ಇತ್ತೀಚಿಗೆ ಯಾಕೋ ಬ್ಲಾಗ್ ಲೋಕದಿಂದ ಸ್ವಲ್ಪ ಹೊರಗೆ ಇರಬೇಕೆಂಬ ಬಯಕೆ ಹೆಚ್ಚಾಗುತ್ತಿತ್ತು!!! ಅದಕ್ಕೆ ಸರಿಯಾಗಿ ಮನೆಯ ಮುಂದೆ ರಸ್ತೆ ಅಗಲೀಕರಣ ಮಾಡುವಾಗ ಜೆ.ಸಿ.ಬಿ. ಯಂತ್ರ ನಮ್ಮ ಮನೆಯ ಟೆಲಿಫೋನ್ ವೈರ್ ತುಂದರಿಸಿತ್ತು. ಹಾಗಾಗಿ ಒಂದೆರಡು ದಿನ ನಾನು ಈ ಬ್ಲಾಗ್ ಲೋಕದಿಂದ ದೂರ !! ಇದರಿಂದ ನನ್ನ ಬಯಕೆ ಪರೋಕ್ಷ ವಾಗಿ ಈಡೇರಿತ್ತು. ಇವತ್ತು ಮತ್ತೆ ವೈರುಗಳನ್ನುಮಾಡಿ ದೂರವಾಣಿ ಇಲಾಖೆ ಯವರು ದುರಸ್ತಿ ಮಾಡಿದ ಕಾರಣ ಮತ್ತೆ ಈ ಲೋಕಕ್ಕೆ ಮರಳಿ ಕಂಪ್ಯೂಟರ್ ನಲ್ಲಿ ನನ್ನ ಮೇಲ್ ಬಾಕ್ಸ್ ತೆಗೆದರೆ ನನ್ನ ಮಿತ್ರ ಪ್ರದೀಪ್ ರ ಮೇಲ್ ಬಂದಿತ್ತು!!!. ಗೆಳೆಯ ಪ್ರದೀಪ ನನಗೆ ಆರ್ಕುಟ್ ಲೋಕದಲ್ಲಿ ಪ್ರಥಮವಾಗಿ ಪರಿಚಯವಾಗಿ ಕಾಮೆಂಟ್ ಕಳುಹಿಸಿ ಸ್ನೇಹ ಹಸ್ತ ಚಾಚಿದವರು,ನಬ್ಬಿಬ್ಬರ ಸ್ನೇಹ ಕರ್ನಾಟಕ ಹಾಗು ಒರಿಸ್ಸಾ ರಾಜ್ಯಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೆಯಿಂದ ಗಟ್ಟಿಗೊಂಡು ಇಂದು ಅವರ ಇಡೀ ಕುಟುಂಬವೇ ನನಗೆ ಪರಿಚಯವಾಗಿ ಒರಿಸ್ಸಾ ರಾಜ್ಯದ ಸಂಬಾಲಪುರದಲ್ಲಿ ನನಗೆ ಗೆಳೆಯರ ಬಹು ದೊಡ್ಡ ಗುಂಪು ಸೃಷ್ಟಿಯಾಗಿದೆ.ಇವರು ನನಗೆ ಕಳುಹಿಸುವ ಇ- ಮೇಲ್ ಗಳು ಖುಷಿಕೊಡುತ್ತವೆ. ಇತ್ತೀಚಿಗೆ ಒಂದು ಇ-ಮೇಲ್ ನಲ್ಲಿ ನನಗೆ ಮಾನವರ ದೇಹಗಳಿಂದ ರಚಿತವಾದ ಪುಷ್ಪ , ಹಣ್ಣು, ಗಿಡ , ಖಾಂಡ ಮುಂತಾದ ಸುಂದರ ಚಿತ್ರಗಳನ್ನು ಈ ಪ್ರದೀಪ್ ಕಳುಸಿಸಿದ್ದಾರೆ!! ಈ ಚಿತ್ರಗಳನ್ನು ಕಲಾತ್ಮಕವಾಗಿ ನೋಡಿದರೆ ತುಂಬಾ ಖುಷಿಯಾಗುತ್ತದೆ. ಕೆಲವೊಮ್ಮೆ ಸುಂದರ ಕ್ಷಣಗಳು ಯಾವ ಕಡೆ ಇಂದ ಬರುತ್ತದೆ ತಿಳಿಯೋದಿಲ್ಲ !! ಈ ಚಿತ್ರಗಳನ್ನು ನೋಡಿ ಸಂತಸದ ಅಲೆ ಮನಸ್ಸಿನಲ್ಲಿ ಉಂಟಾಯಿತು.ಬನ್ನಿ ನಿರ್ಮಲ ಮನಸಿನಿಂದ ಈ ಚಿತ್ರಗಳ ಸೌಂದರ್ಯ ಸವಿಯೋಣ.""ಒಳ್ಳೆಯ ಮನಸಿದ್ದರೆ ಜಗವೇ ಸುಂದರ " ಎನ್ನುವ ನುಡಿ ಈ ಚಿತ್ರಗಳನ್ನು ನೋಡಿ ನನಗೆ ಅನ್ನಿಸಿತು.!!! ನಿಮಗೆ ????
ನಮ್ಮ ಮನಸ್ಸು ಶುದ್ದವಿದ್ದರೆ ಜಗವೇ ಸುಂದರ!!!!{ if our heart and mind is pure everything is pure}
Thursday, September 30, 2010
ಒರಿಸ್ಸಾ ರಾಜ್ಯದ , ಸಂಬಾಲ್ಪುರ್ ಗೆಳೆಯ ಪ್ರದೀಪ್ ಕಳುಹಿಸಿದ ಸುಂದರ ಇ -ಮೇಲ್ !!!
Friday, September 24, 2010
ಡಾ// ರಾಜ್ ಕುಮಾರ್ ಹಾಗೂ ಬಿ. ಸರೋಜಾದೇವಿ ಆಕಾಶವೇ ಬೀಳಲಿ ಮೇಲೆ ಎಂದು ಹಾಡಿದ್ದು ಇಲ್ಲೇ !!!
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನಡೆವೆ !!! |
ಹೆದರಿಕೆಯ ನೋಟವೇಕೆ ಒಡನಾಡ ನಾನಿರುವೆ !!1 |
ಹೊಸ ಬಾಳಿನ ಹಾದಿಯಲ್ಲಿ ಜೊತೆ ಗೂಡಿ ನಾ ಬರುವೆ!! |
ಇಂದೀಗ ಎರಡೂ ಜೀವ ಬೆರೆತೂ ಸ್ವರ್ಗ ವಾಯ್ತು!! |
ಹಾಗೆ ಸಿ.ಡಿ.ಯಲ್ಲಿ ಈ ಹಾಡು ಕೇಳುತ್ತಿದ್ದೆ .ಅರೆ ತಾಳು ಈ ಹಾಡನ್ನು ಯೂ ಟ್ಯೂಬ್ ನಲ್ಲಿ ನೋಡೋಣ ಅಂತ ಅಲ್ಲಿಗೆ ಹೋದೆ.ಆಶ್ಚರ್ಯ ಕಾದಿತ್ತು!!! ತೆಲುಗಿನ ನಿರ್ದೇಶಕ ಜಯಂತ್ ಪರಾಂಜಿ ಎನ್ನುವರು ತಮ್ಮ ಕಾಮೆಂಟ್ ಹಾಕಿ ಈ ಹಾಡು ತಮಗೆ ತೆಲುಗಿನಲ್ಲಿ ಒಳ್ಳೆಯ ಚಿತ್ರಗಳನ್ನು ನೀಡಲು ಪ್ರೇರೇಪಿಸಿತು ಅಂತ ಹೇಳಿದ್ದಾರೆ.ಹಾಗೆ ನೋಡ್ತಾ ನೋಡ್ತಾ ಇದು ನಮ್ಮ ಕರಿಘಟ್ಟ ದಲ್ಲಿ ಚಿತ್ರಿಕರಿಸಿರೋದು ಕಾಣಿಸಿತು.ಸರಿ ಅಂತ ಭಾನುವಾರ ಅಲ್ಲಿಗೆ ಹೊರಟೆ..ಅಲ್ಲಿ ನನಗೆ ಕೆಲವು ತಾಣಗಳನ್ನು ನೋಡಿ ಹಾಡು ಜ್ಞಾಪಕ ಬಂತು. ಸುಮದುರ ಹಾಡನ್ನು ಚಿತ್ರೀಕರಿಸಿದ ಜಾಗ ನನ್ನ ಕ್ಯಾಮರಾ ದಲ್ಲಿ ಸೆರೆಯಾಯ್ತು!!!ದೂರದಲ್ಲಿ ಡಾ//ರಾಜ್ ಕುಮಾರ್ ಸರೋಜಾದೇವಿ ಹಾಡು ಹೇಳುತ್ತಾ ಓಡಿ ಬರುತ್ತಿರುವಂತೆ ಭಾಸವಾಯಿತು !!!.ಇದರ ಶ್ರೇಯಸ್ಸು ಹಾಡು ರಚಿಸಿದ ಚಿ.ಉದಯ ಶಂಕರ್ , ಸಂಗೀತ ನೀಡಿದ ರಾಜನ್ ನಾಗೇಂದ್ರ , ಹಾಡು ಹೇಳಿದ ಪಿ.ಬಿ. ಶ್ರೀನಿವಾಸ್ , ಹಾಡಿನಲ್ಲಿ ನಟಿಸಿದ ಡಾ//ರಾಜ್ ಕುಮಾರ್ ಬಿ.ಸರೋಜಾ ದೇವಿ ಹಾಗು ನಿರ್ದೇಶಕ ಸಿದ್ದಲಿಂಗಯ್ಯ ಅವರಿಗೆ ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಹಬ್ಬಲು ಕಾರಣರಾದ ಇವರೆಲ್ಲರಿಗೆ ಈ ನೆನಪಿನ ಕಾಣಿಕೆ. ತೆಲಗು ನಿರ್ದೇಶಕರ ಅಭಿಪ್ರಾಯ ಹೀಗಿದೆ ನೋಡಿ.
Monday, September 20, 2010
ಕಾವೇರಿ ರಂಗ !!!!: ಬನ್ನಿ ಕಾವೇರಿ ರಂಗನ ದರುಶನಕೆ !!! ದೇವಾಲಯದ ಅಂಗಳಕೆ !!!...
ಕಾವೇರಿ ರಂಗ !!!!: ಬನ್ನಿ ಕಾವೇರಿ ರಂಗನ ದರುಶನಕೆ !!! ದೇವಾಲಯದ ಅಂಗಳಕೆ !!!...: "ಪಂಡಿತ್ ಭೀಮ್ ಸೇನ್ ಜೋಷಿಯವರು ಭಕ್ತಿ ತುಂಬಿ ಹಾಡಿದ ಕಂಗಳಿದ್ಯಾತಕೋ ಹಾಡಿನಿಂದ ನಿಮ್ಮನ್ನು ಸ್ವಾಗತಿಸುತ್ತೇನೆ. ಬನ್ನಿ ಕಾವೇರಿ ರಂಗನ..."
Thursday, September 16, 2010
1970 ರ ದಶಕದಲ್ಲಿ ವಿಶ್ವವನ್ನು ಅಬ್ಬಬ್ಬಾ ಎನ್ನಿಸಿತ್ತು ಸ್ವೀಡನ್ ದೇಶದ ಈ"ABBA '' ಸಂಗೀತಗಾರರ ಮೋಡಿ.!!!
ಸ್ವೀಡನ್ ದೇಶದ ಹೆಮ್ಮೆಯ ಸಂಗೀತಗಾರರು. |
ನಾನು ಪ್ರೌಡಶಾಲೆಯಲ್ಲಿ ಓದುತ್ತಿದ್ದ ಸಮಯ ಹಳ್ಳಿ ಹೈದ ನಾನು ದಸರಾ ಹಾಗು ಬೇಸಿಗೆ ರಜೆಯಲ್ಲಿ ರಜೆಕಳೆಯಲು ಮೈಸೂರಿಗೆ ನನ್ನ ನೆಂಟರ ಮನೆಗೆ ಬರುತ್ತಿದ್ದೆ.ನನ್ನ ಸಂಬಂದಿ ರವಿ ಆಗಾಗ ಟೇಪ್ ರೆಕಾರ್ಡರ್ ನಲ್ಲಿ ಇಂಗ್ಲೀಷ್ ಹಾಡು ಕೇಳುತ್ತಿದ್ದ . ನನಗೆ ಅರ್ಥವಾಗದಿದ್ದರೂ ಹಾಡಿನ ವಾಧ್ಯಗಳ ಮೋಡಿಗೆ ಒಳಗಾಗಿ ಈ ಹಾಡುಗಳನ್ನು ಕೇಳಲು ಶುರುಮಾಡಿದ್ದೆ.ಇಂಗ್ಲೀಷ್ ಹಾಡು ಹಾಡುವುದೂ ಅಂದಿನ ಜಮಾನದ ಒಂದು ಫ್ಯಾಶನ್ ಆಗಿತ್ತು . ನಾನು ಸಹ ಹಳ್ಳಿಹೈದ ಎಂಬುದನ್ನು ಮರೆತು ಪ್ಯಾಟೆ ಗಂಡು ಅಂಥಾ ತೋರಿಸಿ ಕೊಳ್ಳೋಕೆ ಶುರುಮಾಡಿದ್ದೆ. ಹಾಡಿನ ಭಾಷೆ ಅರ್ಥ ವಾಗದೆ ಬೆಪ್ಪಾಗಿದ್ದೆ!!ಹಾಗೂ ಹೀಗೂ ಹಾಡುಗಳ ಅರ್ಥ ಗ್ರಹಿಸಲು ಶುರುಮಾಡಿದ ನನಗೆ ಇಂಗ್ಲೀಷ್ ಹಾಡುಗಳಲ್ಲಿಯೂ ಅರ್ಥವಿದೆ ಅನ್ನಿಸ ತೊಡಗಿತು.
ಪ್ರಪಂಚದಲ್ಲಿ ಅತೀ ಪ್ರಸಿದ್ಧಿ ಪಡೆದ ದಿನಗಳು |
ಆ ಸಮಯದಲ್ಲಿ ನಾನು ಬಹುಷಃ ಇಂಗ್ಲೀಷ್ ಹಾಡುಗಾರರ ಪೋಸ್ಟರ್
ಅಂದು ಹೀಗಿದ್ವಿ |
ಗಳನ್ನೂ ಸಂಗ್ರಹಿಸಲು ಆಂಗ್ಲ ಭಾಷೆಯ " ಸನ್,"" ವೀಕ್ ಎಂಡ್ " ಮುಂತಾದ ವಾರ ಪತ್ರಿಕೆಗಳನ್ನು ಪೋಸ್ಟರ್ ಸಲುವಾಗಿ ತಂದು ಪೋಸ್ಟರ್ ಇಟ್ಟುಕೊಂಡು ಉಳಿದ ಪತ್ರಿಕೆಯನ್ನು ಹಾಗೆ ಓದದೆ ಬಿಸಾಕಿದ್ದೂ ಉಂಟು.ನಂತರ ಓದಲು ಶುರುಮಾಡಿದೆ ಅನ್ನಿ. ನನ್ನ ಕೋಣೆಯ ಗೋಡೆಯ ತುಂಬಾ ಈ ಹಾಡುಗಾರರದೆ ಪೋಸ್ಟರ್ ಹಾಕಿಕೊಂಡು ನಾನು ಇವರಂತೆ ಸಂಗೀತಗಾರ ಆಗ್ತೀನಿ ಅಂತಾ ಬೊಗಳೆ ಬಿಟ್ಟಿದ್ದೆ.[ ನಂತರ ಆಗಿದ್ದೆ ಬೇರೆ ಬಿಡಿ.]ಅಂಥಹ ಸಮಯದಲ್ಲಿ ಅಬ್ಬ ಬೋನಿ.. ಎಂ , ಒಸಿಬೀಸ್ಸ, ದ .ಪೋಲಿಸ್ , ಶೆಕಿನ್ಸ್ ಸ್ಟೀವನ್ಸ್ , ಬೀಟಲ್ಸ್, ಜಾಪ್ನೀಸ್ ಬಾಯ್, ಮೆನ್ ಅಟ್ ವರ್ಕ್ , ಬೀಟಲ್ಸ್, ದೊನ್ನಾ ಸಮ್ಮರ್ ಹೀಗೆ ಇನ್ನೂ ಬಹಳಷ್ಟು ಗುಂಪಿನ ಹಾಡುಗಳನ್ನು ಕೇಳುತ್ತಿದ್ದೆ.ಇವುಗಳಲ್ಲಿ ನನ್ನ ಮೆಚ್ಚಿನ " ಅಬ್ಬಾ "ಗ್ರೂಪಿನ ಸಂಗೀತ ಮನ ಮೋಹಕ ವಾಗಿತ್ತು. ಇಂದಿಗೂ ಮನದ ಮೂಲೆಯಲ್ಲಿ ಕುಳಿತು ಹಾಡುಗಳು ನೆನಪಿನಲ್ಲಿ ಉಳಿದಿವೆ.ಇವರೂ ಇಂಗ್ಲೀಷ್ ಪ್ರಾಬಲ್ಯ ವಿರುವ ದೇಶಗಳ ಹಾಡುಗಾರಿಕೆಗೆ ಸವಾಲಾಗಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ತಮ್ಮ ಹಾಡು ಸಂಗೀತದಿಂದ ರಂಜಿಸಿ ಕುಣಿಸಿದ್ದಾರೆ. ಆಸ್ಟೇಲಿಯಾ ದಲ್ಲಂತೂ ಊರಿಗೊಂದು ಅಬಿಮಾನಿಗಳ ಗುಂಪು ಕಾಣಿಸಿಕೊಂಡಿತ್ತು. ABBA ಎಂಬ ಹೆಸರಲ್ಲೇ ಒಂದು ವಿಶೇಷವಿದೆ ತಂಡದ ನಾಲ್ಕೂ ಸದಸ್ಯ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಈABBA ಎಂಬ ಗುಂಪಾಗಿ ಶುರುವಾದ ಈ ಗುಂಪಿನಲ್ಲಿ[ Björn Ulvaeus, Benny Andersson, Agnetha Fältskog, and Anni-Frid Lyngstad ಎಂಬ ನಾಲ್ವರು ಪ್ರಮುಖ ಸದಸ್ಯರು . ಮತ್ತೊಂದು ವಿಶೇಷ ಅಂದರೆ ಈ ಗುಂಪು ಇಂಗ್ಲೀಷ್ ಮಾತನಾಡದ ದೇಶ ಸ್ವೀಡನ್ ನಿಂದ ಉದ್ಭವಿಸಿದ್ದು.1970 ರ ದಶಕದಲ್ಲಿ ಸ್ಟಾಕ್ ಹೋಂ ನಲ್ಲಿ ನಿರ್ಮಿಸಿಕೊಂಡ ತಮ್ಮ ಸ್ಟುಡಿಯೋ ದಲ್ಲಿ ಬಹಳಷ್ಟು ಹಾಡುಗಳನ್ನು ಬರೆದು ಧ್ವನಿಮುದ್ರಿಸಿ ಯೂರೋಪ್, ಅಮೇರಿಕ , ಆಸ್ಟ್ರೇಲಿಯಾ , ಜಪಾನ್,ಮುಂತಾದ ದೇಶಗಳಲ್ಲಿ ತಮ್ಮ ಹಾಡುಗಳಿಂದ ಪಾಪ್ ಸಂಗೀತ ಲೋಕದಲ್ಲಿ ಬಿರುಗಾಳಿ ಎಬ್ಬಿಸಿ ಮೆರೆದರು.ಇವರ ಹಾಡುಗಳೋ ಇಂದಿಗೂ ಜನಪ್ರೀಯತೆ ಕಳೆದುಕೊಳ್ಳದೆ ಇಂಗ್ಲೀಷ್ ಪಾಪ್ ಲೋಕದಲ್ಲಿ ಲೆಜೆಂಡ್ ಆಗಿ ಉಳಿದಿವೆ.ಇವರ ಹಾಡುಗಳ ಪಟ್ಟಿ ನೋಡಿಬನ್ನಿ
.
| |||||
|
Wednesday, September 15, 2010
ಕಾವೇರಿ ರಂಗ !!!!: ಶ್ರೀ ರಂಗಪಟ್ಟಣ ಚರಿತೆ ಹಾಗು ಗೌತಮ ಕ್ಷೇತ್ರ. ಪೌರಾಣಿಕ ಹ...
ಕಾವೇರಿ ರಂಗ !!!!: ಶ್ರೀ ರಂಗಪಟ್ಟಣ ಚರಿತೆ ಹಾಗು ಗೌತಮ ಕ್ಷೇತ್ರ. ಪೌರಾಣಿಕ ಹ...: "ಶ್ರೀ ರಂಗ ಪಟ್ಟಣ ದ್ವೀಪಕ್ಕೆ ಸಂಭಂದಿಸಿದಂತೆ ಹಲವಾರು ದಂತ ಕತೆಗಳಿದ್ದು ಎಲ್ಲಾ ಕಥೆಗಳಿಗೆ ಇಂದಿನ ನಾವುಗಳು ಬಯಸುವಂತೆ ದಾಖಲೆಗಳ ಆಧಾರ ವಿಲ್ಲ ಆದಾಗ್ಯೂ ಕಥೆಗಳಿಗೆ ಆಧಾರ..."
Saturday, September 11, 2010
ಈ ಕನ್ನಡ ಹಾಡಿನಲ್ಲಿ ಪ್ರೀತಿಯ ಕವಿತೆ ಚಿತ್ತಾರದ ಚಿಲುಮೆಯಾಗಿ ನರ್ತಿಸಿದೆ.!!!
ನಾನು ಚಿಕ್ಕವನಾಗಿದ್ದಾಗಿನಿಂದಾಗ ಈ ಹಾಡು ಕೇಳು ತಿದ್ದೇನೆ, ಈ ಹಾಡಿನಲ್ಲಿ ಏನೋ ವಿಶೇಷವಿದೆ. 1970 ರಲ್ಲಿ ಬಿಡುಗಡೆ ಯಾದ" ಕಸ್ತೂರಿ ನಿವಾಸ "ಚಿತ್ರದ ಈ ಹಾಡು ಆರ್ .ಎನ್.ಜಯಗೋಪಾಲ್ ಲೇಖನಿಯಿಂದ ಹುಟ್ಟಿಬಂದಿದೆ. ಎಂತಹ ಅದ್ಭುತ ಸಾಹಿತ್ಯ ಪ್ರತಿ ಪದದಲ್ಲಿಯೂ ಸಭ್ಯತೆ ಮೀರದಂತೆ ಪ್ರೀತಿಯ ಮಧುರ ಕಾವ್ಯ ಹರಿದಿದೆ.ಈ ಪ್ರೀತಿಯ ಕವಿತೆಗೆ ಪಿ.ಬಿ.ಶ್ರೀನಿವಾಸ್ ಹಾಗು ಪಿ.ಸುಶೀಲ ಹಾಡುಗಾರಿಕೆ ಮೆರುಗು ನೀಡಿದೆ. ಹಾಡುಗಾರರು ಯಾವುದೇ ಪದದಲ್ಲಿಯೂ ಅನರ್ಥ ವಾಗದಂತೆ ಹಾಡಿದ್ದಾರೆ. ಇನ್ನೂ ಸಂಗೀತ ಸಾಮ್ರಾಟ್ ಜಿ .ಕೆ.ವೆಂಕಟೇಶ್ ಸಂಗೀತದಲ್ಲಿ ಹೊಸತನ ವಿದೆ. ಈ ಹಾಡಿನ ರೆಕಾರ್ಡಿಂಗ್ ಗಮನಿಸಿ ಸಂಗೀತ ವಾಧ್ಯಗಳ ಹಾಗು ಹಾಡುಗಾರರ ಧ್ವನಿ ವಿಶೇಷವಾಗಿ ಕೇಳಿಸುತ್ತದೆ. ಅಂದಿನ ದಿನಕ್ಕೆ ಇದು ಸೂಪರ್ ಆಗಿತ್ತು. stereo ಸೌಂಡ್ ನ ಅದ್ಭುತ ಅನುಭವ ಈ ಹಾಡಿನಲ್ಲಿ ಮೂಡಿಬಂದಿದೆ. ಕಪ್ಪು ಬಿಳುಪಿನ ಆ ಯುಗದಲ್ಲಿ ಚಿತ್ರೀಕರಣ ತುಂಬಾ ಸುಂದರವಾಗಿ ಮೂಡಿದೆ.ಈ ಹಾಡು ಹೀಗೆ ಇರಬೇಕಿತ್ತೂ ಅನ್ನಿಸದೆ ಇರಲಾರದು ಅಲ್ವ!!ಅದಕ್ಕೆ .ಇನ್ನೂ ಈ ಹಾಡಿನ ಕವಿತೆಯ ಚಿತ್ತಾರದ ಚಿಲುಮೆಗೆ ಶ್ರೀ ರಂಗ ಪಟ್ಟಣ ತಾಲೂಕಿನ ಕೆ.ಅರ.ಎಸ ಡ್ಯಾಮಿನ ಚಿಲುಮೆಗಳು ಡಾ// ರಾಜ್ ಕುಮಾರ್ ಹಾಗು ಆರತಿ ಜೊತೆಗೆ ನಟಿಸಿ ನರ್ತಿಸಿವೆ. ಯಾವುದೇ ಪ್ರೇಮಿಗಳ ಮುಂದೆ ಈ ಹಾಡನ್ನು ಹಾಕಿನೋಡಿ ಅವರಿಗೆ ಇದು ತಮ್ಮದೇ ಹಾಡು ಅನ್ನಿಸದಿರದು.ಇಂತಹ ಸಮ್ಮಿಲನದ ಹಾಡು ಇಂದಿಗೂ ಪ್ರೇಮಿಗಳ ಮನಸಿನಲ್ಲಿ ಹಸಿರಾಗಿ , ಮೊಬೈಲಿನ ಎಸ.ಎಂ.ಎಸ.ಗಳಾಗಿ ಹರಿದಾಡಿವೇ. ಬನ್ನಿ ಒಮ್ಮೆ ಹಾಡನ್ನು ನೋಡುತ್ತಾ ಕೇಳುವ.
Friday, September 10, 2010
ನಿಮ್ಮೊಳಗೊಬ್ಬ ನಿಂದ ಸ್ವರ್ಣ ಗೌರಿ ಹಾಗು ಚೌತಿ ಗಣಪತಿ ಹಬ್ಬದ ಶುಭಾಶಯಗಳು.!!!!
ನನ್ನ ಪ್ರೀತಿಯ ಎಲ್ಲಾ ಬ್ಲಾಗ್ ಮಿತ್ರರಿಗೆ ಹಾಗು ಅವರ ಕುಟುಂಬಕ್ಕೆ ಸ್ವರ್ಣ ಗೌರಿ ಹಾಗು ಬಾದ್ರಪದ ಶುಕ್ಲ ಚೌತಿಯ ಗಣಪತಿ ಹಬ್ಬದ ಶುಭಾಶಯಗಳು.ತಮಗೆ ಹಾಗು ಎಲ್ಲರಿಗೂ ಶುಭವಾಗಲಿ ಎಂದು ಹೃದಯ ಪೂರ್ವಕವಾಗಿ ಶುಭಾಶಯ ಅರ್ಪಿಸುವ ಪ್ರೀತಿ ಇಂದ .........ಗಮನಿಸಿ ಬಣ್ಣದ ಗಣಪತಿ ಬದಲಾಗಿ ಪರಿಸರ ಸ್ನೇಹಿ ಗಣಪತಿ ಪೂಜಿಸಿ ಧನ್ಯರಾಗಿ ಎಂದು ಕೋರುವ .......ನಿಮ್ಮ ವಿಶ್ವಾಸಿ... ನಿಮ್ಮೊಳಗೊಬ್ಬ ಬಾಲು
Thursday, September 9, 2010
ಹೀಗೊಂದು ಕಾಡುವ ಹಳೆ ಸಿನಿಮಾ.!!!ನೀವು ನೋಡಿಲ್ಲವೇ???The Sound of Music- The Lonely Goatherd
ನನಗೆ ಬೇಜಾರಾದಾಗ ಬಹಳ ಅಪರೂಪಕ್ಕೆ ಕೈಗೆ ಸಿಕ್ಕಿದ ಯಾವುದಾದರೂ ಅಪರೂಪದ ಸಿನಿಮಾ ನೋಡುವುದು ವಾಡಿಕೆ. ಇತ್ತೀಚಿಗೆ ಹೀಗೆ ಆಕಸ್ಮಿಕವಾಗಿ ಸಿಕ್ಕ ಒಂದು ಅಪರೂಪದ ಚಲನ ಚಿತ್ರವೇ 'the sound of music" 1965 ರಲ್ಲಿ ತೆರೆ ಕಂಡ ಈ ಚಿತ್ರ ವಿಶ್ವಾದ್ಯಂತ ಜನ ಮನ ಸೂರೆಗೊಂಡು ಐದು ಆಸ್ಕರ್ ಪ್ರಶಸ್ತಿ ಬಾಚಿಕೊಂಡಿತು. ಈ ಚಿತ್ರ ಮಾಡಿದ ದಾಖಲೆ ಅಪಾರ.ಈ ಚಿತ್ರ ಚಿತ್ರೀಕರಣ ಗೊಂಡ ಆಸ್ತ್ರೀಯ ದೇಶದ ಹಲವು ಸುಂದರ ಜಾಗಗಳು ಇಂದಿಗೂ ಪ್ರವಾಸಿಗಳನ್ನು ಸೆಳೆಯುತ್ತಲೇ ಇವೆ.ಬಹುಷಃ ಈ ಚಿತ್ರದ ಸಂಗೀತವನ್ನು ಅನುಕರಿಸದ /ಕಾಪಿ ಮಾಡದ ಚಿತ್ರರಂಗವೇ ವಿಶ್ವದಲ್ಲಿ ಇಲ್ಲವೇನೋ ಎಂಬಷ್ಟು ಈ ಚಿತ್ರದ ಹಾಡುಗಳ ಸಂಗೀತ ಇಂದಿಗೂ ನಲಿದಿದೆ. ಇಂತಹ ಒಂದು ಚಿತ್ರ ಸಂಗೀತ ಪ್ರಧಾನವಾಗಿ , ಪ್ರತೀ ಕಲಾವಿದರ ನೈಜ ನಟನೆಯಿಂದ ಬಹು ಕಾಲ ನೆನಪಿನಲ್ಲಿ ಉಳಿಯುತ್ತದೆ. ನೀವೂ ಈ ಚಿತ್ರವನ್ನು ನೋಡಿಲ್ಲವೇ ಹಾಗಿದ್ದರೆ ಕೂಡಲೇ ನಿಮ್ಮ ಮನೆಯ ಸಮೀಪವಿರುವ ಸಿ.ಡೀ. ಪಾರ್ಲರ್ ಗೆ ಹೋಗಿ ತಂದು ನೋಡಿ. ಒಳ್ಳೆಯ ಚಿತ್ರ ನೋಡಲು ಯಾರ ಹಂಗು ಏಕೆ ಬೇಕು ಅಲ್ವ.!!! ಬನ್ನಿ ಕೆಲವು ಹಾಡುಗಳು ನಿಮಗಾಗೀಲ್ಲಿವೆ ನೋಡೋಣ ಬನ್ನಿ.[ನಮ್ಮಲೂ ಸಂಗೀತ ಪ್ರಧಾನ ಚಿತ್ರಗಳಾದ ಉಪಾಸನೆ, ಹಂಸಗೀತೆ,ಆನಂದ ಭೈರವಿ ಮುಂತಾದ ಚಿತ್ರಗಳು ಯಶಸ್ವಿಯಾಗಿರುವುದು ನಮ್ಮ ನೆನಪಿನಲ್ಲಿ ಉಳಿಯುತ್ತದೆ ] ಈ ಚಿತ್ರ ನನ್ನ ಮನದಲ್ಲಿ ಬಹುಕಾಲ ನಿಂತು ಈ ಲೇಖನವಾಗಿ ಹೊಮ್ಮಿಬಂದಿದೆ.!!! ಬನ್ನಿ ನಿಮಗೆ ಸಂಗೀತದ ರಸದೌತಣ ಕಾದಿದೆ.
Friday, September 3, 2010
ಶ್ರೀ ರಂಗ ಪಟ್ಟಣದ ರಾಕೆಟುಗಳು ಹಾಗು ಅದರ ತಂತ್ರ ಜ್ಞಾನ ವಿದೇಶಿಯರನ್ನು ಬೆಚ್ಚಿ ಬೀಳಿಸಿ ಅಚ್ಚರಿ ಗೊಳಿಸಿದ್ದವು !!!!
ಹೌದು ಸ್ವಾಮೀ ಶ್ರೀ ರಂಗ ಪಟ್ಟಣದಲ್ಲಿ ಶತ್ರುಗಳನ್ನು ಎದುರಿಸಲು ಪ್ರಥಮ ಭಾರಿಗೆ ಯುದ್ದದಲ್ಲಿ ರಾಕೆಟುಗಳನ್ನು ಉಪಯೋಗಿಸಲಾಯಿತು. ಇದು ಆಂಗ್ಲರನ್ನು ಬೆಚ್ಚಿ ಬೀಳಿಸಿತ್ತು.ವಿಶ್ವದಲ್ಲಿ ಎಲ್ಲೂ ಇಂತಹ ಪ್ರತಿರೋದ ತೋರಿಸುವ ರಾಕೆಟುಗಳನ್ನು ಆಂಗ್ಲರು ಕಂಡಿರಲಿಲ್ಲ.ಯುದ್ದದಲ್ಲಿ ಮೇಲೆರಗಿದ ರಾಕೆಟುಗಳು ಅಪಾರ ಪ್ರಮಾಣದ ಹಾನಿಯನ್ನು ಶತ್ರುಗಳಿಗೆ ಮಾಡಿದ್ದವು. ಇದರ ತಂತ್ರಜ್ಞಾನದ ಬಗ್ಗೆ ತಲೆಕೆಡಿಸಿಕೊಂಡ ಆಂಗ್ಲರು 1799 ರಲ್ಲಿ ಶ್ರೀ ರಂಗ ಪಟ್ಟಣ ಪತನದ ನಂತರ ಶ್ರೀ ರಂಗ ಪಟ್ಟಣದ ರಾಕೆಟುಗಳ ತಂತ್ರ ಜ್ಞಾನದ ಬಗ್ಗೆ ಅಧ್ಯಯನ ನಡೆಸಿದರು ನಂತರ ಇದನ್ನು ತಾವು ವಿಶ್ವದಲ್ಲಿ ನಡೆಸಿದ ಇತರ ಯುದ್ದಗಳಲ್ಲಿ ಅಳವಡಿಸಿಕೊಂಡರು ಅಮೆರಿಕಾದ ನಾಸಾ ದಲ್ಲಿಯೂ ಸಹ ಈ ಬಗ್ಗೆ ಮಾಹಿತಿ ಕಂಡಿದ್ದಾಗಿ ಮಾಜಿ ರಾಷ್ಟ್ರಪತಿಗಳಾದ ಶ್ರೀ ಅಬ್ದುಲ್ ಕಲಾಮ್ ರವರೂ ತಮ್ಮ" wings of fire " ನಲ್ಲಿಯೂ ಉಲ್ಲೇಖಿಸಿದ್ದಾರೆ.ಅದೇರೀತಿ " history t .v . ನವರು ಬ್ರಿಟೀಶ್ ವಿಜ್ಞಾನಿಗಳು ಶ್ರೀ ರಂಗ ಪಟ್ಟಣದ ರಾಕೆಟುಗಳ ಬಗ್ಗೆ ನಡೆಸಿದ ಒಂದು ಅಧ್ಯಯನದ ಮಾಹಿತಿಯನ್ನು ನೀಡಿದ್ದಾರೆ. ಬನ್ನಿ ನೋಡಿ ನಮ್ಮ ದೇಶದಲ್ಲಿ ಹುಟ್ಟಿದ ಒಂದು ತಂತ್ರಜ್ಞಾನದ ಮಹಿಮೆಯ.ಇನ್ನೂ ಹೆಚ್ಚಿನ ಮಾಹಿತಿಗೆ http://www.answers.com/topic/congreve-rocket ನೋಡಬಹುದು.
ಗುದ್ದಿಗೊಂದು ಸುದ್ದಿ: The Majestic Plastic Bag - A Mockumentary ಪ್ರತಿ...
ಗುದ್ದಿಗೊಂದು ಸುದ್ದಿ: The Majestic Plastic Bag - A Mockumentary ಪ್ರತಿ...: " ಹಾಗೆ ಯೂ ಟ್ಯೂಬ್ ನಲ್ಲಿ ಜಾಲಾಡುತ್ತಿದ್ದಾಗ ಈ ವೀಡಿಯೊ ಸಿಕ್ಕಿತು . ತುಂಬಾ ಅರ್ಥ ಭರಿತವಾದ ಇದನ್ನು ಎಲ್ಲಾ ಬ್ಲಾಗಿಗರು ನೋಡಿದರೆ ಹಾಗು ಪ್ಲಾಸ್ಟಿಕ್ ಬಳಕೆ ನಿಲ್ಲಿ..."
Wednesday, September 1, 2010
ಒಮ್ಮೆ ನಮ್ಮನ್ನು ಕ್ಷಮಿಸಲಾರೆಯ ಸಹೋದರಿ !!! ನಾವು ನಾಗರೀಕರು ???
ಅಂದು ಮುಂಜಾನೆ ಸುಮಾರು ಆರು ಗಂಟೆ ಇರಬಹುದು. ನಮ್ಮ ಮನೆಯ ಮೇಲಿನ ಚಾವಣಿ ಏರಿಹಕ್ಕಿಗಳ ಚಿತ್ರ ತೆಗೆಯಲು ಸಿದ್ದತೆ ನಡೆಸಿದ್ದೆ.ಯಾಕೋ ಕಾಣೆ ನನಗೆ ಅರಿವಿಲ್ಲದೆ ಮನೆಯ ಸಮೀಪ ವಿರುವ ಬಸ್/ಆಟೋ ನಿಲ್ದಾಣ ದ ಕಡೆ ನನ್ನ ಕ್ಯಾಮರ ಹೊರಳಿತು.ಯಾರೋ ಪಾಪ ಮಹಿಳೆ ಒಬ್ಬರು ಬೀದಿಯಲ್ಲಿ ತನ್ಮಯತೆ ಇಂದ ಪಟ್ಟಣದ ನಾಗರೀಕರು ??
ರಸ್ತೆ ಬದಿಯಲ್ಲಿ ಚೆಲ್ಲಾಡಿದ್ದ ಕಸವನ್ನು ಉದ್ದನೆಯ ಬರಲಿನಿಂದ ಒಟ್ಟುಮಾಡಿ ಸಂಗ್ರಹ ಮಾಡುತ್ತಿದ್ದರು.ಆ ಕಸದಲ್ಲಿ ನಾವುಗಳು ಏನನ್ನು ಬಿಸಾಕಿರಬಹುದೆಂಬ ಬಗ್ಗೆ ಯೋಚಿಸಿದೆ ಅದರಲ್ಲಿ ಬೀಡಿ,ಸಿಗರೇಟು ತುಂಡುಗಳು,ಪ್ಲಾಸ್ಟಿಕ್ ಕವರುಗಳು,ಪಾನಿಪುರಿ ತಿಂದ ಗ್ರಾಹಕರು ಉಗಿದ ಪದಾರ್ಥಗಳು,ಹಾಗು ಬೀದೀ ಬದಿಯ ಮಾರಾಟಗಾರರು ಚೆಲ್ಲಾಡಿದ ತರಕಾರಿ ,ತಿಂಡಿ, ಇದರ ಮಧೆ,ಪಾನ್ ತಿಂದು ಉಗಿದ ಚೂರುಗಳು, ಹಳೆ ಕಾಗದದ ಚೂರುಗಳು ನಾಯಿ ಮುಂತಾದ ಪ್ರಾಣಿಗಳ ಮಲ , ಇನ್ನೂ ಇಲ್ಲಿ ಬರೆಯಲು ಆಗದಷ್ಟು ಕಸದ ವಿವಿದ ಪದಾರ್ಥಗಳು.ಸ್ವಲ್ಪ ಕೈ ಕೊಳೆ ಯಾದರೂ ಹ್ಯಾಂಡ್ ವಾಶ್ ಬಳಸಿ ಕ್ರಿಮಿ ಮುಕ್ತ ವಾಗುವ ನಾವು ನಾಗರೀಕ ಪ್ರಪಂಚದಲ್ಲಿ ಇವರ ಆರೋಗ್ಯದ ಕಡೆ ಗಮನ ಹರಿಸಿಲ್ಲವೆಂದು ತೋರಿ ನನಗೆ ನಾಚಿಕೆಯಿಂದ ಮನ ಕರಗಿತು.ಮೇಲೆ ಹೇಳಿದ ಎಲ್ಲ ರೀತಿಯ ಕಸವನ್ನು ಪಾಪ ಈ ಮಹಿಳೆ ತನ್ನ ಕೈ ನಿಂದ ಸ್ವಲ್ಪವೂ ಅಸಹ್ಯ ಪಡದೆ ತಾಳ್ಮೆಯಿಂದ ತಾನು ತಂದಿದ್ದ ಬುಟ್ಟಿ ಯಲ್ಲಿ ಹಾಕಿಕೊಳ್ಳುತ್ತಿದ್ದರು[.ಆರೋಗ್ಯದ ಬಗ್ಗೆ ಅವರಿಗೆ ಅರಿವಿರಲಿಲ್ಲ ಕನಿಷ್ಠ ಅವರಿಗೆ ಕೈಗೆ ಗ್ಲವಸನ್ನಾದರೂ ನೀಡಬೇಕಾಗಿತ್ತು !!!]ನಾಗರೀಕ ಪ್ರಪಂಚ ಇದರ ಅರಿವಿಲ್ಲದೆ ಸಿಹಿ ನಿದ್ದೆಯಲ್ಲಿ ವಿಹರಿಸುತ್ತಿತ್ತು.ಅದಿರಲಿ ಸಮಾಜವನ್ನು ಉದ್ದಾರ ಮಾಡುತ್ತೇವೆಂದು ಬೊಬ್ಬೆ ಹೊಡಿಯುವ ಹಲವಾರು ಸ್ವಯಂ ಸೇವಾ ಸಂಸ್ಥೆ ಗಳು ಇಂತಹವರ ಬಗ್ಗೆ ಯೋಚಿಸುವುದಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗದೇ ನಿರಾಶನಾಗಿ ಮನದಲ್ಲಿ" "ಸಹೋದರಿ ನಮ್ಮ ನಾಗರೀಕ???? ಸಮಾಜವನ್ನು ಒಮ್ಮೆ ಕ್ಷಮಿಸಿಬಿಡು" ಎಂದು ಕೊಂಡೆ. ನೀವೇನಂತೀರಾ ???
ರಸ್ತೆ ಬದಿಯಲ್ಲಿ ಚೆಲ್ಲಾಡಿದ್ದ ಕಸವನ್ನು ಉದ್ದನೆಯ ಬರಲಿನಿಂದ ಒಟ್ಟುಮಾಡಿ ಸಂಗ್ರಹ ಮಾಡುತ್ತಿದ್ದರು.ಆ ಕಸದಲ್ಲಿ ನಾವುಗಳು ಏನನ್ನು ಬಿಸಾಕಿರಬಹುದೆಂಬ ಬಗ್ಗೆ ಯೋಚಿಸಿದೆ ಅದರಲ್ಲಿ ಬೀಡಿ,ಸಿಗರೇಟು ತುಂಡುಗಳು,ಪ್ಲಾಸ್ಟಿಕ್ ಕವರುಗಳು,ಪಾನಿಪುರಿ ತಿಂದ ಗ್ರಾಹಕರು ಉಗಿದ ಪದಾರ್ಥಗಳು,ಹಾಗು ಬೀದೀ ಬದಿಯ ಮಾರಾಟಗಾರರು ಚೆಲ್ಲಾಡಿದ ತರಕಾರಿ ,ತಿಂಡಿ, ಇದರ ಮಧೆ,ಪಾನ್ ತಿಂದು ಉಗಿದ ಚೂರುಗಳು, ಹಳೆ ಕಾಗದದ ಚೂರುಗಳು ನಾಯಿ ಮುಂತಾದ ಪ್ರಾಣಿಗಳ ಮಲ , ಇನ್ನೂ ಇಲ್ಲಿ ಬರೆಯಲು ಆಗದಷ್ಟು ಕಸದ ವಿವಿದ ಪದಾರ್ಥಗಳು.ಸ್ವಲ್ಪ ಕೈ ಕೊಳೆ ಯಾದರೂ ಹ್ಯಾಂಡ್ ವಾಶ್ ಬಳಸಿ ಕ್ರಿಮಿ ಮುಕ್ತ ವಾಗುವ ನಾವು ನಾಗರೀಕ ಪ್ರಪಂಚದಲ್ಲಿ ಇವರ ಆರೋಗ್ಯದ ಕಡೆ ಗಮನ ಹರಿಸಿಲ್ಲವೆಂದು ತೋರಿ ನನಗೆ ನಾಚಿಕೆಯಿಂದ ಮನ ಕರಗಿತು.ಮೇಲೆ ಹೇಳಿದ ಎಲ್ಲ ರೀತಿಯ ಕಸವನ್ನು ಪಾಪ ಈ ಮಹಿಳೆ ತನ್ನ ಕೈ ನಿಂದ ಸ್ವಲ್ಪವೂ ಅಸಹ್ಯ ಪಡದೆ ತಾಳ್ಮೆಯಿಂದ ತಾನು ತಂದಿದ್ದ ಬುಟ್ಟಿ ಯಲ್ಲಿ ಹಾಕಿಕೊಳ್ಳುತ್ತಿದ್ದರು[.ಆರೋಗ್ಯದ ಬಗ್ಗೆ ಅವರಿಗೆ ಅರಿವಿರಲಿಲ್ಲ ಕನಿಷ್ಠ ಅವರಿಗೆ ಕೈಗೆ ಗ್ಲವಸನ್ನಾದರೂ ನೀಡಬೇಕಾಗಿತ್ತು !!!]ನಾಗರೀಕ ಪ್ರಪಂಚ ಇದರ ಅರಿವಿಲ್ಲದೆ ಸಿಹಿ ನಿದ್ದೆಯಲ್ಲಿ ವಿಹರಿಸುತ್ತಿತ್ತು.ಅದಿರಲಿ ಸಮಾಜವನ್ನು ಉದ್ದಾರ ಮಾಡುತ್ತೇವೆಂದು ಬೊಬ್ಬೆ ಹೊಡಿಯುವ ಹಲವಾರು ಸ್ವಯಂ ಸೇವಾ ಸಂಸ್ಥೆ ಗಳು ಇಂತಹವರ ಬಗ್ಗೆ ಯೋಚಿಸುವುದಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗದೇ ನಿರಾಶನಾಗಿ ಮನದಲ್ಲಿ" "ಸಹೋದರಿ ನಮ್ಮ ನಾಗರೀಕ???? ಸಮಾಜವನ್ನು ಒಮ್ಮೆ ಕ್ಷಮಿಸಿಬಿಡು" ಎಂದು ಕೊಂಡೆ. ನೀವೇನಂತೀರಾ ???
Subscribe to:
Posts (Atom)