|
ಜ್ಞಾನ ಹಂಚಲು ವಯಸ್ಸಿನ ಹಂಗು ಇಲ್ಲ |
ಚಿಕ್ಕಮಗಳೂರಿನ ಗಿರಿಗಳ ದರ್ಶನ ಮಾಡಿ ಮೈಸೂರಿಗೆ ಬರುವ ಹಾದಿಯಲ್ಲಿ
ಹಿರೆಮಗಳೂರಿನಲ್ಲಿ "ಚಿನ್ಮೈ ಭಟ್" ಅವರನ್ನು ಮನೆ ತಲುಪಿಸುವ ಕಾರ್ಯಕ್ರಮ ಇತ್ತು ,
ಹಿರೇಮಗಳೂರಿನ ಅವರ ಮನೆಯ ಬಳಿ ತೆರಳುತ್ತಿದ್ದಂತೆ ಬನ್ನಿ ಸಾರ್ ' "ಕಣ್ಣನ್ ಮಾಮ"
ಅವರನ್ನು ಭೇಟಿ ಮಾಡೋರಂತೆ , ಅಂದ ತಕ್ಷಣ ಮನಸು ಕುಣಿದಾಡಲು ಶುರುಮಾಡಿತು ,
ನನ್ನ ಜೀವನದ ಕನಸು ನನಸಾಗುವ ಒಂದು ಸನ್ನಿವೇಶ ಹತ್ತಿರವಾಗಿತ್ತು.
|
ಜ್ಞಾನದ ಅಮೃತ ಹಂಚುವ ಕಾಯಕ ನನಗೆ ಇಷ್ಟ |
ಬಹಳದಿನಗಳ ಅಲ್ಲಲ್ಲಾ ಬಹಳ ವರ್ಷಗಳ ಕನಸು ನನಸಾಗುವ ಕ್ಷಣ ಅದಾಗಿತ್ತು, ಹೌದು ಜ್ಞಾನ ಶಿಖರದ ಸನ್ನಿಧಿಯಲ್ಲಿ ನಾನು, ಗಿರೀಶ್, ಹಾಗು "ಚಿನ್ಮೈ ಭಟ್" ನಿಂತಿದ್ದೆವು, ನಮ್ಮನ್ನು ಪರಿಚಯ ಮಾಡಿಸಿದರು "ಚಿನ್ಮೈ ಭಟ್ " . ನಮ್ಮನ್ನು ಕಂಡಕೂಡಲೇ ನಗು ಮುಖದಿಂದ ಬರಮಾಡಿಕೊಂಡ "ಹಿರೇಮಗಳೂರಿನ ಕಣ್ಣನ್ " ಬಹಳ ವರ್ಷಗಳ ಪರಿಚಿತರಂತೆ ನಮ್ಮನ್ನು ಆತ್ಮೀಯವಾಗಿ ಕಂಡರು . ಜ್ಞಾನ ಅಮೃತ ಸಾಗರದಿಂದ ಅಮೃತ ಹೀರುವ ಸುಯೋಗ ನಮ್ಮದಾಗಿತ್ತು.
|
ಅಜ್ಞಾನ ದಿಂದ ಸುಜ್ಞಾನದ ಹಾದಿಯಲ್ಲಿ ನಮ್ಮನ್ನು ಕರೆದೊಯ್ದ ನಡೆಸಿದ ಆ ಕ್ಷಣ |
ಕಲೆ, ಸಾಹಿತ್ಯ , ಕ್ಯಾಮರ , ಇತಿಹಾಸ , ಪುರಾಣ , ಹಲವಾರು ಮಹನೀಯರ ವಿಚಾರದಲ್ಲಿ ಅವರ ಮಾತುಗಳು ವಸ್ತು ನಿಷ್ಠ ವಾಗಿದ್ದವು , ಎಷ್ಟು ಕೇಳಿದರೂ ಕೇಳಬೇಕೆಂಬ ಮಾತುಗಳು ಅವು. ಶ್ರೀರಂಗಪಟ್ಟಣದ ಅನುಭವವನ್ನು ಮುಕ್ತವಾಗಿ ಹಂಚಿ ಕೊಂಡರು . ಸಾಹಿತ್ಯದ ಬಗ್ಗೆ, ಇತಿಹಾಸದ ಬಗ್ಗೆ, ವಿಜ್ಞಾನದ ಬಗ್ಗೆ , ಸಂಸ್ಕೃತಿಯ ಬಗ್ಗೆ, ನೀವು ಯಾವುದೇ ವಿಷಯ ಕೊಡಿ ಅದರಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಜ್ಞಾನ ಭಂಡಾರ ನನ್ನೆದುರು ತೆರೆದುಕೊಂಡಿತ್ತು, ಆ ಜ್ಞಾನ ಭಂಡಾರ ಕಂಡು ವಿಸ್ಮಿತನಾಗಿ ನನ್ನನ್ನೇ ನಾನು ಮರೆತು, ಅವರ ಜ್ಞಾನಕ್ಕೆ ಶರಣಾಗಿದ್ದೆ,.
|
ನಗುವಿನಲ್ಲಿ ಅಮೃತ ಬೆರತಿತ್ತು |
ವಯಸ್ಸಿನ ಬೇದವಿಲ್ಲದೆ , ಅಪರಿಚಿತರೆಂಬ ಭಾವನೆಯಿಲ್ಲದೆ ನಿಷ್ಕಲ್ಮಶವಾಗಿ ಪ್ರೀತಿಯಿಂದ ಮಾತನಾಡುತ್ತಾ "ಕಣ್ಣನ್ ಮಾಮ " ನಮ್ಮ ಹೃದಯದಲ್ಲಿ ನೆಲೆಸಿಬಿಟ್ಟರೂ , ಅವರ ನಾಲಿಗೆಯ ಮೇಲೆ ಸರಸ್ವತಿ ನಲಿದಾಡುತ್ತಿದ್ದಳು , ಮಾತುಗಳಲ್ಲಿ ಜೇನಿನ ಸಿಹಿಯಿತ್ತು, ಕಣ್ಣಿನಲ್ಲಿ ವಾತ್ಸಲ್ಯ ವಿತ್ತು, ನಗುವಿನಲ್ಲಿ ಅಮೃತಬೆರೆತಿತ್ತು , ಅದನ್ನು ಕೇಳುತ್ತಾ ನಮ್ಮ ಆ ಕ್ಷಣಗಳು ಜೀವನದ ಅಮೂಲ್ಯ ಕ್ಷಣಗಳಾಗಿ ರೂಪಗೊಂಡು ಅಮರತ್ವ ಹೊಂದಿದವು ..
|
ಜೀವನ ಇಷ್ಟೇನೆ |
ಸುಮಾರು ಎರಡು ತಾಸು ಅವರ ಸನ್ನಿಧಿಯಲ್ಲಿ ಕಳೆಯುವ ಭಾಗ್ಯ ನಮ್ಮದಾಗಿತ್ತು, ಊರಿಗೆ ಹೋಗುವ ಯೋಚನೆ ಮರತೆಹೊಗಿತ್ತು, ಕನ್ನಡ ನಾಡಿನಲ್ಲಿ ಒಂದು ಜೀವ ಕನ್ನಡ ಭಾಷೆಯ ರಾಯಭಾರಿಯಾಗಿ ಇಷ್ಟೊಂದು ಸಮರ್ಥವಾಗಿ ಹೆಮ್ಮೆಯಿಂದ ನಮ್ಮೊಡನೆ ಇರುವುದು ನಮ್ಮ ಕನ್ನಡ ತಾಯಿಯ ಪುಣ್ಯ ಎನ್ನುವ ಭಾವನೆ ಮೂಡಿತ್ತು . ಇವರ ಕಾಲದಲ್ಲಿ ನಾವು ಜೇವಿಸಿದ್ದೆವಲ್ಲಾ ಎನ್ನುವ ಹೆಮ್ಮೆ ನಮ್ಮದಾಗಿತ್ತು.
|
ಕನ್ನಡ ಪೂಜಾರಪ್ಪನ ಖಡಕ್ ಮಾತುಗಳು |
ತಮ್ಮನ್ನು ಕನ್ನಡ ಪೂಜಾರಯ್ಯ ಎಂದು ಕರೆದುಕೊಳ್ಳುವ , ಮಾತುಗಳನ್ನು ನೇರವಾಗಿ ಹೇಳುತ್ತಾ ಹಿರೇಮಗಳೂರಿನಲ್ಲಿ ನೆಲೆಗೊಂಡು ಕೋದಂಡ ರಾಮನ ಸೇವೆ ಮಾಡುತ್ತಾ , ಕನ್ನಡ ಡಿಂಡಿಮವ ಅನವರತ ಭಾರಿಸುತ್ತಾ ಹೆಮ್ಮೆಯ ಕನ್ನಡ ಮಗನಾಗಿ , ಕನ್ನಡ ತಾಯಿಯ ಕಿರೀಟದ ಅನರ್ಘ್ಯ ರತ್ನವಾಗಿ ಪ್ರಕಾಶಿಸುತ್ತಾ ಇರುವ ಈ ಚೇತನದ ದರ್ಶನ ನಮ್ಮ ಬಾಳಿನ ಪುಣ್ಯ ಎಂದು ಬೀಗುತ್ತಾ , ಹೊರಡಲು ಅಪ್ಪಣೆ ಬೇಡಿದೆವು,
|
ಜ್ಞಾನ ಭಂಡಾರ |
ಓ ಹೌದಲ್ವಾ , ನೀವು ಮೈಸೂರಿಗೆ ಹೋಗಬೇಕು ಎನ್ನುತ್ತಾ ಪ್ರೀತಿಯಿಂದ ಒಂದು ಕನ್ನಡ ಪುಸ್ತಕದ ಕಾಣಿಕೆ ನೀಡಿದರು , ಆ ಪುಸ್ತಕದಲ್ಲಿ ಹಸ್ತಾಕ್ಷರ ನೀಡಿ ನಮ್ಮನ್ನು ಹರಸಿದರು, ಆಸೆಯಿಂದ ಅವರು ಬರೆದಿದ್ದು ಏನು ಅಂತಾ ನೋಡಿದರೆ ''ಇತಿಹಾಸ ಪ್ರಿಯನಿಗೆ ಕನ್ನಡ ಪೂಜಾರಿಯ ಕಾಣಿಕೆ " ಎಂಬ ವಾಕ್ಯ . ಒಂದು ಕ್ಷಣ ತಬ್ಬಿಬ್ಬಾದೆ , ಇತಿಹಾಸದ ಮಹಾ ಸಾಗರದಲ್ಲಿ ಒಂದು ಚಮಚ ಇತಿಹಾಸ ಕುಡಿದ ನನ್ನನ್ನು ಇತಿಹಾಸಕಾರ ಎಂದು ಕರೆದ ಮಹನೀಯರಿಗೆ ಹೇಗೆ ಕೃತಜ್ಞತೆ ಅರ್ಪಿಸಬೇಕೆಂದು ತಿಳಿಯದಾಯಿತು. ಅಷ್ಟರಲ್ಲಿ ಸವಿನೆನಪಿಗಾಗಿ "ಕಣ್ಣನ್ ಮಾಮ" ಅವರ ಒಂದಷ್ಟು ಚಿತ್ರಗಳನ್ನು ಕ್ಲಿಕ್ಕಿಸುವ ಸೌಭಾಗ್ಯ ನನ್ನದಾಯಿತು.
|
ಕನ್ನಡ ಹೃದಯದ ಭಾಷೆ |
|
ಕಾಣುವ ಕನಸು ಕನ್ನಡದ್ದೆ |
|
ಬನ್ನಿ ಕನ್ನಡಿಗರಾಗಿ |
ಕಳೆದ ೦೯ ಸಂಚಿಕೆಯಿಂದ ಈ ಪ್ರವಾಸದ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡ ನಾನು ಈ ಸಂಚಿಕೆಯಲ್ಲಿ ನಾ ಕಂಡ ಮಹನೀಯರೊಬ್ಬರ ಬಗ್ಗೆ ಈ ಸಂಚಿಕೆಯಲ್ಲಿ ಬರೆಯುವ ಸಂತಸ ಹೇಳಲು ಅಸಾಧ್ಯವಾಗಿದೆ, ಹಾಸನ ,ಚಿಕ್ಕಮಗಳೂರು ಜಿಲ್ಲೆಯ ಪ್ರವಾಸದಲ್ಲಿ ಈ ಅನುಭವ ನನ್ನ ಜೀವಮಾನದ ಅತ್ಯಂತ ಅಮೂಲ್ಯವಾದದ್ದು , ಹಿರೇಮಗಳೂರು ಕಣ್ಣನ್ ಅವರ ಜ್ಞಾನ ಎಲ್ಲರಿಗೂ ಅನವರತ ಸಿಗಲಿ ಎಂಬ ಹಾರೈಕೆ ಯೊಂದಿಗೆ ನನ್ನ ಪ್ರವಾಸ ಸರಣಿಯ ಕೊನೆಯ ಸಂಚಿಕೆ ಮುಕ್ತಾಯ ಮಾಡುತ್ತೇನೆ , ಈ ಪಯಣದ ಹಾದಿಯಲ್ಲಿ ಜೊತೆಯಾಗಿ ಬಂದ ನಿಮ್ಮೆಲ್ಲರಿಗೂ ಪ್ರೀತಿಯ ಶುಭ ಕಾಮನೆಗಳು
4 comments:
Intaha olle vishayakke ondoo kaament haakillavella endu nodalu vishaadavaayitu.
Neevu kannan ravara jote kaleda samayavannu varnisiruvudu bahala ista aayitu. kannan ravarannu naanu devarante preetisuttene. aadare avarannu bheti maaduva bhaagya/suyoga nanage sikkillavennuvudu bahala besara tandide. dayavittu nimmalli avara phone no iddare kodatakkaddu. naanu allige hogi avarodane swalpa kaala kaleyabekemba hambalavide.
ಕಣ್ಣನ್ ಅವರನ್ನು ಕಂಡು ಬಹಳ ಸಂತೋಷ ಆಯ್ತು... ಅವರ ಕಾರ್ಯಗಳ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳುವ ಹಂಬಲ ಮೂಡುತ್ತಿದೆ ಸಾರ್
ಒಂದು ಅತ್ಯುತ್ತಮ ಬ್ಲಾಗ್ ಧಾರವಾಹಿಯ ಕಡೆಯ ಕಂತು.
ಇಡೀ ಮಾಲಿಕೆ ಮಾಹಿತಿಪೂರ್ಣ ಮತ್ತು ನಮ್ಮನ್ನೂ ಪ್ರವಾಸ ಮುಖಿಯಾಗಿಸುವಂತಿತ್ತು.
ನಿಮ್ಮ ಮಾತು ನಿಜ ಕಣ್ಣನ್ನು ಮಾಮ ನಿಜವಾಗಲೂ ಙ್ಞಾನ ಶಿಖರವೇ.
ಜ್ಞಾನಕ್ಕೆ ಭೇದವಿಲ್ಲ ಜ್ಞಾನಕ್ಕೆ ಭಾಷೆಯ ತೊಡಕಿಲ್ಲ ಎನ್ನುವ ಮಾತಿನ ಹಾಗೆ ನಾವು ಕಾಣ ಬೇಕಾದ ಸತ್ಯ ಒಂದೇ.
ಅದನ್ನು ಕಾಣಲು ಬಳಸುವ ಮಾರ್ಗಗಳು ಹಲವಾರು. ಹಿರೇಮಗಳೂರು ದೇವಸ್ಥಾನದ ಅರ್ಚಕರರಾದ ಶ್ರೀ ಕಣ್ಣನ್ ಅವರ ನಂಬಿಕೆಯೂ ಕೂಡ ಇದೆ. ಹೊಟ್ಟೆ ಹಸಿದಾಗ ಯಾವ ರಾಗದಲ್ಲಿ ಅಥವಾ ಯಾವ ಭಾಷೆಯಲ್ಲಿ ಕೂಗಿದರು ಹಸಿವನ್ನು ತೀರಿಸುತ್ತದೆ ಎನ್ನುವ ನಂಬಿಕೆ ಕೂಗಿದವರದು. ದೇಗುಲದ ಗೋಡೆಯ ಮೇಲೆ ಬರೆಸಿರುವ ಪದಾಮೃತಗಳು ಅವರ ಸೇವೆ ಎಲ್ಲವೂ ಅಭಿನಂದನಾರ್ಹ. ಸುಮಧುರ ಸರಣಿಗೆ ಸುಮಧುರ ಕಾಣಿಕೆ ಮಾಲಿಕೆ. ಅವರಿಂದಲೇ ಇತಿಹಾಸಕಾರ ಎನ್ನುವ ಬಿರುದು.. ಸರ್ಜಿ ಇದೆ ಅಲ್ಲವೇ ಪೂರ್ವ ಜನ್ಮದ ಸುಕೃತ ಎನ್ನುವುದು. ಸುಂದರ ಲೇಖನ ಸರಣಿ ನೀಡಿದ್ದಕ್ಕೆ ಅಭಿನಂದನೆಗಳು
Post a Comment