Sunday, January 12, 2014

ಗಿರಿ ಶಿಖರ ದ ಒಡೆಯನೊಂದಿಗೆ ಪಯಣ ...8 ಮುಳ್ಳಯ್ಯನ ಗಿರಿ ಕಂಡ ಮನ ಹಿಗ್ಗಿತು ಹಿರಿ ಹಿರಿ

ಕಾಫಿ ತೋಟದ ನಡುವೆ ಸಾಗಿದ ರಸ್ತೆ



ಚಿಕ್ಕಮಗಳೂರಿನಲ್ಲಿ   ಈ ಟೌನ್ ಕ್ಯಾಂಟೀನ್  ತನ್ನದೇ ಆದ   ಹೆಗ್ಗಳಿಕೆ ಹೊಂದಿದೆ , ಇಲ್ಲಿನ  ತಿಂಡಿ ತಿನಿಸಿನ ಬಗ್ಗೆ ಅಂತರ್ಜಾಲದಲ್ಲಿ ಬಹಳಷ್ಟು ಜನ  ಬರೆದಿದ್ದಾರೆ , ಇಲ್ಲಿನ  ವಿವಿಧ ಬಗೆಯ ದೊಸೆಗಳಿಗೆ  ಬಹಳ ಜನ ಅಭಿಮಾನಿಗಳಿದ್ದಾರೆ, ಆದರೂ ಟೌನ್ ಕ್ಯಾಂಟೀನ್ ತನ್ನದೇ  ರೀತಿಯಲ್ಲಿ ಸದ್ದಿಲ್ಲದೇ  ಇಲ್ಲಿಗೆ ಬರುವ ಪ್ರವಾಸಿಗಳಿಗೆ  ಒಳ್ಳೆಯ ತಿಂಡಿ ತಿನಿಸು ನೀಡುತ್ತಿದೆ . ನಾನಂತೂ ಚಿಕ್ಕಮಗಳೂರಿಗೆ ಬಂದ್ರೆ  ಇಲ್ಲಿಗೆ ಬರದೆ ಹೋಗೋದಿಲ್ಲ, ಇಲ್ಲಿ ಗೆ  ಬಂದ ನಾವು ಹೊಟ್ಟೆ ತುಂಬಾ  ಉಪಹಾರ ಮೈಯ್ದು , ಪಾರ್ಸೆಲ್  ಮಾಡಿಸಿಕೊಂಡು   ಮುಂದಿನ ಪಯಣಕ್ಕೆ ಸಜ್ಜಾದೆವು ... ನಮ್ಮ  ಪಯಣ ಸಾಗಿತು 'ಮುಳ್ಳಯ್ಯನ ಗಿರಿ''  ಕಡೆಗೆ . ....!!! ಮತ್ತೊಂದು ವಿಚಾರ  ಚಿಕ್ಕಮಗಳೂರಿನಲ್ಲಿ  ನಮಗೆ ಪರಿಚಯವಾದ ಚಿನ್ಮಯ್ ಭಟ್ ಗೆಳೆಯ "ದರ್ಶನ್" ನಮ್ಮ ಜೊತೆಗೂಡಿದರು , ಪ್ರವಾಸಕ್ಕೆ ಮತ್ತಷ್ಟು ಕಳೆ  ಬಂದಿತು.


ಹಸಿರ ಹೊದ್ದ  ಭೂರಮೆ

ಚಿಕ್ಕಮಗಳೂರಿನಿಂದ   ಮುಳ್ಳಯ್ಯನ ಗಿರಿಗೆ  ೨೨ ಕಿಲೋಮೀಟರ್ ದೂರವಿದೆ, ಕಡೂರು ರಸ್ತೆಯಲ್ಲಿ ಸಾಗಿ ಮುಂದೆ ದೊರೆಯುವ ಒಂದು  ಕವಲು  ರಸ್ತೆಯಲ್ಲಿ  ಎಡಕ್ಕೆ ಚಲಿಸಿದರೆ   ಮುಳ್ಳಯ್ಯನ ಗಿರಿಗೆ ಕರೆದೊಯ್ಯುತ್ತದೆ , ಕಿರಿದಾದ  ರಸ್ತೆ ಕಾಫಿ ತೋಟದ ನಡುವೆ  ಸಾಗುತ್ತದೆ , ಜೊತೆಯಲ್ಲೇ ಸುಂದರ  ದೃಶ್ಯಗಳ ಸರಮಾಲೆ ಎಲ್ಲರನ್ನೂ     ಸ್ವಾಗತಿಸುತ್ತದೆ .. ನಮ್ಮ ಕ್ಯಾಮರ  ಹಸಿದ  ಹುಲಿಯಂತೆ  ಕಂಡ ಸುಂದರ ದೃಶ್ಯಗಳನ್ನು ಸೆರೆಹಿಡಿತು  ಹೊಟ್ಟೆಗೆ   ತುಂಬಿಕೊಳ್ಳುತ್ತಿತ್ತು .


ರಸ್ತೆ  ತುಂಬಾ ಬರುವ  ಇವರನ್ನು ದಾಟುವುದು ಹೇಗೆ


ಸದ್ದಿಲ್ಲದೇ ನಮ್ಮ ಪಯಣ ಸುಂದರ ಗಿರಿ ಪಂಗ್ತಿಗಳ  ನಡುವೆ ಸಾಗಿತ್ತು, ಕಿರಿದಾದ ರಸ್ತೆಯಲ್ಲಿ  ಎದುರುಗಡೆ  ಭಾರಿವಾಹನ ಬಂದಾಗ ನಮ್ಮ ಕಾರಿನ  ಚಾಲಕ ಚಾಕಚಕ್ಯತೆ ಕಾರನ್ನು   ಪಕ್ಕಕ್ಕೆ ಸರಿಸಿ   ನುಗ್ಗಿಸಿ  ಬಿಡುತ್ತಿದ್ದ , ಕೆಲವೊಮ್ಮೆ ಎರಡೂ ವಾಹನಗಳೂ ತಾವೇ  ಹಿಂದೆ ತಾವೇ  ಮುಂದೆ ಸರಿದು ಅನುಸರಣೆ ಮಾಡಿಕೊಂಡು ಚಲಿಸುತ್ತ   ಮುಂದೆ ಹೋಗುತ್ತಿದ್ದವು


ಯಾವ  ಕಲೆಗಾರನ  ಕೈಚಳಕ  ಇದು

ಹಸಿರ ಮಡಿಲಲ್ಲಿ  ಗಿರೀಶ್

ಪಯಣ ಸಾಗುತ್ತಾ   ಮುಳ್ಳಯ್ಯನ  ಗಿರಿ ಕಾಣುವ  ಅಸೆ  ಹೆಚ್ಚುತ್ತಿತ್ತು .  ನಾವೋ  ಒಳ್ಳೆಯ ದೃಶ್ಯ ಕಂಡೊಡನೆ  ಕಾರು ನಿಲ್ಲಿಸಿ   ಸ್ವಲ್ಪ ಕಣ್ಣು ತಂಪು ಮಾಡಿಕೊಂಡು , ಫೋಟೋ ಕ್ಲಿಕ್ಕಿಸಿ  ಮುಂದು ವರೆಯುತ್ತಿದ್ದೆವು,ಕೆಲವೊಮ್ಮೆ ಬಹಳ ಹೊತ್ತು ನಿಲ್ಲುವ  ಆಸೆ ಆಗುತ್ತಿತ್ತು,  ಆದರೆ ಹಸಿರ ಬೆಟ್ಟಗಳ  ಸವರಿಕೊಂಡು  ಬರುತ್ತಿದ್ದ ತಣ್ಣನೆ ಗಾಳಿ  ಮನಸನ್ನು ಪುಳಕ ಗೊಳಿಸುತ್ತಿತ್ತು,  ಶುದ್ದ ಗಾಳಿಯನ್ನು  ಸೇರಿಸಿಕೊಂಡ  ದೇಹ  ಉತ್ಸಾಹದಿಂದ ಪುಟಿಯುತ್ತಿತ್ತು,  ಜೊತೆಗೆ  ಕುರುಕಲು ತಿಂಡಿಯ  ರುಚಿ  ನಾಲಿಗೆ  ಯ ಮೇಲೆ ನರ್ತನ  ಮಾಡುತ್ತಿತ್ತು .


ಸುಂದರ ಅತೀ ಸುಂದರ

ಒಂದು ಸುಂದರ  ನೋಟ

ಮತ್ತೆ ಮುಂದೆ ಹೋದ ನಮಗೆ   ಶಿಖರದ  ಮೇಲೆ ಮೇಲೆ ಹೋದಂತೆ   ಪ್ರಕೃತಿಯ  ಚಿತ್ರ ಬದಲಾಗುತ್ತಿತ್ತು ,  ಹಸಿರು ಗಿರಿ, ಕೆಂಪು ಮಣ್ಣಿನ  ನೋಟ , ಕೆಂಪು ಮಣ್ಣಿನ  ರಂಗೋಲಿ,  ನೀಲಿಯ ಅಗಸ , ಜೊತೆಗೆ  ನಲಿಯುತ್ತ ಸಾಗಿದ್ದ ಕೆಲವು ಪ್ರವಾಸಿಗರು  ಇವುಗಳು ಒಳ್ಳೆಯ  ದರ್ಶನ ನೀಡಿತು , ಇಂತಹ ಪರಿಸರದಲ್ಲಿ  ಯಾರ ಮನಸು  ಸಂತಸದಿಂದ  ಅರಳೋಲ್ಲ ಹೇಳಿ,  ನಾವೂ ಸಹ ನಮ್ಮ ವಯಸನ್ನು ಮರೆತು  ನಲಿದಾಡಿದೆವು .



ಮುಳ್ಳಯ್ಯನ  ಗಿರಿ ದರ್ಶನ

ಮುಳ್ಳಯ್ಯನ  ಗಿರಿಯ ಮತ್ತೊಂದು ನೋಟ


ಅಗೋ ಅಲ್ಲೇ ಕಾಣಿಸಿತು ಮುಳ್ಳಯ್ಯನ  ಗಿರಿ , ಹ ..... ಹೌದು  ಮುಳ್ಳಯ್ಯನ ಗಿರಿಗೆ ಬಂದೆ ಬಿಟ್ಟೆವು,  ಕಾರ್  ಇಳಿದರೆ ದೂರದಿಂದ  ಒಳ್ಳೆಯ ನೋಟ ಸಿಕ್ಕಿತು,  ಪ್ರವಾಸಕ್ಕೆಂದು ಬಂದ ಜನರು ಇರುವೆಗಳ ಹಾಗೆ  ಬೆಟ್ಟವನ್ನು  ಹತ್ತುತ್ತಿದ್ದರು, ಕೆಲವರು ಇಳಿಯುತ್ತಿದ್ದರು, ಹಸಿರ ಹೊದ್ದ ಗಿರಿಯ ಮೇಲೆ ಬಣ್ಣ ಬಣ್ಣ ದ ಬಟ್ಟೆ ತೊಟ್ಟ ಜನರು   ಬಣ್ಣದ ರಂಗು   ಬಳಿದಿದ್ದರು . ಗಿರಿಯ ಮೇಲೆ ಕಲ್ಲಿನಿಂದ  ನಿರ್ಮಿತವಾದ ಒಂದು ಕೋಟೆಯ ಗೋಡೆ ಕಾಣುತ್ತಿತ್ತು . ಮೆಟ್ಟಿಲುಗಳನ್ನು ಹತ್ತುವ ಮೊದಲು ಕ್ಯಾಮರ  ಲೆನ್ಸ್  ಜೋಪಾನ ಪಡಿಸುತ್ತಾ  , ಮೆಟ್ಟಿಲುಗಳ ಬಳಿ ಸಾಗಿದೆವು,


ಗಿರಿಯ ಮೇಲೆ  ವಿಶ್ರಾಂತಿ ಗೋವುಗಳಿಗೂ  ಪ್ರೀತಿ


ನಮ್ಮ ಕರುನಾಡ  ಚೆಲುವು

ಮೆಟ್ಟಿಲು ಹತ್ತುತ್ತಾ , ಸುಂದರ್ ಪ್ರಕೃತಿಯನ್ನು   ಅಸ್ವಾದಿಸುತ್ತಾ , ನಡೆದೆವು ಅಲ್ಲೇ ಸನಿಹದಲ್ಲಿ ಗಿರಿಯ ಮೇಲೆ ಒಂದಷ್ಟು ಹಸುಗಳ ಗುಂಪು ವಿಶ್ರಾಂತಿ ಪಡೆದಿತ್ತು,  ಪಕ್ಕದಲ್ಲೇ  ಹಸಿರ ಹೊದ್ದ ಬೆಟ್ಟಕ್ಕೆ   ನೀಲಿಯ  ಅಗಸ  ಹಿನ್ನೆಲೆ ನೀಡಿತ್ತು, ಯಾವುದೇ   ಕಸ ವಿಲ್ಲದೆ  ಶುಭ್ರವಾದ ಪರಿಸರ ಮನ ಸೂರೆಗೊಂಡಿತ್ತು




ಮಂಟಪ ದೊಳಗೆ ಕುಳಿತ  ಬಸವ



ಗುಹೆಯೊಳಗೆ  ಗೆಳೆಯರು



ಗುಹೆಯ ಒಂದು ನೋಟ




ಮುಳ್ಳಯ್ಯನ  ಗಿರಿಯ  ತುದಿಯ ತಲುಪಿದ ನಾವು ಅಲ್ಲಿನ ಗದ್ದುಗೆ  ಮಂಟಪದಲ್ಲಿನ  ಬಸವ , ಗುಹೆ ಇವುಗಳನ್ನು ದರ್ಶನ ಮಾಡಿದೆವು, ಇಲ್ಲಿರುವುದು ಒಂದು ಶೈವ  ಸಮುದಾಯಕ್ಕೆ ಸೇರಿದ ಒಂದು ಗದ್ದುಗೆ , ಹೆಚ್ಚಿನ ವಿಚಾರ ಎಲ್ಲಿಯೂ ದಾಖಲಾಗಿಲ್ಲ ಇತಿಹಾಸದ ಪುಟ ತಿರುವಿ ಹಾಕಿದರೂ ಮಹಿತಿ ದೊರಕಲಿಲ್ಲ, ಯಾವುದೇ ಶಾಸನ ದರ್ಶನ್ ಆಗಲಿಲ್ಲ , ಮಂಜಿನ ತೆರೆ  ಬಿಸಿಲಿನ ಜೊತೆ ಆಟ ಆಡುತ್ತಿತ್ತು,  ಸುಂದರ ಪರಿಸರದಲ್ಲಿ ಎಷ್ಟು ಹೊತ್ತು ಕಳೆದರೂ ತರು ಅಸೆ ಪೂರ್ತಿಯಾಗದು , ಆದ್ರೆ ಮತ್ತಷ್ಟು  ನೋಡ್ ಬೇಕಿತ್ತು, ಒಲ್ಲದ ಮನಸಿನಿಂದ  ಹೊರಟೆವು



ಮುಳ್ಳಯ್ಯನ  ಗಿರಿಯಲ್ಲಿ ತೆಗೆದ ಕೊನೆಯ ಚಿತ್ರ


ಮುಂದಿನ ಪಯಣ   ಸೀತಾಳ ಮಲ್ಲಿಕಾರ್ಜುನ  ಬೆಟ್ಟಕ್ಕೆ  ನಮ್ಮ ತಂಡ  ಚಲಿಸಿತು ,  ಹಾದಿಯುದ್ದಕ್ಕೂ  ಮತ್ತೊಮ್ಮೆ ಹಸಿರ ಗಿರಿಯ ಸುಂದರ ದರ್ಶನ , ಮುಳ್ಳಯ್ಯನ ಗಿರಿಯ ನೋಟಗಳ ಚಿತ್ರ ನೆನಪು ಮಾಡಿಕೊಳ್ಳುತ್ತಾ , ಒಬ್ಬರನ್ನು ಒಬ್ಬರು  ತಮಾಷೆ ಮಾಡುತ್ತಾ  ತೆರಳಿದೆವು , ಸೀತಾಳ ಮಲ್ಲಿಕಾರ್ಜುನ ಸ್ವಾಮೀ ದೇಗುಲದ ಸಮೀಪ ನಮ್ಮ  ಕಾರು  ನಿಂತಿತು,



ದೇಗುಲ ದರ್ಶನ
 ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿ


ಇಲ್ಲಿ ಬೇರೆಯದೇ ಪರಿಸರ ಬೇರೆ ಇತ್ತು, ಮುಳ್ಳಯ್ಯನ ಗಿರಿಗಿಂತ ಕೆಳ ಪ್ರದೇಶದಲ್ಲಿ  ಇರುವ ಈ ದೇಗುಲ ನೋಡಲು  ಯಾವುದೊ  ಯೂರೋಪಿನ    ಕಟ್ಟಡದಂತೆ  ಕಂಡರೂ ಎರಡು ಗೋಪುರಗಳು ಇದು ದೇವಾಲಯ ಎಂಬುದನ್ನು   ಸಾರುತ್ತವೆ . ಸುತ್ತಲಿನ  ಹಸಿರ ಗಿರಿಗಳ   ಕೋಟೆಯ ನಡುವೆ  ಇಲ್ಲಿ  ಶ್ರೀ ಸೀತಾಳ ಮಲ್ಲಿಕಾರ್ಜುನ ದೇವಾಲಯವಿದೆ , ದರ್ಶನ ಪಡೆದ  ನಾವು  ಹೊರಗೆ ಬಂದೆವು,  ಹೊಟ್ಟೆ ಚುರುಗುಟ್ಟಿತ್ತು ,  ನಮ್ಮ  ಮಧ್ಯಹ್ನ ದ  ಆಹಾರ  ಸೇವನೆ ಸನಿಹದಲ್ಲೇ ಇದ್ದ ಒಂದು ಗುಡ್ಡದ  ಮೇಲೆ ಆಯಿತು,   ಟೌನ್ ಕ್ಯಾಂಟೀನ್ ನಿಂದ  ಪಾರ್ಸೆಲ್  ಮಡಿಸಿಕೊಂಡು ತಂದಿದ್ದ  ತಿಂಡಿ ತಿಂದು  , ಸ್ವಲ್ಪ ವಿಶ್ರಾಂತಿ ಪಡೆದೆವು, ....    ಹೊರಡೋಣ  ಮುಂದಕ್ಕೆ ಲೇಟ್  ಆಗುತ್ತೆ ಎಂದು ಗಿರೀಶ್ ಹೇಳಿದಾಗ  ಗಡಿಬಿಡಿ ಯಿಂದ ಸಿದ್ದರಾಗಿ ಮುಂದೆ ಹೊರಟೆವು,


ಹಾದಿಯಲ್ಲಿ  ಸಿಕ್ಕ  ಸ್ಥಳೀಯ  ಜನರು 


ಮುಂದಿನ ಪಯಣಕ್ಕೆ ಶುಭ ಕೋರುವಂತೆ  ಸಾಗಿತ್ತು, ಕಾಫಿ ತೋಟದ  ಕಾರ್ಮಿಕರ   ಒಂದು  ಗುಂಪು , ತಮ್ಮದೇ ಲೋಕದಲ್ಲಿ ವಿಹರಿಸುತ್ತಾ  ತೆರಳಿದ್ದ  ಅ ಜನರ  ಗುಂಪು ಚಿಕ್ಕಮಗಳೂರಿನ    ಜನರ ದರ್ಶನ ಮಾಡಿಸಿತ್ತು , ನಮ್ಮ ಪಯಣ  .... ಹೊನ್ನಮ್ಮನ  ಹಳ್ಳದ ಕಡೆಗೆ  ಹೊರಟಿತ್ತು . .......... !
 

3 comments:

Badarinath Palavalli said...

ಮುಳ್ಳಯ್ಯನಗಿರಿಯನ್ನು ತಲುಪು ಹಾದಿಯನ್ನು ತಾವು ಸದೃಶವಾಗಿ ವಿವರಿಸುತ್ತಾ ಹೋಗಿದ್ದೀರಾ.
ಶೈವ ಸಮುದಾಯಕ್ಕೆ ಸೇರಿದ ಆ ಗದ್ದುಗೆಯ ವಿಚಾರ ಅಲ್ಲಿಯೂ ನಾಮ ಫಲಕದ ಮೂಲಕ, ಗೈಡ್ ಬಾಯಿಂದ ಅಥವಾ ಪುಸ್ತಕದಲ್ಲೂ ದೊರೆಯುವುದಿಲ್ಲ, ಇದೇ ನಮ್ಮ ಭಾರತೀಯ ತಾಣಗಳ ದುಸ್ಥಿತಿ!
ಶ್ರೀ ಸೀತಾಳ ಮಲ್ಲಿಕಾರ್ಜುನ ಸ್ವಾಮಿಯ ದರ್ಶಣ ಚೆನ್ನಾಗಿ ಆಯಿತು ಸಾರ್.
ಹೊನ್ನಮ್ಮನ ಹಳ್ಳದ ಕುರಿತಾದ ಮುಂದಿನ ಕಂತನ್ನು ಎದುರುನೋಡುತ್ತಿದ್ದೇವೆ.

ಸುಬ್ರಮಣ್ಯ said...

ಚನ್ನಾಗಿದೆ

Srikanth Manjunath said...

ಚಿಕಮಗಳೂರು ಹೆಸರಿಗೆ ಚಿಕ್ಕದಾದರೂ ಅದರ ಒಡಲಲ್ಲಿ ಅಡಗಿರುವ ಪ್ರವಾಸಿ ತಾಣಗಳು ಹಲವಾರು. ಶಿವಮೊಗ್ಗ, ಹಾಸನ ಮಲೆನಾಡಿಗೆ ಹೆಬ್ಬಾಗಿಲು ಎಂದು ಕರೆಸಿಕೊಂಡರೆ.. ಚಿಕಮಗಳೂರು ಪ್ರವಾಸಿ ತಾಣ ಹಾಗು ಧಾರ್ಮಿಕ ಕ್ಷೇತ್ರಗಳಿಗೆ ಹೆಬ್ಬಾಗಿಲು. ಇಲ್ಲಿಂದ ಕರಾವಳಿಯ ಎಲ್ಲಾ ತೀರ್ಥ ಕ್ಷೇತ್ರಗಳು ಹತ್ತಿರ. ಪ್ರಕೃತಿ ಮಾತೆ ಇಲ್ಲಿಯೇ ಸುಸ್ತಾಗಿ ಕೂತು ಬಿಟ್ಟಿದ್ದಾಳೆ ಅನ್ನಿಸುವಷ್ಟು ಮುದ ನೀಡುತ್ತದೆ. ಕರುನಾಡಿನ ಅತಿ ಎತ್ತರ ಪ್ರದೇಶ ಈ ಊರಿನಲ್ಲಿರುವುದು ಒಂದು ಹೆಗ್ಗಳಿಕೆಯೇ ಸರಿ. ಮುಳ್ಳಯ್ಯನಗಿರಿಯ ಹಾದಿ ಬಲು ಮೋಹಕ, ರೋಮಾಂಚಕ ಹಾಗೆಯೇ ಹೃದಯ ನಡುಗಿಸುವ ಛಳಿಯ ಜೊತೆಯಲ್ಲಿಯೇ ಪ್ರಕೃತಿಯ ರುದ್ರರಮಣೀಯ ತಾಣಗಳನ್ನು ಒಳಗೊಂಡಿದೆ. ನಿಮ್ಮ ಚಿತ್ರಗಳು ಒಂದಕ್ಕೊಂದು ಪೈಪೋಟಿ ನೀಡುತ್ತಾ ನಾನು ಸುಂದರ ನೀನೂ ಸುಂದರ ಎನ್ನುವ ಭಾವ ಸೂಸುತ್ತದೆ. ಸುಂದರ ಲೇಖನ, ಟೌನ್ ಕ್ಯಾಂಟೀನ್ ತಿಂಡಿ, ಪ್ರಕೃತಿ ಮಾತೆಯ ಸುಂದರ ದೃಶ್ಯಾವಳಿ ಅದಕ್ಕೆ ಒಪ್ಪುವ ಹಾಗೆ ಪದಗಳ ಸರಮಾಲೆ.. ಸುಂದರ ಮಾಲೆ ನಿಮ್ಮ ಬತ್ತಳಿಕೆಯಿಂದ. ಸೂಪರ್ ಸರ್ಜಿ