Tuesday, February 15, 2011

ಮಕ್ಕಳೂ ಸ್ವಾಮೀ ಇವರು ನಮ್ಮ ಮಕ್ಕಳು !!! ಸೂರ್ಯಂಗೇ ಬ್ಯಾಟರಿ ಬಿಡ್ತಾರೆ!!!!

ಇದೇನಿದೂ ಅಂದ್ರಾ ನಾನಿವತ್ತು ಮಕ್ಕಳ ಸಾಮ್ರಾಜ್ಯದಲ್ಲಿ ಮಕ್ಕಳು ದೊಡ್ಡವರಿಗೆ ನೀತಿ  ಪಾಠಮಾಡುವ ಕೆಲವು ಘಟನೆಗಳನ್ನುಮುಂದಿಡುತ್ತಿದ್ದೇನೆ. ಬನ್ನಿ   ಪಾಠ ಕಲಿಯೋಣ.                                                                                                             ಪಾಠ ..1 ] ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದೆ  ಮೈಸೂರಿಗೆ ಮೈಸೂರು ಮಲ್ಲಿಗೆ ಬಸ್ ಹೊರಡಲು ಸಿದ್ಧವಾಗಿತ್ತು. ಕೌಂಟರ್ ನಲ್ಲಿ ಟಿಕೆಟ್ ಪಡೆದ   ಪ್ರಯಾಣಿಕರು  ಬಸ್ ಏರಿ ಕುಳಿತುಕೊಳ್ಳುತ್ತಿದ್ದರು.ಈ ಮಧ್ಯೆ  ಇಬ್ಬರು ಹೆಂಗಸರು ಹಾಗು ಸುಮಾರು  ಆರು ವರ್ಷದ ಹುಡುಗ  ನನ್ನ ಸಾಲಿನ ಪಕ್ಕದ ಮೂರುಜನ ಕೂರುವ  ಸೀಟ್ ನಲ್ಲಿ ಕುಳಿತರು. ಬಸ್ ಹೊರಡುವ ಮೊದಲು ಟಿ.ಸಿ. ಬಸ್ನಲ್ಲಿದ್ದ ಪ್ರಯಾಣಿಕರ ಲೆಕ್ಕ ಹಾಕುತ್ತಿದ್ದರು. ಲೆಕ್ಕ ತಾಳೆಯಾಗದೆ "ಯಾರೋ ಒಂದು  ಟಿಕೆಟ್ ತಗೊಂಡಿಲ್ಲ      ದಯಮಾಡಿ ತಗೋಳಿ ಮುಂದೆ ಚೆಕಿಂಗ್ ಇದೆ" ಅಂದ್ರೂ. ಅಲ್ಲಿದ್ದ  ಪ್ರಯಾಣಿಕರೂ  ಇದು ನಮಗಲ್ಲಾ ಅಂತಾ ಅನ್ಕೊಂಡು ಸುಮ್ನೇ ಇದ್ರೂ. ಸರಿ ಶುರುವಾಯಿತು. ಪ್ರತಿಯೊಬ್ಬರ  ಟಿಕೆಟ್ ತಪಾಸಣೆ. ಒಬ್ಬರಾಗಿ ಚೆಕ್ ಮಾಡಿದ ಟಿ.ಸಿ.ಸಾಹೇಬರೂ ನನ್ನ ಪಕ್ಕದ ಸೀಟಿನ ಮಹಿಳೆಯರನ್ನೂ ಚೆಕ್ ಮಾಡಿದ್ರೂ,  ಟಿಕೆಟ್ ತಾಳೆಯಾಗದೆ. " ನೋಡಿಯಮ್ಮ  ಈ ಹುಡುಗನಿಗೆ ಫುಲ್ ಟಿಕೆಟ್  ತಗೊಬೇಕೂ  ನಿಮ್ಮತ್ರ ಅರ್ಧ ಟಿಕೆಟ್ ಇದೆ ಹೋಗಿ ಕೌಂಟರ್ನಲ್ಲಿ ಫುಲ್ ಟಿಕೆಟ್ ಮಾಡಿಸಿ" ಅಂದ್ರೂ .ಅಲ್ಲಿವರೆಗೋ ಸುಮ್ಮನಿದ್ದ  ಆ ಹುಡುಗ ತನ್ನ ತಾಯಿಯನ್ನು ಕುರಿತು  '' ಆಹಹ ಮನೇಲೆ ಹೇಳ್ದೆ  ನಾನು ಚಡ್ಡಿ  ಹಾಕೊತೀನಿ ಅಂತಾ!!! .......  ನೀನ್ ಕೆಳಿದ್ಯಾ ನನ್ನ  ಮಾತು,  ಪ್ಯಾಂಟ್ ಹಾಕೋ ಅಂತಾ ಬೈದೆ , ಈಗ ,ಈಗ ಕೊಡು ಫುಲ್ ಟಿಕೇಟು ", ಅನ್ಬಿಟ್ಟ . ಸ್ವಾಮೀ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು  ಗೊಳ್ ಅಂತಾ ನಕ್ಕಿದ್ದೆ  ನಕ್ಕಿದ್ದು  ಪಾಪ ಆ ಟಿ.ಸಿ.ಸಾಹೇಬರಿಗೆ ತಮ್ಮ ಮಕ್ಕಳ ನೆನಪಾಗಿರ್ಬೇಕೂ. "ಆಹಹ ಒಳ್ಳೆ ಬುದ್ಧಿವಂತಾ ಕಣಯ್ಯ ನೀನು ಅಂದು , ಪರವಾಗಿಲ್ಲ ಹೋಗ್ಲಿ ಬಿಡೀಮ್ಮಾ " ಅಂದು ಬಸ್ ನಿಂದ ಇಳಿದು ರೈ ರೈಟ್ ಅಂದ್ರೂ .                                                                                                                                                                                                                                                                 ಪಾಠ ..2 ] ಅದೊಂದು ಕ್ಲಾಸ್ ರೂಮು , ಮೇಷ್ಟ್ರು ಮಕ್ಕಳಿಗೆ ಪಾಠ ಮಾಡ್ತಾ ಇದಾರೆ , ಮಹಾತ್ಮಾ ಗಾಂದಿಜಿ  ಬಗ್ಗೆ  ಅವರ ಜೀವನ ಚರಿತ್ರೆ ಬಗ್ಗೆ,  ಮಕ್ಕಳೂ ಸಹ   ತನ್ಮಯತೆ   ಇಂದ ಪಾಠ  ಕೇಳಿಸ್ಕೊತಾ ಇದ್ವೂ . "  ನೋಡ್ರಯ್ಯ  ಮಹಾತ್ಮ ಗಾಂಧಿಜಿಯವರು  ಭಾರತ ದೇಶದ ಸ್ವಾತಂತ್ರ್ಯಕಾಗಿ  ಹೋರಾಡಿ ಕೀರ್ತಿ ಪತಾಕೆ ಹಾರಿಸಿದರೂ ಸತ್ಯವನ್ನು ಆಡುತ್ತಾ ಜೀವನದಲ್ಲಿ  ಸತ್ಯವಾಗಿ ಬಾಳಿದರೂ ನೀವು ಕೂಡ ಅವರ ಹಾಗೆ ಸತ್ಯವಾಗಿ ಬಾಳುವುದನ್ನು ಕಲಿಯಿರಿ ದೇಶಕ್ಕೆ ಕೀರ್ತಿ ತನ್ನಿ"ಅಂತಾ  ಹೇಳ್ತಿದ್ರೂ  , ಮಧ್ಯದಲ್ಲಿ ಏನೋ ಅನ್ನಿಸಿ  ನೋಡ್ತಾರೆ ಐದನೇ ಬೆಂಚಿನಲ್ಲಿ  ಕುಳಿತಿದ್ದ      ಪರಮೇಶಿ  ,ಕಲ್ಲೇಶಿ ಮಾತಾಡ್ತಾ  ಕುಳಿತಿದ್ರೂ,  ಇದನ್ನು ನೋಡಿದ ಮೇಷ್ಟ್ರಿಗೆ  ಉರ್ದೊಯ್ತು , ಲೇ ಕಲ್ಲೇಶಿ ಮಲ್ಲೇಶಿ ಬನ್ರೋ ಇಲ್ಲಿ ಅಯ್ಯೋ ಪಾಪಿಗಳ ನಾನು ಇಲ್ಲಿ  , ಕಷ್ಟಾಪಟ್ಟು ಆ ಪುಣ್ಯಾತ್ಮಾ  ಮಹಾತ್ಮಾ ಗಾಂಧಿಯವರ ಬಗ್ಗೆ  ಪಾಠ  ಮಾಡ್ತಿದೀನಿ ನೀವು ಇಲ್ಲಿ ತರ್ಲೆ ಮಾಡ್ತಾ ಕೂತಿದೀರ " ಅಂದ್ರೂ  ಈಗಿನ ಮಕ್ಕಳಲ್ಲವೇ ಭಯವೇ ಇಲ್ದೆ  ಮುಂದೆ ಬಂದ ಹುಡುಗರೂ ಮೇಷ್ಟ್ರ ಮುಂದೆ ನಿಂತ್ರೂ. ಲೇ ಹೇಳ್ರೋ  ನಾನು ಏನ್ ಹೇಳ್ತಿದ್ದೆ  , ಅಂತಾ ಅಂದ್ರೂ ಆಗ ಕಲ್ಲೇಶಿ ಮಲ್ಲೇಶಿ ಸುಮ್ಮನೆ ನಿಂತಿದ್ರು , ಲೇ ಅಲ್ಲಿ ಕೂತ್ಕೊಂಡು ತರ್ಲೆ ಮಾಡ್ತೀರ  ಇಲ್ಲಿ ತೋರ್ಸಿ ಬನ್ನಿ ಇಲ್ಲಿ ಪಾಠ ಮಾಡಿ ಗೊತ್ತಾಗುತ್ತೆ  ಅಂದ್ರೂ ,  ಮಕ್ಕಳು ಆಗ್ಲೂ  ಸುಮ್ನೆ ನಿಂತಿದ್ರು  , ಮೇಷ್ಟರಿಗೆ ಇನ್ನೂ ಕೋಪ ಬಂದು "ಪಾಠ ಮಾಡ್ತೀರೋ ಇಲ್ಲ  ಎರಡು ಕೊಡಲೋ"  ಅಂದ್ರೂ  ಭಯದಿಂದ ನಿಂತಿದ್ದ ಕಲ್ಲೇಶಿ ಧೈರ್ಯವಾಗಿ  ಮುಂದೆ ಬಂದು ಪಾಠ ಮಾಡಲು  ಶುರುಮಾಡಿ ಗಾಂಧಿಜಿ ಬಗ್ಗೆ ಮೇಷ್ಟು ಹೇಳಿದ್ದ ವಿಚಾರವನ್ನು  ಚಾಚು ತಪ್ಪದೆ ವಿವರಿಸಿದ. ಅಚ್ಚರಿ ಗೊಂಡ ಮೇಷ್ಟ್ರು " ಲೇ  ಕಲ್ಲೇಶಿ ಮಲ್ಲೇಶಿ, ನೀವಿಬ್ರೂ ಬುದ್ಧಿವಂತರು ಕಣ್ರೋ!! ಯಾಕ್ರೋ ಮಾತಾಡ್ತಾ ಇದ್ರೀ," ಅಂದ್ರೂ. ಆ ಮಕ್ಕಳು  "ಇಲ್ಲ ಸರ್ ಗಾಂಧೀ ಜಿಯವರಿಗೆ ತಮ್ಮನ್ನು ಹೋಲ್ಕೆ ಮಾಡ್ತಾ ಇದ್ವಿ" !!! ಅಂದವು ಮಕ್ಕಳು, .ಕುತೂಹಲ ,ಗೊಂಡ  ಮೇಷ್ಟ್ರೂ  "ಅದೇನು ಹೋಲ್ಕೆ ಮಾಡ್ತಾ  ಇದ್ರೀ    ಸರ್ಯಾಗಿ ಹೇಳ್ರಪ್ಪಾ!!!" ಅಂದ್ರೂಆಗ ಕಲ್ಲೇಶಿ "ಸರ್ ತಾವು ಆವತ್ತು ಕ್ಲಾಸ್ ನಲ್ಲಿ  ಮಹಾತ್ಮಾ ಗಾಂಧೀ ಜಿ ಚಿಕ್ಕವಯಸ್ಸಿನಲ್ಲಿ  ಬೀಡಿ ಸೇದಿ ತನ್ನ ತಪ್ಪನ್ನು ತಂದೆಯವರ ಹತ್ತಿರ ಒಪ್ಪಿಕೊಂಡು  ಅದನ್ನ ಸೇದೋದು ಬಿಟ್ರೂ , ಅಂತಾ ಪಾಠ ಮಾಡಿದ್ರಿ , ಆದ್ರೆ ಮಾರನೆದಿನ   ಅಂಗಡಿ ಬೀದೀಲಿ ನೀವೇ  ಸಿಗರೇಟ್ ಸೇದ್ತಾ ಇದ್ರೀ" ಅದಕ್ಕೆ ಪಾಠ ದಲ್ಲಿ ಬರೋದನ್ನೆಲ್ಲಾ ಪಾಲಿಸಬೇಕೂ ಅಂತಾ ನಿಯಮ ಇಲ್ಲಾ,  ಹಾಗಾಗಿ    ಅದೇ ವೆತ್ಯಾಸ ನಿಮಗೂ ಗಾಂಧಿಜಿ ಗೂ ಅಂತಾ ಮಾತಾಡ್ತಾ ಇದ್ವಿಸಾರ್ !!! ಅಂದ್ರೂ ಪೆಚ್ಚಾದ ಮೇಷ್ಟ್ರು  ಅಲ್ಲಿಂದ ಜಾಗ ಖಾಲಿ !!!! ಅವತಿಂದ ಸಾರ್ವಜನಿಕವಾಗಿ ಸಿಗರೇಟ್ ಸೇದೊದನ್ನು ಬಿಟ್ರೂ  .ಆ ಮೇಷ್ಟ್ರು.
                                                                                                                                                                                  ಪಾಠ ..3 ]..ಅದೊಂದು ಹುಡುಗಿಯರ  ಹೈಸ್ಕೂಲು  ಝಾನ್ಸಿ ಮೇಡಂ ರಾಸಾಯನಿಕಗಳ ಬಗ್ಗೆ ಪಾಠ  ಮಾಡ್ತಾ ಇದ್ರೂ  "ನೋಡಿ ಮಕ್ಳೆ ರಾಸಾಯನಿಕಗಳು  ಇಂದು  ಎಲ್ಲಾ ರೀತಿಯಲ್ಲೂ ನಮ್ಮ ಜೀವನದೊಳಗೆ  ಬೆರೆತು ಹೋಗಿವೆ, ನಾವು ಎಚ್ಚರ ವಹಿಸದೆ ಹೋದ್ರೆ  ನಮ್ಮ ಬಾಳು ಸರ್ವನಾಶವಾಗುತ್ತದೆ. ಇಂದು ನೋಡಿ ತಿನ್ನುವ ಆಹಾರ ಬೆಳೆಯಲು ಸಾವಯವ ಗೊಬ್ಬರ ಬದಲಾಗಿ  ರಾಸಾಯನಿಕ ಗೊಬ್ಬರ , ನಿಮ್ಮ ಬಟ್ಟೆ ತಯಾರಿಸಲು ರಾಸಾಯನಿಕ, ನೀವು ಉಪಯೋಗಿಸುವ ಟೂತ್ ಪೇಸ್ಟ್ ,ಸೋಪು, ಬಟ್ಟೆ ಸೋಪು, ಪೌಡರ್ ಎಲ್ಲದರಲ್ಲಿಯೂ  ರಾಸಾಯನಿಕ ಬಳಸುತ್ತಾರೆ. ನೀವು ಇವುಗಳ ಸಂಕೋಲೆಯಿಂದ ಹೊರಬಂದು  ರಾಸಾಯನಿಕ ವಿಷವರ್ತುಲ ಇಲ್ಲದೆ ಜೀವಿಸಬೇಕೂ ,ನಾವಿಂದು ಭೂಮಿಯನ್ನು  ರಾಸಾಯನಿಕ ವಿಷವರ್ತುಲದಿಂದ ಮುಕ್ತ ಗೊಳಿಸಬೇಕಿದೆ ,ಬನ್ನಿ ಇಂದೇಈ ಬಗ್ಗೆ ನೀವುಗಳು ಯೋಚಿಸಿ ಕೆಮಿಕಲ್ ಇಲ್ಲದ ಜೀವನ ನಡೆಸಿ ,  ನಾನಂತೂ ಈ ಬಗ್ಗೆ ಈಗಾಗಲೇ ರಾಸಾಯನಿಕ ವಿಲ್ಲದ ಪದಾರ್ಥ ಉಪಯೋಗಿಸಿ ಆರೋಗ್ಯ ವಾಗಿದ್ದೇನೆ" ಅಂದ್ರೂ     ಕ್ಲಾಸಿನ ತರ್ಲೆ ಹುಡುಗಿ ಸಂಜನಾ " ಇಷ್ಟೆಲ್ಲಾ ನಂಗೆ ಗೊತ್ತೇ ಇರ್ಲಿಲ್ಲ  ಮಿಸ್ ರಾಸಾಯನಿಕಗಳ ಬಗ್ಗೆ ತುಂಬಾ ಮಾಹಿತಿ ಕೊಟ್ರೀ ,ಆದ್ರೆ  ಆದ್ರೆ ಅಂತಾ  ನಿಲ್ಲಿಸಿದಳು. "ಪರವಾಗಿಲ್ಲಾ ಹೇಳು ಸಂಜನಾ  " ಅಂದ್ರೂ ಮೇಡಂ . ಅಲ್ಲಾ ಮಿಸ್  ಎಲ್ಲಾದರಲ್ಲೂ ರಾಸಾಯನಿಕ ಇದ್ಮೇಲೆ ತಾವು ಹಾಕಿರುವ ಸೀರೆ ಯಲ್ಲಿನ ಬಣ್ಣ , ಸ್ಲಿಪ್ಪರ ಬಣ್ಣ ,ವ್ಯಾನಿಟಿ ಬ್ಯಾಗ್  ಬಣ್ಣ,ವಾಚು, ಮೊಬೈಲ್ ,  ನೈಲ್ ಪಾಲಿಶ್ , ಹೇರ ಶಾಂಪೂ , ಹೇರ ಕ್ರೀಂ ಜೊತೆಗೆ ನೀವು ಮುಖಕ್ಕೆ ಬಳಸಿರೋ ಲೋಶನ್ , ಐ ಲೈನರ್ , ಲಿಪ್ಸ್ಟಿಕ್  ಇದರಲ್ಲೂ  ರಸಾಯನಿಕಾ ಇರ್ಬೇಕಲ್ವಾ  ಮಿಸ್" ಅಂದ್ಲೂ!!!!! ಇದನ್ನು ಯೋಚಿಸಿರದ   ಮಿಸ್ ಮುಖದ ಮೇಲಿದ್ದ ಕೆಮಿಕಲ್ ಬೆವರಾಗಿ ಕರಗಿ ಹೋಗಿತ್ತು.
ಈಗ ಹೇಳಿ ಇಂದಿನ ಮಕ್ಕಳು ಸೂರ್ಯನಿಗೆ ಟಾರ್ಚ್ ಬಿಡೋ ಅಷ್ಟು ಬುದ್ಧಿವಂತರಲ್ಲವೇ . ಹಿರಿಯರು ಮಕ್ಕಳ ಮುಂದೆ ತಾವು ಏನು ಹೇಳಿದ್ರೂ ನಡೆಯುತ್ತೆ ಅನ್ನೋದನ್ನು  ಬಿಟ್ಟು ಯೋಚಿಸಿ ವ್ಯವಹರಿಸುವುದು ಸೂಕ್ತ. ಇಲ್ಲದಿದ್ದಲ್ಲಿ ನಮ್ಮ ಪಾಡು ಇಷ್ಟೇ ಆಲ್ವಾ>>>...!!!! ಏನಂತೀರ.                                             

34 comments:

ಸಿಮೆಂಟು ಮರಳಿನ ಮಧ್ಯೆ said...

ಬಾಲೂ ಸರ್...

ನನ್ನ ಬಾಲ್ಯದ ನೆನಪುಗಳನ್ನು ಹಸಿರಾಗಿಸಿದ್ದೀರಿ...

ಆ ವಯಸ್ಸಿನ ತುಂಟತನಗಳು...
ಆಟ.. ಕುಣಿತಗಳು ಸೊಗಸಾಗಿರುತ್ತದೆ...

ಹೊಟ್ಟೆ ತುಂಬ ನಗಿಸಿದ್ದಕ್ಕೆ ಧನ್ಯವಾದಗಳು... ಜೈ ಹೋ !

ಜಲನಯನ said...

ಬಾಲು ಕಥೆಯ ಮಾರ್ಮಿಕ ಚಾಟಿ ಏಟು...ನಮ್ಮಂಥ ಹಿರಿಯರಿಗೆ...ಹೌದು ಮಕ್ಕಳಿಗೆ ಹೇಳುವ ನಾವು ಅವರು ಅನುಸರಿಸುವ ಮಾದರಿ ಪಾಲಿಸ್ತಿದ್ದೀವಾ ಎನ್ನುವುದು...ಬಾಲ್ಯ ಎಲ್ಲ ನೋಡಿಕಲಿವ ವಯಸು ಹಾಗಾಗಿ ನಮ್ಮ ನಡೆ ಸದಾ ಅವರ ದೃಷ್ಠಿಯಲ್ಲಿರುತ್ತೆ...ಅನ್ನೋದನ್ನ ಮರೀಬಾರ್ದು..ಚನ್ನಾಗಿದೆ

HegdeG said...

Super, chendada baraha.

nimmolagobba said...

@ ಪ್ರಕಾಶ್ ಅಣ್ಣ , ಕೆಲವು ಘಟನೆಗಳು ನಾನು ಹತ್ತಿರದಿಂದ ನೋಡಿದ್ದು, ಇನ್ನು ಕೆಲವು ಶಿಕ್ಷಕರಿಂದ ಕೇಳಿದ್ದು , ಮಕ್ಕಳನ್ನು ದೊಡ್ಡವರು ಎಮಾರಿಸಲು ಸಾಧ್ಯವಿಲ್ಲ , ನೀವು ಓದಿ ನಕ್ಕಿದ್ದಕ್ಕೆ ನನಗೆ ಖುಷಿಯಾಗಿದೆ , ಜೈ ಹೋ ,ಅಂದಹಾಗೆ ನಿಮ್ಮ ಮಗ ಯಾವಾಗಲೂ ನಿಮಗೆ ಬ್ಯಾಟರಿ ಬಿಟ್ಟಿಲ್ವಾ???

nimmolagobba said...

@ ಅಜಾದ್ ಸರ್ [ಜಲನಯನ] ನೀವು ಹೇಳಿದ್ದು ನಿಜ , ನಾವು ದೊಡ್ಡವರು ಮಕ್ಕಳಿಗೆ ಏನು ಹೇಳಿದ್ರೂ ನಡೆಯುತ್ತೆ ಅನ್ನೋ ಮನೋಬಾವ ನಮ್ಮಲ್ಲಿದೆ, ಜೊತೆಗೆ ಮಕ್ಕಳೂ ಅಂದ್ರೆ ಅವುಕ್ಕಾ ಏನೂ ಗೊತ್ತಿಲ್ಲಾ ಅನ್ಕೊತೀವಿ , ಹಾಗೆ ಅನ್ಕೊಂಡು ಅವರ ಕೈಲಿ ಹೀಗೆ ಬ್ಯಾಟರಿ ಬಿಡಿಸ್ಕೊತೀವಿ !!! ಲೇಖನ ಮೆಚ್ಚಿದ್ದಕ್ಕೆ ಸಲಾಂ

nimmolagobba said...

@ ಹೆಗ್ಡೆ .ಜಿ , ನಿಮ್ಮ ಮೊದಲ ಭೇಟಿಗೆ ಸ್ವಾಗತ ,ಅನಿಸಿಕೆಗೆ ಥ್ಯಾಂಕ್ಸ್.

Sriii :-) said...

Baalu sir,

Chennagide hasyada tunukugalu. Omme nanna baalya nenapayitu

ಚುಕ್ಕಿಚಿತ್ತಾರ said...

hha..hha..hha.. channaagide..

ಮನಸು said...

baalu sir, oLLeya lekhana.... namage kivi maatu kooDa

sunaath said...

ಬಾಲು,
‘ಈಗಿನ ಹುಡುಗರು ಸೂರ್ಯನಿಗೇ ಬ್ಯಾಟರಿ ಬಿಡೋರು’ ಎನ್ನೋದು ಅತ್ಯಂತ ಸಮಂಜಸ ವರ್ಣನೆಯಾಗಿದೆ. ಅವರ ಬೆಳಕಿನಲ್ಲೇ ದೊಡ್ಡೋರು ದಾರಿ ಕಾಣಬೇಕಾಗಿದೆ!

ಮಹಾಬಲ ಗಿರಿ ಭಟ್ಟ said...

ನಮ್ಮೊಳಗೊಬ್ಬ ಬಾಲು ಸರ್ ನಿಮ್ಮ ಕತೆಯನ್ನ ಓದಿ ನಿನ್ನೆ ರಾತ್ರಿ ಒಬ್ಬನೇ ಬಿದ್ದು ಬಿದ್ದು ನಕ್ಕೆ ಆದರೆ ನನ್ನ ನಗುವಿಕೆಗೆ ಕಾರಣ ತಿಳಿಯದ ನನ್ನ ಸ್ನೇಹಿತ ನನ್ನನ್ನ ಪ್ರಶ್ನಾರ್ತಕವಾಗಿ ನೋಡ್ತಿದ್ದ ....ಅದೂ ನಿನ್ನೆ ರಾತ್ರಿ ೧೨ ಘಂಟೆರಾತ್ರಿಗೆ ಅವನಿಗೂ ನಿಮ್ಮ ಕಥೆಯನ್ನ ಓದಿದ ಮೇಲೆ ನಗುವನ್ನ ತಡೆಯಲಾಗಲಿಲ್ಲ.... ಧನ್ಯವಾದಗಳು
(ಎರಡನೆಯ ಕಥೆ ಗಂಭೀರ ಚಿಂತನೆಗೆ ಏಡೆಮಾಡಿ ಕೊಡುತ್ತದೆ)


ಇಂತಿ ನ್ನಿಮ್ಮ ಪ್ರೀತಿಯ ನಿಮ್ಮೊಳಗೊಬ್ಬ ಭಟ್

ಮಹಾಬಲ ಗಿರಿ ಭಟ್ಟ said...

ನಮ್ಮೊಳಗೊಬ್ಬ ಬಾಲು ಸರ್ ನಿಮ್ಮ ಕತೆಯನ್ನ ಓದಿ ನಿನ್ನೆ ರಾತ್ರಿ ಒಬ್ಬನೇ ಬಿದ್ದು ಬಿದ್ದು ನಕ್ಕೆ ಆದರೆ ನನ್ನ ನಗುವಿಕೆಗೆ ಕಾರಣ ತಿಳಿಯದ ನನ್ನ ಸ್ನೇಹಿತ ನನ್ನನ್ನ ಪ್ರಶ್ನಾರ್ತಕವಾಗಿ ನೋಡ್ತಿದ್ದ ....ಅದೂ ನಿನ್ನೆ ರಾತ್ರಿ ೧೨ ಘಂಟೆರಾತ್ರಿಗೆ ಅವನಿಗೂ ನಿಮ್ಮ ಕಥೆಯನ್ನ ಓದಿದ ಮೇಲೆ ನಗುವನ್ನ ತಡೆಯಲಾಗಲಿಲ್ಲ.... ಧನ್ಯವಾದಗಳು
(ಎರಡನೆಯ ಕಥೆ ಗಂಭೀರ ಚಿಂತನೆಗೆ ಏಡೆಮಾಡಿ ಕೊಡುತ್ತದೆ)


ಇಂತಿ ನ್ನಿಮ್ಮ ಪ್ರೀತಿಯ ನಿಮ್ಮೊಳಗೊಬ್ಬ ಭಟ್

ಮಹಾಬಲ ಗಿರಿ ಭಟ್ಟ said...

ನಮ್ಮೊಳಗೊಬ್ಬ ಬಾಲು ಸರ್ ನಿಮ್ಮ ಕತೆಯನ್ನ ಓದಿ ನಿನ್ನೆ ರಾತ್ರಿ ಒಬ್ಬನೇ ಬಿದ್ದು ಬಿದ್ದು ನಕ್ಕೆ ಆದರೆ ನನ್ನ ನಗುವಿಕೆಗೆ ಕಾರಣ ತಿಳಿಯದ ನನ್ನ ಸ್ನೇಹಿತ ನನ್ನನ್ನ ಪ್ರಶ್ನಾರ್ತಕವಾಗಿ ನೋಡ್ತಿದ್ದ ....ಅದೂ ನಿನ್ನೆ ರಾತ್ರಿ ೧೨ ಘಂಟೆರಾತ್ರಿಗೆ ಅವನಿಗೂ ನಿಮ್ಮ ಕಥೆಯನ್ನ ಓದಿದ ಮೇಲೆ ನಗುವನ್ನ ತಡೆಯಲಾಗಲಿಲ್ಲ.... ಧನ್ಯವಾದಗಳು
(ಎರಡನೆಯ ಕಥೆ ಗಂಭೀರ ಚಿಂತನೆಗೆ ಏಡೆಮಾಡಿ ಕೊಡುತ್ತದೆ)

ಇಂತಿ ನ್ನಿಮ್ಮ ಪ್ರೀತಿಯ ನಿಮ್ಮೊಳಗೊಬ್ಬ ಭಟ್

nimmolagobba said...

@ ಶ್ರೀ ಪ್ರಸಾದ್ ,ನಿಮ್ಮ ಚಂದದ ಮಾತುಗಳಿಗೆ ಜೈ ಹೋ.

nimmolagobba said...

@ಚುಕ್ಕಿಚಿತ್ತಾರ, ನಿಮ್ಮ ಅನಿಸಿಕೆಗೆ ಧನ್ಯವಾದಗಳು.

nimmolagobba said...

@ಮೃದು ಮನಸ್ಸಿನ ಸುಗುಣ ,ಒಳ್ಳೆಯದನ್ನು ಸ್ವೀಕರಿಸುವ ನಿಮ್ಮ ಒಳ್ಳೆಯಗುಣಕ್ಕೆ ಜೈ,ಹೋ. ಧನ್ಯವಾದಗಳು.

nimmolagobba said...

@ಸುನಾಥ್,ಸರ್ ನಿಮ್ಮ ಅಭಿಪ್ರಾಯ ಚೆನ್ನಾಗಿದೆ. ನಿಮಗೆ ಧನ್ಯವಾದಗಳು..

nimmolagobba said...

@ ಮಹಾಬಲ ಗಿರಿ ಭಟ್ಟ ,ಸರ್ ನಿಮ್ಮ ಪ್ರೀತಿಯ ಮೂರು ಕಾಣಿಕೆಗಳು ತಲುಪಿವೆ.ಮಧ್ಯರಾತ್ರಿ ನಕ್ಕ ನಿಮಗೆ ಹಾಗೂ ನಿಮ್ಮ ಗೆಳೆಯನಿಗೆ ಜೈ ಹೋ.ನಿಮ್ಮ ಮೂರೂ ಕಾಮೆಂಟುಗಳಿಗೆ ಒಂದೇ ಸಾರಿ ಥ್ಯಾಂಕ್ಸ್.

jithendra hindumane said...

nice:)

nimmolagobba said...

@ ಜಿತೇಂದ್ರ ಹಿಂಡುಮನೆ , :-)) ಥ್ಯಾಂಕ್ಸ್.

ಮನದಾಳದಿಂದ............ said...

ಬಾಲು ಸರ್..........
ಸೂರ್ಯನಿಗೆ ಟಾರ್ಚು ಹಾಕುವ ಮಕ್ಕಳಲ್ಲ, ಈಗಿನ ಮಕ್ಕಳು ಸೂರ್ಯನನ್ನೇ ಭೂಮಿಗಿಳಿಸುವ ಚಾಣಾಕ್ಷರು!

ಹ್ಹ ಹ್ಹ ಹ್ಹಾ.........
ಚೆನ್ನಾಗಿದೆ.

shridhar said...

vicharisa takkanta baraha // chennagide .. Indina Makkalige buddi HeLuvaaga naavu nettagirabeku ..

Nanu intaha halavu ghatanegaLannu kaMdiddene ..

shivu.k said...

ಬಾಲು ಸರ್,

ಈಗಿನ ಮಕ್ಕಳ ಬಗ್ಗೆ ಉತ್ತಮ ಉದಾಹರಣೆಗಳ ಸಮೇತ ಬರೆದಿದ್ದೀರಿ. ನಿಮ್ಮ ಮಾತು ನಿಜ. ಅವರ ಚುರುಕುತನ, ತುಂಟತನಗಳನ್ನು ನಾವು enjoy ಮಾಡಬೇಕಷ್ಟಲ್ಲದೇ ಅದನ್ನು ಕೆದಕಲಿಕ್ಕೆ ಹೋದರೆ...ಅಷ್ಟೇ...ನಿಮ್ಮ ಮೂರು ಪಾಠಗಳನ್ನು ಓದಿ ನಗು ಬಂತು...ಚೆನ್ನಾಗಿ ಬರೆದಿದ್ದೀರಿ...

nimmolagobba said...

@ ಮನದಾಳದಿಂದ [ಪ್ರವೀಣ್ ಆರ್ ಗೌಡ ] ಸರ್, ನಿಮ್ಮ ಒಳ್ಳೆಯ ಅನಿಸಿಕೆಗಾಗಿ ಥ್ಯಾಂಕ್ಸ್.ಹೌದು ನಿಜ ಈ ಮಕ್ಕಳೂ ಸೂಯನನ್ನೇ ಭೂಮಿಗೆ ಇಳಿಸುತ್ತವೆ.

nimmolagobba said...

@ ಶ್ರೀಧರ್ , ನಿಮ್ಮ ಮೆಚ್ಚುಗೆಗೆ ಜೈ.ಹೋ.

nimmolagobba said...

@ ಶಿವೂ , ನಿಮ್ಮ ಮಾತು ನಿಜ ಮಕ್ಕಳನ್ನು ಉಡಾಫೆ ಮಾಡಿದ್ರೆ ಅವು ಕಲಿಸುವ ಪಾಠ ಮ್ರ್ಯೋಕೆ ಆಗಲ್ಲ , ಅವು ನಮ್ಮ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ನಿಮ್ಮ ಅನಿಸಿಕೆ ಗೆ ಥ್ಯಾಂಕ್ಸ್.

ಅಪ್ಪ-ಅಮ್ಮ(Appa-Amma) said...

ಬಾಲು,

ಮಜವಾಗಿದ್ದವು ಮಕ್ಕಳ ಪಾಠಗಳು :)
ನಿಜಕ್ಕೂ ಬ್ಯಾಟರಿನೇ ಇದು !

nimmolagobba said...

@ಅಪ್ಪ-ಅಮ್ಮ(Appa-Amma), ಹೌದು ಇಂದಿನ ಮಕ್ಕಳೇ ಹಾಗೆ . ನಿಮ್ಮ ಮಾತುಗಳಿಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಜೈ ಹೋ೧!

nimmolagobba said...

@ ಸೀತಾರಾಮ. ಕೆ. / SITARAM.K , ಜೈ ಹೋ ಸರ್

Badarinath Palavalli said...

ಹೈಟ್ಲಗ ಮಕ್ಕಳಂದ್ರೆ ಹಿಂಗೇನೇ ಅವು ಬಿಡೋ ರಾಕೆಟ್ಟು ಗುರಿ ತಪ್ಪೋದೇ ಇಲ್ಲ.
ಅವರ ಗ್ರಹಿಕೆ ಶಕ್ತಿ ಮತ್ತು ಅದನ್ನು ಪ್ರಾಯೋಗಿಕ ಮಾಡೋ ರೀತಿಯೇ ಅಮೋಘ!

Harini Narayan said...

ಈಗಿನ್ ಮಕ್ಕಳ್ ಮುಂದೆ ಏನೂ ಮಾತಾಡೋ ಹಾಗಿಲ್ಲಾ.. " ಅರಸ ಆರು ಮೊಳಾ ಅಂದ್ರೆ , ಬಂಟ ಎಂಟ್ ಮೊಳಾ " ಅನ್ನೋ ಹಾಗೆ .. ಅವರ ಬಗ್ಗೆ ತಿಳ್ಕೊಳ್ಳೋಕೆ ವ್ಯವಧಾನ ಬೇಕು ಅಷ್ಟೇ.. ಚೆನ್ನಾಗಿ ಮೂಡಿ ಬಂದಿದೆ. ಮಕ್ಕಳ ಮನಸು...

Harini Narayan said...

ಮಕ್ಕಳೂ ನಮಗೆ ಒಮ್ಮೊಮ್ಮೆ ಪಾಠ ಕಲಿಸುತ್ತಾರೆ. ದೊಡ್ದವರೆಲ್ಲ ಜಾಣರಲ್ಲ :)

Harini Narayan said...

ಮಕ್ಕಳೂ ನಮಗೆ ಒಮ್ಮೊಮ್ಮೆ ಪಾಠ ಕಲಿಸುತ್ತಾರೆ. ದೊಡ್ದವರೆಲ್ಲ ಜಾಣರಲ್ಲ :)