Thursday, July 22, 2010

ಚಿಕ್ಕ ಮಂಗಳೂರ್ ಅಲ್ಲ ,ಚಿಕ್ಕಮಗಳೂರ್ ಮರಿ !!! ಚಿಕ್ಕಮಗಳೂರು.ತುಂತುರು ಮಳೆಯಲ್ಲಿ ದರ್ಶನ ..!!

ಲೇಯ್  ಬಾಲು ನಾಳೆ ನೀನು ಚಿಕ್ಕಮಂಗಳೂರಿಗೆ ಅನಿ ಜೊತೆ ಬರಬೇಕು ಆಯ್ತಾ , ಬರ್ಲಿಲ್ಲ ಅಂದ್ರೆ ಗೊತ್ತಲ್ಲ !!! ಅಂತ ಕಳೆದ ಶನಿವಾರ ರಾತ್ರಿ  ಬೆಂಗಳೂರಿನ  ಗೆಳೆಯ ಬಿಂದುಕುಮಾರ್ ಮೊಬೈಲ್ ನಿಂದ ಜಬರ್ದಸ್ತಾಗಿ  ಆದೇಶ ಮಾಡಿದ . ನಾನು ಅಲ್ಲಾ  ಬಿಂದು, ಸ್ವಲ್ಪ ಕೆಲಸ ಇದೆ ತಾಳಪ್ಪ ನೋಡ್ತೀನಿ, ನಂತರ ನಿನಗೆ ಫೋನ್ ಮಾಡ್ತೀನಿ ಅಂದೇ ,ಆದ್ರೆ ಪಾರ್ಟಿ ಕೇಳಬೇಕಲ್ಲ  ಅಮ್ಮನಿಗೆ ಫೋನ್ ಕೊಡು ಅಂದ! ಕೊಟ್ರೆನನ್ನ ತಾಯಿ ಹತ್ರ  ನನ್ನಮೇಲೆ ಫಿಟ್ಟಿಂಗು!! ನಮ್ಮ ತಾಯಿ ಪಾಪ ಕರಿತಿದಾನೆ ಹೊಗೊಕಾಗಲ್ವ ಅನ್ನೋದೇ!!.ಅದಕ್ಕೆ ನನ್ನ ಹೆಂಡತಿ ಸಾತ್ ಬೇರೆ. ಸರಿ ಬಿಡಪ್ಪಾ ಬರ್ತೀನಿ ಅಂತ ಹೇಳಿ ನಾನು ಅನಿ  ಮೈಸೂರಿನಿಂದ ಚೆನ್ನರಾಯ ಪಟ್ಟಣಕ್ಕೆ ಬರ್ತಿವಿ ನೀನು ಬೆಂಗಳೂರಿನಿಂದ  ಅಲ್ಲಿಗೆ ಬಾ  ಅಲ್ಲಿಂದ ನಿನ್ನ ಬೋಲಾರೋದಲ್ಲಿ ಹೋಗೋಣ ಅಂತ ಹೇಳಿ ಫೋನ್ ಇಟ್ಟೆ.ನನ್ನ ಕ್ಯಾಮರಾ ಬ್ಯಾಟರಿ ಚಾರ್ಜ್ ಗೆ ಹಾಕಿ  ಮಾರನೆಯದಿನ ಹೊರಡಲು ಸಿದ್ದನಾಗಲು ಶುರುಮಾಡಿದೆ.ಭಾನುವಾರ ಬೆಳಿಗ್ಗೆ ಪಯಣ ಆರಂಭ  ಮುಂಜಾನೆ ಮನೆ ಇಂದ  ಬಸ್ ಸ್ಟ್ಯಾಂಡ್ ಗೆ  ನಂತರ ಮೈಸೂರಿನಿಂದ ಚನ್ನರಾಯ ಪಟ್ಟಣದ ವರೆಗೆ  ನಾನು ನನ್ನ ಗೆಳೆಯ ಅನಿಲ್, ಅವನಮಗ ಅಜಂತ್ ತಲುಪಿದೆವು.ಚನ್ನರಾಯ ಪಟ್ಟಣದಲ್ಲಿ ತಿಂಡಿ ತಿಂದು ಹೊರಗೆ ಬರುವಷ್ಟರಲ್ಲಿ ಬಿಂದು ಕುಮಾರ್ ಎಲ್ಲಿದ್ದಿರೋ??? ಅಂತ ಫೋನ್ ಮಾಡಿದ .ನಾವು ಇದ್ದ ಜಾಗಕ್ಕೆ ಹತ್ತಿರ ಇದ್ದ ಅವನನ್ನು ತಲುಪಿ ಅವನ ಬೋಲಾರೋದಲ್ಲಿ ಕುಳಿತೆವು.ಅಲ್ಲಿ ಅವನ ತಾಯಿ ತಂಗಿ,ಚಿಕ್ಕಮ್ಮ, ಅವನ ಮಗ ಸುಜಲ್ ಇದ್ದರು.ಸಾರಿ ಕಣೋ ಬಾಲು ನಿನಗೆ ವಿಷಯ ತಿಳಿಸಲು ಆಗ್ಲಿಲ್ಲ ಚಿಕ್ಕಮಂಗಳೂರಿನ  ಹತ್ತಿರದಲ್ಲಿ  ಜಮೀನು ಖರೀದಿಸಿದ್ದಿನಿ ಅಲ್ಲಿಗೆ ನಿನ್ನನ್ನು ತೋರಿಸುವ ಸಲುವಾಗಿ ಬರೋದಿಕ್ಕೆ ಹೇಳ್ದೆ ಅಂದ .ಹೌದ ಸರಿ ನಡೀ ಅಂದೇ ಪಯಣ ಚನ್ನರಾಯ ಪಟ್ಟಣದಿಂದ  ಹಾಸನ,ಬೇಲೂರು  ಮಾರ್ಗವಾಗಿ ಅವನ ಬೋಲಾರೋ ಸಾಗಿತ್ತು.ತಣ್ಣೀರ ಭಾವಿ ಸಮೀಪ ಒಂದು ತಿರುವಿನಲ್ಲಿ
  ಗಾಡಿ ನಿಲ್ಲಿಸಿದ ಬಿಂದು, ಬಾಲು ನೋಡು!! ಇಲ್ಲೇ ಗುರು ನಾನು ಆಕ್ಸಿಡೆಂಟ್ ನಿಂದ ಬಚಾವಾಗಿದ್ದು.ಅಂದ ಸ್ವಲ್ಪ ದಿನಗಳ ಹಿಂದೆ ಇವನ ಬೋಲಾರೋ ಈ ತಿರುವಿನಲ್ಲಿ ಎದುರುಗಡೆ ವಾಹನ  ಗುದ್ದುವುದನ್ನು ತಪ್ಪಿಸಲು ಪಕ್ಕಕ್ಕೆ ಸರಿದು ಉರುಳಿ ಈ ಜಾಗದಲ್ಲಿ ಪಲ್ಟೀ ಹೊಡೆದು  ಜಖಂ  ಗೊಂಡಿತ್ತು ಇವನು ಸಾವನ್ನು ಗೆದ್ದುಬಂದಿದ್ದ. ಆ ಜಾಗವೂ ಸಹ ಅಪಘಾತಗಳ ತಾಣವಾಗಿದ್ದು ಬದುಕಿಬಂದವರು ಬಹಳ ಅಪರೂಪವೆಂದು ತಿಳಿಯಿತು.ಎಲ್ಲರ ಮುಖದಲ್ಲೂ ಬೇಸರ ಛಾಯೆ ಗಮನಿಸಿದ ನಾನು ಸರಿ ಬಿಡಪ್ಪ ನನ್ನ ಕ್ಯಾಬಿನೆಟ್ಟಿನಲ್ಲಿ ಬಿಲ್ ಪಾಸ್ ಮಾಡಿ ಇಲ್ಲಿ ನಿನ್ನ ಹೆಸರಿನಲ್ಲಿ ಒಂದು ಅಪಘಾತ ಸ್ಮಾರಕ ಕಟ್ಟಿಸಲು ಪ್ರಯತ್ನಿಸುತ್ತೇನೆ ಅಂದೇ ಎಲ್ಲರೂ ಗೊಳ್ ಎಂದು ನಗುತ್ತ ಪಯಣ ಮುಂದುವರೆಸಿ ಚಿಕ್ಕಮಗಳೂರಿನ ಮೂಲಕ ಜಮೀನಿದ್ದ ಹಳ್ಳಿ ಎಮ್ಮೆಕಾನ್ ಹತ್ತಿರ ಗಾಳಿಪೂಜೇ ಎಂಬ ಹಳ್ಳಿಗೆ ಬಂದೆವು
ಸ್ಥಳೀಯರಾದ  ಇಬ್ಬರು ಸ್ನೇಹಿತರು ಅಲ್ಲಿ ಜೊತೆಗೂಡಿ ಖರೀದಿಸಲು ಉದ್ದೇಶಿಸಿದ್ದ ಕಾಫಿ ತೋಟವನ್ನು ತೋರಿಸಲು ಸಹಕರಿಸಿದರು.ಚಿಕ್ಕಮಗಳೂರು  ಶಿವಮೊಗ್ಗ ರಸ್ತೆಯಲ್ಲಿರುವ  ಒಂದು ತೋಟ ಒಳಗಡೆ ಪ್ರವೇಶಿಸಿದರೆ ಒಂದು ಸುಂದರ ಮನೆ  ಪಕ್ಕದಲ್ಲಿ ತೋಟ ಬನ್ನಿ ಸಾರ್ ತೋಟ ನೋಡೋಣ ಅಂದ್ರು ಶ್ರೀನಿವಾಸ್ ಸರಿ ನಡೀರಿ  ಅಂತ ತುಂತುರು ಮಳೆಹನಿಯಲ್ಲಿ  ತೋಯುತ್ತಾ ತೋಟ ನೋಡಲು ಹೊರಟೆವು.ಅಲ್ಲೇ ಪಕ್ಕದಲ್ಲಿ ಕಲ್ಲಿನ ಪುಟ್ಟ ಮನೆಯಲ್ಲಿ
ನಾಯಿಯೊಂದು ತನ್ನ ಮರಿಗಳಿಗೆ ಹಾಲು ಉಣಿಸುತ್ತಿತ್ತು ತಾಯಿ ಹಾಗು ಕಂದಮ್ಮಗಳ ವಾತ್ಸ್ಯಲ್ಲ್ಯ ಭರಿತ ನೋಟ ಮುದನೀಡಿತು.ನಡಿಗೆ ಸಾಗಿ ತೋಟ ಹೊಕ್ಕೆವು  ಕಡಿದಾದ ಗುಡ್ಡ ಏರಲು ತುಂತುರು ಮಳೆಯ ಪ್ರೇರಣೆ ಹಿತವಾಗಿತ್ತು . ಏದುಸಿರು ಬಿಡುತ್ತ ಸಾಗಿದ ನಮಗೆ
ತಣ್ಣನೆ ಗಾಳಿ ಸಾತ್ ನೀಡಿ ಚಳಿ ಚಳಿ ಯಾಗಿತ್ತು.ಪಟ್ಟಣದ ಜೀವನಕ್ಕೆ ಹೊಂದಿಕೊಂಡಿದ್ದ ಜೀವಗಳು ಸಣ್ಣ ಗುಡ್ಡ ಏರಲು ತಿನುಕಾದಿದ್ದವು  ಹಾಗೆ ಸಾಗಿದ್ದ ನಮಗೆ
ಮಳೆಯ ಸಿಂಚನಕ್ಕೆ ನಲಿದಾಡಿ ಮುದದಿಂದ ಮರ ನರ್ತಿಸಿ  ನಾಟ್ಯ ವಾಡಿತ್ತು. ಕಾಫಿ ಗಿಡಗಳ ಮಧ್ಯೆ ಸಾಗಿದ್ದ
ನಮಗೆ ಮಳೆಯ ಹನಿ ನೆಲಕ್ಕೆ ಬಿದ್ದು ಸುವಾಸನೆ ಭರಿತ ವಾತಾವರಣ ಮುದನೀಡಿತ್ತು.ಹಸಿರು ಗೋಲಿಗಳಂತೆ ಕಾಫಿ ಕಾಯಿ ಗಿಡದಲ್ಲಿ ತೊನೆದಾಡುತ್ತಿದ್ದವು.ಮುಂದೆ ನಿಧಾನವಾಗಿ ಸಾಗಿದ್ದ ನಮಗೆ
ಅಪರೂಪದ ಹಳದಿ  ಬಣ್ಣದ ಅಣಬೆ ಕಣ್ಣಿಗೆ ಬಿತ್ತು. ಅರೆ ಇದೇನು ಅಣಬೆ ಬಿಳಿ ಬಣ್ಣದಲ್ವ ಅಂತ ಹತ್ತಿರ ಹೋದರೆ ಹಳದಿ ಚೆಂಡಿನಂತೆ ಹಸಿರ ಮರೆಯಲ್ಲಿ ನಸುನಗುತ್ತ ಕುಳಿತಿತ್ತು ,ತುಂತುರು ಮಳೆಯಲ್ಲಿ  ನನ್ನ ಕ್ಯಾಮರ ಅದನ್ನು ವಿವಿಧ ಕೋನಗಳಿಂದ ಸೆರೆಹಿಡಿಯಲು ತಿನುಕಾಡುತ್ತಿತು.
ಅಷ್ಟರಲ್ಲಿ  ನನ್ನ  ಸ್ನೇಹಿತನ ಮಗ ಬಾಲು ಅಂಕಲ್ ಚಿಕ್ಕಮಂಗಳೂರ್ ಚೆನ್ನಾಗಿದೆ ಅಲ್ವ ಅಂದಾ ಹೌದು ಮರಿ ಆದ್ರೆ ಈ ಊರು ಚಿಕ್ಕಮಂಗಳೂರ್ ಅಲ್ಲಾ ಚಿಕ್ಕ ಮಗಳೂರು ಅಂಥಾ ಅಂದೇ , ಅಷ್ಟರಲ್ಲಿ  ಹಸಿರ ಗಿಡಗಳ ಮಧ್ಯೆ ಅಪರೂಪದ ಅಣಬೆ ಮುಧ ಗೊಳಿಸುತ್ತಿದ್ದರೆ, ಅಲ್ಲಲ್ಲೇ ಇದ್ದ ಕಳ್ಳ ಸೈನಿಕರಂತೆ ಜಿಗಣೆಗಳು ಕೆಲವರ ಕಾಲಿನ ಮೇಲೆ ಸದ್ದಿಲ್ಲದೇ ಹತ್ತಲು ಶುರುಮಾಡಿದ್ದವು ........!!!!!.ನಂತರ.......?????..ಮುಂದಿನ ಸಂಚಿಕೆಯಲ್ಲಿ ಹೇಳ್ತೇನೆ .

16 comments:

ಸುಬ್ರಮಣ್ಯ said...

ನಮ್ಮ ಜಿಲ್ಲೆಗೆ ಸ್ವಾಗತ.

ಸೀತಾರಾಮ. ಕೆ. / SITARAM.K said...

ಚೆಂದದ ಛಾಯಾಚಿತ್ರಗಳು ಜೊತೆಗೆ ನಿರೂಪಣೆ!

shivu.k said...

ಬಾಲು ಸರ್,

ನಿಮ್ಮ ಚಿಕ್ಕಮಗಳೂರು ಪ್ರವಾಸ ಮತ್ತು ಫೋಟೊಗಳು ತುಂಬಾ ಚೆನ್ನಾಗಿವೆ. ಮುಂದಿನ ಲೇಖನ ಕಾಯುತ್ತಿದ್ದೇನೆ.

ದೀಪಸ್ಮಿತಾ said...

ನಾಯಿಯು ಮರಿಗಳಿಗೆ ಹಾಲೋಡಿಸುತ್ತಿರುವ ಚಿತ್ರ ತುಂಬಾ ಚೆನ್ನಾಗಿತ್ತು

ಸಾಗರದಾಚೆಯ ಇಂಚರ said...

ದರ್ಶನ ಚೆನ್ನಾಗಿದೆ
ಸೊಗಸಾದ ವಿವರಣೆ

balasubramanya said...

ಸುಬ್ರಹ್ಮಣ್ಯ ಮಾಚಿಕೊಪ್ಪ ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು.

balasubramanya said...

ಸೀತಾರಾಂ ಸರ್ ಥ್ಯಾಂಕ್ಸ್

balasubramanya said...

ಶಿವೂ .ಕೆ ನಿಮ್ಮ ಅನಿಸಿಕೆಗೆ ಧನ್ಯವಾದಗಳು.

balasubramanya said...

ದೀಪಸ್ಮಿತ ನಿಮ್ಮ ಅನಿಸಿಕೆಗೆ ಸಲಾಂ

balasubramanya said...

ಸಾಗರದಾಚೆಯ ಇಂಚರ ಗುರುಮೂರ್ತಿ ಸಾರ್ ನಿಮ್ಮ ಅನಿಸಿಕೆಗೆ ಧನ್ಯವಾದಗಳು.

ಮನದಾಳದಿಂದ............ said...

ಬಾಲೂ ಸರ್,
ಹೇಗಿತ್ತು ಮಲೆನಾಡು?
ಇದುವರೆಗಿನ ನಿಮ್ಮ ಅನುಭವ ಚನ್ನಾಗಿದೆ. ಮುಂದಿನ ಭಾಗಕ್ಕೆ ಕಾಯ್ತಾ ಇದ್ದೇನೆ.........

balasubramanya said...

ಮನದಾಳದಿಂದ ಸಾರ್ ನಿಮ್ಮ ಅನಿಸಿಕೆಗೆ ಧನ್ಯವಾದಗಳು .ಮಲೆನಾಡು ಕನ್ನಡ ನಾಡಿನ ಸ್ವರ್ಗ

shwetha said...

very nice balu maama :)n i hv stolen ur line to my facebook status i jst luvd it ;)

balasubramanya said...

ಶ್ವೇತ ಅಡಿಲೇಡ್ ನಿಂದ ಬ್ಲಾಗ್ ನೋಡಿದ್ದಕ್ಕೆ ಖುಶಿಆಯ್ತು. ನನ್ನ ಲೈನ್ ಆಗಾಗ ಬರ್ತಾಯಿರು.

UMESH VASHIST H K. said...

nammoorige hogibandra saar, chennagitta nammoor photos chennaaagide

balasubramanya said...

ಉಮೇಶ್ ವಸಿಷ್ಠ ಸಾರ್ ಸಾರ್ ನಿಮ್ಮೂರ್ ಚೆನ್ನಾಗಿತ್ತು.ನಿಮ್ಮ ಅನಿಸಿಕೆಗೆ ಧನ್ಯವಾದಗಳು.