ಇದು ಸುಮಾರು ಇಪ್ಪತ್ತು ವರ್ಷಗಳ ನೆನಪು , ನಾನು ಒಂದು ಪಟ್ಟಣದಲ್ಲಿ ಕೆಲಸದಲ್ಲಿದ್ದೆ. ನಾನಿದ್ದ ಆಫಿಸ್ ಬಳಿ ಒಬ್ಬ ಅಲೆಮಾರಿ ಭಿಕ್ಷುಕ ಅಲೆದಾಡುತ್ತಿದ್ದ. ಹರಿದ ಕೊಳಕು ಮಾಸಲು ಪ್ಯಾಂಟು, ಹರಿದ ಅಂಗಿ ಧರಿಸಿಕೊಂಡು , ಮೈಯೆಲ್ಲಾ ಕೊಳಕಾಗಿ, ಮುಖ ಮುಚ್ಚುವಂತಾ ಗಡ್ಡ ,ಬಿಟ್ಟುಕೊಂಡು ಅಲೆದಾಡುತ್ತಿದ್ದ .ಅವನಿಗೆ ತಲೆ ಸರಿ ಇಲ್ಲಾ ಸಾರ್ , ಸುಮ್ಮನೆ ತನಗೆ ತಾನೇ ಮೆತ್ತಗೆ ಮಾತಾಡುತ್ತಾನೆ. ಅವನ ಮಾತು ಯಾರಿಗೂ ಕೇಳೋಲ್ಲ. ಅವನೂ ಸಹ ಯಾರ ಜೊತೆಗೂ ಮಾತಾಡಲ್ಲಾ . ಬೀದಿಯಲ್ಲಿ ನೆಲಕ್ಕೆ ಬಿದ್ದ ಆಹಾರ ಸೇವಿಸುತ್ತಾನೆ., ಮೊನ್ನೆ ನೋಡಿ ಸಾರ್ ನಮ್ಮ ಕ್ಯಾಂಟೀನ್ ಮುಂದೆ ಚರಂಡಿಯಲ್ಲಿ ಬಿದ್ದ ಅನ್ನವನ್ನು ತಿನ್ನುತ್ತಿದ್ದಾ. ಅಂತಾ ಕ್ಯಾಂಟೀನ್ ಯಜಮಾನ ನಾರಾಯಣ ಹೇಳ್ತಾ ಇದ್ದರು . ಅಲೆದಾಡುತ್ತಿದ್ದ ಕೆಲವು ಮಕ್ಕಳು ಅವನನ್ನು ಹುಚ್ಚಾ ಅಂತಾ ಕಲ್ಲು ಹೊಡೆದು ಪೀಡಿಸುತ್ತಿದ್ದರು. ಆದರೂ ಅವನು ಯಾವುದೇ ಪ್ರತಿಕ್ರಿಯೆ ತೋರದೆ ತನ್ನ ಪಾಡಿಗೆ ತಾನು ನೋವನ್ನು ಅನುಭವಿಸುತ್ತಿದ್ದನು. ನಾವುಗಳೂ ಸಹ ಅವನ ಬಗ್ಗೆ ಅಯ್ಯೋ ಅನ್ನಿಸಿ ಕೆಲವೊಮ್ಮೆ ಕ್ಯಾಂಟೀನ್ ನವರಿಗೆ ದುಡ್ಡುಕೊಟ್ಟು ತಿಂಡಿ,ಕಾಫಿ ಕೊಡಲು ಹೇಳುತ್ತಿದ್ದೆವು. ಒಟ್ಟಿನಲ್ಲಿ ಸಾರ್ವಜನಿಕರ ಅನುಕಂಪಕ್ಕೆ ಒಳಗಾಗಿದ್ದ ಆ ವ್ಯಕ್ತಿ.
ಒಂದು ದಿನ ಆಫಿಸ್ ಗೆ ತೆರಳುತ್ತಿದ್ದೆ. ಛೆ ಯಾರನ್ನ ನಂಬೋದ್ರೀ , ಕೆಟ್ಟ ಜನ , ಅಲ್ಲಾ ಅವನ್ನ ನಂಬಿದ್ವಲ್ಲಾ ಎಂತಾ ಜನಾ ನಾವು................!!! ಅವನಿಗೆ ಸರಿಯಾಗಿ ಆಯ್ತು ಬಿಡಿ , ಅಂತಾ ತಲೆಗೆ ಒಂದರಂತೆ ಮಾತು ಜನ ಆಡುತ್ತಿದ್ದರು.ಇದೇನಿದು ಅಂತಾ ನನಗೂ ಅಚ್ಚರಿ. [ಈ ದಿನಗಳಂತೆ ಅಂದು ಮಾಧ್ಯಮಗಳ ಪ್ರಚಲತೆ ಇರಲಿಲ್ಲ ಬಿಡಿ , ಅದರಿಂದಾ ಒಂದು ಘಟನೆ ಜನರಿಗೆ ತಲುಪಲು ಕೆಲವು ದಿನಗಳೇ ಬೇಕಾಗುತ್ತಿತ್ತು. ಕೆಲವೊಮ್ಮೆ ವರದಿಯೇ ಆಗುತ್ತಿರಲಿಲ್ಲ .] ಹಾಗೆ ಮುಂದುವರೆದೆ ಎದುರಿಗೆ ಬಂದ ಗೆಳೆಯನೊಬ್ಬ. ಲೋ ಗುರು ನೀನು ತಿಂಡಿ ಕೊಡಿಸುತ್ತಿದ್ದೆಯಲ್ಲಾ ಆ ಹುಚ್ಹ ಅವನನ್ನು ಪೋಲಿಸ್ ಅರೆಸ್ಟ್ ಮಾಡಿದ್ದಾರೆ ಅಂದಾ .......!!! ಯಾಕೋ ಏನ್ಸಮಾಚಾರ ? ಅಂದೇ......!!! ಬಹಳ ಖತರ್ನಾಕ್ ಜನ ಕಣೋ ಅವ್ನೂ ...ನಿನ್ನೆ ರಾತ್ರಿ ಗಸ್ತಿನಲ್ಲಿದ್ದ ಪೋಲಿಸ್ ನವರ ಕೈಗೆ ಸಿಕ್ಕಿದ್ದಾನೆ ಪಾಪಿ ಅಂದಾ.. !!! ಅದೇನು ಸರಿಯಾಗಿ ಹೇಳಪ್ಪಾ ನನಗೆ ಅರ್ಥಾ ಆಗ್ತಿಲ್ಲಾ ಅಂತಾ ಕೇಳಿದೆ. ಅವನು ಹೇಳಿದ್ದು ಇಷ್ಟು .
ರಾತ್ರಿ ಗಸ್ತಿನಲ್ಲಿದ್ದ ಪೋಲಿಸ್ ತಿರುಗುತ್ತಾ ಪೋಸ್ಟ್ ಆಫಿಸ್ ಹತ್ತಿರ ಬಂದರಂತೆ ಆಗ ವ್ಯಕ್ತಿ ಒಬ್ಬ ಪೋಸ್ಟ್ ಡಬ್ಬದ ಹತ್ತಿರ ಏನನ್ನೋ ಹಾಕುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅದನ್ನು ಕಂಡು ಹತ್ತಿರ ಹೋದಾಗ ಓಡಲು ಶುರುಮಾಡಿದ , ಪೋಲಿಸ್ ನವರು ಬೆನ್ನಟ್ಟಿ ಅವನನ್ನು ಹಿಡಿದರೆ , ಅವನನ್ನು ನೋಡಿ ಅಚ್ಚರಿ ........!!! ಅದೇ ಅದೇ ಹುಚ್ಚಾ .....!!!! ಅವನ ಬಳಿ ಇದ್ದ ಗಂಟನ್ನು ತಪಾಸಣೆ ಮಾಡಿದಾಗ ಹಲವಾರು ದಾಖಲೆಗಳನ್ನು ಕಂಡರಂತೆ. ಮಾರನೆದಿನ ಅಂಚೆ ಕಚೇರಿಗೆ ತೆರಳಿ ಇವನು ಪೋಸ್ಟ್ ಮಾಡಿದ್ದ ಪೋಸ್ಟ್ ದಾಖಲೆ ತೆಗೆದಾಗ ಇವನೊಬ್ಬ ಕುಖ್ಯಾತ ಕಳ್ಳಾ , ಕೊಲೆಗಾರ ಅಂತಾ ಗೊತ್ತಾಯಿತು. ಯಾವುದೋ ರಾಜ್ಯದಿಂದ ಇಲ್ಲಿಗೆ ಬಂದು ಹುಚ್ಚನಂತೆ ನಾಟಕವಾಡಿ ತಲೆಮರೆಸಿಕೊಂಡಿದ್ದ ಒಬ್ಬ ಅಪರಾಧಿ ಹೀಗೆ ಬಲೆಗೆ ಬಿದ್ದಿದ್ದಾ. .................!!!!.ಅವತ್ತೇ ನನಗೆ ಒಂದು ವಿಚಿತ್ರ ಸತ್ಯದ ದರ್ಶನ ಆಗಿತ್ತು. .

8 comments:
anna innu kelavaru nagasadhu ga madya ! matte kelavaru hampi guhegalalli ! bacchikikondiddare :)
ಮುಖವಾಡ ಧರಿಸೋದು ಜನಮನವನ್ನು ವಂಚಿಸುವುದು ಕೆಲವೇ ಕೆಲವರ ಸಿದ್ಧ ಹಸ್ತಿಕೆ ... ಗುಮಾನಿ ಆಗೋದು ಜನಾಂಗದ ಮೇಲೆ. ಬಹಳ ಚನ್ನಾಗಿದೆ ಬಾಲು ಚಿಕ್ಕ ಮತ್ತು ಚೊಕ್ಕ ಲೇಖನ.
ಇಪ್ಪತ್ತು ವರುಷಗಳ ಹಿಂದಿನ ಘಟನೆ..ಇಂದಿನ ವ್ಯವಸ್ಥೆಯನ್ನು ಗಂಭೀರವಾಗಿ ನಿರೂಪಿಸುತ್ತದೆ....ಮಾನವ ಎಲ್ಲಿಗೆ ಓಡುತಿದ್ದಾನೆ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ...ನಂಬಿಕೆ ಅನ್ನುವ ಪದವೇ ಪರಾರಿಯಾಗಿದೆ..ಶೋಚನೀಯ...ಲೇಖನ ಚೆನ್ನಾಗಿದೆ..ಬಾಲು ಸರ್..
ಹೊರ ನೋಟಕ್ಕೂ ಅಸಲೀಯತ್ತಿಗೂ ಎಂತಹ ಅಜಗಜಾಂತರ ಅಲ್ವಾ ಸಾರ್! ಆ ಕಳ್ಳನ ಬುದ್ಧಿವಂತಿಕೆಗೂ ಮೆಚ್ಚಿಕೊಳ್ಳಲೇ ಬೇಕು.
ಅಂದಹಾಗೆ ಮಾದ್ಯಮಗಳನ್ನೂ ಸಮಾ ಝಾಡಿಸಿದ್ದೀರ ಸಾರ್!

interesting aagi barediddeeraa sir....
chikkadaagi chokkavaagi barediddeeri sir........
ಇಂತಹವರು ತುಂಬಾ ಜನರಿದ್ದಾರೆ ಸರ್... ಎಷ್ಟೋ ಜನ ನಮ್ಮನ್ನು ಭಿಕ್ಷೆ ಹೆಸರಿನಲ್ಲಿ ಈ ರೀತಿ ವಂಚಿಸುತ್ತಾರೆ. ಕೆಲವರಂತೂ ಗಟ್ಟಿ ಮುಟ್ಟಾಗೇ ಇದ್ದರೂ ನಾಚಿಕೆಯಿಲ್ಲದೇ ಭಿಕ್ಷೆ ಬೇಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇಪ್ಪತ್ತು ವರ್ಷದಷ್ಟು ಹಳೆಯದಾದರೂ ಇಂದಿಗೂ ಈ ಲೇಖನ ಸೂಕ್ತ... ಚೆನ್ನಾಗಿದೆ... :)
jagattinalli mukavaadada manushyare hecchu.......
Post a Comment