Sunday, August 12, 2012

ಬನ್ನಿ ಹೇಳೋಣ ಹೆಮ್ಮೆಯಿಂದ ನಾವೆಲ್ಲಾ ಭಾರತೀಯರೆಂದು.!!!!!


ದೇಶದ  ಸ್ವಾಂತ್ರ್ಯ ಪಡೆದ ನಂತರ ದ್ವಜ ಹಾರಿದ  ಸ್ಥಳ 

ಹೌದು  ಆಗಸ್ಟ್ ಹದಿನೈದು ಮತ್ತೆ ಬಂದಿದೆ. ಎಲ್ಲೆಲೂ ದೇಶದ ಹೆಮ್ಮೆಯ ಸ್ವಾತಂತ್ರ್ಯೋತ್ಸವ ಆಚರಣೆ ಬಗ್ಗೆ  ಸಿದ್ಧತೆ ನಡೆದಿದೆ. ಪ್ರತೀ ಶಾಲೆಯಲ್ಲಿ  ತಮ್ಮ ಮಕ್ಕಳನ್ನು  ಪ್ರತಿಭಾ ಪ್ರದರ್ಶನಕ್ಕೆ ಅಣಿಗೊಳಿಸುವ ಕಾರ್ಯ ನಡೆದಿದೆ.ಹೆಮ್ಮೆಯ ಆಚರಣೆಯ ಭರದಲ್ಲಿ  ನಾವು ಮೆಲುಕುಹಾಕುವ  ಘಟನೆಗಳು ನೆನಪಿಗೆ ಬರುತ್ತಿದೆ.ಹೌದು ಸ್ವಾತಂತ್ರ್ಯ ಹಬ್ಬದ ಆಚರಣೆಯ  ಸಮಯದಲ್ಲಿ  ನಾವೆಲ್ಲಾ ಭಾರತೀಯರೆಂಬ ಭಾವನೆಯ ದೀಪ ಬೆಳಗಿಸ ಬೇಕಾದ ಸಮಯ ಬಂದಿದೆ. ಸ್ವಾತಂತ್ರ್ಯ  ಬಂದು 65 ವರ್ಷಗಳು  ಪೂರೈಸಿದ್ದರೂ   ನಮಗೆ ಕೆಲವು ಸಾಮಾನ್ಯ ವಿಚಾರಗಳು ಅರ್ಥವಾಗಿಲ್ಲಾ ......!ಬನ್ನಿ  ನಮಗೆ ಅರ್ಥವಾಗಿಲ್ಲದ   ಕೆಲವು ವಿಚಾರಗಳನ್ನು ಗಮನಿಸೋಣ
ಬೋಲೋ ಭಾರತ ಮಾತಾಕಿ  ಜೈ
.
1) 2012 ಕ್ಕೆ ಆಚರಿಸುತ್ತಿರುವ  ಸ್ವಾತಂತ್ರ್ಯ ದಿನಾಚರಣೆ  65 ನೆಯದೋ ಅಥವಾ  64 ನೆಯದೋ ಎಂಬ ಗೊಂದಲ ಪ್ರತೀವರ್ಷದಂತೆ  ಈ ವರ್ಷವೂ ಕೂಡ ಇರುತ್ತದೆ. ಕೆಲವು ಆಹ್ವಾನ ಪತ್ರಿಕೆಗಳು . 65 ಎಂದರೆ  ಕೆಲವು 64 ಎನ್ನುತ್ತವೆ. ಇದೆ ಉದಾಹರಣೆ ಮುಖ್ಯ ಅತಿಥಿಗಳ ಭಾಷಣ ದಲ್ಲಿಯೂ  ಕಂಡುಬರುತ್ತದೆ.

2) ರಾಷ್ಟ್ರ ದ್ವಜ ಹಾರಿಸುವಾಗ ಅನುಸರಿಸ ಬೇಕಾದ ನಿಯಮಾವಳಿ ನಮಗಿನ್ನೂ ಅರ್ಥವಾಗಿಲ್ಲಾ , ಹಾಗು ಇದನ್ನು ಯಾವ ಶಾಲೆಯಲ್ಲಿಯೂ ಬೋದಿಸುತ್ತಿಲ್ಲಾ , ಹಾಗಾಗಿ  ರಾಷ್ಟ್ರ ದ್ವಜಕ್ಕೆ ನೀಡಬೇಕಾದ ಗೌರವ  ನಮ್ಮಿಂದ ನ್ಯಾಯ ಬದ್ದವಾಗಿ ಸಿಗುತ್ತಿಲ್ಲ .ಸಧ್ಯಕ್ಕೆ  ರಾಷ್ಟ್ರ ದ್ವಜ ಆರೋಹಣ  ಆದಾಗ ಚಪ್ಪಾಳೆ   ತಟ್ಟಿ  ಸಿಹಿ ತಿಂದು ಮರೆಯೋದಷ್ಟೇ ನಮಗೆ  ಗೊತ್ತಿರೋದು. ಯಾರಿಗಾದರೂ    ಬನ್ನಿ  ಸ್ವಲ್ಪ ರಾಷ್ಟ್ರ ದ್ವಜ ಕಟ್ಟೋಣ ಸಹಾಯ ಮಾಡಿ ಅನ್ನಿ  ಅಯ್ಯೋ ನನಗೆ ಬರೋಲ್ಲಾ ಸಾರ್ ಅಂತಾ ತಪ್ಪಿಸಿ  ಕೊಳ್ಳುತ್ತಾರೆ.  ದಯಮಾಡಿ ಗಮನಿಸಿ ಮುಂದಿನ  ರಾಷ್ಟ್ರೀಯ ಹಬ್ಬ ಆಚರಣೆ ವೇಳೆಗಾದರೂ  ಭಾರತ ದ್ವಜ ಸಂಹಿತೆ ಓದಿ  ರಾಷ್ಟ್ರ ದ್ವಜಕ್ಕೆ ಕೊಡಬೇಕಾದ ಗೌರವ ಕೊಡೋಣ. ದ್ವಜ ಸಂಹಿತೆ ಬಗ್ಗೆ ಲಿಂಕ್ ಇಲ್ಲಿದೆ   1] http://en.wikipedia.org/wiki/Flag_code_of_India 2] http://pib.nic.in/feature/feyr2002/fapr2002/f030420021.html ದಯಮಾಡಿ ರಾಷ್ಟ್ರ ದ್ವಜವನ್ನು ತಲೆ ಕೆಳಕು ಮಾಡಿ ಹಾರಿಸಬೇಡಿ ಈ ಬಾರಿ  ಇಂತಹ ವರದಿಗಳು  ಸುದ್ಧಿ ಮಾಧ್ಯಮಗಳಲ್ಲಿ ಬರದಿರಲಿ ಎಂದು ಆಶಿಸೋಣ.


3] ಬೇರೆ ಸಮಯದಲ್ಲಿ ದ್ವನಿ ಏರಿಸಿ ಮಾತಾಡಿ ಬೀಗುವ ನಾವು  ಅದೇಕೋ ಕಾಣೆ ರಾಷ್ಟ್ರ ಗೀತೆ ಹಾಡುವಾಗ ಕಂಠ ಬಿಗಿಯುತ್ತದೆ. 52 ಸೆಕೆಂಡ್ ಗಳ ಈ ರಾಷ್ಟ್ರ ಗೀತೆ ಹಾಡಲು ಅದೇಕೋ ನಮಗೆ  ಹಿಂಜರಿಕೆ, ಹಾಗು ಅದನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡೆ ಇಲ್ಲಾ , ನಾವು  ಹಾಡಿದರು ಪದಗಳ ಉಚ್ಚಾರಣೆ  ಸರಿಯಾಗಿರಲ್ಲಾ. ತಲೆ ಎತ್ತಿ ಎದೆ ಸೆಟೆಸಿ  ಹೆಮ್ಮೆಯಿಂದ ಗೌರವದಿಂದ ಹಾಡ ಬೇಕಾದ  ರಾಷ್ಟ್ರ ಗೀತೆ ಹಾಡುವಾಗ   ನಾವುಗಳು ತಲೆ ತಗ್ಗಿಸಿ ತಪ್ಪಿತಸ್ತರಂತೆ ನಿಲ್ಲುವುದು ಎಷ್ಟರ ಮಟ್ಟಿಗೆ ಸರಿ ?? ಕೆಲವರು ರಾಷ್ಟ್ರ ಗೀತೆ ಕೇಳಿದರೂ ಅದಕ್ಕೂ ನಮಗೂ ಸಂಬಂಧ  ಇಲ್ಲಾ ಅಂತಾ ಕನಿಷ್ಠ ನಿಂತು ಗೌರವ ಸಲ್ಲಿಸದೆ  ಓಡಾಡುತ್ತಿರುತ್ತಾರೆ

 ಚಿತ್ರ ಕೃಪೆ  ಅಂತರ್ಜಾಲ 



ದಯಮಾಡಿ  ಇದನ್ನು ಕಂಠ ಪಾಠ ಮಾಡಿ ಈ ಸಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ  ಹಾಡಿ  ಭಾರತೀಯರಾಗೋಣ .

3] ಸ್ವಾತಂತ್ರ್ಯ ದಿನಾಚರಣೆ ಗೂ  ನಮಗೂ ಸಂಭಂದವೇ ಇಲ್ಲ  ಎನ್ನುವಂತೆ  ಇರುತ್ತೇವೆ, ಹೌದಲ್ವೆ . ನಮಗೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಅಂದ್ರೆ  ಮಕ್ಕಳಿಗೆ, ಮೇಷ್ಟ್ರುಗಳಿಗೆ, ರಾಜಕಾರಣಿಗಳಿಗೆ, ಮಂತ್ರಿ ಮಹೋದಯರಿಗೆ ಮಾತ್ರ , ಅನ್ನಿಸಿಬಿಟ್ಟಿದೆ. ಆದ್ರೆ ಅಂದು ಬಹಳಷ್ಟು ಜನ  ನಾವು ಮಾಡುವ ಘನಂದಾರಿ ಕೆಲಸ ಅಂದ್ರೆ  ಸರ್ಕಾರಿ ರಜದಲ್ಲಿ  ಕ್ಲಬ್ಬಿನಲ್ಲಿ , ಬಾರ್ ಗಳಲ್ಲಿ, ಮೋಜಿನ ತಾಣಗಳಲ್ಲಿ  ಕಾಲ ಕಳೆದು ಆ ದಿನದ ಅರ್ಥವನ್ನು ಅರಿಯದೆ  ಸ್ವಾತಂತ್ರ್ಯವನ್ನು  ಅಣಕ ಮಾಡುತ್ತಿದ್ದೇವೆ.

4]ಇನ್ನೂ ಶಾಲಾ ಮಕ್ಕಳಿಗೋ  ಅಂದು ಹರುಷದ ದಿನ. ಮುಂಜಾನೆಯೇ  ಮನೆಯಿಂದ ನಗುಮುಖದಿಂದ ಹೊರಡುವ ಮಕ್ಕಳು ಅಂದು ಕಾರ್ಯಕ್ರಮದಲ್ಲಿ ಘಂಟೆಗಟ್ಟಲೆ  ಭಾಗವಹಿಸಿದರೂ  ಅವರಿಗೆ ಸಿಗುವುದು ತುಂಡು ಸಿಹಿ ಮಾತ್ರ  ಆದರೆ ಬೆಳಗ್ಗೆಯಿಂದ ಕಾರ್ಯಕ್ರಮ ಮುಗಿಯುವ ವರೆಗೆ ಅವರಿಗೆ ಉಪಹಾರ ನೀಡುವ ಬಗ್ಗೆ ಯಾವ ಸ್ವಯಂ ಸೇವಾ ಸಂಸ್ಥೆ ಗಳೂ, ಕಾರ್ಯಕ್ರಮ ಆಯೋಜಕರೂ  ಯೋಚನೆ ಸಹ ಮಾಡುವುದಿಲ್ಲಾ . ಹಾಗಾಗಿ  ಸುಸ್ತಾದ ಮಕ್ಕಳು  ಸ್ವಾತ್ರ್ಯೋತ್ಸವದ  ಹಬ್ಬದಲ್ಲಿ   ಹಸಿವಿನಿಂದ  ಹೈರಾಣಾಗುತ್ತಾರೆ .
5] ಎಷ್ಟೋ ಕಾರ್ಯಕ್ರಮದಲ್ಲಿ  ವ್ಯವಸ್ತಿತವಾಗಿ  ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣ ಆಗುವುದೇ ಇಲ್ಲಾ , ಸಿದ್ದವಾಗಿ ಬಂದ ಮಕ್ಕಳು  ನಿರಾಸೆಯಿಂದ  ಬಳಲುತ್ತಾರೆ.  ಸಿ.ಡಿ .ಹಾಕಿ  ಮಕ್ಕಳನ್ನು ಕುಣಿಸುವ  ಕಾರ್ಯಕ್ರಮ ಹೆಚ್ಹಾಗಿ, ಮಕ್ಕಳಿಂದ ಹಾಡಿಸುವ ಕಾರ್ಯಕ್ರಮ  ಮಾಯವಾಗಿದೆ. ಇದರಲ್ಲಿ ಕೆಲವು  ಶಿಕ್ಷಕರ ಆತುರದ ನಿರ್ಧಾರಗಳು ಸಹ ಕಂಡುಬರುತ್ತಿದೆ,


ಭಾರತ ಭೂಮಿ ನನ್ನ ತಾಯಿ  ಎನ್ನ ಪೊರೆವ ತೊಟ್ಟಿಲು 
ದೇಶಕ್ಕೆ ಸ್ವಾಂತ್ರ್ಯ ಬಂದಾಗ ಪತ್ರಿಕಾ ವರಧಿ [ಚಿತ್ರ ಕೃಪೆ  ಟೈಮ್ಸ್ ಆಫ್ ಇಂಡಿಯಾ  ಪತ್ರಿಕೆ  ವೆಬ್ ಸೈಟ } 
ಇಷ್ಟೆಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಂಡಲ್ಲಿ ನಾವು ಇನ್ನಷ್ಟು ಉತ್ತಮವಾಗಿ ಅರ್ಥ ಪೂರ್ಣ ಸ್ವಾತಂತ್ರ್ಯದ ದಿನಾಚರಣೆ ಮಾಡಿ ನಿಜವಾದ ಭಾರತೀಯರಾಗಿ ಬಾಳಬಹುದು.  ಬನ್ನಿ    ರಾಷ್ಟ್ರದ್ವಜದ ಬಗ್ಗೆ ಅರಿತು ಅರ್ಥ ಪೂರ್ಣವಾಗಿ ರಾಷ್ರ ಗೀತೆ ಹೆಮ್ಮೆಯಿಂದ ಹಾಡಿ  65 ನೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಹೇಳೋಣ ಹೆಮ್ಮೆಯಿಂದ  ನಾವೆಲ್ಲಾ ಭಾರತೀಯರೆಂದು.!!!!!    ಎಲ್ಲಾ ಆತ್ಮೀಯ ಬ್ಲಾಗ್ ಮಿತ್ರರಿಗೆ,  ನನ್ನ ದೇಶದ ಎಲ್ಲರಿಗೂ  65 ನೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು.ಜೈ ಹಿಂದ್  ಜೈ ಹಿಂದ್ ಜೈ ಹಿಂದ್

5 comments:

Anonymous said...

೬೫ ವರ್ಷ ಕಳೆದಿದೆ, ಇದು ೬೬ನೆ ಸ್ವಾತಂತ್ರ್ಯೋತ್ಸವ ಆಚರಣೆ ಅಲ್ಲವೇ?

Ittigecement said...

ಬಾಲಣ್ಣ...

ಕಣ್ಣು ತೆರೆಸುವಂಥಹ ಲೇಖನ..
ಸಮಯೋಚಿತ ಲೇಖನ...

ಸಾವಿರಾರು ದೇಶ ಪ್ರೇಮಿಗಳು ಪ್ರಾಣ ತ್ಯಾಗ ಮಾಡಿ.. ಸಿಕ್ಕಿದಂಥಹ ಸ್ವಾತಂತ್ರ್ಯದ ಬೆಲೆ ನಮಗೆ ನಿಜವಾಗಿಯೂ ಗೊತ್ತಿಲ್ಲ..

ನಾಚಿಕೆ ಎನಿಸಿದರೂ..
ನಮ್ಮ ಕಣ್ನು ತೆರೆಸಿದ್ದಕ್ಕೆ ಧನ್ಯವಾದಗಳು..

ನಿಮ್ಮ ಕಂಪ್ಯೂಟರ್ ಸರಿ ಹೋಗಿದ್ದಕ್ಕೆ ಅಭಿನಂದನೆಗಳು...

Badarinath Palavalli said...

ಸಕಳಿನ ಲೇಖನ ಬಾಲಣ್ಣ.

ನಿಜ ದೇಶ ಭಕ್ತರು ಮಾತ್ರ ಇಂತಹ ಲೇಖನ ಪ್ರಕಟಿಸಬಲ್ಲರು.

ಇದು ಸಂಗ್ರಹ ಯೋಗ್ಯ.

ಸೀತಾರಾಮ. ಕೆ. / SITARAM.K said...

ಇದು ೬೬ನೇ ಸ್ವತಂತ್ರ ದಿನಾಚರಣೆ. ಸ್ವತಂತ್ರ ಸಿಕ್ಕು ಪೂರೈಸಿದ ವರ್ಷ ೬೫. ಪ್ರಾರಂಭವಾದ ವರ್ಷ ೬೬.
ನಮ್ಮ ವಯಸ್ಸು ಹೇಳುವಾಗಲು ಇದೆ ದ್ವಂದ್ವ ಹಲವರಲ್ಲಿ ಕಾಡುತ್ತದೆ.
ನಿನ್ನ ವಯಸ್ಸೇಷ್ಟು-ಎಂದರೆ ಪುರೈಸಿದ್ದು ಹೇಳಬೇಕೇ ಅಥವಾ ನಡೆಯುತ್ತಿರುವದು ಹೇಳಬೇಕೆ?
೪೫ನೇ ಹುಟ್ಟು ಹಬ್ಬ ಆಚರಿಸಿದವನ ವಯಸ್ಸು ೪೪ (ವಯಸ್ಸು ಯಾವಾಗಲು ಪುರೈಸಿದ್ದು ಹೇಳಬೇಕು)

ಈ ಸರ್ತಿ ನಾನು ಸಿಂಗಪೂರ ನ ಸ್ವತಂತ್ರ ದಿನಾಚರಣೆಯನ್ನು ನೋಡಿದೆ (೯ನೇ ಆಗಸ್ಟ್ ).

ದಿನಕರ ಮೊಗೇರ said...

super info.... tumbaa vishaya, vichaaragaLive ee nimma lekhanadalli....
thank you for sharing