ನಮ್ಮ ಕಾಡಿಗೂ ಬಂದಿರಾ !!!! |
ನಮಸ್ಕಾರ ಮೊದಲ ಸಂಚಿಕೆಯನ್ನು ಆಪ್ತವಾಗಿ ಸ್ವೀಕರಿಸಿದ ನಿಮಗೆ ಧನ್ಯವಾದಗಳು. ಬನ್ನಿ ಎರಡನೇ ಸಂಚಿಕೆಯಲ್ಲಿ ನಿಮಗೆ ಕಾಡಿನ ಹಾದಿಯಲ್ಲಿ ಎದುರಾಗುವ ಅಡಚಣೆಗಳ ಪರಿಚಯ ಮಾಡಿಸುತ್ತೇನೆ. ಹೌದು ನಾವೀಗ ಹೋಗುವ ಜಾಗವೇ ಹಾಗಿದೆ ................???????
ಮೊದಲ ಸಾರಿ ಇಲ್ಲಿಗೆ ಬರುವ ಮೊದಲು "ಕಾಕನ ಕೋಟೆಯ" ಕಾಡನ್ನು ನೋಡಿದ್ದ ನಮಗೆ ಈ ಕಾಡು ಸಹ ಅದೇ ರೀತಿ ಇರಬಹುದೆಂಬ ಅನಿಸಿಕೆ ಇತ್ತು ...!!! ಬಂದಮೇಲೆ ಇಲ್ಲಿನ ಪರಿಸರ ಒಡ್ಡುವ ಸವಾಲು ನಮಗೆ ಪ್ರಕೃತಿಯ ಹೊಸ ವಿಚಾರಗಳನ್ನು ಕಲಿಸಿಕೊಟ್ಟಿತು.ನಮ್ಮ ತಂಡ ಇಲ್ಲಿಗೆ ಸುಮಾರು ಎರಡು ಸಾರಿ ಹೋದಾಗಲೂ ಹೊಸ ಹೊಸ ಅನುಭವ ಹೊತ್ತು ಬಂದಿದೆ.
ಕೊಳ್ಳೆಗಾಲದಿಂದ ಗುಂದಾಲ್ ಆಣೆಕಟ್ಟು ಹಾದಿಯಲ್ಲಿ ಅಣೆಕಟ್ಟೆ ಪ್ರದೇಶದ ಸಮೀಪ ಎಡಕ್ಕೆ ಒಂದು ಹಾದಿ ನಿಮ್ಮನ್ನು ಅಲ್ಲೇ ಇರುವ ಚೆಕ್ ಪೋಸ್ಟ್ ಬಳಿ ಕರೆದುಕೊಂಡು ಹೋಗುತ್ತದೆ. ಚೆಕ್ ಪೋಸ್ಟ್ ಬಳಿ ಸ್ವಲ್ಪ ನಿಲ್ಲೋಣ ಬನ್ನಿ ,
ಗುಂಡಾಲ್ ಅಣೆಕಟ್ಟಿನ ವಿಹಂಗಮ ಸುಂದರ ನೋಟ |
ನಿಮಗೆ ಅಲ್ಲಿ ಸುಂದರ ಪರಿಸರದ ಅನಾವರಣ ಆಗುತ್ತದೆ.
ಸುಂದರ ನಿರ್ಮಲವಾದ ವಾತಾವರಣ ನೀಡುವ ಸ್ವಾಗತ ಇದು |
ಗುಂದಾಲ್ ದ್ಯಾಮಿನಿಂದ ಬುರುಡೆ ಕ್ಯಾಂಪಿಗೆ ಸುಮಾರು ೨೩ ಕಿ.ಮೀ ದೂರದ ದಟ್ಟ ಕಾನನದ ಹಾದಿ !! ಒಂದು ಬದಿ ಆಳವಾದ ಕಣಿವೆ ಇನ್ನೊದು ಬದಿ ಕಾಡಿನ ಬೆಟ್ಟದ ಗೋಡೆ ಮಧ್ಯೆ ಸಾಗಿದ ನಮ್ಮ ಕಾರು ಸುಮಾರು ೧೦ ಕಿ.ಮೀ/ಘಂಟೆಗೆ ವೇಗದಿಂದ ತೆವಳುತ್ತಿತ್ತು !! ಮೊದಲ ಸ್ವಾಗತ ನೀಡಿದ ಸಾರಂಗಗಗಳ ಜೋಡಿ ಮೊಡಿಮಾಡಿತ್ತು!!!
ಸ್ವಾರ್ಥ ವಿಲ್ಲದ ನಮ್ಮ ಕಾಡಿಗೆ ಸ್ವಾಗತ ನಿಮಗೆ |
.
ದಾರಿಯಲ್ಲಿ ಕಡಿದಾದ ಬಂಡೆಗಳು ನೀರಿನ ಜಾರಿಯಲ್ಲಿ ಅಡಗಿ ವಾಹನಗಳು ತೊಂದರೆಗೆ ಈಡಾಗುವ ಸಂಭವ ವಿದ್ದುಆತಂಕದಲ್ಲೇ ಸಾಗಿ ಗುರಿ ಮುಟ್ಟಿದೆವು. ಕಾನನದ ಹಾದಿಯ ಪಯಣ ನಮ್ಮನ್ನು ಮುಧಗೊಳಿಸಿ ಮೋಡಿ ಮಾಡಿತ್ತು !!!
ಹಾದಿಯಲ್ಲಿ ಸಿಕ್ಕ ಸಾರಂಗ |
ಹಾಗೆ ತೆವಳಿದ ನಾವು ಕಾಡಿನೊಳಗೆ ಲೀನವಾಗಿ ಸಾಗಿದೆವುಮುಂದೆ ನಮಗೆ ಲಾಂಗೂರ್ ಕೋತಿಗಳ ಹಿಂಡು ಹಾದಿಯ ಪಕ್ಕದಲ್ಲಿದ್ದ ಮರಗಳಲಿ ಗೋಚರಿಸಿದವು.ನಾವೂ ಸಹ ನಿಧಾನವಾಗಿ ಕಾರಿನಿಂದ ಇಳಿದು ನೋಡಿದರೆ ನಮ್ಮನ್ನು ಕಂಡು ಕೋತಿಗಳು ಪರಾರಿಯಾಗಲು ಆರಂಭಿಸಿದವು. ಕ್ಷಣಾರ್ಧದಲ್ಲಿ ಇಡೀ ತಂಡ ಮಾಯವಾಗಿತ್ತು ಫೋಟೋ ತೆಗೆಯಲು ಆಗಲಿಲ್ಲವಲ್ಲಾ ಅಂತಾ ಯೋಚಿಸುತ್ತಾ ನಿಂತಿದ್ದ ನಮಗೆ ಅದ್ಭುತ ಚಿತ್ರ ಒಂದು ಸಿಕ್ಕಿತು.
ಲಾಂಗೂರ್ ಕೋತಿ ಹಾರಿದೆ ನೋಡಿ !!! |
ಲಾಂಗೂರ್ ಕೋತಿಯೊಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಸಾಹಸ ಕಂಡು ವಿಸ್ಮಯ ವಾಯಿತು ಕಾಡಿನ ಹಾದಿಯೇ ಹಾಗೆ ಯಾವ ಕ್ಷಣದಲ್ಲಿ ಯಾವ ಪವಾಡ ಬೇಕಾದರೂ ಆಗಬಹುದು , ಕ್ಷಣಾರ್ಧದಲ್ಲಿ ನಿಮಗೆ ಅರಿವಿಲ್ಲದೆ ಅಪಾಯ ಎದುರಾಗಬಹುದು , ಅಥವಾ ನೀವೂ ಊಹಿಸದೇ ಇರುವ ಪ್ರಾಣಿಯ ದರ್ಶನವಾಗಬಹುದು , ಕಾಡಿನ ಹಾದಿಯಲ್ಲಿ ಇಂತಹ ಹಲವಾರು ಘಟನೆಗಳು ನಮಗೆ ಆಗಿದೆ .ಆದರೆ ಇಂತಹ ಘಟನೆಗಳಿಂದ ನಮ್ಮ ತಾಳ್ಮೆ ಹೆಚ್ಹಾಗಿ ಪರಿಸರದ ಜೊತೆ ಹೇಗೆ ಹೊಂದಿಕೊಳ್ಳಬೇಕೂ ಎಂಬ ರೀತಿಯನ್ನು ನಾವು ಕಲಿತೆವು .
ಕಾಡಿನ ಹಾದಿಯಲ್ಲಿ ತೆವಳುತ್ತಾ ಕಾಡಿನ ಪರಿಸರ ಅನುಭವಿಸುತ್ತಾ ತೆರಳಿದ್ದ , ಸವಾಲಿನ ರಸ್ತೆಯಲ್ಲಿ ನಗು ನಗುತ್ತಾ ಕಾರ್ ಡ್ರೈವ್ ಮಾಡುತ್ತಿದ್ದರೂ ವೇಣುಗೋಪಾಲ್ , ನಮ್ಮ ತಂಡದ ಕಾರು ಚಾಲನೆಯ ಅತ್ಯಂತ ಅನುಭವಿ ಇವರು , ಕಾಡಿನ ದುರ್ಗಮ ಹಾದಿಯಲಿ ತಾಳ್ಮೆಯಿಂದ ಯಾವುದೇ ಕಾರಣಕ್ಕೂ ಪರಿಸರಕ್ಕೆತೊಂದರೆ ಮಾಡದೆ ಕಾರ್ ಚಾಲನೆ ಮಾಡುವ ಕಾರ್ಯದಲ್ಲಿದ್ದರು. [ನಾವಿದ್ದ ಚಿಕ್ಕ ಕಾಡಿನ ಹಾದಿಯಲ್ಲಿ ಒಂದು ಕಡೆ ಬೆಟ್ಟ ಹಾಗು ಕಾಡು ಮತ್ತೊಂದು ಬದಿಯಲ್ಲಿ ಆಳವಾದ ಪ್ರಪಾತ ಇದ್ದು ವಾಹನ ಚಾಲನೆಯಲ್ಲಿ ಸ್ವಲ್ಪ ತಪ್ಪಿದರೂ ಕಾರು ಇಲ್ಲಾ ಬೆಟ್ಟಕ್ಕೆ ಡಿಕ್ಕಿ ಯಾಗುವುದು ಅಥವಾ ಪ್ರಪಾತಕ್ಕೆ ಜಾರುವುದು ಆಗುತ್ತಿತ್ತು. ] ಸ್ವಲ್ಪ ಹಾದಿ ಕ್ರಮಿಸಿದ ನಮಗೆ ಎದುರಾಗಿದ್ದು ಒಂದು ಬಂಡೆಯ ಇಳಿಜಾರು ಹಾದಿ ಅದರಮೇಲೆ ಹರಿಯುತ್ತಿರುವ ಜರಿ !!!
ಕಾಡಿನ ಮದ್ಯೆ ಎದುರಿಸಿದ ಸವಾಲು |
ಸ್ವಲ್ಪ ತಪ್ಪಿದರೂ ಪ್ರಪಾತ ಸೇರಿಸುವ ಹಾದಿಯಲ್ಲಿ ವೇಣು ಮೆರೆದ ಸಾಹಸ. |
ನಮ್ಮ ಕಾರು ಇಳಿಜಾರಿನ ಬಂಡೆಯ ಮೇಲೆಹರಿವ ಜರಿಯೊಳಗೆ ಹಾದು ಹೇರ್ ಪಿನ್ ನಂತಹ ಏರುಮುಖದ ಹಾದಿಯ ದಿನ್ನೆಯನ್ನು ಹತ್ತ ಬೇಕಾಗಿತ್ತು. ಜೊತೆಗೆ ಬಂಡೆಯ ಮೇಲೆ ಹರಿವ ನೀರಿನ ಒಳಗೆ ಕಲ್ಲಿದ್ದು ಅದು ಕಾರಿನ ಎಂಜಿನ್ಗೆ ಹಾನಿಮಾಡುವ ಭಯ ಒಂದು ಕಡೆ , ಆದರೂ ನಮ್ಮಲ್ಲಿ ಕೆಲವರು ಕಾರಿನಿಂದ ಇಳಿದು ಸುತ್ತಲ ಪರಿಸರ ಅವಲೋಕನ ಮಾಡಿ ಯಾವುದೇ ಅಪಾಯ ವಿಲ್ಲವೆಂದು ಕಾತರಿ ಪಡಿಸಿಕೊಂಡು ಕಾರನ್ನು ಆ ಹಾದಿಯಲ್ಲಿ ಮೇಲೆತರಲು ವೇಣುಗೋಪಾಲ್ ಗೆ ಅನುವುಮಾಡಿದೆವು. ಅವರೂ ಸಹ ಚಾಕಚಕ್ಯತೆ ಯಿಂದ ಕಾರನ್ನು ಬಂಡೆ ದಾಟಿಸುವಲ್ಲಿ ಯಶಸ್ವಿಯಾದರು .ಇಪ್ಪತ್ತ ಮೂರು ಕಿ.ಮಿ ದಾರಿಯನ್ನು ಕ್ರಮಿಸಲು ಸುಮಾರು ನಾಲ್ಕು ಘಂಟೆ ಕಾಲ ತೆಗೆದು ಕೊಂದು ಸಾಹಸದಿಂದ ಬುರುಡೆ ಕ್ಯಾಂಪಿಗೆ ಬಂದೆವು...............................................ಇಲ್ಲಿ ವೀರಪ್ಪನ್ ಇದ್ದನಂತೆ .!!!!!!
ಬುರುಡೆ ಕ್ಯಾಂಪ್ |
22 comments:
ಕಾಡಿನ ಅದ್ಭುತ ಅನುಭವಗಳನ್ನೂ ನಮ್ಮೊಂದಿಗೆ ಹಂಚಿ ಕೊಳ್ಳುತ್ತಿರುವುದಕ್ಕೆ ಧನ್ಯವಾದಗಳು.
ಇದು ಇನ್ನೂ ಮುಂದುವರೆಯುವುದೇ.. ತುಂಬಾ ಚೆನ್ನಾಗಿದೆ.. ಜೊತೆಯಲ್ಲಿ ಚಿತ್ರಗಳ ವಿಶೇಷತೆ ಮತ್ತು ಕಾಡಿನ ಹಾದಿಯ ಗಾಡಿಯ ಪ್ರಯಾಣ ಓದಲು ಕುತೂಹಲ.. :)
sundaravagide
ಬಾಲಣ್ಣ, ವೀರಪ್ಪನ್ ಹಿಂದೆ ಡಾ|| ರಾಜ್ ಅವರನ್ನು ಅಪಹರಿಸಿದಾಗ ನಾನು ಸುಪ್ರಭಾತ ಟೀವಿಯಲ್ಲಿದ್ದೆ. ಈಗ ವಿಜಯ ಕರ್ನಾಟಕದಲ್ಲಿರುವ ಎಲ್. ಪ್ರಕಾಶ್ ಅವರ ಜೊತೆ ನಾನೂ ಈ ಕಾಡು ಮೇಡು ಅಲೆದಿದ್ದೇನೆ. ದಶಕದ ನಂತರ ನೆನಪನ್ನು ಕೆದಕಿದ್ದಕ್ಕಾಗಿ ಮೊದಲ ಧನ್ಯವಾದ.
ವೀರಪ್ಪನ್ ಅಲೆದಾಡಿದ ಕಾಡಿನ ಚಿತ್ರವೇ ವಿಚಿತ್ರ ಅಲ್ಲವೇ? ಕುರುಚಲ ಕಾಡು, ನಿಭಿಡ ಕಾಡು, ಬಟ್ಟಾ ಬಯಲು, ಎತ್ತರದ ಆನೆ ಹುಲ್ಲು, ಕಡಿದಾದ ಗಿರಿ ಶಿಖರ, ಗಿರಿ ಜನ ಹಾಡಿಗಳು, ತೊರೆ, ಝರಿ, ನದಿ ಮತ್ತು ವನ್ಯ ಮೃಗಗಳು!
ಬುರುಡೆ ಕಾಡಿಗೂ ಕಾಡುಗಳ್ಳನಿಗೂ ಅನೂಹ್ಯ ಸಂಬಂಧ!
ಇವೆಲ್ಲ ಸವಿದು ಬಂದ ನಿಮ್ಮ ಸಾಹಸ ಬುದ್ಧಿಗೆ ಶರಣು. ನಿರೂಪಣಾ ಶೈಲಿಗೆ 99/100 ಛಾಯಾಗ್ರಾಹಣಕ್ಕೆ 100/100.
ಬಾಲಣ್ಣ...
ತುಂಬಾ ರೋಚಕವಾಗುತ್ತ ಸಾಗಿದೆ ನಿಮ್ಮ ಚಾರಣ..!
ನಾವೂ ನಿಮ್ಮೊಡನೆ ಸಾಗುವ ಅನುಭವ !
ಮರದಿಂದ ಮರಕ್ಕೆ ಹಾರುವ ಕೋತಿಯ ಫೋಟೊ ಸೂಪರ್ !!
ಮುಂದುವರೆಯಲಿ ಜೈತ್ರ ಯಾತ್ರೆ !!
ಸೊಗಸಾದ ಪ್ರಯಾಣ ಕಥನ... ಜೈ ಜೈ ಜೈ ಹೋ !!
@ ಡಾಕ್ಟರ್ ಕೃಷ್ಣಮೂರ್ತಿ :- ಕಾಡಿನ ಪಯಣದಲ್ಲಿ ಸಾಥ್ ನೀಡುತ್ತಿರುವುದಕ್ಕೆ ನಿಮಗೆ ವಂದನೆಗಳು.ಮುಂದಿನ ಸಂಚಿಕೆಗಳಲ್ಲೂ ಜೊತೆಯಾಗಿರಿ ಸರ್.
ಪ್ರಶಾಂತ್ ಕಟಾವಕರ್ :- ಕಾಡಿನ ಸುತ್ತಾಟಕ್ಕೆ ಜೋತೆಯಾಗಿದ್ದಕ್ಕೆ ವಂದನೆಗಳು.ಹೌದು ಕಾಡಿನ ಸೊಬಗೆ ಹಾಗೆ ಎಷ್ಟು ಜಾಲಾಡಿದರೂ ಹೊಸದು ಸಿಗುತ್ತದೆ.ನಿಮ್ಮ ಅನಿಸಿಕೆಗೆಜೈ ಹೋ
ವಂದನ ಶಿಗೆಹಳ್ಳಿ :- ನಿಮ್ಮ ಅನಿಸಿಕೆಗೆ ವಂದನೆಗಳು
ಬದರಿನಾಥ್ ಪಲವಳ್ಳಿ:- ಈ ಸಂಚಿಕೆ ಓದಿ ಹಳೆಯ ನೆನಪನ್ನು ಬಿಚ್ಚಿ ಹಂಚಿಕೊಂಡದ್ದು ಖುಷಿಕೊಟ್ಟಿತು .ಹೌದು ಕಾಡಿನ ಬಗ್ಗೆ ಎಷ್ಟು ಬರೆದರೂ ಧಣಿವಾಗದು. ನಿಮ್ಮ ಪ್ರೀತಿ ತುಂಬಿದ ಅನಿಸಿಕೆಗೆ ವಂದನೆಗಳು ಬದರೀಜಿ .
ಪ್ರಕಾಶ್ ಹೆಗ್ಡೆ :-ನಿಮ್ಮ ಹಾರೈಕೆಯಂತೆ ಕಾನನ ಯಾತ್ರೆ ಮುಂದುವರೆಯುತ್ತದೆ.ಕಾಡಿನ ಪಯಣದಲ್ಲಿ ನಿಮ್ಮಂತವರ ಜೊತೆಯಿರಲು ಮತ್ತಷ್ಟು ವಿಚಾರಗಳು ಹೊರಬರಲಿವೆ.ನಿಮ್ಮ ಪ್ರೀತಿ ಮಾತಿಗೆ ಜೈ ಹೋ
Nimma anubhava rochakavaagide sir....
ವ್ಹಾ............!
ಕ್ಯಾಪ್ಟನ್ ಬಾಲಣ್ಣ,
ಕಾಡಿನ ಈ ಅಮೋಘ ಅನುಭವದ ಚಿತ್ರಣ ನಾವೇ ಅನುಭವಿಸಿದಷ್ಟು ಸುಂದರವಾಗಿ ನಿರೂಪಿಸಿದ್ದೀರಾ. ಅತ್ಯುತ್ತಮ ಚಿತ್ರಗಳು, ಮೈ ಜುಮ್ಮೆನ್ನುವ ಡ್ರೈವಿಂಗ್ ಅನುಭವಗಳು, ರೋಚಕ ದೃಶ್ಯ ವೈಭವದ ಕಾಡಿನ ಚಿತ್ರಣ ಸೊಗಸಾಗಿದೆ.
(ನಿಮ್ಮೊಂದಿಗೆ ಕಾಡಿನ ಚಾರಣ ಮಾಡಬೇಕೆಂಬ ಆಸೆ ಯಾವಾಗ ಈದೆರುತ್ತದೆಯೋ ಗೊತ್ತಿಲ್ಲ!)
ಚೆನ್ನಾಗಿ ನಿದ್ದೆ ಮಾಡಿ, ಹುಷಾರು! ಹುಲಿ ಏನಾದರು ಬಂದೀತು!
ತುಂಬಾ ಚೆನ್ನಾಗಿ ಕ್ಲಿಕ್ಕಿಸ್ತೀರಿ..
tumbaa chennagide sir
tadavaagi odta irodakke kshamisi
innu tappade odtini :)
@ಗಿರೀಶ್.ಎಸ್ :-)ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.
@ಮನದಾಳದಿಂದ............ :-)ಪ್ರೀತಿಯ ಮಾತಿಗೆ ಶರಣು, ಹೌದು ಕಾಡಿನ ಸೆಳೆತವೆ ಹಾಗೆ ಪ್ರವೀಣ್ ಸರ್. ಪ್ರತೀ ಅಲ್ಲಿ ಕ್ಷಣವೂ ಕುತೂಹಲ ಇರುತ್ತದೆ, ಹಾಗೆ ಬಹಳ ಎಚ್ಚರಿಕೆಯಿಂದಲೂ ಇರಬೇಕಾಗುತ್ತದೆ. ಕಾಡಿಗೆ ಒಮ್ಮೆ ಹೋಗೋಣ ಆ ಕಾಲಾ ಬೇಗ ಬರಲಿ.ಹ ಹ ಹ ಹುಲಿ ಬರಲ್ಲಾ ಬಿಡಿ , ಬಂದ್ರೆ ಇನ್ನೊಂದು ಲೇಖನ ಅದರ ಬಗ್ಗೆ ಕೊರೆಯಬಹುದು ಆಲ್ವಾ ??
@ವಿಚಲಿತ...:-) ಅನಿಸಿಕೆಗೆ ಥ್ಯಾಂಕ್ಸ್ .
@ಸಾಗರದಾಚೆಯ ಇಂಚರ:-) ಹೌದು ಸರ್ ನಿಮ್ಮನ್ನಾ ತುಂಬಾ ಮಿಸ್ ಮಾಡ್ತಾ ಇದ್ದೆ , ಮುಂದೆ ನಿಮ್ಮ ಸಾಥ್ ಈ ಪಯಣದಲ್ಲಿ ಇರಲಿ.ಪ್ರೀತಿಯ ಮೆಚ್ಚಿನ ಮಾತಿಗೆ ಧನ್ಯವಾದಗಳು.
ಕಾಡಿನ ಅದ್ಭುತ ಅನುಭವಗಳನ್ನೂ ನಮ್ಮೊಂದಿಗೆ ಹಂಚಿ ಕೊಳ್ಳುತ್ತಿರುವುದಕ್ಕೆ ಧನ್ಯವಾದಗಳು.
ಬಾಲು ಸರ್,
ಎರಡನೇ ಭಾಗದಲ್ಲಿ ನಿಮ್ಮ ಕಾರಿನ ಪ್ರಯಾಣದಲ್ಲಿ ಪಟ್ಟ ಪ್ರಯಾಸಗಳ ವಿವರಣೆಯನ್ನು ನೋಡಿದರೆ ನೀವು ಪಟ್ಟಿರುವ ಕಷ್ಟ ತಿಳಿಯುತ್ತದೆ...ಆದ್ರೂ ಅಲ್ಲಿನ ಶುಭ್ರ ವಾತಾವರಣದಲ್ಲಿದ್ದಾಗ ಅದೆಲ್ಲ ಮರೆತುಹೋಗುತ್ತದೆ ಅಲ್ಲವೇ..
ಲಂಗೂರ್ ಜಂಪಿಂಗ್ ಫೋಟೊ ತುಂಬಾ ಚೆನ್ನಾಗಿದೆ.
@ ಸೀತಾರಾಮ .ಕೆ.:-) ಲೇಖನ ಓದಿ ಮೆಚ್ಚಿದ್ದಕ್ಕೆ ವಂದನೆಗಳು ಸರ್ , ಮುಂದಿನ ಸಂಚಿಕೆಯಲ್ಲೂ ಜೊತೆ ಯಾಗಿರಿ .
@ ಶಿವೂ .ಕೆ :-) ನಿಮ್ಮ ಅನಿಸಿಕೆ ನಿಜ ಸರ್ ಕಾಡಿನ ಅನುಭವಗಳೇ ಹಾಗೆ , ಲೇಖನ ಓದಿ ಅನಿಸಿಕೆ ತಿಳಿಸಿದ ನಿಮಗೆ ವಂದನೆಗಳು.
Post a Comment