Thursday, July 29, 2010

ಜಿನುಗುವ ಮಳೆಯಲ್ಲಿ !! ಮೋಡಗಳ ನಲಿದಾಟದಲ್ಲಿ!! ಸ್ವಲ್ಪ ಇತಿಹಾಸ .....?ಚಿಕ್ಕಮಗಳೂರು ದರ್ಶನ ...2

ಸೊಗಸಾದ  ಹಳದಿ ಅಣಬೆ ಸೌಂದರ್ಯ ನೋಡುತ್ತಾ , ನಮ್ಮ ಸುಜಲ್  ಪ್ರಶ್ನೆಗಳಿಗೆ ಉತ್ತರ ನೀಡುತ್ತಾ  ಇದ್ದ ನನಗೆ ಚಿಕ್ಕಮಂಗಳೂರ್ ಅಲ್ಲ ಮರಿ ಚಿಕ್ಕಮಗಳೂರ್ ಅನ್ನ್ನುವಷ್ಟರಲ್ಲಿ  ಹಿಂದೆ ಆಹ್ ಅಂದದ್ದು ಕೇಳಿಸಿತು !! ಓ ಅದಾ ಜಿಗಣೆ ಅಂತ  ಸ್ವಲ್ಪ ರಕ್ತ ಕುಡಿದು  ಬಿದ್ದೊಯ್ತದೆ ಅಂತ ಅಲ್ಲೇ ಇದ್ದ  ಒಬ್ಬ ಕೆಲಸಗಾರ ಅಂದಾ.ಕಹಿ ಇದ್ದರೆ ಸಿಹಿಯ ಬೆಲೆ ತಿಳಿಯುತ್ತದೆ  ಅನ್ನುವಹಾಗೆ  ಸ್ವರ್ಗ ನೋಡಲು ಈ ಜಿಗಣೆ ಕಾಟ ವನ್ನು ಮಲೆನಾಡು,ಮತ್ತು  ಕಾಡುಗಳ ಒಳಗೆ ತೆರಳಿದಾಗ ಸಹಿಸಿಕೊಳ್ಳಬೇಕು.''donate blood for the cause of nature" ಅನ್ನೋ ಮಾತು ನೆನಪಾಗುತ್ತೆ!!  ಹಾಗೆ ಬಂದವನಿಗೆ ಗೆಳೆಯ  ಶ್ರೀನಿವಾಸ್ ಅವರಿಗೆ ಜಿಗಣೆ ಹಿಡಿದದ್ದು ಗೊತ್ತಾಯ್ತು.ನಾನು jeans  ಪ್ಯಾಂಟ್ ಲೆದರ್ ಶೂ ಹಾಕಿದ್ದರಿಂದ ನನಗೆ ಅಷ್ಟಾಗಿ ಜಿಗಣೆ ಕಾಡಲಿಲ್ಲ .ಸ್ವಾಮೀ ಬನ್ನಿ ನಮ್ಮ ಗೆಳೆಯ ಜಿಗಣೆ ರಾಯರ ಬಗ್ಗೆ ಒನ್ ಚೂರು ತಿಳಿಯೋಣ ಸಣ್ಣಗೆ ದಾರದಂತ ಇದು ಬುಗುರಿ ಆಟದಲ್ಲಿ ಕೈಬೆರಳಿನಿಂದ ಗೇಣು ಹಾಕಿದಂತೆ ಸಾಗುತ್ತದೆ.ಸೂರ್ಯನ ಕಿರಣ ಇದಕ್ಕೆ ಅಲರ್ಜಿ ,ಕತ್ತಲು ತುಂಬಿದ ಶೀತ ನೆಲದ ಜರಿ,ತೊರೆ, ಗಿಡ ಇದರ ವಾಸಸ್ತಾನ .ಇದು ನಾನು ಹಿಂದೆ ಚಾಮರಾಜ ನಗರ ಸಮೀಪ ಬೇಡಗುಳಿ ಜೋಡಿಗೆರೆ ಕಾಡಿನಲ್ಲಿ ಚಾರಣ ಹೋಗಿದ್ದಾಗ ಜಿಗಣೆ  ಕಾಡಿದ ಬಗ್ಗೆ ಇನ್ನೂ  ನೆನಪು ಕಾಡುತ್ತದೆ. ನಿಮ್ಮ ಶೂ ಲೇಸಿನ ಸಂದಿಯಲ್ಲಿ ಸಾಗಿ ಶೂ ಒಳಗೆ ನುಗ್ಗಿ ಕಾಲಿನ ರಕ್ತ ಹೀರುವ ಚಾಣಾಕ್ಷಾ ಇದು.ಒಮ್ಮೆ ಅಂಟಿಕೊಂಡರೆ ಕನಿಷ್ಠ ೧೦ ರಿಂದ ೨೦ ಮಿಲಿ ರಕ್ತ ಹೀರಿ  ತನಗೆ ತಾನೇ ಬಿದ್ದು ಹೋಗುತ್ತದೆ.ಸಣ್ಣಗಿನ ದಾರವಾಗಿದ್ದ ಇದು ರಕ್ತಕುಡಿದಾಗ ಡುಮ್ಮಗಾಗಿರುತ್ತದೆ.ಮದ್ಯದಲ್ಲಿ ನಿಮಗೆ ಅರಿವಾಗಿ ಇದನ್ನು ಕೀಳಲು ಶುರುಮಾಡಿದಿರೋ ಆಗುವ ನೋವು ನಿಮಗೆ ಸಹಿಸಲು ಅಸಾಧ್ಯವಾಗಿರುತ್ತದೆ..ಇಂತಹ ನೆನಪುಗಳ ಮೆಲಕು ಹಾಕುತ್ತಾ ನಾನೇ ಅಂದುಕೊಂಡೆ ಹೌದು ಈ ಜಿಲ್ಲಾ ಕೇಂದ್ರ ದ ಊರಿಗೆ ಚಿಕ್ಕಮಗಳೂರ್ ಅಂಥಾ ಯಾಕೆ ಹೆಸರು ಬಂತು ಅಂತಾ !!!

History

Chikkamagaluru is the region where the Hoysala rulers started and spent the early days of their dynasty. According to a legend, it was at Sosevur, now identified with Angadi in Mudigere Taluk that Sala, the founder of the Hoysala dynasty, killed the legendary tiger, immortalised in the Hoysala crest[2]. However, scholars have found lot of inconsistencies in this story and it seems to be more of a folklore[3]. However, it is known that Veera Ballala II (1173 - 1220 CE), the great king of Hoysala empire, has built the Amriteshwara temple at Amrithapura in Tarikere Taluk.
Coffee was introduced into India through the Chikkamagaluru district when the first coffee crop was grown in the Baba Budan Giri Hills during 1670 AD. According to the article Origins of Coffee, the saint Baba Budan on his pilgrimage to Mecca travelled through the seaport of Mocha, Yemen where he discovered coffee. To introduce its taste to India, he wrapped seven coffee beans around his belly and got them out of Arabia. On his return home, he planted the beans in the hills of Chikkamagaluru, which are now named Baba Budan Hills in his honour.
In recent history, Chikkamagaluru was the centre of global attention in the year 1978 when the former Indian Prime Minister, Indira Gandhi stood for elections here and got elected to Lok Sabha, the Indian Parliament.
ಆಗ ಇತಿಹಾಸ ನೆನಪಿಗೆ ಬಂತು  ವಿಕಿಪಿಡಿಯಾ  ದಲ್ಲಿ ಹುಡುಕಿದರೆ ಸಿಕ್ಕಿದ್ದು ಅದು ಹೊಯ್ಸಳರ ಆಳ್ವಿಕೆಗೆ ಒಳಪಟ್ಟ ಪ್ರದೇಶ ಅಂತ ಆದ್ರೆ ಚಿಕ್ಕಮಗಳೂರಿಗೆ ಚಿಕ್ಕಮಗಳೂರ್ ಅಂತ ಹೆಸರು ಬಂದ ವಿಚಾರ  ಹೇಳಿಲ್ಲಾ !!! 
i!ಆದ್ರೆ ಕರ್ನಾಟಕ ರಾಜ್ಯ  ಗೆಜೆತೀರ್  ನಲ್ಲಿ ಸ್ವಲ್ಪ ಮಾಹಿತಿ ಸಿಕ್ಕಿದೆ.ಚಿಕ್ಕಮಗಳೂರು ಮೊದಲು ಹೊಯ್ಸಳ  ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿತ್ತು.ಮೊದಲು ಈ ಊರು ಕಿರಿಯ ಮುಗಳಿ ಎಂಬ ಅಗ್ರಹಾರ ಹಾಗು ಇದರ ಪಕ್ಕದಲ್ಲಿ ಮತ್ತೊಂದು ಪಿರಿಯ ಮುಗಳಿ ಎಂಬ ಅಗ್ರಹಾರ ವಿತ್ತು  ಎರಡೂ ಅಗ್ರಹಾರವನ್ನು ಮದುವೆಯ  ಉಡುಗೊರೆಯಾಗಿ ಮಕ್ಕಳಿಗೆ ನೀಡಲಾಯಿತೆಂದು ಹೇಳುತ್ತಾರೆ.ಹೆಚ್ಚಿಗೆ ವಿಚಾರ ತಿಳಿದುಬರುವುದಿಲ್ಲ .ನಂತರ ಕಿರಿಯ ಮುಗಳಿ  ಚಿಕ್ಕ ಮುಗಳಿ ಯಾಗಿ,ಪೆರಿಯ  ಮುಗಳಿ ಹಿರೆ ಮುಗಳಿ ಯಾಗಿ ಕರೆಯಲಾಗಿದೆ.ಕಾಲಾನಂತರ ಇಂದು ಚಿಕ್ಕ ಮುಗಳಿ ಚಿಕ್ಕಮಗಳೂರು, ಹಿರೆ ಮುಗಳಿ ಹಿರೇಮಗಳೂರು ಎಂದೂ ಚಾಲ್ತಿಗೆ ಬಂದು ಇಂದು ಎರಡೂ ಊರುಗಳು ಸೇರಿ ಜಿಲ್ಲಾ ಕೇಂದ್ರವಾಗಿದೆ.ಬಾಬಾಬುಡನ್ ಗಿರಿ ಬೆಟ್ಟ ಶ್ರೇಣಿಯ ದಕ್ಷಿಣ ಭಾಗದಲ್ಲಿರುವ ಈ ಊರು ಬೆಂಗಳೂರಿನಿಂದ ಸುಮಾರು   260 ಕಿ.ಮಿ. ಆಗುತ್ತದೆ.ಹಾಗೆ ಮಾತಾಡ್ತಾ ರಸ್ತೆಗೆ ಬಂದು ನೋಡಿದರೆ ವಾವ್ ಅದ್ಭತ ಮುಳ್ಳಯ್ಯನ ಗಿರಿ ಶ್ರೇಣಿ ಬೆಟ್ಟಗಳ ಸುಂದರ ನೋಟ ಅವುಗಳ ಮೇಲೆ ಮೋಡಗಳ ತೆರೆ ಮರೆಯ ಚೆಲ್ಲಾಟ ಸಾಗಿತ್ತು ಈ ಮೋಹ ಕ ನೋಟ ನೋಡ್ತಾ  ನೋಡ್ತಾ ನಾವು ಪಕ್ಕದ  ಎಸ್ಟೇಟ್ ಒಳಗೆ ನುಗ್ಗಿದ್ದೆವು .............??????
ಮೋಡಗಳ ಲೋಕದೊಳಗೆ ವಿಹರಿಸುತ್ತಿರಿ  ಮುಂದಿನ ಸಂಚಿಕೆಯಲ್ಲಿ  ಭೇಟಿಯಾಗೋಣ ....................!!!!!!!!!ಮುಂದಿನ ಸಂಚಿಕೆ ಅಂತಿಮ ಅನುಭವ ????ಸುಂದರ  ಪುಷ್ಪಗಳ ಲೋಕ ,ಜೀರುಂಡೆ ಹಾಡು ..................ಪಾಂಡುರಂಗ ಕಾಫಿ ,ಮಯೂರ ಹೋಟೆಲ್ ತಿಂಡಿ,ಟೌನ್ ಕ್ಯಾಂಟೀನ್   ತುಪ್ಪದ ದೋಸೆ.......ಇತ್ಯಾದಿ


7 comments:

ಜಲನಯನ said...

ಬಾಲು ಜಿಗಣೆಗಳ ಬಗ್ಗೆ ಹಿಂದೆ ನಮ್ಮ ಬ್ಲಾಗ್ ಮಿತ್ರರು ಯಾರೋ ಬರೆದಿದ್ದು ನೆನಪು...ಸುಮಾ..ಇರಬಹುದು....ಒಂದು ಗೊತ್ತೇ..? ನಾನು ಮಣಿಪುರದಲ್ಲಿ ದ್ದಾಗ ...ರಾಕ್ಷಸಾಕಾರದ ಜಿಗಣೆ ನೋಡಿದ್ದೆ...ಅವು ಎಮ್ಮೆಗಳಿಗೆ ಅಂಟಿ ರಕ್ತ ಹೀರಿ ಹೊರಬಂದ್ರೆ ಸುಮಾರು ಟೆನಿಸ್ ಬಾಲ್ ನಷ್ಟಿರ್ತಿದ್ದವು...ಕಡೇ ಪಕ್ಷ ೧೦೦ ಮಿಲಿ ರಕ್ತ ಹೀರಿರ್ತಿದ್ದವ್

balasubramanya said...

ನೀವು ಹೇಳಿದ್ದು ಸರಿ . ನಾನು ಬೇಡಗುಳಿ ಹಾಗು ಜೋಡಿಗೆರೆ ಚಾರಣಕ್ಕೆ ಹೋಗಿದ್ದಾಗ ಹಾಗು ಕಾಕನಕೋಟೆ ಕಾಡಿಗೆ ಹೋಗಿದ್ದಾಗ ನೀವು ಹೇಳಿದ ಹಾಗೆ ಜಿಗಣೆಗಳು ಕಂದುಬಂದ್ದಿದ್ದವು. ಆದ್ರೆ ನೀವು ಹೇಳಿದಂತೆ ಟೆನ್ನಿಸ್ ಬಾಲ್ ನಷ್ಟು ದೊಡ್ದದಿರಲಿಲ್ಲ.ನಿಮ್ಮ ಮಾಹಿತಿಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

NICE!!!

sunaath said...

ಬಾಲು,
ಜಿಗಣೆಗಳ ಬಗೆಗೆ ಹಾಗು ಚಿಕ್ಕಮಗಳೂರಿನ ಬಗೆಗೆ ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಿಸರ್ಗಸೌಂದರ್ಯದ ಕೆಲವು ಅತ್ಯುತ್ತಮ ಫೋಟೋಗಳನ್ನು ಕೊಟ್ಟಿದ್ದೀರಿ. ಅದಕ್ಕೂ ಸಹ ಧನ್ಯವಾದಗಳು.

ಮನದಾಳದಿಂದ............ said...

ಬಾಲು ಸರ್,
ಮಲೆನಾಡನ್ನು ಮೆಚ್ಚಿಕೊಂಡಿದ್ದಕ್ಕೆ ಮೊದಲಾಗಿ ಧನ್ಯವಾದಗಳು, ಮಲೆನಾಡಿನಲ್ಲಿ ಮಳೆಗಾಲವೆಂದರೆ ಅದೊಂದು ಸುಂದರ ಅನುಭವ! ಚಿತ್ರಗಳು ತುಂಬಾ ಚೆನ್ನಾಗಿವೆ.
ಮುಂದಿನ ಭಾಗ ಬೇಗ ಬರೆಯಿರಿ..........

balasubramanya said...

ಸುನಾಥ್ ಸಾರ್ ನಿಮ್ಮ ಅಭಿಪ್ರಾಯ ಕ್ಕೆ ನನ್ನ ಥ್ಯಾಂಕ್ಸ್ .ಹಾಗೆ ನಿಮ್ಮ ಸಲಹೆ ನನ್ನ ಲೇಖನಗಳಿಗೆ ಬರುತ್ತಿರಲಿ.

balasubramanya said...

ಪ್ರವೀಣ್ ರವರೆ ಮನದಾಳ ದಿಂದ ನಿಮ್ಮ ಮೆಚ್ಚುಗೆ ಬಂದಿದೆ ತುಂಬಾ ಥ್ಯಾಂಕ್ಸ್ .ಹಾಗೆ ನಿರಂತರವಾಗಿ ನಿಮ್ಮ ಅಭಿಪ್ರಾಯ ಬರುತ್ತಿರಲಿ .