ನಾವ್ಯಾಕೆ ಹೀಗೆ  ಎಡಬಿಡಂಗಿಗಳು????  ಜೀವನ  ಇಷ್ಟೇನೆ ??? ಚಮ್ಮಾರ  ಕಲಿಸಿದ ಪಾಠ !!!!!!!
-  "ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ " ಹಾಡು ತೇಲಿ ಬರುತ್ತಿತ್ತು ,  ಹಾಗೆ ಹೆಜ್ಜೆಹಾಕುತ್ತಾ  ನಡೆದು ಬರುತ್ತಿದ್ದೆ , ರಸ್ತೆಯ ಬದಿಯಲ್ಲಿ  ಹರಿದ  ಚಾಪೆಯ  ಮೇಲೆ  ಸುತ್ತಾ ಹರಿದ ಚಪ್ಪಲಿ ರಾಶಿಗಳ ನಡುವೆ  ವಯಸ್ಸಾದ  ವ್ಯಕ್ತಿಯೊಬ್ಬ ತನ್ನೆದುರು  ನಿಂತ ದಡೂತಿ ಮಹಿಳೆಯ ಮುಂದೆ ಕೈಚಾಚಿ  ತನ್ನ ಕೆಲಸದ ಕೂಲಿ ಬೇಡುತ್ತಿದ್ದ . ಮೈತುಂಬಾ  ಒಡವೆ ರಾಶಿ ಹಾಕಿಕೊಂಡಿದ್ದ ಆ ಮಹಿಳೆ  ಹಣ ಕೊಡಲು ಕೊಸರಾಡುತ್ತಿದ್ದರು. ಬನ್ನಿ ಹತ್ತಿರ  ಹೋಗಿ ನೋಡೋಣ.
 
- ಚಮ್ಮಾರ  :-) "ತಾಯಿ ಇಗೊಳ್ಳಿ ನಿಮ್ಮ ಚಪ್ಪಲಿ ರೆಡಿ  ಹತ್ತು ರುಪಾಯಿ............... ಕೊಡಿ  "  
-   
-  ಮಹಿಳೆ :-)    "ಏನಪ್ಪಾ ಹಾಗೆ ಹೀಗೆ  ಎರಡು  ಹೊಲಿಗೆ ಹಾಕಿಬಿಟ್ಟು  ಹತ್ತು ರುಪಾಯಿ ಕೇಳ್ತೀಯ ??? ನಾ ಕೊಡೋದೇ     ಎರಡು  ರುಪಾಯಿ  "      
 
-                                                                                                     ಚಮ್ಮಾರ :- "ಅಲ್ಲಾ ತಾಯಿ ನಿಮ್ಮೆದುರ್ಗೆ ಕಾಲ್ ಗಂಟೆ ಯಿಂದ  ಎರಡೂ ಚಪ್ಪಲಿ   ಒಲ್ದಿದ್ದೀನಿ  , ಹೊಲ್ಗೆ ದಾರ , ಮ್ಯಾಣ ಎಲ್ಲಾ ಸಾನೆ ದುಬಾರಿ ಯಾಗವೇ  , ನೀವು  ತಿಳ್ದೊರು  ನೀವೇ ಇನ್ಗಂದ್ರೆ ಎಂಗೆ ತಾಯಿ , ಹತ್ತು ರುಪಾಯಿ ಕೊಡಿ ಇಲ್ಲಾ ಅನ್ಬ್ಯಾಡಿ''
-                                                                                                        ಮಹಿಳೆ :-  "ಏನಯ್ಯ  ಬಲೆ ಮಾತಾಡ್ತಿ  ತಗೋ  ಅಂತಾ ಐದು ರುಪಾಯಿ  ನಾಣ್ಯ ಎಸೆದು  ಹೊರಟಳು. "
-    
 
- ಚಮ್ಮಾರ   :- "ತಾಯಿ ತಾಯಿ ಬಡವನ ಹೊಟ್ಟೆ ಮ್ಯಾಲೆ   ಒಡಿ  ಬ್ಯಾಡಿ   ಒಗ್ಲಿ ಇನ್ಮೂರು ರುಪಾಯಿ ಕೊಡಿ."
 
-     ಅಂತಾ ಬೇಡಿದ  ಆದರೆ   ಅ ಹೆಂಗಸು ಈ ಮಾತನ್ನು  ಕೇಳದೆ   ಸರ ಸರನೆ ಹೊರಟೆ ಬಿಟ್ಟಳು . ಮನಸಿಗೆ   ಬೇಸರವಾಯಿತು ಹಾಗೆ ಸ್ವಲ್ಪ ದೂರ ಮುಂದುವರೆದೆ  ನನ್ನ ಸ್ನೇಹಿತ ರಘು  ಸಿಕ್ಕಿದ . ಬಾರೋ  ಬಹಳ ವರ್ಷ ಆಯ್ತು ನಿನ್ನ ಜೊತೆ ಮಾತಾಡಬೇಕು , ನನ್ನ ಅಂಗಡಿಗೆ ಹೋಗೋಣ ಬಾ ಅಂತಾ ಬಲವಂತ  ಮಾಡಿ ಕರೆದೊಯ್ದಾ . ಅಂಗಡಿಗೆ ಹೋದ್ರೆ  ಎರಡುವರ್ಷದ ಹಿಂದೆ  ಸುಮಾರಾಗಿದ್ದ  ಸಣ್ಣ  ಬಟ್ಟೆ ಅಂಗಡಿ ಇಂದು   ವಿವಿಧ ಬಗೆಯ ಸೀರೆ , ಗಾರ್ಮೆಂಟ್ಸ್  ಗಳ ಷೋ ರೂಂ ಆಗಿ  ಕಂಗೊಳಿಸಿತ್ತು.. ಬಾ ಗುರು  ನಿಧಾನವಾಗಿ ಮಾತಾಡೋಣ ಅಂತಾ ಅಂದವನೇ  ಯಾರನ್ನೋ ನೋಡಿ,  ಬಾಲು ಸ್ವಲ್ಪ ಇರು  ಬಂದೆ ಒಂದು ಒಳ್ಳೆ ಗಿರಾಕಿ ಬಂದಿದ್ದಾರೆ  ಅಂತಾ ನನ್ನನ್ನು  ಕುರ್ಚಿಯಲ್ಲಿ ಪತಿಷ್ಟಾಪಿಸಿ ಹೊರಟ. ನಾನೂ ಸಹ ಯಾರಪ್ಪಾ ಅಂತಾ  ಅತ್ತ ಗಮನಿಸಿದರೆ  ಅದೇ  ಹೆಂಗಸು !!! ಹೌದು ನಿಜ ಅದೇ ಹೆಂಗಸು  ಆ ಚಮ್ಮಾರನಿಗೆ  ಚಳ್ಳೆ ಹಣ್ಣು ತಿನ್ನಿಸಿ ಬಂದ  ಮಹಾ ತಾಯಿ  ದರ್ಶನ ಇಲ್ಲಿ.  ಅಷ್ಟರಲ್ಲಾಗಲೇ ನನ್ನ ಸ್ನೇಹಿತನ ಹೆಂಡತಿ  ಆ ಹೆಂಗಸಿಗೆ  ಸೀರೆ ತೋರಿಸುತ್ತಾ  ವ್ಯಾಪಾರ ಶುರು ಮಾಡಿದ್ದರು. ನನ್ನ ಸ್ನೇಹಿತನನ್ನು  ಪಕ್ಕಕ್ಕೆ  ಕರೆದು  ನಡೆದ ವಿಚಾರ ತಿಳಿಸಿ  ಈ ಮಹಿಳೆ ಮಾಡಿದ ಮಹಾ ಕಾರ್ಯ ವರ್ಣಿಸಿದೆ,  ನೋಡ್ತಾ ಇರು  ಹಾಗೆ  ಅಂದವನೇ ಅವನ ಹೆಂಡತಿಗೆ  ಮರಾಟಿಯಲ್ಲಿ ಏನೋ ಹೇಳಿದ .  ಅವನ ಹೆಂಡತಿ ಇಲ್ಲೇ  ಬನ್ನಿ ಅಣ್ಣಾ , ಅಕ್ಕಾ ಚೆನ್ನಾಗಿದ್ದಾರಾ  ಅಂತಾ ನಕ್ಕು ವ್ಯಾಪಾರದಲ್ಲಿ ಮಗ್ನರಾದರು.  ನಾನೂ ಸಹ ಅಲ್ಲೇನು ನಡೆಯುತ್ತದೆ ಅಂತಾ ಆಸಕ್ತಿಯಿಂದಾ ನೋಡುತ್ತಾ ಹತ್ತಿರದಲ್ಲಿ ಕುಳಿತೆ.  ಬನ್ನಿ ಅಲ್ಲಿನ ಮಾತನ್ನು ಕೇಳೋಣ.
 
 
-   ರಘು :- "ನಮಸ್ಕಾರ ಮೇಡಂ , ಬಹಳ ದಿನ  ಆಯ್ತು  ನಮ್ ಅಂಗಡಿಗೆ ಬಂದು. ಅಂದವನೇ ಲೇ ಯಾರೋ ಅಲ್ಲಿ  ಮೇಡಂ ಅವರಿಗೆ ಕೂಲ್  ಆಗಿ  ಬಾದಾಮಿ ಹಾಲು ತಗೊಂಬಾರೋ ........" ಅಂದಾ..
 
 ಮಹಿಳೆ :- "ಅಯ್ಯೋ  ಪರವಾಗಿಲ್ಲ ರೀ.......... ಅದೆಲ್ಲಾ ಯಾಕೆ? ಅಂದ್ರೂ."    ಅಷ್ಟರಲ್ಲಿ ತಣ್ಣನೆಯ ಬಾದಾಮಿ ಹಾಲು   ಎಲ್ಲರಿಗೂ ಬಂದಿತ್ತು.
 
 
-                                                                                                         ರಘು :- "ಅರೆ ಹಂಗಂದ್ರೆ ಹ್ಯಾಗೆ ಮೇಡಂ , ನೀವು ನಮ್ಮ ಅಂಗಡಿಯ ವ್ಯಾಲ್ಯೂಡ್ ಕಸ್ಟಮರ್   ನಿಮ್ಮನ್ನು ಹಾಗೆ ಕಳಿಸೋಕೆ ಆಗುತ್ತಾ ," ಅಂತಾ ಹೇಳಿ ಮುಂದುವರೆದು . "ನೋಡಿ ಮೇಡಂ ಒಳ್ಳೆ   ಸೀರೆಗಳು ಬಂದಿವೆ   ನಿಮಗೆ ಅಂತಾನೆ ಒಳ್ಳೆ ಸೀರೆ ತರ್ಸಿದ್ದೀನಿ  ಸಿನೆಮ ಹಿರೋಯಿನ್  ಗಳು  ತಗೊಳೋ ಕಡೆ ಯಿಂದನೆ ಈ ಸರಿ ಬಾಂಬೆಗೆ ಆರ್ಡರ್ ಕೊಟ್ಟು ತರ್ಸಿದ್ದೇನೆ ,      ಇಲ್ಲಿ ನೋಡಿ ಮೇಡಂ   ಈ ಸೀರೆ ನಿಮಗೆ ಚೆನ್ನಾಗಿ ಒಪ್ಪುತ್ತೆ   ಹೀರೋಯಿನ್  ಸಿನಿಮಾದಲ್ಲಿ  ಹಾಕಿದ್ದ ಸೀರೆ ಚಿತ್ರ   ಇಲ್ಲಿದೆ ನೋಡಿ ಅದೇ ಮಾದರಿಯ  ಸೀರೆ...........................! "    ಹೀಗೆ ಹಾಕುತ್ತಾ ರಾಶಿ ಪೇರಿಸಿ ಸೀರೆ  ಜೊತೆಗೆ  ಆ ಹೆಂಗಸನ್ನು  ಹೀರೋಯಿನ್ ಎಂಬಂತೆ ಹೊಗಳಲು  ಶುರುಮಾಡಿದ .ಅದಕ್ಕೆ ಅವನ ಹೆಂಡತಿ ಸಾಥ್  ಬೇರೆ ಇತ್ತು.
 
 ಮಹಿಳೆ:-   ತಣ್ಣನೆಯ ಬಾದಾಮಿ ಹಾಲು ಕುಡಿಯುತ್ತಾ  "ಏನ್ರೀ  ಇಷ್ಟೊಂದು ವೆರೈಟಿ!!!!   ಇದು ಈ ಸಿನಿಮಾದಲ್ಲಿ ಆ ಹೀರೋಯಿನ್  ಹಾಕಿದ್ದು ಆಲ್ವಾ ?? "          "ಇದು ಈ ಪಿಚ್ಚರ್ ನಲ್ಲಿ   ಕಾಜೋಲ್ , ರಮ್ಯಾ ,  ಹಾಕಿದ್ದು  " ಅಂತಾ  ಸುಮಾರು ಹೊತ್ತು ಸೀರೆ ಆಯ್ಕೆ ಮಾಡಿಕೊಂಡು   ಹತ್ತು ಸೀರೆ  ಆಯ್ಕೆ ಮಾಡಿದರು !! ಆಯ್ಕೆಯಲ್ಲಾ ಆದಮೇಲೆ ಬಿಲ್ ವಿಚಾರ ಬಂತು.
 
 ರಘು :- "ಏನ್ ಮೇಡಂ ಈ ಸರಿ ನಿಮಗೆ ಸರಿಯಾಗಿ  ಟೈಮಿಲ್ಲಾ ಅನ್ಸುತ್ತೆ ಕಡಿಮೆ ತಗೊಂಡ್ರೀ. ..........."
 
-  ಮಹಿಳೆ :- "ಇಲ್ಲಾ ರೀ  ಹಾಗೇನಿಲ್ಲಾ  ರೀ ಮೊನ್ನೆ ತಾನೇ  ನನ್ನ  ಯಜಮಾನ್ರು  ಐದು  ಕಾಸ್ಟ್ಲಿ ಸೀರೆ ತಂದ್ರೂ.  ಅದಕ್ಕೆ ಇಷ್ಟೇ ಸಾಕು ......" ಅಂತಾ ಹೇಳಿ ಬಿಲ್ಲು ಎಷ್ಟಾಯ್ತು...?  ಅಂದ್ರೂ 
 
-                                                                                                            ರಘು :- "ಅಯ್ಯೋ ಬಿಲ್ ವಿಚಾರ ಬಿಡಿ ಮೇಡಂ ನಿಮಗೆ ಯಾವತಾದ್ರೂ  ಹೆಚ್ಚಾಗಿ  ಬಿಲ್  ಮಾಡಿದ್ದೀನ. ಅಂತಾ ಹೇಳಿ ಲೇ  ರಾಧಾ ,ಮೇಡಂ ಗೆ  ಹೊಸ ರೇಟ್ ಹಾಕಬೇಡಾ  ಹಳೆ ರೇಟ್ ಹಾಕಿ ಹತ್ತು  ಪರ್ಸೆಂಟ್  ಡಿಸ್ಕೌಂಟ್ ಕೊಡು" ಅಂತಾ  ಆಜ್ಞಾಪಿಸಿದ 
 
 
-                                                                                                       .ಮಹಿಳೆ :-  ಮುಖದಲ್ಲಿ ಸಂತಸದಿಂದಾ   ಹಿಗ್ಗಿ ಥ್ಯಾಂಕ್ಸ್ ಅಂತಾ ಒಂದೂ ಮಾತಾಡದೆ   ಸುಮಾರು ಇಪ್ಪತ್ತು  ಸಾವಿರದ  ಬಿಲ್ ಚುಕ್ತಾ ಮಾಡಿ ಹೊರಟಳು.    ಆ ಹೆಂಗಸು ಹೋದ ಮೇಲೆ  ರಘು ಹಾಗು ಅವನ ಪತ್ನಿ ನನ್ನ ನೋಡಿ ವಿಜಯದ ನಗೆ ನಕ್ಕರು.
 
-                                                                                                         ನಾನು :- "ಲೋ ರಘು ನನಗೆ ಆಶ್ಚರ್ಯ ಕಣೋ , ಅಲ್ಲಿ  ಈ ಯಮ್ಮ ಬೀದಿ ಬದಿಯ  ಆ ಬಡವ  ಚಮ್ಮಾರನ ಹತ್ತಿರ  ಹತ್ತು ರುಪಾಯಿಗೆ  ಜಿಪುಣತನ   ಮಾಡಿದ್ಲು. ಇಲ್ಲೆನೈಯ್ಯಾ  ಕಥೆ ಹಿಂಗೆ>>>>?ಅಂದೇ. ..."               
 
 
-      ರಘು :-  "ನೋಡೋ ಕೆಲವರ ಸ್ವಭಾವವೇ ಹಾಗೆ  ಚಪ್ಪಲಿ ಹೊಲೆಯುವವರ ಹತ್ತಿರ, ಬೀದಿ  ವ್ಯಾಪಾರಿಗಳಹತ್ತಿರ , ತರಕಾರಿ, ಸೊಪ್ಪು ಮಾರಾಟಗಾರರ ಹತ್ತಿರ  ಗಂಡಾಗುಂಡಿ ವ್ಯಾಪಾರ  ಮಾಡ್ತಾರೆ  ಆದ್ರೆ  ನನ್ನಂತಾ ಅಂಗಡಿಗಳು, ಹೋಟೆಲು, ಮಾಲ್ಗಳಲ್ಲಿ ಬಾಯಿ ಮುಚ್ಚಿಕೊಂಡು    ಕೇಳಿದಷ್ಟು ಕೊಟ್ಟು  ಹಲ್ಕಿರಿತಾ ಬರ್ತಾರೆ . ಇದೆ ಕಣಯ್ಯ ಕೆಲವರ ಸ್ಪೆಷಾಲಿಟಿ  ಅಂದಾ.  ಏನೋ ಜ್ನಾಪಿಸಿಕೊಂದವನ ಹಾಗೆ  ಆಯಮ್ಮಾ  ಚಪ್ಪಲಿ ಹೋಲಿಸಿದ  ಜಾಗ ನಿನಗೆ ಗೊತ್ತಾ  ??? "ಅಂದಾ                                                                                                                                      
 
- ನಾನು :- "ಹೌದು ಕಣೋ ಇಲ್ಲೇ ಇದೆ "  
 
-                                                                                                              ರಘು :- ನನ್ನ ಜೊತೆ ಬಂದವನೇ ಚಮ್ಮಾರನನ್ನು  ಉದ್ದೇಶಿಸಿ  , "ಯಜಮಾನ್ರೆ  ಚೆನ್ನಾಗಿದ್ದೀರಾ??? "                       
 
-  
-          ಚಮ್ಮಾರ  :- "ಸ್ವಾಮೀ  , ತಾವು  ಇಲ್ಲಿ.....?"ಅಂತಾ  ಭಯದಿಂದಾ ಎದ್ದು ನಿಂತಾ   
 
 
-   ರಘು :- "ಏನಿಲ್ಲಾ ಸ್ವಲ್ಪ ಹೊತ್ತಿನ ಮುಂಚೆ  ಒಬ್ಬ ಹೆಂಗಸು ನಿನ್ನ  ಹತ್ತಿರ   ಚಪ್ಪಲಿ ಹೊಲಿಸಿದರಲ್ಲಾ  , ಅವರು ಚಿಲ್ಲರೆ ಇಲ್ಲಾ ಅಂತಾ  ನಿಮಗೆ ಕಡಿಮೆ ದುಡ್ಡು  ಕೊಟ್ಟಿದ್ದರಂತೆ  ಅದಕ್ಕೆ ನನ್ನ ಕೈಗೆ ದುಡ್ಡು ಕೊಟ್ಟು ನಿಮಗೆ ಕೊಡಲು ಹೇಳಿದರು"........  ಅಂತಾ  ಒಂದು ನೂರು  ರೂಪಾಯಿ ನೋಟು ಕೊಡಲು  ಹೋದ    
 
 
- ಚಮ್ಮಾರ  :- "ಇಲ್ಲಾ  ಸಾಮಿ  ಆ ಯಮ್ಮ ಐದು ರುಪಾಯಿ ಕೊಟ್ಟಿದ್ದರು ಉಳಿದ ಐದು ಕೊಡ್ಬೇಕು ಅಷ್ಟೇ.." ಅಂತಾ ಹೇಳಿ  ಐದು ರುಪಾಯಿ ಮಾತ್ರ ಕೊಡಿ. ಅಂತಾ  ತೆಗೆದುಕೊಂಡಾ  
 
-   
 
 
-  ನಾನು :- "ಪರವಾಗಿಲ್ಲ  ತಗೋಳಪ್ಪಾ  ಪಾಪ ವಯಸ್ಸಾದವ ನೀನು ಈ ವಯಸ್ಸಿನಲ್ಲೂ ದುಡಿಯಕ್ಕೆ  ಬಂದಿದ್ಯಲ್ಲಾ  ಅದಕ್ಕೆ ಸಂತೋಷ ಪಡಬೇಕು  ಇರ್ಲಿ ತಗೋಳಪ್ಪಾ......"  ಅಂದೇ.     
 
 
-  ಚಮ್ಮಾರ :- "ಸಾಮಿ  ದೇವರು ನನ್ನ ದುಡಿಮೆಗೆ  ತಕ್ಕ ದುಡ್ಡು ಕೊಟ್ರೆ ಸಾಕು , ಹೆಚ್ಕೆ  ಕೊಟ್ರೆ ಉಳ್ಯಾಕಿಲ್ಲಾ, "   ಅಂದಾ .
 
- ಚಮ್ಮಾರನ  ಮಾತುಗಳು  ನನಗೆ  ಚಾಟಿ ಏಟಿನಂತೆ   ಚುರುಗುಟ್ಟಿ ಸತ್ಯ ದರ್ಶನ ಮಾಡಿಸಿತ್ತು. ಇವನ  ಮುಂದೆ ನಾವು ಎಡಬಿಡಂಗಿಗಳು ಆಲ್ವಾ  ಅನ್ನ್ಸಿದ್ದು ಸುಳ್ಳಲ್ಲ .  ಹಾಗೆ ನನ್ನ ಸ್ನೇಹಿತ ಆ ಚಮ್ಮಾರನಿಗೆ ಸಹಾಯ ಮಾಡಲು  ಮುಂದಾಗಿದ್ದೂ ಸಹ  ಅಚ್ಚರಿಯಲ್ಲವೇ.  ಹೌದಲ್ವೆ ನೀವೇ ಹೇಳಿ.  
 
 
 
 
          
      
 
  
 
 
 
 
 
 
 
 
 
 
15 comments:
ಬಾಲೂ ಸರ್;ವಾಸ್ತವಕ್ಕೆ ಕನ್ನಡಿ ಹಿಡಿಯುವಂತಹ ಬರಹ.ಕೆಲವರು ಯಾಕೆ ಹೀಗೇ ಬಿಹೇವ್ ಮಾಡುತ್ತಾರೆ ಅಂತ ಅರ್ಥವೇ ಆಗೋಲ್ಲಾ.ಆ ಬಡವನ ಹತ್ತಿರ ಜಗ್ಗಾಡಿ ಇನ್ನೆಲ್ಲೋ ಹೋಗಿ ಮಾತಾಡದೆ ಸಾವಿರ ಗಟ್ಟಲೆ ಸುರಿಯುತ್ತಾರೆ!ಏನ್ ಜನ್ಗಳೋ....!ಅದ್ಯಾಕಿಂಗ್ ಆಡ್ತಾರೋ!!
ಬಾಲೂ ಸರ್...
ನಿಜ...
ಬಡವನಿಗೆ ಎರಡು ರುಪಾಯಿ ಕೊಡಲಿಕ್ಕೆ ಕಂಜೂಸು ಆಗಿಬಿಡುತ್ತಾರೆ...
ನೂರು ರುಪಾಯಿ ದುಂದು ವೆಚ್ಚ ಮಾಡಲು ಹಿಂಜರಿಯುವದಿಲ್ಲ..
ತಳ್ಳುವ ಗಾಡಿಗಳಲ್ಲಿ ಮಾರುವ ತರಕಾರಿಯೊಡನೆ ಬಹಳ ಚರ್ಚ್ಚೆ ಮಾಡಿ "ಬಾರ್ಗೇನ್" ಮಾಡುತ್ತೇವೆ.....
ರಿಲಯನ್ಸ್ ಅಂಥಹ ಮಳಿಗೆಗಳಲ್ಲಿ ಅವರು ಹೇಳಿದ ಹಣಕೊಟ್ಟು ತೆಪ್ಪಗೆ ತರುತ್ತೇವೆ....
ವಿಪರ್ಯಾಸವೇ ಸರಿ...
ಕಣ್ಣು ತೆರೆಸುವ ಲೇಖನ.... ಧನ್ಯವಾದಗಳು..
ಬಡತನ ದಲ್ಲಿ ದುಡ್ಡು ಇರೋದಿಲ್ಲ ..
ಮೌಲ್ಯ ,ಪ್ರಾಮಾಣಿಕತೆ ಧಂಡಿ ಯಾಗಿ ಇರುತ್ತೆ ..
ಚನ್ನಾಗಿದೆ ಲೇಖನ
"ದೇವರು ನನ್ನ ದುಡಿಮೆಗೆ ತಕ್ಕ ದುಡ್ಡು ಕೊಟ್ರೆ ಸಾಕು , ಹೆಚ್ಕೆ ಕೊಟ್ರೆ ಉಳ್ಯಾಕಿಲ್ಲಾ"
idu punching line..
Vaastavate yannu tumba sundaravaagi bimbisiddira kannige kattuvante !
ವಿಚಿತ್ರ ಆದರೂ ಸತ್ಯ!
ಬಾಲು ಸರ್,
ಇದು ಎಂದೆಂದೂ ಅರ್ಥವಾಗದ ಪ್ರಶ್ನೆಯಾಗಿದೆ! ಬೆವರಿಳಿಸಿ ದುಡಿಯುವವನಿಗೆ ಬೆಲೆ ಇಲ್ಲ. ಅದೇ ನಯ ನಾಜೂಕು ಮಾತನಾಡಿ ಮೊದಿಮಾದುವವರಿಗೆ ಬಹಳ ಲಾಭ!
ತಮ್ಮ ಪ್ರತಿಷ್ಟೆಯೋ ಅಥವಾ ವಿಕಾರ ಮನೋಭಾವವೋ ಇಂತಹ ಕಂಜೂಸುತನದವರನ್ನು ದಿನಾ ಅಲ್ಲಲ್ಲಿ ನೋಡುತ್ತೇವೆ.
ಹೌದು ಸರ್, ಇದು ನಮ್ಮಲ್ಲಿ ಅನೇಕರ ಸ್ವಭಾವ. ಒಮ್ಮೂಮ್ಮೆ ನಾವೂ ಹೀಗೆ ಆಡುತ್ತೇವೆ. ಬೀದಿ ಬದಿ ವ್ಯಾಪಾರಿಗಳ ಜೊತೆ ಗಂಟೆಗಟ್ಟಲೆ ಚೌಕಾಸಿ ಮಾಡಿ ಒಂದೈದು ರೂಪಾಯಿ ಉಳಿಸಿ ಅದೇ ಬುದ್ಧಿವಂತಿಕೆ ಅಂತ ಬೀಗುತ್ತಾರೆ. ಚೌಕಾಸಿ ಮಾಡದವರು ವ್ಯವಹಾರ ಜ್ಞಾನ ಇಲ್ಲದವರು ಎಂಬ ಹೀಗಳಿಕೆ ಬೇರೆ. ಅದೇ ಜನ, ದೊಡ್ಡ ಹೋಟೆಲ್, ಮಾಲ್‍ಗಳು, ಅವರು ಹೇಳಿದ ರೇಟನ್ನು ಕೊಟ್ಟು ಬರುತ್ತಾರೆ
ಚಂದದ ಲೇಖನ , ಚಾಮರಣ ಸ್ವಾಭಿಮಾನಕ್ಕೆ ಅಭಿನಂದನೆಗಳು ..... ಎಲ್ಲರೂ.. ಹೀಗಿದ್ದಿದರೆ ? .....
ಕಟುವಾಸ್ತವದ ಚಿತ್ರಣ ! ತುಂಬಾ ಸತ್ಯವಾದ ಮಾತು. ಆದರೆ ತಮಗೆ ಬಂದ ಲಾಭದಲ್ಲಿ ನೂರು ರುಪಾಯಿ ಇನ್ನೊಬ್ಬರಿಗೆ ಕೊಡುವ ಜನ ಕಡಿಮೆ. ನಿಮ್ಮ ರಘು ಅಪರುಪದವರು.
ಬಾಲು ಸರ್,
ಹಣವಂತರಿಗೆ ಹೀಗೆ ಟೋಪಿಹಾಕುವುದು ಸರಿಯೆನಿಸುತ್ತದೆ. ಪಾಪ ಚಮ್ಮಾರನಿಗೆ ಆಕೆ ಮಾಡಿದ ಮೋಸಕ್ಕೆ ಸರಿಯಾಗಿ ಅಯ್ತು ಅಂದುಕೊಂಡೆ. ಮತ್ತೆ ಚಮ್ಮಾರನ ಜೀವನ ನೀತಿ ಮತ್ತು ಸ್ವಾಭಿಮಾನ ಮೆಚ್ಚುಗೆಯಾಯಿತು.
ಬಾಲು, ಇದು ಸಾಮಾನ್ಯವಾಗಿ ಎಲ್ಲರೂ ಮಾಡೋದು..ಕಷ್ಟಪಡುವವರಿಗೆ ಕೊಡಲು ಹಿಂಜರಿಕೆ ಅದೇ ಕೂತು ತಿನ್ನುವವರಿಗೆ ಬೇಡವೆಂದರೂ ಕೊಡುತ್ತೇವೆ...
ವಾಸ್ತವ ಮತ್ತು ಕಟು ಸತ್ಯ ....
ಯಂಡಮೂರಿ ಒಂದು ಕಡೆ ಹೆಂಗಸರು ಕೊತ್ತುಂಬರಿ ವ್ಯಾಪಾರದಲ್ಲಿ ನಾಲ್ಕಾಣೆಗೆ ಚೌಕಾಸಿ ಮಾಡ್ತಾರೆ ಆದ್ರೆ ರೇಷ್ಮೆ ಸೀರೆ ಅಂಗಡಿಯಲ್ಲಿ ಸಾವಿರ ಸಾವಿರ ಎಣಿಸ್ತಾರೆ ಅಂತ ಬರೆದಿದ್ರಂತೆ. ಈ ಚಮ್ಮಾರ ನಂತಹ ಕಾಯಕ ಯೋಗಿಗಳ ಸಂಖ್ಯೆ ಹೆಚ್ಚಾಗಲಿ
ಸುಂದರ ಲೇಖನ
ವೈರೂಧ್ಯಗಳೇ ಹೀಗೆ ಸಾರ್, ಬೇಡುವ ಕಡೆ ಯಾಮೀರಿಸಿ, ತಳಕಿಗೆ ತಲೆ ಬೋಳಿಸಿಕೊಳ್ಳುವ ಮಂದಿಯ ಕಥೆ ಇದು.
ನಿಮ್ಮ ಸ್ನೇಹಿತನ ಒಳ್ಳೆಯ ಮನಸ್ಸು ನನಗೆ ನೆಚ್ಚಿಗೆಯಾಯಿತು.
idu elleDe naDeyuva saarvatra satya...
nivu bareda reeti chennaagide...
ಹೌದು ಬಾಲು ಈ ಚಿಲ್ಲರೆ ಬುದ್ದಿಯನ್ನು ಜನರು ಬಹಳ ಪ್ರಯತ್ನಪೂರ್ವಕವಾಗಿ ಪೋಷಿಸಿ ಬೆಳೆಸಿಕೊಂಡಿರುತ್ತಾರೆ.
Post a Comment