Monday, June 14, 2010

ಬನ್ನಿ ಚಿತ್ತಾರದ ಮುಗಿಲ ಲೋಕದೊಳಗೆ ನಲಿದು ಬರೋಣ !!!ಇಲ್ಲಿದೆ ನೋಡಿ ಮುಗಿಲ ಪೇಟೆ !!

ಸುಮ್ಮನೆ ಮನೆಯಲ್ಲಿ ಕುಳಿತಿದ್ದವನಿಗೆ ,ಗೆಳೆಯ ರಘು  ಫೋನ್ ಮಾಡಿ  ನಾಳೆ  ಬರ್ತಿಯೇನೋ ಸುಮ್ನೆ ಎಲ್ಲಿಗಾದ್ರೂ ಆಚೆ ಹೋಗಿ ಬರೋಣ ಅಂದ. ಸರಿ ನದಿ ನಂಗೂ ಯಾಕೋ ಬೇಜಾರು ಸುಮ್ನೆ ಒಂದು ರೌಂಡ್ ಹಾಕೋಣ ಅಂತ ಅಂದೇ. ಸರಿ ರಡಿಯಾಗಿರು ಬೆಳಿಗ್ಗೆ ಆರು ಘಂಟೆಗೆ ಮನೆಗೆ ಬರ್ತೀನಿ ಅಂತ ಅಂದ, ಸರಿಯಪ್ಪ ಅಂತ ಹೇಳಿ ಫೋನ್ ಇಟ್ಟೇ.ಮಾರನೆದಿನ ಪುಣ್ಯಾತ್ಮ ಬೆಳಿಗ್ಗೆ 5 ಘಂಟೆಗೆ ಮನೆಗೆ ಹಾಜರಾಗಿ ಲೇ ಏಳೂ ರೆದಿಯಾಗಿಲ್ವಾ ಸೋಮಾರಿ !!! ಅಂತ ಸುಪ್ರಭಾತ ಹಾಡಿ ಎಬ್ಬಿಸಿದ .ಮನಸ್ಸೊಳಗೆ ಅವನನ್ನು ಬೈದುಕೊಂಡು  ಒಲ್ಲದ ಮನಸ್ಸಿನಿಂದ ಹೊರಡಲು ಸಿದ್ದನಾದೆ.ಮನೆಗೆ ವಿಷಯ ತಿಳಿಸಿ ಹೊರಟ ನಾವು , ಒನ್ ಡೋಸ್ ಕಾಫಿ ಕುಡಿತಾ ಎಲ್ಲಿಗೆ ಹೋಗೋದು ಅಂತ ತೀರ್ಮಾನಿಸೋಣ ಅಂತ ಒಂದು ಕಾಫಿ ಸ್ಟಾಲ್ ಹತ್ತಿರ ನಿಂತ್ವಿ.ಏನೆ ಆಗ್ಲಿ ರೀ ಬೆಳಗಾಗಿ ಒಂದು ಡೋಸು ಕಾಫಿ ಕುಡಿಲಿಲ್ಲ್ಲಾ ಅಂದ್ರೆ ಬುದ್ದಿನೆ ಓಡೊಲ್ಲ ಅನ್ನುತ್ತೆ !!! ಹಾಗೆ ಬಿಸಿ ಬಿಸಿ ಕಾಫಿ ಹೀರ್ತಾ ಹೋಗುವ ಜಾಗ ತೀರ್ಮಾನಿಸಿ ಕಾರನ್ನು ನಂಜನಗೂಡು ರಸ್ತೆಗೆ ತಿರುಗಿಸಿದ್ವಿ .ಹಾಗೆ ಹೋಗ್ತಾ ಹೋಗ್ತಾ ನಂಜನಗೂಡು ದಾಟಿ ಗುಂಡ್ಲುಪೇಟೆ ಬಂತು ಹೊಟ್ಟೆ ಚುರುಗುಟ್ಟಲು ಶುರು ಮಾಡಿತು ಸರಿ ತಿಂಡಿ ತಿನ್ನೋಕೆ ಅಂತ ಒಂದು ಹೋಟೆಲಿಗೆ ಹೋದ್ವಿ ಅಲ್ಲಿದ್ದ ಜನಜಂಗುಳಿ ನೋಡಿ ಆಶ್ಚರ್ಯವಾಯಿತು. ಭಂಡಿಪುರ ,ಊಟಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ , ಕೇರಳ ಕಡೆಗೆ ಹೋಗುವ ಪ್ರವಾಸಿಗಳ ದಂಡು.ಒಟ್ಟಿನಲ್ಲಿ ಇಲ್ಲಿಂದ ಬೇಗ ಜಾಗ  ಖಾಲಿ ಮಾಡಿ ಒಡೋಣ ಅಂತ ಬೇಗ ಸಿಕ್ಕಿದ  ಇಡ್ಲಿ ಸಾಂಭಾರ್ ತಿಂದು ಆಚೆ ಬಂದ್ವಿ. ತಕ್ಷಣ ಈ ಪ್ರವಾಸಿಗಳ ಸೈನ್ಯ ಧಾಳಿ ಮಾಡುವ ಮುನ್ನ  ಹಿಮವದ್ ಗೋಪಾಲ ಸ್ವಾಮೀ ಬೆಟ್ಟಕ್ಕೆ ತಲುಪೋಣ ಅಂತ ಪಯಣ ಮುಂದುವರೆಸಿ ಕಾರನ್ನು ಅತ್ತ ಓಡಿಸಲು ಸ್ನೇಹಿತನಿಗೆ ಹೇಳ್ದೆ ಅವನಾಗಲೇ ತೀರ್ಮಾನಿಸಿ ಬಾಲು ನಿನ್ನ ಕ್ಯಾಮರ ರೆಡಿ ಮಾಡಿಟ್ಕೋ ಅಂತ ಹೇಳಿ ಕಾರನ್ನು ಚಾಲನೆ ಮಾಡಿದ್ದ .ಹಾಗೆ ಕಿಟಕಿಯಲ್ಲಿ ಇಣುಕುತ್ತ ಸಾಗಿದ ನನಗೆ ಕಾರಿನಲ್ಲಿನ ಸಿ.ಡೀ. ಪ್ಲೇಯರ್ ನಿಂದ ಬರುತ್ತಿದ್ದ ಗಾಳಿಪಟ  ಚಿತ್ರದ " ಮಿಂಚಾಗಿ ನೀನು ಬರಲೂ " ಅನ್ನೋ ಹಾಡು ಆ ಚಿತ್ರದಲ್ಲಿ  ಬರುವ ಮುಗಿಲ ಪೇಟೆ  ಅಂತ ತೋರಿಸುವ ಒಂದು ಕಾಲ್ಪನಿಕ ಊರಿನ ಜ್ಞಾಪಕ  ಬರಿಸಿ  ಬಿಟ್ಟಿತ್ತು. ಲೋ ರಘು ಇವತ್ತು ನಾನು ಬರಿ ಮೋಡಗಳ ಚಿತ್ರ ಜಾಸ್ತಿ ತೆಗಿತೀನಿ ಅಂದೇ. ಅವನು ಲೋ ನಿನ್ನನ್ನು  ಕರ್ಕೊಂಡು ಬಂದವನು ನಾನು ನಂದು ಫೋಟೋ ತೇಗಿ ಮಾರಾಯ ಅಂದ!!! ಹಾಗು ಹೀಗೂ ಕಾರು ಶುರು ಮಾಡಿತ್ತು. ಕಡಿದಾದ  ರಸ್ತೆಯಲ್ಲಿ ಕಾರು ಸಾಗಿತ್ತು ನನ್ನ ಕ್ಯಾಮರ ಕಣ್ಣಿಗೆ ಕಂಡದನ್ನು ಕ್ಲಿಕ್ಕಿಸಲು ಶುರು ಮಾಡಿತ್ತು. ಮುಂಜಾವಿನ ಹಿತಕರ ಗಾಳಿ ನಮ್ಮನ್ನು ಸ್ವಾಗತಿಸಿತ್ತು.
ಕಣ್ಣಿ ಗೆ ಆಗಸದ ಮೋಡಗಳು ಅಂದವಾಗಿ ಕಾಣತೊಡಗಿದವು, ಕಾನನ ಹಾಗು ಬೆಟ್ಟಗಳ ಸುತ್ತುವರೆದ ಮೋಡಗಳು ಮುಂಜಾವಿನ ಸೋಭಗನ್ನು ಇಮ್ಮಡಿ ಗೊಳಿಸಿದ್ದವು.
ಹಿಮವದ್ ಗೋಪಾಲಸ್ವಾಮಿಯ ದೇವಾಲಯ ಹಸಿರ ಬೆಟ್ಟ ಹಾಗು ನೀಲಿ ಆಗಸದಲ್ಲಿನ  ಮೋಡಗಳ ಶೃಂಗಾರದ ನಡುವೆ ಮೋಹಕವಾಗಿ ಕಂಡಿತು.
ಹಾಗೆ ಕಾರು ನಿಲ್ಲಿಸಿ ದೇವಾಲಯದ ಆವರಣ ಪ್ರವೇಶಿಸಿದ ನಾವು ಹಿಮವದ್ ಗೋಪಾಲ ಸ್ವಾಮೀ  ದರ್ಶನ ಪಡೆದು ಹೊರಬಂದು ಆವರಣದಲ್ಲಿ ಅಡ್ಡಾಡಲು ಹೊರಟೆವು
ಆಗಲೇ ಶುರುವಾಗಿತ್ತು ಮೋಡಗಳ ಚೆಲ್ಲಾಟ ಸುತ್ತಮುತ್ತಲಿನ ಗಿರಿ ಶ್ರೇಣಿ ಮೋಡಗಳ  ಅಪ್ಪುಗೆಯ ಮಧ್ಯೆ ಮೀಯುತ್ತಿದ್ದವು.
  .ಇದೇನು ಕ್ಷೀರ ಸಾಗರವೋ

ಅಥವಾ ಮೋಡಗಳ ನಲಿದಾಟದ ತಾಣವೋ ಒಂದು ತಿಳಿಯದೆ ವಿಸ್ಮಯದಿಂದ ಸರಸರನೆ ಕ್ಯಾಮರ ಕ್ಲಿಕ್ಕಿಸಲು ಶುರುಮಾಡಿದೆ.ಗಿರಿ ಕಾನನದ ನೆತ್ತಿಯ ಮೇಲೆ ಮೋಡಗಳ ಮೆರವಣಿಗೆ ಸಾಗಿ, ಇದೆ ಮುಗಿಲ ಪೇಟೆ ಅಂತ ಮನಸ್ಸು ಹೇಳಿತ್ತು.ನನ್ನ ಗೆಳೆಯ ರಘು ಲೋ ಅಲ್ನೋಡೋ!! ಅದನ್ನು ತೆಗಿ, ಒಳ್ಳೆ ಸೀನು!! ಪಾಯಿ, ಅಂತ ತಾನು ಕಂಡದ್ದನ್ನೆಲ್ಲಾ ಕ್ಲಿಕ್ಕಿಸಲು ಪ್ರೇರಣೆ ನೀಡುತ್ತಿದ್ದ.ಆಗ ಕಂಡಿದ್ದು
ಹಸಿರ ಉಡುಗೆಯ ತೊಟ್ಟ ಗಿರಿಯ ಹಿಂದೆ ಸಾಗಿದ್ದ ಮೋಡಗಳ ಸಾಲು ಸಾಲು ಚಿತ್ತಾರಗಳ ಮಾಲೆ !!!!ಸ್ವಲ್ಪ ಜಾಗ ಬದಲಿಸಿ ಮುನ್ನಡೆದ ನಮಗೆ ಇನ್ನೊಂದು ಮೋಹಕ ನೋಟ ಸಿಕ್ಕಿತು
ನೀಲಿ ಬೆಟ್ಟವನ್ನು ಸುತ್ತುವರೆದ ಬಿಳಿ ಮೋಡಗಳು ನರ್ತನ ಮಾಡಿ ನಲಿದು ಬೆಟ್ಟವನ್ನು ಅಪ್ಪಿ ಕುಣಿದಿದ್ದವು.ಕ್ಯಾಮರ ಲೆನ್ಸ್ ಸರಿಪಡಿಸಿ  zoom ಮಾಡಿದ ನನಗೆ ಮೋಹಕ ಚಿತ್ರಗಳು ಸಿಗತೊಡಗಿದವು ಬೆಟ್ಟಗಳನ್ನು ಸುತ್ತುವರೆದು ನಾಟ್ಯ ವಾದಿದ್ದ ಮೋಡಗಳು ಮಾಯಾಲೋಕವನ್ನು ಅನಾವರಣ ಗೊಳಿಸಿದ್ದವು  ಧಣಿವಿನ  ಮನಸ್ಸಿಗೆ, ಉಲ್ಲಾಸದ ಸಿಂಚನವಾಗಿ ಮನಸ್ಸು ನಲಿದಿತ್ತು.ಮೋಡಗಳ ಮಾಯಾಲೋಕದ ಮಾಯೆಯಿಂದ ಬಿಡಿಸಿಕೊಂಡು  ದೇವಾಲಯದ ಆವರಣ ಬಿಟ್ಟು ಹೊರಟೆವು ಮೆಟ್ಟಿಲು ಇಳಿಯುವಾಗ
ಸ್ವಾಮೀ!!! ಧರ್ಮಾ ಮಾಡಿ !!ಗೋವಿಂದಾ ಗೋವಿಂದಾ ಅಂತ  ಮೂರು ಜನ ದಾಸಯ್ಯ ಗಳು ಜಾಗಟೆ ಬಡಿದು ಬೇಡಿದ್ದರು, ಅವರ ಹಿಂದೆಪ್ರೇಮಿಗಳು ಮರ ಹತ್ತಿ  ಪ್ರಣಯದಾಟ ನಡೆಸಿದ್ದರು!!! ಈ ಪ್ರಕೃತಿಯೇ  ಹಾಗೆ ಒಬ್ಬೊಬ್ಬರಿಗೆ ಒಂದೊಂತರ ಪ್ರೇರಣೆ ನೀಡುತ್ತೆ!!!ಪ್ರವಾಸಿಗಳ ಸೈನ್ಯಆಗಲೇ ಈ ಪ್ರದೇಶಕ್ಕೆ ದಾಳಿ ಇಟ್ಟಾಗಿತ್ತು. ಸರಿ ಇಲ್ಲಿಂದ ಜಾಗ ಖಾಲಿ ಮಾಡೋಣ ಅಂಥಾ ನಾವು ಹೊರಟೆವು .ಮುಂದೆ ಎಲ್ಲಿಗೆ ಮಾರಾಯ ಅಂತನಾನುಗೆಳೆಯನನ್ನು ಕೇಳಿದೆ ಲೋ ನಡೀ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗೋಣ ಅಲ್ಲಿಯೂ ನೋಡೋಕೆ ಆಸೆ ಯಾಗಿದೆ ಅಂದ!! ಸರಿ ನಡೀರಿ ಸಾರ್ ಅಂದೇ. ಪಯಣ ಸಾಗಿತು.ಹಿಮವದ್ಗೋಪಾಲಸ್ವಾಮಿ ಬೆಟ್ಟದಿಂದ ಗುಂಡ್ಲುಪೇಟೆ ತಲುಪಿ ಚಾಮರಾಜ ನಗರ ದಾಟಿ ಬಿಳಿಗಿರಿ ಬೆಟ್ಟಗಳನ್ನು ಹತ್ತಲು ಕಾರು ಮುಂದಾಗಿತ್ತು.ಬಿಳಿಗಿರಿ ಕಾನನದಲ್ಲಿ ಕಾಡು ಪ್ರಾಣಿಗಳು ಸಿಗಬಹುದೆಂದು ಆಸೆ ಇಂದ ಕ್ಯಾಮರ ಸಿದ್ದವಾಗೆ ಇಟ್ಟುಕೊಂಡಿದ್ದ ನನಗೆ ಏನೂ ದೊರೆಯದೆ ನಿರಾಸೆ ಆಗಿತ್ತು.
ಕಾನನದ ಹಾದಿಯಲ್ಲಿ ಒಂದು ಕಡೆ ಮೋಡಗಳು ನನ್ನನ್ನು ಅಣಕಿಸಿ ಯಾಕೆ ನಾವು ಮರೆತುಹೋದೆವ  ಅಂದಹಾಗೆ ಅನ್ನಿಸಿ ಸುಮ್ಮನೆ ಕ್ಲಿಕ್ಕಿಸಿದೆ ಒಣಗಿದ ಕಾನನದಲ್ಲಿ ಮೋಡಗಳು  ಚೆಲ್ಲಿದ್ದವು! ಒಣಗಿದ ಮರಗಳು ಮೋಡಗಳನ್ನು ಮಳೆಸುರಿಸಲು ಬೇಡುತ್ತಿದ್ದವು!!ಪಯಣದ ಹಾದಿಯಲ್ಲಿ ಸಿಕ್ಕೊಂದು ಕೆರೆಯ ಪಕ್ಕ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯಲು ನಿಂತೆವು.
ಸುಂದರವಾದ ಕಾನನದ ಮಧ್ಯೆ ನಿಶಬ್ದ ವಾದ ಪರಿಸರದಲ್ಲಿ  ಆ ಕೆರೆ ಇತ್ತು ದಡದಲ್ಲಿ  ಸುಮ್ಮನೆ ಕುಳಿತು ನಮ್ಮನ್ನೇ ನಾವು ಮರೆತಿದ್ದೆವು. ಆಗ ಬಂತು ಒಂದು ಕಾರು !! ನಮ್ಮನ್ನು ನೋಡಿ ನಿಲ್ಲಿಸಿದ ಕಾರಿನವರು ಏನಾದರೂ ಪ್ರಾಣಿಗಳು ಸಿಕ್ತ!!! ಅಂತ ಕೇಳಿದರು. ನಾವು ನಿರಾಸೆ ಇಂದ ಇಲ್ಲಾ ಸಾರ್ ಏನೂ ಸಿಕ್ಲಿಲ್ಲಾ ಅಂತಾ ಪೇಚು ಮೊರೆ ಹಾಕಿದೆವು.ಆಗ ಕಾರಿನೊಳಗಿದ್ದ ಒಬ್ಬ ಮಹಿಳೆ ಸಾರ್ ಅದೇನು ಅಲ್ಲಿ ಹೋಗ್ತೈರೋದು ಅಂಥಾ ಕೇಳಿದರೂ ಹಿಂತಿರುಗಿ ನೋಡಿ
ತಡಮಾಡದೆ ಕ್ಲಿಕ್ಕಿಸಿದ್ದೆ !!!ಆಗ ಸಿಕ್ಕಿದ್ದೇ ಈ ಕಂದು ಬಣ್ಣದ[ striped mangoose ]ಮುಂಗುಸಿ ನಿಧಾನವಾಗಿ ಪೊದೆಯಿಂದ ಆಚೆ ಬಂದು ಹೋಗುತ್ತಿತ್ತು ಏನೂ ಸಿಕ್ಕದೆ ಪೆಚ್ಚಾಗಿದ್ದ ನಮಗೆ ಸ್ವಲ್ಪ ಸಮಾಧಾನ ವಾಗಿ ಪಯಣ ಮುಂದುವರೆಸಿದೆವು.ಬಿಳಿಗಿರಿರಂಗನ ಬೆಟ್ಟ ತಲುಪಿದೇವಾಲಯದಲ್ಲಿ ದೇವರ ದರ್ಶನ ಪಡೆದು ದೇವಾಲಯದ ಪಕ್ಕದಲ್ಲಿ ಇರುವ ಕಮರಿ ಬಳಿ ತೆರಳಿದೆವು.ಬಿಳಿಗಿರಿ ಶ್ರೇಣಿಯ ಬೆಟ್ಟಗಳು ಕಣ್ಣಿಗೆ ಕಂಡವು ಮೇಲೆತೆಳುವಾಗಿ ಬಿಳಿಯ ಮೋಡಗಳು ಆಗಸವನ್ನು ಅಲಂಕರಿಸಿದ್ದವು . ಹಾಗೆ ಸ್ವಲ್ಪ ಕಣ್ಣು ಹಾಯಿಸಿದೆ
ಹಸಿರ ಬೆಟ್ಟದ ಮೇಲೆ ಒಂದೇ ಒಂದು ಮುದ್ದಿನ ಮೋಡ ನಿಧಾನವಾಗಿ ಗಾಳಿಗೆ ವಿವಿಧ ಆಕಾರ ತಾಳುತ್ತಾ ಸಾಗಿತ್ತು .ಅಲ್ಲಿ ಶುರುವಾಯ್ತು ನೋಡಿ ಕಣ್ಣಿಗೆ ಹಬ್ಬ ಬೆಟ್ಟಗಳ ಸಾಲಿನ ಮೇಲೆ ಸೂರ್ಯನ ಬೆಳಕು ಹಾಗೂ ಮೋಡಗಳು
ಬಗೆಬಗೆಯ ಸುಂದರ ಚಿತ್ರಗಳನ್ನು ನನಗೆ ನೀಡಿ ಹಬ್ಬದಔತಣಬಡಿಸಿದ್ದವು  ವಾಹ್!!! ವಾಹ್ ಅಂತ ಕುಣಿಯುತ್ತ ಕ್ಯಾಮರ ಕ್ಲಿಕ್ಕಿಸುವಾಟ ನಡೆಸಿದ್ದೆ.
ಮೋಡಗಳ ಮಧ್ಯದಿಂದ ತೋರಿ ಬಂದ ಸೂರ್ಯನ ಬೆಳಕು ಬೆಟ್ಟಗಳ ಒಡಲೊಳಗೆ ಬಿದ್ದು ರಮ್ಯ ನೋಟ ನೀಡಿತ್ತು.ಮೋಡಗಳ ಹಾಗು ಸೂರ್ಯ ಕಿರಣಗಳ ಜುಗಲ್ಬಂದಿ ಬೆಟ್ಟಗಳ ಮೋಹಕ ಚೆಲುವನ್ನು ಹೆಚ್ಚಿಸಿ ಹೊಸ ಹೊಸ ನೋಟಗಳ ಸರಮಾಲೆ ನೀಡಿತ್ತು ಮನಸ್ಸುಸಂತಸದಿಂದ   ನಲಿದಿತ್ತು.ಜೀವನ ಪಾವನ ವಾಯಿತೆಂದುಕೊಂಡೆ
ಧ್ರುಷ್ಯಗಳನ್ನು ಕಾಮರದೊಳಗೆ  ತುಂಬಿಕೊಂಡು  ಗಿರಿದರ್ಶಿನಿ ಹೋಟೆಲ್ ನಲ್ಲಿ ರುಚಿಯಾದ  ಬಿಸಿ ಬಿಸಿ ಊಟ ಉಂಡು ಮನೆಯ ದಾರಿ ಹಿಡಿದೆವು. ನಮ್ಮ ಮುಗಿಲ ಲೋಕದ ಪಯಣ ಹರುಷ ನೀಡಿ ಮನಸ್ಸು ಹಗುರವಾಗಿ ನನಗೆ ಅರಿವಿಲ್ಲದೆ " ಬೆಳ್ಳಿ  ಮೋಡದ ಅಂಚಿನಿಂದ ಮೂಡಿ ಬಂದಾ ಆಶಾ ಕಿರಣ "ಅಂತಾ ಹಾಡಲು ಶುರು ಮಾಡಿದ್ದೆ.ನೀವು ಒಮ್ಮೆ ಹೋಗಿ ಮಗಿಲ ಭೇಟೆಗೆ !!ಅದರ ಮಜಾ ನೋಡಿ!!!

5 comments:

ಸುಬ್ರಮಣ್ಯ ಮಾಚಿಕೊಪ್ಪ said...

ಬಾಲು ಅಣ್ಣ, ಫೋಟೋಗಳು ಒಂದಕ್ಕಿಂತ ಒಂದು ಚನ್ನಾಗಿವೆ.

ಸೀತಾರಾಮ. ಕೆ. / SITARAM.K said...

nice photos & narration

ಜಲನಯನ said...

ಬಾಲು ತಾಣಗಳ ಪರಿಚಯಕ್ಕೆ ಒಳ್ಲೆಯ ಪೀಠಿಕೆ ಕೊಟ್ಟು ಚಿತ್ರಗಳಿಗೆ ಶೀರ್ಷಿಕೆಕೊಟ್ಟು interesting ಮಾಡಿದ್ದೀರಿ....

ಸಾಗರದಾಚೆಯ ಇಂಚರ said...

Balu sir

wonderful photos

B.R.Usha said...

Prakruti madila photogalu tumba tumba chennagive sir.... nim blog ge visit kotre samaya sarididde gottaglilla.... tumba olleya maahitigalive... thank you very much sir....