Tuesday, July 16, 2013

ಮತ್ತೊಂದು ಪ್ರವಾಸದ ನೆನಪು ,..... ಪಯಣ .05 ಸಿಂಥೆರಿ ರಾಕ್ಸ್ ಎಂಬ ಬಯಲು ಜ್ಞಾನ ತಾಣ


ಹಸಿರ ಹೊದ್ದ ಮಣ್ಣಿನ ಹಾದಿ
 
[ಕ್ಷಮಿಸಿ  ಬಹಳ ದಿನಗಳ ನಂತರ  ಮತ್ತೆ ಬರೆಯಲು ಕುಳಿತೆ, ಇತ್ತೀಚಿಗೆ ನನ್ನ ವಯಕ್ತಿಕ ಕೆಲಸದ ಒತ್ತಡದಿಂದ ಬರೆಯಲು ವಿಳಂಭ ವಾಗಿದೆ  ಇನ್ನು ಮುಂದೆ  ನಿಯಮಿತವಾಗಿ ಬರೆಯಲು ಪ್ರಯತ್ನಿಸುತ್ತೇನೆ ] 
ಬನ್ನಿ ಮುಂದೆ ಸಾಗೋಣ 
ಅರೆ ಇದೇನಿದು  ಕಾರಿನ ಮೇಲೆಲ್ಲಾ ಧೂಳಿನ ಎರಚಾಟ......!!!. ಹೌದು  ದಾಂಡೇಲಿಯ ಸೊಬಗನ್ನು ಸವಿದ ನಮ್ಮ ತಂಡ  ಮುಂದೆ ಸಾಗಿತ್ತು, ಹಸಿರು ರಸ್ತೆಯಲ್ಲಿ ಸಾಗಿದ್ದ ನಮ್ಮ ಕಾರುಗಳು ಇದ್ದಕ್ಕಿದ್ದಂತೆ ಮಣ್ಣಿನ ಹಾದಿ ಹಿಡಿದವು,  ಆ ರಸ್ತೆಯಲ್ಲಿ ಧೂಳಿನ ಎರಚಾಟ ಸಾಗಿತ್ತು, ವಾಹನಗಳ ಮೇಲೆಲ್ಲಾ ಧೂಳಿನ ಮಜ್ಜನ ಆಗಿತ್ತು.


ವಾಹನಗಳಿಗೆ ಧೂಳಿನ ಮಜ್ಜನ


ಸ್ಥಳೀಯ ದೇವತೆಯ ಆಲಯ
 ಆದರೆ  ಏನಂತೆ  ಕೆಲವೊಮ್ಮೆ ಇಂತಹ ಸನ್ನಿವೇಶ ದಲ್ಲಿ ನಮ್ಮ ಅನಿಸಿಕೆಗಿಂತ ಹೆಚ್ಚಾಗಿ  ಒಳ್ಳೆಯ ತಾಣಗಳ ದರ್ಶನ ಆಗುತ್ತೆ  , ಹಾಗೆ ಇಲ್ಲಿಯೂ ಸಹ ನಮಗೆ ಅನುಭವ ಆಯಿತು, ಕಾರಿನಿಂದ ಇಳಿದು ಮುಂದೆ ಸಾಗಿದ ನಮಗೆ  ಸುಂದರ ಪರಿಸರದ ಹಿತಕರ ಅನುಭವ , ಅಲ್ಲೇ ಕಾಣಿಸಿದ್ದು ಯಾವುದೋ ಸ್ಥಳೀಯ  ದೈವದ ಆವಾಸ  ಸ್ಥಳ , ಪ್ರತೀ ಕಾಡಿನಲ್ಲೂ ಅಷ್ಟೇ ಅಲ್ಲಿನ ಸ್ಥಳೀಯ ಜನರು ತಾವು ನಂಬುವ   ದೈವಕ್ಕೆ ಪೂಜೆ ಸಲ್ಲಿಸುವ ವಾಡಿಕೆ ಇರುತ್ತದೆ . ಇಲ್ಲಿಯೂ ಸಹ ಹೂವಿತ್ತು ಘಂಟೆ ಕಟ್ಟಿ ಪೂಜೆ ಮಾಡಿದ್ದರು .


ಸಿಂಥೆರಿ ರಾಕ್ಸ್  ಬಗ್ಗೆ ಮಾಹಿತಿ ನೀಡುವ ಫಲಕ.

ಸನಿಹದಲ್ಲೇ ಸಿಂಥೆರಿ ರಾಕ್ಸ್ ಬಗ್ಗೆ ಮಾಹಿತಿ ನೀಡುವ ಫಲ ಕಣ್ಣಿಗೆ ಬಿತ್ತು , ಹೌದು ಈ ತಾಣದಲ್ಲಿ ಕಾಳಿ ನದಿಯ ಉಪನದಿ ಕಾನೇರಿ  ಇಲ್ಲಿ ಹರಿದು ಮಾನವರ ಜ್ಞಾನಕ್ಕೆ ಕೊಡುಗೆ ನೀಡಿದ್ದಾಳೆ, ಇಲ್ಲಿ ನಿಸರ್ಗ ನಿರ್ಮಿತ ಕಲ್ಲುಗಳು ಗಣಿ ವಿಜ್ಞಾನಕ್ಕೆ ತಮ್ಮದೇ ಆದ ಕೊಡುಗೆ   ಸಲ್ಲಿಸಿವೆ.   ಕಾನೇರಿ  ಉಪನದಿಯು ಉತ್ತರ ಕನ್ನಡ ಜಿಲ್ಲೆಯ   ಜೋಯ್ಡ  ತಾಲೂಕಿನಲ್ಲಿ  ಹುಟ್ಟಿ  ಕಾಳೀ ನದಿಯನ್ನು ಸೇರುತ್ತದೆ, ಆದರೆ ಇದರ ನಿಖರ ಮಾಹಿತಿ  ಎಲ್ಲಿಯೂ ಲಭ್ಯವಿಲ್ಲ.


 ಮಸುಕಾದ ಜ್ಞಾನ ಫಲಕಗಳು


"ಸಿಂಥೆರಿ ರಾಕ್ಸ್ " ಬಗ್ಗೆ ಇಲ್ಲಿದೆ ಸ್ವಲ್ಪ ಮಾಹಿತಿ, ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ತಾಣ ದಾಂಡೇಲಿ ಅರಣ್ಯದಲ್ಲಿ ಕಂಡುಬರುವ ಈ  ನೈಸರ್ಗಿಕ ಶಿಲೆಯು 3 0 0  ಅಡಿ ಎತ್ತರವಿದ್ದು  ಬಹಳ ಕಡಿದಾಗಿದೆ ,  ಈ  ಬೃಹತ್ ಬಂಡೆಯು ನೈಸರ್ಗಿಕ  ಶಿಥಲೀಕರಣ  ದಿಂದ ಉಂಟಾದ ಒಂದು  ನಿಸರ್ಗ ವಿಸ್ಮಯ ರಚನೆಯಾಗಿದೆ, ಈ ಬಂಡೆಗಳು ನೈಸರ್ಗಿಕ ಶಿಥಲೀಕರಣಕ್ಕೆ ಬಹಳಷ್ಟು ಪ್ರತಿರೋಧ ಒಡ್ಡಿ ಅಚಲವಾಗಿ ನಿಂತಿವೆ, ಅಗ್ನಿ ಶಿಲೆಗಳಾದ "ಗ್ರಾನೈಟ್" " ಬೆಸಾಲ್ಟ್ " , ಹಾಗೂ , ಜಲಜ ಶಿಲೆಗಳಾದ  "ಮರಳು ಶಿಲೆ" ಹಾಗೂ "ಸುಣ್ಣದ ಶಿಲೆ" ಇವುಗಳಿಂದ ಈ   "ಸಿಂಥೆರಿ  ರಾಕ್ಸ್" ರೂಪು ಗೊಂದಿರುವುದಾಗಿ ತಿಳಿದು ಬರುತ್ತದೆ.  ಇಂತಹದೆ ರಚನೆಯನ್ನು ಪಾಕಿಸ್ತಾನದ ಕಾರಾಕೊರಂ ಪರ್ವತ ಶ್ರೇಣಿಯಲ್ಲಿ ಕಾಣಬಹುದಂತೆ  ಅದರ ಎತ್ತರ         1 3 4 0 ಅಡಿಗಳೆಂದು  ದಾಖಲಿಸಲಾಗಿದೆ. 


ಕಾಡುಗಳಿಂದ ಮಳೆ ನೀರು ಕುಯ್ಲಿನ ಬಗ್ಗೆ ಮಾಹಿತಿಡೈಕ್ ಶಿಲೆಗ್ರೇ ವ್ಯಾಕ್
ಪೆಂಟೆಗಲ್ಲುಬೆಣಚುಕಲ್ಲು

 


ಕಬ್ಬಿಣಾಂಶ ಇರುವ ಶಿಲೆ


 ಕ್ವಾರ್ಟ್ಜ್ ಬೆಣಚುಕಲ್ಲಿನ  ವಿವರ
ಫಿಲೈಟ್  ಶಿಲೆ


ಕಿಡಿಗೇಡಿಗಳು  ಕದ್ದಿರುವ ಶಿಲೆ
ಮತ್ತೊಂದು ಬಗೆಯ ಬೆಣಚುಕಲ್ಲು
ಲ್ಯಾಟರೈಟ್  ಶಿಲೆ
ನಿಮಗೆಮೊದಲೇ ಹೇಳಿದಂತೆ ಸಿಂಥೆರಿ ರಾಕ್ಸ್ ಒಂದು ಬಯಲು ಜ್ಞಾನ ಆಲಯ , ವಿವಧ ಬಗೆಯ ಕಲ್ಲುಗಳ ಬಗ್ಗೆ ಇಲ್ಲಿ ಪೂರ್ಣ ಮಾಹಿತಿ ನೀಡಿದ್ದಾರೆ, ಹಾಗು ಸುಂದರ ಪರಿಸರದಲ್ಲಿ ಅರಿವು ಮೂಡಿಸುವ ಪ್ರಯತ್ನ ಇಲ್ಲಿ ಸಾಗಿದೆ. ಆದರೆ ಇಲ್ಲಿ ಮಜಾ ಮಾಡಲು ಬರುವ ನಾವು ಇದನ್ನು ನೋಡುವ ಗೋಜಿಗೆ ಹೊಗುವುದಿಲ್ಲ.  ಮಾಹಿತಿ ನೋಡುತ್ತಾ ಸಾಗುವ ಮೆಟ್ಟಿಲುಗಳ ಹಾದಿ
ಬನ್ನಿ ನಿಮಗೆ ಸ್ವಾಗತ


ವಿವಿಧ ನೈಸರ್ಗಿಕ ಶಿಲೆಗಳ ಬಗ್ಗೆ ಮಾಹಿತಿ ತಿಳಿಯುತ್ತಾ ಮೆಟ್ಟಿಲುಗಳನ್ನು ಇಳಿಯುತ್ತಿದ್ದರೆ  ನೀವು, ಅದ್ಭುತ ರಮ್ಯ ತಾಣ ತಲುಪುತ್ತೀರಿ , ಹೌದು ನಿಮ್ಮನ್ನು ಸಿಂಥೆರಿ ರಾಕ್ಸ್ ತಳದಲ್ಲಿ ಹರಿಯುವ "ಕಾನೇರಿ ನದಿ" ಯ ಈ ಪ್ರದೇಶ ಸ್ವಾಗತ  ನೀಡುತ್ತದೆ .  ಈ ಪ್ರದೇಶದಲ್ಲಿ ಬೃಹತ್ ಗಾತ್ರದ ಶಿಲೆಗಳ ನಡುವೆ ಜುಳು ಜುಳು ಹರಿವ ನದಿಯು ಸ್ವರ್ಗವನ್ನೇ  ಸೃಷ್ಟಿಸಿದೆ . ಅಂತರ್ಜಾಲದಲ್ಲಿ ಈ ಬಗ್ಗೆ ಇರುವ ಮಾಹಿತಿ ಇಷ್ಟೇ ನೋಡಿ


 
ಪ್ರಕೃತಿ ನಿರ್ಮಿತ  ಶಿಲೆಗಳ ಕಲಾವೈಭವಇದು ನಮ್ಮದೇ ಲೋಕ
 Syntheri Rock – Syntheri Rock is a 300-feet tall monolithic granite located deep inside the thick Dandeli Wildlife Sanctuary. With the Kaneri River gushing ferociously by its side, the Syntheri Rock is a spectacular sight. A jeep ride for about an hour followed by a walk through the scenic jungle will bring you to this incredibly beautiful sculpture of nature. Sykes Point is one of the most beautiful viewing spots in Karnataka. 

 
ನನ್ನನ್ನು  ನೋಡಲು ಬಂದಾಗ ಎಚ್ಛರವಾಗಿರಿ


ಜೇನು ಗೂಡುಗಳ ಅಲಂಕಾರ ಈ ಬಂಡೆಗೆ
 

ಅಂದ ಹಾಗೆ ಈ ಜಾಗದಲ್ಲಿ ಮೈಮರೆತರೆ ಜೀವಹಾನಿ ಖಚಿತ, ಹಾಗಾಗಿ ಬಹಳಷ್ಟು ಎಚ್ಚರ ವಹಿಸುವುದು ಒಳ್ಳೆಯದು, ಪ್ರತೀವರ್ಷ ಇಲ್ಲಿ ನೂರಾರು ಜನ ಸಾವನ್ನಪ್ಪುವುದಾಗಿ ತಿಳಿದುಬಂತು, ಕೆಲವೊಮ್ಮೆ ನೀರಿಗೆ ಕಲ್ಲು ಹೊಡೆಯಲು ಹೋಗಿ ಜೇನುಗೂಡಿಗೆ ಕಲ್ಲು ತಗುಲಿ ಅನಾಹುತ ಆಗಿದೆಯಂತೆ, ಇಲ್ಲಿನ ಪರಿಸರವನ್ನು ಹೆಮ್ಮೆಯ ಕನ್ನಡಿಗರಾದ ನಾವು ಕಾಪಾಡಿ ಕೊಳ್ಳಬೇಕಾದ ಕರ್ತವ್ಯ ಮಾಡಬೇಕು , ಈ ಸ್ವರ್ಗ ಲೋಕದ ಕೊಡುಗೆ ನೀಡಿದ ಉತ್ತರ ಕನ್ನಡ ಜಿಲ್ಲೆ ಗೆ ನಮಿಸಿ  ನಮ್ಮ ಪ್ರವಾಸ ದಿಬ್ಬಣ  ಮುಂದುವರೆಯಿತು,ಹಸಿರು ಹಾದಿಯ  ಪಯಣ 

 
ಅದೇ ಹಸಿರು ದಾರಿಯ ಪಯಣ
ಮುಂದ ............????


4 comments:

umesh desai said...

ಬಾಲು ಸರ್ ಬಹಳ ಹಿಂದೆ ನಮ್ಮ ದಂಡು ಸಿಂಥೇರಿ ರಾಕ್ ಗೆ ಹೋಗಿತ್ತು
ನಿಮ್ಮ ಫೋಟೋಗಳನ್ನು ನೋಡುತ್ತಿದ್ದರೆ ಆ ಜಾಗೆ ಭಾಳ ಸುಧಾರಣ ಆಗೇದ ಅನಿಸ್ತು..
ನಾವು ಹೋದಾಗ ಸ್ವಲ್ಪ ಮೆಟ್ಟಲಿದ್ದವು..ಆನಿ ಲದ್ದಿ ಸ್ವಾಗತಿಸಿತ್ತು..ಎಲ್ಲಾದ್ರೂ ಆನಿ ಇದ್ರ ಅನ್ನುವ
ಹೆದರಿಕೆಯಿಂದನ ಕೆಳಗಿಳಿದು ಹೋಗಿದ್ದು..ಮೊನ್ನೆ ನಮ್ಮ ಸಂಬಾರ್ ಗುಂಪಿನಲ್ಲಿ
"ಒಂದಾನೊಂದು ಕಾಲದಲ್ಲಿ" ನೋಡುತ್ತಿದ್ದೆವು ಅದರಲ್ಲೂ ಹಳೆಯ ಸಿಂಥೇರಿ ರಾಕ್ ಕಾಣಬಹುದು...!!

Unknown said...

ಆತ್ಮೀಯ ಬಾಲು ಅವರೇ,ಸುಂದರ ಪ್ರವಾಸ ಕಥನಕ್ಕಾಗಿ ವಂದನೆಗಳು. ಹಾಗೆಯೇ ಆ ಸ್ಥಳದ ಬಗ್ಗೆ, ಅಲ್ಲಿಗೆ ಹೋಗುವ ಬಗ್ಗೆ ಸ್ವಲ್ಪ ಮಾಹಿತಿ ಕೊಟ್ಟಲ್ಲಿ ನಮ್ಮಂತಹ ಕುತೂಹಲಿಗಳಿಗೆ ಸಹಾಯಕ ಆಗುತ್ತದೆ. R.Satyanarayana yveeare@yahoo.com

Srikanth Manjunath said...

ಸುಂದರ ತಾಣ ಯಾನ. ಸಿಂತೇರಿ ರಾಕ್ಸ್ ಕುತೂಹಲಕಾರಿಯಾಗಿದೆ. ಲಕ್ಷಾಂತರ ವರ್ಷಗಳಿಂದ ಪ್ರಕೃತಿಯ ವಿರೋಧವನ್ನು ಎದುರಿಸಿ ತನ್ನ ಮೈಯ್ಯ ಹಲವಾರು ಪದರಗಳನ್ನು ಕಾಲನ ಸಾಧನಕ್ಕೆ ಒಡ್ಡಿ ತಿದ್ದು ತೀಡಿದಂತಾದ ಕಲಾ ಕುಸುರಿ ಸುಂದರವಾಗಿದೆ, ಹಾಗೆಯೇ ಹಲವಾರು ವಿವಿಧ ಕಲ್ಲುಗಳ ಜ್ಞಾನ ವಿನಿಮಯ ಇಷ್ಟವಾಗುತ್ತದೆ. ಪ್ರದೇಶದ ಭೌಗೋಳಿಕ ಇತಿಹಾಸ, ವಿಶೇಷಣ, ಸೌಂದರ್ಯದ ಚಿತ್ರಣ ಇವೆಲ್ಲವನ್ನೂ ಒಮ್ಮೆಲೇ ನೋಡಬೇಕೇಂದರೆ ನಿಮ್ಮ ಲೇಖನಗಳು ಅವಕ್ಕೆ ಹೆಬ್ಬಾಗಿಲು ಎನ್ನಬಹುದು (ನಿಜಕ್ಕೂ ಉತ್ಪ್ರೇಕ್ಷೆಯಲ್ಲ). ನಿಮ್ಮ ಸಂಪರ್ಕಕ್ಕೆ ಬಂಡ ಒಂದು ವರ್ಷದಲ್ಲಿ ಹಲವಾರು ಮಾಹಿತಿಗಳನ್ನು ಹಾಗೆ ಆಯಿತು. ಹಾಗೆಯೇ ಎಲ್ಲಿ ಹೋದರೆ ಏನು ನೋಡಬೇಕು ಎನ್ನುವ ಮೊದಲ ವಿಷಯಕ್ಕೆ ನಿಮ್ಮ ಲೇಖನಗಳೇ ದಾರಿದೀಪ . ಸೂಪರ್ ಸರ್ಜಿ

ಮನಸು said...

ಎಂದಿನಂತೆ ಒಳ್ಳೊಳ್ಳೆ ಸ್ಥಳ ಪರಿಚಯ ಮಾಡುತ್ತಲೇ ಬಂದಿದ್ದೀರಿ. ನಿಜಕ್ಕೂ ಎಷ್ಟೋಂದು ಸುಂದರ ಸ್ಥಳಗಳು ನಮ್ಮ ಕರ್ನಾಟಕದಲ್ಲೇ ಇವೆ ನಾವುಗಳು ಮನಸು ಮಾಡಿ ನೋಡುವುದಿಲ್ಲ ಎಂದೆನಿಸಿತು. ಈ ಲೇಖನದಲ್ಲಿ ಎಚ್ಚರಿಕೆಯನ್ನೂ ನೀಡಿದ್ದೀರಿ ಜನ ಅಲ್ಲಿಗೆ ಹೋಗಿ ಸಾವನ್ನಪ್ಪುವುದುಂಟು ಎಂದು. ನಾವು ಎಂದಿಗೂ ಪ್ರಕೃತಿಯನ್ನು ತನ್ನಪಾಡಿಗೆ ಬಿಟ್ಟರೆ ಒಳ್ಳೆಯದು ಇಲ್ಲವಾದರೆ ಕೇಡು ಕಟ್ಟಿಟ್ಟ ಬುತ್ತಿ.
ಧನ್ಯವಾದಗಳು ಸರ್ ಸುಂದರ ತಾಣ ಪರಿಚಯಕ್ಕೆ... ಮುಂದೆ..? ಕಾಯುತ್ತಿದ್ದೇವೆ.