Wednesday, April 20, 2011

ವಿಶ್ವಾಸದಲ್ಲಿ ಸಾಲ ತೆಗೆದುಕೊಂಡ ಈರಭದ್ರ ಕೈಕೊಟ್ಟಾಗ !!!! ಸಹಾಯಮಾಡಿದವನ ಸಂಕಟ ನೋ ಡೋ ವೆಂಕಟರಮಣ ...!!! !!!!

ಇದು ಕಥೆಯೋ ,ಘಟನೆಯೋ ನಿರ್ಧಾರ ನಿಮಗೆ ಬಿಟ್ಟದ್ದು. ನಿಮಗೂ ಇಂತಹ ಘಟನೆ ನಡೆದಿರಬಹುದು.ಬ್ಲಾಗ್ ಲೋಕ ಬೆಳೆದಂತೆ ಪರಸ್ಪರ ಪರಿಚಯ , ಸ್ನೇಹ  ಬೆಳೆಯುತ್ತದೆ.ಒಮ್ಮೊಮ್ಮೆ ಕೆಲವರು ತಮ್ಮ ಅಸಾದ್ಯವೆನ್ನುವ ಕ್ರಿಯಾಶೀಲತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ.ಅಂತಹವರಬಗ್ಗೆ ಬ್ಲಾಗಿಗರಿಗೂ ಆತ್ಮೀಯತೆ ಜಾಸ್ತಿಯಾಗಿ ಅವರ ಸ್ನೇಹಕ್ಕಾಗಿ ಹಾತೊರೆಯುತ್ತಾರೆ.ಇಂತಹ ಸ್ನೇಹವನ್ನು ಉಪಯೋಗಿಸಿಕೊಂಡು ಕೆಲವರು ಹಣದ ಸಹಾಯ ಪಡೆದು ವಾಪಸ್ಸು ಮಾಡಲು ಸತಾಯಿಸಿ ಸ್ನೇಹದ ಅರ್ಥವನ್ನು ಹಾಳು ಮಾಡಿ  ಸಹಾಯಮಾಡಿದ ತಪ್ಪಿಗೆ ಅಮಾಯಕರು ನರಳುವಂತೆ ಮಾಡಿದ ಘಟನೆಗಳು ವರಧಿಯಾಗುತ್ತಿವೆ.ಕೆಳಗಿನ ಒಂದು  ಉದಾಹರಣೆ ನಿಮಗಾಗಿ.
  ಮೈಸೂರಿನಲ್ಲಿ  ಅದೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಲವು ಸ್ನೇಹಿತರು ಸೇರಿದ್ದರು , ಬಹಳ ವರ್ಷಗಳ ನಂತರ ಸಿಕ್ಕ ಬಾಲ್ಯದ ಗೆಳೆಯ "ಈರಭದ್ರ"[ ಕಾಲ್ಪನಿಕ ಹೆಸರು]  ನಮ್ಮನ್ನು ಕೂಡಿಕೊಂಡ , ಸರಿ ನಾನೂ ನನ್ನ ಗೆಳೆಯರನ್ನು ಪರಿಚಯ ಮಾಡಿಕೊಟ್ಟೆ. ಅವನೂ ಸಹ ಎಲ್ಲರೊಡನೆ ಬೆರೆತು ತಾನು ಸಾಧಿಸಿರುವ ಸಾಧನೆಗಳಬಗ್ಗೆ , ಸಾಹಿತ್ಯ ಕೃಷಿಬಗ್ಗೆ ಹೇಳಿ ತನ್ನ ಅಸಾಧ್ಯ ಬುದ್ದಿವಂತಿಕೆ ತೋರಿದ್ದ . ಎಲ್ಲರೂ ಅವನನ್ನು ಮೆಚ್ಚುವವರೇ ಕಾರ್ಯಕ್ರಮ ಆರಂಭವಾಗಿ ಅವನ ಹೆಸರನ್ನು ಕೂಗಿದಾಗ ವೇದಿಕೆಯೇರಿದ ಅವನನ್ನು ಕಂಡು ನಮಗೆ ಖುಷಿಯೋ ಖುಷಿ, ನನಗೋ ನನ್ನ ಸ್ನೇಹಿತ ಗಣ್ಯ ವ್ಯಕ್ತಿಯೆಂಬ ಬಗ್ಗೆ ಗರ್ವ ಮೂಡಿತು. ಅವನ ಸರಧಿ ಬಂದಾಗ ನಿರರ್ಗಳವಾಗಿ ಮಾತಾಡಿ ಚಪಾಳೆ ಗಿಟ್ಟಿಸಿ  ಮೆರೆದ. ಕಾರ್ಯಕ್ರಮ ಮುಗಿದಾಗ ಎಲ್ಲರೂ ಅವನ ಹಿಂದೆ ಬಿದ್ದರು.ನನ್ನ ಹಾಗು ನನ್ನ ಗೆಳೆಯರ ಅನೇಕರ ವಿಳಾಸ , ಮೇಲ್ ಐ.ಡಿ. ,ಫೋನ್ ,ಮೊಬೈಲ್ ನಂಬರ್ ಪಡೆದ ಅವನು  ತನಗೆ ಅವಸರದ ಕೆಲಸ ವಿರುವುದಾಗಿ ತಿಳಿಸಿ ತೆರಳಿದ.ಇದಾಗಿ ಒಂದು ಆರು ತಿಂಗಳು ಕಳೆದಿರ ಬಹುದು ನನ್ನ ಸ್ನೇಹಿತರೊಬ್ಬರು ಬಂದು  ಬಾಲು ನಿಮ್ಮ ಸ್ನೇಹಿತ  ಈರಭದ್ರ ಅವರಿಗೆ ಫೋನ್ ಮಾಡಿದ್ರೆ ತೆಗೀತಾನೆ ಇಲ್ಲ, ಕೆಲವೊಮ್ಮೆ ಆಫ್ ಆಗಿರುತ್ತೆ ನಾನು ಅವರನ್ನು ಅರ್ಜೆಂಟ್ ಆಗಿ ಭೇಟಿಮಾಡ ಬೇಕೂ ಅಂದ್ರೂ , ಯಾಕೆ ಸ್ವಾಮೀ  ಇದ್ದಕಿದ್ದಂತೆ ನನ್ನ ಗೆಳೆಯನ ಬಗ್ಗೆ  ವಿಚಾರ ತೆಗೆದ್ರೀ ಅಂದೇ. ಅಯ್ಯೋ ಅದಾ ಏನಿಲ್ಲಾ ನಿಮಗೆ ಹೇಳೋದೇ ಮರ್ತು ಹೋಗಿತ್ತು  ನಿಮ್ಮ ಗೆಳೆಯನಿಗೆ ಇಪ್ಪತ್ತು ಸಾವಿರ ಸಾಲಾ ಕೊಟ್ಟಿದ್ದೆ , ಪಾಪಾ ಏನೋ ತೊಂದ್ರೆ ಇತ್ತು ಅವರಿಗೆ ನಿಮಗೂ ಹೇಳೋಕೆ ನಾಚಿಕೆ ಪಟ್ಟು ನನ್ನ ಹತ್ತಿರ ಕೇಳಿದರು  ಅಂತಹ ವ್ಯಕ್ತಿಗೆ ಇಲ್ಲಾ ಅನ್ನೋಕೆ ನನಗೆ ಮನಸು ಬರಲಿಲ್ಲ ಅದಕ್ಕೆ ಕೊಟ್ಟೆ. ಆದ್ರೆ ನೋಡಿ ನನ್ನ ಮನೆಯವಳಿಗೆ ಆರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ಐವತ್ತು ಸಾವಿರ  ದುಡ್ಡು ಕಟ್ಟ ಬೇಕೂ ಇಂತಹ ಸಮಯ ದಲ್ಲಿ ನಿಮ್ಮ ಸ್ನೇಹಿತರು ಕೈಗೆ ಸಿಗುತ್ತಿಲ್ಲಾ , ಕಳೆದ ಆರು ತಿಂಗಳಿಂದ ಆಗ ಕೊಡ್ತೀನಿ, ಈಗ ಕೊಡ್ತೀನಿ ಅಂತಾ ಹೇಳ್ತಿದ್ದವರು ಈಗ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ ಏನು ಮಾಡೋದು ದಿಕ್ಕೇ ತೋಚುತ್ತಿಲ್ಲಾ ಅಂದ್ರೂ .ನನಗೆ ದಿಗ್ಭ್ರಮೆ  ಆಯಿತು. ಅಲ್ಲಾ ಸರ್ ನನ್ನನ್ನು ಒಂದು ಮಾತು ಕೇಳದೆ ಹಣ  ಕೊಟ್ಟು ಬಿಡೋದೇ , ಆಗ ಕೇಳದೆ ಈಗ ಬಂದು ವಿಚಾರ ಹೇಳಿದರೆ ನಾನು ಏನು ಮಾಡಲು ಸಾಧ್ಯ ಹೇಳಿ ಅಂದೇ.ಅವತ್ತು ಸಿಕ್ಕ ಸ್ನೇಹಿತ ಅವನು ಇವತ್ತಿನ ವರೆಗೂ ನನಗೆ ಒಂದು ಕರೆ ಮಾಡಿಲ್ಲ ,ಎಲ್ಲಿದ್ದಾನೋ ಹೇಗಿದ್ದಾನೋ ಒಂದೂ ತಿಳಿಯದು.ಎಂದೇ. ಅದಕ್ಕೆ ಅವರು ಸಾರ್ ಈಗ ನನ್ನ ಕಷ್ಟ ಕುತ್ತಿಗೆಗೆ ಬಂದಿದೆ ಏನು ಮಾಡಲಿ ತಿಳಿಯುತ್ತಿಲ್ಲಾ ಅಂತಾ ತಲೆಮೇಲೆ ಕೈ ಹೊತ್ತು ಕುಳಿತರು.ನನಗೆ ಮನಸ್ಸು ಕರಗಿ ಸರ್ ನನ್ನ ಬಳಿ ಹಣವಿಲ್ಲ ಬನ್ನಿ ನಮ್ಮಿಬ್ಬರಿಗೂ ಸ್ನೇಹಿತನಾದ ಕುಮಾರನನ್ನು ಕೇಳೋಣ ಅಂತಾ ಅವನಬಳಿ ತೆರಳಿದೆವು .[ ಕುಮಾರ ವ್ಯಾಪಾರಿಯಾಗಿದ್ದು, ಹಣಕಾಸು ವಹಿವಾಟು ಜೋರಾಗಿದ್ದವ.]ಅವನ ಬಳಿ ತೆರಳಿದ ನಮ್ಮನ್ನು ನೋಡಿ ಏನೋ ಮಗ ಅಪರೂಪಕ್ಕೆ ನನ್ನ ಬಳಿ ಬಂದಿದ್ದೀಯ ಏನ್ ಸಮಾಚಾರ ಅಂದಾ , ಅವನಿಗೆ ನನ್ನ ಸ್ನೇಹಿತರ ಕಥೆಯನ್ನು ಹೇಳಿ ಅವರಿಗೆ ಹಣದ ಸಹಾಯ ಮಾಡುವಂತೆ ವಿನಂತಿಸಿದೆ. ಆ ಹಣಾ ನಾ ...ಅಂತಾ ರಾಗ ತೆಗೆದ!!!! , ಯಾಕೋ ಕುಮಾರ ಅಂದ್ರೆ  ಲೋ ಬಾಲು ನನಗೆ ಈ ಸ್ನೇಹದ ಮೇಲೆ ವಿಶ್ವಾಸವೇ ಹೊರಟು ಹೋಗಿದೆ  ಮಾರಾಯ  ನಿಂಗೆ  ಒಂದು ವಿಚಾರ ತಿಳಿಸಿಲ್ಲ ಕೇಳು , ಆವತ್ತು ಸಿಕ್ಕಿದ್ದನಲ್ಲ ನಿನ್ನ ಸ್ನೇಹಿತ ನನ್ನ ಬಳಿಯೂ ಬಂದು ಒಂದು ಸೈಟ್  ಖರೀಧಿಸಲು ಹಣ ಸಾಲದಾಗಿದೆ ಅಂತಾ ಹೇಳಿ ದಾಖಲೆ ತೋರಿಸಿ ಎರಡು ಲಕ್ಷ  ಪಡೆದು ಇದನ್ನು ಒಂದು ತಿಂಗಳಲ್ಲಿ ಕೊಡುವುದಾಗಿ ತಿಳಿಸಿ ಹೋದವ ಆರು ತಿಂಗಳಾದರೂ ಪತ್ತೆ ಇಲ್ಲ . ನಾನೂ ಸಹ ಅವನಂತ  ಗಣ್ಯ ವ್ಯಕ್ತಿಗೆ ಸಹಾಯ ಮಾಡುವುದು ನನ್ನ ಪುಣ್ಯಾ ಅಂತಾ ತಿಳಿದು ಸಹಾಯ ಮಾಡಿದೆ.ನಾನು ಅವನ ಮನೆಗೆ ಹೋದ್ರೆ ಅವ ಸಿಗೋದಿಲ್ಲ , ಮೊಬೈಲ್ ನಂಬರ್ ಬದಲಾಯಿಸಿದ್ದಾನೆ, ಒಮ್ಮೆ ಹೋಗಿ ಜಗಳಾ ಆಡಿ ಬಂದೆ ಏನೂ ಪ್ರಯೋಜನವಿಲ್ಲ , ಜಾಸ್ತಿ ಮಾತಾಡಿದ್ರೆ ಪೋಲಿಸ್ ಗೆ ದೂರು ಕೊಡುವುದಾಗಿ ಹೇಳ್ತಾನೆ ಅದಕ್ಕೆ ಗುರು ಯಾರು ಸತ್ರೂ ಸರಿ ನಾನು ಸಹಾಯ ಮಾಡಲ್ಲಾ ಅಂಥಾ ತೀರ್ಮಾನಿಸಿದ್ದೇನೆ. ಅಂದಾ . ಅವನಿಂದ ಬಂದ ದಾರಿಗೆ ಸುಂಕವಿಲ್ಲವಿಂದು ವಾಪಸ್ಸು ಬಂದು ಬೇರೆ ಗೆಳೆಯರನ್ನು ಕೇಳಿದ್ರೆ ನಮ್ಮ ಈರ ಭದ್ರ ಒಬ್ಬರಿಗೆ ಗೊತ್ತಾಗದಂತೆ ಮತ್ತೊಬ್ಬರಿಂದ  ಹಣ ಸಾಲ ಪಡೆದು ಉಂಡೆ ನಾಮ ತಿಕ್ಕಿದ್ದ. ಕೊನೆಗೆ ಗುರುತಿನ ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಹಕಾರ ಪಡೆದು ಸ್ನೇಹಿತನಿಗೆ ಸಾಲ ನೀಡಿಸಿ ಅವನ ಸಮಸ್ಯೆ ಬಗೆಹರಿಸಿದ್ದಾಯ್ತು. ಇಂತಹ ಘಟನೆ ನಿಮಗೂ ನಡೆದಿರ ಬಹುದು, ದಯಮಾಡಿ ಒಬ್ಬ ವ್ಯಕ್ತಿಯ ಕ್ರಿಯಾಶೀಲತೆ , ಬುದ್ದಿವಂತಿಕೆ ,ಇವುಗಳಿಗೆ ಮಾರುಹೋಗಿ ಅವರನ್ನು ದೇವರೆಂದು ತಿಳಿದು ಹಣ ಸಹಾಯ ಮಾಡಿ ನರಳ ಬೇಡಿ , ಕೆಲವರಿಗೆ ತಮ್ಮ ಕ್ರಿಯಾಶೀಲತೆ, ಬುದ್ದಿವಂತಿಕೆ, ಜ್ಞಾನ ಇವುಗಳನ್ನು ಮೋಸ ಮಾಡಲು ಉಪಯೋಗಿಸಿಕೊಳ್ಳುವ ಚಟವಿರುತ್ತದೆ .ಇದರಿಂದ ನರಳುವ ಇತರ ಅಮಾಯಕರ ನೋವು ಅವರಿಗೆ   ಅರ್ಥವಾಗುವುದಿಲ್ಲ ದಯಮಾಡಿ ಹಣ ಸಹಾಯ ಮಾಡುವ ಮೊದಲು ಯೋಚಿಸಿ ನಂತರ ನಿರ್ಧರಿಸಿ, ಹಣ ಸಹಾಯ ಮಾಡಿ ಆ ತಪ್ಪಿಗೆ ನರಳುವ ಸರಧಿ ನಿಮ್ಮದಾಗದಿರಲಿ. ಅಥವಾ ಈಗಾಗಲೇ ಮೋಸ ಹೋಗಿದ್ದರೆ  ನಿಮ್ಮ ಇತರ ಸ್ನೇಹಿತರನ್ನು ಎಚ್ಚರ ಗೊಳಿಸಿ.

34 comments:

shivu.k said...

ಸರ್, ನಿಮ್ಮ ಲೇಖನವನ್ನು ಓದಿ ಬೇಸರವಾಯಿತು. ಪರಿಶುದ್ಧ ಸ್ನೇಹವನ್ನು ಹೀಗೆ ದುರುಪಯೋಗ ಮಾಡಿಕೊಳ್ಳಬಾರದು. ನೀವು ಬರೆದ ಕತೆ ನಿಜವೇ ಆಗಿದ್ದಲ್ಲಿ ಹಣ ಪಡೆದುಕೊಂಡವ ನಿಮ್ಮ ಗೆಳೆಯರಿಗೆ ಬೇಗ ವಾಪಸ್ಸು ಕೊಟ್ಟು ನಿಮ್ಮ ಗೆಳೆಯರು ಕಷ್ಟ ಪರಿಹರಿಸಿಕೊಳ್ಳುವಂತಾಗಲಿ..ಇದು ಎಲ್ಲರಿಗೂ ಎಚ್ಚರಿಕೆಯ ಗಂಟೆ ಎಂದುಕೊಳ್ಳುತ್ತೇನೆ

ಮನಸು said...

ಸರ್,
ಓದಿ ಗಾಬರಿಯಾಯ್ತು.... ತಿಳುವಳಿಕೆ ಇರುವಂತಹವರೇ ಹೀಗೆ ಮಾಡ್ತಾರಲ್ಲಾ ಅಂತ.... ದುಡ್ಡು ತೆಗೆದುಕೊಳ್ಳುವುದು ತಪ್ಪಲ್ಲಾ ಆದರೆ ತೆಗೆದುಕೊಂಡಮೇಲೆ ಅವರಲ್ಲಿ ಏನೇ ತೊಂದರೆ ಇದ್ದರೂ ಹೇಳಿಕೊಳ್ಳಬೇಕು ಹೀಗೆ ಏಕಾಏಕಿ ಕಣ್ಮರೆಯಾಗೋದು ಸರಿಯಲ್ಲ.... ಆದಷ್ಟು ಜಾಗ್ರತೆಯಿಂದ ಇರಬೇಕು ಅಷ್ಟೆ ಸರ್... ಸ್ನೇಹದ ಹೆಸರಲ್ಲಿ ಹೀಗೆಲ್ಲ ಮಾಡಬಾರದು.... ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ... ಧನ್ಯವಾದಗಳು

ಕ್ಷಣ... ಚಿಂತನೆ... said...

ಸರ್‍,ಅನುಭವ ಕಥನ ಓದಿದೆ. ಇದು ಅನೇಕರಿಗೆ ಆಗುವ/ಆಗುತ್ತಿರುವ ಅನುಭವ. ಕೆಲವೊಮ್ಮೆ ಒಂದು ಹೋಗಿ ಒಂದು ಆಗುವ ಘಟನೆಗಳೂ ಈ ಸಾಲ ತೆಗೆದುಕೊಂಡವರಿಂದ ಆಗುವುದನ್ನು (ದಿನಪತ್ರಿಕೆ ವರದಿಗಳಲ್ಲಿ) ಕಾಣಬಹುದು.
ಧನ್ಯವಾದಗಳು.

ತೇಜಸ್ವಿನಿ ಹೆಗಡೆ said...

ಛೇ.. ವಿಶ್ವಾಸಗಳಿಸುವುದು ಕಷ್ಟ... ಕಳೆದುಕೊಳ್ಳುವುದು ಬಲು ಸುಲಭ... ಆದರೆ ಅದನ್ನು ನಿಭಾಯಿಸುವುದು ಬಲು ಕಷ್ಟ.. ಅದಕ್ಕೆ ಅಷ್ಟೇ ಪ್ರಾಮಾಣಿಕತೆ ಬೇಕು. ಇಂತಹವರಿಂದ ಸ್ನೇಹಕ್ಕೇ ಅವಮಾನವಾಗುತ್ತದೆ!:(

ಸಾಗರದಾಚೆಯ ಇಂಚರ said...

ಸರ್,
ಬ್ಲಾಗ್ ಲೋಕದ ಗೆಳೆಯರೊಬ್ಬರಿಂದ ನನಗೂ ಇಂಥಹುದೇ ಅನುಭವ ಆಗಿದೆ,
ಹಣಕ್ಕಾಗಿ ಕಾಯುತ್ತಿದ್ದೇನೆ,
ಇನ್ನು ಬಂದಿಲ್ಲ,
ಏನಾದರೊಂದು ಕಾರಣ ಕೊಡುತ್ತ ಮುಂದೂಡುತ್ತಿದ್ದಾರೆ
ಅವರು ತುಂಬಾ ಒಳ್ಳೆಯ ಮನುಷ್ಯ ಎಂದುಕೊಂಡಿದ್ದೇನೆ,
ನಿಜಕ್ಕೂ ನಾವು ಎಚ್ಚರದಿಂದ ಇರಬೇಕು
ನಿಮ್ಮ ಬ್ಲಾಗ್ ಎಲ್ಲರಿಗೂ ಒಂದು ಕರೆಘಂಟೆ

sunaath said...

ಬಾಲು,
ದೊಂಗಲುನ್ನಾರು ಜಾಗೃತ!!

ಸುಬ್ರಮಣ್ಯ said...

ನೀವು ಬರೆದ ಕಥೆ ಮುಕ್ಕಾಲು ಸತ್ಯವಿರಬಹುದು ಎಂಬುದು ನನ್ನ ಊಹೆ. ಆದರೆ ಒಂದು ಸತ್ಯ. ಕೊಡುವ ಕೋಡಂಗಿಗಳು ಇರೂ ತನ್ಕ ತಗಣಾ ಈರ್ಭದ್ರಗಳು ಇದ್ದೇ ಇರ್ತಾರೆ!!!

Ittigecement said...

ಬಾಲೂ ಸರ್...

ನನ್ನ ಬಳಿ ಒಬ್ಬ ಬ್ಲಾಗ್ ಸ್ನೇಹಿತರು ಹಣ ತೆಗೆದು ಕೊಂಡಿದ್ದರು..
ಆದರೆ ವಾಪಸ್ಸು ಕೊಟ್ಟಿದ್ದಾರೆ..

"ಜಗತ್ತಿನಲ್ಲಿ ಮೋಸ ಹೋಗುವವರದ್ದೇ ತಪ್ಪು..
ಮೋಸ ಹೋಗಬಾರದು"
ಮೋಸ ಮಾಡುವವರು ಇದ್ದೇ ಇರುತ್ತಾರೆ..

ಇದರಿಂದ "ನಿಜಕ್ಕೂ ತೊಂದರೆ ಇರುವವರು ಹಣ್ದದ ಸಹಾಯ ಕೇಳಿದರೆ..
ನಮಗೆ ಕೊಡಬೇಕೆಂಬ ಆಸೆ ಇದ್ದರೂ..." ಕೊಡಲು ಮನಸ್ಸು ಬರುವದಿಲ್ಲ...

ನಾವು ನಮ್ಮ ಎಚ್ಚರಿಕೆಯಲ್ಲಿರಬೇಕು..
ಇದು ನನ್ನ ಅನುಭವ..

Dr.D.T.Krishna Murthy. said...

ಬಾಲೂ ಸರ್;ನೀವು ಬರೆದಿರುವುದನ್ನು ನೋಡಿದರೆ ಇದು ನಿಜಕ್ಕೂ ನಡೆದ ಘಟನೆ ಎನಿಸುತ್ತದೆ.ಮನಸ್ಸಿಗೆ ತುಂಬಾ ನೋವಾಗಿದೆ.ಬ್ಲಾಗಿನ ಸ್ನೇಹ ಸ್ನೇಹಕ್ಕಾಗಿಯೇ ಮೀಸಲಾಗಿರಲಿ.ಅದರಲ್ಲಿ ಹಣದ ವ್ಯವಹಾರ ಬೇಡ ಎನ್ನುವುದು ನನ್ನ ಅಭಿಮತ.ಅದರ ಪರಿಶುದ್ಧತೆಗೆ ಚ್ಯುತಿ ತರುವುದು ಬೇಡ.ಯಾರು ಹಣ ಪಡೆದಿದ್ದಾರೋ ಅವರು ತಕ್ಷಣವೇ ಎಲ್ಲರ ಹಣ ಹಿಂತಿರುಗಿಸಬೇಕಾಗಿ ವಿನಂತಿ.ದಯವಿಟ್ಟು ನಿಜವಾದ ಸ್ನೇಹಕ್ಕೆ ಮಸಿ ಬಳಿಯುವಂತಹ ಕೆಲಸ ಮಾಡಬೇಡಿ ಎನ್ನುವುದು ನನ್ನ ಕಳಕಳಿಯ ಪ್ರಾರ್ಥನೆ.

ಸೀತಾರಾಮ. ಕೆ. / SITARAM.K said...

guru ravara maate nannadu.
avara haage naanu kaayuttiddene..

ಸೀತಾರಾಮ. ಕೆ. / SITARAM.K said...

nana lekhana http://nannachutukuhanigavanagalu.blogspot.com/2009/10/blog-post.html

jithendra hindumane said...

ಬಾಲೂ ಸರ್‍, ನಆನು ಕೊಟ್ಟು ಕಳೆದುಕೊಂಡಿರುವುದು ಅಪಾರ
.....! ಆದರೆ ನನಗಿನ್ನೂ ಬುದ್ದಿ ಬಂದಿಲ್ಲಾ. ಈಗಲೂ ಯಾರಾದ್ರು ಹಣ ಕೇಳಿದರೆ ಇವನು ಖಂಡಿತಾ ಮೋಸ ಮಾಡೋಲ್ಲಾ ಅನಿಸುತ್ತೆ...!

ಆದರೆ ತುಂಬಾ ಹುಷಾರಾಗಿರ ಬೇಕು. ಇಲ್ಲಾ ನಮ್ಮ ಬೆವರಿ ಸಂಪಾದನೆ ಅಪಾತ್ರ ದಾನ ಆಗುತ್ತೆ.....

prabhamani nagaraja said...

ಎ೦ಥಾ ವಿಶ್ವಾಸ ದ್ರೋಹ. ಈ ರೀತಿಯವರು ಸಮಾಜ ಕ೦ಟಕರೆ ಸರಿ. ನಾನು ಹೀಗೆ ಮೊಸಹೊಗಿದ್ದೇನೆ(ಮನದ ಅ೦ಗಳದಿ......ಕೊಟ್ಟದ್ದು) ಎಚ್ಚರಿಕೆಯಿ೦ದ ಇರಬೇಕು.

ಮನಸಿನಮನೆಯವನು said...

Enu helbeku antaane tileetilla..

Shweta said...

Han Baalu Sir, nimma blog ge nanna first entry:):)

balasubramanya said...

@ ಶಿವೂ, ಹೌದು ಬರೆಯಲು ನನಗೂ ಬೇಸರವಾಗ್ತಿದೆ.ಸ್ನೇಹಿತರಿಗೆ ಹೀಗೆ ಆಗದಿರಲೆಂಬ ಆಸೆ.ಅಷ್ಟೇ.

balasubramanya said...

@ ಸಗುಣ ಮೇಡಂ , ಇದು ಗಾಬರಿ ಆಗುವ ವಿಷಯವೇ ಹೌದು, ಸ್ನೇಹದ ಹೆಸರಲ್ಲಿ ಹೀಗೆಲ್ಲ ಮಾಡಬಾರದು.... ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ... ನಿಮ್ಮ ಮಾತಿಗೆ ನನ್ನ ಸಹಮತವಿದೆ.

balasubramanya said...

@ಕ್ಷಣ... ಚಿಂತನೆ...ಚಂದ್ರು , ನಿಮ್ಮ ಮಾತು ಸರಿಯಾಗಿದೆ.

balasubramanya said...

@ತೇಜಸ್ವಿನಿ ಹೆಗಡೆ, ''ವಿಶ್ವಾಸಗಳಿಸುವುದು ಕಷ್ಟ... ಕಳೆದುಕೊಳ್ಳುವುದು ಬಲು ಸುಲಭ...ಆದರೆ ಅದನ್ನು ನಿಭಾಯಿಸುವುದು ಬಲು ಕಷ್ಟ..ನಿಮ್ಮಮಾತು ನೂರಕ್ಕೆ ನೂರು ನಿಜ.

balasubramanya said...

@ಸಾಗರದಾಚೆಯ ಇಂಚರ , ಗುರುಮೂರ್ತಿ ಸರ್ , ನೀವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಸಾಲಾ ತೆಗೆದುಕೊಂಡ ಪುಣ್ಯಾತ್ಮರು ನಿಮಗೆ ವಾಪಸ್ಸು ನೀಡಿ ಪುಣ್ಯ ಕಟ್ಟಿಕೊಳ್ಳಲಿ. ಮುಂದೆ ಇಂತಹ ಸಮಸ್ಯೆ ಉದ್ಭವಿಸದಿರಲಿ.

balasubramanya said...

@sunaath : ನಿಮ್ಮ ಮಾತನ್ನು ಎಲ್ಲರೂ ಗಮನಿಸುವುದು ಒಳ್ಳೆಯದು.

balasubramanya said...

@ಸಿಮೆಂಟು ಮರಳಿನ ಮಧ್ಯೆ, ಪ್ರಕಾಶಣ್ಣ. ನಿಮ್ಮ ಅನುಭವ ಒಳ್ಳೆಯದು ಆದರೆ ಇತರರ ಅನುಭವ ಸ್ವಲ್ಪ ಗಮನಿಸಿ,ಕೊಟ್ಟವರ ಸಂಕಟ ತೆಗೆದುಕೊಂಡವರಿಗೆ ಅರಿವಾಗಿ ವಾಪಸ್ಸು ನೀಡಿದರೆ ನನ್ನ ಬರಹ ಸಾರ್ಥಕ.

balasubramanya said...

@ಸುಬ್ರಮಣ್ಯ ಮಾಚಿಕೊಪ್ಪ, ನಿಮ್ಮ ಅನಿಸಿಕೆ ಸರಿ .

balasubramanya said...

@Dr.D.T.krishna Murthy., ನಿಮ್ಮ ಅನಿಸಿಕೆ ಸರಿ ,ದೇವರು ಸದ್ಬುದ್ದಿ ನೀಡಿ ಏಳರ ಕಷ್ಟ ಕಳೆಯಲಿ.

balasubramanya said...

@ಸೀತಾರಾಮ. ಕೆ. / SITARAM.K ನಿಮ್ಮ ಅನಿಸಿಕೆ "ಗುರು ರವರ ಮಾತೆ ನನ್ನದು .
ಅವರ ಹಾಗೆ ನಾನು ಕಾಯುತ್ತಿದ್ದೇನೆ"....... ನಿಮ್ಮ ಕಾಯುವಿಕೆ ಅಂತ್ಯವಾಗಲಿ.

balasubramanya said...

@ ಜಿತೇಂದ್ರ ಹಿಂಡುಮನೆ:- ನಿಮ್ಮ ಮಾತಿಗೆ ಏನು ಹೇಳಲಿ .....................!!

balasubramanya said...

@prabhamani ನಾಗರಾಜ:- ನಿಮ್ಮ ಮಾತುಗಳು ಸರಿಯಾಗಿದೆ.

balasubramanya said...

@ವಿಚಲಿತ:- ನಿಮ್ಮ ಹಾಗೆ ನನಗೂ ಹಾಗಿದೆ.

balasubramanya said...

@Shweta :-ನಿಮ್ಮ ಮೊದಲ ಭೇಟಿಗೆ ಸ್ವಾಗತ. ಮುಂದೆಯೂ ನಿಮ್ಮ ಆಗಮನ ಆಗುತ್ತಿರಲಿ.

ಪ್ರವೀಣ್ ಭಟ್ said...

enta jana irtarappa ... kottonu kodangi iskondonu eerabhadra... husharagirbeku

balasubramanya said...

@ಪ್ರವೀಣ್ ಭಟ್ :-nimma maatu nija .nanna blaagige swaagata.

Harini Narayan said...

ಹಹ್ಹಾ.. ಚೆನ್ನಾಗಿದೆ. ಕಾಲ್ಪನಿಕವಾಗಿದ್ದರೆ ಓಕೆ .. ನಿಜವಾಗಿದ್ದರೆ , ಛೆ! ಗೆಳೆತನದ ದುರುಪಯೋಗ. ಉಂಡೆ ನಾಮದ ಪದಪ್ರಯೋಗ ಚೆನ್ನಾಗಿದೆ :) ಇದನ್ನೇ ನೋಡಿ ಮಾಡಿರಬೇಕು ನಮ್ಮ ಜಾನಪದ ಜಾಣರು - ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ !! ..

ವಿಜಯ್ ಮಂಜುನಾಥ್ said...

ಓದಿ ತುಂಬಾ ಬೇಜಾರಾಯಿತು ... ಸ್ನೇಹವನ್ನು ದುರುಪುಯೋಗಮಾಡಿಕೊಳ್ಳುವ ಇಂತಹ ಜನರನ್ನು ದೂರ ಇಡಬೇಕು .... ಬಾಲು ಸರ್ ... ಅವರ ಜಾತಕವನ್ನು ತೆರೆದು ಇಟ್ಟರೆ ಇತರರು ಎಚ್ಚರಿಕೆಯಿಂದ ಇರಬಹುದು....

UMESH VASHIST H K. said...

ನನಗೂ ಇಂಥ ಅನುಭವ ಆಗ್ತಿತ್ತು, ಆದ್ರೆ ಸ್ವಲ್ಪದರಲ್ಲೇ ತಪ್ಪಿಸಿಕೊಂಡೆ, ೨೦೧೧ ರಲ್ಲಿ , ಆವಾಗ ಹೊಸದಾಗಿ ಕೆಲ್ಸಕ್ಕೆ ಸೇರಿದ ಹುಡುಗರು ನ ಈ ಈರಭದ್ರನಿಗೆ ಕೊಟ್ಟು ... ಜೋಲು ಮೊರೆ ಹಾಕಿ ಕೊಂಡಿದ್ದನ್ನು ನಾನು ಕೂಡ ನೋಡಿದ್ದೆನೆ ....