|
ಭೂ ವರಾಹ ನಾಥ ಸ್ವಾಮೀ ಮೂಲ ವಿಗ್ರಹ. |
ವರಾಹ ನಾಥ ಕಲ್ಲಹಳ್ಳಿ ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ !ಕೆ.ಅರ. ಪೇಟೆ ಯಿಂದ ೧೮.ಕಿ.ಮಿ.,ಮೈಸೂರಿನಿಂದ ೪೩ ಕಿ.ಮಿ. ದೂರದಲ್ಲಿದೆ.ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ!ದೇವಾಲಯ ಪೂರ್ವಕ್ಕೆ ಮುಖ ಮಾಡಿದ್ದು ,ಗರ್ಭ ಗಡಿಯಲ್ಲಿ ಎತ್ತರದ ಪೀಠದ ಮೇಲೆ ವರಾಹ ಸ್ವಾಮಿ ಹಾಗು ಎಡ ತೊಡೆಯ ಮೇಲೆ ಭೂದೇವಿಯು ಆಸಿನಳಾಗಿದ್ದು, ಅವಳ ಸೊಂಟವನ್ನು ವರಾಹಸ್ವಾಮಿಯು ಬಳಸಿ ವಿಶಿಷ್ಟ ಬಂಗಿಯಲ್ಲಿ ದರ್ಶನ ನೀಡುತ್ತಾನೆ!ಮೂರ್ತಿಯು ಭವ್ಯ ವಾಗಿದ್ದು ೧೫ ಅಡಿ ಎತ್ತರವಿದೆ!ಹೊರಗಿನಿಂದ ದೇವಾಲಯ ನೋಡಿದವರಿಗೆ ಇಷ್ಟು ದೊಡ್ಡ ದೇವರ ಮೂರ್ತಿ ಒಳಗಡೆ ಇದೆ ಎಂದರೆ ನಂಬಲಾರರು!ಇದನ್ನು ಭೂವರಾಹನಾಥ ಸನ್ನಿದಿ ಎಂದು ನಂಬಿರುವ ಜನರು ಭೂಮಿಗೆ ಸಂಬಂದಿಸಿದ ಕಷ್ಟಗಳು ಪರಿಹಾರ ವಾಗುತ್ತವೆ ಎಂದು ಹೇಳುತ್ತಾರೆ!ದೇವಾಲಯದ ಮುಂಭಾಗದಲ್ಲಿ ಒಂದು ಶಿಲಾಶಾಸನದ ಕಲ್ಲಿದ್ದು ದೇವಾಲಯದ ಮಾಹಿತಿ ನೀಡುತ್ತಿದೆ
|
ಶಾಸನ ಕಲ್ಲು |
|
ಹಿಂದೆ ಇದ್ದ ದೇವಾಲಯ.[ ಈಗ ಹೊಸ ದೇವಾಲಯ ನಿರ್ಮಾಣ ಆಗುತ್ತಿದೆ ] |
.೧೩೩೪ರ ಈ ಶಾಸನದ ರೀತ್ಯಾ ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ ,ರಾಣಿ ದೇಮಲದೇವಿಯ ಹೆಸರಿನಲ್ಲಿ ದೇವಲಾಪುರ ಎಂದು ನಾಮಕರಣ ಮಾಡಿ ,ರಾಜ ಗುರು ಗುಮ್ಮಟ ದೇವನಿಗೆ ದಾನ ಮಾಡಿರುವುದಾಗಿ ತಿಳಿಸುತ್ತದೆ.ಶಾಸನದಲ್ಲಿ ಸೂರ್ಯ-ಚಂದ್ರ ,ಕಮಂಡಲ ,ದೀಪ ಮಾಲೆ ಕಂಬ ಅರ್ದ ಮಾನವ ಹಾಗು ಅರ್ದ ಬೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ
.ಬಂದವರು ಜೊತೆಯಲ್ಲಿ ಊಟ ತಿಂಡಿ ಯನ್ನು ತರುವುದು ಒಳ್ಳೆಯದು ! ಇಲ್ಲಿ ತಿನ್ನಲು ಯಾವ ಸೌಲಬ್ಯ ಇರುವುದಿಲ್ಲ .ಮೈಸೂರಿನಿಂದ ಒಂದು ಸರ್ಕಾರಿ ಬಸ್ಸು ಬೆಳಿಗ್ಗೆ ೭ ಗಂಟೆಗೆ ಹೊರಡುತ್ತದೆ .ಸ್ವಂತ ವಾಹನ ಇದ್ದಲ್ಲಿ ಇನ್ನು ಸುತ್ತ ಮುತ್ತ ಕೆಲವು ಪ್ರದೇಶ ನೋಡಬಹುದು!ಒಮ್ಮೆ ಪ್ರಯತ್ನಿಸಿ ಸಂತೋಷ ಹೊಂದಿರಿ.
|
ಹೇಮಾವತಿ ನದಿಯ ಸುಂದರ ನೋಟ. |
ಹಾಗೆ ಪಕ್ಷಿ ವೀಕ್ಷಕರಿಗೆ ಸಿಹಿ ಸುದ್ದಿ ಇಲ್ಲೇ ಪಕ್ಕದಲ್ಲೇ ಹರಿಯುವ ಹೇಮಾವತಿ ನದಿಯ ದಂಡೆಯಲ್ಲಿ ನಿಮಗೆ ಹಲವಾರು ಬಗೆಯ ನೀರು ಹಕ್ಕಿಗಳು, ಪಕ್ಕದ ಹಸಿರಿನ ಗದ್ದೆಗಳಲ್ಲಿ ಬಗೆ ಬಗೆಯ ಹಲವಾರು ಜಾತಿಯ ಹಕ್ಕಿಗಳನ್ನು ಕಾಣಬಹುದು . ಇಲ್ಲಿಗೆ ತಲುಪಲು ಬೆಂಗಳೂರಿನಿಂದ ಮಂಡ್ಯ , ಶ್ರೀ ರಂಗಪಟ್ಟಣದ ಸಮೀಪ ಕಿರಂಗೂರ್ ಗೇಟ್ ಬಳಿ ಬಲಕ್ಕೆ ತಿರುಗಿ ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಗಿ ಪಾಂಡವಪುರ ರೈಲ್ವೆ ನಿಲ್ದಾಣ, ಚಿನಕುರುಳಿ, ಭೂಕನಕೆರೆ , ಅಲ್ಲಿಂದ ಗಂಜಿಗೆರೆ , ಅಲ್ಲಿಂದ ನಾಲ್ಕು ಕಿ.ಮಿ.ಕ್ರಮಿಸಿದರೆ ನಿಮಗೆ ವರಾಹನಾಥ ಕಲ್ಲಹಳ್ಳಿ ಸಿಗುತ್ತದೆ. ಇದು ಹತ್ತಿರದ ದಾರಿಯೂ ಸಹ ಹೌದು. ಭೂ ವಿವಾಧಗಳಿಗೆ ಸಂಭಂದಿಸಿದಂತೆ ಇಲ್ಲಿ ಪರಿಹಾರ ಪಡೆಯಲು ಬಹಳಷ್ಟು ಜನ ಇಲ್ಲಿಗೆ ಬರುತ್ತಾರೆ. ಅದಕ್ಕಾಗೆ ಈ ದೇವರನ್ನು ಭೂ ವರಾಹನಾಥ ಸ್ವಾಮೀ ಎಂದು ಕರೆಯುವುದಾಗಿ ತಿಳಿದು ಬರುತ್ತದೆ.ಇಲ್ಲಿಗೆ ಸಮೀಪದಲ್ಲೇ ಹಲವಾರು ಕಣ್ಣಿಗೆ ಕಾಣದ ಉತ್ತಮ ಪ್ರವಾಸಿ ತಾಣವಾಗಲು ಅರ್ಹತೆ ಉಳ್ಳ ತಾಣ ಗಳಿವೆ ಅವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ. ನೀವೂ ಒಮ್ಮೆ ಕುಟುಂಬದೊಡನೆ ಹೋಗಿಬನ್ನಿ ಇಲ್ಲಿನ ಪ್ರಶಾಂತ ವಾತಾವರಣ ನಿಮಗೆ ಮುದನೀಡುತ್ತದೆ.
|
ನವೀಕರಣ ಹಂತದಲ್ಲಿರುವ ದೇವಾಲಯ. |
ಮತ್ತೊಂದು ವಿಚಾರ ಹಾಲಿ ಈ ದೇವಾಲಯವನ್ನು ನವೀಕರಿಸಲಾಗುತ್ತಿದ್ದು. ವಾರಾಹನಾಥ ಮೂರ್ತಿಯ ದರ್ಶನ ಲಭ್ಯವಾಗುವುದಿಲ್ಲ. ಹಾಗೂ ಪಕ್ಕದಲ್ಲೇ ಇರುವ ಮತ್ತೊಂದು ಕಟ್ಟಡದಲ್ಲಿ ಮೂರ್ತಿಯ ಭಾವಚಿತ್ರ ಇಟ್ಟು ಪೂಜೆ ಮಾಡಲಾಗುತ್ತಿದೆ. ಈ ನಿರ್ಮಾಣ ಕಾರ್ಯ ಮುಕ್ತಾಯವಾಗಲು ಇನ್ನೂ ಹಲವು ತಿಂಗಳು ಬೇಕಾಗಬಹುದು ಅಲ್ಲಿಯವರೆಗೆ ನೀವು ಕಾಯುವುದು ಸೂಕ್ತ.ಈ ಮಾಹಿತಿ ನಿಮಗೆ ಅನುಕೂಲವಾಗಲಿ.
11 comments:
ಒಳ್ಳೇ ಮಾಹಿತಿಪೂರ್ಣ ಬರಹ.
ಒಳ್ಳೆಯ ಮಾಹಿತಿ. ನಾನು ಹೋಗಬೇಕಂತಿದ್ದೆ ಅಲ್ಲಿಗೆ. ಈಗ ಅಲ್ಲಿ ಮಾರ್ಗಸೂಚಿ ಹಾಕಿಸಿದವ ನನ್ನ ಸ್ನೇಹಿತನ ಮಗ.-msh
ಮಾಹಿತಿ ಮತ್ತು ಚಿತ್ರಗಳ ಸಂಗ್ರಹಣೆಗೆ ನಿಮಗೆ ನೀವೇ ಸಾಟಿ ಬಾಲು...ಹ್ಯಾಟ್ಸ್ ಆಫ್...ಚನ್ನಾಗಿದೆ ವಿವರಣೆಭರಿತ ಲೇಖನ..
ಮಾಹಿತಿ ಮತ್ತೆ ಚಿತ್ರಗಳು ತುಂಬಾ ಚೆನ್ನಾಗಿದೆ ಬಾಲು ಸರ್. ಉತ್ತಮ ಲೇಖನ.
ಬಾಲಣ್ಣ...
ನಮ್ಮ ಮನೆಯವರೆಲ್ಲ ಹೋಗಬೇಕೆಂದಿದ್ದೆವು..
ಅಪರೂಪದ ದೇವಾಲಯ..
ತುಂಬಾ ತುಂಬಾ ಧನ್ಯವಾದಗಳು..
ಮುಂದಿನ ಬಾರಿ ರಜೆಗಳು ಸಿಕ್ಕಿದಾಗ ನಿಮ್ಮನ್ನು ಬಿಡೋದಿಲ್ಲ... ಹೋಗಿ ಬರೋಣ...
ಚಿತ್ರಗಳು ಚೆನ್ನಾಗಿವೆ. ಭೂ ವರಾಹನಾಥನ ವಿಗ್ರಹ ಬಹಳ ಎತ್ತರವಾಗಿದ್ದು ಆಶ್ಚರ್ಯ ಮೂಡಿಸಿತು. ಒಳ್ಳೆಯ ಸ್ಥಳ. ದೇವಾಲಯ ಸಿದ್ಧಗೊಂಡ ನಂತರ ಒಮ್ಮೆ ಹೋಗಿಬರುವೆ
baalu anna idu bahala olle sthala
naavu hogiddevu 3 varshada hinde, bhoovaraha swamy anta heltaare.
tumbaa chennagide
prashanthavagide
naavu hodaga neeralli nadedukondu allige hogiddevu
ಲೇಖನ ಮೆಚ್ಚಿ ಪ್ರೀತಿಯಿಂದ ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು.
ವರಾಹ ದೇವರು ಕೇವಲ ತಿರುಪತಿಯಲ್ಲಿ ಅಂದುಕೊಂಡಿದ್ದೆ.
Post a Comment