Saturday, July 28, 2012

ಮೈ ದಿಲ್ಲಿ ಹೂ ....ಪಯಣ:-) 7 ಬಾನಂಗಳದ ಮೋಡಗಳ ಲೋಕದೊಳಗೆ !!!!


ದೆಹಲಿಯ ನೆನಪು  ನಗುವ ಹೂವಿನಂತೆ.     
ಹೆಂಡತಿ ..........ಕಾಲ್ ಮಾಡ್ತಾ ಇದ್ದಳು.!!!! ರೀ  ಏನ್ ಸಮಾಚಾರ , ಮನೆಗೆ ಬಾರೋ ಯೋಚನೆ ಇಲ್ವಾ ಅಥವಾ ದೆಹಲಿಯಲ್ಲೇ ಬಿಡಾರ ಮಾಡೋ ಯೋಚನೆ ಮಾಡಿಬಿಟ್ರಾ...........!!!! ಅನ್ನುತ್ತಾ ಹುಸಿಮುನಿಸು ತೋರಿದಳು. ಇಲ್ಲಾ ಮಾರಾಯ್ತಿ  ನಾಳೆ ವಾಪಸ್ಸು  ಹೊರಟಿದ್ದೇನೆ ಅಂದೇ. ಓ ಹೌದಾ ಸರಿ ಹಾಗಿದ್ರೆ  ನೀವು ಬೆಂಗಳೂರಿನ ಶ್ರೀಧರ್  ಮನೆಗೆ ಬನ್ನಿ ನಾನೂ ಅಲ್ಲಿಗೆ ಬರ್ತಾ ಇದ್ದೀನಿ. ವೇಣು , ಶ್ರೀಧರ್ ಎಲ್ಲಾ  ದಾಂಡೇಲಿ ಗೆ ಹೋಗೋದಿಕ್ಕೆ  ನಮ್ಮ ಕುಟುಂಬವನ್ನೂ ಸೇರಿಸಿ ಬುಕ್  ಮಾಡಿದ್ದಾರೆ , ಅಂದ್ಲೂ .............!!! ಸರಿ ಮಾರಾಯ್ತಿ  ಅಮ್ಮನವರ ಅಪ್ಪಣೆ ಅಂತಾ ಫೋನ್ ಇಟ್ಟೇ. ಅಷ್ಟರಲ್ಲಿ  ನನ್ನ ಕೋ ಬ್ರದರ್  ವೇಣು ಫೋನ್ ಬಂದು ಬಾಲು ನಾಳೆ ಬರ್ತಾ ಇದೀರಂತೆ  ಬೆಂಗಳೂರ್ ಗೆ ಬನ್ನಿ ನಾಳೆ ಎಲ್ಲಾರೂ ದಾಂಡೇಲಿ  ಹೋಗಲು ಬುಕ್ ಮಾಡಿದ್ದೇನೆ  , ಮಿಸ್ ಮಾಡ್ಬೇಡಿ ಆಮೇಲೆ ಅಂದ್ರೂ. ಆಯ್ತು ಅಂತಾ ಹೇಳಿದೆ. ರಾತ್ರಿಯೆಲ್ಲಾ ದೆಹಲಿಯಲ್ಲಿ ಕಳೆದ ದಿನಗಳ  ಮೆಲಕು ಹಾಕುತ್ತಾ  ನಿದ್ದೆಗೆ ಜಾರಿದೆ.
ವಿಮಾನದಲ್ಲಿ ಕಂಡ ದೆಹಲಿಯ ನೋಟ 

ಮರುದಿನ ನಸುಕಿನಲ್ಲಿ ಎದ್ದು ಬೇಗ ತಯಾರಾಗಿ ವಿಮಾನ ಏರಲು ತರಾತುರಿಯಿಂದ  ತೆರಳಿದೆವು.ಬೆಳಿಗ್ಗೆ ಆರರ ವಿಮಾನ ಕರೆದೊಯ್ಯಲು ಸಿದ್ದವಾಗಿತ್ತು.ವಿಮಾನ ಏರುವ ಮೊದಲು ಮತ್ತೊಮ್ಮೆ ದೆಹಲಿಯನ್ನು ಕಣ್ತುಂಬ ತುಂಬಿಕೊಂಡೆ .ವಿಮಾನದೊಳಗೆ ತೂರಿಕೊಂಡು ಕಿಟಕಿಯ ಪಕ್ಕ ಆಸಿನನಾದೇ , ಯಾಕೋ ನನ್ನ ಕ್ಯಾಮರ ಜ್ಞಾಪಕವಾಗಿ ಅದನ್ನು ಅಳುಕಿನಿಂದಲೇ ಹೊರತೆಗೆದು  ಏನಾದರೂ ಪ್ರಯೋಗ ಮಾಡೋಣ ಅಂತಾ ಸಿದ್ಧನಾದೆ ,ಪೂರ್ವ ದಿಕ್ಕಿನಿಂದ ರವಿ ತನ್ನ ಕಿರಣಗಳ ಬಲೆಯನ್ನು ಹರಡುತ್ತಿದ್ದ. ವಿಮಾನ ಮೊದಲು ನಿಧಾನವಾಗಿ , ನಂತರ ವೇಗ ಪಡೆದು ಮೇಲೆರ ತೊಡಗಿತು.   ವಿಮಾನ ಮೇಲೆರಿದಂತೆ ಹಂತ ಹಂತ ವಾಗಿ ದೆಹಲಿಯ ಚಿತ್ರಣ  ಕಂಡು ಬಂತು ವಿಮಾನ ಮೇಲೇರಿದ ನಂತರ ಕ್ಯಾಮರ ತನ್ನ ಕಾರ್ಯ ಶುರುಮಾಡಿತ್ತು.
ಯಮುನಾ ನದಿಯ ನೋಟ.

ದೆಹಲಿಯ ವಿಮಾನ ನಿಲ್ದಾಣ ಬಿಟ್ಟ ಕೆಲವೇ ನಿಮಿಷಗಳಲ್ಲಿ ಹಲವು ರೋಚಕ ಕ್ಷಣಗಳು ಅನುಭವಕ್ಕೆ ಬಂದು ಚಿತ್ರಗಳಾಗಿ  ಸೆರೆಯಾದವು .ದೆಹಲಿಯ ಮಡಿಲಲ್ಲಿ ಹರಿವ ಯಮುನಾ ನದಿಯ ಚಿತ್ರ ಮನಸೆಳೆಯಿತು. ಸ್ವಲ್ಪ ಹೊತ್ತಿನಲ್ಲೇ ಕಿಟಕಿಯ ಪಕ್ಕದಲ್ಲಿ ಮೋಡಗಳ ಸುಳಿದಾಟ ಕಂಡು ಅಚ್ಚರಿ ಯಾಗಿ ನೋಡಿದರೆ ವಿಮಾನ ಭೂಮಿಯಿಂದ   ತನ್ನ ಹಾರುವ ಎತ್ತರವನ್ನು ಜಾಸ್ತಿ ಮಾಡಿ ಮೋಡಗಳ ಲೋಕದ ಒಳಗೆ ನುಗ್ಗಿತು.ಆಗ ಕಂಡ ಲೋಕವೇ ಬೇರೆಯಾಗಿತ್ತು
ಬಾನಂಗಳದಿ ಮೋಡಗಳ ಮೆರವಣಿಗೆ


.ಹಿಂದೆ ಹಲವಾರು ಸಾರಿ ವಿಮಾನದಲ್ಲಿ ಹಾರಿದ್ದರೂ ಬಹಳಷ್ಟು ಸಮಯ ನಿದ್ದೆ ಮಾಡಿದ್ದ ನನಗೆ ಆ ಸಮಯದಲ್ಲಿ   ಸಿಗಬಹುದಾಗಿದ್ದ ಅಥವಾ ಕಳೆದುಕೊಂಡ ಅದ್ಭುತ ಸನ್ನಿವೇಶಗಳು ಅಪಾರ ಅಂತಾ ಇದನ್ನು ನೋಡಿ ಅನ್ನಿಸಿತು.ಸೊಬಗಿನ ಚಿತ್ತಾರದ ಮೋಡಗಳು  ಚಿನ್ನಾಟವಾಡಿ  ಬಗೆ ಬಗೆಯ  ದೃಶ್ಯ ಕಾವ್ಯದ  ಔತಣ ನೀಡಿದ್ದವು,
ಯಾರ ಕಲ್ಪನೆಯ ಚಿತ್ತಾರ ಇದು !!
ಮೇಘ ನರ್ತನ 

ಮೋಡಗಳನ್ನು ನೋಡುತ್ತಿದ್ದ ನನಗೆ ಚಲನ ಚಿತ್ರದಲ್ಲಿ ಈ ಹಿಂದೆ ನೋಡಿದ್ದ ದೇವತೆಗಳು ಆಗಸದಲ್ಲಿ ಹಾಡುತ್ತಾ ಮೋಡಗಳ ಮದ್ಯೆ ಸಾಗುವ ದೃಶ್ಯಗಳು ಕಣ್ಣಿಗೆ ಮೂಡಿದವು.ಮೋಡಗಳ ಲೋಕದಲ್ಲಿ ವಿಹಾರ ಸಾಗುತ್ತಿದ್ದಂತೆ  ಮೋಡಗಳ ಲೋಕದಿಂದ ವಿವಿಧ ಬಗೆಯ ಚಿತ್ರಗಳು ಕಣ್ಣ ಮುಂದೆ ಸುಲಿದು ಬಂದವು.
ಮೋಡಗಳ ಮೇಳ

ಮೇಘ ಮಂಥನ
ಇದು ಯಾವಲೋಕವಯ್ಯಾ ??

ಸ್ವಚ್ಚಂದ ಆಗಸದಲ್ಲಿ ಮೋಡಗಳ ಗುಂಪು ನರ್ತನ ಮಾಡುತ್ತಾ ತೇಲುತ್ತಾ ಮುದನೀಡಿದವು ನಯನ ಮನೋಹರ ದೃಶ್ಯಗಳು ಮನದಲ್ಲಿ ಹರುಷ  ತಂದವು . ಕೆಲವೊಂದು ದೃಶ್ಯಗಳು  ಮೇಘಗಳ ಸಮುದ್ರದಂತೆ ಗೋಚರವಾಗಿ ನನಗೆ ಭೂಮಿಯ ಮೇಲಿನ ಶರಧಿಯಂತೆ  ಕಂಡುಬಂತು  ಮತ್ತೊಮ್ಮೆ  ಉತ್ತರ /ದಕ್ಷಿಣ ದ್ರುವಗಳ ಮಂಜು ತುಂಬಿದ ಸಮುದ್ರಗಳಂತೆ ಕಂಡು ಬಂತು.
ಮೇಘ ಸಮುದ್ರ
ಅಲೆಗಳಾಗಿ ತೇಲಿಬಂದ  ಮೇಘಗಳು 

ಕ್ಷಣಕ್ಕೊಂದು  ರೂಪ , ನಿಮಿಷಕ್ಕೊಂದು ದೃಶ್ಯ ನೋಡುತ್ತಾ ಕ್ಯಾಮರಾದಲ್ಲಿ ಸೆರೆಹಿದಿಯುತ್ತಾ ಸಾಗಿದ್ದ ನನಗೆ ವಿಮಾನದಲ್ಲಿ ಹಲವರ  ಗೊರಕೆಯ ಹಿಮ್ಮೇಳ ಸಾಥ್ ನೀಡಿತ್ತು. ಆದರೂ ಮೋಡಗಳ ಮೇಲಿಟ್ಟ ಕಣ್ಣನ್ನು ಕದಲಿಸದೇ ಕ್ಲಿಕ್ಕಿಸುತ್ತಾ ಸಾಗಿದೆ.ಅಷ್ಟರಲ್ಲಿ ಮೇಘಗಳ  ಗುಂಪು ಮರೆಯಾಗಿ ಭೂಮಿಯಲ್ಲಿನ ಒಂದು ದೃಶ್ಯ ಕಣ್ಣಿಗೆ  ಬಿತ್ತು . ದ್ವನಿವರ್ಧಕದಲ್ಲಿ ಏನೋ ಸೂಚನೆ ನೀದಲಾಗುತ್ತಿದ್ದರೂ  ಯಾವುದೂ ಕಿವಿಗೆ ಕೇಳಿಸುವ ಹಾಗಿರಲಿಲ್ಲ.
ನದಿಯ ಹರಿವು

ಕೆಳಗಡೆ ಯಾವುದೋ ರಾಜ್ಯದಲ್ಲಿ ನದಿಯ ಹರಿವಿನ ಪಾತ್ರದ ಚಿತ್ರ ಕಂಡು ಬಂದಿತು ಹೀಗೆ ಹಾರುತ್ತಾ ಹಾರುತ್ತಾ  ಇದ್ದಕ್ಕಿದಂತೆ ವಿಮಾನ ಒಂದು ಕಡೆ ವಾಲೀ ತನ್ನ ಹಾರಾಟದ ಪಾತ್ರ ಬದಲಿಸುತ್ತಿತ್ತು. ಹೌದು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ ಹತ್ತಿರ ಬರುತ್ತಿರುವ ಸೂಚನೆ ಕಂಡು ಬಂತು ,
ದೇವನ ಹಳ್ಳಿ ವಿಮಾನ  ನಿಲ್ದಾಣ ಸಮೀಪದ ದೃಶ್ಯ
ಭೂರಮೆಯ  ಸೌಂದರ್ಯ 
ಆಗಸಲೋಕದಿಂದ ಭುವಿಗೆ ಬಂದ ಅನುಭವ.
ಭೂಮಿಯ ದೃಶ್ಯಗಳೂ ಸಹ ಸುಂದರವಾಗಿ ಮೂಡಿಬರುತ್ತಿತ್ತು. ಇದನ್ನು ಅನುಭವಿಸುತ್ತಾ ದೆಹಲಿಯಿಂದಾ ಬೆಂಗಳೂರಿಗೆ  ಹಾರಿದ ಎರಡೂವರೆ ಘಂಟೆ ಪಯಣದಲ್ಲಿ  ಕ್ಯಾಮರಾ ಕ್ಲಿಕ್ಕಿಸುತ್ತಾ  ಆಗಸ ಲೋಕದ ವಿಸ್ಮಯ ನೋಡಿ ಪುಳಕಗೊಂಡೆ. ವಿಮಾನ ನಿಧಾನವಾಗಿ ಕೆಳಗಿಳಿದು , ಹಾರಾಡಿದ್ದ ಮನಸನ್ನು ಭೂಮಿಯ  ಮೇಲೆ ತಂದು ಬಿಟ್ಟಿತ್ತು............ ಕೆಳಗಿಳಿದ ನನಗೆ  ಬೆಂಗಳೂರಿನ  ಹಿತ ಗಾಳಿ ಬೀಸಿ  ........ಅಪ್ಪಿಕೊಂಡು ಸ್ವಾಗತ ನೀಡಿತ್ತು.  ಮತ್ತೊಂದು ಪಯಣಕ್ಕೆ ಸಿದ್ದನಾಗಲು ಬೆಂಗಳೂರಿನ ಬನಶಂಕರಿ ಎರಡನೇ ಹಂತಕ್ಕೆ  ಸಾಗಿದೆ. ...............ದೆಹಲಿಯ ನೆನಪುಗಳು  ಮೈ ದಿಲ್ಲೀ ಹೂ , ಮೈ ದಿಲ್ಲಿ ಹೂ ಅಂತಾ ಕೂಗಿ  ಕೂಗಿ  ನೆನಪಿನ ಅಂಗಳದಿ ನರ್ತನ ಮಾಡಿದ್ದವು

7 comments:

Badarinath Palavalli said...

ಯಾತ್ರೆ ಮುಗಿಸಿ, ಯಾತ್ರೆ ಕೈಗೊಳ್ಳುವ ನಿಮ್ಮ ನಿರಂತರತೆ ನಮಗೆ ಆಶ್ಚರ್ಯ ತರಿಸುತ್ತದೆ. ನಾವು ಒಂದು ಊರಿಗೆ ಹೋಗಿ ಬಂದರೆ ಮತ್ತೊಂದು ವಾರ ಸುಸ್ತು ಅಂತ ಮಲಗಿ ಬಿಡುತ್ತೇವೆ! ದೇವರು ಹೀಗೆ ಜಗತ್ತನ್ನು ತೋರಿಸಲಿ.

ಮೇಘ ಸಮುದ್ರ ಮತ್ತು ಇತರ ಚಿತ್ರಗಳು ಸೂಪರ್. ವಿಮಾನದಿಂದ ಚಿತ್ರಿಸಿದ್ದು ಅನಿಸುವುದೇ ಇಲ್ಲ. ಯಮುನಾ ನದಿಯ ವಿಹಂಗಮ ನೋಟವೂ ಅಮೋಘ.

ದೇವನಹಳ್ಳಿಯ ಫೋಟೋ ನೋಡಿದರೆ ನಮ್ಮ ರಾಜಕಾರಣಿಗಳು ಇನ್ನೂ ಜಾಗ ಮಿಕ್ಕಿದ್ದರೆ ಕಬಳಿಸಿ ಬಿಡೋಣ ಎಂದು ಆಸೆ ಪಡುವ ಹಾಗಿದೆ!

ದೆಹಲಿಯ ಕೊನೆಯ ಕಂತು ವಿಭಿನ್ನವಾಗಿದೆ. ಅಂದ ಹಾಗೆ ಕೆಲವು ವಿಮಾನಗಳಲ್ಲಿ ಕುಡಿಯುವ ನೀರಿಗೂ ಕಾಸು ಕೇಳುತ್ತಾರೆ! ನಿಮ್ಮ ವಿಮಾನದಲ್ಲಿ ಹೇಗೋ?

Srikanth Manjunath said...

ಸೊಗಸಾದ ಯಾತ್ರೆ..ದಿಲ್ಲಿಯಿಂದ ದಿಳ್ಳಿಗೆ..ಪಯಣ..ಚಿತ್ತಾರದ ರಂಗವಲ್ಲಿ ಎಲ್ಲವು ಮುದನೀಡಿತು...
ಮೋಡದ ಒಳಗೆ ಹನಿಗಳ ಬಳಗ..ಒಂಟಿ ಕಾಲಲಿ ಕಾದು ನಿಂತಿವೆ..ಭೂಮಿಗೆ ಬರಲು..
ಸುಂದರ ಚಿತ್ರಗಳು...

Dr.D.T.Krishna Murthy. said...

ಬಾಲೂ ಸರ್;ಸೊಗಸಾದ ಬರವಣಿಗೆ!ಸುಂದರ ಚಿತ್ರಗಳ ಔತಣ!!ನಿಮ್ಮ ಬ್ಲಾಗಿಗೆ ಬಂದ ನಮಗೆ ಇದಕ್ಕಿಂತ ಇನ್ನೇನು ಬೇಕು?!ನಮಸ್ತೆ.

Anonymous said...

Modagala Chittara channagide balu..

So mundina payanada story enu?

Dandeli ge karedu oyyuviro?

Deepak

ಸಿಮೆಂಟು ಮರಳಿನ ಮಧ್ಯೆ said...

ಬಾಲಣ್ಣ..

ನಿಮ್ಮೊಂದಿಗೆ ನಾನೂ ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಆಯ್ತು...

ಸುಂದರ ಚಿತ್ರಣ...
ಫೋಟೊಗಳು... ವಾಹ್ !

ಪ್ರತಿಯೊಬ್ಬರಿಗೂ ಅವರದೇ ಕಲ್ಪನಾ ಲೋಕಕ್ಕೆ ಕರೆದೊಯ್ಯುವ ವಿಮಾನಯಾಣ ಸುಂದರ ಅನುಭವ....

ಬಹಳ ಇಷ್ಟವಾಯ್ತು.... ಜೈ ಹೋ ಬಾಲಣ್ಣ..

Anonymous said...

You have some genuinely beneficial information composed here. Good job and keep posting good stuff.

SHYLAJA SHY said...

ತುಂಬಾ ಧನ್ಯವಾದಗಳು ಬಾಲು ಸರ್ ನಾವು ಡೆಲ್ಲಿ ಸುತ್ತಿದೇವು ಇಲ್ಲೇ ಕೂತು ಮೋಡಗಳ ಆ ಒಂದೊಂದು ದೃಶ್ಯ ಅದ್ಭುತ