Monday, August 1, 2011

ನೀವು ಕುಟುಂಬ ದೊಡನೆ /ಅಥವಾ ಸ್ನೇಹಿತರೊಡನೆ ರಿಲಾಕ್ಸ್ ಮಾಡಲು ಏನುಅನುಕೂಲತೆ ಬೇಕು ????

ಹೌದಲ್ವಾ ಇದೆ ಪ್ರಶ್ನೆ ನನ್ನನ್ನು ಹಲವಾರು ಸರಿ  ಕಾಡುತ್ತಿದೆ. ಎಲ್ಲರಿಗೂ ಗೊತ್ತು ಮನುಷ್ಯನ ಮನಸ್ಸುಹಾಗು ದೇಹ  ದೈನಂದಿನ ದಿನಚರಿ ಯಿಂದ, ಕೆಲಸ ಕಾರ್ಯಗಳ ಒತ್ತಡದಿಂದ , ಪಟ್ಟಣದ ಗದ್ದಲದ ಜಂಜಾಟದ  ವಾತಾವರಣದಿಂದ , ಬಿಡುವಿಲ್ಲದ ದಣಿವಿನಿಂದ  ಮುಕ್ತಿ  ಪಡೆಯಲು  ವಿಶ್ರಾಂತಿ ಪಡೆಯಲು ಬಯಸುತ್ತದೆ. ಸ್ವಲ್ಪ ದಿನ ಈ ಜಂಜಾಟ ಗಳನ್ನು ಮರೆತು ಹಾಯಾಗಿ  ಹೊರಗಡೆ ಎಲ್ಲಾದ್ರೂ ಕುಟುಂಬದೊಡನೆ / ಸ್ನೇಹಿತರೊಡನೆ / ಅಥವಾ ಒಬ್ಬರೇ  ನೆಮ್ಮದಿಯಾಗಿ ಹೋಗಬೇಕೆನ್ನಿಸುತ್ತದೆ. ಈ ರೀತಿಯ ಮಾತುಗಳನ್ನು ನಾವು ಪಡೆ ಪಡೆ ಆಡುತ್ತೇವೆ. "ನನಗಂತೂ ಸಾಕಾಗಿ ಹೋಗಿದೆ  ಎಲ್ಲಾದ್ರೂ ಆಚೆ ಹೋಗಿ ರಿಫ್ರೆಶ್ ಆಗಬೇಕೂ ರೀ "  ಎನ್ನುವ ಮಾತುಗಳು ನಮ್ಮ ಬಾಯಿಂದ ಬರುತ್ತದೆ. ಆದರೆ ಹಲವು ಸಾರಿ ಈ ನಿರೀಕ್ಷೆ ತಪ್ಪಾಗಿ  ಯಾಕಾದ್ರೂ ಹೊರಗೆ ಹೊಫಿದ್ವೋ ಅನ್ನಿಸುತ್ತದೆ. ಇದಕ್ಕೆ ಉತ್ತರ ಕಂಡು ಹಿಡಿಯುವ ಒಂದು ಪ್ರಯತ್ನ ಮಾಡೋಣ ಬನ್ನಿ. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.೧] ನೀವುಹೊರಗಡೆ ಕುಟುಂಬ ದೊಡನೆ / ಸ್ನೇಹಿತರೊಡನೆ/ ಒಬ್ಬರೇ ಯಾವ ಜಾಗದಲ್ಲಿ ರಿಲಾಕ್ಸ್ ಮಾಡಲು ಬಯಸುತ್ತೀರಿ? ೨] ನೀವು ಉಳಿಯುವ ಸ್ಥಳದಲ್ಲಿ ನೀವು ನಿರೀಕ್ಷಿಸುವ ಸೌಲಭ್ಯ ಗಳೇನು ??  3 ] ನಿಮ್ಮ ಕಲ್ಪನೆಯ ಪ್ರದೇಶ ಹೇಗಿರ ಬೇಕು ?? ೪] ಯಾವ ಚಟುವಟಿಕೆಯಿಂದ ನಿಮ್ಮ ಮನಸ್ಸು  ಉಲ್ಲಾಸವಾಗಿ ಆ ಜಾಗಕ್ಕೆ ಮತ್ತೊಮ್ಮೆ ಕುಟುಂಬ ದೊಡನೆ / ಸ್ನೇಹಿತರೊಡನ / ಒಬ್ಬರೇ ಹೋಗಬೇಕು ಎನ್ನಿಸುತ್ತದೆ?? ೫]  ಈ ಗಿನ ರೆಸಾರ್ಟ್/ ಹೋಂ ಸ್ಟೇ  ಸಂಸ್ಕೃತಿ ನಿಮಗೆ  ಒಪ್ಪಿಗೆಯಾಗಿದೆಯೇ ??  ನಿಮ್ಮ ಕಲ್ಪನೆಯ ರೆಸಾರ್ಟ್ / ಹೋಂ ಸ್ಟೇ ಹೇಗಿರ ಬೇಕು ?? ಇವುಗಳ ಬಗ್ಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಿ .  ಬನ್ನಿ ಒಂದು ಪ್ರಯತ್ನ ಮಾಡೋಣ!!!

5 comments:

ಸೀತಾರಾಮ. ಕೆ. / SITARAM.K said...

ಸ್ವಲ್ಪ ತಾಲೀಮು ಬೇಕಲ್ಲವೇ? ತಮ್ಮ ಸಲಹೆ ಅವಶ್ಯವಾಗಿದೆ.

ಸಾಗರದಾಚೆಯ ಇಂಚರ said...

sir
nanage prashaantavaada kaadu, hariyuva neeru irabeku, photography ge anukoola irabeku :)

ಶಿವಪ್ರಕಾಶ್ said...

೧) ಮುಖ್ಯವಾಗಿ ಅಲ್ಲಿ ಹಸಿರಿನಿಂದ ಕೂಡಿರಬೇಕು..

೨) ಕೂತು ಆಹಾರ ಸೇವಿಸುವ ಸ್ಥಳದಲ್ಲಿ ಸಣ್ಣದಾಗಿ ಹಾಡಿಲ್ಲದ ಸಾಫ್ಟ್ ಮ್ಯೂಸಿಕ್ ಬರ್ತಾ ಇರ್ಬೇಕು.. ಇದು ಮಾತನಾಡುತ್ತಿರುವವರೆಗೆ ತೊಂದರೆ ಕೊಡುವಸ್ಟು ಜೋರಾಗಿ ಕೇಳಿಸಬಾರದು.

೩) ಚಿಕ್ಕಮಕ್ಕಳಿಗೆ ಇಷ್ಟವಾಗುವ ಆಟಗಳು ಇರಬೇಕು... ಉದಾಹರಣೆಗೆ ಜೋಕಾಲಿ, ಜಾರುಬಂಡೆ, ಚಿಕ್ಕ ಸೈಕಲ್ಲು, ರೌಂಡ್ ಶೇಪ್ ನಲ್ಲಿ ಹತ್ತುವ ಮೆಟ್ಟಿಲುಗಳು, ಚಿಕ್ಕಮಕ್ಕಳಿಗೆ ಸ್ವಿಮ್ಮಿಂಗ್ ಫೂಲ್. ಹೀಗೆ ಚಿಕ್ಕಮಕ್ಕಳಿಗೆ ಇಷ್ಟವಾಗುವ ಆಟಗಳಿಗೆ ಸಾಧ್ಯವಾದ ವ್ಯಾವಸ್ತೆ.

೪) ಮಧ್ಯ ವಯಸ್ಸಿನವರಿಗೆ ಆಟ ಆಡಲು ಕ್ರಿಕೆಟ್, ಫೂಟ್ಬಲ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಟನ್, ಕ್ಯಾರಮ್, ಚೆಸ್ಸ್, Snooker, tug war, ಬಾಲಿಂಗ್, ಕಬ್ಬಡ್ಡಿ, ಕೊಕ್ಕೋ, archery ಹಾಗು ಇತರೆ ಆಟಗಳಿಗೆ ವ್ಯವಸ್ತೆ ಇರಬೇಕು.

೫) ರೌಂಡ್ ಟೇಬಲ್/ function ಹಾಲ್/Auditorium ಇರುವ ಹಾಗೆ ಕೊಠಡಿಗಳು ಇರಬೇಕು. ಕೆಲೋವೊಮ್ಮೆ ಇವು ಬಹಳಷ್ಟು ರೀತಿಯ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡುತ್ತದೆ. ಇಂತಹ ವ್ಯವಸ್ತೆಯಿಂದ ಕೆಲವು ಕಂಪನಿಗಳು ಇಲ್ಲಿಗೆ ಬಂದು ತಮ್ಮ ಕಾರ್ಯಕ್ರಮವನ್ನು ಏರ್ಪಡಿಸಬಹುದು.

೬) ಹಿರಿಯ ವಯಸ್ಸಿನವರಿಗೊಂದು ಹರಟೆ ಕಟ್ಟೆ.

೭) musical chair ಆಟ ಆಡಲು ವ್ಯವಸ್ತೆ.

Optional choices:
೧) ಕೆಲವು ಹಳೆಯ ಒಳ್ಳೆಯ ಪುಸ್ತಕಗಳಿಂದ ಕೂಡಿದ ಗ್ರಂಥಾಲಯ ಹಾಗು ದಿನದ ನ್ಯೂಸ್ ಪೇಪರ್.

ಸದ್ಯಕ್ಕೆ ನನಗೆ ಹೊಳೆದಿದ್ದು ಇಸ್ಟೇ... :)
ಧನ್ಯವಾದಗಳು

ಸುಬ್ರಮಣ್ಯ ಮಾಚಿಕೊಪ್ಪ said...

ಪುರುಸೊತ್ತಾದಾಗ ಯೋಚನೆ ಮಾಡಬೇಕು.

shivu.k said...

ನನಗೇ ಏನು ಬೇಕು ಅನ್ನುವುದನ್ನು ಯೋಚಿಸುತ್ತಿದ್ದೆ. ಆದ್ರೆ ಶಿವಪ್ರಕಾಶ್ ಬರೆದಿದ್ದನ್ನು ನೋಡಿದಾಗ ಅವೆಲ್ಲಾ ಬೇಕು ಎನ್ನಿಸುತ್ತೆ..ಹತ್ತಿರದಲ್ಲೊಂದು ಜಲಪಾತವಿರಬೇಕು.