|
ನೆಚ್ಚಿನ ಬ್ಲಾಗ್ ಲೋಕದ ಮಿತ್ರರು |
ನಮಸ್ಕಾರ ಬಹಳ ದಿನಗಳ ನಂತರ ನಿಮ್ಮೊಂದಿಗೆ ಮತ್ತೆ ಸೇರಲು ಹರುಷವಾಗುತ್ತಿದೆ.ಕಳೆದ ದಿನಾಂಕ 10 ಫೆಬ್ರವರಿ 2012 ರಿಂದ ಇಲ್ಲಿಯವರೆಗೂ ಬ್ಲಾಗ್ ಲೋಕದಿಂದ ಮರೆಯಾಗಿದ್ದ ನೋವು ಕಾಡುತ್ತಿತ್ತು.ಬಹಳಷ್ಟು ಜನ ಬ್ಲಾಗ್ ಲೋಕದ ಸ್ನೇಹಿತರ ಸಂಪರ್ಕ ಕಡಿದು ಹೋಗಿತ್ತು. ವಯಕ್ತಿಕ ಕಾರಣಗಳಿಂದ ಅಂದರೆ ಬಿಡುವಿಲ್ಲದ ಕೆಲಸದ ಅಧಿಕ ಭಾರ , ಅಲೆದಾಟ,ಬರೆಯಲು ಕೂರದಷ್ಟು ಮನಸ್ಸಿನ ಮೇಲಿದ್ದ ಒತ್ತಡ.ಇತ್ಯಾದಿಗಳಿಂದ ಬರೆಯಲು ಬಹಷ್ಟು ವಿಚಾರಗಳಿದ್ದೂ ಬರೆಯಲಾರದ ಅಸಹಾಯಕತೆ ನನ್ನದಾಗಿತ್ತು.ಹಾಗಾಗಿ ಎಂಟು ಸಂಚಿಕೆ ಬರೆಯಬೇಕಾಗಿದ್ದ "ಕಾನನದ ನೆನಪಿನ ಪುಟಗಳು" ಐದಕ್ಕೆ ನಿಂತಿತು . ಇವತ್ತು ಬರೆಯಲೇ ಬೇಕೂ ಅಂತಾ ಮನಗೆ ಬಂದಾಗ ದೇಹದ ದಣಿವಿನಿಂದ ಬರೆಯಲಾರದೆ ಹಾಗೆ ಸುಮ್ಮನಾದ ದಿನಗಳು ಬಹಳಷ್ಟು ಆದವು. ಬಹಳಷ್ಟು ಸ್ನೇಹಿತರ ಬ್ಲಾಗ್ ಗಳಿಗೆ ಭೇಟಿ ನೀಡಿ ಅವರ ಚಂದದ ಲೇಖನಗಳಿಗೆ , ಕವಿತೆಗಳಿಗೆ ಕಾಮೆಂಟ್ ಹಾಕಲೂ ಸಹ ಆಗದೆ ನನ್ನದೇ ಕೆಲಸದ ಒತ್ತಡದ ಸುಳಿಯಲ್ಲಿ ಹೂತು ಹೋಗಿದ್ದೆ.ಹಾಗಾಗಿ ಬರ್ಯಬೇಕಾಗಿದ್ದ ಕಾಡಿನ ಅನುಭವಗಳು, ಸಿರ್ಸಿ ಪಯಣದ
ಸುಂದರ ಅನುಭವದ ಕಥೆ, ದೆಹಲಿ ಯಾತ್ರೆಯ ಅನುಭವ, ದಾಂಡೇಲಿ ಯಾತ್ರೆಯ ಅನುಭವಗಳು ಹಾಗೆ ಉಳಿದು ಹೋದವು.ಅಪ್ಪಿ ತಪ್ಪಿ ಒಮ್ಮೊಮ್ಮೆ " ಫೆಸ್ ಬುಕ್ " ತಾಣಕ್ಕೆ ಹೋಗಿದ್ದು ನಿಜ ಅದು ನನ್ನನ್ನು ಇತ್ತ ಬರದಂತೆ ಕೆಲವೊಮ್ಮೆ ತಡೆದಿತ್ತು. ಆದರೆ ಈಗ ಅವೆಲ್ಲವನ್ನೂ ಭೇದಿಸಿ ಸಂತಸದ ಮನಸಿನಿಂದ ಮತ್ತೆ ಬಂದಿದ್ದೇನೆ. ನಿಮ್ಮೊಡನೆ ಹಂಚಿಕೊಳ್ಳಲು ಬಹಳಷ್ಟು ನೆನಪಿನ ಮೂಟೆಗಳು ಇವೆ, ಎಂದಿನಂತೆ ಪ್ರತೀವಾರ ಒಂದು ಲೇಖನ ಈ ತಾಣದಲ್ಲಿ ಚಿತ್ರಗಳ ಸಹಿತ ನಿಮ್ಮ ಮುಂದೆ ಬರಲಿದೆ. ಓದಿ ಹರಸಿ,ನಿಮ್ಮ ಅನಿಸಿಕೆ ತಿಳಿಸಿ.ಇದುವರ್ಗೂ ನಿಮ್ಮ ಬ್ಲಾಗ್ ತಾಣಕ್ಕೆ ಬರದೆ ಇದ್ದುದಕ್ಕೆ ನನ್ನನು ಮನ್ನಿಸಿ, ಬನ್ನಿಬ್ಲಾಗ್ ತಾಣದಲ್ಲಿ ಮತ್ತೆ ಎಲ್ಲರೂ ಸೇರೋಣ. "ಫೆಸ್ ಪುಕ್ " ತಾಣದಲ್ಲಿ ಹೆಚ್ಚು ಹೊತ್ತು ಕಳೆಯದೆ ಬ್ಲಾಗ್ ಲೋಕಕ್ಕೆ ಮತ್ತೆ ಬನ್ನಿ ಜೊತೆಯಾಗಿ ಸಾಗೋಣ ಉತ್ತಮ ಆರೋಗ್ಯಕರ ಸ್ನೇಹ ಸೇತು ಕಟ್ಟೋಣ. ಮುಂದಿನ ವಾರ ಮತ್ತೆ ಸಿಗೋಣ. ಕನ್ನಡ ಬ್ಲಾಗ್ ಲೋಕವನ್ನು ಮತ್ತೆ ಕಟ್ಟೋಣ.
11 comments:
ಬಾಲಣ್ಣ ನೀವು ಅದಮ್ಯ ಪಯಣಿಗರು. ನೀವು ಕೆಲಸದ ಒತ್ತಡದಿಂದ ಬ್ಲಾಗಿನಲ್ಲಿ ಬರೆಯಲಾಗಲಿಲ್ಲ ಎಂಬ ನೋವು ನಮಗೂ ಇತ್ತು. ವಾಪಸಾದರಲ್ಲ ಅಷ್ಟೇ ಖುಷಿ ನಮಗೆ.
ಬ್ಲಾಗ್ ಸಮೃದ್ಧವಾಗಲಿ.
Sir,nice to see you in blog after so many days...Lets continue our journey in blog...
welcome again to blog loka.
ಬಾಲಣ್ಣ...
ಬ್ಲಾಗಿಗರ ಅನುಬಂಧವೇ ಅಂಥಹದ್ದು..
ಮತ್ತೆ ಬರೆಯಿರಿ...
ಓದಲು ನಾವಿದ್ದೇವೆ...
ಮುಂದಿನವಾರ ನಾವೆಲ್ಲ ಒಮ್ಮೆ ಭೇಟಿಯಾಗೋಣ..
ಊಟ..
ಹರಟೆ .. ಹೊಟ್ಟೆ ಹುಣ್ಣಾಗುವಷ್ಟು ನಗೋಣ...!
ಎಲ್ಲೆಲ್ಲೋ ಕಳೆದು ಹೋದ ನಾವೆಲ್ಲ ಒಮ್ಮೆ ಸೇರೋಣ...ಜೈ ಹೋ !!
Welcome back!
ಬಾಲಣ್ಣ... ಆ ನಯನ, ಆ ಕನ್ನಡ ಭವನ, ಆ ಬ್ಲಾಗಿಗರ ತನನ, ಪ್ರಕಾಶನ ಬೋ=ಬಹುಮಾನ... ಡಾಕಟ್ರ ಬೀಡಿ, ಪ್ರಕಾಶನ್ ಲಟ್ಟಣಿಗೆ ಎಲ್ಲಾ ನೆಪ್ಪಾಯ್ತವೆ..ಕಣಣ್ಣೋ...ಇನ್ನೊಮ್ಮೆ ಸೇರೇ ಬಿಡಾನೆ...ಏನಂತೀಯಾ...??
ಬರೀರಿ ಬಾಲು ಅಣ್ಣ.
A well deserved silence can break the barrier nicely...water should get stored in the dam..before the flood gates to be open..if the flood gates are open always..then water can't be stored...I agree professional commitments had taken a toll on you, but a break is igniting the passion of blogging..I expect tsunaami of wonderful writeups....eagerly want to see the premiers ASAP
ಬ್ಲಾಗ್ ಬರೆಯುವವರೆಲ್ಲರು ಮತ್ತೆ ಬ್ಲಾಗನತ್ತ ಹೆಜ್ಜೆ ಹಾಕುತ್ತಿರುವುದು ಖುಷಿ ಕೊಡುತ್ತಿದೆ. ಫೇಸ್ಬುಕ್ ಗಿಂತಲೂ ಬುಕ್ಸ್ ನೆಚ್ಚಿಕೊಂಡವಳಿಗೆ, ಬುಕ್ಸ್ಗಳಷ್ಟೇ ಬ್ಲಾಗ್ಸ್ ನ ಹಚ್ಚಿಕೊಂಡವಳಿಗೆ ನಿಜಕ್ಕೂ ಖುಷಿ ಎನಿಸುತ್ತಿದೆ. ಮತ್ತೆ ಒಳ್ಳೊಳ್ಳೆಯ ಲೇಖನಗಳು ಬರಲಿ.
ಬಾಲು ಸರ್,
ಮತ್ತೆ ನೀವು ವಾಪಸ್ ಬಂದಿದ್ದು ನನಗೆ ಖುಷಿ. ನಿಮ್ಮಂತೆ ನಾನು ಕಳೆದುಹೋಗಿದ್ದವನು ವಾಪಸ್ ಬಂದಿದ್ದೇನೆ. ಬರೆಯಿರಿ..ಓದಲು ನಾವಿದ್ದೇವೆ..ಮತ್ತೆ ಎಲ್ಲರೂ ಕನ್ನಡಭವನದ ನೆನಪುಗಳನ್ನು ಮರುಕಳಿಸೋಣ.
ಅನಿಸಿಕೆ ತಿಳಿಸಿದ ಎಲ್ಲಾ ಆತ್ಮೀಯರಿಗೆ ಕೃತಜ್ಞ. ನಿಮ್ಮ ಹಾರೈಕೆ ಹೀಗೆ ಇರಲಿ.
Post a Comment