ಕಳೆದ ಸಂಚಿಕೆಯಲ್ಲಿ ನಿಮಗೆ ಅರಣ್ಯ ರಕ್ಷಕರ ಕೆಲಸದ ಬಗ್ಗೆ ಸ್ವಲ್ಪ ಪರಿಚಯಮಾಡಿಕೊಟ್ಟೆ, ಅದಕ್ಕೆ ಸಿಕ್ಕ ನಿಮ್ಮೆಲ್ಲರ ಪ್ರೋತ್ಸಾಹ ಕಾಡಿನ ಬಗ್ಗೆ ನಮ್ಮ ಜನರಿಗೆ ಇನ್ನೂ ಕುತೂಹಲ ಇದೆ ಎಂಬದನ್ನು ನಿರೂಪಿಸಿದೆ.ಈ ಕಾಡಿನ ಕಥಾನಕ ನಾನು ಹೇಗೆ ಶುರುಮಾಡಿದೆನೋ ಕಾಣೆ ಇಲ್ಲಿಯವರೆಗೆ ಏಳು ಕಂತುಗಳಾಗಿ ಇಂದಿನದು ಎಂಟನೆಯ ಕಂತಾಗಿ ನಿಮ್ಮ ಮುಂದೆ ಬರುತ್ತಿದೆ.ನನಗೆ ಗೊತ್ತು ಯಾವುದೇ ವಿಚಾರವನ್ನು ಎಳೆದು ಎಳೆದೂ ಬರೆದರೆ ಅದಕ್ಕೆ ಸ್ವಾರಸ್ಯ ವಿರುವುದಿಲ್ಲಾ ಎಂದು .ಅದಕಾಗಿ ನಿಮಗೆ ಅತಿಯಾಗಿ ಎಳೆಯದೆ ವಿಷಯವನ್ನು ನೇರವಾಗಿ ಹೇಳಲು ಪ್ರಯತ್ನಿಸುತ್ತಿದ್ದೇನೆ.ಕೆಲವರು ಬ್ಲಾಗ್ ಕಾಮೆಂಟ್ ಮೂಲಕ , ದೂರವಾಣಿ/ಮೊಬೈಲ್ ಮೂಲಕ , ಕಾಡಿನ ಲೇಖನಗಳ ಬಗ್ಗೆ ಮೆಚ್ಚಿನ ಮಾತಾಡಿ ಸಲಹೆ ಸೂಚನೆಗಳನು ನೀಡಿದ್ದಾರೆ.ಎಲ್ಲರಿಗೂ ನನ್ನ ಶುಭ ಕಾಮನೆಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಮತ್ತೊಂದು ಸಂತಸದ ವಿಚಾರ .
"ನಿಮ್ಮೊಳಗೊಬ್ಬ ಬಾಲು" ಎಂಬ ಅನಾಮದೇಯ ಬ್ಲಾಗ್ ಲೋಕಕ್ಕೆ ಕಾಲಿಟ್ಟು ಮೂರು ವರ್ಷ ಕಳೆದು ಹೋಗಿದೆ. ದಿನಾಂಕ 07 ಡಿಸೆಂಬರ್ 2009 ರಂದು ಬ್ಲಾಗ್ ಲೋಕಕ್ಕೆಅಳುಕುತ್ತಾ ಕಾಲಿಟ್ಟ ಈ ಪೆದ್ದು ಬ್ಲಾಗಿಗ ನಿಧಾನವಾಗಿ ಎಲ್ಲರಿಂದ ಹೊಸ ವಿಚಾರ ತಿಳಿಯುತ್ತಾ ಬೆಳೆಯುತ್ತಿದ್ದಾನೆ.''ಎಲ್ಲ ಬಲ್ಲವರಿಲ್ಲ ,ಎಲ್ಲ ಬಲ್ಲವನಂತೂ ನಾನಲ್ಲ , ಜೀವನ ಹಾದಿಯಲ್ಲಿ ಎಲ್ಲ ಬಲ್ಲವರು ನೀವೆಲ್ಲರೂ ಜೊತೆಯಾಗಿ ಇರುವಿರಲ್ಲಾ " ಅಷ್ಟೇ ಸಾಕು ನನಗೆ .ನಿಮ್ಮಗಳ ಪ್ರೀತಿ ಹೀಗೆ ಇರಲಿ. ಬನ್ನಿ ನಮ್ಮ ಕಾನನ ಸಾಮ್ರಾಜ್ಯಕ್ಕೆ ತೆರಳೋಣ. ಆನೆಗಳ ಸಾಮ್ರಾಜ್ಯದಲ್ಲಿ ವಿಹರಿಸಿ ಬರೋಣ.
ನಮಗೆಲ್ಲರಿಗೂ ತಿಳಿದಂತೆ
ಕಾಡು ಎಂದೊಡನೆ ನೆನಪಿಗೆ ಬರೋದು ಆನೆ ಹುಲಿ, ಸಿಂಹ ಇತ್ಯಾದಿಗಳು ,ಹಲವರು ಕೇಳಿದರು ಅಲ್ಲಾಪ್ಪಾ ನಿಮಗೆ ಆನೆ ಸಿಕ್ಕಲಿಲ್ವಾ ಅವುಗಳ ಜೊತೆ ನಿಮ್ಮ ಅನುಭವ ಏನೂ ಇಲ್ವಾ ಅಂತಾ ಪ್ರಶ್ನೆಗಳ ಮೇಲಿಂದ ಮೇಲೆ ಪ್ರಶ್ನೆ ಎಸೆಯುತ್ತಿದ್ದರು. ನಾನು "ತಾಳಿ ಸಾರ್ ಸ್ವಲ್ಪ ಅದೂ ಬರುತ್ತೆ ಆತ್ರಾ ಮಾಡ್ಬೇಡಿ "ಅಂತಾ ಹೇಳಿಕೊಂಡು.
ಬರುತ್ತಿದ್ದೆ!!
|
ಬಿದಿರಿನ ಚಿಗುರು ತಿನ್ನಲು ಬಂದಿರುವ ಆನೆ !! |
|
ತನ್ನ ಸುತ್ತ ಮುತ್ತ ಒಂದು ಸಣ್ಣ ಚಲನೆಯಾದರೂ ಎಚ್ಚರ ವಹಿಸುವಈ ಪರಿ !! |
.ಕಾನನದಲ್ಲಿ ಆನೆಗಳ ಹಲವು ಕೌತುಕಮಯ ,ಅಚ್ಚರಿಯ ,ಹೆದರಿಕೆಯ ಸನ್ನಿವೇಶಗಳನ್ನು ನಾವುಗಳು ಎದುರಿಸಿದ್ದು ಹೌದು, ಒಮ್ಮೆ ಹೀಗೆ ಆಯಿತು ನಾವು ಕಬಿನಿಯಲ್ಲಿ ತೇಲುತ್ತಾ ಕಾಡಿನ ಚಿತ್ರ ಫೋಟೋ ತೆಗೆಯುತ್ತಿದ್ದೆವು ನಿರ್ಜನ ಕಾಡು ನಮ್ಮ ದೋಣಿಯ ಚಾಲಕರು "ಸಾರ್ ಅಲ್ಲಿ ನೋಡಿ!!ಒಂದು ಆನೆ ಐತೆ !!!,ಅಂಗೆ ಇರಿಒಸಿ ಹತ್ರಾ ಓಗುವಾ "ಅಂತಾ ದೋಣಿಯನ್ನು ಸಾಧ್ಯವಾದಷ್ಟೂ ಆನೆಯ ಹತ್ತಿರ ತೆಗೆದುಕೊಂಡು ಹೋದರು. ಅಲ್ಲಿ ನೋಡಿದರೆ ಒಂದು ಒಂಟಿ ಸಲಗ ಬಿದಿರಿನ ಮೆಳೆ ಸಮೀಪ ಇದ್ದು ಬಿದುರಿನ ಚಿಗುರನ್ನು ಸೊಂಡಿಲಿನಿಂದ ಕಿತ್ತು ತಿನ್ನುತ್ತಿತ್ತು.ದೋಣಿಯ ಹಾಯಿ ಉಂಟು ಮಾಡಿದ ಅಲೆಗಳ ಹೊಯ್ದಾಟಕ್ಕೆ ನಮ್ಮ ಇರುವಿಕೆಯನ್ನು ಸುಲಭವಾಗಿ ಗುರುತಿಸಿತ್ತು. ನಮ್ಮ ಕಡೆ ಮುಖ ಮಾಡದಿದ್ದರೂ ಅದು ನಮ್ಮ ಚಲನ ವಲನಗಳನ್ನು ಗಮನಿಸುತ್ತಿರುವುದು ನಮಗೂ ತಿಳಿದಿತ್ತು. ನಾವೂ ಸಹ ಶಬ್ದಮಾಡದೆ ಅದನ್ನು ಸುಮಾರು ಅರ್ಧ ಘಂಟೆ ನೋಡುತ್ತಾ ದೋಣಿಯಲ್ಲಿ ತೇಲುತ್ತಾ ಕುಳಿತೆವು , ಏನಾಯಿತೋ ಕಾಣೆ ಇದ್ದಕ್ಕಿದ್ದಂತೆ ಒಮ್ಮೆ ಸಣ್ಣದಾಗಿ ಆನೆ ಗೀಳು ಕೇಳಿಸಿ ಕೈಲಿದ್ದ ಕ್ಯಾಮರ ಕೆಳಗೆ ಬಿದ್ದು ಹೋಯ್ತು.[ಪುಣ್ಯಕ್ಕೆ ಅದು ದೋಣಿಯೊಳಗೆ ಬಿತ್ತು] ಆಮೇಲೆ ನೋಡಿದರೆ ದೂರದಲ್ಲಿ ಮತ್ತೊಂದು ಆನೆ ಕೂಗಿದ ಸದ್ದು ನಮಗೆ ಕೇಳಿಸಿ ಗಲಿಬಿಲಿಯಾಗಿತ್ತು.ಆಷ್ಟರಲ್ಲಿ ಈ ಆನೆ ಹಾಗೆ ಮರೆಯಾಗಿತ್ತು. ಮೇಲಿನ ಚಿತ್ರಗಳು ಅದಕ್ಕೆ ಸಾಕ್ಷಿಯಾದವು.
|
ಆನೆ ಮೈಮರೆತು ಹಸಿರ ತಿನ್ನುವ ಈ ಪರಿ !! |
|
ಹತ್ತಿರ ಬಂದರೆ ಹುಷಾರ್ |
ಬನ್ನಿ ಎರಡನೇ ಸನ್ನಿವೇಶಕ್ಕೆ ಮೇಲಿನ ಚಿತ್ರದಲ್ಲಿದೆಯಲ್ಲಾ ಈ ಆನೆ ನಮ್ಮನ್ನು ಹೆದರಿಸಲು ಬಂದಿದ್ದ ದಿನ ನೆನೆದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ . ಹಾಗೆ ಕಾಡು ನೋಡುತ್ತಾ ತೇಲುತ್ತಾ ಸಾಗಿದ್ದ ನಮಗೆ ದೂರದಲ್ಲಿ ಈ ಆನೆ ಕಾಣಿಸಿತು ದೋಣಿಯವರು ನಮ್ಮ ಕೋರಿಕೆಯಂತೆ ಆನೆಯ ಸಮೀಪಕ್ಕೆ ಕೊಂಡೊಯ್ದಿದ್ದರು ಹತ್ತಿರ ಹೋಗಿ ನೋಡಿದರೆ ಒಂಟಿ ಸಲಗ ಮೈಮರೆತು ಹಸಿರು ಮೆಳೆಯಲ್ಲಿ ಭೋಜನ ನಡೆಸಿತ್ತು. ನಿಶ್ಯಬ್ದ ವಾದ ಕಾಡಿನಲ್ಲಿ ಕೇವಲ ಅಲೆಯ ಸಪ್ಪಳದಿಂದ ನಮ್ಮ ಇರುವಿಕೆಯನ್ನು ಗ್ರಹಿಸಿದ ಈ ಆನೆ ಹತ್ತಿರ ಬಂದರೆ ಹುಷಾರ್ ಅನ್ನೋತರ ನಮ್ಮ ಮೇಲೆ ಎರಗಲು ಮುಖಮಾಡಿ ಸಿದ್ದವಾಗ ತೊಡಗಿತು.ಆದರೆ ನಮ್ಮ ಕಡೆಯಿಂದ ಗದ್ದಲವೇ ಇರಲಿಲ್ಲ ಹಾಗು ಅದನ್ನು ಕೆರಳಿಸುವ ಯಾವುದೇ ಚಟುವಟಿಕೆ ಇಲ್ಲದೆ ನಾವು ಕಲ್ಲು ಬಂಡೆಗಳಂತೆ ದೋಣಿಯಲ್ಲೇ ಕುಳಿತು ಇದರ ಆಟ ವನ್ನು ನೋಡುತ್ತಾ ನಿಶ್ಯಬ್ದವಾಗಿ ಅರ್ಧ ಘಂಟೆ ಕಾಲ ಕಳೆದೆವು ಕೊನೆಗೆ ಅದೇ ನಮ್ಮಿಂದ ಯಾವುದೇ ತೊಂದರೆ ಇಲ್ಲವೆಂದು ತಿಳಿದು ನಿಧಾನವಾಗಿ ಕಾಡನ್ನು ಹೊಕ್ಕಿ ಮರೆಯಾಯ್ತು.ಕಾಡಿನಲ್ಲಿ ಇಂತಹ ಸನ್ನಿವೇಶಗಳಲ್ಲಿ ಭಯಪಟ್ಟು ಕಿರುಚಿ ದಾಗ ಅಲ್ಲಿನ ಪ್ರಾಣಿಗಳು ಕೋಪಗೊಂಡು ಎರಗಿ ಬರುವ ಸಾಧ್ಯತೆ ಜಾಸ್ತಿ.ಮುಂದಿನ ಸನ್ನಿವೇಶ ಮತ್ತಷ್ಟು ಕೌತುಕವಾಗಿದೆ. ಒಂದು ಭಾರಿ ಹಾಗೆ ತೇಲುತ್ತಾ ಕಾಡಿನ ಸೌಂದರ್ಯ ಸವಿಯುತ್ತಾ ಸಾಗಿದ್ದೆವು , "ಸಾ ಅಲ್ನೋಡಿ ಆನೆ ಅದೇ, ಬನ್ನಿ ""ಅಂತಾ ಹೇಳಿ ಹತ್ತಿರ ಕರೆದುಕೊಂಡು ಹೋದರು ನಿಶ್ಯಬ್ದ ವಾದ ಕಾನನದಲ್ಲಿ ಬಿದಿರ ಮೆಳೆಯಲ್ಲಿ ಆನೆಯೊಂದು ಮೇಯುತ್ತಿತ್ತು ,ನಿಧಾನವಾಗಿ ಸದ್ದಿಲ್ಲದೇ ಅದರ ಚಲನವಲನ ನೋಡುತ್ತಾ ಇದ್ದ ನಮಗೆಅದು ಕೋಪಗೊಂಡು ಹಸಿರು ಬಿದಿರು ಬೋಂಬನ್ನು ಜೋರಾಗಿ ಎಳೆದು ಅದರ ಸಿಟ್ಟನ್ನು ತೋರಿಸುತ್ತಿತ್ತು. ನಿಷ್ಯಬ್ದವಾಗಿದ್ದ ಕಾಡಿನಲ್ಲಿ ಹಸಿ ಬಿದಿರನ್ನು "ಫಟಾರ್" ಅಂತಾ ಮುರಿದುಹಾಕಿದ ಶಬ್ದ ಮಾರ್ಧನಿಸಿತ್ತು.ನಮ್ಮ ಸುತ್ತಲೂಹಲವು ಆನೆಗಳು ಬಿದಿರನ್ನು ಮುರಿದು ಹಾಕಿದರೆ ಯಾವ ಶಬ್ಧ ಬರುತ್ತಿತ್ತೋ ಹಾಗೆ ಭಯಾನಕ ವಾತಾವರಣ ನಿರ್ಮಾಣ ವಾಗಿತ್ತು. ನಾವು ಕಲ್ಲು ಗಳಂತೆ ಸುಮ್ಮನೆ ದೋಣಿಯಲ್ಲಿ ಸೈಲೆಂಟಾಗಿ ಕುಳಿತು ಈ ಕೌತುಕಮಯ ಸನ್ನಿವೇಶ ನೋಡುತ್ತಾ ಇದ್ದೆವು.ಪಕ್ಕದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ "ಸಾ ಅದು ಈಟ್ ಗೆಬಂದದೆ, ,ಹೆಣ್ಣಾನೆ ಜೊತೆಗೆ ಸಿಕ್ಕಿಲ್ಲ ಅದ್ಕೆಯಾ ಇಂಗೆ ಆಡ್ತದೆ " ಅಂತಾ ಪಿಸುಗುಟ್ಟಿದರು. ನಂತರ ನಮ್ಮನ್ನು ನೋಡಿದ ಆ ಆನೆ ಕೋಪದಿಂದ ಸೊಂಡಿಲು ಬಡಿದು ಸರ ಸರನೆ ಮಾಯವಾಯಿತು. ಅಷ್ಟು ರಭಸದಿಂದ ಹೆಜ್ಜೆ ಹಾಕಿದರೂ ಆನೆಯ ಹೆಜ್ಜೆಯ ಸಪ್ಪಳ ನಮಗೆ ಕೇಳಿಸಲಿಲ್ಲ.ಆನೆಯ ವಿಶಿಷ್ಟತೆ ಇದು ಕಾಡಿನಲ್ಲಿ ಆಷ್ಟು ಮೌನತೆ ಇದ್ದರೂ ಶಬ್ದಮಾಡದೆ ಚಲಿಸುವ ಗುಣ ಆನೆಗಿದೆ. ಬನ್ನಿ ಚಿತ್ರ ನೋಡೋಣ .
|
ಕೋಪದಿಂದ ನಿಂತಿದ್ದ ಒಂಟಿ ಸಲಗ |
|
|
ಬಲ ಭೀಮ ಇವನು |
|
ಹಸಿ ಬಿದಿರಿನ ಬೊಂಬು ಮುರಿಯುವ ಆ ಕ್ಷಣ |
|
|
ಆನೆ ಹಸಿ ಬಿದಿರ ಬೋಂಬನ್ನು ಮುರಿದ ಆ ಕ್ಷಣ!! |
|
ನಮ್ಮನ್ನು ನೋಡಿ ಎಸ್ಕೇಪ್ ಆದ ಆನೆ. |
ಇಲ್ಲಿಯವರೆಗೂ ಒಂಟಿ ಸಲಗಗಳ ಬಗ್ಗೆ ಆಯ್ತು ಬನ್ನಿ ಆನೆಗಳ ಗುಂಪಿನ ಲೋಕಕ್ಕೆ ಬೇಸಿಗೆಯಲ್ಲಿ ಕಬಿನಿ ಒಣಗಿ ಹೋಗಿ ಕಾಡಿನ ಎಲ್ಲಾ ಪ್ರಾಣಿಗಳು ನದಿಯ ಎರಡೂ ಬದಿಯಲ್ಲಿ ಗುಂಪಾಗಿ ಕಾಣಿಸಿಕೊಳ್ಳುತ್ತವೆ ,ಆದ್ರೆ ಹಸಿವಿಲ್ಲದೆ ಯಾವ ಪ್ರಾಣಿಯೂ ಮತ್ತೊಂದು ಪ್ರಾಣಿಯನ್ನು ಬೇಟೆ ಆಡುವುದಿಲ್ಲ.ಆದಾಗ್ಯೂ ಗುಂಪಾಗಿ ಬಹಳ ಎಚ್ಚರಿಕೆಯಿಂದ ಜೀವಿಸುತ್ತವೆ.ನಾವು ಬೇಸಿಗೆಯಲ್ಲಿ ಹೋದಾಗ ನದೀ ಪಾತ್ರ ಒಣಗಿ ಹಿಂದೆ ದೋಣಿಯಲ್ಲಿ ಕುಳಿತು ತೇಲಿದ ಪ್ರದೇಶದಲ್ಲಿ ವಾಹನದಲ್ಲಿ ಹೋಗಬಹುದಾಗಿತ್ತು, ಹಾಗಾಗಿ ಈ ಬಾರಿ ಬಹಳಷ್ಟು ಓಡಾಡ್ತಾ ನಡೆಸಿದೆವು ಗುಂಪು ಗುಂಪಾಗಿ ಕಂಡ ಆನೆಗಳ ಮೇಳ ಕಾನನದಲ್ಲಿ ನಡೆದಿತ್ತು. ಬಹುಶಃ ಜೀವನದಲ್ಲಿ ಒಮ್ಮೆಗೆ ಅಷ್ಟೊಂದು ಆನೆಗಳನ್ನು ನೋಡಿರಲಿಲ್ಲ. ಆನೆಗಳ ಗುಂಪನ್ನು ಬೆಳಗಿಂದ ಸಂಜೆವರೆಗೆ ನೋಡಿದರೂ ಬೇಸರ ವಾಗಲಿಲ್ಲ ಬನ್ನಿ ನೀವೂ ಅದನ್ನು ನೋಡಿ.
|
ಹಸಿರ ಕಾನನದಿ ಮೆರೆದಿದ್ದ ಗಜ ಸಮೂಹ !! |
|
ಬಾ ಮಗು ಜೊತೆಯಾಗಿ ಸಾಗೋಣ!!! |
|
ಯಾರೋ ಬಂದ್ರೂ ನಡೀರಿ ಹೋಗೋಣ!! |
|
ನಮ್ಮ ಸಂಸಾರ ಆನಂದ ಸಾಗರ !!! |
|
ಕಾಡಿನ ಮಕ್ಕಳು ನಾವೆಲ್ಲಾ!! |
|
ನಮ್ಮದೇ ಕೋಟೆ ನಮ್ಮ ಮರಿಗಳನ್ನು ರಕ್ಷಿಸಲು |
ಆನೆಗಳ ಸಾಮ್ರಾಜ್ಯದಿಂದ ಹೊರಗೆ ಬರುವಾಗ ಕೊನೆಯ ಚಿತ್ರದಲ್ಲಿನ ದೃಶ್ಯ ನನ್ನ ಮನ ಕಲಕಿತು. ಹೌದು ಈ ಆನೆಗಳು ಒಂದು ಮರಿಯನ್ನು ರಕ್ಷಿಸಲು ನಿಂತ ಪರಿ ನನ್ನ ಮಾನವ ಸಂಕುಚಿತ ಬುದ್ದಿಗೆ ದಿಕ್ಕಾರ ಕೂಗಿದಂತಿತ್ತು. ನಾವೇನು ಕಡಿಮೆಯೇ ಪ್ರಾಣಿಗಳು ಹಸಿದಾಗ ಬೇಟೆಯಾಡಿದರೆ ನಾವು ಹೊಟ್ಟೆ ತುಂಬಿದ್ದರೂ ಬರಗೆಟ್ಟವರಂತೆ ಬಕಾಸುರರಾಗಿ ಸಿಕ್ಕಿದ್ದೆಲ್ಲವನ್ನೂ ಕಬಳಿಸಿ ಬೇರೆ ಜೀವಿಗಳ ನೆಮ್ಮದಿ ಹಾಳು ಮಾಡಿ ಮೆರೆದಿರುವ ಬಗ್ಗೆ ನಾಚಿಕೆಯಾಯಿತು.[ಬ್ಲಾಗಿಗೆ ಪ್ರಕಟಿಸಲು ಆನೆಗಳ ಗುಂಪು ಬಗ್ಗೆ ಕೆಲವು ಫೋಟೋಗಳನ್ನು ನೀಡಿದ ಶ್ರೀಧರ್ ಗೆ ಧನ್ಯವಾದಗಳು.]
44 comments:
ಬ್ಲಾಗ್ ಲೋಕದಲ್ಲಿ ೩ವರ್ಷ ಸಾರ್ಥಕಗೊಳಿಸಿದ್ದಕ್ಕಾಗಿ ಅಭಿನ೦ದನೆಗಳು. ಕಾಡಿನ ಬಗೆಗಿನ ಲೇಖನ ಚೆನ್ನಾಗಿ ಮೂಡಿ ಬರುತ್ತಿದೆ. ನಿಮಗೆ `ಮಕರ ಸಂಕ್ರಮಣದ ಶುಭಾಶಯಗಳು.' ನನ್ನ ಬ್ಲಾಗ್ ಗೊಮ್ಮೆ ಬನ್ನಿ
ಬಾಲೂ ಸರ್ ;ಆನೆಗಳ ಬಗ್ಗೆ ಲೇಖನ ಮತ್ತು ಚಿತ್ರಗಳು ಸೊಗಸಾಗಿವೆ.ಬ್ಲಾಗ್ ಲೋಕದಲ್ಲಿ ಮೂರು ವರ್ಷ ಮುಗಿಸಿದ್ದಕ್ಕೆ ಅಭಿನಂದನೆಗಳು.
ಬ್ಲಾಗ್ ಪ್ರಪಂಚದಲ್ಲಿ ಮೂರು ವರ್ಷ ಮುಗಿಸಿದ ಬಾಲು ಅಣ್ಣಂಗೆ ಅಭಿನಂದನೆಗಳು.
ಇನ್ನು ಆನೆಗಳ ಬಗ್ಗೆ-ದೇವರು ದೊಡ್ಡವನು-ಈ ಆನೆಗಳು ನಮ್ಮ ಕಾಡುಗಳಲ್ಲಿ ಇಲ್ಲ!!!
ಬಾಲು ಸರ್,
ಮೊದಲಿಗೆ ನಿಮ್ಮ ಬ್ಲಾಗಿಗೆ ಮೂರು ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು. ನಿಮ್ಮ ಬರಹ ಚಿತ್ರ ಬರಹ ಹೀಗೆ ಮುಂದುವರಿಯಲಿ.
ಕಾಡಿನ ಆನೆಗಳ ವಿಚಾರಗಳನ್ನು ಚಿತ್ರಸಹಿತ ವಿವರಿಸಿದ್ದೀರಿ. ಮತ್ತೆ ನಾನು ಬಂಡೀಪುರ ಕಾಡಿಗೊ ಫೋಟೊಗ್ರಫಿಗೆ ಹೋದಾಗ ಅಲ್ಲಿ ಆನೆಗಳ ಮೇಲೆ [MFIAP][Master of Federation International de la Art photographic]ಡಿಸ್ಟಿಂಕ್ಷನ್ ಗಾಗಿ ಸಾಧನೆ ಮಾಡುತ್ತಿರುವ ಹಿರಿಯ ಛಾಯಾಗ್ರಾಹಕರು ಕೆಲವು ವಿಚಾರಗಳನ್ನು ಹೇಳಿದರು.
ಆನೆಗಳು ದಿನಕ್ಕೆ 60ಕ್ಕೂ ಹೆಚ್ಚು ಮೈಲು ನಡೆಯುತ್ತವೆ. ಅವಿಭಕ್ತ ಕುಟುಂಬದಂತಿರುವ ಗುಂಪಿನಲ್ಲಿ ಹಿರಿಅಜ್ಜಿಯ ಯಜಮಾನಿ. ಅವಳ ಮಾತು ಮೀರಿ ಏನು ನಡೆಯುವಂತಿಲ್ಲ. ಹೀಟಿಗೆ ಬಂದ ಪುಂಡು ಆನೆಗಳನ್ನು ಗುಂಪಿನಿಂದ ಓಡಿಸಿಬಿಡುತ್ತಾಳೆ ಆಕೆ. ಮನುಷ್ಯನಿಗಿಂತ್ ಹೆಚ್ಚು ವಾಸನಾಗ್ರಹಣ ಶಕ್ತಿ, ನಮಗಿಂತ ವೇಗವಾಗಿ ಓಡುವ ಶಕ್ತಿ...........ಇನ್ನೂ ಅನೇಕ ವಿಚಾರಗಳನ್ನು ಹೇಳಿದರು. ಇದನ್ನೆಲ್ಲಾ ಇಲ್ಲಿ ಹಂಚಿಕೊಳ್ಳಬೇಕೆನಿಸಿತು.
ನಿಮ್ಮ ಬರಹ ಹೀಗೆ ಮುಂದುವರಿಯಲಿ..
ಬಾಲು ಸರ್,ಅಭಿನ೦ದನೆಗಳು.ಸಮಯ ಸಿಕ್ಕಾಗಲೆಲ್ಲ ನಿಮ್ಮ ಬ್ಲಾಗ್ ಗೆ ಬರುತ್ತಿರುತ್ತೇನೆ.ಪ್ರತಿ ಬಾರಿ ಪ್ರತಿಕೃಯಿಸದೆ ಇರುವುದಕ್ಕೆ ಅನ್ಯಥಾ ಭಾವಿಸದಿರಿ.ಕಾಡಿನ ಬಗೆಗಿನ ಲೇಖನ ಆಸಕ್ತಿದಾಯಕವಾಗಿದೆ.
ಬಾಲು ಸಾರ್,ಅಭಿನ೦ದನೆಗಳು.ಕಾಡಿನ ಬಗ್ಗೆ ಲೇಖನ ಆಸಕ್ತಿದಾಯಕವಾಗಿದೆ.
shubhashayagaLu sir... kaaDina bagge enella tiLisiddeeri... photo tumba chennagidave.
dhanyavadagaLu
@ ಪ್ರಭಾಮಣಿ ನಾಗರಾಜ , ನಿಮ್ಮ ಅಭಿಮಾನ ತುಂಬಿದ ಪದಗಳಿಗೆ ವಂದನೆಗಳು.
@ ಡಾ .ಡಿ.ಟಿ. ಕೃಷ್ಣ ಮೂರ್ತಿ , ಸರ್ ನಿಮ್ಮ ಪ್ರೀತಿ ಮಾತಿಗೆ ಶರಣು.
@ ಸುಬ್ರಮಣ್ಯ ಮಾಚಿಕೊಪ್ಪ , ಪ್ರೀತಿಯ ಸಹೋದರನ ಆತ್ಮೀಯ ಮಾತುಗಳಿಗೆ ಪ್ರತಿವಂದನೆಗಳು.
@ ಕೆ.ಶಿವೂ,ಪ್ರೀತಿ ಪೂರ್ವಕವಾಗಿ ಹಾರೈಸಿ,ಆನೆಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ ನಿಮಗೆ ಕೃತಜ್ಞತೆಗಳು.
@ ಸುಗುಣ [ಕನಸು ], ಪ್ರೀತಿಯ ಸಹೋದರಿಯ ಆತ್ಮೀಯ ಮಾತುಗಳಿಗೆ ಸಲಾಂ.
@kusu Muliyala (ಕುಮಾರ ಸುಬ್ರಹ್ಮಣ್ಯ) ಸರ್ ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.ಭೇಟಿ ಮುಂದುವರೆಸಿ ನಿಮಗೆ ಥ್ಯಾಂಕ್ಸ್.
ಬಾಲು ಅವರೇ,
ಬ್ಲಾಗ್ ಲೋಕದಲ್ಲಿ ಮೂರು ವರ್ಷ ಪೂರ್ಣಗೊಳಿಸಿದಕ್ಕೆ ಅಭಿನಂದನೆಗಳು !
ಇನ್ನೂ ಹೆಚ್ಚು ಲೇಖನಗಳು ಮತ್ತು ಅಪರೂಪದ ಚಿತ್ರಗಳು ನಿಮ್ಮಿಂದ ಬರಲಿ.
ಆನೆಗಳ ಸಾಮ್ರಾಜ್ಯದ ಬಗ್ಗೆ ಸವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು. ಚಿತ್ರಗಳು ಸೂಪರ್ !
@ ಅಪ್ಪ-ಅಮ್ಮ(Appa-Amma), ನಿಮ್ಮ ಪ್ರೀತಿಯ ಮಾತುಗಳಿಗೆ ಥ್ಯಾಂಕ್ಸ್. ನಿಮ್ಮ ಭೇಟಿ ಮುಂದುವರೆಯಲಿ ಶುಭಾಶಯಗಳು.
ಸರ್, ನಿಮ್ಮ ಕಾಡಿನ ಸಾಹಸಗಳ ಬಗ್ಗೆ ಓದಿದಾಗೆಲ್ಲ ರೋಮಾ೦ಚನವಾಗುತ್ತದೆ. ನಾನು ವರ್ಷಕ್ಕೊಮ್ಮೆ ಮಾತ್ರ ವನಯಾತ್ರೆ ಕೈಗೊಳ್ಳುವುದು ಸಾಧ್ಯವಾಗ್ತಿದೆ. ನೀವೇ ಆಗಾಗ ಹೋಗುತ್ತಿರುತ್ತೀರಿ, ಹೊಟ್ಟೆಕಿಚಾಗ್ತಿದೆ.
blog huttuhabbakke shubhaashaya.... chitra lekhana chennaagide....
ಅಭಿನ೦ದನೆಗಳು.. ಬಾಲು ಅವರೆ,
ಮು೦ದೆಯೂ ನಿಮ್ಮ ಉತ್ತಮ ಬರಹಗಳು ಬರುತ್ತಿರಲಿ.
ಮಾಹಿತಿಯುಕ್ತ ಲೇಖನ.. ಜೊತೆಗೆ ಉತ್ತಮ ಚಿತ್ರಗಳು...
balu sir uttam lekhana..
photos ella super sir...
danyavadagalu..
@ ಪರಾಂಜಪೆ ಸರ್ , ಸಾರ್ ನಾನು ಸಹ ವರ್ಷಕ್ಕೆ ಒಮ್ಮೆ ಅಥವಾ ಎರಡು ಭಾರಿ ವನವಾಸಕ್ಕೆ ಹೋಗೋದು ಸರ್ , ನಿಮ್ಮ ಪ್ರೀತಿಯ ಮಾತುಗಳು ಹೃದಯ ಸೇರಿವೆ.ಮತ್ತೆ ನಿಮ್ಮೊಂದಿಗೆ ಚಾರಣಕ್ಕೆ ಬರಲು ಕಾಯುತ್ತಿದ್ದೇನೆ ಗುರುಗಳೇ .ನಿಮ್ಮ ಹಾರೈಕೆ ಹೀಗೆ ಇರಲಿ.
@ದಿನಕರ ಮೊಗೇರ, ಸರ್ ಬಹಳ ಅಪರೂಪದ ಭೇಟಿ ,ಖುಷಿಯಾಗಿದೆ.ಪ್ರೀತಿ ತುಂಬಿದ ಮಾತುಗಳಿಗೆ ಕೃತಜ್ಞತೆಗಳು.
@ಮನಮುಕ್ತಾ,ಮೇಡಂ ನಿಮ್ಮ ಪ್ರೀತಿಯ ಹಾರೈಕೆ ಮಾತುಗಳು ಸ್ಫೂರ್ತಿ ತಂದಿವೆ .ನಿಮಗೆ ಥ್ಯಾಂಕ್ಸ್.
@ಹಳ್ಳಿ ಹುಡುಗ ತರುಣ್,ನಿಮ್ಮ ಪ್ರೀತಿಯ ಮಾತುಗಳಿಗೆ ಜೈ ಹೋ.
ಬಾಲು ಅವರೆ ಅಭಿನಂದನೆಗಳು, ನಿಮ್ಮ ವನವಾಸದ ಕಥೆ ಹೀಗೆಯೇ ಮೂಡಿಬರುತ್ತಿರಲಿ.
@ಜಿ.ಎಸ್.ಶ್ರೀನಾಥ, ನಿಮ್ಮ ಪ್ರೀತಿಗೆ ಧನ್ಯ. ನಿಮ್ಮ ಭೇಟಿ ಮುಂದುವರೆಯಲಿ.ನನ್ನ ಸ್ನೇಹದ ಗೂಡಿಗೆ ಸ್ವಾಗತ.
Chandrashekara B.H. - ಸರ್, ಅಭಿನಂದನೆಗಳು.
sitaram Kemmannu - all the best sir. I couldnot read articles recently from your blog. Please forgive in this regard . ಸೀತಾರಾಂ ಸರ್ ಬಜ್ ನಲ್ಲಿ ನನ್ನ ಬ್ಲಾಗ್ ಬಗ್ಗೆ ಹೃದಯ ಪೂರ್ವಕ ಹಾರೈಕೆ ಬರೆದಿದ್ದೀರಿ.ಹಿರಿಯರು ನೀವು ನಿಮ್ಮ ಆಶೀರ್ವಾದ ಸಾಕು ,ಪ್ರೀತಿ ಇರಲಿ ನಮಸ್ಕಾರ .
Good article Baluji,
Keep writing and keep clicking.
@ monk , ಸರ್ ನನ್ನ ಬ್ಲಾಗಿಗೆ ಸ್ವಾಗತ ,ನಿಮ್ಮ ಪ್ರೀತಿ ಮಾತುಗಳಿಗೆ ಧನ್ಯವಾದಗಳು
baalanna tamma anubhavadasaramaale tadavaagi oduttiruvadakke paschaataapavaguttide. adbhuta chitravivarane aniubha jai ho. 3 varsha sandiddakke shubhaashayagalu. ide reeti tamma payana saagali.
ಸೀತಾರಾಂ ಸರ್ ,ಪ್ರೀತಿ ತುಂಬಿದ ಹಾರೈಕೆಗೆ ಕೃತಜ್ಞತೆಗಳು.ಹಾಗೂ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
Comment by RAGHU on January 16, 2011 at 11:17am
Delete Comment ಭೇಸಿಗೆಯಲ್ಲಿ ಕಬಿನಿಯ ತಟದಲ್ಲಿ ನಾಗರಹೊಳೆಯ ಆನೆಗಳ ಗುಂಪನ್ನು ನೋಡುವುದೇ ಕಣ್ಣಿಗೆ ಹಬ್ಬ .ಮಳೆಗಾಲ ಶುರುವಾಗುವವರೆಗೂ ಆಹಾರಕ್ಕಾಗಿ ಇಲ್ಲಿ ಪ್ರಾಣಿ ಸಂಕುಲವೇ ನೆರೆದಿರುತ್ತದೆ .ಇಂತಹ ಕಬಿನಿಯಲ್ಲಿ ಕೂಡ ಇಂದು ಸುತ್ತ ಮುತ್ತಲಿನ ಕೃಷಿ ಭೂಮಿಯಿಂದ ಹೂಳು ತುಂಬುತ್ತಿರುವುದು ಒಂದು ದುರಂತವೇ ಸರಿ.ನಿಮ್ಮ ಲೇಖನ,ಚಿತ್ರಗಳು ಅದ್ಭುತವಾಗಿವೆ.....ನಿಮ್ಮ ಬತ್ತಳಿಕೆಯಿಂದ ಇನ್ನಷ್ಟು ಪ್ರಕೃತಿಯ ಸೊಭಗು ಹೊರಬರಲೆಂದು ಆಶಿಸುತ್ತೇನೆ.............. ಗೆಳೆಯ ರಘು ಕನ್ನಡ ಬ್ಲಾಗ್ನಲ್ಲಿ ಬರೆದಿರುವ ಪ್ರೀತಿ ಮಾತುಗಳು.
Comment by ಸತ್ಯಪ್ರಸಾದ್ ಬಿವಿ 1 day ago
Delete Comment ಬಾಲು ಸರ್, ನಿಮ್ಮ ಪ್ರಕೃತಿ ಒಡನಾಟವನ್ನು ತುಂಬ ಅದ್ಭುತವಾಗಿ ನಿರೂಪಿಸಿದ್ದೀರಿ. ಸಚಿತ್ರ ವಿವರಣೆಯಂತೂ ಬಹಳ ಪರಿಣಾಮಕಾರಿಯಾಗಿದೆ. ಆನೆಗಳ ಸ್ವಭಾವಗಳನ್ನೂ ಪರಿಚಯ ಮಾಡಿಕೊಟ್ಟಿದ್ದೀರಿ. ನಾವೇ ಪ್ರವಾಸ ಮಾಡಿದ ಅನುಭವವಾಗುತ್ತದೆ. ತುಂಬಾ ಧನ್ಯವಾದಗಳು. ..............................Comment by balasubrahmanya.k.s. 22 hours ago
Comment @ಸತ್ಯಪ್ರಸಾದ್ ಬಿವಿ, ಸರ್ ನಿಮ್ಮ ಪ್ರೀತಿಯ ಮಾತುಗಳ ಬಲೆಯಲ್ಲಿ ಬಂಧಿಸಿಬಿಟ್ಟಿರಿ ,ನಿಮಗೆ ಕೃತಜ್ಞ.
Comment by B.R.Usha 1 day ago
Delete Comment
ವಾಹ್ ಬಾಲು ಸರ್, ನಿಮ್ಮ ಬ್ಲಾಗ್ ಗೆ ಬಂದರೆ ಸಾಕು ಬೇಸರ ಅನ್ನೋ ಮಾತಿಗೆ ಜಾಗವೇ ಇಲ್ಲ, ನಿಮ್ಮ ಬ್ಲಾಗ್ ಬಗ್ಗೆ ಎಷ್ಟು ಹೇಳಿದರೂ ಅದು ಕಡಿಮೇನೆ....ತುಂಬಾ ಅಪರೂಪವಾದ ಎಷ್ಟೊಂದು ವಿಚಾರಗಳನ್ನು ನಮಗೆ ತಿಳಿಸಿಕೊಡ್ತೀರಿ.... ಪ್ರಕೃತಿಯ ಬಗ್ಗೆ, ಪ್ರಾಣಿಗಳ ಬಗ್ಗೆ, ಐತಿಹಾಸಿಕ ವಿಷಯಗಳ ಬಗ್ಗೆ ನಿಮಗಿರುವಂಥ ಒಲವನ್ನು ನಿಜಕ್ಕೂ ಮೆಚ್ಚಲೇಬೇಕು....
Comment by balasubrahmanya.k.s. 22 hours ago
Comment @ ಸಹೋದರಿ B.R.ಉಷಾ, ಸಹೋದರಿಯ ಮಾತುಗಳಿಗೆ ಬೆಲೆ ಕಟ್ಟಲಾರೆ , ಮೆಚ್ಚುಗೆಯ ಮಾತುಗಳಿಗೆ ವಂದನೆಗಳು.
Comment by shanthi.K.A 1 day ago
Comment ನಿಮ್ಮ ಕಬಿನಿ ಪ್ರವಾಸಮಾಲೆಯನ್ನು ನಿರಂತರವಾಗಿ ಓದುತ್ತಿದ್ದೇನೆ.ತುಂಬಾ ಸುಂದರ ನಿರೂಪಣೆ. ನಿಮ್ಮ ಪ್ರಕೃತಿಪ್ರೇಮಕ್ಕೆ ನನ್ನದೊಂದು ಸಲಾಂ.ಫೋಟೋಗ್ರಾಫಿಯಂತೂ ಅದ್ಬುತ. Comment by balasubrahmanya.k.s. 22 hours ago
Comment !@ shaanti .k.a. .ಮೇಡಂ ನಿಮ್ಮ ಅಭಿಪ್ರಾಯಕ್ಕೆ ,ಮೆಚ್ಚುಗೆಯ ಮಾತಿಗೆ ಶರಣು.
ಬಾಲು ಅವರೇ,
ಎಂದಿನಂತೆ ಕಾಡಿನ ಬಗ್ಗೆ ಲೇಖನಗಳ ಸರಣಿ ಚೆನ್ನಾಗಿದೆ ಮತ್ತೆ ಹಾಗೆ ಮುಂದುವರೆಯಲಿ. ನನಗಂತೂ ಹೊಟ್ಟೆಕಿಚ್ಚಾಗುತ್ತಿದೆ, ನಾನು ನಿಮ್ಮ ಗುಂಪಿನಲ್ಲಿಲ್ವಲ್ಲಾ ಅಂತ.
[ಹಸಿರ ಕಾನನದಿ ಮೆರೆದಿದ್ದ ಗಜ ಸಮೂಹ !!, ಬಾ ಮಗು ಜೊತೆಯಾಗಿ ಸಾಗೋಣ!!! ಯಾರೋ ಬಂದ್ರೂ ನಡೀರಿ ಹೋಗೋಣ!! ನಮ್ಮ ಸಂಸಾರ ಆನಂದ ಸಾಗರ !!! ಕಾಡಿನ ಮಕ್ಕಳು ನಾವೆಲ್ಲಾ!! ನಮ್ಮ ಇರುವಿಕೆಯನ್ನು ತಿಳಿದು ಮರಿಯಾನೆ ಸುತ್ತ ಕೋಟೆ ಕಟ್ಟಿ ಕಾವಲು ನಿಂತಗಜ ಪಡೆ !! ] - ಈ ಎಲ್ಲಾ ಭಾವಚಿತ್ರಗಳು ಇಷ್ಟವಾದವು.
ಪ್ರಾಣಿಗಳಿಗೆ ದುರಾಸೆ ಅನ್ನೋದು ಇರುವುದಿಲ್ಲ. ಆದರೆ ನಾವು ಮಾನವರು ಅಲ್ವೇ, ದುರಾಸೆ ಜಾಸ್ತಿ, ಅದಕ್ಕೆ ಹೊಟ್ಟೆ ತುಂಬಿದ್ದರೂ ಬರಗೆಟ್ಟವರಂತೆ ಬಕಾಸುರರಾಗಿ ಸಿಕ್ಕಿದ್ದೆಲ್ಲವನ್ನೂ ಕಬಳಿಸುವರು.
ಕಮಲ
[ಸಂಪದ ಬ್ಲಾಗ್ನಲ್ಲಿ ] Submitted by nimmolagobba balu on January 18, 2011 - 8:37pm.
ಕಮಲ ಮೇಡಂ ನಿಮ್ಮ ಮನಃ ಪೂರ್ವಕ ಅನಿಸಿಕೆಗೆ ಧನ್ಯವಾದಗಳು. ನಿಮ್ಮ ಮೆಚ್ಚುಗೆ ಮಾತುಗಳಿಗೆ ಕೃತಜ್ಞತೆಗಳು.ನಿಮ್ಮ ಭೇಟಿ ಮುಂದುವರೆಯಲಿ.
Submitted by manju787 on January 19, 2011 - 1:10am.
ಬಾಲು, ನಿಜಕ್ಕೂ ನಿಮ್ಮ ಅನುಭವ ರೋಮಾ೦ಚಕ, ನಿಮ್ಮ ಬಗ್ಗೆ ನನಗೆ ಹೊಟ್ಟೆ ಕಿಚ್ಚಾಗುತ್ತಿದೆ. ಒಮ್ಮೆಯಾದರೂ ಕಬಿನಿಯ ಹಿನ್ನೀರಿನಲ್ಲಿ ತೇಲುತ್ತಾ ಆನೆಗಳ ಹಿ೦ಡಿನೊಡನೆ ವಿಹರಿಸುವ ಆಸೆ ಪ್ರಜ್ವಲಿಸುತ್ತಿದೆ. ಕೊನೆಯ ಚಿತ್ರ ಮೊನ್ನೆ ಆಲೂರಿನಲ್ಲಿ ಸತ್ತ ಮರಿ ಆನೆಯನ್ನು ಎಬ್ಬಿಸಲು ತಾಯಿ ಆನೆ ಪಟ್ಟ ಶ್ರಮ, ಜೆಸಿಬಿಯನ್ನು ನೂಕಿದ ದೃಶ್ಯ, ಮತ್ತೆ ಕಾಡಿಗೆ ಹೋಗಿ ಇಡೀ ಗು೦ಪನ್ನೇ ಕರೆ ತ೦ದ ಸನ್ನಿವೇಶವನ್ನು ಟಿವಿ೯ ವಾಹಿನಿಯಲ್ಲಿ ನೋಡಿದ್ದನ್ನು ನೆನಪಿಸಿತು. ಆನೆಗಳ ಸಾಮೂಹಿಕ ಜೀವನ, ಮರಿಗಳನ್ನು ಅವು ಜತನದಿ೦ದ ಪಾಲಿಸುವ ರೀತಿ ಮಾನವರಿಗೆ ನಿಜಕ್ಕೂ ಅನುಕರಣೀಯ. ನಿಮ್ಮ ಅನುಭವದ ಮು೦ದಿನ ಭಾಗದ ನಿರೀಕ್ಷೆಯಲ್ಲಿ!!
[ ಸಂಪದ ಬ್ಲಾಗ್ನಲ್ಲಿ ] Submitted by nimmolagobba balu on January 19, 2011 - 9:25am.
ಮಂಜು ಸರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ತಿಳಿಸಿರುವ ಆಲೂರಿನ ಘಟನೆ ಬಗ್ಗೆ ನಾನೂ ನೋಡಿದೆ. ಕರಳು ಹಿಂಡಿದ ಘಟನೆ ಅದು, ಬುದ್ದಿವಂತ ?? ಮಾನವ ಜೀವಿಗಳು ಮಾಡಿರುವ ಕೃತ್ಯಕ್ಕೆ ಕ್ಷಮೆ ಉಂಟೆ?? ,
ಬಾಲೂ ಸರ್...
ಫೋಟೊಗಳು...
ನಿಮ್ಮ ವಿವರಣೆಗಳು... ನಮಗೂ ಒಮ್ಮೆ ಹೋಗಿ ಬರುವ ಸ್ಪೂರ್ತಿ ಕೊಡುತ್ತದೆ..
ನಿಮ್ಮ ಬ್ಲಾಗಿಗೆ ನಮ್ಮೆಲ್ಲರ ಶುಭ ಹರೈಕೆಗಳು..
ಇನ್ನಷ್ಟು ವೈವಿದ್ಯಮಯ ಲೇಖನಗಳು, ಕಥೆಗಳು ಬರಲಿ...
ಮತ್ತೊಮ್ಮೆ..
ಮಗದೊಮ್ಮೆ ಅಭಿನಂದನೆಗಳು ಸರ್...
ನಿಮ್ಮ ಸಾಹಸಗಳಿಗೆ ಮತ್ತೊಮ್ಮೆ ಜೈ ಹೋ.. !
ಪ್ರಕಾಶ್ ಅಣ್ಣ , ನಿಮ್ಮ ಪ್ರೀತಿ ತುಂಬಿದ ಅಭಿಮಾನದ ಮಾತುಗಳಿಗೆ ವಂದನೆಗಳು. ನಿಮ್ಮ ಹಾರೈಕೆ ಹೀಗೆ ಇರಲಿ , ಜೈ ಹೋ
ಬಾಲು ಅವರೇ,
ಮೂರು ಯಶಸ್ವಿ ವರ್ಷಗಳನ್ನು ಪೂರ್ಣಗೊಳಿಸಿದ್ದಕ್ಕೆ ಅಭಿನಂದನೆಗಳು..
@ ಅಪ್ಪ -ಅಮ್ಮ , ಥ್ಯಾಂಕ್ಸ್ ನಿಮಗೆ
ಅಭಿನಂದನೆಗಳು ಬಾಲು,
ಹೀಗೆ ಮುಂದುವರಿಯಲಿ.
Deepak
@ ದೀಪಕ್ ವಸ್ತಾರೆ , ಥ್ಯಾಂಕ್ಸ್ ದೀಪು ನಿಮ್ಮ ಭೇಟಿ ಮುಂದುವರೆಸಿ .
Post a Comment