Sunday, February 20, 2011

ಹೇಳು ಬೆಂಗ್ಳೂರ್ ನೀನ್ಯಾಕೆ ಹಿಂಗೆ?? ಅರ್ಥವಾಗದ ಮಾಯಾಂಗನೆ ಅಂದರೆ ನೀನೇನಾ ???

ನಮ್ ಬೆಂಗ್ಳೂರು ಒಂದ್ರೀತಿ   ಮಾಯಾ ಲೋಕ , ಒಬ್ಬೊಬ್ಬರಿಗೆ ಒಂದೊಂದು ತರಹ  ಕಾಣಿಸುವ ಮಾಯಾಂಗನೆ ಇದ್ದಂಗೆ, ಈ ಊರು.ಒಬ್ಬರಿಗೆ , ಗಾರ್ಡನ್ ಸಿಟಿ , ಮತ್ತೊಬ್ಬರಿಗೆ ಇದು ಗಾರ್ಬೇಜ್ ಸಿಟಿ,ಒಬ್ಬರಿಗೆ ಸಿಲಿಕಾನ್ ಸಿಟಿ,ಇನ್ನೊಬ್ಬರಿಗೆ ಇದು ಬಯೋಕಾನ್ ಸಿಟಿ,ಹಲವರಿಗೆ ಇದು  ಬ್ಲಾಗರ್ಸ್ ನಗರ, ಸೂಪರ್ ಫಾಸ್ಟ್ ನಗರ, ಫೋಟೋಗ್ರಾಫರ್ಸ್ ನಗರ, ಇತ್ಯಾದಿ,ಇತ್ಯಾದಿ, ಬಳಷ್ಟು ಜನರಿಗೆ ಬಹಳಷ್ಟು ತರಹ   ಕಾಣುವ ಈ ಊರು ಮಾಯಾನಗರವೇ  ಸರಿ .ಆದ್ರೆ ಯಾಕೋ ಕಾಣೆ ನನಗೆ  ಈ ಮಾಯಾನಗರಿ  ವಿಭಿನ್ನ ದರ್ಶನ ಮಾಡಿಸುತ್ತಾ  ಅರ್ಥವಾಗದ ನಗರ ಅನ್ನಿಸಿತು.. ಬನ್ನಿ ಒಂದು ಸುತ್ತು ಅರ್ಥವಾಗದ ನಗರದ ಲೋಕದೊಳಗೆ  ಒಂದು ಸುತ್ತು ಹಾಕೋಣ.                                                           ದೃಶ್ಯ...1  :-)  ಮೊನ್ನೆ "'ಕುಮಾರ ಸ್ವಾಮೀ "ಬಡಾವಣೆ ಯಲ್ಲಿ ಒಂದು ಮದುವೇ ನಿಶ್ಚಿತಾರ್ಥ  ಕಾರ್ಯಕ್ರಮವಿತ್ತು. ನಾನೂ ಹೋಗಿದ್ದೆ. ಕಾರ್ಯಕ್ರಮ ಸಂಜೆ ಇದ್ದ ಕಾರಣ ,ಮಧ್ಯಾಹ್ನ ಕೆಲಸವಿಲ್ಲದ ನಾನು ಹಾಗೆ ಅಡ್ಡಾಡುತ್ತಾ ಬಡಾವಣೆ ಪರಿಚಯ ಆಗ್ಲಿ ಅಂತಾ  ಹೊರಗೆ ಬಂದೆ ಅರೆ ಮನೆಯ ಪಕ್ಕ ಖಾಲಿ ಸೈಟ್ ನಲ್ಲಿ  ಮೇಕೆಗಳು ಮೆಯ್ತಿದ್ವು.                                                                                                  


                                                                                                                                                                                                                                                      ಅಚ್ಚರಿಯಿಂದ  ಮನೆ  ಒಳಗಡೆ  ಹೋಗಿ ನನ್ನ ಕ್ಯಾಮರ ತಂದು ನೋಟ ನೋಡಲು ನಿಂತೇ.ಆಗ ಕಂಡಿದ್ದು  ಈ ವಿಚಾರ.  ನಡುವಯಸ್ಸಿನ ಒಬ್ಬ ಗಂಡಸು ಹಾಗು ಹೆಂಗಸು  ಆಡುಗಳ[ಮೇಕೆ] ಹಿಂಡಿನೊಂದಿಗೆ ಬಡಾವಣೆಯ ಬೀದಿ ಬೀದಿಗಳಲ್ಲಿಕಂಡು ಬರುವ ಖಾಲಿ ನಿವೇಶನಗಳನ್ನು ಹುಡುಕುತ್ತಾ                                                                                                                                                                                                                                                                                                                 ಹೊರಟಿದ್ದರು!!!.  ಅಲ್ಲಾ ಈ ಬೆಂಗ್ಳೂರ್ ನಲ್ಲಿ ಆಡು ಮೆಯಿಸುವವರೂ ಇದ್ದಾರ.!!! ಅನ್ನಿಸಿ ಸ್ವಲ್ಪ ಹೊತ್ತು ಅವರನ್ನು ಗಮನಿಸಿದೆ.ಗಂದಾ ಹೆಂಡತಿ ಇರಬೇಕು ಇಬ್ಬರೂ ಕನ್ನಡ ತೆಲುಗು ಮಾತಾಡುತ್ತಿದ್ದರು  ಸುಮಾರು ಹತ್ತು ಆಡುಗಳ[ಮೇಕೆ] ಗುಂಪು,ಅವರಜೊತೆ ಇತ್ತು ,  ಹಾಗೆ ಅವರನ್ನು ಮಾತಾಡಿಸಿದೆ. "ಹೌದು ಸ್ವಾಮೀ, ನಾವಿಲ್ಲೆಯೇ ಹತ್ತಿರದ ಸ್ಲಂನಲ್ಲಿ ಇದೀವಿ,. ಜೀವನಕ್ಕೆ ಆಡು ಸಾಕ್ತೀವಿ , ಬೆಳಿಗ್ಗೆ ಒಂಬತ್ತು ಘಂಟೆಯಿಂದ ಸಂಜೆ ನಾಲ್ಕು ಘಂಟೆವರೆಗೆ ಇದೆ ಕೆಲಸ . ಮಾಂಸಕ್ಕಾಗಿ ಮೇಕೆ ಮಾರಿ ಜೀವನ ನಡೆಸ್ತೀವಿ".ಅಂತಾ ಹೇಳಿದ್ರೂ                                                       ಮುಂದೆ ನಾನು ಮಾತಾಡಿ "ಅದ್ಸರೀ ನೀವು ಬೆಳಿಗ್ಗೆ ಯಿಂದ ಹೀಗೆ  ಆಡು [ಮೇಕೆ] ಮೆಯಿಸುತ್ತೀರಲ್ಲಾ ಅವಕ್ಕೆ ಹೊಟ್ಟೆ ತುಂಬುತ್ತಾ??" ಅಂತಾ ಕೇಳ್ದೆ.                                  ಅಯಾವ್ದುದಕ್ಕೆ ಅವರು ಅಲ್ಲಾ  ಸಾ ನಮ್ ಮೇಕೆ ಎಲ್ಲಾನೂ ತಿನ್ತವೆ ಸಾ , ಖಾಲಿ ಸೈಟಿನಲ್ಲಿ ಸಿಗುವ ಬಾಳೆಲೆ, ಗಿಡ ,ಹುಲ್ಲು, ಅರ್ಧ ತಿಂದು ಬಿಸಾಕಿದ ತಿಂಡಿ, ಕಾಜಗ,[ಕಾಗದ], ಬಿಡಾಕಿಲಾ" ಅಂತಾ ಹೆಮ್ಮೆಯಿಂದ ಹೇಳಿದ್ರೂ ,"ನೀರ್ಕುಡ್ಸೋಕೆ ಏನ್ ಮಾದಿತೀರಾ?? " ಅಂದೇ ನೋಡಿ  "ಅದ್ಕೆನಂತೆ ಅಲ್ಲೇ ಅರೀತಿಲ್ವ್ರಾ ಮೋರಿ ಅಲ್ಲೇ ಆಯ್ತುದೆ ಬುಡಿ" ಅಂತಾ ಮುಂದಕ್ಕೆ  ಮೇಕೆ ಹೊಡ್ಕೊಂಡ್  ಹೋದರು.ಅಲ್ಲೇ ಇದ್ದ ಒಬ್ಬರು  ಈ ಕಾಲದಲ್ಲಿ ಯಾರ್ನೂ ನಂಬೋ ಹಂಗಿಲ್ಲ  ಬೆಳಿಗ್ಗೆ ಹಿಂಗೆ ಬಾರೋ ಇವ್ರು ರಾತ್ರಿ ಮನೆಗಳಿಗೆ ಖನ್ನ ಹಾಕಲು ಸೂಕ್ತವಾದ ಮನೆ ಹುಡುಕ್ತಾರೆ ಅಂದ್ರೂ. ಆದ್ರೆ ಇವರನ್ನು ನೋಡಿದ ಮನಸ್ಸು ಈ ವಾದ ಒಪ್ಪೋ ಸ್ಥಿತಿಯಲ್ಲಿ  ಇರಲಿಲ್ಲ.                                                                                                                                            ದೃಶ್ಯ..2 :-) ಕಳೆದ ಶನಿವಾರ ಹೈಕೋರ್ಟ್ ನಲ್ಲಿ ಕೆಲ್ಸಾ ಇತ್ತು . ನಮ್ಮ ವಕೀಲರ ಬರುವಿಗಾಗಿ ಕಾಯುವ ಕೆಲಸ ಸರಿ ಅಲ್ಲೇ ಸಿಕ್ಕ ಪರಿಚಯದವರೋಬ್ಬರೊಡನೆ ಪಕ್ಕದ ಪಾರ್ಲರ್ನಲ್ಲಿ  ಹಾಲು ಹೀರಿ ಸಮೀಪದ  ಪಾರ್ಕ್ ನಲ್ಲಿ ಅಡ್ಡಾಡಲು ಆರಂಭಿಸಿದೆ. ಅಲ್ಲಿ ಕಂಡ ಲೋಕ ಬೆರಗು ಹುಟ್ಟಿಸಿತ್ತು.ವಿಧಾನ ಸೌಧ ಹಾಗು ಹೈಕೋರ್ಟ್ ಮಧ್ಯ ಮೆಟ್ರೋ ಕೆಲಸಕ್ಕೆ ತಡೆ ಗೋಡೆ ನಿರ್ಮಿಸಿ ನಿರ್ಮಾಣ ಕಾಮಗಾರಿ ನಡೆಸಿದ್ದರು. ಪಾರ್ಕಿನಲ್ಲಿ ನಡೆಯುತ್ತಾ ಮುಂದುವರೆದೆ  ಪಾಪ ಹೈ ಕೋರ್ಟಿನಲ್ಲಿ ಅಷ್ಟೊಂದು ಮೂತ್ರಾಲಯ ಸೌಲಭ್ಯ  ಕಲ್ಪಿಸಿದ್ದರೂ  ಪಾರ್ಕಿನಲ್ಲಿದ್ದ  ಮರಗಳಿಗೆ  ನಾಗರೀಕ ಮಂದಿಯ ಮೂತ್ರ ಸಿಂಚನ ನಡೆದಿತ್ತು.ಮತ್ತೊಂದೆಡೆ ಪರಿಸರಕ್ಕೆ ನಾಗರೀಕ ಸಮಾಜ ನೀಡುತ್ತಿರುವ ಕಸದ ಉಡುಗೊರೆ ರಾಶಿಯಾಗಿ ಬಿದ್ದಿತ್ತು. ಹೈ ಟೆಕ್  ಮಂದಿ ತಮ್ಮ ಲೋ ಟೆಕ್  ಚಾಳಿಯನ್ನು ಹೀಗೆ ಮುಂದುವರೆಸಿದ್ದರು. ವಾಸನೆ ತಡೆಯಲಾರದೆ  ಮುಂದೆ ಬಂದು ಶುದ್ದಗಾಳಿ  ಪಡೆಯಲು ಕಾತರನಾಗಿ ಹೊರಟೆ  .ಪಾರ್ಕಿನ ಮತ್ತೊಂದೆಡೆ  ಸುಂದರ ಮರಗಳ ಸಾಲುಗಳು ಕಾಣಿಸಿದವು. ಹಾಗು ಮರಗಳ ನೆರಳಿನಲ್ಲಿ ಆರು ನಾಯಿಗಳು   ಮಲಗಿದ್ದವು. ಮರಗಳ ಒಂದು ಸಾಲಿನಲ್ಲಿ ಹಸಿರಿನಿಂದ ಕೂಡಿದ  ಮರಗಳಿದ್ದರೆ, ಮತ್ತೊಂದು ಸಾಲಿನಲ್ಲಿ ಬೋಳು ಬೋಳಾದ ಮರಗಳಿದ್ದವು.  ಯಾಕೋ ಕಾಣೆ ಈ ದೃಶ್ಯ ನೋಡಿದ ಕೂಡಲೇ  ಹಸಿರಮರಗಳು ಜ್ಞಾನವನ್ನೂ ,ಬೋಳು ಮರಗಳು ಅಜ್ಞಾನವನ್ನೂ  ಮಧ್ಯೆ  ಭೂಲೋಕದ ಅರಿವಿಲ್ಲದೆ  ಮಲಗಿರುವ ನಾಯಿಗಳು  ಜ್ಞಾನ ಅಜ್ಞಾನ ದ ಅರಿವಿಲ್ಲದೆ  ನಿದ್ದೆಯ ಅಮಲಿನಲ್ಲಿರುವ   ಮಾನವರನ್ನೂ  ಬಿಂಬಿಸುತ್ತಿರುವಂತೆ ಅನ್ನಿಸಿತು..ಈ ವಿಚಾರ ಕೇಳಿದ ನನ್ನ ಸ್ನೇಹಿತನಿಗೆ ಇದು ಕಂಡ ರೀತಿ  ಹೀಗೆ, ಹಸಿರಮರಗಳು  ಕೆಟ್ಟ ತನದಿ ಸಂಪಾದಿಸಿ  ಕೊಬ್ಬಿರುವ ಜನರು,[ ನೋಡಲು ಹಸಿರಾಗಿ ಕಂಡರೂ ಜೀವನ ಶೂನ್ಯವಾಗಿರುವ ಜನ. ] ಬೋಳುಮರಗಳು  ನ್ಯಾಯವಾಗಿ ಬದುಕಲು ಆಗದೆ ಶೋಷಣೆಗೆ ಒಳಗಾಗಿ [ನೋಡಲು ಒಣಗಿಹೊಗಿದ್ದರೂ  ಮನದಲ್ಲಿ ಜೀವನ ಮೌಲ್ಯ ಉಳಿಸಿಕೊಂಡಿರುವ ಜನ.] ದಿನವೂ ಸತ್ತು ಬದುಕುತ್ತಿರುವ ಜನ. ಈ ತಾರತಮ್ಯವನ್ನು ತೊಲಗಿಸಲಾಗದೆ ಗಾಢ ನಿದ್ದೆಯಲ್ಲಿ ಮಲಗಿರುವ ಸಮಾಜವನ್ನು ಆ ನಾಯಿಗಳು ಸೂಚಿಸುತ್ತವೆ ಅಂದಾ. ಯಾವುದು ಸುಳ್ಳೋ ಯಾವುದು ನಿಜವೋ ನೀವೇ ತೀರ್ಮಾನಿಸಿ. ಬನ್ನಿ ಮುಂದಿನ ದೃಶ್ಯಕ್ಕೆ.                                                                                                                                                        ದೃಶ್ಯ ...3 :-) ಮುಂದೆ ಬಂದ ನನಗೆ ಪಾರಿವಾಳಗಳ ಗುಂಪು ಕಾಣಿಸಿತು.ಮರದ ಮೇಲಿಂದ ಗುಂಪಾಗಿ  ಪುರ್ ಅಂತಾ ಹಾರಿ ಆಗಸದಲ್ಲಿ ಅಡ್ಡಾಡಿ ಭೂಮಿಗಿಳಿದು ಕಸ ಕಡ್ಡಿಯಲ್ಲಿ ಕೀಟಗಳನ್ನು ಹೆಕ್ಕಿ ತಿನ್ನುವ  ಬೆಂಗಳೂರಿನ ಪಾರಿವಾಳಗಳಿಗೆ ತಿನ್ನಲು ಕಾಳುಗಳು ಎಲ್ಲಿ ಸಿಗಬೇಕು???. ಪಾರ್ಕಿನಲ್ಲಿ ಸಿಗುವ ಹುಳು ಹುಪ್ಪಟ್ಟೆ ಗಳನ್ನೂ ತಿಂದು ನಲಿದಿರುವ ಈ ಪಾರಿವಾಳಗಳಿಗೆ ಜೈ ಅನ್ನಬೇಕು. 
                                                                                                                                                                     ಹಾಗೆ ನೋಡುತ್ತಾ ನಿಂತ ನನಗೆ .ಪಾರಿವಾಳಗಳ ಚಿನ್ನಾಟ ಚಂದವಾಗಿ  ಕಾಣಿಸಿ ನೋಡುತ್ತಾನಿಂತೆ .ಅರೆ ಇದೇನಿದುಅಂತಾ  ನೋಡಿದ್ರೆ!!,  ಗುಂಪು ಕೂಡಿದ  ಪಾರಿವಾಳಗಳು ಮೆಟ್ರೋ ಬೋರ್ಡಿನ ಕಡೆ  ಶಿಸ್ತಾಗಿ ನಡೆದಿದ್ದವು,ಸುಮಾರು ಹೊತ್ತು ಯಾವ ಚರ್ಚೆ ಮಾಡಿದವೋ ಕಾಣೆ ಯಾವುದೇ ಗುದ್ದಾಟ, ತಳ್ಳಾಟ, ಕಂಡುಬರಲಿಲ್ಲ  ಶಿಸ್ತಿನಿಂದ ಮೆಟ್ರೋ ಗೋಡೆಯ  ಬೋರ್ಡಿನ ಮುಂದೆ ತಮ್ಮ ಅಹವಾಲನ್ನು ಇಟ್ಟ ಆ ಪಾರಿವಾಳಗಳು  ಮೆಟ್ರೋ ರೈಲಿನಿಂದ ಮುಂದೆ ತಮಗೆ ಯಾವುದೇ ಹಾನಿ ಆಗದಿರಲಿ ಅಂತಾ ಪ್ರಾರ್ಥಿಸಿದಂತೆ ಹಾಗು ಮೆಟ್ರೋ ಗೋಡೆಗೆ ಮನವಿ ಮಾಡಿದಂತೆ  ಕಂಡು ಬಂತು.
 ಈ ದೃಶ್ಯಗಳನ್ನು ನನ್ನ ಮೊಬೈಲ್ ಕ್ಯಾಮರ ಸೆರೆ ಹಿಡಿಯುತ್ತಿತ್ತು. ಶಬ್ಧ ಕೇಳಿದ ಪಾರಿವಾಳಗಳು  ನನ್ನನ್ನು ವೈರಿ ತರಾ ನೋಡಿ, ಇವನೊಬ್ಬ ಕಡಮೆ ಇದ್ದ ಅಂತಾ ಬೈದು  ಪುರ್ ಅಂತಾಹಾರಿ ಹೋದವು.  ಅಷ್ಟರಲ್ಲಿ ಎಲ್ಲಿದ್ದೀರಾ ಬಾಲೂ?  ಬನ್ನಿ ಕೋರ್ಟಿಗೆ ಹೊತ್ತಾಗುತ್ತೆ ಅಂತಾ ನಮ್ಮ ವಕೀಲರು ಮೊಬೈಲ್ನಲ್ಲಿ  ಕರೆದ್ರೂ. ಭಾರವಾದ ಹೃದಯದಿಂದ ನಿರ್ಗಮಿಸಿದೆ..ಆಗಾ ಅನ್ಸಿದ್ದು ಹೇಳು ಬೆಂಗ್ಳೂರು  ನೀನ್ಯಾಕೆ ಹಿಂಗೆ?? ಅರ್ಥವಾದ ಮಾಯಾಂಗನೆ ನೀನೇನಾ ಅನ್ನಿಸಿತ್ತು. ನಿಮಗೆ ಏನನ್ನಿಸಿತು ಹೇಳುವಿರಾ ??

34 comments:

Digwas Bellemane said...

ಚೆನ್ನಾಗಿದೆ...

G S Srinatha said...

ಬಾಲುರವರೆ ನೀವು ಹೇಳಿದ್ದು ಸರಿ, ಬೆಂಗಳೂರು ಮೊದಲಿನ ತನ್ನ ಹಿರಿಮೆಯನ್ನು ಕಳೆದುಕೊಳ್ಳುತ್ತಿದೆ- ನಿವೃತ್ತರ ಸ್ವರ್ಗಲೋಕ, ಸುಂದರ ಉದ್ಯಾನವನಗಳ ನಗರ ....


ಆದರೆ, ನೀವು ಬರೆದ " ಹಸಿರಮರಗಳು ಕೆಟ್ಟ ತನದಿ ಸಂಪಾದಿಸಿ ಕೊಬ್ಬಿರುವ ಜನರು, " ಈ ವಾಕ್ಯ ಸರಿಯಿಲ್ಲವೆನಿಸುತ್ತದೆ. ಇದನ್ನು ಸ್ವಲ್ಪ ಬದಲಾಯಿಸಿದರೆ ಚೆನ್ನ ಎನ್ನುವುದು ನನ್ನ ಅನಿಸಿಕೆ.

balasubramanya said...

@ ದಿಗ್ವಾಸ್ , ಥ್ಯಾಂಕ್ಸ್.

balasubramanya said...

@ಜಿ.ಎಸ .ಶ್ರೀನಾಥ , ಸರ್ ಯಾವುದೇ ಒಂದು ದೃಶ್ಯವನ್ನು ನೋಡಿದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿ ಅನ್ನಿಸುತ್ತದೆ. ನನಗೆ ಹಸಿರ ಮರಗಳು ಜ್ಞಾನದ ಕುರುಹಿನಂತೆ ಕಾಣಿಸಿತು, ಇದನ್ನಿ ಕೇಳಿದ ನನ್ನ ಸ್ನೇಹಿತನಿಗೆ ಆ ಹಸಿರಮರಗಳು ಕೆಟ್ಟ ತನದಿ ಸಂಪಾದಿಸಿ ಕೊಬ್ಬಿರುವ ಜನರು,[ ನೋಡಲು ಹಸಿರಾಗಿ ಕಂಡರೂ ಜೀವನ ಶೂನ್ಯವಾಗಿರುವ ಜನ. ] ದಂತೆ ಗೋಚರಿಸಿದೆ. ಅವರವರ ಭಾವಕ್ಕೆ ತಂಕ್ಕಂತೆ ಯೋಚನೆ ಆಲ್ವಾ. ನಿಮ್ಮ ಅನಿಸಿಕೆಗಳಿಗೆ ಜೈ ಹೋ.

Ittigecement said...

ಬಾಲೂ ಸಾರ್..

ನಾವು ಬೆಂಗಳೂರಲ್ಲೇ ಇದ್ದರೂ..
ನಮಗೆ ಕಾಣದೇ ಇರುವಂಥಾದು ನೋಡಿಬಿಟ್ರಲ್ಲಾ.. ಗುರುವೆ...!!

ನಮಗೆ ನಮ್ಮ ಬಗ್ಗೆ ಬರಿಲಿಕ್ಕೆ ದುಃಖ, ಒಸಿ ಬೇಜಾರು ಆಯ್ತದೆ ಸಾಮಿ...

ನೀವು ಬರೆದದ್ದು ನೋಡು ಖುಸಿ ಪಟ್ಟೆ..

ಇಲ್ಲಿ ಇನ್ನೂ ಇದೆ.. ಒಂದಿನ ರಜೆ ಹಾಕಿ ಬನ್ನಿ.. ಓಗಾಣ..

ನಿಮ್ಮ ಸೃಜನ ಶೀಲತೆಗೆ ನಮನಗಳು...
ಜೈ ಹೋ !!

Ashok.V.Shetty, Kodlady said...

Namaste Baalu sir...Vaiyaktika kaaranagalinda kela tingalugalinda blog lokada kade baralaagalilla....nimma aneka postgalannu odilla...pursottu maadkondu ella odteeni....

nimma ee baraha tumba chennagide...ellanu badalaagta ide sir.......thanks...

ಸುಬ್ರಮಣ್ಯ said...

ನಿಮ್ಮ ಅಬ್ಸರ್ವೇಶನ್ ಚನ್ನಾಗಿದೆ. ತಮಾಷೆಯಾಗಿದೆ. ನಾನಂತೂ ಬೆಂಗಳೂರಿಗೆ ಅತಿ ಅಪರೂಪದ ಅಥಿತಿ. ಕಳೆದ ಹತ್ತು ವರ್ಷದಲ್ಲಿ ಮೂರು ಬಾರಿ ಮಾತ್ರ ಬೆಂಗಳೂರಿಗೆ ಬಂದಿದ್ದು.ಅದೂ ಒಂದು ಅಥವಾ ಎರಡ್ಮೂರು ದಿನ ಮಾತ್ರ ಇದ್ದಿದ್ದು!!!!

balasubramanya said...

@ ಪ್ರಕಾಶ್ ಹೆಗ್ಡೆ , ಅಲ್ಲಾ ಕಣಣ್ಣಾ ಈವೂರ್ ಇಸ್ಯಾನೆ ಅಂಗೆ ನಮ್ಮಂತಾ ಅಲ್ಲಿ ಐದರಿಗೆ ಅರ್ತಾನೆ ಆಗೂಕಿಲ್ಲಾ ಅಂತೀನಿ.ಆದ್ರೂವೆ ನೀಂ ಬಂದು ಸಬಾಸ್ ಅಂತಾ ಯೋಳಿದ್ದು ಬೊ ಕುಸಿ ಆಗದೆ.ಬತ್ತಾ ಇರಿ ಕಣನ್ನೋ. ನಿಮ್ಮ ಪ್ರೀತಿಗೆ ಜೈ ಹೋ.

balasubramanya said...

@ಅಶೋಕ್ಕೊದ್ಳಡಿ , ಸರ್ ನಿಮ್ಮ ಅಭಿಮಾನದ ಮಾತುಗಳಿಗೆ ಮಾರುಹೋದೆ. ನಿಮಗೆ ವಂದನೆಗಳು.ಸ್ನೇಹ ದ ದೋಣಿ ಮುಂದೆ ಸಾಗಲಿ.

balasubramanya said...

@ ಸುಬ್ರಮಣ್ಯ ಮಾಚಿಕೊಪ್ಪ, . ಸಹೋದರನ ಪ್ರೀತಿಗೆ ಶರಣು.

Sriii :-) said...

ಹಸಿರಮರಗಳು ಜ್ಞಾನವನ್ನೂ ,ಬೋಳು ಮರಗಳು ಅಜ್ಞಾನವನ್ನೂ ಮಧ್ಯೆ ಮಲಗಿರುವ ನಾಯಿಗಳು ಜ್ಞಾನ ಅಜ್ಞಾನ ದ ಅರಿವಿಲ್ಲದೆ ನಿದ್ದೆಯ ಅಮಲಿನಲ್ಲಿರುವ ಮಾನವರನ್ನೂ ಬಿಂಬಿಸುತ್ತಿರುವಂತೆ ಭಾಸವಾಯಿತು...sooper baalu sar. Nimma camera kannu heege noduttirali .....

Sri:-)

balasubramanya said...

@ ಶ್ರೀ ಪ್ರಸಾದ್ , ನಿಮ್ಮ ಪ್ರೀತಿಮಾತುಗಳು ಮನದಲ್ಲಿ ದಾಖಲಾಗಿವೆ. ನಿಮಗೆ ಥ್ಯಾಂಕ್ಸ್.

ಸುಮ said...

ಸೊಗಸಾದ ಚಿತ್ರಣ. ಹಸಿರುಮರ ಮತ್ತು ಒಣಮರಗಳ ರೂಪಕ ಅದ್ಭುತವಾಗಿದೆ.

ಮನಸು said...

chennagi tiLisiddeeri... neevu heLiddu nija bengaluru tanna hirimeyannu kaLedukonDide... matte baruvudo illavo gottilla

ಸೀತಾರಾಮ. ಕೆ. / SITARAM.K said...

ಫೋಟೋಗಳ ಸುತ್ತ ಹರಿವ ತಮ್ಮ ತರ್ಕ ನಿಜಕ್ಕೂ ಬೆರಗುಗೊಲಿಸುವನ್ತಹುದು.ರವಿ ಕಾಣದನ್ನು ಚಿತ್ರಕಾರ ಮತ್ತು ಕವಿ ಕಾಣುವ ಪರಿ ತಮ್ಮಲ್ಲಿ ಆಗಿದೆ. ಬೋಳು ಮತ್ತು ಹಸಿರು ಮರಗಳ ಮಧ್ಯೆ ಮಲಗಿರುವ ನಾಯಿಗಳ ತಮ್ಮ ತರ್ಕ ಅಧ್ಭುತ ಬಾಲು.

balasubramanya said...

@ ಸುಮ, ನಿಮ್ಮ ಅನಿಸಿಕೆಗೆ ಖುಷಿಯಾಗಿದೆ.ಥ್ಯಾಂಕ್ಸ್.

balasubramanya said...

@ ಮನಸು [ಸುಗುಣ] ಮೇಡಂ, ನಿಮ್ಮ ಅನಿಸಿಕೆ ಸೂಕ್ತವಾಗಿದೆ. ಧನ್ಯವಾದಗಳು.

balasubramanya said...

@ ಸೀತಾರಾಂ, ಸರ್ ಬಹಳ ದಿನಗಳ ನಂತರ ನಿಮ್ಮ ಭೇಟಿ ಹಾಗು ನಿಮ್ಮ ಅಭಿಮಾನದ ಬೆನ್ನು ತಟ್ಟುವಿಕೆ ನನ್ನ ಉತ್ಸಾಹ ಇಮ್ಮಡಿಗೊಳಿಸಿದೆ.ಪ್ರೀತಿ ಮಾತಿಗೆ ಶರಣು.

ಅನಂತ್ ರಾಜ್ said...

aparoopada drushyagalannu sere hididdeeri...baalu sir, maayanagariya bahumukha prdarshanagala parichayavannu maadi kottidderi...vandanegalu...

ananth

sunnysak said...

Nice Payee....

sunnysak said...

Nice Payee.. Keep writing. I might need these a lot from Next week on. you know why :)

balasubramanya said...

@ ಅನಂತರಾಜ್ ಸರ್, ನಿಮ್ಮ ಪ್ರೀತಿಯ ಆಶೀರ್ವಾದ ಪೂರ್ವಕ ಮಾತುಗಳು ಹೃದಯ ಸೇರಿವೆ . ನಿಮ್ಮ ಅನಿಸಿಕೆಗೆ ವಂದನೆಗಳು.

balasubramanya said...

@ Sunnysak , ಸಂತೋಷ ಆಯ್ತು ಕಣೋ .

balasubramanya said...

@Sunnysak, ಯೂ.ಎಸ.ಎ .ಗೆ ಹೊರಟ್ಯಾ?? , ನೀನ್ ಹೋದ್ರೆ ಬೇಜಾರಾಗುತ್ತೆ ಕಣೋ. ಅಲ್ಲಿಗೆ ಹೋದಮೇಲೆ ಎಲ್ಲರ ಕನ್ನಡ ಬ್ಲಾಗ್ ಗಳನ್ನೂ ತಪ್ಪದೆ ಓದು ಪಾಯಿ. ಹೋಗಿ ಬಾ ನಿನಗೆ ಒಳ್ಳೆದಾಗಲಿ.

ಮನಸಿನಮನೆಯವನು said...

ನೋಟಕ್ಕೆ ತಕ್ಕಂತೆ....

ಪ್ರವೀಣ್ ಭಟ್ said...

Drushtiyante srushti... nagaragalu tammali bahala vichitragalannu adagisikondive.. baraha chennagide

balasubramanya said...

@ವಿಚಲಿತ... ನೋಟಕ್ಕೆ ತಕ್ಕಂತೆ ಜೀವನದ ಆಟ .

balasubramanya said...

@ಪ್ರವೀಣ್ ಭಟ್, ನಿಮ್ಮ ಮೆಚ್ಚುಗೆಗೆ ಒಳ್ಳೆಯ ಮಾತಿಗೆ ಜೈ ಹೋ.

ಅಪ್ಪ-ಅಮ್ಮ(Appa-Amma) said...

ಬಾಲು,
ಕಾಣದ ಬೆಂಗಳೂರಿನ ಚಿತ್ರಣ ವಿಭಿನ್ನವಾಗಿದೆ.
ಬೋಳು ಮರವನ್ನು ಶೋಷಣೆಗೆ ಒಳಗಾದವರಿಗೆ ಹೋಲಿಸಿದ್ದು ಚೆನ್ನಾಗಿತ್ತು !

balasubramanya said...

@ಅಪ್ಪ-ಅಮ್ಮ(Appa-Amma) , ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

PARAANJAPE K.N. said...

ಬಾಲೂಜಿ, ಬಹಳ ದಿನ ಆಯ್ತು ನಿಮ್ಮ ಬ್ಲಾಗ್ ಕಡೆ ಬರದೆ, ಯಾವ್ಯಾವುದೋ ಒತ್ತಡಗಳಲ್ಲಿ ವ್ಯಸ್ತನಾಗಿದ್ದೆ . ನಾವು ಕಾಣದ ಬೆ೦ಗಳೂರನ್ನು ಸೆರೆ ಹಿಡಿದು ಉತ್ತಮ ಲೇಖನ ಬರೆದಿದ್ದೀರಿ. ನೀವು ಬ೦ದಿದ್ದೇ ತಿಳಿಯಲಿಲ್ಲ. ಕುಮಾರಸ್ವಾಮಿ ಬಡಾವಣೆ ಪಕ್ಕದ ಪದ್ಮನಾಭ ನಗರದಲ್ಲಿ ನಾನಿದ್ದೇನೆ. ಇನ್ನೊಮ್ಮೆ ನೀವು ನಮ್ಮಲ್ಲಿಗೆ ಬರಬೇಕು.

ಗಿರೀಶ್.ಎಸ್ said...

nijavaagalu bengaluru arthavaagada maayangane balu sir.....hosa samskruthigala serpadeyondige hale samskruthi nasha agta ide..ade reethi hosa kattadagalindaagi hale parkugala naasha agta ive....bengaluru tanna naija hirimeyannu kaledukolluttide....

balasubramanya said...

@ PARAANJAPE K.N. , ಸರ್ ಬಿಡುವಿಲ್ಲದ ಕಾರ್ಯಕ್ರಮ ಅವತ್ತು ,ಜೊತೆಗೆ ಎಲ್ಲರಿಗೂ ಆಫೀಸ್ ಕೆಲಸ ಇರುತ್ತೆ ಹಾಗಾಗಿ ನಿಮಗೆ ತಿಳಿಸಲಿಲ್ಲ. ಮುಂದಿನ ಸಾರಿ ನಿಮಗೆ ತಿಳಿಸಿ ನಿಮ್ಮ ಮನೆಗೆ ಬರುವೆ. ಲೇಖನ ಮೆಚ್ಚಿದಕ್ಕೆ ಥ್ಯಾಂಕ್ಸ್.

balasubramanya said...

@ಗಿರೀಶ್ ಎಸ್, ನಿಮ್ಮ ಅನಿಸಿಕೆ ಸರಿ. ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.