Sunday, July 22, 2012

ಮೈ ದಿಲ್ಲಿ ಹೂ ....ಪಯಣ:-) 6 ಅಕ್ಷರಧಾಮ ವೆಂಬ ಮಾಯಾಲೋಕದಲ್ಲಿ !!!!


ಬನ್ನಿ  ನಿಮಗೆ ಸ್ವಾಗತ ಎಂದಿತು ಭದ್ರತಾ ಸಿಬ್ಬಂದಿ

ದೆಹಲಿಯ ಸುಪ್ರೀಂ ಕೋರ್ಟಿನ ಕೆಲಸವನ್ನು ಆರುದಿನಗಳ ಕಾಲ ಮುಗಿಸಿದ್ದ ನಾವು ವಾಪಸ್ಸು ಹೊರಡುವ ಸಮಯ ಹತ್ತಿರ ಬಂದಿತ್ತು. ಒಂದುವಾರ ಕಾಲ ದೆಹಲಿಯ ಬಿಸಿಲ ಬೇಗೆಯಲ್ಲಿ ಸುಪ್ರೀಂ ಕೋರ್ಟ್ ಸುತ್ತಾಡಿ  ಕೆಲಸದ ಒತ್ತಡದಿಂದ ಬಳಲಿದ್ದ ನಾವು ಊರಿಗೆ ಹೊರಡಲು ತಯಾರಿ ನಡೆಸಿದ್ದೆವು. ಆದರೆ ಒಂದು ದಾಖಲೆ ಕೋರ್ಟ್ ನಿಂದ ಪಡೆಯಲು ವಿಳಂಬವಾಗಿ  ಮಾರನೆಯ ದಿನ ದೊರಕುವ ಸೂಚನೆ ಬಂದಿತು. ನಮ್ಮ ವಕೀಲರೂ ಸಹ ನಾಳೆ  ಬನ್ನಿ  ದಾಖಲೆ ತೆಗೆದು ಕೊಡುತ್ತೇನೆ ಅಂದರು. ಹಾಗಿದ್ರೆ ಸಾರ್ ನಾವು ನಾಳೆ "ಅಕ್ಷರಧಾಮ " ಹೋಗಿ ಬರುತ್ತೇವೆ , ಅಂದೆವು ಅವರೂ ಸಹ ಹ ಹ ಹ ಹೋಗಿಬನ್ನಿ ಒಂದುವಾರದಿಂದ  ಬರಿ ಕೋರ್ಟ್ ನಲ್ಲೆ  ಇದ್ದು ಬೇಜಾರಗಿರುತ್ತೆ ಅಂದರು ಸರಿ ಎಂದು ಹೇಳಿ ಮಾರನೆಯ ದಿನ ಬರುವುದಾಗಿ ಹೇಳಿ ವಾಪಸ್ಸು ನಮ್ಮ ರೂಂ ಗೆ  ಬಂದೆವು.
ಕೈ ಬೀಸಿ ಕರೆದಿತ್ತು  ಅಕ್ಷರ ಧಾಮ

ಮಾರನೆಯ ದಿನ  ಬೆಳಿಗ್ಗೆ  "ಅಕ್ಷರಧಾಮ" ನೋಡಲು  ಹೊರಟೆವು , ಮನದಲ್ಲಿ ಯಾವುದೋ ಆಹ್ಲಾದಕರ ಸಂತಸ ಮೂಡುತ್ತಿತ್ತು. ನಾವಿದ್ದ ಜಾಗದಿಂದ ಮೆಟ್ರೋ ರೈಲಿನಲ್ಲಿ  ತೆರಳಿ " ಅಕ್ಷರಧಾಮ"ತಲುಪಿದೆವು. ಆವರಣ ಪ್ರವೇಶಿಸುತ್ತಿದ್ದಂತೆ ನಮಗೆ ಕಂಡು ಬಂದಿದ್ದು  ಯಾವುದೋ ಚಲನ ಚಿತ್ರಕ್ಕೆ ಹಾಕಿದ ಸೆಟ್ ನಂತೆ ಸುಂದರವಾಗಿ ಕಂಗೊಳಿಸುತ್ತಿದ್ದ "ಅಕ್ಷರ ಧಾಮ" ಹೌದು ಅದ್ಭತ ಲೋಕದೊಳಗೆ  ಕೈ ಬೀಸಿ ಅಕ್ಷರಧಾಮ ಕರೆದಿತ್ತು. ಪ್ರವೇಶಿಸಲು ಅಳವಡಿಸಲಾಗಿರುವ ರಕ್ಷಣಾ ಪರೀಕ್ಷೆಗಳನ್ನು ಗೆದ್ದು  ನಾವು ತಂದಿದ್ದ ಕ್ಯಾಮರಾ , ಮೊಬೈಲ್ , ಮುಂತಾದ ಸಾಮಗ್ರಿಗಳನ್ನು ಅಲ್ಲಿಯೇ ಬಿಟ್ಟು ಅದಕ್ಕೆ ರಶೀದಿ ಪಡೆದು  ಹೊರಟೆವು.ಹೌದು ಗುಜರಾತಿನ ಗಾಂಧಿನಗರದಲ್ಲಿರುವ ಮತ್ತೊಂದು ಅಕ್ಷರಧಾಮ ದ ಮೇಲೆ 24 ಸೆಪ್ಟೆಂಬರ್ 2002.ರಂದು ಭಯೋತ್ಪಾದಕರ ದಾಳಿಯ ನಂತರ  ಅತ್ಯಂತ ವೈಜ್ಞಾನಿಕವಾಗಿ  ಇಲ್ಲಿ ರಕ್ಷಣಾ ತಪಾಸಣೆ ನಡೆಸಲಾಗುತ್ತದೆ. ಎಲ್ಲ ಕಡೆ  ಸಿ.ಸಿ ಕ್ಯಾಮರ ಗಳ ಕಣ್ಗಾವಲು ಇದ್ದು ಅದನ್ನು ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ನಾವೂ ಸಹ ಹಿಂದೆ ನಡೆದ ಘಟನೆಗಳನ್ನು ಅರಿತಿದ್ದ ಕಾರಣ ರಕ್ಷಣಾ ತಪಾಸಣೆಗೆ ಒಳಪಟ್ಟೆವು.ಬನ್ನಿ "ಅಕ್ಷರಧಾಮ" ದ ಬಗ್ಗೆ ತಿಳಿಯೋಣ.
ಸಹಜಾನಂದ್ ಸ್ವಾಮೀ ಅಥವಾ ಸ್ವಾಮೀ ನಾರಾಯಣ ಸ್ವಾಮೀ.

ದೇವಾಲಯದ ಒಂದು ನೋಟ
"ಅಕ್ಷರ ಧಾಮ"   " ಸ್ವಾಮೀ ನಾರಾಯಣ" ಎಂಬ ಸ್ವಾಮೀಜಿಗಳ ಆದರ್ಶದ ಹಾಗು ಅವರ ಬೋದನೆಗಳ ಅಂಶಗಳ ಆಧಾರದ ಮೇಲೆ ನಿರ್ಮಿಸಲಾದ ದೇವಾಲಯ. " ಸ್ವಾಮೀ ನಾರಾಯಣ"  ರನ್ನು "ಸಹಜಾನಂದ್  ಸ್ವಾಮೀ " ಎಂದೂ ಸಹ ಉಲ್ಲೇಖಿಸಲಾಗಿದೆ. 1781  ರಿಂದ 1830 ರವರೆಗೆ ಇವರ ಕಾಲಾವಧಿ,  ವೈಷ್ಣವ ಪಂಥಕ್ಕೆ ಸೇರಿದ ಇವರು ತಮ್ಮ ಜ್ಞಾನ ಪರ್ಯಟನೆ ಸಮಯದಲ್ಲಿ ಕಂಡ ವಿಚಾರಗಳನ್ನು  ಸಂಗ್ರಹಿಸಿ  ತನ್ನದೇ ಒಂದು ಪಂಥ ಸ್ಥಾಪಿಸಿ ಮಹಿಮೆ ಸಾರುತ್ತಾರೆ. ಉತ್ತರ ಭಾರತದಲ್ಲಿ  ಅವರ ಅನುಯಾಯಿಗಳು ಬಹಳ ಇದ್ದಾರೆ.ಸುಮಾರು ಒಂದು ನೂರು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವನ್ನು ದೆಹಲಿಯಲ್ಲಿ 6  ನವೆಂಬರ್ 2005  ರಲ್ಲಿ ಅನಾವರಣ ಗೊಳಿಸಲಾಯಿತು . ಸುಮಾರು  7000 ಕ್ಕೂ ಮೀರಿದ ಕುಶಲ ಕರ್ಮಿಗಳು ಇಲ್ಲಿ ನಮ್ಮ ಆಲೋಚನೆಗೆ  ನಿಲುಕದ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ .
ರಾತ್ರಿವೇಳೆಯಲ್ಲಿ ಕಂಡುಬರುವ  ನೋಟ
ದೇವಾಲಯದ ಸುತ್ತ ಇರುವ ಗಜ ಪಡೆಯ ವಿವಿಧ ಶೈಲಿಯ ದರ್ಶನ.

ಯಮುನಾ ನದಿಯ ದಡದಲ್ಲಿರುವ ಈ ಭವ್ಯ ಸುಂದರ  "ಅಕ್ಷರ ಧಾಮ"ದೆಹಲಿಗೆ ಬರುವ ಶೇಕಡಾ 70 ರಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಗುಲಾಬಿ ಕಲ್ಲು ,  ಅಮೃತ ಶಿಲೆಗಳಿಂದ ಸಿಂಗರಿಸಿದ ವಿಶಿಷ್ಟ ದೇವಾಲಯ ಎಂತಹ ಮನಸನ್ನೂ ಪ್ರಪುಲ್ಲ ಗೊಳಿಸುವ ಮಾಂತ್ರಿಕತೆ ಹೊಂದಿದೆ. .ವಿಶಾಲವಾದ ಆವರಣಗಳು,  ನವರಂಗಗಳು ,ದೇವಾಲಯದ ಹೊರಗೆ ಕಾಣುವ ಕುಸುರಿ ಕೆಲಸ , ಅದ್ಭುತವಾಗಿ ನಿಮ್ಮನ್ನು ಮಾಯಾಲೋಕದೊಳಗೆ  ಕರೆದೊಯ್ಯುತ್ತದೆ. ದೇವಾಲಯದ ಸುತ್ತ ಗಜ ಪಡೆಯ ವಿವಿಧ ಮೂರ್ತಿಗಳ ಸುಂದರ ಕೆತ್ತನೆಯ  ಅನಾವರಣ   ಕೆತ್ತಿರುವ ಶಿಲ್ಪಿಗೆ ಆನೆಗಳ ಜೀವನ ಶೈಲಿಯ  ಬಗ್ಗೆ ಇರುವ ಅಪಾರ ಅರಿವಿನ ದರ್ಶನ ಮಾಡಿಸಿ ವಿಸ್ಮಯ ಗೊಳಿಸುತ್ತದೆ.
ಸುಂದರ ಸ್ವರ್ಣ ಮೂರ್ತಿಗಳು
ದೋಣಿವಿಹಾರದಲ್ಲಿ  ಕಂಡು ಬರುವ ದೃಶ್ಯ.

ಒಳಗಡೆ  ದೇವಾಲಯದಲ್ಲಿ ಸ್ವರ್ಣ ಮೂರ್ತಿಗಳ ದರ್ಶನ ಆಗುತ್ತದೆ , ಅಲ್ಲಿಯೂ ಸಹ  ಕುಶಲಕರ್ಮಿಗಳು ಮೂಡಿಸಿರುವ ಕಲಾವೈಭವ ದರ್ಶನವಾಗುತ್ತವೆ. ಸೀತಾರಾಮ, ರಾಧಾಕೃಷ್ಣ , ಶಿವ ಪಾರ್ವತಿ, ಲಕ್ಸ್ಮಿನಾರಾಯನ ಮೂರ್ತಿಗಳ ಸೌಂದರ್ಯವನ್ನು ನೋಡಿಯೇ ತೀರಬೇಕು.ನಯನ ಮನೋಹರವಾದ ಮೂರ್ತಿಗಳು ನಮ್ಮಲ್ಲಿ ಅರಿವಿಲ್ಲದೆ ಭಕ್ತಿಭಾವನೆ ಮೂಡಿಸುತ್ತವೆ. ಇನ್ನು ದೇವಾಲಯದ ಹೊರ ಆವರಣದಲ್ಲಿರುವ ದೋಣಿ ವಿಹಾರ, ನಿಮಗೆ ಮತ್ತೊಂದು ಲೋಕದ ದರ್ಶನ ಮಾಡಿಸಿ ಜೀವನ ವಿಧಾನ ತಿಳಿಸುತ್ತದೆ.
ಚಿತ್ತಾರದ ಚಿಲುಮೆಗಳು.
ಹೊಸ ಲೋಕ
ರಾತ್ರಿ ವೇಳೆ ಚಿತ್ತಾರ ಬಿಸಿಸುವ ಚಿಲುಮೆಗಳ ಹಗಲಿನ ನೋಟ

ಮತ್ತೊಂದು ವಿಶೇಷ ಇಲ್ಲಿ ನಿಮಗೆ ನೋಡಲು ಸಿಗುವುದು ಸುಂದರವಾದ ನೀರಿನ ಚಿತ್ತಾರ ಬಿಡಿಸುವ ಚಿಲುಮೆಗಳು  ರಾತ್ರಿವೇಳೆ ಇವು ನಿಮಗೆ ಸ್ವರ್ಗ  ದರ್ಶನ ಮಾಡಿಸುತ್ತವೆ . ರಾತ್ರಿ ವೇಳೆ ಜಲ ಚಿತ್ತಾರ ಮೂಡಿಸುವ ಚಿಲುಮೆಗಳ  ಪ್ರದೇಶ ಹಗಲಿನ ವೇಳೆ ಮತ್ತೊಂದು ರೀತಿಯ ಸುಂದರ ವಿನ್ಯಾಸದ  ದರ್ಶನ ಮಾಡಿಸಿತು., ಇಡೀ  ದೇವಾಲಯ ನೋಡಲು ನಿಮಗೆ ಕನಿಷ್ಠ ಮೂರು ದಿನಗಳ  ಕಾಲಾವಕಾಶ ಬೇಕಾಗುತ್ತದೆ. ನಮಗೆ ಸಿಕ್ಕ ಸಮಯದಲ್ಲಿ ಸಾಧ್ಯವಾದಷ್ಟು ನೋಡಿ  ಅಲ್ಲೇ ಇದ್ದ ಉಪಹಾರ ಮಂದಿರದಲ್ಲಿ ಲಘು ಉಪಹಾರ  ಸೇವಿಸಿ ಹೊರಬಂದು ಕೌಂಟರ್ ನಲ್ಲಿ ಬಿಟ್ಟಿದ್ದ ನಮ್ಮ ಕ್ಯಾಮರಾ , ಮೊಬೈಲ್ ಮುಂತಾದ ಸಾಮಗ್ರಿಗಳನ್ನು ವಾಪಸ್ಸು ಪಡೆದು ಹೊರನದೆವು.

ಬ್ಲಾಗ್ ಮಿತ್ರರ  ಆತ್ಮೀಯ ಪ್ರೀತಿಯ  ನಗು

ಅಷ್ಟರಲ್ಲಿ ಬ್ಲಾಗ್ ಮಿತ್ರ . ಪ್ರವೀಣ್ ಗೌಡರ ಕರೆ ಬಂದಿತು. "ಬಾಲೂಜಿ ನಾನು ಹಾಗು ಸೀತಾರಾಮ್ ನಿಮ್ಮನ್ನು  ಇವತ್ತು ಸಂಜೆ ಮೀಟ್ ಮಾಡುತ್ತೇವೆ"  ಎಂದು ಹೇಳಿದ ಅವರು ನನಗೆ ಮತ್ತೊಂದು ಸಂತಸಗಳಿಗೆಯ ಉಡುಗೊರೆ ನೀಡಲು ಬರುತ್ತಿದ್ದರು. ಅಂದಿನ ಕೋರ್ಟ್ ಕೆಲಸ ಮುಗಿಸಿ ಮಾರನೆಯದಿನಕ್ಕೆ  ವಿಮಾನ ಟಿಕೆಟ್ ಬುಕ್ ಮಾಡಿ  ಸಂಜೆ ರೂಂ ಗೆ ಬಂದ ನನಗೆ ಪ್ರವೀಣ್ ಗೌಡ ಹಾಗು ಸೀತಾರಾಂ ರವರ  ಆಗಮನ ಬಹಳ ಸಂತಸ ನೀಡಿತು. ನಾನಿದ್ದ ಜಾಗದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಿ.ಮಿ.ದೂರದಿಂದ ನನ್ನನ್ನು ನೋಡಲು ಬಂದ ಈ ಇಬ್ಬರು ಮಹನೀಯರ ಪ್ರೀತಿಗೆ  ಶರಣಾದೆ.
ಯಾವ ಜನ್ಮದ ಗೆಳೆತನ  
ನನ್ನ ಜೊತೆ ಓದಲಿಲ್ಲ, ನೆರೆ ಹೊರೆಯವರಲ್ಲಾ, ನೆಂಟರಲ್ಲಾ ಆದರೆ ಬ್ಲಾಗ್ ಲೋಕದ ಮೂಲಕ ಬೆಸೆದುಕೊಂಡ ಗೆಳೆತನ  ಹೆಮ್ಮರವಾಗಿದೆ . ಆಗಮಿಸುತ್ತಿದ್ದಂತೆ ಆತ್ಮೀಯ ನಗುವಿನೊಡನೆ ಪ್ರೀತಿಯ ಅಪ್ಪುಗೆ  ಪರಸ್ಪರ ಕುಶಲೋಪರಿ , ಮಾತು, ಹರಟೆ, ತುಂಟಾಟ , ನಗು ಇವುಗಳಲ್ಲಿ  ಮಿಂದುಹೋದೆವು. ದೆಹಲಿಗೆ  ಬಂದಿದ್ದಕ್ಕೆ ಸಾರ್ಥಕವಾಗಿತ್ತು  ಈ ಗೆಳೆಯರ ಜೊತೆ ಕಳೆದ ಸಮಯ.ನಂತರ ಪರಸ್ಪರ ಫೋಟೋ ತೆಗೆದು  ವಿಧಾಯ ಹೇಳುವ ಸಮಯ ಬಂದಿತು  ಮನದಲ್ಲಿ ಇಂತಹ ಗೆಳೆಯರನ್ನು ಪಡೆದ ಬಗ್ಗೆ ಖುಷಿಯಾಗಿತ್ತು.  ಅಷ್ಟರಲ್ಲಿ  ನನ್ನ ಮೊಬೈಲ್  ಸದ್ದು ಮಾಡಿತ್ತು.  ಹೆಂಡತಿ ..........ಕಾಲ್ ಮಾಡ್ತಾ ಇದ್ದಳು.!!!!

11 comments:

Deep said...

Wow.. balu.. Aksharadhamada baggeya parichaya tumba channagi bandide..


Fountain show is fantastic ..

ನಾವುಗಳು ಹೋದಾಗ ಪಂಚಭೂತ ಗಳನ್ನು ಬಿಂಬಿಸುವ ಷೋ ನೋಡಿದ್ದೆವು..

blog mitrara photo haki namage mukha parichaya madisiddakke dhanyavadagalu.

Dr.D.T.Krishna Murthy. said...

ಅಕ್ಷರ ಧಾಮದಂತಹ ಅದ್ಭುತ ಕಲಾವಂತಿಕೆಯ ದೇವಸ್ಥಾನವನ್ನುಪರಿಚಯ ಮಾಡಿಸಿಕೊತ್ತಿದ್ದಕ್ಕೆ ಧನ್ಯವಾದಗಳು ಬಾಲೂ ಸರ್.ಫೋಟೋಗಳು ಮತ್ತು ಬರಹ ತುಂಬಾ ಚೆನ್ನಾಗಿವೆ.ಅಭಿನಂದನೆಗಳು.

ರವಿ ತಿರುಮಲೈ said...

Beautiful article and photos. It was as if were being taken for a round around the Akshardhaam temple. Thanks a lot Balu.

Badarinath Palavalli said...

ಅಕ್ಷರಧಾಮದ ಬಗೆಗಿನ ಈ ಲೇಖನ ಸವಿವರ ಸಚಿತ್ರ ಬರಹ ಸಂಗ್ರಹ ಯೋಗ್ಯ.

ದೇಗುಲಗಳು ಬಯೋತ್ಪಾದಕರ ಗುರಿಯಾಗಿರುವುದು ವಿಪರ್ಯಾಸವೇ ಸರಿ.

ಮುಂದಿನ ಬಾರಿ ದೆಹಲಿ ಪ್ರವಾಸದ ಅವಕಾಶ ಬಂದಾಗ ಈ ಮಾಲಿಕೆಯ ಎಲ್ಲಾ ಸ್ಥಳಗಳನ್ನು ನೋಡಲು ಹೊರಡುತ್ತೇನೆ.

ಸೀತಾರಾಂ ಸಾರ್ ಮತ್ತು ಪ್ರವೀಣ್ ಸಾರ್ ಒಳ್ಳೆಯ ಗೆಳೆಯರ ಬಳಗ.

ಮುಂದಿನ ಕಂತಿಗೆ ಕಾಯುತ್ತಿದ್ದೇನೆ.

Srikanth Manjunath said...

ವಾಸ್ತುಶಿಲ್ಪ ಬಿಡಿಸಿರುವ ದೇವಾಲಯದಲ್ಲಿ ನೀವು ಅಕ್ಷರಗಳಿಂದ ಧಾಮವನ್ನೇ ಸೃಷ್ಟಿ ಮಾಡಿದೀರಾ ಬಾಲು ಸರ್..ಬಲು ಸೊಗಸಾಗಿದೆ..ಮೂರನೇ ಕಣ್ಣಿಗೆ ಅವಕಾಶವಿಲ್ಲದಿರುವುದು ಬೇಸರ ಎನಿಸಿದರು..ಕೆಲವೊಮ್ಮೆ..ಬರಿ ಚಿಕ್ಕ ಮೂರನೇ ಕಣ್ಣಿನಲ್ಲಿ ಸೆರೆಹಿಡಿಯಲು ಪ್ರಯತ್ನಿಸಿ..ವಿಶಾಲ ಕಣ್ಣಿಗೆ ಕಾಣುವ ಸೌಂದರ್ಯವನ್ನು ಮರೆಯುತ್ತೇವೆ..ಒಂದು ತರಹ ಒಳ್ಳೆಯದು ಈ ನಿರ್ಬಂಧ...ಸೊಗಸಾದ ದರ್ಶನ ದಿಲ್ಲಿಯದು...

Ashok.V.Shetty, Kodlady said...

ಬಾಲು ಸರ್ ,

ಅಕ್ಷರಧಾಮ ದೇವಾಲಯದ ಚಿತ್ರಗಳು ಹಾಗೂ ಅವುಗಳ ಬಗ್ಗೆ ನೀವು ನೀಡಿರುವ ವಿವರಗಳು ನಮ್ಮನ್ನು ಆ ಸುಂದರ ದೇವಲಾಯದ ದರ್ಶನವನ್ನು ಇಲ್ಲಿಂದಲೇ ಮಾಡಿಸಿದ ಹಾಗೆ ಇತ್ತು.....ಸುಂದರ ಲೇಖನ......ಜೊತೆಗೆ ಬ್ಲಾಗ್ ಮಿತ್ರರ ಫೋಟೋ ನೋಡಿ ಖುಷಿ ಆಯಿತು.....ಈ ಬ್ಲಾಗಿಗರ ಬಂಧ ಹೀಗೆ ಮುಂದುವರಿಯಲಿ.....ಜೈ ಹೊ......

ಗಿರೀಶ್.ಎಸ್ said...

ಸರ್,ನಿಮ್ಮ ದಿಲ್ಲಿ ಪ್ರಯಾಣದ ಅನುಭವಗಳು ಫೋಟೋಗಳು ಹಾಗೂ ಎಲ್ಲಾ ಲೇಖನಗಳು ಓದಿ ಸಂತೋಷವಾಯಿತು..... ಪ್ರತಿಯೊಂದು ಸ್ಥಳದ ವಿಶೇಷತೆ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ.... ನಿಮ್ಮಿಂದ ಪ್ರವಾಸದ ಬಗ್ಗೆ ಕಲಿಯಬೇಕಾದ್ದು ತುಂಬಾ ಇದೆ ನಮಗೆ... ಅದರಲ್ಲೂ ಚಾಂದಿನಿ ಚೌಕ ಕುತುಬ್ ಮಿನಾರ್ ಬಗ್ಗೆ ಎಷ್ತೋಸ ವಿಷಯಗಳು ತಿಳಿದವು ನಿಮ್ಮಿಂದ.... ನಮಗೆ ಅವುಗಳ ದರ್ಶನ ಭಾಗ್ಯ ಯಾವಾಗಲೋ?

Ittigecement said...

ಬಾಲಣ್ಣ...

ಅಕ್ಷರ ಧಾಮ ತಾಜ್ ಮಹಲ್ಲಿಗಿಂತಲೂ ಚೆನ್ನಾಗಿದೆ...
ಹೋಲಿಕೆ ಮಾಡುವದು ಸರಿ ಅಲ್ಲದಿದ್ದರೂ...
ನನಗೆ ತತಕ್ಷಣ ಹಾಗೆ ಅನ್ನಿಸಿತು...

ಅಕ್ಷರ ಧಾಮ ನೋಡಿ "ಮನುಷ್ಯ ಬಯಸಿದರೆ ಏನೂ ಬೇಕಾದರೂ ಸೃಷ್ಟಿಸ ಬಲ್ಲ" ಅಂತ ಅನ್ನಿಸಿತು...

ಫೋಟೊ ಲೇಖನ ತುಂಬಾ ಸೊಗಸಾಗಿ ಮೂಡಿ ಬಂದಿದೆ.. ಅಭಿನಂದನೆಗಳು..

ಬ್ಲಾಗ್ ಸಹೋದರ ಪ್ರವೀಣ್ ನಮಗೂ ಜೊತೆಯಾಗಿ ಬಂದಿದ್ದರು..
ಹುಡುಗ ನಗೋದು ನೋಡಿ ಹೊಟ್ಟೆಕಿಚ್ಚಾಯಿತು..
ಈ ಹುಡುಗನಿಗೆ ಆದಷ್ಟು ಬೇಗ ಮದುವೆಯಾಗಲಿ ಎಂದು ಎಲ್ಲರೂ ಹಾರೈಸೋಣ...

Unknown said...

TUMBA DHANYAVADAGALU BALU SIR NAMMANU DELHI KAREDOYDAHAGITTU
NAVU ELLE KUTU DELHI SUTTIDA ANUBAVAVAAYITU

Unknown said...

TUMBA DHANYAVADAGALU BALU SIR NAMMANU DELHI KAREDOYDAHAGITTU
NAVU ELLE KUTU DELHI SUTTIDA ANUBAVAVAAYITU

Harini Narayan said...

ಇಂದಿಗೂ ನನಗೆ ದೆಹಲಿ ಎಂದೊಡನೆ ನೆನಪಾಗುವುದು, ಅಕ್ಷರಧಾಮ ಮಾತ್ರ . ನಮ್ಮ ರಾಷ್ಟ್ರದ ಸಂಸ್ಕೃತಿಯ ಪ್ರತಿಬಿಂಬ !!