ಗ ಲೋಕದಿಂದ ನೆನಪುಗಳ ಮೂಟೆ ಹೊತ್ತು ಮರಳಿ ಗೂಡಿಗೆ ಬಂದೆವು.ಇಷ್ಟರವರೆಗೂ ನನ್ನ ಜೊತೆಯಲ್ಲಿ ಕಾನನದ ಪ್ರವಾಸ ಮಾಡಿದ ನಿಮಗೆ ನನ್ನ ಕೋರಿಕೆ ಇಷ್ಟೇ ನೀವು ಯಾವ  ಕಾಡಿಗೆ ಹೋದರು ದಯವಿಟ್ಟು ಕೆಳಕಂಡ ವಿಚಾರಗಳನ್ನು ಗಮನಿಸಿರಿ .                                                                                                                     1 ] ಕಾಡಿನಲ್ಲಿ ವಿಹಾರಕ್ಕೆಂದು  ತೆರಳಿ  ಕೂಗಾಟ ಕಿರುಚಾಟ ಮಾಡುವುದನ್ನು ಮಾಡಬೇಡಿ,ಇದರಿಂದ ನಿಮ್ಮ ಗದ್ದಲಕ್ಕೆ ಹೆದರಿದ ಪ್ರಾಣಿಗಳು ದೂರ ಹೋಗಿ ನಿಮಗೆ ಪ್ರಾಣಿಗಳ ದರ್ಶನ ಆಗುವ ಸಂಭವ ಕಡಿಮೆ .[ಈ ವಿಚಾರದಲ್ಲಿ ನಾವು ವಿದೇಶಿಯರನ್ನು ಗಮನಿಸುವುದು ಒಳ್ಳೆಯದು.]                                                                                  2 ]    ಕಾನನದಲ್ಲಿ ಪ್ರಾಣಿಗಳನ್ನು ಅಣಕಿಸುವುದು, ಕಾರಿನ ಹಾರನ್ ಜೋರಾಗಿ ಮಾಡಿ ಅವುಗಳನ್ನು ರೇಗಿಸುವುದು ಮಾಡಬೇಡಿ  ಕೆರಳಿದ ಪ್ರಾಣಿಗಳು ಮನುಷ್ಯರನ್ನು ಅಟ್ಟ್ಯಾಕ್ ಮಾಡಿದ್ರೆ ಮನುಷ್ಯನ ಯಾವ ಆಟಗಳು ಅಲ್ಲಿ ನಡೆಯದು .ಕಾಡಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ  ತಕ್ಷಣ ಇಳಿಯಬೇಡಿ  ಇದು ಅತ್ಯಂತ  ಅಪಾಯಕಾರಿ ಹೀಗೆ ಮಾಡಿದ ಹಲವರು ತಮ್ಮ ಪ್ರಾಣ ತೆತ್ತಿದ್ದಾರೆ.                                                                                                 3 ]ನೀವು ತೆಗೆದು ಕೊಂಡು ಹೋದ  ಆಹಾರದ ಪ್ಯಾಕೆಟುಗಳು, ಪ್ಲಾಸ್ಟಿಕ್ ಬಾಟಲುಗಳು,ಅರ್ದ ತಿಂದು ಮಿಕ್ಕಿದ ಆಹಾರ ಪದಾರ್ಥಗಳು, ಉಪಯೋಗಿಸಿದ ಸೋಪುಗಳು, ಟೂತ್ ಪೇಸ್ಟು , ಕಾಗದ ,ಇವುಗಳನ್ನು  ಕಾಡಿನಲ್ಲಿ ಬಿಸಾಕಿ ಬರಬೇಡಿ ಇದರಿಂದ ಪ್ರಾಣಿಗಳ ಜೀವ ಹೋಗುವ ಸಾಧ್ಯತೆ ಹೆಚ್ಚು,  ಕಾಡು ಕಸದ ತೊಟ್ಟಿಯಲ್ಲ!!!                              4 ] ಕಾಡಿನಲ್ಲಿ ಮಜಾ ಮಾಡಲು ಹೋಗಬೇಡಿ ಕಂಠ ಪೂರ್ತಿ ಕುಡಿದು,ಬಾಟಲುಗಳನ್ನು ಎಲ್ಲೆಂದರಲ್ಲಿ ಒಡೆದುಹಾಕಿ,  ಜೋರಾಗಿ ಮ್ಯೂಸಿಕ್ ಹಾಕಿಕೊಂಡು  ಪ್ರತಿಬಾ  ಪ್ರದರ್ಶನ ಮಾಡುವವರಿಗೆ ಕಾಡು ಸೂಕ್ತ ಸ್ತಳವಲ್ಲಾ .     5 ] ಟ್ರೆಕ್ಕಿಂಗ್ ಗೆ ಹೋದರೆ ನೀವು ಹೋಗುವ ಜಾಗದ ಬಗ್ಗೆ ಸಾಕಷ್ಟು ವಿವರಗಳನ್ನು ಸಂಗ್ರಹಿಸಿ  ,ಹವಾಮಾನದ ಬಗ್ಗೆ ತಿಳಿದು ಕೊಂಡು ಹೊರಡಿ.                                                                                                                    6 ] ಕಾಡು ಪ್ರಾಣಿಗಳ  ಫೋಟೋ  ತೆಗೆಯುವಾಗ ಎಚ್ಚರ ವಹಿಸಿ, ನಿಮ್ಮ ಗಮನ ಫೋಟೋ/ವೀಡಿಯೊ  ತೆಗೆಯುವ ಕಡೆ ಇದ್ದಾಗ ಪ್ರಾಣಿಗಳು ಎರಗಿಬಂದರೆ ಕಷ್ಟವಾಗಬಹುದು.ಈ ಬಗ್ಗೆ ಎಚ್ಚರವಿರಲಿ.                              7 ]        ನಿಮ್ಮ ಗೆಳೆಯರಿಗೆ ,ನಿಮ್ಮ ಮನೆಯ ಕಿರಿಯರಿಗೆ ಕಾಡಿನಲ್ಲಿ ನಮ್ಮ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ಕೊಡಿ.                                                                                                                                     8 ] ಕಾಡಿಗೆ ನೀವು ಹೋದ ತಕ್ಷಣ ಕಾಡಿನಲ್ಲಿನ ಪ್ರಾಣಿಗಳು   ನಿಮ್ಮನ್ನು ದಾರಿಯಲ್ಲಿ ನಿಂತು  ಸ್ವಾಗತಿಸುತ್ತವೆ ಎಂಬ ಬ್ರಮೆ ಬೇಡ. ಪ್ರಾಣಿಗಳು ಸಿಗಲು ಅದೃಷ್ಟವೂ ಬೇಕೂ , ಯಾವುದೇ ಪ್ರಾಣಿ ಸಿಕ್ಕದಿದ್ದರೆ ಬೇಸರ ಬೇಡ ಬೇರೆ ವಿಚಾರಗಳ ಕಡೆ ಗಮನ ಹರಿಸಿ ಅಲ್ಲಿನ ಹೂ , ಹಣ್ಣು, ಮರ ,ಗಿಡ, ಪ್ರಕೃತಿ ಇವುಗಳ ಬಗ್ಗೆ ಕಲಿಯಲು ಪ್ರಯತ್ನಿಸಿ.          ನನಗೆ ಅನ್ನಿಸಿದ ಕೆಲವು ವಿಚಾರಗಳನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ.ಮೇಲಿನ ಅಂಶಗಳನ್ನು ಕಾಡಿನಲ್ಲಿ ಪಾಲಿಸಿದರೆ ಕಾಡನ್ನು ಅಲ್ಲಿನ ಪ್ರಾಣಿಗಳನ್ನು ಉಳಿಸಿದ ಕೀರ್ತಿ ನಮಗೆ ಬರುತ್ತದೆ.    ಮುಂದೆ ನೀವು ಕಾಡಿಗೆ ಹೋದಾಗ ಅಥವಾ ನಿಮ್ಮ ಸ್ನೇಹಿತರು ಹೋದಾಗ ಅವರಿಗೆ ಮೇಲಿನಂತೆ  ಅರಿವು ಮೂಡಿಸಿದರೆ  ನನ್ನ ಬರಹ ಸಾರ್ಥಕವಾದಂತೆ .   ಕಬಿನಿಯ ಯಾತ್ರೆಯಲ್ಲಿ ಜೊತೆಗಿದ್ದು ಒಳ್ಳೆಯ ಮಾತುಗಳನ್ನು ಹೇಳಿ ಮೆಚ್ಚುಗೆ ನೀಡಿದ ಎಲ್ಲಾ ಬ್ಲಾಗ್ ಗೆಳೆಯರಿಗೂ ನನ್ನ ಕೃತಜ್ಞತೆಗಳು.ಇಲ್ಲಿಗೆ ಕಬಿನಿ  ಕಾಡಿನ ಅನುಭವಗಳ ನೆನಪಿನ ಮೂಟೆ ಖಾಲಿಯಾಗಿದೆ. ನಮಸ್ಕಾರ ಮತ್ತೆ ಹೊಸ ವಿಷಯದೊಂದಿಗೆ ಭೇಟಿಯಾಗೋಣ.     ಪ್ರೀತಿಯಿಂದ ಈ ವಿಚಾರವನ್ನು ಓದಿದ ಬ್ಲಾಗಿಗ ಮಿತ್ರರಾದ ಶ್ರೀ Iynanda Prabhukumar ಹೇಳಿರುವ ಪ್ರೀತಿ ಮಾತಿನ ಸಲಹೆ ಇದು ಓದಿ ಒಮ್ಮೆ [ 

    ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ... ಹೊಸತು

    ಶ್ರೀ ಬಾಲಸುಬ್ರಹ್ಮಣ್ಯರವರಿಗೆ ನಮಸ್ಕಾರಗಳು.
    ಒಳ್ಳೆಯ ಬರೆಹ ಮತ್ತು ಚಿತ್ರಗಳು. ಅಭಿನಂದನೆಗಳು.
    ಕೊನೆಯಲ್ಲಿರುವ ಕಾಡಿನಲ್ಲಿ ನಾವು ವೀಕ್ಷಕರಾಗಿ ಹೋಗಿರುವಾಗ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆನ್ನುವ ಸೂಚನೆಗಳನ್ನು ಕೊಟ್ಟಿದ್ದೀರಿ. ಇವು ಬಹಳ ಮಹತ್ವಪೂರ್ಣವೂ ತಪ್ಪದೆ ಅನುಸರಿಸಬೇಕಾದವೂ ಆಗಿದೆ.ಇದಕ್ಕೆ ಧನ್ಯವಾದಗಳು. ಇದರ ಜತೆಗೆ ನಾನು ಈ ಕೆಳಗಿನವನ್ನು ತಮ್ಮ ಅನುಮತಿಯಿಂದ ಸೇರಿಸಬೇಕೆಂದಿದ್ದೇನೆ.
    "ಸಿಗರೇಟು, ಬೀಡಿ, ಮೊದಲಾದ ತಂಬಾಕು ಸೇವನೆ ಮಾಡಲೇ ಬೇಡಿ. ಕಾಡಿನೊಳಗಂತೂ ಅವನ್ನು ತೆಗೆದುಕೊಂಡೂ ಹೋಗಲೇಬೇಡಿ. ಯಾವ ಕಾರಣಕ್ಕೂ ಬೆಂಕಿಕಡ್ಡಿ ಗೀರಬೇಡಿ; ಬೆಂಕಿ ಹಚ್ಚಬೇಡಿ. ನಾವು ಅಂದುಕೊಂಡಿರುವದಕ್ಕಿಂತ ಬೇಗನೇ ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತದೆ; ಹರಡುತ್ತದೆ.
    "ಯಾವದೇ ಸಿನಿಮಾಗಳಲ್ಲಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಮೊದಲಾದ ಚಾನೆಲ್‌ಗಳಲ್ಲಿ ಎಷ್ಟೇ ನೈಜತೆಯಿಂದ ಕಾಡುಗಳನ್ನು ತೋರಿಸಿದರೂ ನಿಜವಾದ ಕಾಡಿನಲ್ಲಿನ ಅನುಭವವೇ ಬೇರೆ. ಕಾಡಿನಲ್ಲಿ ಯಾವದೇ ಚಾಲೆಂಜ್ ತೆಗೆದುಕೊಳ್ಳದಿರಿ. ತುಂಬಾ restrictions ಇರುವ ದೇವಸ್ಥಾನಗಳಲ್ಲಿರುವಂತೆ ಶಿಸ್ತು-ಸಂಯಮದಿಂದಿರಿ.
    "ಆನೆಗಳ ವಿಷಯದಲ್ಲಂತೂ ಹೆಚ್ಚಿನ ಜಾಗ್ರತೆ ಅವಶ್ಯ. ಶ್ರೀ ಗಣೇಶನ ರೂಪ, ಸಾಧುವಾಗಿ ತೋರುವ ನಿಧಾನದ ಪ್ರಾಣಿ - ಎಂದೆಲ್ಲಾ ಅವುಗಳೊಡನೆ ಸಲಿಗೆ ತೋರಬೇಡಿ. ಅವು ಬಹಳ ಬುದ್ದಿವಂತ, ಅತಿ ವೇಗದ, ಬಲಶಾಲಿ ಪ್ರಾಣಿಗಳು. ಅವಕ್ಕೆ ಸರಿಗಾಣದಂತೆ ವರ್ತಿಸಿದರೆ ಕಣ್ಣೆವೆಯಿಕ್ಕುವದರೊಳಗೆ ಸೊಂಡಿಲಲ್ಲೆತ್ತಿ ಬೀಸಾಕಿದರೆ ಸಾವಷ್ಟೇ ಗತಿ] ಪ್ರೀತಿಯಿಂದ ನೀಡಿರುವ ಈ ಸಲಹೆಯನ್ನು ನಾವುಗಳು ಪಾಲಿಸುವುದು ಪ್ರಕ್ರತಿ ಧರ್ಮ ಈ ಬಗ್ಗೆಯೂ ಸಹ ಬ್ಲಾಗಿಗ ಮಿತ್ರರು  ಗಮನಹರಿಸಲು ಕೋರುತ್ತೇನೆ.                

25 comments:

sunaath said...

ಬಾಲು,
ತುಂಬ ಸುಂದರವಾದ ದೃಶ್ಯಗಳನ್ನು ನಮ್ಮೊಡನೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು.

ಸುಬ್ರಮಣ್ಯ said...

ಚಿತ್ರಗಳು ಒಂದಕ್ಕಿಂತ ಒಂದು ಚನ್ನಾಗಿವೆ ಬಾಲು ಅಣ್ಣ!!!

ಅಪ್ಪ-ಅಮ್ಮ(Appa-Amma) said...

ಕಬನಿಯ ಕಾನನದ ದರ್ಶನ ತುಂಬಾ ಚೆನ್ನಾಗಿ ಮಾಡಿಸಿದ್ದೀರ ಬಾಲು.

ಪ್ರಕೃತಿಯ ನರ್ತನ ಸೊಗಸಾಗಿತ್ತು.

ಹಾಗೇ ಕಾನನದಲ್ಲಿ ಪಾಲಿಸಬೇಕಾದ ನಿಯಮಗಳು ಎಲ್ಲರೂ ಪಾಲಿಸಿದರೆ ಎಷ್ಟು ಚೆನ್ನ.

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಬಾಲು ಸರ್

ಚಿತ್ರಗಳು ಅದ್ಭುತ
ಅದರ ಕೆಳಗೆ ಬರೆದ ಹಾಡಿನ ತುಣುಕು ಸೂಪರ್
ಬರಹ ಸುಪೆರ್ರೋ ಸುಪರರು

balasubramanya said...

@ ಸುನಾತ್ ಸರ್ , ಕಾನನದ ನೆನಪಿನ ಹಾದಿಯಲ್ಲಿ ಜೊತೆಯಲ್ಲಿ ಬಂದ ನಿಮಗೆ ವಂದನೆಗಳು.ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

balasubramanya said...

@ ಪ್ರಿಯ ಸಹೋದರ ಸುಬ್ರಹ್ಮಣ್ಯ ಮಾಚಿಕೊಪ್ಪ ,ನಿಮ್ಮ ಅಭಿಪ್ರಾಯಕ್ಕೆ ಕೃತಜ್ಞ .ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

balasubramanya said...

@ ಅಪ್ಪ -ಅಮ್ಮ ,ನಿಮ್ಮ ಅಭಿಪ್ರಾಯ ಉತ್ತಮವಾಗಿದೆ ,ಅದಕಾಗಿ ಖುಷಿಯಾಗಿದೆ.ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

balasubramanya said...

@ ಸಾಗರದಾಚೆಯ ಇಂಚರ ,ಗುರುಮೂರ್ತಿಸರ್ , ನಿಮ್ಮ ಒಳ್ಳೆಯ ಮಾತುಗಳಿಗೆ ಜೈ ಹೋ. ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

Dr.D.T.Krishna Murthy. said...

ಬಾಲೂ ಸರ್;ಸುಂದರ ದೃಶ್ಯಗಳು.ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

balasubramanya said...

ಡಿ.ಟಿ.ಕೆ.ಮೂರ್ತಿ ಸರ್ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯ.ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

Ittigecement said...

ಬಾಲೂ ಸರ್..

ಸುಂದರ ಫೋಟೊಗಳು..
ಅದಕ್ಕೆ ತಕ್ಕ ವಿವರಣೆಗಳು..

ನಿಮ್ಮ ಟಿಪ್ಪಣೆಗಳು ತುಂಬಾ ಉಪಯುಕ್ತವಾಗಿವೆ..

ಮುಂದಿನ ಸಾರಿ ನಿಮ್ಮ ಸಂಗಡ ನಾನಂತೂ ಬರುತ್ತೇನೆ.. ಜೈ ಹೋ.. !

ಮತ್ತೊಮ್ಮೆ ಚಂದದ ಚಿತ್ರ ಲೇಖನಕ್ಕೆ ಅಭಿನಂದನೆಗಳು..

balasubramanya said...

@[ಸಿಮೆಂಟು ಮರಳಿನ ಮಧ್ಯೆ] ಪ್ರಕಾಶಣ್ಣ ನಿಮ್ಮ ಪ್ರೀತಿಯ ಮಾತುಗಳು ಹೃದಯ ಸೇರಿವೆ.ನನಗೂ ನಿಮ್ಮ ಜೊತೆ ಕಾಡಿಗೆ ಹೋಗುವ ಆಸೆ ಇದೆ . ಪ್ರೀತಿ ಹೀಗೆ ಇರಲಿ. ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

balasubramanya said...

ಸಂಪದ ಬ್ಲಾಗಿನಲ್ಲಿ Submitted by rajukbhat on January 31, 2011 - 2:43am.

ಕಬಿನಿಗೆ ಹೋಗಿದ್ದರೂ ಇಸ್ಟೊಂದು detail ಆಗಿ ವಿಷಯ ಗ್ರಹಿಸಲು ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಲೇಖನ ಹಾಗೂ ಫೋಟೋಗಳು ಬಹಳ ಚೆನ್ನಾಗಿವೆ. ತುಂಬಾ ಧನ್ಯವಾದಗಳು.
ಪ್ರೀತಿಯ ಮಾತಿಗೆ ಧನ್ಯವಾದಗಳು. ರಾಜು.ಕೆ.ಭಟ್.

balasubramanya said...

ಉ: ಕಬಿನಿಯ ಕಾನನದಲ್ಲಿ ನೋಡಿದ ಪ್ರಕೃತಿಯ ನರ್ತನ !!! ಸ್ವರ್ಗ ಅಂದ್ರೆ ... ಹೊಸತು
Submitted by Iynanda Prabhukumar on January 31, 2011 - 1:04pm.

ಶ್ರೀ ಬಾಲಸುಬ್ರಹ್ಮಣ್ಯರವರಿಗೆ ನಮಸ್ಕಾರಗಳು.
ಒಳ್ಳೆಯ ಬರೆಹ ಮತ್ತು ಚಿತ್ರಗಳು. ಅಭಿನಂದನೆಗಳು.
ಕೊನೆಯಲ್ಲಿರುವ ಕಾಡಿನಲ್ಲಿ ನಾವು ವೀಕ್ಷಕರಾಗಿ ಹೋಗಿರುವಾಗ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೆನ್ನುವ ಸೂಚನೆಗಳನ್ನು ಕೊಟ್ಟಿದ್ದೀರಿ. ಇವು ಬಹಳ ಮಹತ್ವಪೂರ್ಣವೂ ತಪ್ಪದೆ ಅನುಸರಿಸಬೇಕಾದವೂ ಆಗಿದೆ.ಇದಕ್ಕೆ ಧನ್ಯವಾದಗಳು. ಇದರ ಜತೆಗೆ ನಾನು ಈ ಕೆಳಗಿನವನ್ನು ತಮ್ಮ ಅನುಮತಿಯಿಂದ ಸೇರಿಸಬೇಕೆಂದಿದ್ದೇನೆ.
"ಸಿಗರೇಟು, ಬೀಡಿ, ಮೊದಲಾದ ತಂಬಾಕು ಸೇವನೆ ಮಾಡಲೇ ಬೇಡಿ. ಕಾಡಿನೊಳಗಂತೂ ಅವನ್ನು ತೆಗೆದುಕೊಂಡೂ ಹೋಗಲೇಬೇಡಿ. ಯಾವ ಕಾರಣಕ್ಕೂ ಬೆಂಕಿಕಡ್ಡಿ ಗೀರಬೇಡಿ; ಬೆಂಕಿ ಹಚ್ಚಬೇಡಿ. ನಾವು ಅಂದುಕೊಂಡಿರುವದಕ್ಕಿಂತ ಬೇಗನೇ ಕಾಡಿನಲ್ಲಿ ಬೆಂಕಿ ಹತ್ತಿ ಉರಿಯುತ್ತದೆ; ಹರಡುತ್ತದೆ.
"ಯಾವದೇ ಸಿನಿಮಾಗಳಲ್ಲಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಮೊದಲಾದ ಚಾನೆಲ್‌ಗಳಲ್ಲಿ ಎಷ್ಟೇ ನೈಜತೆಯಿಂದ ಕಾಡುಗಳನ್ನು ತೋರಿಸಿದರೂ ನಿಜವಾದ ಕಾಡಿನಲ್ಲಿನ ಅನುಭವವೇ ಬೇರೆ. ಕಾಡಿನಲ್ಲಿ ಯಾವದೇ ಚಾಲೆಂಜ್ ತೆಗೆದುಕೊಳ್ಳದಿರಿ. ತುಂಬಾ restrictions ಇರುವ ದೇವಸ್ಥಾನಗಳಲ್ಲಿರುವಂತೆ ಶಿಸ್ತು-ಸಂಯಮದಿಂದಿರಿ.
"ಆನೆಗಳ ವಿಷಯದಲ್ಲಂತೂ ಹೆಚ್ಚಿನ ಜಾಗ್ರತೆ ಅವಶ್ಯ. ಶ್ರೀ ಗಣೇಶನ ರೂಪ, ಸಾಧುವಾಗಿ ತೋರುವ ನಿಧಾನದ ಪ್ರಾಣಿ - ಎಂದೆಲ್ಲಾ ಅವುಗಳೊಡನೆ ಸಲಿಗೆ ತೋರಬೇಡಿ. ಅವು ಬಹಳ ಬುದ್ದಿವಂತ, ಅತಿ ವೇಗದ, ಬಲಶಾಲಿ ಪ್ರಾಣಿಗಳು. ಅವಕ್ಕೆ ಸರಿಗಾಣದಂತೆ ವರ್ತಿಸಿದರೆ ಕಣ್ಣೆವೆಯಿಕ್ಕುವದರೊಳಗೆ ಸೊಂಡಿಲಲ್ಲೆತ್ತಿ ಬೀಸಾಕಿದರೆ ಸಾವಷ್ಟೇ ಗತಿ, [ Iynanda Prabhukumar ನಿಮ್ಮ ಸಲಹೆಯನ್ನು ಬ್ಲಾಗಿಗೆ ಸೇರಿಸಿದ್ದೇನೆ. ನಿಮಗೆ ನಮಸ್ಕಾರಗಳು.]

ಮನಸಿನಮನೆಯವನು said...

ಸುಂದರ ದೃಶ್ಯಗಳು..

balasubramanya said...

@ ವಿಚಲಿತ [ಗುರುಪ್ರಸಾದ್ ] ಥ್ಯಾಂಕ್ಸ್.ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

balasubramanya said...

Comment by B.R.Usha 14 hours ago
Delete Comment[ಕನ್ನಡ ಬ್ಲಾಗರ್ಸ್ ನಲ್ಲಿ ಸಹೋದರಿ ಉಷಾ ಬರೆದಿರುವ ಮಾತುಗಳು.]

ಪ್ರಕೃತಿ ಮಾತೆಯ ಫೋಟೋಗಳು, “ನಿಮ್ ಸಹವಾಸ ಬೇಡ ನಂಗೆ” ಎನ್ನುತ್ತಿರುವ ಮೊಸಳೆ & “ಮೇಯುವುದರಲ್ಲೇ ತಲ್ಲೀನರಾಗಿರುವ” ಜಿಂಕೆಗಳ ಫೋಟೋಗಳು ಸುಂದರವಾಗಿವೆ ಸರ್, ಜೊತೆಗೆ ನೀವು ನೀಡಿರುವ “ಕ್ಯಾಪ್ಶನ್”ಗಳು ಮಂದಹಾಸ ಮೂಡಿಸುತ್ತೆ.... ಇನ್ನು ಕಾಡಿಗೆ ಹೋಗುವವರು ನಿಮ್ಮ ಅಮೂಲ್ಯವಾದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಸಿದರೆ ಸಾಕು....

balasubramanya said...

Comment by ಸತ್ಯಪ್ರಸಾದ್ ಬಿವಿ 17 hours ago[ಕನ್ನಡ ಬ್ಲಾಗರ್ಸ್ ನಲ್ಲಿ ಸತ್ಯಪ್ರಸಾದ್ ಮಾತುಗಳು.]
Delete Comment ಬಾಲು ಸರ್, ಕಬಿನಿಯ ಹಿನ್ನೀರಿನ ಮನಸೂರೆಗೊಳ್ಳುವ ದೃಶ್ಯಗಳು, ಮೋಹಕ ನರ್ತಕಿಯರು!!! ಮೊಸಳೆ, ಜಿಂಕೆಗಳ ಅಪರೂಪದ ದರ್ಶನ (ಅಕ್ಷರಸಹಃ) ಮಾಡಿಸಿದ್ದಕ್ಕೆ, ಜೊತೆಗೆ ನೀವು ಕೊಟ್ಟಿರುವ ಉಪಯುಕ್ತ ಸಲಹೆಗಳಿಗೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

balasubramanya said...

Comment by manohar bs 3 hours ago
Delete ಕಾಮೆಂಟ್[ ಕನ್ನಡ ಬ್ಲಾಗರ್ಸ್ ನಲ್ಲಿ ಮನೋಹರ್ ಬರೆದ ಮಾತುಗಳು.] ಕಬಿನಿಯ ಕಾಡಿನ ನೋಟ ತುಂಬಾ ಚೆನ್ನಾಗಿದೆ ಛಾಯಾ ಚಿತ್ರಗಳ೦ತು ಮನಮೋಹಕವಾಗಿದೆ. ಪ್ರಕೃತಿಯೆಡೆಗಿನ ನಿಮ್ಮ passion ನಿಮ್ಮ ಬರಹ ಮತ್ತು ಚಿತ್ರಗಲ್ಲಿ ಕ೦ಡುಬರುತ್ತದೆ ನಿಮ್ಮ ಮು೦ದಿನ ಲೇಕನಕ್ಕಾಗಿ ಕಾಯುತ್ತೇನೆ.

shridhar said...

ಸುಂದರ ಫೋಟೊಗಳು.
ನೀವು ಹೇಳಿದ ಸಲಹೆಗಳು ಸೂಕ್ತವಾಗಿದೆ .
ಇದರಲ್ಲಿರುವ ಪ್ರತಿಯೊಂದನ್ನು ನಾವು ಟ್ರೆಕ್ಕಿಂಗ್ ಗೆ ಹೋದಾಗ ಮೊದಲಿನಿಂದಲೂ ಪಾಲಿಸುತ್ತಿದ್ದೇವೆ.

balasubramanya said...

@ಮಲೆನಾಡಕರಾವಳಿ, ಶ್ರೀಧರ್ ನನ್ನ ಬ್ಲಾಗಿಗೆ ಸ್ವಾಗತ , ನಿಮ್ಮ ಬ್ಲಾಗಿನಲ್ಲಿ ಚಾರಣ ವಿಚಾರಗಳು ತುಂಬಾ ಚೆನ್ನಾಗಿ ಬಂದಿದ್ದವು. ಹಾಗು ಚಾರಣ ಸಮಯದಲ್ಲಿ ನೀವು ಈಗಾಗಲೇ ಪರಿಸರಕ್ಕೆ ಪೂರಕವಾದ ನಿಯಮಗಳನು ಅನುಸರಿಸುತ್ತಿರುವುದು, ಅನುಕರಣೀಯ ನಿಮಗೆ ಕೃತಜ್ಞತೆಗಳು.

ಹಳ್ಳಿ ಹುಡುಗ ತರುಣ್ said...

baalu sir..

kabhiniya kaananada darshana tumba chenaagide... danyavaadagalu..

kadinalli nadedu kollabekada salahe suchane tumba upayutavadavu..

danyavaadagalu..

balasubramanya said...

@ ಹಳ್ಳಿ ಹುಡುಗ ತರುಣ್ ,ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಶರಣು .ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.

shivu.k said...

ಬಾಲು ಸರ್,

ಕೆಲಸದ ಒತ್ತಡದಲ್ಲಿ ತಡವಾಗಿ ನಿಮ್ಮ ಬ್ಲಾಗಿನ ಚಿತ್ರಗಳನ್ನು ನೋಡುತ್ತಿದ್ದೇನೆ. ಎಂದಿನಂತೆ ಫೋಟೋಗಳು ತುಂಬಾ ಚೆನ್ನಾಗಿವೆ. ಜೊತೆಗೆ ನಿರೂಪಣೆಯೂ ಇಷ್ಟವಾಗುತ್ತದೆ. ನೀವು ಹೇಳಿದಂತೆ ಪ್ರಕೃತಿ ನಿಯಮಗಳನ್ನು ನಾವೆಲ್ಲಾ ಪಾಲಿಸಲೇಬೇಕು.
ಉಪಯುಕ್ತ ಲೇಖನ.

balasubramanya said...

ಶಿವೂ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ದಯಮಾಡಿ ಕಾಡಿನಬಗ್ಗೆ ಅಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರಿಗೆ ,ಕಿರಿಯರಿಗೆ ಅರಿವು ಮೂಡಿಸಿದರೆ ನನ್ನ ಶ್ರಮ ಸಾರ್ಥಕ.