|
ಮುಂಜಾವಿನ ಚಳಿಗೆ ಬೆಂಕಿಯ ಆಸರೆ. |
ಬುರುಡೆ ಕ್ಯಾಂಪಿನಲ್ಲಿ ರಾತ್ರಿ ಮಲಗಿದ ನಮಗೆ ಬಳಲಿಕೆಯಿಂದ ನಿದ್ದೆ ಬಂದು ಎಚ್ಚರವಾದಾಗ ದೂರದಲ್ಲಿ ಹಕ್ಕಿಗಳ ಚಿಲಿಪಿಲಿ , ನವಿಲಿನ ಕೂಗು ಕೇಳುತ್ತಲಿತ್ತು , ಕ್ಯಾಂಪಿನ ಹೊರಗೆ ಬಂದು ನೋಡಿದರೆ ಚಳಿ ಚಳಿ ನಡುಕ ಶುರು ಆಯ್ತು ,ಅಡಿಗೆ ಮನೆ ಮುಂದೆ ಆನೆ ಬೆಂಕಿ [ ರಾತ್ರಿವೇಳೆ ಕಾಡು ಪ್ರಾಣಿಗಳು ಹತ್ತಿರ ಬರದಿರಲಿ ಎಂದು ಹಾಕುವ ಬೆಂಕಿ..... ನಾವು ಅದನ್ನು ಆನೆ ಬೆಂಕಿ ಅಂದೆವು.] ಉರಿಯುತ್ತಿತ್ತು.ನಾವೂ ಹತ್ತಿರ ಹೋದೆವು ಬೆಂಕಿಯ ಹಿತವಾದ ಶಾಖಕ್ಕೆ ದೇಹವನ್ನು ಒಡ್ಡಿ ಕುಳಿತೆವು, ಸಾ ಟೀನೋ..... ಕಾಪಿನೋ .. ಅಂದರು ಗಾರ್ಡ್, ಚಳಿಯಿದೆ ಕಾಫಿನೇ ಮಾಡಿ ಅಂದೆವು , ತೆಗೆದು ಕೊಂದು ಹೋಗಿದ್ದ ಸ್ಕಿಮ್ಮೆಡ್ ಮಿಲ್ಕ್, ಹಾಗು ಬ್ರೂ ಕಾಫಿಪುದಿಯಿಂದ ಕ್ಷಣದಲ್ಲಿ ಕಾಫಿ ತಯಾರ್, .......ಬಿಸಿ ಬಿಸಿ ಕಾಫಿ ಕುಡಿದು ತಯಾರಾದೆವು,ಇವತ್ತು "ಹೊನ್ನ ಮೇಟಿ ಕಲ್ಲು " ಕಾರ್ಯಕ್ರಮ ಇದೆ ಎಷ್ಟೊತ್ತಿಗೆ ಹೊರಡೋದು , ಅದು ಎಷ್ಟು ದೂರ ಇದೆ ,ಮಧ್ಯಾಹ್ನ ಊಟಕ್ಕೆ ಇಲ್ಲೇ ಬರಬಹುದಾ ಅಂತಾ ನೂರಾರು ಪ್ರಶ್ನೆ ನಮ್ಮಿಂದ ಆರಣ್ಯ ಇಲಾಖೆ ಸಿಬ್ಬಂಧಿಗೆ ಅವರು ಇನ್ನೆನುತಿಂಡಿ ತಿಂದು ಹೊರಡೋಣ ಸರ್ , "ಹೊನ್ನ ಮೇಟಿ ಕಲ್ಲು" ಇಲ್ಲೇ ಹತ್ರಾ ಮಧ್ಯಾಹ್ನ ಊಟಕ್ಕೆ ಇಲ್ಲೇ ಇರಬಹುದು ಅಂದರು. ಸರಿ ಅಂತಾ ನಾವೂಸಿದ್ದರಾಗಿ ಬೆಳಗಿನ ಉಪಹಾರ, ಅವರೆಕಾಳಿನ.. ಉಪ್ಪಿಟ್ಟು,ಸ್ವಲ್ಪ ಸ್ವೀಟುಗಳು,ಕುರುಕಲು ತಿಂಡಿ, ಟೀ ಸೇವಿಸಿ ಸಿದ್ದರಾಗಿ ಕಾರಿನ ಬಳಿ ಬಂದೆವು.ಸಾ ಬೇಗ ಬಂದ್ಬಿಡಿ ಮಧ್ಯಾನ ಊಟಕ್ಕೆ ಅಂದರು ಒಬ್ಬರು ಗಾರ್ಡ್ , ಜೊತೆಯಲ್ಲಿ "ಹೊನ್ನ ಮೇಟಿ ಕಲ್ಲು" ತೋರಿಸಲು ಮತ್ತೊಬ್ಬರು ಸಿಬ್ಬಂದಿ ಬಂದರು, ಪಯಣ ಆರಂಭ.
ಕಾಡಿನ ಗೇಂ ರೂಟ್ ನಲ್ಲಿ ನಿಧಾನವಾಗಿ ಚಲಿಸಿತ್ತು ಸಫಾರಿ ಕಾರು.ದಾರಿಯುದ್ದಕ್ಕೂ ಕಾಡಿನ ಹಾದಿಯಲ್ಲಿ ಸುಂದರ ದೃಶ್ಯಗಳ ಅನಾವರಣ. ಕಾರಿನ ಸುಂದರ ಪುಷ್ಪಗಳ ದರ್ಶನ ನಡೆದಿತ್ತು.
|
ಸುಂದರ ವನಸಿರಿ |
|
ಹಸಿರಹೊದಿಕೆ ಹೊದ್ದ ಭೂರಮೆ |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
ಹೊನ್ನ ಮೇಟಿ ಕಲ್ಲು ನಾವಿದ್ದ ಬುರುಡೆ ಕ್ಯಾಂಪಿನಿಂದ ಸುಮಾರು ಇಪ್ಪತ್ತು ಕಿ.ಮಿ ದೂರವಿತ್ತು, ಹೆದ್ದಾರಿಗಳಲ್ಲಿ ಇದು ಕಾಲು ಘಂಟೆಯ ಹಾದಿಯಾದರೂ ಕಾಡಿನ ಬೆಟ್ಟಗಳನ್ನು ಬಳಸಿ ಸಾಗುವ ಗೇಂ ರೂಟಿನಲ್ಲಿ ಒಂದು ಕಿ.ಮಿ.ಕ್ರಮಿಸಲು ಕನಿಷ್ಠ ಹತ್ತು ನಿಮಿಷ ಬೇಕಾಗುತ್ತದೆ.ಹಾದಿಯ ಎರಡೂ ಬದಿಯ ಕಾಡಿನ ಒಳಗಿಂದ ಯಾವ ಕ್ಷಣದಲ್ಲಾದರೂ ಆನೆ, ಜಿಂಕೆ, ಹುಲಿ ,ಚಿರತೆ,ಕಾಟಿ, ಮುಂತಾದ ವನ್ಯ ಜೀವಿಗಳು ಸಾಗುವ ಹಾದಿಗೆ ಅಡ್ಡಲಾಗಿ ನುಗ್ಗಬಹುದು. ಹಾಗಾಗಿ ನಿಶ್ಯಬ್ದವಾಗಿ ಕ್ಯಾಮರ ಹಿಡಿದು ಕುಳಿತ್ತಿದ್ದೆವು, ವೇಣು ಮಾತ್ರ ತದೇಕ ಚಿತ್ತರಾಗಿ ವಾಹನ ಚಾಲನೆಯ ಕಾರ್ಯದಲ್ಲಿ ತಲ್ಲೀನರಾಗಿದ್ದರು.ದಾರಿಯಲ್ಲಿ ಪ್ರತ್ಯಕ್ಷವಾಯಿತು ಕಿತ್ತಲೆಮರ ಹಾಗು ಕಾಫಿ ಗಿಡಗಳ ಸಾಲು. ನಮಗೆ ಅಚ್ಚರಿ ಇದ್ಯಾರಪ್ಪಾ ಈ ದತ್ತ ಕಾಡಿನಲ್ಲಿ ಕಿತ್ತಳೆ ಹಾಗು ಕಾಫಿ ಬೆಳೆಯೋರು ಅಂತಾ , ವಿಚಾರಿಸಲಾಗಿ ಇದು ಬಿರ್ಲಾಸಂಸ್ಥೆಯ ಗುಂಪಿಗೆ ಸೇರಿದ "ಹೊನ್ನ ಮೇಟಿ ಎಸ್ಟೇಟ್" ಎಂದು.ಕಾಡಿನ ನಡುವೆ ಸಾವಿರಾರು ಎಕರೆ ಪ್ರದೇಶದಲ್ಲಿ ಹೊನ್ನ ಮೇಟಿ ಎಸ್ಟೇಟ್ ಇದೆ.ವಿಶ್ರಾಂತಿಗಾಗಿ ಇಳಿದ ನಾವು ಹಾಗೆ ಅದಾಡಿ ಅಲ್ಲಿದ್ದ ಸಿಬ್ಬಂದಿ ಅನುಮತಿ ಪಡೆದು ಗಿಡದಲ್ಲೇ ಹಣ್ಣಾದ ಕಿತ್ತಳೆ ಹಣ್ಣನ್ನು ಕಿತ್ತು ತಿಂದು ಖುಷಿಪಟ್ಟೆವು,
|
ಮರದಲ್ಲೇ ಹಣ್ಣಾದ ಕಿತ್ತಳೆ ಹಣ್ಣು |
ಅಕ್ಕ ಪಕ್ಕದ ಹಾದಿಯಲ್ಲಿ ಕಾಫಿ ಗಿಡದಿಂದ ಕಾಫಿ ಕಾಯಿ, ಹಾಗು ಹಣ್ಣುಗಳ ಘಮ ಘಮ ವಾಸನೆ ನಮ್ಮ ಮನಸನ್ನುಪ್ರಶಾಂತ ಗೊಳಿಸಿತ್ತು.
|
ಕಾಫಿ ಹಣ್ಣು ಹಾಗು ಕಾಯಿ ಹೊತ್ತ ಕಾಫಿಗಿಡ |
|
ಕಾಫಿ ಹಣ್ಣಿನ ಗೊಂಚಲು |
|
ಕಾಫಿ ಗಿಡದಲ್ಲಿ ಕಾಯಿಗಳ ನಡುವೆ ಹಣ್ಣಾದ ಕಾಫಿ ಹಣ್ಣು. |
ಅದ್ಯಾವ ಮಾಯದಲ್ಲೋ ನಮ್ಮಲ್ಲಿನ ಕೆಲವರಿಗೆ ಜಿಗಣೆಗಳು [ಇಂಬಳಿ ] ಕಾಲಿಗೆ ಹತ್ತಿದ್ದವು .ಅವುಗಳನ್ನು ಕೊಡವಿಕೊಂಡು ಪಯಣ ಮುಂದುವರೆಯಿತು.
|
ಕಡಿದಾದ ಹಾದಿಯಲ್ಲಿ |
ಮುಂದಿನ ಹಾದಿ ಬಹಳ ಕಷ್ಟದ ಹಾದಿಯೇ ಸರಿ , ವಾಹನ ಚಾಲಕರಿಗೆ ಈ ದಾರಿಯಲ್ಲಿ ಸಾಗಲು ಗಟ್ಟಿಯಾದ ಗುಂಡಿಗೆ ಬೇಕು ,ಸಮುದ್ರ ಮಟ್ಟದಿಂದ ಸುಮಾರು 2500 ಅಡಿಗಳಿಗೂ ಎತ್ತರದ ಬೆಟ್ಟಗಳ ಸಾಲಿನ ನಡುವೆ ಸಾಗುವ ಇಕ್ಕಟ್ಟಿನ ಹಾದಿ ಆಯತಪ್ಪಿದರೆ ಪಾತಾಳ ಕಾಣಿಸುತ್ತದೆ ನಾವೂ ಸಹ ಇಷ್ಟು ಎತ್ತರದ ಪ್ರದೇಶದಲ್ಲಿ ಕಾರು ಇಕ್ಕಟ್ಟಾದ ಹಾದಿಯಲ್ಲಿ ಚಲಿಸುವಾಗ ಕಾಣುತ್ತಿದ್ದ ಪ್ರಪಾತಗಳನ್ನು ನೋಡಿ ಉಸಿರು ಬಿಗಿಹಿಡಿದು ಮಿಸುಕಾಡದೆ ಕುಳಿತ್ತಿದ್ದೆವು. ಅರಣ್ಯ ಸಿಬ್ಬಂದಿ ಮಾತ್ರ ತನಗೂ ಇದಕ್ಕೂ ಸಂಬಂದ ವಿಲ್ಲ ಅಂತಾ ಸ್ಥಿತ ಪ್ರಜ್ಞನಂತೆ ಕುಳಿತಿದ್ದರು. ಇಂತಹ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೆ ವಾಹನ ಚಲಿಸಿದ ವೇಣುಗೋಪಾಲ್ ನಮ್ಮನ್ನು ಸುರಕ್ಷಿತವಾಗಿ ಹೊನ್ನಮೇಟಿ ಕಲ್ಲು ಪ್ರದೇಶ ತಲುಪಿಸಿದರು.
|
ಹೊನ್ನ ಮೇಟಿ ಕಲ್ಲಿನಿಂದ ಕಾಣುವ ಗಿರಿ ಶ್ರೇಣಿ |
ಹೊನ್ನ ಮೇಟಿ ಕಲ್ಲು ಬಿಳಿಗಿರಿ ರಂಗನ ಬೆಟ್ಟದ ಗಿರಿ ಶ್ರೇಣಿಯಲ್ಲೇ ಅತೀ ಎತ್ತರದ ಗಿರಿಪ್ರದೇಶ.ಇಲ್ಲಿ ಅರಣ್ಯ ಇಲಾಖೆಯ ಒಂದು anti poaching camp ಇದೆ. ಅಚ್ಚರಿಎಂದರೆ ಇಲ್ಲಿ ಬೆಟ್ಟದ ತುದಿಯಲ್ಲಿ ಕಲ್ಲಿನ ಮನೆ ನಿರ್ಮಿಸಲಾಗಿದೆ ಯಾವ ಪುಣ್ಯಾತ್ಮ ಕಟ್ಟಿದನೋ ಕಾಣೆ ಅಂಚಿನಲ್ಲಿ ಎತ್ತರದ ಬೆಟ್ಟದ ಮೇಲೆ ಒಂದು ಅಂಚಿನಲ್ಲಿ ಕಟ್ಟಲಾಗಿದೆ.
|
ಕಾಡು ಕಳ್ಳರ ತಡೆ ಕೇಂದ್ರ |
ಗೊತ್ತಿಲ್ಲದೇ ಸ್ವಲ್ಪ ಯಾಮಾರಿದರೂ ಪಾತಾಳ ಸೇರುವುದು ಗ್ಯಾರಂಟೀ . ಅಲ್ರೀ ಇಷ್ಟು ಎತ್ತರ ಬಂದು ಇಲ್ಲಿ ಯಾರು ಕಾಡು ಕಡೀತಾರೆ ರೀ , ಜೊತೆಗೆ ಇಷ್ಟು ಎತ್ತರಕ್ಕೆ ಯಾವ ಪ್ರಾಣಿ ಬರುತ್ತೆ ಸುಮ್ನೆ ವೇಸ್ಟು ಇಲ್ಲಿನ ಪೋಸ್ಟು ಅಂದೇ, ಅದಕ್ಕೆ "ಇಲ್ಲಾ ಸಾ ಮನ್ಸಾ ಯಾವ್ ತವು ಬೇಕಾದರೂ ನುಗ್ಗಿ ಕದೀತಾನೆ ...ನಾಮೇ ಎಷ್ಟೋ ಇಲ್ಲಿ ಹಿಡಿದು ಹಾಕಿದ್ದೀವಿ" ಅಂದ್ರೂ ಅಲ್ಲಿನ ಸಿಬ್ಬಂದಿ ಪ್ರಾಣಿ ಬರಕ್ಕಿಲ್ಲಾ ಅಂದ್ರಲ್ಲಾ ಅಲ್ಲಿ ನೋಡಿ ನೀವೇ ಅಂತಾ ಕೈ ತೋರಿದರು , ಪಕ್ಕದ ಬೆಟ್ಟದ ಮೇಲೆ ದೂರದಲ್ಲಿ ಒಂದು ಸಾರಂಗ ನಮ್ಮನ್ನು ಅಣಕಿಸುತ್ತಾ ನಿಂತಿತ್ತು.
|
ನೋಡ್ರೀ ನಾನು ಇಲ್ಲಿದ್ದೇನೆ ಅಂದಿತ್ತು ಸಾರಂಗ |
ಅದನ್ನು ನೋಡೇ ಆನ್ಸಿತ್ತು ನಾವು ವನ್ಯ ಜೀವಿಗಳಬಗ್ಗೆ ಇನ್ನೂ ಹೆಚ್ಹಾಗಿ ಅರಿತಿಲ್ಲವೆಂದು. ಅಷ್ಟೇ ಅಲ್ಲಾ ಸಾ ಇಲ್ಲಿಗೆ ಆನೆ , ಕಾಟಿ[ ಕಾಡೆಮ್ಮೆ ] , ಜಿಂಕೆ, ಹುಲಿ ಬತಾ ಇರ್ತವೆ ಅಂದರು. ಇಷ್ಟು ಎತ್ತರದ ಪ್ರದೇಶಕ್ಕೆ ಆನೆ ಬರುವುದು ಆಚರಿಯೇ ಸರಿ ಅಂದುಕೊನದ ನಾವು , ಸರಿ ಇಲ್ಲಿ ಹೊನ್ನ ಮೇಟಿ ಕಲ್ಲು ಎಲ್ಲಿದೆ ಈ ಜಾಗಕ್ಕೆ ಯಾಕೆ ಈ ಹೆಸರು ಬಂತೂ ಅಂತಾ ಕೇಳಿದರೆ , ಅಲ್ಲಿನ ಸಿಬ್ಬಂದಿ ಒಂದು ಕೋಡುಕಲ್ಲು ಬಂಡೆಯ ಕಡೆ ಕರೆದೊಯ್ದರು , ಇದೆಯಾ ಸಾ "ಹೊನ್ನ ಮೇಟಿ ಕಲ್ಲು ", ಈ ಕಲ್ಲಿನಿನ್ದಾನೆ ಇಲ್ಲಿಗೆ ಆ ಹೆಸರು ಬಂದದೆ ಅಂದ್ರೂ , ಇದ್ರ ವಿಸೇಸ ಗೊತ್ತಾ ಸಾ ಕಲ್ಲನ್ನು ಕೈನಿಂದ ಕುಟ್ಟಿದರೆ ಕಲ್ಲಿನ ಶಬ್ದ ಬರಾಕಿಲ್ಲಾ ಬೇರೆ ಶಬ್ದ ಬತ್ತುದೆ ಅಂದ್ರೂ ...!!,
|
ಹೊನ್ನ ಮೇಟಿ ಕಲ್ಲು |
ಹತ್ತಿರ ಹೋಗಿ ನೋಡಿದರೆ ಆ ಕೋಡುಕಲ್ಲು ಬೆಟ್ಟದ ಅಂಚಿನಲ್ಲಿ ಕುಳಿತಿತ್ತು. ಕಲ್ಲಿನ ಸಮೀಪ ತೆರಳಿ ಕಿವಿಯನ್ನು ಕಲ್ಲಿಗೆ ಆನಿಸಿ ಕೈನಿಂದ ಕಲ್ಲನ್ನು ಕೈನಿಂದ ಕುಟ್ಟಿದರೆ ಅರೆ ಇದೇನಿದು ಯಾವುದೋ ತಾಮ್ರದ ವಸ್ತುವನ್ನು ಕುಟ್ಟಿದರೆ ಬರುವ ಶಬ್ದ ಬರುತ್ತಿದೆ.ಅತೀ ಎತ್ತದ ಶಿಖರದ ಮೇಲೆ ಕುಳಿತ ಈ ಕೋಡುಗಲ್ಲು ತನ್ನ ವಿಸ್ಮಯವನ್ನು ತನ್ನ ಒಡಲಲ್ಲೇ ಅಡಗಿಸಿಕೊಂಡು ಮೆರೆದಿತ್ತು. ಹಾಗೆ ಗಿರಿಯ ಮೇಲಿಂದ ಕಾಣುವ ದೃಶ್ಯಾವಳಿಯ ಸೆರೆ ಹಿಡಿಯಲು ತೊಡಗಿದೆವು
|
ಕಾಡಿನ ನಡುವೆ ಮತ್ತೊಂದು ಕಾವಲು ಮನೆ |
ದೂರದಲ್ಲಿ ಪಾತಾಳದಲ್ಲಿ ಕಾಡಿನ ನಡುವೆ ಮತ್ತೊಂದು anti poaching camp ಕಾಣುತ್ತಿತ್ತು ಮತ್ತೊಂದು ಕಡೆ ರಮಣೀಯ ಗಿರಿಗಳ ಶ್ರೇಣಿ ಸುಮಾರು ಸಮಯ ಕಳೆದ ನಮಗೆ ಹೊಟ್ಟೆಯ ಹಸಿವಿನ ಅಲಾರಂ ಬಂದಾಗಲೇ ವಾಸ್ತವ ಲೋಕಕ್ಕೆ ಬಂದು ವೇಳೆ ನೋಡಿದರೆ ಆಗಲೇ ಮಧ್ಯಾಹ್ನದ ಊಟದ ಸಮಯ ಮೀರಿತ್ತು. ಮಧ್ಯಾಹ್ನದ ಊಟಕ್ಕೆ ಬುರುಡೆ ಕ್ಯಾಂಪಿಗೆ ಬರುವುದಾಗಿ ಹೇಳಿ ಜೊತೆಯಲ್ಲಿ ತಿನ್ನಲು ಏನೂ ತಂದಿರಲಿಲ್ಲ. ಹಸಿವು ತನ್ನ ನರ್ತನ ಶುರುಮಾಡಿತ್ತು. ಹೊನ್ನ ಮೇಟಿ ಕಲ್ಲಿನ ಪ್ರದೇಶದಿಂದ ವಾಪಸ್ಸು ಹೊರಟೆವು. ಹಸಿವು ತನ್ನ ಪ್ರತಾಪ ತೋರುತ್ತಲೇ ನಮ್ಮ ದೇಹದ ಶಕ್ತಿಯನ್ನು ಅಡಗಿಸುತ್ತಿತ್ತು ............!!! ಮುಂದೆ...........?????? ........................... ವೆಂಕಟ ರಮಣ ಗೋವಿಂದ
23 comments:
good one very informative and thrilling.plz visit usdesai.blogspot.com too
ಚಾರಣ ವಿವರಗಳ ಜೊತೆ ಮನೋಹರ ದೃಶ್ಯಾವಳಿಯ ಛಾಯಾಚಿತ್ರಗ್ರಹಣ... ಬಾಲು ಸಮಯ ಹೇಗೆ ಹೊಂದಿಸ್ತೀರಿ?
ಚನ್ನಾಗಿದೆ ಬಾಲುಅಣ್ಣ.
ಸೊಗಸಾದ ವಿವರಣೆ. ಸುಂದರ ಚಿತ್ರಗಳು! ನೀವು ತುಂಬಾ ಅದೃಷ್ಟವಂತರು ಸಾರ್!
@ಉಮೇಶ್ ದೇಸಾಯಿ :-) ಸರ್ ಥ್ಯಾಂಕ್ಸ್ ನಿಮ್ಮ ಅನಿಸಿಕೆಗೆ. ಮುಂದಿನ ಪಯಣದಲ್ಲೂ ಸಾಥ್ ನೀಡಿ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಾಗಿದೆ.
@ ಜಲನಯನ{ಡಾಕ್ಟರ ಅಜಾದ್ } :-) ವರ್ಷದಲ್ಲಿ ತೀರ್ಥಯಾತ್ರೆಗೆ ಹೋಗುವ ಬದಲು ವನಯಾತ್ರೆ ಅಷ್ಟೇ ಸರ್ , ಇದು ಹಳೆಯ ನೆನಪುಗಳ ಹಂಚಿಕೆ ಅಷ್ಟೇ , ಹೊಸದಕ್ಕೆ ಇನ್ನೂ ಕಾಲಕೂಡಿಬಂದಿಲ್ಲ.ಸಮಯ ಹೊಂದಿಸಲೇ ಬೇಕೂ ಸರ್ ವರ್ಷದಲ್ಲಿ ಮೂರು ಅಥವಾ ಆರುದಿನ.ಹ ಹ ಹ ನಿಮ್ಮ ಮೆಚ್ಚಿನ ಮಾತುಗಳಿಗೆ ಧನ್ಯ.
@ ಎಂ.ಡಿ.ಸುಬ್ರಮಣ್ಯ ಮಾಚಿಕೊಪ್ಪ.:-) ಸಹೋದರನ ಪ್ರೀತಿಮಾತುಗಳು ಖುಷಿನೀಡಿದೆ.
ಪ್ರದೀಪ್ ರಾವ್ :-) ಪ್ರಪಂಚದಲ್ಲಿ ಎಲ್ಲರೂ ಒಂದಲ್ಲಾ ಒಂದು ವಿಚಾರದಲ್ಲಿ ಅದೃಷ್ಟವಂತರೆ ಸರ್.ಲೇಖನ ಮೆಚ್ಚಿದ್ದಕ್ಕೆ ವಂದನೆಗಳು.ಮುಂದಿನ ಸಂಚಿಕೆಯಲ್ಲೂ ಜೊತೆಯಾಗಿರಿ.
ಬುರುಡೆ ಕ್ಯಾಂಪಿನ ಬಗ್ಗೆ ತಮ್ಮ ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಿದ ಊಟದ ವ್ಯವಸ್ಥೆ ಇನ್ನೂ ನಾಲಿಗೆಯಲ್ಲೇ ಉಳಿದುಕೊಂಡಿತ್ತು.
ಇದೀಗ ಇದರ ಮುಂದಿನ ಭಾಗ ಓದುತ್ತಿದ್ದೇನೆ.
ಹೊನ್ನ ಮೇಟಿ ಕಲ್ಲು ತಲುಪಿದ ಯಾನ ರೋಚಕವಾಗಿತ್ತು.
ನೀವು ಹಾಕಿರುವ ಕೆಲವು ಚಿತ್ರಗಳಂತೂ ಮನೆಯ ಗೋಡೆಯ ಮೇಲೆ ವಿಶಾಲವಾದ ಲ್ಯಾಂಡ್ ಸ್ಕೇಪ್ ಪೋಸ್ಟರ್ ಆಗಲು ತಕ್ಕುದಾದ ಸುಂದರ ಚಿತ್ರಗಳು. ಕ್ಲೋಸ್ ಅಪ್ ಫೋಟೋಗ್ರಫಿ ಸಹ ಸೂಪರ್.
ಕಾಡು ಕಳ್ಳರ ತಡೆ ಕೇಂದ್ರ ಕಾಡುಕಳ್ಳರೇ ಕಾಪಾಡ ಬೇಕಾದಷ್ಟು ಅಧ್ವಾನವಾಗಿದೆ ಅಲ್ಲವೇ?
ಹೊನ್ನ ಮೇಟಿ ಕಲ್ಲು ಮೀಟಿದಾಗ ತಾಮ್ರದ ಸದ್ದು ಬಂತೆಂದರೆ ಅದರಾಳದಲ್ಲಿ ತಾಮ್ರದ ನಿಕ್ಷೇಪ ಇದ್ದೀತೆ? ವೀರಪ್ಪನ್ ಆತ್ಮವೇ ಹೇಳಬೇಕು!
ನೀವೆ ಹೇಳಿದಂತೆ ಮುಂದೆ
"ವೆಂಕಟರಮಣ ಗೋವಿಂದಾ ಗೋವಿಂದಾ!!!!"
@ ಬದರಿನಾಥ್ ಪಲವಳ್ಳಿ:-) ಪ್ರೀತಿಯಿಂದ ನನ್ನ ಪ್ರತೀ ಲೇಖನವನ್ನು ಓದಿ ತಮ್ಮ ಅನಿಸಿಕೆ ತಿಳಿಸುತ್ತಿದ್ದೀರಾ , ನಿಮ್ಮ ಪ್ರೀತಿಗೆ ಕೃತಜ್ಞ. ಹೌದು ಅಲ್ಲಿನ ಸುಂದರ ಪರಿಸರವೇ ಹಾಗಿದೆ.ಯಾವುದೇ ಕೋನದಲ್ಲಿ ಚಿತ್ರ ತೆಗೆದರೂ ಅದು ಒಂದು ದ್ರುಷ್ಯಕಾವ್ಯವೇ ಆಗುತ್ತದೆ.ಉಳಿದಂತೆ ಹೊನ್ನ ಮೇಟಿ ಕಲ್ಲು ಒಂದು ವಿಸ್ಮಯವೇ ಸರಿ ಹೌದು ಅದನ್ನು ಕೈನಿಂದ ಕುಟ್ಟಿದರೆ ತಾಮ್ರದ ಶಬ್ದ ಬರುತ್ತದೆ.ಒಂದು ವೇಳೆ ಇದು ನಾಗರೀಕ ಪ್ರಪಂಚದಲ್ಲಿ ಇದ್ದರೇ ಇಷ್ಟೊತ್ತಿಗೆ ಮಾಯವಾಗಿರುತ್ತಿತ್ತು.ನಿಮ್ಮ ಪ್ರೀತಿಯ ಸಿಹಿ ಮಾತುಗಳಿಗೆ ಮತ್ತೊಮ್ಮೆ ವಂದನೆಗಳು.
ತುಂಬಾ ಚೆಂದದ ಚಿತ್ರಗಳು ಮತ್ತೆ ಅದಕ್ಕೊಪ್ಪುವ ಬರವಣಿಗೆ.. ಜೊತೆಗೆ ಮಾಹಿತಿ.. ತುಂಬಾ ಧನ್ಯವಾದಗಳು ಸರ್ :)))))
ಈಶ್ವರ ಭಟ್ .ಕೆ.:-) ನಿಮ್ಮ ಪ್ರೀತಿಯ ಅನಿಸಿಕೆಗಳಿಗೆ ಕೃತಜ್ಞ. ಮುಂದಿನ ಸಂಚಿಕೆಯಲ್ಲೂ ಜೊತೆಯಾಗಿರಿ.
ತುಂಬಾ ಸುಂದರವಾದ ಪ್ರವಾಸ ಕಥನ ಬಾಲು ಸರ್.. ನಾವೂ ನನ್ನ ಇಂಜಿನಿಯರಿಂಗ್ ನ ಕಡೆಯ ವರ್ಷದಲ್ಲಿದ್ದಾಗ ಬಿಳಿಗಿರಿ ರಂಗನ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದೆವು, ಆಗಿನ ನೆನಪುಗಳನ್ನೆಲ್ಲಾ ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿತು.. ಚಿತ್ರ ಸಹಿತವಾದ ಪ್ರವಾಸ ಕಥನವಾದುದ್ದರಿಂದ ಅಲ್ಲಿನ ಪ್ರಕೃತಿಯ ರಮಣೀಯತೆಯನ್ನು ಕಣ್ಣಿಗೆ ತುಂಬಿಸಿಕೊಂಡಂತಾಯಿತು.. ಮನಸ್ಸಿಗೆ ಆಹ್ಲಾದವನ್ನು ನೀಡಿದ ಪ್ರವಾಸ ಕಥನ..:)))
@ dew drop ಮಂಜಿನ ಹನಿ :-) ನಿಮ್ಮ ಅನಿಸ್ಕಿಕೆಗೆ ಸ್ವಾಗತ. ನನ್ನ ಪುಟಕ್ಕೆ ಭೇಟಿಕೊಟ್ಟ ನಿಮಗೆ ಧನ್ಯವಾದಗಳು.ಮುಂದಿನ ಸಂಚಿಕೆಯಲ್ಲೂ ಜೊತೆಯಾಗಿರಿ.
ಹೊನ್ನ ಮೇಟಿ ಕಲ್ಲು ಜಾಗ ಸೂಪರ್ ಸರ್..ನಿಮ್ಮಿಂದ ಎಷ್ಟೋ ವಿಷಯಗಳು ತಿಳಿಯುತ್ತಿದೆ...ನಿಮ್ಮ ಮುಂದಿನ ಪಯಣದ ನಿರೀಕ್ಷೆಯಲ್ಲಿ...
ಗಿರೀಶ್ ಎಸ :-)ಥ್ಯಾಂಕ್ಸ್ ಗಿರೀಶ್ , ಮುಂದಿನ ಪಯಣದಲ್ಲಿ ಜೊತೆಯಾಗಿರಿ.
ಬರಹ ಸೂಪರ್.....ಫೋಟೋಸ್ ಬೊಂಬಾಟ್......ಚೆನ್ನಾಗಿದೆ ಸರ್................ಮುಂದಿನ ಭಾಗದ ನಿರೀಕ್ಷೆ ಯಲ್ಲಿ....
@ashokkodlady :-)ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.ಪಯಣದಲ್ಲಿ ನಿಮ್ಮ ಸಾಥ್ ಮುಂದುವರೆಯಲಿ.
ಚೆನ್ನಾಗಿದೆ ವಿವರಣೆ ಹಾಗು ಚಿತ್ರಗಳು
ಬಾಲು ಸರ್,
ಹೊನ್ನ ಮೇಟಿಯ ಅದ್ಬುತ ಪ್ರಯಾಣ ರೋಚಕವಾಗಿದೆ...ಜೊತೆಗೆ ಸೊಗಸಾದ ಫೋಟೊಗ್ರಫಿ..ನಾನಿಲ್ಲಿ ಮದುವೆ ಇತ್ಯಾದಿ ಫೋಟೊಗ್ರಫಿಯಲ್ಲಿ ಮುಳುಗಿ ಬೇಸರಗೊಂಡಿದ್ದರೆ..ನೀವಲ್ಲಿ ಈ ರೀತಿ ಫೋಟೊಗ್ರಫಿ ಮತ್ತು ಪ್ರಕೃತಿ ಮದ್ಯೆ enjoy ಮಾಡುತ್ತಿರುವುದನ್ನು ಕಂಡು ನನಗೆ ಹೊಟ್ಟೆ ಕಿಚ್ಚೆನಿಸುತ್ತೆದೆ..ಇರಲಿ ಮುಂದಿನ ಭಾಗಕ್ಕೆ ಹೋಗುತ್ತೇನೆ
@ ಸೀತಾರಾಮ .ಕೆ.:-) ಧನ್ಯವಾದಗಳು ಸರ್ .
@ಶಿವೂ .ಕೆ :-)ಹ ಹ ಹ ಶಿವೂ ಸರ್ ಇವೆಲ್ಲಾ ಹಳೆಯ ನೆನಪುಗಳ ಅನಾವರಣ.ಹೊಸ ಸಾಹಸಕ್ಕೆ ಕಾಲ ಕೈಗೂಡಿಬಂದಿಲ್ಲ.ಅನಿಸಿಕೆಗೆ ಥ್ಯಾಂಕ್ಸ್.
adbutavaada chitragalu haagu caaranada suka.
Post a Comment