|
ದೊಡ್ಡ ಸಂಪಿಗೆ ಮರ |
ನಮಸ್ಕಾರ ೨೦೧೨ ರ ಶುಭಾಶಯಗಳು ತಮಗೆ, ಈ ವರ್ಷದಲ್ಲಿ ನನ್ನ ಬ್ಲಾಗ್ ಪುಟವನ್ನು ವಿಶೇಷವಾಗಿ ಪ್ರಾರಂಭಿಸಬೇಕೆಂಬ ಕಾರಣ ಬಿಳಿಗಿರಿ ಬನದಲ್ಲಿ ಸರಣಿಯ ಲೇಖನವನ್ನು ಪುನಃ ನಿಮ್ಮೊಡನೆ ಪ್ರೀತಿಯಿಂದ ಹಂಚಿಕೊಳ್ಳುತ್ತಿದ್ದೇನೆ. ಕಳೆದ ಬಾರಿ ಪ್ರಕಟಗೊಂಡಾಗ ಹೆಚ್ಚಿನ ಜನ ಈ ಲೇಖನ ಓದಲು ಸಾಧ್ಯವಾಗದ ಕಾರಣ ನನ್ನ ಪ್ರೀತಿಯ ಕಾಡಿನ ಅನುಭವಗಳ ಸರಣಿ ಮತ್ತೊಮ್ಮೆ ಪರಿಷ್ಕರಿಸಿದ ಲೇಖನವನ್ನು ಎಲ್ಲರೊಡನೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ವೀರಪ್ಪನ್ ಓಡಾಡಿದ ದಟ್ಟ ಕಾನನದಲ್ಲಿ ಓಡಾಡಿದ ಅನುಭವಗಳ ಹಲವರು ನೋಡದ ಸುಂದರ ಕಾಡಿನ ತಾಣಗಳ ಚಿತ್ರಗಳೊಡನೆ ಈ ಸರಣಿ ನಿಮ್ಮ ಮಡಿಲಿಗೆ ಹಾಕಿದ್ದೇನೆ . ಎಂಟು ಸಂಚಿಕೆಯ ಮೊದಲ ಕಂತು ಈ ಸಂಚಿಕೆಯಿಂದ ಪ್ರಾರಂಭವಾಗುತ್ತಿದೆ. ಬನ್ನಿ ಸುಂದರ ಬಿಳಿಗಿರಿ ಬನದೊಳಗೆ ಹೋಗೋಣ.
|
ದೊಡ್ಡ ಸಂಪಿಗೆ ಮರದ ಬೃಹತ್ ಕಾಂಡ. |
ಬಿಳಿಗಿರಿಯ ಬನದಲ್ಲಿ ನಮ್ಮ ಕಲ್ಪನೆಗೆ ನಿಲುಕದ ಎಷ್ಟೋ ಕೌತುಕಗಳು ಅಡಗಿವೆ.!! ಅಂತಹ ಒಂದು ಕೌತುಕದ ಬಗ್ಗೆ ತಿಳಿಯೋಣ ಬನ್ನಿ.
|
ವನ್ಯ ಜೀವಿಗಳ ಸುಂದರ ತಾಣ. |
ಬಿಳಿಗಿರಿ ರಂಗನ ಬೆಟ್ಟ ಶ್ರೇಣಿಯ ಕಾಡುಗಳು ದಟ್ಟವಾಗಿದ್ದು ವನ್ಯಜೀವಿಗಳಿಂದ ತುಂಬಿದೆ.ಇಂತಹ ಒಂದು ದಟ್ಟ ಕಾನನದ ಮಧ್ಯೆ ಸುಮಾರು ೨೦೦೦ ವರ್ಷ!!![ಅರಣ್ಯ ಇಲಾಖೆಯ ಮಾಹಿತಿಯಂತೆ}ಗಳಿಂದ ಭಾರ್ಗವಿ ನದಿ [ ಈ ಸಣ್ಣ ನದಿ ಕಾವೇರಿಯ ಉಪನದಿ!! ಬಿಳಿಗಿರಿಯ ಬನದ ಹಲವಾರು ಸಣ್ಣ ಜರಿಗಳು ಸೇರಿ ಆಗಿರುವ ನದಿ!ಇದು ಕಾವೇರಿ ನದಿಯ ಉಪನದಿಯೂ ಹೌದು ,] ತೀರದಲ್ಲಿ ಸಂಪಿಗೆ ಸುವಾಸನೆ ಬೀರುತ್ತಿದೆ.ದೊಡ್ಡ ಸಂಪಿಗೆ ಮರದ ವಿಶೇಷ ವೆಂದರೆ ಒಂದೆಮರದಲ್ಲಿ ಕೆಂಪು ಹಾಗು ಹಳದಿ ಬಣ್ಣದ ಹೂ ಗಳನ್ನ ಬೆಳಸುವುದು!!
|
ಜುಳು ಜುಳು ಹರಿಯುವ ಭಾರ್ಗವಿ ನದಿ |
ಈ ಮರದ ಸನಿಹ ಹರಿವ ನದಿ ಜಮದಗ್ನಿ ಮಹರ್ಷಿಯ ಪತ್ನಿ ರೇಣುಕ ದೇವಿಯ ಅವತಾರವೆಂದೂ,ಈ ಪ್ರದೇಶದಲ್ಲೇ ವಾಸಿಸುತ್ತಿದ್ದರೆಂದೂ, ಪ್ರತೀತಿ [ಇದು ಕರ್ನಾಟಕ ಗೆಜೆತೀರ್ನಲ್ಲಿ ದಾಖಲಾಗಿದೆ]ದೊಡ್ಡ ಸಂಪಿಗೆ ಮರದ ಸುತ್ತ ಲಿಂಗ ಗಳೆಂದು ಪೂಜಿಸುವ ಸುಮಾರು ಒಂದು ನೂರಕ್ಕೂ ಹೆಚ್ಚಿನ ಶಿಲೆಗಳಿದ್ದು ,ಮರದ ಸುತ್ತಳತೆ ೨೦ ಮೀಟರ್ ಇರುತ್ತದೆ!!! ಮರದ ಎತ್ತರ ೧೩೦ ಅಡಿ ಇದ್ದು ಗಗನ ಚುಂಬಿಯಾಗಿದೆ!!
ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಬೇಕಿದ್ದು, ಕೆ .ಗುಡಿ ಇಂದ ಬಿ.ಆರ್. ಹಿಲ್ಲ್ಸ್ ದಾರಿಯ ಮಧ್ಯೆ ಸಿಗುವ ಅರಣ್ಯ ಇಲಾಖೆಯ ಗೇಂ ರೂಟ್ ನಲ್ಲಿ ಸಾಗಬೇಕು.ದಟ್ಟ ಕಾಡಿನಲ್ಲಿನ ಪ್ರದೇಶ ವಾದ ಕಾರಣ ಜಿಂಕೆ, ಆನೆ, ಕಾಟಿ, ಕಾಡು ಹಂದಿ, ,ಹುಲಿ,ಸಾರಂಗ, ಮುಂತಾದ ಜೀವಿಗಳು ಅದೃಷ್ಟವಿದ್ದರೆ ಸಿಗಬಹುದು !!!. ಜೊತೆಗೆ ಮಳೆಗಾಲ , ಚಳಿಗಾಲದಲ್ಲಿ ನಿಮಗೆ ಜಿಗಣೆಗಳ ಉಪಚಾರ ಕೂಡ ಲಭ್ಯವಾಗುತ್ತದೆ. ನೆನಪಿಡಿ ಇದು ಕಾಡುಗಳ್ಳ ವೀರಪ್ಪನ್ ಓಡಾಡಿದ ಪ್ರದೇಶ !!!.ಇಲ್ಲಿನ ಗಾಳಿ ,ನೀರು ಸಂಪೂರ್ಣ ಶುದ್ದ ವಾಗಿದ್ದು ಮನಸ್ಸಿಗೆ ಉಲ್ಲಾಸ ನೀಡುತ್ತದೆ.ಅವಕಾಶ ಸಿಕ್ಕರೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಿಬನ್ನಿ.
18 comments:
oh wonderful memories revised
ಉಮೇಶ್ ದೇಸಾಯಿ :-) ತಮ್ಮ ಅನಿಸಿಕೆಗೆ ಧನ್ಯವಾದಗಳು ಸರ್ .
ಬಾಲು ಸರ್ ...
ನಿಮ್ಮ ನೆನಪುಗಳ ಜೊತೆ ನಾನು ಕಳೆದು ಹೋದೆ...ನಿಮ್ಮ ಅನುಭವಗಳು ನನ್ನನ್ನು ಅಲ್ಲಿಗೆ ಹೋಗಿಬರುವಂತೆ ಪ್ರೇರೇಪಿಸುತ್ತಿವೆ...ಧನ್ಯವಾದಗಳು ಸರ್....
ನನ್ನ ಬ್ಲಾಗ್ ಗು ಬನ್ನಿ....
Sir every article of yours will reveal something we havent heard.This time about Bhaarghavi river.And it is unbeliveble that ,the tree gives 2 color of flowers...Exceelent info Balu sir..
ತಮ್ಮ ಬ್ಲಾಗ್ನಲ್ಲಿ ಎಂದಿನಂತೆ ವಿನೂತನ ಮಾಹಿತಿ.
ಫೋಟೊ ಚನ್ನಾಗಿವೆ
ಫೋಟೋ ಮತ್ತು ಮಾಹಿತಿ ಚೆನ್ನಾಗಿದೆ, ಧನ್ಯವಾದಗಳು
ಬಾಲಣ್ಣ ನಿಮ್ಮ ಅಗಾಧ ಪ್ರವಾಸ ಸಹನೆಗೆ ಮೊದಲು ಶರಣು.
ದೊಡ್ಡ ಸಂಪಿಗೆ ಮತ್ತು ವೀರಪ್ಪನ್ ಬಿಡಿಸಲಾರದ ಲಗಾಯ್ತಿಗಳು.
ಮುಂದಿನ ಕಂತಿಗೆ ಕಾಯ್ತಿನಿ.
ಫೋಟೊಗಳಿಗೆ 5*
@ ashokkodlady :-) ಮುಕ್ತ ಅನಿಸಿಕೆಗೆ ಧನ್ಯವಾದಗಳು. ಒಮ್ಮೆ ಹೋಗಿಬನ್ನಿ ಸರ್
ಗಿರೀಶ್ .ಎಸ. :-) ಲೇಖನ ಓದಿ ಸಂತಸ ಪಡುವ ಹಾಗು ಅನಿಸಿಕೆಯನ್ನು ತಿಳಿಸುವ ನಿಮ್ಮ ಗುಣ ನನಗೆ ತುಂಬಾ ಇಷ್ಟ ಸರ್. ನನ್ನ ಬಹಳಷ್ಟು ಲೇಖನ ಓದುವನಿಮಗೆ ಥ್ಯಾಂಕ್ಸ್.
@ಸೀತಾರಾಮ್ .ಕೆ.:-) ಜೈ ಹೋ ಸರ್
ಎಂ.ಡಿ. ಸುಬ್ರಮಣ್ಯ ಮಾಚಿಕೊಪ್ಪ :-) ಥ್ಯಾಂಕ್ಸ್.
ಜಿ.ಎಸ. ಶ್ರೀನಾಥ್ :-) ಸರ್ ನಿಮ್ಮ ಮೆಚ್ಚುಗೆಗೆ ನನ್ನ ವಂದನೆಗಳು.
ಬದರಿನಾಥ್ ಪಲವಳ್ಳಿ:-) ಧನ್ಯೋಸ್ಮಿ ಗುರುವೇ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಬಾಲು ಸರ್,
ಮತ್ತೆ ಬಿಡುವಾಗಿದೆ. ಬ್ಲಾಗುಗಳನ್ನು ಓದಲು ಪ್ರಾರಂಭಿಸಿದ್ದೇನೆ. ನಾಲ್ಕನೆ ಸರಣಿ ಕಂಡರೂ ಮೊದಲ ಸರಣಿಯಿಂದಲೇ ಓದೋಣವೆಂದು ಓದಿದೆ. ಬಾರ್ಗವಿ ನದಿ, ಶಿಲೆಗಳು, ಜಮದಗ್ನಿ ಋಷಿ ಇನ್ನೂ ಅನೇಕ ಕೌತುಕಗಳನ್ನು ತಿಳಿಸಿದ್ದೀರಿ. ಬರಹ ಕುತೂಹಲ ಕೆರಳಿಸುತ್ತಿದೆ. ಎರಡನೇ ಸರಣಿಯನ್ನು ಮತ್ತೆ ಓದುತ್ತೇನೆ.
@ ಶಿವೂ.ಕೆ.:-) ನಿಮ್ಮ ಭೇಟಿ ಖುಷಿ ಕೊಟ್ಟಿದೆ . ಇತರ ಸಂಚಿಕೆಯ ಲೇಖನ ಓದಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ.ನೀವು ಸಾಧನೆಯ ಹಾದಿಯಲ್ಲಿ ಸಾಧನೆ ಮಾಡುತ್ತಿರುವುದು ಅನನಗೆ ವಯಕ್ತಿಕವಾಗಿ ಸಂತಸ ತಂದಿದೆ. ನಿಮ್ಮ ಅಭಿಯಾನ ಹೀಗೆ ಮುಂದುವರೆಸಿ. ಧನ್ಯವಾದಗಳು
ಸರ್ ಇನ್ನೊಂದಿಸ್ಟು ಇದರಲ್ಲಿ ಸೇರಿಸಬೇಕು, ಅಲ್ಲಿಯ ಸೋಲಿಗರ ಸಂಸ್ಕೃತಿ , ರಂಗಸ್ವಾಮಿಯ ದೇವಸ್ತಾನ , ವಿವೇಕಾನಂದ ಸೇವಾ ಸಂಸ್ತೆಯ ಸಭಲಿಕರಣ, ಸೋಲಿಗರ ಹಾಡಿಯ ವೈಶಿಷ್ಟ್ಯ, ರಾತ್ರಿಯ ಚಳಿ ಪ್ರಕೃತಿ ಸರೋವರಗಳು......
@ ಶಿವಾನಂದ್ :- ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಸೋಲಿಗರ ಸಂಸ್ಕೃತಿ , ರಂಗಸ್ವಾಮಿಯ ದೇವಸ್ತಾನ , ವಿವೇಕಾನಂದ ಸೇವಾ ಸಂಸ್ತೆಯ ಸಭಲಿಕರಣ, ಸೋಲಿಗರ ಹಾಡಿಯ ವೈಶಿಷ್ಟ್ಯ, ರಾತ್ರಿಯ ಚಳಿ ಪ್ರಕೃತಿ ಸರೋವರಗಳು.....ಇವುಗಳ ಬಗ್ಗೆ ನನ್ನ ಈ ಹಿಂದಿನ ಲೇಖನಗಳಲ್ಲಿ ಮಾಹಿತಿ ಇದೆ ಬನ್ನಿ ಲಿಂಕ್ http://nimmolagobba.blogspot.in/2011/05/01.html ,ಇಲ್ಲಿಂದ ಪ್ರಾರಂಭವಾಗಿ ಸುಮಾರು ಎಂಟು ಕಂತುಗಳ ಲೇಖನ ಇದೆ ಓದಿನೋಡಿ.
Post a Comment