Monday, August 15, 2011

ಈ ಹಳ್ಳಿ ಕಾಲೇಜಿನಲ್ಲಿ ಸದ್ದಿಲ್ಲದೇ ಸಾಗಿದೆ ಜ್ಞಾನ ಸಿಂಚನದ ರಥ !!!ಚಿಕ್ಕ ಗಣೇಶ , ಅಂಬಿಕ ಮೇಡಂ ತೋರುತ್ತಿದ್ದಾರೆ ಅದಕ್ಕೊಂದು ಪಥ!!!!!"ಗೊಮಟಗಿರಿ  ಬೆಟ್ಟ "

ಕಳೆದ ಶನಿವಾರ ರಜಾದಿನವಾಗಿತ್ತು. ನಮ್ಮ ಸತ್ಯ ರವರು ಫೋನ್ ಮಾಡಿ , ಬಾಲಣ್ಣ ಫ್ರೀ ನಾ , ಅಂದ್ರೂ , ನಾನು ಯಾಕೆ ಸಾರ್?? ಅಂದೆ, ಇನ್ನರ್ಧ ಘಂಟೆಯಲ್ಲಿ ನಿಮ್ಮ ಮನೆಯಲ್ಲಿರುತ್ತೇನೆ ರೆಡಿ ಇರೀ , ಒಳ್ಳೆ ನೀರು ಬಂದಿದ್ಯಂತೆ  "ಚುಂಚನಕಟ್ಟೆ" ಗೆ ಹೋಗಿಬರೋಣ    ಅಂದ್ರೂ. ಕಟ್ ಮಾಡಿದ್ರೆ  ನಾವು ನನ್ನ ಆಕ್ಟಿವಾ ದಲ್ಲಿ  ಚುಂಚನಕಟ್ಟೆ  ಹಾದಿ ಹಿಡಿದಿದ್ದೆವು. ಮೋಡಗಳ ಮುಸುಕಿನ ವಾತಾವರಣದಲ್ಲಿ ಮಳೆರಾಯನ   ಕಣ್ಣಾ ಮುಚ್ಚಾಲೆ , "ಇಲವಾಲ" ಬರುತ್ತಿದಂತೆ  ಮಳೆರಾಯನ ಆಗಮನ ವಾಗಿತ್ತು. ಎಂತಾ ಕೆಲ್ಸಾ ಸರ್ ಏನ್ಮಾಡೋದು??? "ನನ್ನ ಬಳಿ ಜಾಕೆಟ್ ಇದೆ ನಿಮ್ಮ ಬಳಿ ಇಲ್ಲ ಮುಂದೆ ಹೋದ್ರೆ ನೀವು ಮಳೆಯಲ್ಲಿ ನೆನೆದು ತೊಪ್ಪೆ ಆಗ್ತೀರಿ" ಅಂದೇ. ಇರಿ ಬಾಲಣ್ಣ  ಅಂದಾ ಸತ್ಯ ಇಲ್ಲೇ ಹತ್ತಿರದಲ್ಲಿ ಎಲ್ಲಾದ್ರೂ ನೋಡದೆ ಇರೋಜಾಗಕ್ಕೆ ಹೋಗೋಣ ಅಂದ್ರೂ . ಆಗ ಹೊಳೆದದ್ದು  ಹತ್ತಿರದಲ್ಲೇ ಇದ್ದ ಜೈನ ಕ್ಷೇತ್ರ  "ಗೊಮಟಗಿರಿ"  
"ಸುಂದರ ಬಾಹುಬಲಿ ಮೂರ್ತಿ"
                   ತುಂತುರು ಮಳೆಯಲ್ಲೇ ಅಲ್ಲಿಗೆ ತಲುಪಿದೆವು. ಕೆಳಗಡೆ ಬೆಟ್ಟದ ತಪ್ಪಲಿನಲ್ಲಿ ನಮ್ಮನ್ನು ಸ್ವಾಗತ ಮಾಡಿದ್ದು  ಚಪ್ಪಲಿಗಳ ಸಾಲು ಸಾಲು. ಮಾಮೂಲಿನಂತೆ  ಅದೇ ಸಿಟಿ ಹೈಕಳು   ಪಿಕ್ನಿಕ್  ಗೆ ಬಂದಿರ್ತವೆ ಅಂತಾ  ಅನ್ಕೊಂಡು  ಬೆಟ್ಟ ಹತ್ತಲು  ಹತ್ತಿರ ಹೋಗುತ್ತಿದ್ದಂತೆ   ಶಂಕರ್  ಎನ್ನುವ  ಇತಿಹಾಸ ಪ್ರಾಧ್ಯಾಪಕರ ಪರಿಚಯವಾಯಿತು. ಇವರು ಸಹ ಖುಷಿಯಾಗಿ ಪರಿಚಯಮಾಡಿಕೊಂಡು  ಮೇಲೆ ಒಳ್ಳೆಯ ಕಾರ್ಯಕ್ರಮ ನಡೀತಿದೆ ಹೋಗಿ ಸಾರ್ ಅನ್ನುತ್ತಾ  ಹೊರಟರು  . ಬೆಟ್ಟ  ಏರಿದ  ನಮಗೆ  ದರ್ಶನ ನೀಡಿದ ಸುಂದರ ಬಾಹುಬಲಿ ಮೂರ್ತಿಯ ಜೊತೆಗೆ  ಒಂದು ಗುಂಪಿಗೆ  ಯಾರೋ ಸಾಹಿತ್ಯದ ಪಾಠ ಮಾಡುತ್ತಿರುವ ಹಾಗೆ ಅನ್ನಿಸಿ  ಪ್ರವೇಶ  ಮಾಡಿದೆವು. ಒಬ್ಬ ಹೆಣ್ಣುಮಗಳು  ತನ್ನ ಮುಂದೆ ಕುಳಿತ  ಹಲವು ಹುಡುಗ ಹುಡುಗಿಯರಿಗೆ  ಏನನ್ನೋ  ವರ್ಣಿಸುತಿದ್ದರು. ಹಾಗೆ ಒಳಗಡೆ ಹೋದ ನಾವು ಅಲ್ಲಿ ನಡೆಯುತ್ತಿರುವ  ಘಟನೆಯನ್ನು ಮೌನವಾಗಿ ವೀಕ್ಷಿಸಲು  ತೊಡಗಿದೆವು. ಅಲ್ಲಿ ಕಂಡಿದ್ದೆ ಇಂದಿನ ಸಂಚಿಕೆಯ ವಿಶೇಷ.


 ನಮ್ಮಲ್ಲಿ ಸರ್ಕಾರಿ  ನೌಕರರೆಂದರೆ  ಒಂದು ಬಗೆಯ ಅಲರ್ಜಿ, ಸರ್ಕಾರಿ, ಆಸ್ಪತ್ರೆ, ಕಚೇರಿ, ಸ್ಕೂಲು, ಕಾಲೇಜು  ,ಇವುಗಳ ಬಗ್ಗೆ ಏನೋ ಒಂದುತರಹದ ನಕಾರಾತ್ಮಕ ದೋರಣೆ. ಹಾಗಿ ಅಲ್ಲಿ ನಡೆಯುವ ಹಲವಾರು ಒಳ್ಳೆಯ ಕೆಲಸ ಕಾರ್ಯಗಳನ್ನು  ಕಣ್ಣಿಗೆ ಕಂಡರೂ ಗುರುತಿಸಲು  ಹಿಂಜರಿಯುತ್ತೇವೆ. ಹಾಗು ಒಳ್ಳೆಯ ಕೆಲಸ ಮಾಡುವ ಕೆಳಹಂತದ ನೌಕರ , ಅಧಿಕಾರಿಗಳ ಕಾರ್ಯವನ್ನು ಬೆನ್ನುತಟ್ಟಿ  ಹುರಿದುಂಬಿಸುವ ಕಾರ್ಯ ಮಾಡಲು ನಮ್ಮ ಮನಸ್ಸು ಹಿಂಜರಿಯುತ್ತದೆ. ಅವನೇನು ಮಾಡಿದಾ ಮಹಾ, ಸರ್ಕಾರದ ಸಂಬಳ ತಿಂತಾನೆ ಮಾಡ್ತಾನೆ ಅಷ್ಟೇ!!! ಎನ್ನುವ ದೋರಣೆ ನಮ್ಮದು. ಇದನ್ನೆಲ್ಲಾ ಲೆಕ್ಕಿಸದೆ ತಮ್ಮದೇ ರೀತಿಯಲ್ಲಿ  ಎಲೆಮರೆಯ ಕಾಯಿಗಳಂತೆ  ಸಮಾಜ ಕಟ್ಟುತ್ತಿರುವ ಹಲವಾರು ಸರ್ಕಾರಿ ನೌಕರ /ಅಧಿಕಾರಿಗಳಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸಲು  ಸಮಾಜಕ್ಕೆ ಯಾಕೋ ಒಂದು ತರಹದ ಹಿಂಜರಿಕೆ .ಎಲ್ಲರು ಗುರುತಿಸಬೇಕಾದ ಹಾಗೂ  ಹಲವಾರು ಶಾಲೆ  ಕಾಲೇಜು, ಗಳಲ್ಲಿ ಅಳವಡಿಸಿಕೊಳ್ಳಬೇಕಾದ ಕಾರ್ಯಕ್ರಮದ ಒಂದು   ಘಟನೆ ಇದು. ಆಗಿದ್ದು ಇಷ್ಟೇ. ನಿಶ್ಯಬ್ಧವಾಗಿ ಕುಳಿತ ನಮಗೆ  ಅಲ್ಲಿ ಕನ್ನಡ ವಿಷಯದ ಅಧ್ಯಾಪಕಿ ಒಬ್ಬರು ತನ್ನ ಕಾಲೇಜಿನ ವಿಧ್ಯಾರ್ಥಿಗಳ  ಗುಂಪನ್ನು
"ವಿಧ್ಯಾರ್ಥಿ ಸಮೂಹ"
   ಉದ್ದೇಶಿಸಿ ಜೈನ ಸಾಹಿತ್ಯದ ಬಗ್ಗೆ , ಜೈನ ಕವಿತೆಗಳ ಬಗ್ಗೆ, ಜೈನ ಧರ್ಮದಲ್ಲಿ ಸಾಹಿತ್ಯ ಹರಿದು ಬಂದ ಬಗ್ಗೆ , ಆಸಕ್ತಿ ಪೂರ್ಣವಾಗಿ  ವಿಚಾರ ಧಾರೆ ಹರಿಸಿದ್ದರು. ಅಲ್ಲಿ ಜೈನ ಸಾಹಿತ್ಯದ ಬಗ್ಗೆ ಕವಿತೆ ರಚಿಸಿದ ಕನ್ನಡ ಕವಿಗಳ ಬಗ್ಗೆ ಆಸಕ್ತಿ ಪೂರ್ಣವಾದ ವಿಚಾರಗಳು  ಹೊಮ್ಮಿದ್ದವು.  ಆ ವಿಚಾರ ಧಾರೆಯಲ್ಲಿ ಲೀನವಾಗಿ ವಿಧ್ಯಾರ್ಥಿಗಳೂ ಸಹ ಲೀನರಾಗಿ  ಸದ್ದಿಲ್ಲದೇ ನಡೆಯುತ್ತಿರುವ ಒಂದು ಸತ್ಕಾರ್ಯದಲ್ಲಿ  ಭಾಗಿಯಾಗಿದ್ದರು  . ನಾವೂ ಸಹ ಸದ್ದಿಲ್ಲದೇ ಈ ಘಟನೆಯ ಚಿತ್ರಣ ಮಾಡುತ್ತಾ,  ಕಿವಿಗಳಲ್ಲಿ ಆಸಕ್ತಿದಾಯಕ ಮಾಹಿತಿ ಗ್ರಹಿಸುತ್ತಾ  ಆ ಕಾರ್ಯಕ್ರಮದಲ್ಲಿ ಲೀನವಾಗಿ ಹೋಗಿದ್ದೆವು. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಲಿ, ಅಧ್ಯಕ್ಷರಾಗಲಿ, ಮುಖ್ಯ ಅತಿಥಿಗಳಾಗಲಿ ಇರಲಿಲ್ಲ , ಹಳ್ಳಿ ಕಾಲೇಜಿನ ಈ ಕಾರ್ಯಕ್ರಮ,
"ಜ್ಞಾನ ಸಿಂಚನ ಹರಿಸಿದ್ದ  ಉಪನ್ಯಾಸಕರುಗಳು ''
  ಪಟ್ಟಣದಲ್ಲಿ  ಕ್ಯಾಮಾರಗಳ ಮುಂದೆ ಹಲ್ಕಿರಿಯುತ್ತಾ , ಮಾಧ್ಯಮಗಳ ಮುಂದೆ ಬೀಗಿ  ಇಲ್ಲದ  ವಿಶೇಷವನ್ನು ಬಿಂಬಿಸುವ "ಹೈ ಟೆಕ್" ಕಾರ್ಯಕ್ರಮಗಳಿಗಿಂತ  ವಿಭಿನ್ನವಾಗಿ  ಗಮನ ಸೆಳೆಯಿತು. ಕಾರ್ಯಕ್ರಮದ ಕೊನೆಯಲ್ಲಿ ನಮ್ಮ ಪರಿಚಯ ಮಾಡಿಕೊಂಡು   ಆ ಗುಂಪನ್ನು ಕುರಿತು ನನ್ನ ಮನದ ಮಾತುಗಳನ್ನು ಹಂಚಿಕೊಂಡು  ಸಂಭ್ರಮಿಸಿದೆ. ನನ್ನ ಮಾತುಕೇಳಿ ಅವರೂ ಖುಷಿಪಟ್ಟು ನನ್ನ ಹೃದಯದೊಳಗೆ ಹಾಗು  ಕ್ಯಾಮರಾಗೆ  ಸೆರೆಯಾದರು .
"ಜ್ಞಾನ ರಥದ ಸರದಾರರು"
ಆ ದಿನದ ಕಾರ್ಯಕ್ರಮವನ್ನು ನಿರ್ವಹಣೆ  ಮಾಡಿದ ಬಿಳಿಕೆರೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಅಂಬಿಕ, ಹಾಗು ಚಿಕ್ಕಮಗಳೂರು ಗಣೇಶ್ ನಿಜಕ್ಕೂ ಅಭಿನಂದನೀಯರು.  ಕಾಟಾಚಾರಕ್ಕೆ ಪಾಠ ಮಾಡಿ, ಮನೆ ಪಾಠಕ್ಕೆ ಬರುವಂತೆ  ಮಕ್ಕಳಿಗೆ ಸಲಹೆ ನೀಡಿ, ಆ ವರ್ಷದ ಸಿಲಬಸ್ ಅನ್ನು ಮುಗಿಸಿ ನಿಟ್ಟುಸಿರು ಬಿಟ್ಟು ಹಾಯಾಗಿರುವ ಎಷ್ಟೋ ಉಪನ್ಯಾಸಕರ ನಡುವೆ ವಿಧ್ಯಾರ್ಥಿಗಳ  ಜ್ಞಾನದ ದೀಪ ಹಚ್ಚುವ , ತಮ್ಮದೇ ಆದ ರೀತಿಯಲ್ಲಿ ಐತಿಹಾಸಿಕ ಪ್ರದೇಶಗಳನ್ನು ದರ್ಶನ ಮಾಡಿಸುತ್ತಿರುವ ಈ ಉಪನ್ಯಾಸಕರುಗಳನ್ನು ಪ್ರೋತ್ಸಾಹಿಸೋಣ   ಅಲ್ಲವೇ. ಸ್ವಾತಂತ್ರ್ಯ ದಿನಾಚರಣೆ ಶುಭಸಮಯದಲ್ಲಿ  ಇಂತಹ  ಘಟನೆ ಕಂಡು  ಸಂತಸ ಮೂಡಿಸಿ  ಆ ಉಪನ್ಯಾಕರುಗಳ ಪಡೆದ "ಮೇರಾ ಭಾರತ ಮಹಾನ್ "ಅನ್ನಿಸಿದ್ದು ಸುಳ್ಳಲ್ಲ. ಬನ್ನಿ ಈ ಉಪನ್ಯಾಸಕರುಗಳಿಗೆ  ಜೈ ಹೋ ಅನ್ನೋಣ   "ಗೊಮಟಗಿರಿ "     ಯ ಬಗ್ಗೆ ಮುಂದೊಮ್ಮೆ ಬರೆಯುತ್ತೇನೆ ಅಲ್ಲಿವರೆಗೆ ನಿಮಗೆಲ್ಲರಿಗೂ 65 ನೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

10 comments:

Dr.D.T.krishna Murthy. said...

ಬಾಲಣ್ಣ;ನಿಮಗೂ ಸ್ವಾತಂತ್ರೋತ್ಸವದ ಶುಭಾಶಯಗಳು.ಸದ್ದಿಲ್ಲದೇ ಸಾಹಿತ್ಯ ಕೈಂಕರ್ಯ ನಡೆಸುತ್ತಿರುವವರ ಬಗ್ಗೆ ನೀಡಿದ ಮಾಹಿತಿಗೆ ಧನ್ಯವಾದಗಳು.ಬ್ಲಾಗಿಗೆ ಭೇಟಿ ಕೊಡಿ ಸ್ವಾಮಿ.ನಮಸ್ಕಾರ.

ಸಿಮೆಂಟು ಮರಳಿನ ಮಧ್ಯೆ said...

ಬಾಲೂ ಸರ್...

ಒಂದು ಒಳ್ಳೆಯ ವಿಚಾರ...

ಇಂಥಹ ಶಿಕ್ಷಕರು ಇದ್ದರೆ ಮುಂದಿನ ಸಮಾಜದ ಚಿಂತೆ ಬೇಕಿಲ್ಲ..

ಅಭಿನಂದನೆಗಳು ಆ ಶಾಲೆಯ ಶಿಕ್ಷಕ ಸಮೂಹಕ್ಕೆ... ಮಕ್ಕಳಿಗೆ..

ನಮಗೆಲ್ಲ "ಹೀಗೂ ಉಂಟು" ಅಂತ ತಿಳಿಸಿಕೊಟ್ಟ ನಿಮಗೂ ಜೈ ಹೋ !!

ashokkodlady said...

Baalu sir..

ಎಲ್ಲರೂ ಒಂದೇ ತರವಲ್ಲ ಎನ್ನುವುದಕ್ಕೆ ಜ್ವಲಂತ ಉದಾಹರಣೆ...ಉತ್ತಮ ಲೇಖನ....

ನಿಮಗೂ ಸ್ವಾತಂತ್ರೋತ್ಸವದ ಶುಭಾಶಯಗಳು....

shridhar said...

Jai Ho .. Olleya Lekhana ...

ಕವಿತಾ said...

Olleya prayatna avaraddu!!
Olleya lekhana sir !!

Deep said...

Balu,

Ivara kelasa ele mareya kayi idda hange.. horage barode aparoopa..

parichayisadakke haagu tilisiddakke dhanyavadabalu...

ಅನಂತ್ ರಾಜ್ said...

ಉತ್ತಮ ಚಿತ್ರ ಲೇಖನ ಬಾಲು ಸರ್. ಅಭಿನ೦ದನೆಗಳು.

ಅನ೦ತ್

ಗಿರೀಶ್.ಎಸ್ said...

Nijavaagalu intha upanyaasakaru iruvudu great....olleya lekhana sir !!!

ಅಪ್ಪ-ಅಮ್ಮ(Appa-Amma) said...

ಬಾಲು ಅವರೇ,
ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುತ್ತಿರುವ ಇಂತಹ ಶಿಕ್ಷಕ ವೃಂದ ನಿಜಕ್ಕೂ ಅಭಿನಂದರ್ಹರು !

AntharangadaMaathugalu said...

ಬಾಲು ಸಾರ್..

ತುಂಬಾ ಒಳ್ಳೆಯ ವಿಚಾರವನ್ನು ನಮಗೆಲ್ಲಾ ತಿಳಿಸಿದ್ದೀರಿ. ನಿಜಕ್ಕೂ ಅಂಬಿಕಾ ಮೇಡಂ ಮತ್ತು ಗಣೇಶ್ ಸಾರ್ ಅಭಿನಂದನಾರ್ಹರು. ಒಳ್ಳೆಯ ಚಿತ್ರಗಳ ಸಮೇತ ಮಾಹಿತಿ ಒದಗಿಸಿದ ನಿಮಗೂ ಧನ್ಯವಾದಗಳು...

ಶ್ಯಾಮಲ