 |
| ಜ್ಞಾನದ ಹಣತೆ ಬೆಳಗಿಸಲು ಕಿರಿಯರಾದರೇನು ?? |
ನಮಸ್ತೆ ಬಹಳ ದಿನಗಳ ನಂತರ ಮತ್ತೆ ಬರೆಯಲು ಕುಳಿತೆ. ಹೌದು ಎರಡು ವಾರಗಳ ಹಿಂದೆ ಪ್ರೀತಿಯ ಗೆಳೆಯ ಮಣಿಕಾಂತ್ ರವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ಬೆಂಗಳೂರಿನಿಂದ ಬ್ಲಾಗ್ ಮಿತ್ರರ ಸ್ನೇಹದಲ್ಲಿ ಮಿಂದು ಹೊಸ ಹುರುಪಿನಿಂದ ಮೈಸೂರಿಗೆ ಬಂದೆ. ಮನೆ ಪ್ರವೇಶಿಸುತ್ತಿದ್ದಂತೆ ನನ್ನ ಸಹೋದರ ಭಾನು ಪ್ರಸಾದ್ ಕಾಣಿಸಿದ. ಉಭಯ ಕುಶಲೋಪರಿ ಮುಗಿಸಿ , ಮಾತಾಡುತ್ತಾ ಕುಳಿತೆವು. ಆ ಮಾತಿನ ನಡುವೆ ಅವನು ಒಂದು ಸನ್ನಿವೇಶವನ್ನು ಬಿಚ್ಚಿಟ್ಟ. ಮನಸಿಗೆ ಹೌದಲ್ವಾ ಅನ್ನಿಸಿತು, ಹಾಗಾಗಿ ಇದಕ್ಕೆ ಒಂದು ಕಥಾ ರೂಪ ಕೊಟ್ಟಿದ್ದೇನೆ , ಒಮ್ಮೆ ಓದಿ ನಿಮಗೆ ಇಷ್ಟವಾಗಬಹುದು.
ಆಗತಾನೆ ಕಂಪನಿಯ ಕೆಲಸ ಮುಗಿಸಿ ಮನೆಗೆ ಬಂದು ಕುಳಿತೆ, ಬೆಳಗ್ಗಿನಿಂದಾ ಒಂದೇ ಸಮಾ ಕೆಲಸ ಒತ್ತಡ ಒತ್ತಡ ಒತ್ತಡ , ಹೌದು ನನ್ನ ಕೆಲಸವೇ ಹಾಗೆ ನನ್ನ ಕಂಪನಿಯವರು ಹೆಚ್ಚಿನ ಹೊರೆ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ಮೊದಲೇ ನಮ್ಮ ಕಂಪನಿ ಒಂದು. ಎಂ. ಏನ್. ಸಿ. ನನ್ನ ಒಡನಾಟ ಹಲವಾರು ವಿದೇಶಿ ಕಂಪನಿಗಳೊಂದಿಗೆ , ಗ್ರಾಹಕರ ಬೇಡಿಕೆ ಪೂರೈಸುವ , ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜವಾಬ್ದಾರಿ ನನ್ನದು. ನನ್ನ ಕೆಲಸದ ಬಗ್ಗೆ ನನ್ನ ಕಂಪನಿಯವರಿಗೆ ಅತೀವ ನಂಬಿಕೆ, ಯಾವುದೇ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತೇನೆ ಎಂಬ ಭರವಸೆ ಹಾಗಾಗಿ ನನಗೆ ಹೆಚ್ಚಿನ ಹೊರೆ ಹೊರಿಸಿದ್ದಾರೆ. ನಾನೂ ಸಹ ನನ್ನ ಕೆಲಸದ ಬಗ್ಗೆ ಅತೀವ ಕಾಳಜಿ ವಹಿಸುತ್ತೇನೆ, ನನ್ನ ಕೆಲಸದಲ್ಲಿ ನನ್ನನ್ನೇ ಮರೆಯುತ್ತೇನೆ. ಇಂತಹ ಸನ್ನಿವೇಶದಲ್ಲಿ ಮನೆಗೆ ಬರುವ ವೇಳೆ ನಿರ್ದಿಷ್ಟ ವಾಗಿರುವುದಿಲ್ಲ .ಈ ಎಲ್ಲಾ ವರ್ತುಲದಲ್ಲಿ ಜೀವಿಸುತ್ತಿರುವ ಇರುವ ನನ್ನ ಹೆಸರು "ಆನಂದ" .
ಮನೆಗೆ ಸುಸ್ತಾಗಿ ಬಂದ ನಾನು ಲ್ಯಾಪ್ ಟಾಪ್ ಕಿಟ್ಟನ್ನು ಒಂದೆಡೆ ಬಿಟ್ಟು , ಅಲ್ಲೇ ಇದ್ದ ಸೋಫಾದ ಮೇಲೆ ಒರಗಿದೆ. ಒಳಗಿಂದ ಬಂದ ನನ್ನ ಪ್ರಿಯ ಪತ್ನಿ ಅನುರೂಪ ನಗು ನಗುತ್ತಾ ಬಂದು ಪಕ್ಕದಲ್ಲಿ ಕುಳಿತು ರಮಿಸಿ , "ಆನಂದ್ ಫ್ರೆಶ್ ಆಗಿಬನ್ನಿ ಕಾಫಿ ಕೊಡ್ತೀನಿ' ಅಂದಳು . ನಾನೂ ಸಹ ಯಾಂತ್ರಿಕವಾಗಿ ಬಾತ್ ರೂಂ ಗೆ ಹೋಗಿ ಫ್ರೆಶ್ ಆಗಿ ಬಂದೆ ,
ಡೈನಿಂಗ್ ಟೇಬಲ್ ಮೇಲೆ ಬಿಸಿ ಬಿಸಿ ಪಕೋಡ ಜೊತೆ ನಮ್ಮ ಹರಟೆ ನಡೆದಿತ್ತು. ಬಿಸಿ ಬಿಸಿ ಪಕೋಡದ ಜೊತೆ ಕಾಫಿಹೀರುತ್ತಿದಂತೆ ಕಂಪನಿಯ ಕೆಲಸದ ಆಯಾಸ ಆವಿಯಾಗಿ ಮಾಯವಾಗಿತ್ತು. ಅಷ್ಟರಲ್ಲಿ ನನ್ನ ಒಬ್ಬನೇ ಮಗ "ಅನೂಪ್ " ಒಳಗೆ ಬಂದವನೇ ಪಪ್ಪಾ ಅಂತಾ ಬಂದು ಅಪ್ಪಿ ಕೊಂಡ ,
ಅನೂಪ್ :-) "ಏನ್ ಪಪ್ಪಾ ಎಷ್ಟು ದಿನ ಆಯ್ತು ನಿಮ್ಮನ್ನ ನೋಡಿ , ಕಳೆದ ಒಂದು ವಾರದಿಂದ
ನೀವು ನನಗೆ ಸಿಕ್ತಾ ಇಲ್ಲ.
ನಿಮ್ಮಬಳಿ ಅರ್ಜೆಂಟ್ ಮಾತಾಡ್ ಬೇಕಾಗಿತ್ತು , ನಿಮ್ಮ ಮೊಬೈಲ್ ಗೆ ಟ್ರೈ ಮಾಡಿದೆ
ನೀವು ಸಿಗಲಿಲ್ಲ ಅದಕ್ಕೆ ಮೇಲ್ ನಲ್ಲಿ ಮೆಸೇಜ್ ಇಟ್ಟೆ"
ನಾನು :-)
"ಸಾರಿ ಮಗನೆ , ಬಹಳ ಬ್ಯುಸಿ ಕಣೋ , ಟೈಮ್ ಸಿಕ್ತಾಇಲ್ಲ , ಕಂಪನಿ ಮ್ಯಾನೇಜ್ಮೆಂಟ್ ಬಹಳ ಕಷ್ಟ ಆಗಿದೆ. ಅದಕ್ಕೆ ನೋಡು ಮನೆ ಕಡೆ ಬರೋಕೆ ಆಗ್ತಾ ಇಲ್ಲ. " ಮತ್ತೆ ಏನ್ ಸಮಾಚಾರ ?
ಅನೂಪ್ :-)
"ಪಪ್ಪಾ ನಮ್ಮ ಶಾಲೆಯಲ್ಲಿ ಸ್ಟೂಡೆಂಟ್ಸ್ ಅಪ್ಪಂದಿರ ಒಂದು ಮೀಟಿಂಗ್ ಕರೆದಿದ್ದಾರೆ , ಅಪ್ಪಂದಿರು ಮಾತ್ರಾ ಬರಬೇಕಂತೆ"
ನಾನು:-)
"ನಿಮ್ಮ ಸ್ಕೂಲ್ ನವರಿಗೆ ಬೇರೆ ಕೆಲಸ ಇಲ್ವಂತಾ , ಮನೆಯಲ್ಲಿ ಇರುವ ಪೇರೆಂಟ್ಸ್ ಪೈಕಿ ಅಪ್ಪ ಅಥವಾ ಅಮ್ಮ ಇಬ್ಬರಲ್ಲಿ ಒಬ್ಬರು ಬಂದ್ರೆ ಸಾಲದಂತಾ ?? "
ಅನೂಪ್ :-)
"ಇಲ್ಲಾ ಪಪ್ಪಾ ಅಪ್ಪಂದಿರು ಮಾತ್ರ ಬರಬೇಕಂತೆ , ಮುಂದಿನ ಶುಕ್ರವಾರ, ಪ್ಲೀಸ್ ಪಪ್ಪಾ ಇಲ್ಲಾ ಅಂತ ಅನ್ನ ಬೇಡಿ , ನೀವು ಬರಲೇ ಬೇಕು"
ನಾನು :-)
"ಇಲ್ಲಾ ಅನೂಪ್ ನನಗೆ ಸಾಧ್ಯವಿಲ್ಲ ನಿಮ್ಮ ಸ್ಕೂಲ್ ನವರಿಗೆ ಒಂದು ಲೆಟರ್ ಕೊಡ್ತೀನಿ ಅದನ್ನು ಅವರಿಗೆ ಕೊಡು , ನನಗೆ ಕಂಪನಿಯ ಕೆಲಸ ಜಾಸ್ತಿ ಬಿಡುವು ಸಿಗೋಲ್ಲ. ಕಂಪನಿ ಮ್ಯಾನೇಜ್ಮೆಂಟ್ ಬಗ್ಗೆ ನಾನು ಒಂದುಟ್ರೇನಿಂಗ ಕೊಡಬೇಕಾಗಿದೆ, ವಿದೇಶಿ ಕಂಪನಿಯ ಹಲವರು ಬರುತ್ತಾರೆ. ಮುಂದೊಮ್ಮೆ ನೋಡೋಣ ಸಾಧ್ಯಾ ಆದಾಗ. " ಅಂದೆ .
ಅನೂಪ್ :-)
ಇಲ್ಲಾ ಪಪ್ಪಾ ನೀವು ಬರದಿದ್ದರೆ , ನನಗೆ ಕಷ್ಟಾ ಆಗುತ್ತೆ,
ನಾನು:-)
" ಯಾಕೋ ಸ್ಕೂಲಿನಲ್ಲಿ ಏನಾದ್ರು ಯಡವಟ್ಟು ಮಾಡಿಕೊಂಡ್ಯ ?? ಏನ್ ಸಮಾಚಾರ , ಸ್ಕೂಲಿನವರು ಯಾಕೆ ನನ್ನನ್ನು ಕರೆಯುತ್ತಿದ್ದಾರೆ"? ಅಂದೇ ,
ಮಗ ರಾಯ ಕೋಪ ಮಾಡಿಕೊಂಡು ಅಳುತ್ತಾ ತನ್ನ ರೂಮಿಗೆ ಹೋಗಿ ಬಾಗಿಲನ್ನು ರಪ್ ಅಂತಾ ಬಾಗಿಲು ಮುಚ್ಚಿಕೊಂಡಾ
ಇದನ್ನು ಗಮನಿಸಿದ ಪತ್ನಿ " ರೀ ನಿಮಗೆ ಮಗನಿಗಿಂತಾ ನಿಮ್ಮ ಕಂಪನಿಯೇ ಜಾಸ್ತಿಯಾಯ್ತಾ ?"
ಅಂತಾ ನನ್ನನ್ನು ಗದರಿ ಪಾಪ ಅನೂಪ್ ಇನ್ನೂ ಏನೂ ತಿಂದಿಲ್ಲ ಅದೇನ್ ಮಾಡ್ತೀರೋ ಗೊತ್ತಿಲ್ಲಾ ನೀವು ಶುಕ್ರವಾರ ಅನೂಪ್ ಸ್ಕೂಲಿಗೆ ಹೋಗ್ತೀರಾ ಅಷ್ಟೇ ಅನ್ನುತ್ತಾ ಮಗನನ್ನು ಸಂತೈಸಲು ನಡೆದಳು. ನಾನೂ ಸಹ ಅವಳ ಹಿಂದೆ ನಡೆದೇ.
ಮಗನನ್ನು ಸಂತೈಸಿ ಊಟ ಮಾಡಿಸಿ ಸ್ಕೂಲಿಗೆ ಬರುವುದಾಗಿ ಮಾತುಕೊಟ್ಟೇ .ಮಾರನೆಯ ದಿನ ಮಗನ ಸ್ಕೂಲಿಗೆ ಫೋನ್ ಮಾಡಿ ಅಪ್ಪಂದಿರ ಭೇಟಿ ಕಾರ್ಯಕ್ರಮದ ವಿವರ ಪಡೆದೆ. ಮಧ್ಯಾಹ್ನ ಹನ್ನೆರಡಕ್ಕೆ ಕಾರ್ಯಕ್ರಮ ಇರುವುದಾಗಿ ತಿಳಿಸಿದರು. ಮುಂದಿನ ಶುಕ್ರವಾರ ಬೆಳಿಗ್ಗೆ ಇದ್ದ ಮೀಟಿಂಗ್ ಗಳನ್ನೂ ಮೂರು ಘಂಟೆಗೆ ಮುಂದೂಡಲು ಕಂಪನಿಯ ನಿರ್ವಾಹಕರಿಗೆ ಹೇಳಿದೆ. ಆದರೆ ಮನದಲ್ಲಿ ಮಗನ ಶಾಲೆಯಲ್ಲಿ ಸ್ಟೂಡೆಂಟ್ ಅಪ್ಪಂದಿರನ್ನು ಯಾಕೆ ಕರೆದಿದ್ದಾರೆ ? ಎಂಬ ಬಗ್ಗೆ ಅಚ್ಚರಿಯಾಗಿತ್ತು.
ಹಾಗು ಹೀಗೂ ದಿನಗಳು ಸರಿದವು, ಶುಕ್ರವಾರ ಬಂದಿತು ಮಗನ ಸ್ಕೂಲಿಗೆ ತೆರಳುವ ಸಮಯ ಬಂತು. ಮಗನೂ ಸಹ ಬಹಳ ಖುಷಿಯಿಂದ ಸಿದ್ಧನಾದ , ಸರಿ ನಾನೂ ಮತ್ತು ಅನೂಪ್ ನನ್ನವಳಿಗೆ ವಿಶ್ ಮಾಡಿ ಕಾರಿನಲ್ಲಿ ಹೊರಟೆವು. ದಾರಿಯಲ್ಲಿ ಸಾಗುತ್ತಿದ್ದ ಒಂದು ಕಡೆ ಅನೂಪ್ ಕಾರನ್ನು ನಿಲ್ಲಿಸಲು ಹೇಳಿದ. ನನಗೆ ಅಚ್ಚರಿ! "ಯಾಕೆ ಅನೂಪ್ ಅಂದೇ'.
ಅನೂಪ್ :-)
"ಪಪ್ಪಾ ಬನ್ನಿ ಪಪ್ಪಾ ಇನ್ನೂ ಟೈಮಿದೆ , ನಿಮ್ಮ ಹತ್ತಿರ ಸ್ವಲ್ಪ ಮಾತಾಡ ಬೇಕೂ " ಅಂದಾ ಇಬ್ಬರೂ ಅಲ್ಲೇ ಇದ್ದ ಒಂದು ಪಾರ್ಕಿನಲ್ಲಿ ಕುಳಿತೆವು ನನಗೆ ಇದೆಲ್ಲಾ ವಿಚಿತ್ರವಾಗಿತ್ತು.
ನಾನು :-)
"ಅಲ್ಲಾ ಕಣೋ ಅನೂಪ್ ಇದೇನು ಇವತ್ತು ನಿನ್ನ ವರ್ತನೆ ವಿಚಿತ್ರವಾಗಿದೆ, ನೀನಿನ್ನೂ ಹೈಸ್ಕೂಲು ಹುಡುಗ ಒಂಬತ್ತನೇ ಕ್ಲಾಸು , ಏನ್ ವಿಚಾರ ಹೇಳಪ್ಪ ಅಂದೇ "
ಅನೂಪ್ :-)
ಪಪ್ಪಾ ನನ್ನ ಸ್ಕೂಲಿನಲ್ಲಿ ಅಪ್ಪಂದಿರನ್ನು ಯಾಕೆ ಕರೆಸುತ್ತಿದ್ದಾರೆ ? ಅಂತಾ ತಿಳಿದು ಕೊಳ್ಳುವ ಆಸಕ್ತಿ ಇಲ್ಲವ ಪಪ್ಪಾ ? ಅಂದಾ
ನಾನು:-)
ಯಾಕೆ ಕರೆಸುತ್ತಾರೆ ಎಲ್ಲೋ ಫೀಸ್ , ಅಥವಾ ಡೊನೆಶನ್ ಕೇಳೋಕೆ ಇರಬೇಕೂ, ಇನ್ಯಾಕೆ ? ಕರೆಸುತ್ತಾರೆ .