Friday, September 30, 2011

ರೀತಿ!! ಈ ರೀತಿ !!! ಇನ್ನೊಂದು ರೀತಿ !!!!

ಮೊದಲು ಗೆಳೆಯ  ಪ್ರಕಾಶ್ ಅಣ್ಣ ಬರೆದ  ಬರೆದ "ರೀತಿ" ....   ಓದಿ    ಇಟ್ಟಿಗೆ ಸಿಮೆಂಟು: ರೀತಿ..., ನಂತರ ಮತ್ತೊಬ್ಬ ಗೆಳೆಯ  ದಿನಕರ ಮೊಗೆರ ಬರೆದ  "ಈ ರೀತಿ"....http://dinakarmoger.blogspot.in/2011/09/blog-post.html ಓದಿ ನಂತರ ಬನ್ನಿ ಇಲ್ಲಿದೆ "ಇನ್ನೊಂದು ರೀತಿ"!!!!!!!    ರೀತಿ , ಈ ರೀತಿ ಕತೆಗಳ  ಮುಂದುವರೆದ ಸಂಚಿಕೆಗೆ  ಅದೇ "ಇನ್ನೊಂದು ರೀತಿ "   ತಿರುವಿನ ಹಂದರ.                                                                                                                                ...................................................................................................................................................................                                              " ನಾನು ಬಗ್ಗಿ ನೋಡಿದೆ......

ONE MESSAGE RECEIVED.....!!!!
""                                                                                            
 " I am missing you a lot , how is your wife ????    ............ raagini "
                                      
ಅರೆ ಇದೇನಿದು !!! ಇವಳ್ಯಾರು ರಾಗಿಣಿ ??? ಈ ಬಗ್ಗೆ  ಇವನೇನು ಹೇಳೇ ಇರ್ಲಿಲ್ಲಾ !!!!! ತಾಳು ತಾಳು " ರಾಗಿಣಿ " ಮದುವೆಯ ಆರತಕ್ಷತೆಯಲ್ಲಿ  ಪರಿಚಯಿಸಿದ್ದ ನೆನಪು  ಆದರೆ ಆ ದಿನ ಸೇರಿದ್ದ ಸಾವಿರಾರು ಜನರಲ್ಲಿ  ಯಾರ ಮುಖ ಜ್ಞಾಪಕಕ್ಕೆ ಬರುತ್ತೆ??? ಆಲ್ವಾ . ಯಾಕೋ ಮನದಲ್ಲಿ ನನಗೆ ತುಮುಲ ಶುರುವಾಯ್ತು.............!!!!!!!! ಅಷ್ಟರಲ್ಲಿ ..................................
ನನ್ನ ಮೊಬೈಲಿನಲ್ಲಿ  ಎಸ.ಎಂ.ಎಸ ಬಂದ ಸದ್ದು ............................................!!!!!!!!!!!!!!!!!!!! ಇನ್ಬಾಕ್ಸ್  ತೆರೆದು ಮೆಸ್ಸೇಜ್  ನೋಡಿದೆ........................................................................!!!!!!!!!!    HAPPY WISHES TO "YOU, HOW IS HUBBY ?? IS HE SMARTER THAN ME ???  I MISSED U  A LOT , I..................................GUESS ME!!!!! .................................................A  HERO !!!!.......................!!"
                                                                                                                                                                 ನನಗೆ ಕೆಟ್ಟ ಕೋಪ ಬಂದು  ಮತ್ತೆ ನನ್ನ ಮೊಬೈಲ್ ನಿಂದ  ಎಸ. ಎಂ.ಎಸ. ಮಾಡಿದೆ  WHO'S THIS???...................ಅಷ್ಟರಲ್ಲಿ  ಪುಟ್ಟಣ್ಣಿ   ಆಫಿಸ್ ಗೆ ಲೇಟಾಯ್ತು  ತಿಂಡಿ ಕೊಡ್ತೀಯಾ ........................................... ಅವನ ಕರೆ ಬಂತು ಮನಸ್ಸಿನಲ್ಲಿ .ಗೊಂದಲದ ಗೂಡಾಗಿದ್ದ  ನಾನು  ಯಾಂತ್ರಿಕವಾಗಿ  ಹೋಗಿ  ತಿಂಡಿ ಕೊಟ್ಟೆ. ........................................!!!                  ಯಾಕೆ    "ಪುಟ್ಟಣ್ಣಿ" ರಾತ್ರಿ ಬೇಸರ ಇನ್ನೂ ಹೋಗಿಲ್ವಾ ಚಿನ್ನಾ ................. ಅಂತಾ ಅವನು ಹೇಳಿದ ಮಾತಿಗೆ  ಬಲವಂತದ ನಗೆ ನಕ್ಕು   ಹಾಗೇನಿಲ್ಲಾ  ಅಂತಾ ಸುಮ್ಮನಾದೆ.                .................... ತಿಂಡಿ ತಿನ್ನುವಾಗಲೂ  ಆತಂಕದಿಂದ ಆತ  ತನ್ನ ಮೊಬೈಲ್ ನಿಂದ ಮೆಸ್ಸೇಜ್  ಕಳುಹಿಸುತ್ತಲೇ ಇದ್ದದ್ದು ನನ್ನ ಗಮನಕ್ಕೆ ಬಂದು  "ಈ ಮನುಷ್ಯ ಒಬ್ಬ ಮುಖವಾಡ  ಧರಿಸಿದ  ಮೋಸಗಾರ ಅನ್ನಿಸಿತ್ತು." ಆದರೂ ಈ ಜಗತ್ತಿಗೆ ನಾವಿಬ್ಬರು  ಅಧಿಕೃತ ವಾಗಿ ಗಂಡ ಹೆಂಡಿರೆಂಬ  ಪದವಿ ಹೊತ್ತು ಮೆರೆಯಬೇಕಾದ  ಅನಿವಾರ್ಯತೆ ಇದೆ ಅನ್ನಿಸಿ  ಮೌನವಾಗಿ ರೋಧಿಸಿದ್ದೆ, ಮತ್ತೊಮ್ಮೆ ನನ್ನ  ಮೊಬೈಲಿನ ಮೆಸ್ಸೇಜ್  ಜ್ಞಾಪಕಕ್ಕೆ ಬಂದು  ನನ್ನ ಭಾವನೆಗಳನ್ನು ಅಣಕಿಸುತ್ತಿತ್ತು. ಹಾಗು ಹೀಗೂ ನಮ್ಮಿಬ್ಬರ  ಈ ಜೀವನ  ಆಟ ಈ ರೀತಿ "ಕಣ್ಣಾ ಮುಚ್ಚಾಲೆ"  ಆಟ ಆಗಿತ್ತು.  .........................             ತಿಂಡಿ ತಿಂದ ಆತ   " ಪುಟ್ಟಣ್ಣಿ" .....  ಬೈ ಚಿನ್ನಾ ಅಂತಾ ನನಗೆ ಅರಿವಿಲ್ಲದೆ  ನನ್ನ  ಬಳಸಿ ಕೆನ್ನೆಯ ಮಚ್ಚೆಗೆ  ಮುತ್ತಿಟ್ಟ !!!!!  ಕೋಪ ಬಂದರು ಸಾವರಿಸಿಕೊಂಡು  ನೋಡುವಷ್ಟರಲ್ಲಿ  ಆತ ಗೇಟು ದಾಟಿ  ಕಾರ್ ಒಳಗೆ ಹೊಕ್ಕಿ ಹೊರಟೇಬಿಟ್ಟ..................................!!!!!!!!!!!!!!!!!!!!!! ನಾನು ನಿಧಾನವಾಗಿ ಕೋಪ ಕಡಿಮೆ ಮಾಡಿಕೊಂಡು  ಖಾಲಿ ಇರುವ ಮನೆಯೊಳಗೇ ನಿಧಾನವಾಗಿ  ಬಂದು ನನ್ನ ಹಾಸಿಗೆಯ ಮೇಲೆ ಬಿದ್ದು ಕೊಂಡೆ........ ...............................
    ಮತ್ತೆ ನನ್ನ ಮೊಬೈಲ್ ರಿಂಗ್ ಆದಾಗ  ಎಚ್ಚರ ಗೊಂಡ ನಾನು ಹೆಲೋ ಅಂದದ್ದೇ  ಆ ಕಡೆಯಿಂದಾ  ಸಾರಿ ಕಣೆ ಬೆಳಿಗ್ಗೆ ನಿಂಗೆ ಎಸ. ಎಂ.ಎಸ. ಮಾಡಿದ್ದೆ   ಆದ್ರೆ ನೀನು ಕೋಪದಿಂದ  WHO'S THIS???.         ಅಂದೆ ಹಾಗಾಗಿ ನಿನ್ನೊಡನೆ ನಾನೇ ಮಾತಾಡಿ  ಬಿಡೋಣ ಅಂತಾ ಕಾಲ್ ಮಾಡಿದೆ . ನಾನು ಯಾರು ಗೊತಾಗ್ಲಿಲ್ವಾ ??? ಅರೆ "ಬುದ್ದು"   ನಾನು ಕಣೆ  ಜಯಂತ್  ಈಗ ಗೊತ್ತಾಯ್ತಾ!!!!  ಮಾರಾಯ್ತಿ  ನಿನ್ನನ್ನು ಎಲ್ಲೆಲ್ಲಿ ಹುಡುಕೋದು??????  ಕೊನೆಗೆ ನಿನ್ನ ಫ್ರೆಂಡ್  ಶೀಲ ಹತ್ತಿರ ನಿನ್ನ ನಂಬರ್ ತಗೊಂಡು ಕಾಲ್ ಮಾಡಿದೆ ,ನನ್ನ ಮೇಲೆ ಕೋಪಾನ??? ಅಂತಾ ಒಂದೇ ಸಮನೆ  ನನಗೆ ಮಾತಾಡಲೂ ಅವಕಾಶ ಕೊಡದೆ ಮಾತಾಡಿದ . ಮೊದಮೊದಲು ಅವ ಯಾರೆಂದು ತಿಳಿಯೋದು ಕಷ್ಟವಾದರೂ ನಂತರ ಅವನ್ಯಾರೆಂದು ತಿಳೀತು. ನಂತರ ನಾನು ಏನೋ ಸಮಾಚಾರ ಹೇಗಿದ್ದೀ ?? ಎಲ್ಲಿದ್ದೀ ?? ಅಂದೆ ......................., ಅಯ್ಯೋ ಬುದ್ದು!!!! ಯಾಕೆಳ್ತಿಯಾ ನನ್ನ ಪಾಡು  ಅದು, ಸರಿ ನಿಂಗೆ ಮದುವೇ ಆಯ್ತಂತೆ  ಹ್ಯಾಗಿದ್ದಾನೆ ನಿನ್ನ ಹಬ್ಬಿ , ನನಗಿಂತಾ ಸ್ಮಾರ್ಟಾ!!!!!!! ಅಂದಾ  ಯಾಕೋ ಗೊತ್ತಿಲ್ಲಾ .ಸ್ವಲ್ಪ ಇರೋ ಮತ್ತೆ ಕಾಲ್ ಮಾಡ್ತೆನಿ ಅಂತಾ ಫೋನ್ ಇಟ್ಟೆ!!!!!     ಆಗಲೇ ಮನಸು ನೆನಪಿನಾಳಕ್ಕೆ ಇಳೀತು.....................................................  ...................................................!!!! ಆಗ ಆಗಿದ್ದೆ  ಹಿಂದಿನ ಕಥೆಯ ಅನಾವರಣ.   ಹೌದು ಅಂದು ನಮ್ಮ  ಊರಿನ ಕಾಲೇಜಿನಲ್ಲಿ ಓದುವಾಗ  ನಡೆದ   ಗೋವಾ  ಘಟನೆ ನಂತರ  ನಾನು ಆ ಕಾಲೇಜಿಗೆ ಹೋಗದ ಕಾರಣ  ನನ್ನನ್ನು   ಆ ಕಾಲೇಜು ಬಿಡಿಸಿ  ಓದು ಮುಂದುವರೆಸಲು  ಈ ಊರಿಗೆ ತಂದು ಇಲ್ಲಿನ ಕಾಲೇಜಿಗೆ  ಸೇರಿಸಿದರು. ಹಾಗಾಗಿ ನನ್ನ ಚಿಕ್ಕಪ್ಪನ ಮನೆಗೆ   ಬಂದು ನೆಲೆನಿಂತೆ. ಆದರೂ ನೊಂದ ಮನಸಿನಲ್ಲಿ ಆ ಕಹಿ ನೆನಪು ಹಾಗೆ ಉಳಿದಿತ್ತು.   ಆ ನೋವಿನ ಸಮಯದಲ್ಲಿ ಒಂಟಿಯಾಗಿ ಜೀವನದಲ್ಲಿ ಬಳಲಿದ್ದ  ನನಗೆ ಅರಿವಿಲ್ಲದಂತೆ ಹತ್ತಿರ ಬಂದವನೇ  ಇವನು , ನಾನೆಷ್ಟು ದೂರ ಸರಿದರೂ  ನನಗೆ ಧೈರ್ಯ  ತುಂಬಿ , ಜೀವನದಲ್ಲಿ ಹೊಸ ಆಸೆ  ತುಂಬಿ ಭಾವನೆಗಳನ್ನು  ಚಿಗುರಿಸಿ,  ಹೂ ಬಿಡುವ ವೇಳೆಗೆ ಮಾಯವಾಗಿದ್ದ , ಯಾವಾಗಲೂ "ಬುದ್ದು" ಬುದ್ದು" ಅಂತಾ ರೇಗಿಸುತ್ತಾ  ನನ್ನ ಮನಸನ್ನು ಆಕ್ರಮಿಸಿಕೊಂಡು ಬಿಟ್ಟಿದ್ದ , ಅವನೇ ಒಂದು ದಿನ ಮದುವೇ ಪ್ರಸ್ತಾಪ ಮಾಡಿದನಾದರೂ ನಾನೇ ನನ್ನ ಅಹಂಕಾರದಿಂದ ಅವನನ್ನು ದೂರ ಇಟ್ಟು ಅವಮಾನಿಸಿದ್ದೆ. ಅಂದಿನಿಂದಾ ಅವನು ಒಬ್ಬ ಫ್ರೆಂಡ್ ಅನ್ನಿಸಿದ್ದರೂ ನಾನು ಓದು ಮುಗಿಸಿ  ಮತ್ತೆ  ನನ್ನ ಊರಿಗೆ ಹೊರಟಾಗ  ಅವನ ಬಾಡಿದ ಮುಖ ನೋಡಿ ತಡೆಯಲಾಗದೆ  ನಾನೇ ಅವನನ್ನು ಕಂಡು   ಪ್ರೀತಿಯ ನಿವೇದನೆ ಮಾಡಿದ್ದೆ............................!! ನಂತರ ಕೆಲದಿನಗಳಲ್ಲಿ ಅವ ವಿದೇಶಕ್ಕೆ ಹೊರಟಾಗ  ನಮ್ಮಿಬ್ಬರ  ಪ್ರೀತಿ ಪ್ರೇಮದ ಬಗ್ಗೆ   ನಮ್ಮ ಮನೆಯವರೊಂದಿಗೆ ಹೇಳಿಕೊಳ್ಳಲಾಗದಷ್ಟು  ಅಸಹಾಯಕರಾಗಿ  ನೋವಿನಿಂದ ನರಳುತ್ತಾ  ದೂರಾದೆವು.   ಆ "ಜಯಂತ್ "  ಇಂದು ಕಾಲ್ ಮಾಡಿದಾಗ  ಏನೂ ಮಾಡಲು ತೋಚದೆ  ಏನೋ ಹೇಳಿ ಫೋನ್ ಇಟ್ಟಿದ್ದೆ.                                                                                                      ಈ "ಜಯಂತ್"ನನ್ನ ಬಾಳಿನಲ್ಲಿ ಬಂದಿದ್ದ    ಘಟನೆಯನ್ನು  ನಾನು ಅವನಿಗೆ ಹೇಳದೆ  ಮುಚ್ಚಿಟ್ಟು................................................................. ಅಂದು ನಮ್ಮ ಪ್ರಥಮ  ರಾತ್ರಿಯ ವೇಳೆ ನನ್ನ ಗಂಡ     
"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ.. 
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."   ಅಂದ ಮಾತನ್ನು ಧಿಕ್ಕರಿಸಿ .................. ನನ್ನ ಈ ಕಥೆಯನ್ನು ಅವನಲ್ಲಿ ಹೇಳದೆ  ನಾನು ನನ್ನ ವರ್ತನೆಯಿಂದ  ಗೆದ್ದವಳಂತೆ ಮೆರೆದೆ ಆದರೆ ಅಂದು ನನಗರಿವಿಲ್ಲದೆ ಜೀವನದಲ್ಲಿ ಸೋತಿದ್ದೆ...............................!!!          ಮತ್ತೆ ಮೊಬೈಲ್ ರಿಂಗ್ ಆದಾಗ ಅವನೇ ......................................................ಮಾತಾಡಿ           !!!!!!!!!!!!!!!!!!!                                                   
ಯಾಕೆ ಬುದ್ದು ಫೋನ್ ಅವಾಯಿಡ್  ಮಾಡ್ತಾ ಇದ್ದೀಯ ಇಲ್ಲಿ ಕೇಳು  ನಿನಗೆ ಒಂದು ಸರ್ಪ್ರೈಸ್ ಕೊಡಬೇಕು ನಿನ್ನ ಗಂಡನ ಜೊತೆ ನಾಳೆ  "ಇಂದ್ರ ಲೋಕ"  ಹೋಟೆಲ್ ಗೆ ಬರಬೇಕೂ ಆಯ್ತಾ , ಇಲ್ಲಾನ್ನಬೇಡ , ನೀನು ಬರದೆ ಹೋದ್ರೆ  ನಿಮ್ಮ ಮನೆಗೆ ಬಂದು ಬಿಡ್ತೇನೆ ಅಷ್ಟೇ ಆಮೇಲೆ ನನ್ನ ಬೈಯ್ಯಭಾರದು ಅಂದಾ , ........................................................................... ನಾನು ಬೇಡಾ ಕಣೋ ಇದೆಲ್ಲಾ...............!!!  ನನಗೀಗ ಮದುವೇ ಆಗಿದೆ  ನೆಮ್ಮದಿಯಾಗಿ ಇರೋಕೆ ಬಿಡು  ಅಂದೆ. ನೋಡೇ" ಬುದ್ದು "  ನೀನು ನಾಳೆ ನಿನ್ನ ಹಬ್ಬಿಯ ಜೊತೆ ಹೋಟೆಲ್ ಗೆ ನಾಳೆ ಸಂಜೆ  ಐದೂವರೆ ಗೆ ಬರ್ತೀಯ ಅಷ್ಟೇ  ಬರದಿದ್ದರೆ  ಗೊತ್ತಲ್ಲಾ ಅಂತಾ ಫೋನ್ ಇಟ್ಟಾ...........................................ಕೆಟ್ಟ ಕೋಪ ಬಂದರು  ಹಳೆಯ ನೆನಪು ಅವನನ್ನು ಒಮ್ಮೆ ನೋಡೋಣ ಅಂತಾ ಕಾಡಿಸಿತ್ತು. ಸರಿ ನನ್ನ ಪತಿಗೆ ಹೇಳೋಣ ಅಂತಾ ಅಂದುಕೊಂಡು  ಅವನನ್ನು ಇವನಿಗೆ ಭೇಟಿಮಾದಿಸಿದರೆ, ಇವನು  ಹ್ಯಾಗೆ ರಿಯಾಕ್ಟ್ ಮಾಡ್ತಾನೆ ಅಂತಾ ಯೋಚನೆ ಶುರು ಆಯ್ತು , ಏನೋ ಒಂದು ಹೇಳೋಣ ಅಂತಾ ಅಂದುಕೊಂಡು  ಸಂಜೆ  ನನ್ನ ಪತಿ ಮನೆಗೆ ಬರೋದನ್ನು  ಕಾಯುತ್ತಾ ಟಿ.ವಿ.ಮುಂದೆ ಕುಳಿತೆ ಅದರಲ್ಲಿ  ಬರುತ್ತಿದ್ದ ಸೀರಿಯಲ್  ಯಾಕೋ ಬೋರಾಗಿ ................ಅದನ್ನು ಆಫ್ ಮಾಡಿ ........... ಕಂಪ್ಯೂಟರ್ ಮುಂದೆ ಕುಳಿತು  ನನ್ನ ಬ್ಲಾಗ್ ನಲ್ಲಿ ಒಂದು ವಿರಹ ಗೀತೆ ಬರೆದೆ. ......."ಗತಿಸಿದ ನೆನಪುಗಳ ರಾಡಿಯನ್ನು ತೊಳೆಯಲು ಮಳೆಯಂತೆ ನೀನು ಬಾ>>>>!!!" ......!!!!!!!!!!!!!!!!!!!!! ಸಾಲುಗಳು ಮೂಡಿಬಂದವು.
                                                              ಸಂಜೆ  ಬಂದ ಪತಿರಾಯ ನಗು ಮೊಗದೆ ಏನು "ಪುಟ್ಟಣ್ಣಿ"ಸಮಾಚಾರ ನಾನಿಲ್ಲದೆ ತುಂಬಾ ಬೋರಾಯ್ತ???  ಅಂತಾ ಬರ ಸೆಳೆಯಲು ಹತ್ತಿರ ಬಂದ  ನನ್ನಲ್ಲಿದ್ದ  ಪ್ರತಿರೋದ ಕಡಿಮೆಯಾಗಿ ಶರಣಾದೆ.... ...................ಆದರೂ ಮನಸಿನಲ್ಲಿ ಅವನ ಬಗ್ಗೆ ತಿರಸ್ಕಾರ , ಎಸ. ಎಂ.ಎಸ. ಮಾಡಿದ ರಾಗಿಣಿ ಬಗ್ಗೆ  ರೋಷ ಉಕ್ಕುತ್ತಲೇ ಇತ್ತು, ಆದರೆ ಆ  "ಜಯಂತ್" ನ ನೆನಪು ನನ್ನನ್ನು ಇವನಿಗೆ ಶರಣಾಗುವಂತೆ ಮಾಡಿತ್ತು............................................ . ಮುಂದುವರೆದ ನನ್ನವನು ನೋಡು ಪುಟ್ಟಣ್ಣಿ , ನಾಳೆ ಸಂಜೆ  ಮರೆಯದೆ ರೆಡಿ ಯಿರು  ನಿನಗೆ ಒಂದು ಕಡೆ ಕರೆದು ಕೊಂಡು ಹೋಗ್ತೀನಿ  ಈವೂರಿನ ಪ್ರತಿಷ್ಟಿತ ಹೋಟೆಲ್  "ಇಂದ್ರ ಲೋಕ " ಅಂತಾ, ನನ್ನ ಸ್ನೇಹಿತರೊಬ್ಬರು  ನಿನ್ನೊಡನೆ ಬರಲು ತಿಳಿಸಿದ್ದಾರೆ ಒಳ್ಳೆ ಟ್ರೀಟ್ ಇದೆ ಹೋಗೋಣಾ ಆಯ್ತಾ ಅಂದಾ  ನನ್ನ ಕೆನ್ನೆಯ ಮೇಲಿನ ಮಚ್ಚೆಯನ್ನು ಸವರಿ ರಮಿಸುತ್ತಾ ಪೂಸಿ ಹೊಡೆದ. , ............................................... ಅರೆ ಇದೇನು ಅಂತಾ  ನಾನು ಸಹ ಅವನಿಗೆ  ನನ್ನ ನೆಂಟ "ಜಯಂತ್ " ಅಂತಾ ಊರಿಗೆ ವಿದೇಶದಿಂದ ಬಂದಿದ್ದಾನೆ   ಫೋನ್ ಮಾಡಿದ್ದಾ  ಅವನು ಸಹ ನಮ್ಮಿಬ್ಬರಿಗೆ ಟ್ರೀಟ್ ಕೊಡಬೇಕಂತೆ ನಾಳೆ ಐದುವರೆಗೆ  ಅದೇ "ಇಂದ್ರ ಲೋಕ" ಹೋಟೆಲ್ನಲ್ಲೆ. ಅಂದೆ ಅದಕ್ಕೆ  ನನ್ನವನು  ನಕ್ಕು ಸರಿ ಬಿಡು ನಿನ್ನ ನೆಂಟನೂ ಬರಲಿ ನನ್ನ ಸ್ನೇಹಿತರೂ ಅಲ್ಲೇ ಇರ್ತಾರೆ ಎಲ್ಲಾ ಒಟ್ಟಿಗೆಸೇರೋಣ  ಅದಕ್ಕೇನಂತೆ  ಅಂದು  ಮತ್ತೆ ಎಸ. ಎಂ. ಎಸ. ಕುಟ್ಟಲು ಶುರುಮಾಡಿದನು .  ಅದು ಇದೂ ಕೆಲಸದ ನಡುವೆ ವೇಳೆ ಸರಿದದ್ದು ತಿಳಿಯಲಿಲ್ಲ.............. ....................................ಹಾಗೆ ರಾತ್ರಿಯ ಲೋಕಕ್ಕೆ ಜಾರಿತ್ತು ನಮ್ಮ ಪ್ರಪಂಚ................... ಬೆಳ್ಳಂ ಬೆಳಿಗ್ಗೆ  ಎಚ್ಚರವಾದಾಗ  ದೂರದಲ್ಲಿ  ಹಾಡೊಂದು ತೇಲಿ ಬಂತು  "ಮಾಮರ ವೆಲ್ಲೋ  ಕೋಗಿಲೆ ಎಲ್ಲೋ  ಏನೀ ಸ್ನೇಹ ಸಂಭಂದಾ >>>>>>>>>>>>>>>>>> ಅಂತಾ .... ಅದೇ ಲಹರಿಯಲ್ಲಿ ಜೀವನ ಅಂದು ಶುರುವಾಗಿ  ಹೊಸ ಹುರುಪಿನಿಂದ  ಕಾಲ ಹೋಗಿದ್ದು ತಿಳಿಯದೆ  ನಮ್ಮವನು  "ಪುಟ್ಟಣ್ಣಿ "  ಆಫಿಸ್ಗೆ  ಹೊರಟೆ ಸಂಜೆ ರೆಡಿ ಯಿರು ಬೇಗ ಬರ್ತೇನೆ ಅಂತಾ  ತನ್ನ ಫೋನ್ ನಲ್ಲಿ ಮೆಸ್ಸೇಜ್ ಓದುತ್ತಾ ನಗು ನಗುತ್ತಾ ಹೊರಟ. ನನಗೆ ಮತ್ತೆ ಅದೇ ರಾಗಿಣಿಯ ಬಗ್ಗೆ ಕೋಪ ಬಂದು ಮನೆಯೊಳಗೇ  ಬಂದು ರಪ್ ಅಂತಾ ಬಾಗಿಲು ಹಾಕಿ ಮಲಗಿದೆ, ಏನುಮಾಡಿದರೂ ನಿದ್ದ ಬಾರದೆ ಹೊರಳಾಡಿದೆ, ಮನದಲ್ಲಿ ಹಲವು ತುಮುಲಗಳ ಕುರುಕ್ಷೇತ್ರ  ಯುದ್ದ ನಡೆದಿತ್ತು......................................................................... ಮತ್ತೆ ನನ್ನ ಮೊಬೈಲಿಗೆ ಕಾಲ್  ಬಂತು ನಾನೇ ಕಣೆ !!!"ಬುದ್ದು " ಇವತ್ತು ಸಂಜೆ ಗೊತ್ತಲ್ಲ  ...................................ಶಾರ್ಪ್ ಐದುವರೆಗೆ  ಇರಬೇಕು ಓ.ಕೆ . ಅಂತಾ ಹೇಳಿದ.  ನಾನೂ ಸಹ  ಹೂ ಅಂತಾ ಅಂದನಾ ಅಂತಾ  ಗೊತ್ತಿಲ್ಲ !!!!! ಆದರೆ ಅವ ಫೋನ್ ಥ್ಯಾಂಕ್ಸ್ ಅಂತಾ ಹೇಳಿ ಫೋನ್ ಕಟ್ ಮಾಡಿದ...............................ಮತ್ತೆ ಕಂಪ್ಯೂಟರ್ ಮುಂದೆ ಕುಳಿತು ಏನಾದರೂ ಬರೆಯಬಹುದೆ ಅಂತಾ ಪ್ರಯತ್ನಿಸಿದರೆ ನನ್ನದೇ ಕಥೆ  ನನ್ನನ್ನು ಅಣಕಿಸಿ ನಗುತ್ತಿತ್ತು.  ..............................ಕಂಪ್ಯೂಟರ್ ಆಫ್ ಮಾಡಿ ನಿದ್ದೆಗೆ ಜಾರಿದೆ.  .... ಬಾಗಿಲು ಯಾರೋ ಜೋರಾಗಿ ಬಡಿಯುತ್ತಿರುವಂತೆ  ಅನ್ನಿಸಿ ಎಚ್ಚರ ಗೊಂಡಾಗ     ......................ನನಗೆ ಅಚ್ಚರಿ ಊಟವನ್ನೂ ಸಹ ಮಾಡದೆ  ಮಧ್ಯಾಹ್ನಾ ಹನ್ನೆರಡು ಘಂಟೆ ಯಿಂದ ನಾಲ್ಕು ಘಂಟೆ ವರೆಗೆ  ನಿದ್ದೆ ಹೊಡೆದಿದ್ದೆ........ ಬಾಗಿಲ ತೆರೆದು ನೋಡಿದರೆ         ನನ್ನವನು  ಬಾಗಿಲು ಬಡಿದು ಸುಸ್ತಾಗಿ  ಸಧ್ಯ ಈಗಲಾದರೂ ಬಾಗಿಲು ತೆಗೆದ್ಯಲ್ಲಾ >>>>>>>>>>>>>>ಅಂತಾ ಒಳಗೆ ಬಂದಾ . ಸರಿ ಹೊರಡಲು ರೆಡಿಯಾಗು ಅಂತಾ ಹೇಳಿ  ತಾನು ಸಿದ್ದವಾಗತೊಡಗಿದ, ............ಇಬ್ಬರು ಮನೆ ಬಿಟ್ಟು  ವೇಳೆಗೆ ಸರಿಯಾಗಿ ಇಂದ್ರ ಲೋಕ ಹೋಟೆಲ್ ತಲುಪಿದೆವು.               ......... ಹಾಯ್.............. ಕಣೆ!!!!!!  ಲೇಟ್ ಆಯ್ತಾ  ಅಂತಾ ಜಯಂತ್ ........ ಬಂದಾ , ಅವನ ಹಿಂದೆ ಬಂದಾ  ಮತ್ತೊಬ್ಬ  ಹುಡುಗಿ ನನ್ನ ಯಜಮಾನರನ್ನು ನೋಡಿ  ಸಾರಿ ಕಣೋ ನಿನ್ನ ಮೀಟ್ ಮಾಡೋಕೆ ಆಗ್ಲಿಲ್ಲಾ ಅಂದ್ಲೂ>>>>>>>>>>>>>>>>>!!!! ಇದ್ದ ನಾಲ್ವರಲ್ಲಿ ಯಾರು ಯಾರಿಗೆ ಹೇಗೆ ಸಂಭಂದ ಅಂತಾ  ತಿಳಿಯದಾಯಿತು!!!!!!!.  ಆಗಾ ನನ್ನವನೇ ಶುರು ಮಾಡಿ  ನೋಡು "ಪುಟ್ಟಣ್ಣಿ" ಇವಳು ನನ್ನ ಕಸಿನ್  ಸಿಡ್ನಿಯಲ್ಲಿ ಇದ್ದಾಳೆ  ಇವಳೇ "ರಾಗಿಣಿ" ಅದೇ ನಿನ್ನೆ  ಬೆಳಿಗ್ಗೆ ನೀನು ನನ್ನ ಮೊಬೈಲ್ ನಲ್ಲಿ ಕದ್ದು ಮೆಸ್ಸೇಜ್ ಓದಿದ್ಯಲ್ಲಾ  ಆ ರಾಗಿಣಿ ಇವಳೇ ......!!!  ಅಂದಾಗ  ಅರೆ  ನಿನ್ನೆ ಕದ್ದು ಮೆಸೇಜ್ ಓದಿದ್ದು ಇವನಿಗೆ ಹ್ಯಾಗೆ ಗೊತಾಯ್ತು  ಅನ್ನಿಸಿ  , ಗಲಿಬಿಲಿಗೊಂಡು ಪೂರ್ಣವಾಗಿ  ಮನದಲ್ಲಿ ಸೋಲನ್ನು ಒಪ್ಪಿಕೊಂಡೆ, ಅಪ್ಪಿಕೊಂಡೆ. ನನ್ನ ಅಹಂಕಾರದ ದುಡುಕಿನ ವರ್ತನೆಗೆ ಇಲ್ಲಿ ತಕ್ಕ ಶಾಸ್ತಿಯಾಗಿತ್ತು.   ನನ್ನವನು ಮೃದುವಾಗಿ ನನ್ನ ಕೈ ಅಮುಕಿ  ನೋಡು    "ಪುಟ್ಟಣ್ಣಿ"............ ಇವಳು ನಾನು ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು   ಹಾಗಾಗಿ ಸಲಿಗೆ ಜಾಸ್ತಿ  , ನೋಡು ರಾಗಿಣಿ ಇವಳು ನನ್ನ "ಪುಟ್ಟಣ್ಣಿ"  ... ಅಂದ ಹಾಗೆ ಎಲ್ಲಿ ನಿನ್ನ ಪತಿ ಅಂದಾ, ಆಗ ನನ್ನವನ ಪ್ರೀತಿಯ ಮಾತುಗಳು ಹಾಡಿನಂತೆ ಕೇಳಿಸಿತು...... ,  ಮನದಲ್ಲಿ ನನ್ನವನ  ನಡವಳಿಕೆಗೆ ಶರಣಾಗಿದ್ದೆ .  ಆಗ ಅವಳೇ ತನ್ನ ಪತಿಯನ್ನು ಪರಿಚಯಿಸಿದಳು  ನೋಡೋ ಇವರೇ  ನನ್ನ ಪತಿ ಹೆಸರು ಜಯಂತ್  ಅಂತಾ  ಇವರೂ ಸಹ ಸಿಡ್ನಿಯಲ್ಲಿ  ಇದ್ದಾರೆ  ಅಲ್ಲೇ ನಮ್ಮಿಬ್ಬರ ನಡುವೆ ಪ್ರೀತಿ ಅರಳಿ ದೊಡ್ಡವರ ಆಶೀರ್ವಾದ ಪಡೆದು ಇಲ್ಲಿ  ಮದುವೆಯಾಗಿದ್ದೇವೆ. ಅಂದಳು . ನಾನು ಕಣ್ಣರಳಿಸಿ ನೋಡಿದೆ  ಅಂದು ನನ್ನ ಕಾಡಿಸಿದ "ಜಯಂತ್ " ನಾನು ಅನುಮಾನ ಪಟ್ಟಿದ್ದ "ರಾಗಿಣಿಯ" ಪತಿಯಾಗಿ ನನ್ನನ್ನು ನೋಡಿ ನಕ್ಕಿದ್ದಾ!!!!!!!!!!!!!!!! .         ಹಾಗು ಆ "ಜಯಂತ್ "   ಮುಂದುವರೆದು ನನ್ನ ಪತಿ ದೇವರಿಗೆ ಪರವಾಗಿಲ್ಲಾ ಸರ್ ಒಳ್ಳೆ ಹೆಂಡತಿ ನಿಮಗೆ ದೊರೆತಿದ್ದಾಳೆ ಇವಳೂ ನಾನೂ ಸಹ ನೀವು ಹಾಗು ರಾಗಿಣಿಯ ಹಾಗೆ ಒಳ್ಳೆಯ ಗೆಳೆಯರು  ನಿಜಕ್ಕೂ ಇಂದು ತುಂಬಾ ಖುಷಿಕೊಟ್ಟ ದಿನಾ ಅಂತಾ  ಹೋಟೆಲ್ ನಲ್ಲಿ ಫುಡ್ ಆರ್ಡರ್ ಮಾಡಲುತೊಡಗಿದ  .  ಆಗ ಜಯಂತ್  , ನೋಡೇ ನಿನ್ನ ಗಂಡನ ಬಗ್ಗೆ ರಾಗಿಣಿ ತುಂಬಾ ಹೇಳಿದ್ದಾಳೆ  ಬಹಳ ಕಷ್ಟಪಟ್ಟು ಓದಿ ಮುಂದೆ ಬಂದಿದ್ದಾರೆ , ನೀನು  ಅವರ ನೆರಳಾಗಿ ನಿಂತು  ಅವರ ಸಂಸಾರದ  ಸುಖದ ದೇವತೆಯಾಗಿ  ಸಂತೋಷವಾಗಿರು, ಅಂದಾ ನಂತರ ರಾಗಿಣಿಯೂ ನನ್ನವನಿಗೆ ನೋಡೋ, ಜಯಂತ್  ನಿನ್ನ ಹೆಂಡತಿಯ ಬಗ್ಗೆ ಎಲ್ಲಾ ಹೇಳಿದ್ದಾರೆ ಒಳ್ಳೆ ಹುಡುಗಿ ಚೆನ್ನಾಗಿ ನೋಡಿಕೋ  ಸುಖದಲ್ಲಿ ಬೆಳೆದ ಹುಡುಗಿ ನಿನ್ನ ಬಗ್ಗೆ ಸುಂದರ ಕನಸನ್ನು ಕಟ್ಟಿ ಕೊಳ್ಳುವುದು ತಪ್ಪಲ್ಲಾ , ಒಟ್ಟಿನಲ್ಲಿ ಖುಷಿಯಾಗಿ ಬಾಳಿರಿ ಅಂದಳು. ನನ್ನ ಮನಸಿನಲ್ಲಿ ಕವಿದಿದ್ದ    ಕಗ್ಗತ್ತಲೆಯ ಕೆಟ್ಟ  ಕಾರ್ಮೋಡಗಳು ಹೀಗೆ ಸಂತಸದ ಹೊನಲಿನಲ್ಲಿ ಚಿದ್ರವಾಗಿ  ಹೊಸ ಬೆಳಕು ಮೂಡಿತೆಂದು ಸಂಭ್ರಮಿಸಿದ್ದೆ. .....................ದೂರದಲ್ಲಿ "ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನೂ.................." ಅಂತಾ ಎಂ.ಡಿ .ಪಲ್ಲವಿ ಹಾಡು ತೇಲಿಬಂತು.  ಈ ಹರುಷದ ಸಮಯದಲ್ಲಿ ಹೋಟೆಲ್ ಊಟ ಅಮೃತದಂತೆ  ರುಚಿಯಾಗಿ ನಾವೆಲ್ಲಾ ಇಂದ್ರ ಲೋಕದಲ್ಲಿದಂತೆ ಭಾಸವಾಯಿತು.................................ಆದ್ರೆ ..............................ಇಲ್ಲಿಗ್ಯಾಕೆ ಬಂದರು ಇವರು.....................................?????? ಆ ನಾಲ್ವರು ನಮ್ಮ ಬಳಿ ಬರುತ್ತಿದ್ದರು>>>>!!!!!!!!!!!!!!!!!                         ........ ಮತ್ತೆ   ಜಯಂತ್ ಹಾಗೂ  ರಾಗಿಣಿಯ ಮೊಬೈಲ್ ಒಂದೇ ಸಮನೆ ಹೊಡೆದು ಕೊಳ್ಳಲು ಶುರುವಾಯ್ತು.                ...........................................?????????????????????????[ವಿನಂತಿ :-) ಈ ಕಥೆ ಯನ್ನು ಯಾರಾದರೂ ಮುಂದುವರೆಸಲು ಅನುಕೂಲ ವಾಗಲೆಂದು  ಸ್ವಲ್ಪ ಮುಕ್ತಾಯಕ್ಕೆ ತಿರುವು  ಕೊಟ್ಟಿದ್ದೇನೆ . ಯಾರಾದರೂ ಮುಂದುವರೆಸಿ]
             

14 comments:

ಮನದಾಳದಿಂದ............ said...

ಬಾಲು ಸರ್,
ಕಥೆ ತುಂಬಾ ಚನ್ನಾಗಿದೆ..........
ಸುಖಾಂತ್ಯ (?) ಅಂದುಕೊಳ್ಳುವಷ್ಟರಲ್ಲಿ ಮತ್ತೇನೋ Twist ಇಟ್ಟಿದ್ದೀರಲ್ಲ?
ಒಟ್ಟಿನಲ್ಲಿ ಕಥೆ ಚನ್ನಾಗಿದೆ.
ನಾನು ಬರೆದ ಕಥೆಯನ್ನೂ ಒಮ್ಮೆ ಓದಿ...............!
www.pravi-manadaaladinda.blogspot.com

ಸಾಗರದಾಚೆಯ ಇಂಚರ said...

ಬಾಲು ಸರ್

ಅದ್ಭುತವಾಗಿ ರೀತಿ ಯನ್ನ ಮುಂದುವರೆಸಿಕೊಂಡು ಹೋಗಿದ್ದಿರಿ

ಒಂದು ಸೀರಿಯಲ್ ತೆಗೆಯೋಣ ಏನಂತಿರ?

ಸುಂದರ ವಾಗಿ ಕಥೆಗೆ ರೋಚಕತೆ ನೀಡಿದ್ದಿರಿ

shivu.k said...

ಬಾಲು ಸರ್,
ಏನಿದು ಕತೆ...ಬ್ಲಾಗ್ ಲೋಕದಲ್ಲಿ ಹೊಸದೇನೋ ಆಗುತ್ತಿದೆ ಅನ್ನಿಸುತ್ತಿದೆ ನನಗೆ. ಎಲ್ಲಾ ಒಳ್ಳೆಯ ಬೆಳವಣಿಗೆ ಎನಿಸುತ್ತಿದೆ..ಕತೆ ಚೆನ್ನಾಗಿದೆ...ಆದ್ರೆ ಅಂತ್ಯದಲ್ಯಾಕೆ ಮತ್ತೆ ತಿರುವು ? ಇನ್ನ್ಯಾರಾದರೂ ಪ್ರಯತ್ನಸಿಲಿ ಅಂತಾನಾ? ಇಂಥ ಆರೋಗ್ಯಕರ ಕೋ ಕೋ ಆಟ ತುಂಬಾ ಚೆನ್ನಾಗಿದೆ...ಇರಲಿ ಇದನ್ನು ಯಾರು ಮುಂದುವರಿಸುತ್ತಾರೋ ನೋಡೋಣ...

sunaath said...

ಹೊಸ ಹೊಸ ಕತೆಗಳು ಮೂಡ್ತಾ ಇರೋದು ತುಂಬ ರೋಚಕವಾಗಿದೆ.

Dr.D.T.Krishna Murthy. said...

ಬಾಲಣ್ಣ;ಕತೆ ಚೆನ್ನಾಗಿದೆ.ಒಳ್ಳೇ ರೋಚಕ ಟ್ವಿಸ್ಟ್ ಕೊಟ್ಟಿದ್ದೀರ.ಧನ್ಯವಾದಗಳು.

ಮನಸು said...

ವಾಹ್!!! ಸೂಪರ್ ಸರ್ ಚೆನ್ನಾಗಿದೆ ಕಥೆ... ಮುಂದುವರಿಯಲಿ ಹೀಗೆ

ಸಿಮೆಂಟು ಮರಳಿನ ಮಧ್ಯೆ said...

ಬಾಲಣ್ಣಾ...

ಕಥೆ ಸೂಪರ್...
ಅನುಮಾನಗಳೇ ಹೀಗೆ ..
ಅವಮಾನ ಮಾಡಿದರೂ..
ಕೊನೆಗೆ ಸುಖಾಂತ್ಯವಾಗಬೇಕು... ಮುಂದೇನು?

ಇಲ್ಲಿವರೆಗೆ ಹೊಸ ದಂಪತಿಗಳ ನಡುವಿನ ಅನುಮಾನಗಳ ಬಗೆಗೆ ಇತ್ತು...
ಅದೇ ಮುಂದುವರೆಯಲಿ ಎನ್ನುವ ಆಶಯ...

ಖೋ...ಖ್ಖೋ... !!!!

Badarinath Palavalli said...

ಬ್ಲಾಗ್ ಲೋಕದ ಈ ಹೊಸ ಧಾರವಾಹಿ ಆಟ ಬಲು ಸೊಗಸಾಗಿದೆ. ಮೂರೂ ಲೇಖಕರು ಹೊಸ ಹೊಸ ಆಯಾಮಗಳಿಂದ ಅಖಾಡಕ್ಕೆ ಇಳಿದಂತಿದೆ.

ಭೇಷ್ ಭೇಷ್... ಬಾಲಣ್ಣ ನಿಜವಾಗಲೂ ಬೊಂಬಾಟ್ ಸಿಕ್ಸರ್!...

ಮುಂದಿನ ಲೇಖಕ ಯಾರೋ? . ಮೂರೂ ಲೇಖಕರು ಹೊಸ ಹೊಸ ಆಯಾಮಗಳಿಂದ ಅಖಾಡಕ್ಕೆ ಇಳಿದಂತಿದೆ.

ಭೇಷ್ ಭೇಷ್... ಬಾಲಣ್ಣ ನಿಜವಾಗಲೂ ಬೊಂಬಾಟ್ ಸಿಕ್ಸರ್!...

ಮುಂದಿನ ಲೇಖಕ ಯಾರೋ?

ದಿನಕರ ಮೊಗೇರ said...

ಕಥೆಯನ್ನು ಮುಂದುವರಿಸಿಕೊಂಡು ಹೋದ ರೀತಿ ಚೆನ್ನಾಗಿದೆ....... ಅದನ್ನು ಅಂತ್ಯ ಸೇರಿಸಿದ್ದರೆ ಚೆನ್ನಾಗಿತ್ತು......... ಸ್ವಲ್ಪ ಸಸ್ಪೆನ್ಸ್ ಇದೆ... ನೋಡೋಣ ಯಾರಾದರೂ ಮುಂದುವರಿಸುತ್ತಾರಾ ಎಂದು......

ಜಲನಯನ said...

ನಾನವನಲ್ಲ..ನಾನವನಲ್ಲ ಎಂದಿಕೊಂಡೇ ನಾನವನಾಗಿಬಿಟ್ಟ್ತೆ...ಬಾಲೂ, ಪ್ರವೀಣ್ ದಿನಕರ್ ಜೊತೆ ನನ್ನದೂ ಒಂದು..ಸೇರ್ಪಡೆ ಆಯ್ತು...ನನ್ನದು ಒಂದು ಅನಿಸಿಕೆ ತರಹ ಅಷ್ಟೆ...
ಬಾಲು ಕೊಟ್ಟ ತಿರುವು ...ಚನ್ನಾಗಿದೆ..

prabhamani nagaraja said...

ಬ್ಲಾಗ್ ಲೋಕದ ಈ ಪ್ರಯತ್ನ ಚೆನ್ನಾಗಿದೆ ಬಾಲು ಅವರೇ, ಕಥೆ ಅನಿರೀಕ್ಷಿತ ತಿರುವನ್ನು ಪಡೆದುಕೊ೦ಡಿದೆ! ಅಭಿನ೦ದನೆಗಳು

ಸೀತಾರಾಮ. ಕೆ. / SITARAM.K said...

ಕಥೆ ಕಥೆಯ೦ತಿಲ್ಲ!!!!!!.......................

ಸಿಮೆಂಟು ಮರಳಿನ ಮಧ್ಯೆ said...

ಇನ್ನೊಮ್ಮೆ ಶುರುಮಾಡೋಣ ಬಾಲಣ್ಣಾ...ಈ ಥರಹ ಖೋ ಖೋ ಆಟವನ್ನು...
ಅತೀ ಶೀಘ್ರದಲ್ಲಿ.....

Chandru Gunda said...

ಬಾಲಣ್ಣ ತುಂಬಾ ಚೆನ್ನಾಗಿದೆ... :)

ನಮ್ಮ ಸುತ್ತಲೂ ನಡೆಯೋ ನೈಜ ಘಟನೆಗಳೇ ಸ್ಪೂರ್ತಿ ಅನ್ಸುತ್ತೆ... ಅಲ್ವಾ..????