Monday, July 11, 2011

ಅಂದಹಾಗೆ ಸೋಲಿಗರು ಅಂದ್ರೆ ಯಾರು.???? ಪಯಣ 06

ಬಿಳಿಗಿರಿರಂಗನ ಬೆಟ್ಟ ಅಂದೊಡನೆ ಸಾಮಾನ್ಯವಾಗಿ ಕೇಳಿಬರುವ ಹೆಸರು "ಸೋಲಿಗರು" , ಹಲವರಿಗೆ ಈ ಹೆಸರಿನ ಪರಿಚಯ ಇಲ್ಲದ ಕಾರಣ ಸೋಲಿಗರ ಬಗ್ಗೆ ತಿಳಿಯಬೇಕೆಂಬ ಆಸೆ ಆಗುತ್ತದೆ. ನನಗೂ ಸಹ ಇಲ್ಲಿಗೆ ಹಲವಾರು ಸಾರಿ ಬಂದಾಗ ಇವರ ಬಗ್ಗೆ ತಿಳಿಯ ಬೇಕೆಂಬ ಹಂಬಲ ಇತ್ತು. ಬನ್ನಿ ಸೋಲಿಗರ ಪರಿಚಯ ಮಾಡಿಕೊಡುತ್ತೇನೆ."ಸೋಲಿಗ" ಎಂದರೆ  ಬಿದಿರಿನ ಮಕ್ಕಳೂ ಅಂತ ಅರ್ಥ!!! ಈ ಜನರಲ್ಲಿ  ತಮ್ಮ ಜನಾಂಗದ ಮೊದಲ ಮನುಷ್ಯ ಬಿದಿರಿನಿಂದ  ಉದ್ಭವಿಸಿದ ಎಂಬ ನಂಬಿಕೆ ಇದೆ. ಹಾಗಾಗಿ ಇವರು ತಮ್ಮನ್ನು  "ಸೋಲಿಗ" ಅಥವಾ "ಬಿದಿರಿನ ಮಕ್ಕಳು"  ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ  ಈ ಸೋಲಿಗ ಜನರು "ಮಲೆ ಮಹದೇಶ್ವರ ಬೆಟ್ಟ ಶ್ರೇಣಿ," "ಬಿಳಿಗಿರಿ ರಂಗನ ಬೆಟ್ಟ ಶ್ರೇಣಿ " ಹಾಗು "ಬಂಡೀಪುರ ಅರಣ್ಯ ಶ್ರೇಣಿ"  ಯಲ್ಲಿ ಮಾತ್ರ ಕಂಡುಬರುತ್ತಾರೆ. ಇನ್ನೆಲ್ಲಿಯೂ ಇವರ ಅಸ್ತಿತ್ವ ಇರುವುದನ್ನು ನೀವು ಕಾಣಲಾರಿರಿ .ಇವರ ನಂಬಿಕೆಗಳು  ಪರಿಸರ ಅಭಿವೃದ್ದಿಗೆ ಪೂರಕವಾಗಿದ್ದು  ಅಚ್ಚರಿ ಮೂಡಿಸುತ್ತದೆ.
ಸೋಲಿಗರ ವ್ಯವಸಾಯ
1 ] ಒಬ್ಬ ಸೋಲಿಗ ವ್ಯಕ್ತಿ  ಎಂದಿಗೂ  ಮರದಲ್ಲಿ ಹಣ್ಣಾಗದ    ಕಾಯಿ ಅಥವಾ ದೊರು ಹಣ್ಣನ್ನು ಕೀಳಲಾರ, ಮರ/ ಗಿಡ ದಲ್ಲಿಯೇ ಪೂರ್ಣವಾಗಿ ಹಣ್ಣಾಗಿರುವ ಹಣ್ಣುಗಳನ್ನು ಮಾತ್ರಾ ಕಿತ್ತು ತಿನ್ನುತ್ತಾನೆ,  ಇದರಿಂದ ಇತರೆ ಪ್ರಾಣಿ ಪಕ್ಷಿಗಳಿಗೂ  ಹಣ್ಣನ್ನು ತಿನ್ನುವ ಅವಕಾಶ ದೊರೆಯುತ್ತದೆ.   2 ] ತಾನು ವ್ಯವಸಾಯ ಮಾಡುವ ಭೂಮಿಯನ್ನು  ಕೇವಲ 06 ರಿಂದ 07  ವರ್ಷ ಮಾತ್ರ ಉಳುಮೆಮಾಡಿ ಬೆಳೆತೆಗೆದು  ನಂತರ ಸುಮಾರು  60 ರಿಂದ 70 ವರ್ಷ ಆ ಭೂಮಿಯನ್ನು ವ್ಯವಸಾಯ ಮಾಡದೆ ಹಾಗೆ ಬಿಡುತ್ತಾನೆ. ಇದರಿಂದ ಭೂಮಿಯ ಸಾರ ಕಡಿಮೆಯಾಗುವುದು ತಪ್ಪಿ  ಭೂಮಿ ಫಲವತ್ತತೆ ಉಳಿಯುತ್ತದೆ. 3 ] ಬೇಸಿಗೆಯಲ್ಲಿ ಕುಡಿಯಲು ನೀರಿಗೆ  ತೊಂದರೆ ಯಾದಲ್ಲಿ ಕಾಡಿನ ಮರವನ್ನು ಪ್ರಾರ್ಥಿಸಿ  ಅದಕ್ಕೆ ಪೊಟರೆ[ ತೂತು]   ಕೊರೆದು  ಮರಕ್ಕೆ ಹಾನಿಯಾಗದಂತೆ  ಮರದಿಂದ ಸಾಕಷ್ಟು ನೀರನ್ನು ತೆಗೆಯುತ್ತಾರೆ. ಇದು ನಾಗರೀಕರಾದ ನಮಗೆ ತಿಳಿಯದ ವಿಧ್ಯೆ ಯಾಗಿದೆ.

ಸೋಲಿಗರ ಹಾಡಿ[ಪೋಡು]
ಹಾಲಿ ಈ ಸೋಲಿಗ ಪಂಗಡದ ಜನಸಂಖ್ಯೆ ಅಂದಾಜು 20 ,000  ಇರಬಹುದೆಂದು  ತಿಳಿದುಬರುತ್ತದೆ. 1973 ರ ಅರಣ್ಯ ಸಂರಕ್ಷಣ ಕಾಯ್ದೆ ಅನ್ವಯ ಇವರನ್ನು ಅರಣ್ಯ ದಿಂದ ಹೊರಗೆ ತಂದು  ನಾಗರೀಕ ಸಮಾಜಕ್ಕೆ ಸೇರ್ಪಡೆ ಮಾಡುವ ಪ್ರಯತ್ನ ನಡೆದಿದೆ. ಇವರು ಗುಂಪಾಗಿ ವಾಸಮಾಡುವ ಸ್ಥಳವನ್ನು  "ಪೋಡು"  ಎಂದು  ಕರೆಯಲಾಗುತ್ತದೆ. ಹಲವಾರು ಸ್ವಯಂ ಸಂಸ್ಥೆಗಳು ಇವರನ್ನು ಕಾಡಿನಲ್ಲಿ ಜೇನು, ಚಕ್ಕೆ, ರುದ್ರಾಕ್ಷಿ , ಮುಂತಾದ ಕಾಡಿನ ಉತ್ಪನ್ನಗಳ ಸಂಗ್ರಹಣೆಗೆ  ಬಳಸಿಕೊಳ್ಳುತ್ತಿವೆ. ಹೀಗೆ ಕಾಡಿನ ನಡುವೆ ಬದುಕುವ ಸೋಲಿಗರು ವನ್ಯಜೀವಿಗಳ / ಕಾನನದ ಗೆಳೆಯರಾಗಿ ಸೌಹಾರ್ದತೆ ಯಿಂದ ಹಲವು ಶತಮಾನಗಳಿಂದ ಬದುಕಿದ್ದಾರೆ. "ಬಿಳಿಗಿರಿ ರಂಗಯ್ಯ" ತಮ್ಮ ಭಾವ ಎಂದು ಹೇಳುತ್ತಾ  ಹಳೆಯ ಕನ್ನಡ ನುಡಿಯಾದ "ಸೋಲಿಗ ನುಡಿ" ಎಂಬ ಭಾಷೆ ಮಾತಾಡುತ್ತಾ ಕಾನನ ಮಕ್ಕಳಾಗಿ ಬದುಕುತ್ತಿದ್ದಾರೆ. ನೋಡಿ ಹೇಗಿದೆ ಸೋಲಿಗರ ಜೀವನ . ಈ ಸಾರಿಗೆ ಸಾಕಲ್ವ?? ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ತಿಳಿಯೋಣ ನಮಸ್ಕಾರ.[ಈ ಸಂಚಿಕೆಯಲ್ಲಿ ಕೊನೆಯ ಚಿತ್ರವನ್ನು ಹೊರತು ಪಡಿಸಿ ಉಳಿದ ಎಲ್ಲಾ ಚಿತ್ರಗಳನ್ನು ಅಂತರ್ಜಾಲದಿಂದ ಕೃತಜ್ಞತಾ ಪೂರ್ವಕವಾಗಿ  ಪಡೆದು ಉಪಯೋಗಿಸಲಾಗಿದೆ]

7 comments:

ಗಿರೀಶ್.ಎಸ್ said...

olle mahithi sir....

ಮನಸು said...

ಒಳ್ಳೆಯ ಮಾಹಿತಿ ಸರ್, ಆದರೆ ಅವರು ೫,೬ ವರ್ಷ ವ್ಯವಸಾಯ ಮಾಡಿ ಮುಂದೆ ಸುಮಾರು ವರ್ಷಗಳು ನಿಲ್ಲಿಸಿದರೆ ಅವರ ಜೀವನಕ್ಕೆ ಏನು ಮಾಡುತ್ತಾರೆ ಕಷ್ಟ ಅಲ್ಲವೇ?

balasubramanya said...

@ ಸುಗುಣ ಮೇಡಂ, ನಿಮ್ಮ ಪ್ರಶ್ನೆ ಒಳ್ಳೆಯದೇ. ಆದರೆ ಅವರು ಭೂಮಿಯನ್ನು ಬದಲಾಯಿಸಿ ವ್ಯವಸಾಯ ಮಾಡುತ್ತಾರೆ. ಒಬ್ಬ ಮನುಷ್ಯ ಸುಮಾರು ಒಂದು ಎಕರೆ ವ್ಯವಸಾಯ ಮಾಡಿದರೆ ಮುಂದೆ ಅದರಿಂದ ಸ್ವಲ್ಪ ದೂರದ ಭೂಮಿಯನ್ನು ಮುಂದಿನಸಾರಿಗೆ ಉಪಯೋಗಿಸುತ್ತಾನೆ. ಅಷ್ಟೇ. ಕಾಡಿನಲ್ಲಿ ಇವರದು ಅಲೆದಾಟದ ಜೀವನ ಆಲ್ವಾ ಅದು ಹೇಗೆ ನಿಭಾಯಿಸುತ್ತಾರೋ ಅವರಿಗೆ ಗೊತ್ತು.

ಸಾಗರದಾಚೆಯ ಇಂಚರ said...

sir, omme nanagu illi ella hogabeku sir

avara badukina bagge adhyayana maadbeku

omme hogona

Sandeep K B said...

ಚಿತ್ರ ಹಾಗೂ ಮಾಹಿತಿ ಸೂಪರ್

KalavathiMadhusudan said...

nimma lekhana odutta chayachitragalannu
noduttiddare namagu noduva kutuuhala hecchaagta ide.olleya mahitigaagi abhinandanegalu.

ಸೀತಾರಾಮ. ಕೆ. / SITARAM.K said...

ಸೋಲಿಗರ ಬಗ್ಗೆ ಕೇಳಿದ್ದೆ. ಆದರೆ ತಿಳಿದಿರಲಿಲ್ಲ. ಉಪಯುಕ್ತ ಮಾಹಿತಿ.