|
ವನಸಿರಿಯ ನಡುವೆ ದೇವಾಲಯ. |
ಹಸಿವಿನಿಂದ ಕಂಗಾಲಾಗಿ ಹೊನ್ನ ಮೇಟಿ ಬೆಟ್ಟ ದಿಂದ ಹೊರಟ ನಾವು ಗಿರಿಗಳನ್ನು ನಿಧಾನವಾಗಿ ಇಳಿಯ ತೊಡಗಿದೆವು.ಮೊದಲೇ ನಿತ್ರಾಣ ಯಾರಿಗೂ ಮಾತಾಡುವ ಆಸಕ್ತಿಹಾಗು ಶಕ್ತಿ ಇರಲಿಲ್ಲ.ಮಾರ್ಗ ಮಧ್ಯದಲ್ಲಿ ಬಾಲು, ಬಾಲು ಬೇಗ ಆ ಪಕ್ಷಿ ಫೋಟೋ ತೆಗೀರಿ ಅಂದ್ರೂ ವೇಣು , ಎಲ್ಲಿ ಎಲ್ಲಿ ಅಂತಾ ನಾನು ಹುಡುಕೋ ಅಷ್ಟರಲ್ಲಿ ಆ ಹದ್ದು ಹಾರಿಹೋಗಿತ್ತು. ಹಸಿವಿಂದ ಬಳಲಿದ್ದ ದೇಹ ಹಾಗು ನನ್ನ ಕಣ್ಣುಗಳು ಮುಂದೆಯೇ ಕುಳಿತಿದ್ದ ದೈತ್ಯಾಕಾರದ ಆ ಹದ್ದನ್ನು ಗುರುತಿಸಲು ವಿಫಲವಾಗಿತ್ತು.
|
ಮನಸೆಳೆವ ನೋಟ ನೀಡಿದ ಕೋಡುಗಲ್ಲುಗಳು |
ಪಯಣ ಸಾಗಿತ್ತು ಹಾದಿಯಲ್ಲಿ ಹಸಿವನ್ನು ಮರೆಸಿ ಖುಶಿನೀಡಿದ ಎರಡು ಕೋಡುಗಲ್ಲುಗಳು ಮನಸೆಳೆದವು ಹಾಗು ಹೀಗೂ ಹೊನ್ನ ಮೇಟಿ ಎಸ್ಟೇಟ್ ತಲುಪಿ ನಿಟ್ಟುಸಿರು ಬಿಟ್ಟೆವು.ಆ ಜಾಗ ತಲುಪಿದ ಕೂಡಲೇ "ಸಾ ಇಲ್ಲೇ ಇರಿ ಇಲ್ಲೊಂದು ದೇವಸ್ತಾನ ಐತೆ ನೋಡೋರಂತೆ, " ಅಂತಾ ಅರಣ್ಯ ಇಲಾಖೆ ಸಿಬ್ಬಂಧಿ ಪೂಜಾರಿಯನ್ನು ಕರೆಯಲು ತಯಾರಾಗುತ್ತಿದ್ದರು.ಹೊಟ್ಟೆಯಲ್ಲಿ ಹಸಿವಿನ ಮಾಯೆ ಆವರಿಸಿದ್ದ ಕಾರಣ ಅವರನ್ನು ತಡೆದು ಮೊದಲು ಅಲ್ಲೇ ಕಾಣಿಸಿದ ಸಣ್ಣ ಪೆಟ್ಟಿಗೆ ಅಂಗಡಿಯಲ್ಲಿ ಬಿಸ್ಕತ್ತು, ಬಾಳೆಹಣ್ಣು , ಟೀ ಸೇವಿಸಿ ಸ್ವಲ್ಪ ಮಟ್ಟಿಗೆ ಹಸಿವನ್ನು ತಣಿಸಿದೆವು.ಅರಣ್ಯ ಸಿಬ್ಬಂಧಿ ಪುರೋಹಿತರನ್ನು ಕರೆತರುವುದಾಗಿ ಹೇಳಿ ಹೊರಟರು ,ನಾವು ಸುತ್ತ ಮುತ್ತ ಪ್ರದೇಶದ ವೀಕ್ಷಣೆಯಲ್ಲಿ ತೊಡಗಿದೆವು.
|
ಗಣಪತಿ ಗುಡಿ |
|
ಗಣಪತಿ ಬಪ್ಪ ಮೊರ್ಯ |
ಅಲ್ಲೇ ಇದ್ದ ಒಂದು ಪುಟ್ಟ ಗಣಪತಿ ಗುಡಿ ಕಣ್ಣಿಗೆ ಬಿತ್ತು ಹತ್ತಿರ ಹೋಗಿ ದರ್ಶನ ಪಡೆದೆವು ಸುಂದರ ಮೂರ್ತಿ ಆ ಪ್ರದೇಶದ ಹಾದಿಯ ಕೇಂದ್ರ ಭಾಗದ ವೃತ್ತದಲ್ಲಿ ನೆಲೆಗೊಂಡಿತ್ತು. ಅಷ್ಟರಲ್ಲಿ ಪುರೋಹಿತರ ಆಗಮನವಾಯಿತು, ಪರಸ್ಪರ ಪರಿಚಯ ಆದನಂತರ ಬನ್ನಿ ದೇವಾಲಯ ನೋಡೋಣ. ಅಂದರು ದಾರಿಯಲ್ಲಿ ಹೋಗುತ್ತಾ ಹೋಗುತ್ತಾ ತಾವು ಶೃಂಗೇರಿ ಕಡೆಯವರೆಂದೂ , ಈ ಎಸ್ಟೇಟ್ ನಲ್ಲಿ ರೈಟರ್ ಹಾಗು ಈ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಣೆ ಮಾಡುವುದಾಗಿ ತಿಳಿಸಿ ಆತ್ಮೀಯವಾಗಿ ಮಾತಾಡಿದರು.
|
ಸುಂದರ ದೇವಾಲಯ ನೋಟ |
ಸುಂದರ ದೇವಾಲಯದ ಅನಾವರಣ ಸುಂದರ ಪರಿಸರದ ನಡುವೆ ನಮಗೆ ಹೊಸ ಚೈತನ್ಯ ತಂದಿತು.ಆದರೂ ಈ ಭವ್ಯ ದೇವಾಲಯವನ್ನು ಈ ಕಾಡಿನಲ್ಲಿ ನಿರ್ಮಿಸಿದ್ದು ಯಾರು, ಇಲ್ಲಿಗೆ ಹೆಚ್ಚಿಗೆ ಜನ ಬರೋದಿಲ್ಲ , ದೇವಾಲಯ ನಿರ್ವಹಣೆ ಹೇಗೆ ಮಾಡ್ತಾರೆ ಎಂಬ ಅಚ್ಚರಿ ಉಂಟಾಯಿತು. ಈ ದೇವಾಲಯವನ್ನು ಹೊನ್ನ ಮೇಟಿ ಎಸ್ಟೇಟಿನ ಮಾಲಿಕರಾದ ಬಿರ್ಲಾ ಸಂಸ್ಥೆಯವರು ನಿರ್ಮಿಸಿದ್ದಾಗಿ ತಿಳಿದುಬಂತು. ದೇವಾಲಯವನ್ನು ತಮ್ಮ ಖಾಸಗಿ ಉಪಯೋಗಕ್ಕಾಗಿ ಕಟ್ಟಿಸಿದ್ದು,ಸಾರ್ವಜನಿಕರಿಗೂ ಪ್ರವೇಶಇರುವುದಾಗಿ ಅಲ್ಲಿನ ಜನ ತಿಳಿಸಿದರು.
|
ಕಾಡಿನಲ್ಲಿ ನೆಲೆನಿಂತ ವೆಂಕಟರಮಣ |
|
ಕಾಡಿನ ಸೊಬಗಿನ ತೀರ್ಥ ಪ್ರಸಾದ |
ಅರ್ಚಕರು ನಮ್ಮ ಹೆಸರಿನಲ್ಲಿ ಪೂಜೆಮಾಡಿ ಮಂಗಳಾರತಿ,ತೀರ್ಥ ಪ್ರಸಾದ ನೀಡಿ ಹರಸಿದರು.ಸರಿ ದೇವಾಲಯ ವೀಕ್ಷಣೆ ಮಾಡಲು ಅಲ್ಲಿನ ಚಿತ್ರ ತೆಗೆಯಲು ಅನುಮತಿಪಡೆದು ಕೆಲವು ಚಿತ್ರಗಳನ್ನು ತೆಗೆದೆವು, ಸುಮಾರು ಕೋಟಿ ಬೆಲೆಬಾಳುವ ಅಮೃತ ಶಿಲೆಯಿಂದ ಅಲಂಕೃತ ಗೊಂಡ ದೇವಾಲಯ ಮನಸೂರೆಗೊಂಡಿದ್ದು ಸುಳ್ಳಲ್ಲಾ , ದೇವಾಲಯ ಪ್ರದಕ್ಷಿಣೆ ಹಾಕುವಾಗ
|
ಪ್ರದಕ್ಷಿಣೆ ಪಥ |
|
ಗರುಡ |
|
ಶಂಖ |
|
ಚಕ್ರ |
|
ಓಂ ಕಲಾಕೃತಿ |
ಪ್ರದಕ್ಷಿಣೆ ಮಾಡಲು ಸುಂದರ ಆವರಣ ,ಗರುಡ ,ಶಂಖ , ಚಕ್ರ, ಓಂ ಮುಂತಾದ ಸುಂದರ ಕಲಾಕೃತಿಗಳು ಮನಸೆಳೆದವು.ಸುಂದರ ನೋಟ ಮನ ಸೂರೆಗೊಂಡು ಹರುಷದಿಂದ ಹೊರಡಲು ತಯಾರಾದೆವು
|
ಶುಭ ವಿದಾಯ |
.ನಮ್ಮನ್ನು ಬೀಳ್ಕೊಟ್ಟ ಪುರೋಹಿತರು ದೇವಾಲಯದ ಬಾಗಿಲನ್ನು ಮುಚ್ಚುತಿದ್ದರು ನಮ್ಮ ಬರುವಿಕೆಗಾಗಿ
|
ಎಷ್ಟು ಹೊತ್ತು ಕಾಯೋದು ಇವರನ್ನಾ |
ಗನ್ ಹಿಡಿದು ಅರಣ್ಯ ಸಿಬ್ಬಂದಿ ಕಾಯುತ್ತಿದ್ದರು.........................!!!!!
8 comments:
ಚೆಂದದ ಗುಡಿ .....ಅರಣ್ಯದ ಮಧ್ಯದಲ್ಲಿ...ಹುಡುಕೋ...ಬಾಲುರವರೆ!
ಬಿರ್ಲಾಗಳ ಅಭಿರುಚಿಯೇ ಅಭಿರುಚಿ!
ಉತ್ತಮ ಚಿತ್ರ ಲೇಖನ ಬಾಲಣ್ಣ
@ ಸೀತಾರಾಮ .ಕೆ.:-) ಧನ್ಯವಾದಗಳು ಸರ್
@ಬದರಿನಾಥ್ ಪಲವಳ್ಳಿ:-) ಹೌದು ನಿಮ್ಮ ಮಾತು ನಿಜ ಆ ದಟ್ಟ ಕಾಡಿನಲ್ಲಿ ಬಹಳ ಹಣ ಖರ್ಚು ಮಾಡಿ ಈ ವೈಭವದ ದೇವಾಲಯ ಕಟ್ಟಲಾಗಿದೆ.
ಬಾಲು ಸರ್ ....ಕಾಡಿನೊಳಗೆ ದೇವಾಲಯ....ಅಚ್ಚರಿ ಆದರೂ ನಿಜ......ಸುಂದರ ಚಿತ್ರಗಳೊಂದಿಗೆ ಸೊಗಸಾದ ಲೇಖನ ,,,,,
@ashokkodlady :-) ಹೌದು ಸರ್ ಅಲ್ಲಿನ ಪರಿಸರವೇ ಹಾಗಿದೆ. ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.
ಬಾಲು ಸರ್,
ಕಾಡಿನ ನಡುವೆ ಒಂದು ಅದ್ಬುತ ದೇವಾಲಯ. ಅದನ್ನು ನಿರ್ಮಿಸಿದ ಬಿರ್ಲಾಗಳಿಗೆ ನಮೋ ನಮಃ. ಅಲ್ಲಿನ ಪರಿಶುದ್ಧ ವಾತಾವರಣ. ಫೋಟೊಗ್ರಫಿ ಎಲ್ಲಾ ಇಷ್ಟವಾಯಿತು...ಮುಂದುವರಿಸಿ ಕಾಯುತ್ತೇನೆ.
@ ಶಿವೂ.ಕೆ.:-) ಮೆಚ್ಚುಗೆ ಮಾತಿಗೆ ಧನ್ಯವಾದಗಳು.
Post a Comment