Tuesday, November 9, 2010

ಕಾನನದ ದೇವಿಯ ಮಡಿಲಿಗೆ ಮೊದಲ ಹೆಜ್ಜೆ !! ಬಳ್ಳೆ ಮಾಡಿದ ಮೋಡಿ!!!ಹುಲಿರಾಯನ ದರ್ಶನ !!!

ಹುಲಿಯ ಹೆಜ್ಜೆ ಗುರುತು


ಕಾಡಿನ ಸೆಳೆತ ಒಬ್ಬೊಬ್ಬರಿಗೆ ಒಂದೊಂದು ಅನುಭವ  ನೀಡುತ್ತದೆ . ನನ್ನ ಎರಡನೇ ಕಂತನ್ನು ಸಹೋದರಿಬಿ.ಸೌಮ್ಯ ರವರ "ಹುಚ್ಚು ಮನಸಿನ ಹತ್ತೆಂಟು ಕನಸುಗಳು " ಬ್ಲಾಗಿನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ" ಅರಣ್ಯ ಹಾಗು ನದಿ"   ಕವಿತೆಯ ಕೆಲವು ಸಾಲಿನಿಂದ[ ಅವರ ಅನುಮತಿ ಪಡೆದು ] ಶುರುಮಾಡುತ್ತೇನೆ. ಸುಂದರ ಸಾಲುಗಳಲ್ಲಿ ಅರಣ್ಯ ಹಾಗು ನದಿಯ ಬಗ್ಗೆ  ಸುಂದರ ವರ್ಣನೆ ಇದೆ . ಯಾವೊಬ್ಬರಿಗೂ ಎಂದೂ ತಿಳಿಯುವುದೇ ಇಲ್ಲ
ನನ್ನನ್ನು ಇತರರು ಹೇಗೆ ಭಾವಿಸುತ್ತಾರೆ ಎಂದು.
ಮಾನವ ನಿಜವಾಗಿ ಬದುಕುತ್ತಿದ್ದಾನೋ ಅಥವಾ
ಅವನೊಂದು ನೆರಳು ಮಾತ್ರವೋ ?
ಹೀಗೆಂದು ಪ್ರಶ್ನಿಸುವವರೇ ಇಲ್ಲ .
ಗೊತ್ತು ಗುರಿ ಇಲ್ಲದೆ ನೆರಳಿನಲ್ಲಿ ಅಲೆಯುವ ಮಾನವ
ಕೊನೆಗೆ ಕೇಳಿಕೊಳ್ಳುತ್ತಾನೆ ತನ್ನಲ್ಲೇ..
ನಾನು ಯಾರು ?
ನದಿಯೋ? ಅರಣ್ಯವೋ?
ಅಥವಾ ಅವೆರಡೋ ?
ಪ್ರಶ್ನೆ ಪ್ರತಿಧ್ವನಿಸಿ ಉತ್ತರ ಸಿಗುವುದು ಹೀಗೆ

 ನದಿ ಮತ್ತು ಅರಣ್ಯ'....! ವಾಹ್ ಎಂತಹ ಸಾಲುಗಳಲ್ವ ಕಾಡಿನಲ್ಲಿ ಅಲೆಯುವ ನನಗೆ ಒಮ್ಮೊಮ್ಮೆ ಹೀಗೆ ಆನಿಸುತ್ತದೆ.ನಮ್ಮ  ಮೊದಲ ಕಾಡಿನ ಅನುಭವ ಹೀಗೆ ಶುರುವಾಯಿತು.

ಮೈಸೂರಿನಿಂದ ಹುಣಸೂರಿನ ಮೂಲಕ ಸಾಗಿ ಹೆಗ್ಗಡದೇವನ ಕೋಟೆ ತಲುಪಿ ನಂತರ ನಾವು ಸಂಜೆ ತಲುಪಿದ ಜಾಗ " ಬಳ್ಳೆ" ಎಂಬ ಜಾಗಕ್ಕೆ .ಇದು ಕಾರಾಪುರ ಮಾನಂದ ವಾಡಿ ರಸ್ತೆಯಲ್ಲಿ ಬರುವ " ನಾಗರ ಹೊಳೆ' ರಕ್ಷಿತಾರಣ್ಯ ಕ್ಕೆ ಸೇರಿದ್ದು ಪ್ರವಾಸಿಗಳಿಗೆ  ನಿಶಿದ್ದ ಪ್ರದೇಶ !!, ಅರಣ್ಯ ಇಲಾಖೆಯ ಅಧಿಕಾರಿಗಳ  ಅನುಮತಿ  ಪಡೆದಿದ್ದ ನಮಗೆ [ಅನುಮತಿ ನೀಡುವ ಮೊದಲು ನಮ್ಮ ಬಗ್ಗೆ ವಿವರ ಪಡೆದಿದ್ದರು ]ಅಲ್ಲಿ ಉಳಿಯಲು  ತಡೆಯಾಗಲಿಲ್ಲ. ತಲುಪುವ ವೇಳೆಗೆ  ಸಂಜೆಯ ವೇಳೆ ಆಗಿತ್ತು. ಆದರದಿ ಸ್ವಾಗತಿಸಿದ ಅಲ್ಲಿನ ಅಧಿಕಾರಿ  ಕಾಫಿ ನೀಡಿ ಸತ್ಕರಿಸಿ  ಪರಿಚಯಿಸಿಕೊಂಡರು.ಬನ್ನಿ ಸಾರ್ ಒಂದು ರೌಂಡು ಹೋಗೋಣ ಅಂತಾ ನಮ್ಮನ್ನು ಕರೆದುಕೊಂಡು ಕಾಡಿನ ಒಳಗೆ ಹೋದರು ನಮಗೋ ಹಿಗ್ಗೋ ಹಿಗ್ಗು ಅರಣ್ಯದೊಳಗೆ ಕಾಲಿಟ್ಟ ಸಂತಸ ಕ್ಷಣ ಮುಧನೀಡಿತ್ತು.ಜೀಪಿನಲ್ಲಿ ಹೊರಟ ನಾವು ಅರಣ್ಯದಲ್ಲಿ ಕ್ಯಾಮರ ಸಿದ್ದ ಪಡಿಸಿಕೊಂಡು  ಬಳ್ಳೆ ಯಿಂದ ಕೈಮರ ಎಂಬ ಜಾಗಕ್ಕೆ ಹೊರಟಿದ್ದೆವು.ಸುಮಾರು ನಾಲ್ಕು ಕಿ.ಮಿ.ಕ್ರಮಿಸಿದ ನಮಗೆ ಗೇಂ   ರೂಟಿನ [ಅರಣ್ಯ ಇಲಾಖೆ ವಾಹನಗಳು ಗಸ್ತು ತಿರುಗುವ ಹಾದಿ ಗೆ ಹಾಗೆ ಕರೆಯುತ್ತಾರೆ ] ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡ ಹುಲ್ಲುಗಳ ಹಾದಿಯಲ್ಲಿ ಬೆಳೆದಿದ್ದ ಪೊದೆಗಳ ಸಾಲು ಸಿಕ್ಕಿತ್ತು. ಮುಂದೆ ಕುಳಿತಿದ್ದ  ನನ್ನ ಸಹೋದರ ವೇಣು " ಹುಲಿ ಹುಲಿ " ಮೆಲುದನಿಯಲ್ಲಿ ಉಸುರಿದರು
ಚಿತ್ರಕೃಪೆ    ಅಂತರ್ಜಾಲ


ದಟ್ಟ ಕಾನನದ ಮಧ್ಯೆ  ಜೀಪಿನಿಂದ ಕೇವಲ ಕೆಲವೇ ಅಡಿಗಳ ದೂರದಲ್ಲಿ  ಹುಲಿರಾಯ ದರ್ಶನ ನೀಡಿದ್ದ !! ಹುಲಿ ನೋಡಲು ಆಸೆ ಯಿಂದ ಎಲ್ಲರು ತವಕಪಡುತ್ತಿರುವಾಗ ಡ್ರೈವರ್ ಸ್ವಲ್ಪ ಜೀಪನ್ನು ಸ್ವಲ್ಪ ಮುಂದೆ ಕೆಲವು ಅಡಿ ಮುನ್ನಡೆಸಿದ್ದರು. ಸ್ವಲ್ಪ ಮುಂದೆ ಬಂದ ಜೀಪು ಗೊರ ಗೊರ ಅಂದು  ಸದ್ದುಮಾಡಿ ನಿಂತೇ ಬಿಟ್ಟಿತು. ಬಾಲೂ ಸಾರ್ ಸ್ವಲ್ಪ ನಿಮ್ಮ ಕಾಲನ್ನು ಬ್ಯಾಟರಿ ಮೇಲಿಂದ  ತೆಗಿರೀ ಅಂದ್ರೂ . ಕೆಳಗೆ ಇಳಿಯಲು ಎಲ್ಲರಿಗೂ ಭಯ  ಹುಲಿರಾಯ ನಮ್ಮಿಂದ ಕೆಲವೇ ಅಡಿಗಳ ಅಂತರದಲ್ಲಿ [ಅಂದಾಜು ಹತ್ತು ಅಡಿ ]ಪೊದೆಯೊಳಗೆ  ನಮ್ಮನ್ನು ಲೆಕ್ಕಿಸದೆ ಕುಳಿತಿದ್ದ.ನಮಗೋ ಇಂತಹ ಅನುಭವ ಜೀವಮಾನದಲ್ಲ್ಲಿ ಹೊಸದು!!!,  . ಕತ್ತಲು ಬೇರೆ  ನಮಗಿದ್ದ ಧೈರ್ಯ ಅಂದ್ರೆ ಡಿಸ್ಕವರಿ , ನ್ಯಾಷನಲ್ ಜಿಯೋಗ್ರಫಿ  ಚಾನಲ್ ನೋಡಿದ್ದ ಅನುಭವ ಅಷ್ಟೇ . ನಮ್ಮ ಜೊತೆಗಿದ್ದ ಅರಣ್ಯಾಧಿಕಾರಿ ಪಿಸು ಮಾತಿನಲ್ಲಿ   ಹೆದರಬೇಡಿ  ಹಾಗೆ ಕುಳಿತಿರಿ ಅಂದ್ರೂ, ದಟ್ಟ ಅರಣ್ಯದ ಮಧ್ಯೆ ಹುಲಿಯ ಸನಿಹದಲ್ಲಿ ಕೆಟ್ಟು ನಿಂತಿರುವ ಜೀಪಿನೊಳಗೆ ರಾತ್ರೀ ವೇಳೆ ಅಲುಗಾಡದೆ ಕುಳಿತು ಪೊದೆಯೊಳಗೆ ಅಡಗಿದ್ದ ಹುಲಿಯನ್ನು ನೆನೆಯುತ್ತಾ ಸುಮಾರು ಮುಕ್ಕಾಲು ಘಂಟೆ ಅಲುಗಾಡದೆ ಉಸಿರು ಬಿಗಿಹಿಡಿದು  ಕುಳಿತಿದ್ದೆವು.ಸ್ವಲ್ಪ ಸಮಯದಲ್ಲಿ ವಾಚರ್ ಒಬ್ಬರು ಸಾ ಹುಲಿ ಓಯ್ತು ಅಂದ್ರು !!! ಸರಿ ತಾಳಿ ಸಡನ್ನಾಗಿ ಇಳೀಬೇಡಿ ಅಂತಾ ಅರಣ್ಯಾಧಿಕಾರಿಗಳು ಮೊದಲು ತಾವು ಇಳಿದು ಸ್ವಲ್ಪ ಸಮಯದ  ನಂತರ ನಮ್ಮನ್ನು ಇಳಿಯಲು ಹೇಳಿದರು. ಹುಲಿಎನೋ ಹೋಯ್ತು  ಆ ಭಯದಲ್ಲಿ ಫೋಟೋ ತೆಗೆಯುವ ಕೈಗಳು ಕ್ಯಾಮರಾವನ್ನು ಕೆಳಗಿಟ್ಟು ಹುಲಿಯ ಫೋಟೋ ತೆಗೆಯಲು ನಿರಾಕರಿಸಿದ್ದವು .ಮುಂದಿನ ಕಾರ್ಯ ಕೆಟ್ಟ ಜೀಪಿನ ರಿಪೇರಿ; ಒಬ್ಬೊಬ್ಬರಾಗಿ ಇಳಿದ ನಾವು ಜೀಪಿನ  ಮುಂಬಾಗ ಬಂದು ತಲೆಗೆ ಕಟ್ಟಿಕೊಂಡಿದ್ದ ಲೈಟ್ ಆನ್ ಮಾಡಿದೆವು .ಜೀಪಿನ ಬ್ಯಾಟರಿ ಸರಿಯಾಗಿತ್ತು ಬಾನೆಟ್ ತೆಗೆದು ನೋಡಿದರೆ ವೈರು ಶಾರ್ಟ್ ಸರ್ಕ್ಯುಟ್ ಆಗಿ ಬೆಂದು ಹೋಗಿತ್ತು. ಸರಿ ರಿಪೇರಿ ಪ್ರಾರಂಭ ನಮ್ಮ ತಂಡದ ಸದಸ್ಯರೇ ಸೇರಿ ವೈರನ್ನು ಡೈರೆಕ್ಟ್  ಲಿಂಕ್ ಮಾಡಿ ಗಾಡಿಯನ್ನು ಸ್ಟಾರ್ಟ್ ಮಾಡಿದರು. ತುಂಬಾ ಹೊತ್ತಾಯ್ತು; ಕೈಮರ ಬೇಡ ವಾಪಸ್ಸು ಹೋಗೋಣ ಅಂತಾ ತೀರ್ಮಾನಿಸಿ ಜೀಪನ್ನು ಹಿಂದಕ್ಕೆ ತಿರುಗಿಸೋಣ ಅಂದ್ರೆ ಜಾಗ ಇದ್ರೆ ತಾನೇ ಹಾದಿಯ ಇಕ್ಕೆಲಗಳಲ್ಲೂ ಪೊದೆ ಮರಗಳಿಂದ  ಜೀಪ್ ತಿರುಗಿಸಲು ಆಗದ ಪರಿಸ್ತಿತಿ.ಸರಿ ನಮ್ಮ ಡ್ರೈವರ್ ಸೈಯದ್ ಸಾಹೇಬರು ಬುಡಿ ಸಾ ರಿವರ್ಸ್ ನಲ್ಲೆ ಹೋಗೋಣ ಅಂತಾ ಸುಮಾರು ಒಂದು ಕಿ.ಮಿ. ರಿವರ್ಸ್ ನಲ್ಲೆ ಜೀಪನ್ನು ಸಾಗಿಸಿ ನಂತರ ಸಿಕ್ಕ ಒಂದು ಜಾಗದಲ್ಲಿ ರಿವರ್ಸ್ ತೆಗೆದು ಮುಖ್ಯ ರಸ್ತೆ ತಂದು ನಮ್ಮನ್ನು ಜೋಪಾನವಾಗಿ; ಮೊದಲಿನ ಜಾಗಕ್ಕೆ ಸೇರಿಸಿ ನಿಟ್ಟುಸಿರು ಬಿಟ್ಟರು .ನಂತರ ಅಲ್ಲಿದ್ದ ರೂಮುಗಳಲ್ಲಿ ಸಿದ್ದವಿದ್ದ ಆಹಾರ ಸೇವಿಸಿ ರಸ್ತೆಯಲ್ಲಿ ಮತ್ತೊಂದು ಸುತ್ತು ಸುಮಾರು ಎರಡು ಮೂರು ಕಿ.ಮಿ. ಹೋಗಿ ಬಂದು ಕೆಲವು ಕಾಡೆಮ್ಮೆ ಹಾಗು ಜಿಂಕೆಗಳನ್ನು ಕಣ್ತುಂಬ ನೋಡಿ ಬಂದು ಮಲಗಿದೆವು. ರಾತ್ರಿ ವೇಳೆ ತೆಗೆದ ಫೋಟೋಗಳು ಅಂದು ಕೊಂಡ ರೀತಿ ಬರದ ಕಾರಣ ನೋಡಿದ್ದಷ್ಟೇ ಭಾಗ್ಯ ಅಂತಾ ನಿದ್ರೆಗೆ ಜಾರಿದೆವು. ನನ್ನ ಮನಸ್ಸಿನಲ್ಲಿ ಅರಣ್ಯಾಧಿಕಾರಿ ಹೇಳಿದ್ದ ಮಾತು ""ಸಾರ್ ನೀವು ಪುಣ್ಯಾ ಮಾಡಿದ್ರೀ ಸಾವಿರಾರು ರುಪಾಯಿ ಖರ್ಚು ಮಾಡಿ ಇಲ್ಲಿಗೆ ಬಂದು ಜಂಗಲ್ ಲಾಡ್ಜ್ ನಲ್ಲಿ ಉಳಿದು ಹಲವಾರು ದಿನ ಅಲೆಯೋ ಜನರಿಗೆ ಹುಲಿ ಸಿಗೋಲ್ಲ ಆದ್ರೆ ನಿಮ್ ಅದೃಷ್ಟ ನೋಡಿ  " ಅನ್ನೋ ಮಾತು


ಹುಲಿಯ ಹೆಜ್ಜೆ ಗುರುತು


ಮನದಲ್ಲಿ ಹಾಗೆ ಉಳಿದು ಮನದಲ್ಲಿ ಮಂಡಿಗೆ ತಿನ್ನುತ್ತಾ ನಿದ್ರೆಗೆ ಜಾರಿದ್ದೆ.ಹುಲಿಯ ಹೆಜ್ಜೆಯಂತೆ  ಈ ಮಾತು ಮನದಲ್ಲಿ ಉಳಿದು ಕನಸುಗಳೂ ಸಹ ಹೆದರಿಕೊಂಡು ಅವಿತುಕೊಂಡು  ಕನಸಿಲ್ಲದ ರಾತ್ರಿಯಲ್ಲಿ ಘಾಡ ನಿದ್ದೆ ಹೊಡೆದಿದ್ದೆ.!!!  ನಿದ್ದೆ ಮಾಡುತ್ತೇನೆ  ತಾಳಿ  ಮುಂದಿನ ಸಂಚಿಕೆಯಲ್ಲಿ ಬಾಕಿ ಪುರಾಣ ಓದೋರಂತೆ. ಅಲ್ಲಿವರ್ಗೆ  ನಿಮಗೆ ವಂದನೆಗಳು .  

31 comments:

ಮಹೇಶ said...

ನಿಸರ್ಗದಲ್ಲಿ ಸಹಜವಾಗಿರುವ ಹುಲಿಯನ್ನು ನೋಡಿದ ನೀವು ಅದೃಷ್ಟವಂತರು. ಹುಲಿಯ ಹೆಜ್ಜೆಯ ಚಿತ್ರ ಚೆನ್ನಾಗಿ ಬಂದಿದೆ

nimmolagobba said...

ಮಹೇಶ್ ನಿಮ್ಮ ಅನಿಸಿಕೆಗೆ ಧನ್ಯವಾದಗಳು . ಚಿತ್ರದಲ್ಲಿ ಹಾಕಿರುವ ಫೋಟೋಗಳು ಆ ಸಮಯದಲ್ಲಿ ತೆಗೆದ ಫೋಟೋಗಳಲ್ಲ.ಆ ಕತ್ತಲೆಯಲ್ಲಿ ಫೋಟೋ ತೆಗೆಯಲಾರದಷ್ಟು ಆತಂಕ ಇತ್ತು.ಸ್ವಲ್ಪ ಆಸಕ್ತಿಗಾಗಿ ಕೆಲವು ಚಿತ್ರಗಳನ್ನು ಹಾಕಿದ್ದೇನೆ.

Dr.D.T.krishna Murthy. said...

ಬಾಲೂ ಸರ್;ನಿಮ್ಮ ಹುಲಿಯ ಕಥೆ ಚೆನ್ನಾಗಿ ಮೂಡಿ ಬಂದಿದೆ.ಕಾಡಿನಲ್ಲಿ ಕಳೆದ ರೋಚಕ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಧನ್ಯವಾದಗಳು.

nimmolagobba said...

ಡಾ //ಕೃಷ್ಣಮೂರ್ತಿ ಸರ್ ನಿಮ್ಮ ಅನಿಸಿಕೆ ತಲುಪಿದೆ ನಮಸ್ಕಾರ.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ .

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್...

ನಿಜಕ್ಕೂ ನೀವು ಪುಣ್ಯವಣ್ತರು...
ಅಷ್ಟು ಸುಲಭವಾಗಿ ಹುಲಿ ನೋಡಲು ಸಿಕ್ಕಿತಲ್ಲ...
ನನಗಂತೂ ಕಾಡಿನ ಕ್ರೂರ ಪ್ರಾಣಿಗಳು ಒಂದು ಸೋಜಿಗ !!
ಆ ಕ್ರೂರತೆಯಲ್ಲೂ ಕಾಣುವ ಸೌಂದರ್ಯ ಇನ್ನೂ ಸೋಜಿಗ !

ನಿರೂಪಣೆ ಚೆನ್ನಾಗಿದೆ... ಜೈ ಹೋ !

nimmolagobba said...

ಪ್ರಕಾಶಣ್ಣ ಅನಿಸಿಕೆ ತಲುಪಿದೆ ಥ್ಯಾಂಕ್ಸ್ .

PARAANJAPE K.N. said...

ಬಾಲೂ ಅವರೇ, ಕಾರ್ಗತ್ತಲ ಕಾಡಿನಲ್ಲಿ ಹುಲಿಯನ್ನು ಕ೦ಡು ಅನುಭವಿಸಿದ ಭಯಮಿಶ್ರಿತ ರೋಚಕ ಕ್ಷಣಗಳನ್ನು ಬರಹದಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ. ಕಳೆದ ವರ್ಷ ನಮ್ಮೂರಿನ ಜಲಪಾತಕ್ಕೆ ಹೋಗಿ ವಾಪಾಸು ಬರುವಾಗ ಒ೦ಟಿ ಕಾಡಾನೆ ನಮ್ಮಿ೦ದ ಕೆಲವೇ ಅಡಿಗಳ ಅ೦ತರಲ್ಲಿ ಬಿದಿರು ಮೆಳೆ ಹಿರಿಯುತ್ತಿದ್ದ ದೃಶ್ಯ ಕ೦ಡು ಹೌಹಾರಿದ ಘಟನೆ ನೆನಪಾಯಿತು.

shivu.k said...

ಬಾಲು ಸರ್,

ಎಂಥ ಅದೃಷ್ಟವಂತರೂ ನೀವು. ನಾನು ಅದೇಷ್ಟೋ ಕಾಡಿನ ಪ್ರವಾಸ ಹೋಗಿದ್ದರೂ[ನಾಗರಹೊಳೆ, ಕಬಿನಿ, ಬಂಡಿಪುರ]ಹುಲಿ ಇರಲಿ ಬಾಲವನ್ನು ಕೂಡ ನೋಡಲಾಗಿಲ್ಲ. ನೀವು ನೋಡಿದ ಅನುಭವ ತುಂಬಾ ಚೆನ್ನಾಗಿದೆ. ಥ್ರಿಲ್ ಅನ್ನಿಸಿತು. ಕಾಡಿನ ಪ್ರವಾಸದ ಅನುಭವವನ್ನು ಇನ್ನಷ್ಟು ಬರೆಯಿರಿ. ಓದಲು ಕಾಯುತ್ತೇನೆ.

ಮನಮುಕ್ತಾ said...

ತು೦ಬಾ ಸು೦ದರವಾಗಿ ಕಾಡಿನ ಅನುಭವಗಳನ್ನು ತಿಳಿಸಿದ್ದೀರಿ.ನನ್ನ ಬಾಲ್ಯದಲ್ಲಿನ ನೆನಪಾದವು.
ನನ್ನ ತವರುಮನೆಯ ಹಿ೦ದೆ ಸೊಪ್ಪಿನ ಬೆಟ್ಟಕ್ಕೆ ತಾಗಿಕೊ೦ಡು ಕಾಡು ಶುರುವಾಗುತ್ತದೆ. ಆಗಾಗ ರಾತ್ರಿ ಹೊತ್ತಿನಲ್ಲಿ ಕಾಡಿನಿ೦ದ ಚಿರತೆ,ಕಾಡೆಮ್ಮೆ,ಕಾಡುಹ೦ದಿಗಳು ಮನೆಯ ಹಿತ್ತಲವರೆಗೂ ಬರುತ್ತಿದ್ದವು. ತೋಟದಲ್ಲಿ ಬ೦ದು ಕೆಲ ಒಮ್ಮೆ ಉಪಟಳವನ್ನೂ ಕೊಡುತ್ತಿದ್ದವು.ಯಾವ್ಯಾವ ಪ್ರಾಣಿಗಳು ಬ೦ದಿದ್ದವೆ೦ದು ಹೆಜ್ಜೆ ಗುರುತುಗಳಿ೦ದ ತಿಳಿಯುತ್ತಿತ್ತು.ಒ೦ದೆರಡುಸಲ ನಾವು ಸಾಕಿದ ನಾಯಿಗಳನ್ನು ಚಿರತೆ ಗಾಯಗೊಳಿಸಿದ್ದೂ,ಎತ್ತಿಕೊ೦ಡು ಹೋದದ್ದೂ ಇದೆ.ಮನೆಯಲ್ಲಿ ನಾಲ್ಕಾರು ನಾಯಿಗಳು ಯಾವಾಗಲೂ ಇರುತ್ತವೆ.ನಾಯಿ ಕೂಗಿದ ಕೂಡಲೆ ಜಾಗಟೆ ಭಾರಿಸಿ ಹಾಯ್ ಹೂಯ್ ಕೂಗುಹಾಕಬೇಕಾಗುತ್ತಿತ್ತು.ಮನೆ ಹಾಗೂ ತೋಟದ ಸುತ್ತಾ ಈಗ ಇಬೆಕ್ಸ್ ಬೇಲಿಗಳನ್ನು ಹಾಕಿರುವುದರಿ೦ದ ಕಾಡಿನಿ೦ದ ಪ್ರಾಣಿಗಳು ಊರ ಕಡೆ ಬರುವುದು ಕಡಿಮೆಯಾಗಿದೆ.

sunaath said...

ಬಾಲು,
ಹುಲಿಯ ಚಿತ್ರಗಳನ್ನು ನೋಡಿದ್ದರೂ ಸಹ ಹುಲಿ-ಹೆಜ್ಜೆಯ ಚಿತ್ರಗಳನ್ನು ನೋಡಿರಲಿಲ್ಲ. ತುಂಬ ನಿಚ್ಚಳವಾಗಿ ಚಿತ್ರ ತೆಗೆದಿದ್ದೀರಿ. ಧನ್ಯವಾದಗಳು.

nimmolagobba said...

@ಪರಾಂಜಪೆ ಸರ್ .ನಿಮ್ಮ ಮೆಚ್ಚುಗೆಗೆ ಸಲಾಂ .ಮುಂದೆ ಇನ್ನೂ ಇದೆ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

nimmolagobba said...

ಶಿವೂ ನಿಮ್ಮ ಅನಿಸಿಕೆಯಲ್ಲಿ ತಿಳಿಸಿರುವಂತೆ ಯಾವುದೇ ಪ್ರಾಣಿ ಕಾಡಿನಲ್ಲಿ ಸಿಗಲು ನಾವು ಅದೃಷ್ಟ ಮಾಡಿರಬೇಕು.ಕಾಡಿನ ಅನುಭವ ಬಹಳಷ್ಟು ಇದೆ ಹಾಗು ಅದಕ್ಕೆ ಪೂರಕವಾದ ಚಿತ್ರಗಳು ಇವೆ ಮುಂದಿನ ಸಂಚಿಕೆಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತವೆ .ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.ನಿಮಗೆ ಥ್ಯಾಂಕ್ಸ್.

nimmolagobba said...

@ಮನಮುಕ್ತ ನೀವು ನನ್ನ ಬರಹಗಳನ್ನೂ ಪ್ರೋತ್ಸಾಹ ಮಾಡುತ್ತಿದ್ದೀರಿ , ಕಾಡಿನ ಬಗ್ಗೆ ಬಹಳಷ್ಟಿದೆ ಮುಂದೆ ತೆರೆದುಕೊಳ್ಳುತ್ತದೆ ನಿಮ್ಮ ಅಭಿಮಾನದ ಪ್ರೋತ್ಸಾಹ ಹೀಗೆ ಇರಲಿ. ನಿಮಗೆ ವಂದನೆಗಳು.

nimmolagobba said...

ಸುನಾಥ್ ಸರ್ ಬೆನ್ನು ತಟ್ಟಿದ್ದೀರಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಥ್ಯಾಂಕ್ಸ್.

Deep said...

Balu sir,

Antu konege huliya kathe blog nalli bande bittitu..

Venu namage masuku masukagi tegeda hulia video annu darshana madisiddane..

Huliyannu nodi.. blog nalli baredu.. wow.. good..

nimmolagobba said...

ದೀಪು ಸರ್ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್.ವೇಣು ತೆಗೆದ ಮಸುಕಿನ ವೀಡಿಯೊ ವಾವ್ ಸೂಪರ್ ಇವತ್ತಿಗೂ ಅದೇ ನಮಗೆ ಅಧಿಕೃತ ದಾಖಲೆ .ಯಾಕೆಂದ್ರೆ ಕೆಲವರು ಈ ಕಥೆ ನಂಬಲ್ಲ.ಆಗ ಈ ವೀಡಿಯೊ ಹಾಕಿ ಹೀರೋ ಆಗಿದ್ದು ಜ್ಞಾಪಕಕ್ಕೆ ಬಂತು.

Badarinath Palavalli said...

ಸರ್,

ಕಥನ ತುಂಬಾ ಅದ್ಭುತವಾಗಿವೆ. ಯಾವಾಗಲೂ ನಿಮ್ಮ ಬರಹಗಳಲ್ಲಿ ವಿಭಿನ್ನತೆ ಮನೆ ಮಾಡಿರುತ್ತದೆ. ಭೇಷ್!

ಅಂದ ಹಾಗೇ ’ನನ್ನ ಕೂಸೇ’ ಕವನ ಓದಿ ಕಮೆಂಟ್ ಹಾಕಿ..

http://badari-poems.blogspot.com/2010/11/blog-post.html

email: cameraman@rediffmail.com

I am in Facebook search “Badarinath.Palavalli”

ಅಪ್ಪ-ಅಮ್ಮ(Appa-Amma) said...

ಬಾಲು ಅವರೇ,

ಹುಲಿ ಭೇಟಿ ತುಂಬಾ ರೋಮಾಂಚನಕಾರಿಯಾಗಿತ್ತು !
ಮುಂದಿನ ಕಂತಿಗೆ ಕಾಯುತ್ತಾ..

nimmolagobba said...

@ಭದ್ರಿನಾಥ್ ಪಲವಳ್ಳಿ ಸರ್ ನಿಮ್ಮ ಮಾತುಗಳು ನನಗೆ ಸ್ಪೂರ್ತಿನೀಡಿವೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಮುಂದಿನ ಕಂತುಗಳನ್ನು ಓದಿ ಪ್ರೋತ್ಸಾಹಿಸಿ.ನಿಮಗೆ ಥ್ಯಾಂಕ್ಸ್.

nimmolagobba said...

@ ಅಪ್ಪ ಅಮ್ಮ ನಿಮ್ಮ ಸ್ಪೂರ್ತಿದಾಯಕ ಮಾತುಗಳು ತಲುಪಿವೆ.ಮುಂದಿನ ಕಂತುಗಳಿಗೆ ನಿಮ್ಮ ಆಗಮನಕಾಗಿ ಕಾಯುವೆ.ನಮಸ್ಕಾರ .

ಕ್ಷಣ... ಚಿಂತನೆ... bhchandru said...

ಸರ್‍, ಕಾಡಿನಲ್ಲಿ ಹುಲಿರಾಯನ ದರ್ಶನದ ವಿಷಯ ತಿಳಿದು ಖುಷಿಯಾಯಿತು. ಹುಲಿಯ ಹೆಜ್ಜೆಯ ಚಿತ್ರ ಚೆನ್ನಾಗಿದೆ.
ಧನ್ಯವಾದಗಳು.

nimmolagobba said...

ಚಂದ್ರು ಸರ್ ನಿಮ್ಮ ಅನಿಸಿಕೆ ತಲುಪಿದೆ .ಥ್ಯಾಂಕ್ಸ್.

ಸುಬ್ರಮಣ್ಯ ಮಾಚಿಕೊಪ್ಪ said...

ಹುಲಿ ಹೆಜ್ಜೆ ಚಿತ್ರ ನೋಡಿದಮೇಲೆ ೧೫ ವರ್ಷದ ಕೆಳಗೆ ನಮ್ಮ ಮನೆ ಪಕ್ಕ (ಅಂದಾಜು ಮುನ್ನೂರು ಅಡಿ ದೂರ!!) ಕರುವೊಂದನ್ನು ಹುಲಿ ಹಿಡಿದಿದ್ದು, (ಹಿಡಿದ ದಿನ ದನದ ಕೆಚ್ಚಲನ್ನ ಮೊದಲು ತಿನ್ನುತ್ತವೆ)ಒದ್ದೆ ಮಣ್ಣಿನ ಮೇಲೆ ಹುಲಿ ಹೆಜ್ಜೆಗುರುತು ಮೂಡಿದ್ದು ಅದನ್ನು (ನಾಲ್ಕಾರು ದಿನವಾದರೂ) ಕಾಪಾಡಲು ಅಡಿಕೆ ಹಾಳೆ ಮುಚ್ಚಿಟ್ಟಿದ್ದು (ಆಗ ಡಿಜಿಟಲ್ ಕ್ಯಾಮರ ಇರಲಿಲ್ಲ)-ಎಲ್ಲಾ ಜ್ಞಾಪಕಕ್ಕೆ ಬಂತು.

nimmolagobba said...

ಸುಬ್ರಹ್ಮಣ್ಯ ಮಾಚಿಕೊಪ್ಪ ಬಹಳ ದಿನಗಳ ನಂತರ ಭೇಟಿ ಮಾಡಿ ಅನಿಸಿಕೆ ಹಂಚಿಕೊಂಡಿದ್ದೀರಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ .ಮುಂದಿನ ಸಂಚಿಕೆಗೆ ನಿಮ್ಮ ಅನಿಸಿಕೆ ಹರಿದು ಬರಲಿ. ನಿಮಗೆ ಥ್ಯಾಂಕ್ಸ್ .

ಚುಕ್ಕಿಚಿತ್ತಾರ said...

channaagi bartaa ide nimma kaadina kathegalu..

nimmolagobba said...

@ ಚುಕ್ಕಿ ಚಿತ್ತಾರ ವಿಜಯ್ ಶ್ರೀ ಮೇಡಂ ನಿಮ್ಮ ಅನಿಸಿಕೆ ತಲುಪಿದೆ.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.ಮುಂದಿನ ಸಂಚಿಕೆ ಗಳಲ್ಲಿಯೂ ನೀವು ಪ್ರೋತ್ಸಾಹ ನೀಡಿರಿ.ಥ್ಯಾಂಕ್ಸ್.

ಹಳ್ಳಿ ಹುಡುಗ ತರುಣ್ said...

sir... huliyanna aadara maneyalle nodiddira punyavantaru sir...


nirupane chenagide sir.. navu nimma jote alli suttadidante aytu...

nimmolagobba said...

@ಹಳ್ಳಿ ಹುಡುಗ ತರುಣ್ ನಿಮ್ಮ ಪ್ರೀತಿ ಪೂರ್ವಕ ಅನಿಸಿಕೆಗೆ ಸಲಾಂ .ನಿಮ್ಮ ಭೇಟಿ ಹೀಗೆ ಮುಂದುವರೆಯಲಿ.ಮುಂದಿನ ಸಂಚಿಕೆಗಳನ್ನು ಓದಿ ಪ್ರತಿಕ್ರಯಿಸಿ.ಥ್ಯಾಂಕ್ಸ್.

ಸೀತಾರಾಮ. ಕೆ. / SITARAM.K said...

ಹುಲಿ ನೋಡಿದ ನಿಮಗೆ ಜೈ ಹೋ!

nimmolagobba said...

ಸೀತಾರಾಂ ಸರ್ ನನ್ನ ಬ್ಲಾಗಿಗೆ ಮತ್ತೊಮ್ಮೆ ಸ್ವಾಗತ .ಅನಿಸಿಕೆ ತಲುಪಿದೆ ಥ್ಯಾಂಕ್ಸ್.

Anonymous said...

ಹುಲಿ ಕಥೆಯನ್ನು ಓದುವುದು ಮತ್ತೆ ಕೇಳುವುದು ಅಂದರೆ ನನಗೆ ತುಂಬಾ ಆಸಕ್ತಿ..ಈಗಾಗಲೇ ಬಂದಿರುವ ತೇಜಸ್ವಿಯವರ ಹುಲಿ ಶಿಖಾರಿ ಕಥೆಗಳು ಮತ್ತು ಅದರ ಮೂಲ ಲೇಖಕರ ಕೃತಿಗಳನ್ನು ಓದಿ ಮುಗಿಸಿಯಾಗಿದೆ.. ಅದೆಲ್ಲಾ ೫೦ ವರ್ಷದ ಹಳೆ ಕಥೆಯಾದ್ದರಿಂದ ಹೆಚ್ಚು ಹೆಚ್ಚು ಸರಕುಗಳು ದೊರೆಯುತ್ತಿತ್ತು ಮತ್ತು ಆ ಕಾಲದಲ್ಲಿ ಹುಲಿಯ ಉಪಟಳ ಜಾಸ್ತಿ ಇದ್ದಿದ್ದರಿಂದ ಅವುಗಳನ್ನು ಬೇಟೆಯಾಡದೆ ಯಾವುದೇ ವಿಧಿ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ಹುಲಿ ಕಥೆ ಇರಲಿ ಹುಲಿ ಕಾಣುವುದೆ ಅಪರೂಪವಾಗಿ ಬಿಟ್ಟಿದೆ ಆಗ ಮಾಡಿದ ಪಾಪ ಈಗ ಸುತ್ತಿಕೊಳ್ಳುತ್ತಿದೆ.ಕಾಡುಗಳು ಕ್ಷೀಣಿಸುತ್ತಿದೆ ಜಿಂಕೆ,ಕಡವೆ,ಬರ್ಕ,ಮೊಲ,ಹಂದಿ,ಕಾಡುಕೋಣ ಮುಂತಾದ ಪ್ರಾಣಿಗಳು ಚರ್ಮ ಕೊಂಬುಗಳಿಗೆ ಬೇಟೆಯಾಗುತ್ತಿದೆ.ಹುಲಿಗಳು ಬೇಟೆಯಿಲ್ಲದೆ ಸಾಯುತ್ತ್ತಿದೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಭಾರತ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಹುಲಿಗಳನ್ನು ಸಂರಕ್ಷಿಸಬೇಕಾಗಿದೆ, ಹುಲಿಗಳ ಸಂತಾನ ಅಭಿವೃದ್ಧಿ ಹೆಚ್ಚು ಹೆಚ್ಚಾಗಿ ನಡೆಯಬೇಕಿದೆ.ಇತ್ತೀಚಿನ ಹುಲಿ ಗಣತಿಯ ಪ್ರಕಾರ ಕರ್ನಾಟಕದ ಹುಲಿಗಳ ಸಂಖ್ಯೆ ಕೇವಲ ೩೦೦ ಒಂದು ಕಾಲದಲ್ಲಿ ವನರಾಜನಾಗಿ ಮೆರೆಯುತ್ತಿದ್ದ ಹುಲಿಗಳು ಈಗ ವಿನಾಶದ ಅಂಚಿಗೆ ತಲುಪಿದೆ.. ಒಂದು ವೇಳೆ ಇದರ ಸಂತತಿ ಲುಪ್ತವಾದಲ್ಲಿ ದೇವರು ನಮ್ಮನ್ನು ಖಂಡಿತ ಕ್ಷಮಿಸಲಾರ.ಆದ್ದರಿಂದ ನಾವೆಲ್ಲ ನಮ್ಮಸರಕಾರದ ನೆರವನ್ನು ಕಾಯದೆ ನಾವಗಿಯೇ ಸ್ವಂತ ಇಚ್ಛೆಯಿಂದ ಹುಲಿಯ ಸಂಖ್ಯೆಯ ಅಭಿವೃದ್ಢಿಗೆ ಕೈಜೋಡಿಸಬೇಕು.ಕೇವಲ ಮತಗಳಿಗೊಸ್ಕರ ಇನ್ನೊಂದು ಜಾತಿ,ಧರ್ಮವನ್ನು ಓಲೈಸುವ ನಮ್ಮ ಸರ್ಕಾರದಿಂದ ಯಾವ ರಕ್ಷಣೆ ತಾನೆ ದೊರಕೀತು ನಮ್ಮ ಹುಲಿರಾಯನಿಗೆ??