Wednesday, August 24, 2011

ಮೂರು ಪುಸ್ತಕಗಳ ಬಿಡುಗಡೆಯಲ್ಲಿ, ನೂರಾರು ತುಂಟಾಟ ಮಾಡುವ ಜನ ಸೇರಿದ್ದರಲ್ಲಿ!!!!





ಬನ್ನಿ ನಮಸ್ಕಾರ ನಿಮ್ಮನ್ನ ಇದ್ರಲ್ಲಿ ಕೂಡಿಹಾಕ್ತೀನಿ !!!
ಏನೇ ಅನ್ನಿ ಈ ಅಗಸ್ಟ್ ತಿಂಗಳು ಬಂದ್ರೆ ಏನೋ ಒಂತರ ಮಜಾ ಕಣ್ರೀ. ಯಾರಿಗೂ ಗೊತ್ತಿಲ್ಲದ ನಾನು ಕಳೆದ ವರ್ಷ  ಆಗಸ್ಟ್ ತಿಂಗಳಲ್ಲಿ ನಡೆದ  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಗು ಬ್ಲಾಗ್ ಮಿತ್ರರ ಕೂಟದಲ್ಲಿ  ಸಿಲುಕಿ  ಎಲ್ಲರೊಳಗೆ ಒಬ್ಬನಾದೆ.!!!ಬಹಳಷ್ಟು ಜನ ಆತ್ಮೀಯ ಗೆಳೆಯರನ್ನು ತಂದು ಕೊಟ್ಟ ಆ ದಿನ ಮರೆಯಲಾರೆ. ಹಾಗೆ ಈ ಬಾರಿಯೂ  ಸೃಷ್ಟಿ-ತುಂತುರು ಸಂಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ  ಕಳೆದ  ಭಾನುವಾರ "ಪ್ರೀತಿ ಏನನ್ನಲಿ ನಿನ್ನ, ಹೆಜ್ಜೆ ಮೂಡದ ಹಾದಿಯಲ್ಲಿ, ಮಂಜು ಕರಗುವ ಮುನ್ನ" ಮೂರು ಪುಸ್ತಕಗಳ ಲೋಕಾರ್ಪಣೆಯಾಯ್ತು. ಸಮಾರಂಭದಲ್ಲಿ ನಾ ಕಂಡ ದೃಶ್ಯಗಳನ್ನು ನಿಮ್ಮೊಡನೆ ಹಂಚಿಕೊಂಡಿರುವೆ."ನಗು ಬಂದರೆ ಚೌಕಾಸಿ ಮಾಡದೆ ನಕ್ಕು ಬಿಡಿ" ಇಲ್ಲದಿದ್ದರೆ  ನಿಮ್ಮ ಮುಂದಿರುವ ಕಂಪ್ಯೂಟರ್ ಸ್ಕ್ರೀನ್ಗೆ  ಕೋಪದಿಂದ ಒಂದು ಗುದ್ದು ಕೊಡಿ!!! ಒಟ್ಟಿನಲ್ಲಿ ಏನಾದರೂ ಮಾಡಿ ಬನ್ನಿ ನನ್ನ ಜೊತೆ  ದೃಶ್ಯ ಹಾಸ್ಯ ಮೇಳಕ್ಕೆ.[ ದಯಮಾಡಿ ಯಾರೂ ಇದನ್ನು ವಯಕ್ತಿಕವಾಗಿ ತೆಗೆದುಕೊಳ್ಳದೆ ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ನಕ್ಕು ಬಿಡಿ.]  
           ಹೆಜ್ಜೆ  ಮೂಡದ ಹಾದಿಯಲ್ಲಿ,"ಮಂಜು ಕರಗುವ ಮುನ್ನ ,ಪ್ರೀತಿ ಏನೆನ್ನಲಿ ನಿನ್ನ !!!!"
ಯಾರ್ಯಾರು ಬರ್ತಾರೋ ಗೊತಾಗ್ತಿಲ್ವಲ್ಲಾ !!!
ಕುಂ.ವೀ ಬಂದ್ರೂ, ಕುಂ. ವೀ. ಬಂದ್ರೂ  ದಾರಿ ಬಿಡಿ.
ಪ್ರಕಾಶಕರ  ಸ್ಟೈಲು ನೋಡಿ ಸ್ವಾಮೀ.!!!!
ಗಾದೆ  ಸಾಮ್ರಾಜ್ಯದ ಮಹಾರಾಣಿ  , ಯುವರಾಣಿ ಯೊಂದಿಗೆ !!!
 ಇಬ್ಬರು ಹೆಗ್ಡೆ ಗಳು  ಹಿಂಗೆ ಬಂದ್ರೆ ಹೆದರ್ಕೆ ಆಗಲ್ವಾ !!!!ಸರ್
ಪ್ರಕಾಶಣ್ಣ ಬಂದ ರಭಸಕ್ಕೆ ಹೆದರಿದ ಡಿ.ಜಿ.ಮಲ್ಲಿಕಾರ್ಜುನ್ 
ನಲ್ಲೆಯ ನೆನಪಿನಲ್ಲಿ ಸುಂದರ ಕನಸು !!!! ಸಧ್ಯದಲ್ಲೇ ಆಗುವುದು ನನಸು.
ದೊಡ್ಡಮನಿ ಮಂಜು ಕರಗಿದ ಸಮಯ!!!
ಒಳ್ಳೆ ಕಾಫಿ ಕುಡೀತಾ  ನಕ್ಕರೆ ಒಳ್ಳೆ ಮಜಾ !!! ಆಲ್ವಾ ಸತ್ಯನಾರಾಯಣ್ ಸರ್ ??
ಮಕ್ಕಳ ಪ್ರಾರ್ಥನೆ  ಗಣಪನಿಗೆ ಅರ್ಪಣೆ !!!
ನಿರೂಪಕರೆ ಬನ್ನಿ ನಿಮಗೆ ಸ್ವಾಗತ !!!
ಇನ್ನೂ ಯಾಕ ಬಲಿಲ್ಲವ್ವಾ  ಪುಸ್ತಕದವಾ  !!!
ಈ ದೀಪ ಹಚ್ಚಿದ ಗಳಿಗೆಯಲ್ಲಿ  ಮೂರೂ ಪುಸ್ತಕಗಳು ಪ್ರಸಿದ್ದಿಯಾಗಲಿ  !!!! ಅಂದ್ರೂ ಅತಿಥಿಗಳು .
ಯಾವ ಹಾಡ ಹಾಡಲಿ  ಎಂದಿದ್ದಾರೆ ಶಶಿಧರ್ ಕೋಟೆ!!!
ನಮ್  ಹುಡುಗನ  ಪುಸ್ತಕ ಕಣ್ರೀ !!!!
ಹುಚ್ಚು ಪ್ರೇಮದ ಹತ್ತಾರು ಕಥೆಗಳನ್ನು ಹೇಳಿದ  ರೂಪ .ಎಲ್.ರಾವ್.!!!! 
ವೇದಿಕೆಯಲ್ಲಿ  ಮಿಂಚಿದ ಪುಟ್ಟ ಬೊಂಬೆಗಳು  ಈ  ಮಕ್ಕಳು!!!!
ಮಕ್ಕಳೇ  ಈ ಹಣ್ಣುಗಳು ನಿಮಗೆ ಸೇರಬೇಕಾಗಿತ್ತು !!! ಆದರೂ ನನಗೆ  ಕೊಟ್ಟಿದ್ದೀರ  ಥ್ಯಾಂಕ್ಸ್.
 ಹೊಸ ಪುಸ್ತಕಗಳು ಇಲ್ಲಿವೆ ನೋಡಿ, ಆದ್ರೆ ಬಿಟ್ಟಿ ಓದಬೇಡಿ!!!!
ಫೋಟೋ ತೆಗೆಯಲು ಗುದ್ದಾಟ  ಇಲ್ಲಿ !!!!!
ಅದ್ಸರಿ,  ಇಲ್ಲೇನ್ ನಡೀತಿದೆ  ಅಂಕಲ್ ಅಂದ್ವು  ಈ ತುಂಟ ಮಕ್ಕಳು !!!
ಅಂತೂ ನಾನೂ ಒಂದ್ ಫೋಟೋ ತೆಗ್ದೆ  ಸರ್ !!! ಅಂದ್ರೂ ಇವರೂ .
ಈ ಸಾಹಿತ್ಯ ಇದ್ಯಲ್ಲಾ , ಒಂತರಾ ರುಚಿಯಾದ ಕಾಫಿ ಇದ್ದಹಾಗೆ !!!

ತುಂಬಾ ಖುಷಿ  ಆಗಿದೆ ಗೊತ್ತಾ!!!!!!
ಎಲ್ಲಿದ್ದೀಯ?? ಕಾಣಿಸ್ತಾ ಇಲ್ಲಾ!!!
ಈ ಬ್ಲಾಗು, ಫೋಟೋ, ಅಳಿಯಂದ್ರ ಕಾಟ ಎಲ್ಲಾ ಸಾಕಾಯ್ತು ಮಾರ್ರೆ !!!
ಕೋರಿಕೆ ಮೇರೆಗೆ ಮತ್ತೊಮ್ಮೆ ಬಿಡುಗಡೆ !!!!
"ಈ ಮಾತಲಿ ಏನೋ ಇದೆ" ಅಂತಾ ಭಾಷಣ ಕೇಳಿದ ಶಶಿ ಮೇಡಂ, ಅಜಾದ್, ಶಿವೂ 
ಬರೆಯೋಕಿಂತಾ ವೇದಿಕೆಯಲ್ಲಿ ಬಹಳ ಹೊತ್ತು  ಕುಳಿತು  ಮಾತಾಡೋದು ಕಷ್ಟಾ ಕಣ್ರೀ ಅಂದ್ರೂ ಅತಿಥಿಗಳು. !!!
ಕುಂ. ವಿ. ಮಾತಿನ ಲಹರಿ ಹೀಗಿತ್ತು !!!
ಈ ಐ.ಟಿ. ಮಂದಿನೂ ಚೆನ್ನಾಗೆ  ಸಾಹಿತ್ಯ ಕೃಷಿ ಮಾಡ್ತಾರೆ ರೀ!!!
ರಮೇಶ್ ಕಾಮತ್ ಸರ್ ಭಾಷಣ ವೈಭವ.
ನಮ್ಮ ಪುಟ್ಟ  ಸಂಸಾರ ಇದೆ ಸರ್  ಅಂದ್ರೂ ಪರಾಂಜಪೆ!!!!
ಅಲ್ಲೇನ್  ನಡೀತಾ ಇದೆ  ಗೊತ್ತಾಗ್ತಿಲ್ಲಾ !!!
ಅಂಕಲ್ ಪುಸ್ತಕ ಬಿಡುಗಡೆ ಅಂದ್ರೆ ಏನು???
ಹೋಗಿ ಅಂಕಲ್ ನನಗೇನೂ ಅರ್ಥಾ ಆಗ್ತಿಲ್ಲಾ !!!
ಅಂಕಲ್ ಎಲ್ರೂ ಯಾಕೆ ಬಂದಿದ್ದಾರೆ ಇಲ್ಲಿ???
 ನಂಗೆ ಅಂತಾ ಯಾವ್ದು ಪುಸ್ತಕ ಇಲ್ಲಿಲ್ವಾ???
ಎಲ್ಲೋದ್ಲು ನಮ್ಮ ಪುಟ್ಟೀ??  ಇದು ಉಮೇಶ್ ವಶಿಸ್ಟ್ ಸ್ಟೈಲು. !!!

ಅಪ್ಪ ಇಲ್ಲಿದೀನಿ !!!
ಹುಡುಗ ಮೀಸೆ ತೆಗೆದ ,ಈಗ್ಲಾದ್ರೂ ಮದುವೇ ಮಾಡ್ಸಿಯಪ್ಪಾ!!!
ಪಕ್ಷ ಬಿಡಬೇಡ ಅಳಿಮಯ್ಯಾ  ನಾನಿದ್ದೀನಿ ನಿನ್ಜೋತೆ!!!!
ನಾವು  ಲೇಟಾಗಿ ಬಂದ್ವಿ ಅಂತಾ ಕುಣಿಯುತ್ತಾ ಬಂದರೂ ಇನ್ನಿಬ್ಬರು ಅಳಿಯಂದಿರು!!!
ಪೆನ್ನೂ ಪೇಪರ್ ಒಟ್ಟಿಗೆ ಬಂದಾಗ  ಸ್ಮೈಲು ಹಾಗು ಸ್ಟೈಲು ನೋಡಿ  !!!
ಮೀಸೆ ಹೊತ್ತ ಇಬ್ಬರ ನಡುವೆ ಮೀಸೆ ಇಲ್ಲದವನ ಪಾಡು !!!!
ಸಾರಿ ಸರ್ ಇನ್ಮುಂದೆ ಮೀಸೆ ತೆಗೆಯೋಲ್ಲಾ !!!
ಸುದೇಶ ಶೆಟ್ಟಿ  ಬಳಗ ಇಲ್ಲಿದೆ ನೋಡಿ !!!
ಹೊಟ್ಟೆ ಹಸಿತಿದೆ ಬನ್ನಿ ಊಟ ಮಾಡೋಣ !!!
ಎಷ್ಟ್ ಜನ ಇದಾರೆ ,ಎಷ್ಟು ಊಟಕ್ಕೆ ಹೇಳಲಿ!!!!
ಏನ್ ಸಾರ್ ಮಾಯಾ ಬಜಾರ್ ಊಟಾನ???
 ತಟ್ಟೆಯಲ್ಲಿ ಸುಂದರ ಚಿತ್ತಾರ ಬಿಡಿಸಿ ಕೆಣಕಿದ ಊಟ !!!
ಇನ್ನೂ  ಯಾರೂ ಗೋವಿಂದಾ ಹೇಳಿಲ್ಲಾ ಅದಕ್ಕೆ ಊಟ  ಶುರು ಮಾಡಿಲ್ಲಾ !!!
ಇದು ನನ್ನ ಮಾಯಾ ಬಜಾರ್ ಊಟ ಸರ್ ಅಂದ ಶಿವಪ್ರಕಾಶ್!!!
ನಾನು ಸಂತ್ರಸ್ತರ ಸಂಘದ ಸದಸ್ಯ ಆಗಿದ್ದೆ!!! ಅಂದ್ರೂ ಸತ್ಯನಾರಾಯಣ್ , ಏನೂ ಗೊತ್ತಿಲ್ಲದೇ  ನಕ್ಕರು ಮಣಿಕಾಂತ್
ಊಟ ಬರೋವಷ್ಟರಲ್ಲಿ ಒಂದು ಮೆಸೇಜ್ ಕಳುಹಿಸ್ತೇನೆ ತಾಳಿ!!!
ಅಧ್ಯಕ್ಷರಿಗೆ [ ದೀಪಾಂಜಲಿ  ಹೆಗ್ಡೆ ] ಕೋಪ ಬಂದಿದೆ , ಊಟ ಮಾಡಲ್ವಂತೆ!!!ಅಂದ್ರೂ ಅಜಾದ್
ಅಧ್ಯಕ್ಷರನ್ನು ಒಪ್ಪಿಸಿ "ಮಾಯಾ ಬಜಾರ್" ಊಟಕ್ಕೆ ಆರ್ಡರ್ ಮಾಡಿದ ಅಜಾದ್ ಸರ್ .
ಅಧ್ಯಕ್ಷರಿಗೆ ಮಾಯಾ ಬಜಾರ್ ಊಟ ಬಂತು ಜಾಗ ಬಿಡಿ !!!
ಊಟ ಚೆನ್ನಾಗಿತ್ತು ಸರ್
ನನ್ ಹೆಂಡತಿ ಜೊತೆಯಲ್ಲಿ ಇದ್ದಿದ್ರೆ ಊಟ ಇನ್ನೂ ರುಚಿ ಇರ್ತಿತ್ತು!!!
 ನನ್ನ ಗೆಳೆಯರ ಆಕ್ರಮಣಕ್ಕೆ ತುತ್ತಾದ ಊಟದ ತಟ್ಟೆಗಳು
ಒಳ್ಳೆ ಊಟ ಆಯ್ತು ನಿದ್ದೆ ಬರ್ತಿದೆ ಬರ್ಲಾ ಮತ್ತೆ !!!
ಊಟ ತುಂಬಿ ಭಾರವಾದ ಹೊಟ್ಟೆಗಳಿಗೆ ನಗುವಿನ  ಶುಭವಿದಾಯ!!!
ಬಾಲು ಫೋಟೋ ನೋಡಿ  ನಿಮಗೆ ನಗು ಬರ್ಲಿಲ್ವಾ?? ಹೋಗ್ಲಿ ಬಿಡಿ ನಿಮ್ಮ ಪರವಾಗಿ ನಾನೇ ನಗ್ತೀನಿ
ನೋಡಿದ್ರಾ ಹೇಗಿದೆ ನನ್ನ ಕ್ಯಾಮರಾ  ಮಾಡಿದ ತುಂಟಾಟ. ಮುಂದಿನ ಭೇಟಿಯ ವರೆಗೂ ಹೀಗೆ ನಗುತ್ತಾ ಇರಿ.  ಭಾನುವಾರದ ನೆನಪು ನಮ್ಮೆಲ್ಲರ ಪ್ರೀತಿ, ವಿಶ್ವಾಸ  ಹೆಚ್ಚಿಸಲಿ. ಎಲ್ಲರಿಗೂ ಜೈ ಹೋ.

28 comments:

ಚುಕ್ಕಿಚಿತ್ತಾರ said...

superb photos and captions..!!

ಜಲನಯನ said...

Baaaaalooooo
Soooooooper
Foto JOTEGE
foot Notesoooooooooooooo

shivu.k said...

ಬಾಲು ಸರ್,

ಸೂಪರ್...ನಾನು ಕ್ಯಾಮೆರ ಹಿಡಿದಿಲ್ಲವೆನ್ನುವ ಚಿಂತೆ ಮರೆಯಾಯ್ತು...ನಿಮ್ಮ ಫೋಟೊಗಳನ್ನು ನೋಡಿ...
ತುಂಬಾ ಚೆನ್ನಾದ ಫೋಟೊಗಳ ಜೊತೆ ಶೀರ್ಷಿಕೆಗಳೂ ಕೂಡ ಚೆನ್ನಾಗಿವೆ..
ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಮತ್ತು ಇಂಥ ಕೆಲಸ ಮಾಡಿದ್ದಕ್ಕೆ ಥ್ಯಾಂಕ್ಸ್..

ಚಿತ್ರಾ said...

ಹಾ ಹಾ ಹಾ ..
ಇನ್ನು ನಗ್ತಾನೆ ಇದ್ದೀನಿ ರೀ...
ಒಳ್ಳೆ ಫೋಟೋಗಳು ಮತ್ತು ಶೀರ್ಷಿಕೆಗಳು !!

ಸೀತಾರಾಮ. ಕೆ. / SITARAM.K said...

chennagide chitra mattu sheersheeke

ಗಿರೀಶ್.ಎಸ್ said...

ನಿಮ್ಮ captionsಗೆ ಸಾಟಿ ಯಾರು ಇಲ್ಲ ಬಿಡಿ ಸರ್ !!! ಸೂಪರ್ ಆಗಿವೆ ...

Manju M Doddamani said...

Ohhhhhhhh Superrrrrrrrrrr :-)

UMESH VASHIST H K. said...

ಫೋಟೋಗಳೆಲ್ಲ ಸೂಪರ್ ಸಾರ್ .... ಬಾಲು ಸಾರ್ . ಹಾಂ ಆದ್ರೆ ನನ್ನ ಪುಟ್ಟಿ ಕಾಣ್ತಾ ಇಲ್ಲ ಹೌದಲ್ವ....... ಹ ಹ ಹಾ

Ittigecement said...

ಬಾಲೂ ಸರ್...

ಬಹಳ ದಿನಗಳ ನಂತರ ನಾವೆಲ್ಲ ಸೇರಿ ನಕ್ಕಿದ್ದು ಖುಷಿಯಾಗಿತ್ತು...

ಕ್ಯಾಪ್ಷನ್ ಬಾಲಣ್ಣ ಜೈ ಹೋ !!

ಮನದಾಳದಿಂದ............ said...

ಕಪ್ತಾನ್ ಬಾಲು ಸಾಬ್............
ನಕ್ಕು ನಕ್ಕು ಸಾಕಾಯ್ತು. ನಾನು ಇಂತಹ ಸುಂದರ ಗಳಿಗೆಯನ್ನು ಮಿಸ್ ಮಾಡಿಕೊಂಡೆ ಎಂಬ ನೋವು ಈಗ ದೂರಾಯ್ತು.........

Yogee said...

Super Photographs.
Thanks for sharing...!

ಶಿವಪ್ರಕಾಶ್ said...

sooooooper sir :)

Prabhakar. H.R said...

Photogalu haagu sheershikegalu eradu hecchu kushi kottavu...

ನಾಗರಾಜ್ .ಕೆ (NRK) said...

Good . . . . Yuvamukhanda Caption Baalanna avarige jai :-)

Rajesh said...

Samaarambhakke baradidrenanate....Hogi Bandashte Santhoshavaaytu Baalu Sir...Dhanyvaada Nimage

Shashi jois said...

ಬಾಲು ಸರ್ ಸೊಗಸಾದ ಚಿತ್ರದೊಂದಿಗೆ ಸುಂದರ ವಿವರಣೆ.....
ಅದ್ರು ಸಿರ್ಸಿ ಮರಿಯಾಮ್ಮನನ್ನು ತೋರಿಸದೆ ಇದ್ದದ್ದು ಒಳ್ಳೆದಾಯ್ತು ಹ ಹ ಹ ಹಾ.

Dr.D.T.Krishna Murthy. said...

super photos and wonderful captions!

sunaath said...

ಬಾಲು,
ತುಂಬಾ ಚೆನ್ನಾಗಿ ಫೋಟೋ ತೆಗೆದಿದ್ದೀರಿ. ಒಳ್ಳೇ ಶೀರ್ಷಿಕೆ ಕೊಟ್ಟಿದ್ದೀರಿ. ‘ಮಾಯಾ ಬಜಾರ’ ಫೋಟೋಗಳನ್ನು ನೋಡಿ ಹೊಟ್ಟೆ ತುಂಬಿ ಬಂದಿತು!

ಸುಬ್ರಮಣ್ಯ said...

ಫೋಟೋಗಳು ಚನ್ನಾಗಿವೆ ಬಾಲು ಅಣ್ಣ.
ಅಡಿಬರಹ ಇನ್ನೂ ಚನ್ನಾಗಿವೆ.
ನಿಮ್ಮ ಫೋಟೋ ಇಲ್ವಲ್ಲಾ?
ಅವನ್ನು ನೋಡಲು ನಾವು ಯಾರ ಬ್ಲಾಗ್ ನೋಡಬೇಕು??!!

www.hridayashiva.blogspot.com said...

superrrrrrrr

manu said...

ಸಕ್ಕತಾಗಿದೆ ಗುರುವೇ

Sandeep K B said...

Super Photo And Caption Sir... Event Came in front of my Eyes.........

ಸುಧೇಶ್ ಶೆಟ್ಟಿ said...

Super Balu Sir :) thumba thanks :) nimmannu bheti aagi thumba kushi aaytu :)

ದಿನಕರ ಮೊಗೇರ said...

tumbaa chennaagide photo jotege caption...

Godavari said...

tumba chennagide sir

Badarinath Palavalli said...

good captions with superb images.
I feel my self missing in this function sir.

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com

Face book Profile : Badarinath Palavalli

ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

prabhamani nagaraja said...

ನಕ್ಕು ನಕ್ಕು ಸಾಕಾಯ್ತು ಬಾಲು ಅವರೇ, ಫೋಟೋ ಗಳನ್ನೂ ಮೀರಿಸುವ ಅಡಿಬರಹಗಳು! ಸಮಾರ೦ಭದಲ್ಲೆ ಪಾಲ್ಗೊ೦ಡ೦ತಾಯ್ತು!

ಸಾಗರದಾಚೆಯ ಇಂಚರ said...

Sir, tumbane sundara photo mattu comments

late agi nodide
kshamisi

naanu miss madikonde