ಈ
ಕಥೆ ಬಹಳ ದಿನಗಳಿಂದ ನನಗೆ ಪದೇ ಪದೆ ನೆನಪಿಗೆ ಬಂದು ಕಾಡುತ್ತಿತ್ತು !! ಈ ವಿಚಾರವನ್ನು ನಂಬಲು ಬಹಳಷ್ಟು ಮಾಹಿತಿ ಸಂಗ್ರಹಣೆಗೆ ತೊಡಗಿದೆ.ಆದರೂ ರೋಜಕವಾದ ಈ ಮಾಹಿತಿ ಬ್ಲಾಗಿನ ಗೆಳೆಯರೊಂದಿಗೆ ಹಂಚಿಕೊಳ್ಳುವ ಮನಸು ಮಾಡಿ ಪ್ರಕಟಿಸಿದ್ದೇನೆ.ಇದನ್ನು ನಂಬುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು!!.ಆದರೂ ನಂಬುವುದಕ್ಕೆ ಹಲವಾರು ಪುರಾವೆಗಳು ನಮ್ಮ ಸುತ್ತ ಗಿರಿಕಿ ಹೊಡೆಯುತ್ತ ನಂಬುವಂತೆ ಮಾಡುತ್ತಿವೆ.ಹೌದು ನಾನು ನಿಮಗೆ ಒಂದು ನಂಬಲು ಅಸಾದ್ಯ ವಾದ ಆದರೂ ನಂಬಬೇಕಾದ ಒಂದು ಕಥೆ ಬರೆಯಲು ಹೊರಟ್ಟಿದ್ದೇನೆ.ಇದು ಆದದ್ದು ಹೀಗೆ ಕೆಲವು ದಿನಗಳ ಹಿಂದೆ ಬಹಳ ಹಿಂದಿನ [ಜೂನ್ ೨೦೦೦]ಕಸ್ತೂರಿ ಮಾಸಿಕ ಪತ್ರಿಕೆ ಕಣ್ಣಿಗೆ ಬಿತ್ತು.ಅದನ್ನು ಹಾಗೆ ತಿರುವಿಹಾಕಿದಾಗ ಒಂದು ಕಥೆ ಕಣ್ಣಿಗೆ ಬಿತ್ತು ಅದನ್ನು ಒದತೊದಗಿದಾಗ ಈ ಹರ್ಭಜನ್ ಸಿಂಗ್ ಪ್ರೇತಾತ್ಮ ನತೋಲಾ ಗಡಿಯಲ್ಲಿ ದೇಶವನ್ನು ಕಾಯುತ್ತಿರುವುದಾಗಿ ತಿಳಿದು ಬಂದು ಸುಮ್ಮನೆ ನಕ್ಕು ಬಿಟ್ಟೆ.!!!,ಅಂತರ್ಜಾಲ ಜಾಲಾಟ ಶುರುವಾಯಿತು ಅಲ್ಲಿಯೂ ಸಹ ಇವನಬಗ್ಗೆ ವಿಚಿತ್ರ ಮಾಹಿತಿ ಲಬ್ಯವಾಗ ತೊಡಗಿತು!!,ಆದರೂ ನಂಬಲು ಸಾಧ್ಯ ವಾಗದೆ ನನ್ನ ಗೆಳೆಯ ಹಾಲಿ ಭಾರತಿಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಂದಕುಮಾರ್ ನಲ್ಲಿ ವಿಚಾರಿಸಿದೆ
,ಅವರೂ ಸಹ ಹೀಗೊಂದು ಘಟನೆ ಇದೆಯೆಂದು ತಿಳಿಸಿದರು.ಆಸಕ್ತಿ ಕೆರಳಿ ಹಲವರಲ್ಲಿ ವಿಚಾರಿಸಿದರೆ ಈ ಬಗ್ಗೆ ರಕ್ಷಣಾ ಇಲಾಖೆಯಲ್ಲಿ ದಾಖಲೆಗಳು ಇವೆ ಅಂದ್ರು .ಹಾಗಾಗಿ ನಾನೂ ಸಹ ಈ ಲೇಖನ ಪ್ರಕಟಿಸುವ ಸಾಹಸ ಮಾಡಿದ್ದೇನೆ. ಬನ್ನಿ ಹರ್ಭಜನ್ ಸಿಂಗ್ ಕಥೆ ಓದಿ"".ಓವರ್ ಟು ಹರ್ಭಜನ್ ಸಿಂಗ್ ಆತ್ಮ "" ಆತ್ಮೀಯ ಭಾರತೀಯರೇ ನಿಮಗೆ ನನ್ನ ನಮಸ್ಕಾರ ನಾನು ಹೇಳುವ ನನ್ನ ಕಥೆ ನಿಮ್ಮೆಲ್ಲರಿಗೆ ದೇಶದ ಬಗ್ಗೆ ಗೌರವ ಜಾಸ್ತಿ ಮಾಡಿದಲ್ಲಿ ನನ್ನ ಜೀವನ ಸಾರ್ತಕವಾದೀತು ಅದೇ ನೀವೇ ನನಗೆ ನೀಡುವ ಶುಭ ಕಾಮನೆಗಳು. ನಾನು ಪಂಜಾಬ್ ರಾಜ್ಯದ ಕಪೂರ್ತಲ ಜಿಲ್ಲೆಯ ಕೊಕ್ಕಾ ತಳವಂಡಿ??[ಬ್ರೊಂದ್ವಾಲ್ ] ಗ್ರಾಮದಲ್ಲಿ ಜನಿಸಿ ನನ್ನ ಬಾಲ್ಯ ಕಳೆದೆ.ನನ್ನ ತಂದೆ ಸರ್ವಾರ್ ಸಿಂಗ್ ಒಬ್ಬ ಸಣ್ಣ ರೈತ ತಾಯಿ ಅಮರ್ ಕೌರ್ ಗೃಹಿಣಿ ತಂದೆಗೆ ಸಹಾಯವಾಗಿದ್ದಳು.ನಮ್ಮ ತಂದೆ ತಾಯಿಗೆ ನಾನು ಹಾಗು ಸಹೋದರ ರತನ್ ಸಿಂಗ್ ಇಬ್ಬರು ಗಂಡುಮಕ್ಕಳು ,ಸಹೊದರ ಸ್ವಲ್ಪ ಓದಿ ಮನೆತನದ ಕಸುಬು ವ್ಯವಸಾಯ ಮುನುವರೆಸಿದ ನಾನು ಎಂಟನೆ ತರಗತಿಯ ವರೆಗೆ ಓದಿ ೧೯೬೬ ರಲ್ಲಿ ಭಾರತಿಯ ಸೇನೆಯಲ್ಲಿ ಸಿಪಾಯಿ ಆಗಿ ಪಂಜಾಬ್ ರೆಜಿಮೆಂಟಿನಲ್ಲಿ ಕರ್ತವ್ಯಕ್ಕೆ ಸೇರಿದೆ.ಹಾಗಾಗಿ "ನಮ್ಮ ಮನೆಯಲ್ಲಿ ಒಬ್ಬ ಜೈ ಜವಾನ್ ಆದ್ರೆ ಇನ್ನೊಬ್ಬ ಜೈ ಕಿಸಾನ್ ಆದ "ಭಾರತಿಯ ಸೇನೆಯಲ್ಲಿ ಕೆಲಸ ಸಿಕ್ಕ ಕೂಡಲೇ ನನಗೆ ಪಕ್ಕದ ಹಳ್ಳಿಯ ಸುಂದರಿಯೊಡನೆ ಮಧುವೆ ಆಯ್ತು.ನಂತರ ನನ್ನನ್ನು ಭಾರತಿಯ ಸೇನೆ
ಭಾರತದ ಈಶಾನ್ಯ ಭಾಗದ ಸಿಕ್ಕಿಂ ರಾಜ್ಯದ ಗ್ಯಾಂಗಟಕ್ ಬಳಿಯ ನತೋಲ ಪಾಸ್ ನಲ್ಲಿರುವ ಚೀನಾ ದೇಶದ ಗಡಿ ಕಾಯಲು ನಿಯೋಜನೆ ಮಾಡಿತು.ಈ ಪ್ರದೆಶವೋ ಸಮುದ್ರ ಮಟ್ಟದಿಂದ ಸುಮಾರು ೧೩೧೨೩ ಅಡಿ ಎತ್ತರವಿದ್ದು ಅತ್ಯಂತ ಅಪಾಯಕಾರಿ ಹವಾಗುಣ ದಿಂದ ಕೂಡಿದ ಪ್ರದೇಶವಾಗಿ ಗಡಿ ಕಾಯುವ ಕೆಲಸ ಅಡಿಗಡಿಗೂ ಒಂದು ಸಾಹಸವಾಗಿತ್ತು.ಹಾಗಿದ್ದ ವೇಳೆ ಒಂದು ದಿನ ನನ್ನ ಸ್ನೇಹಿತ ಸಿಪಾಯಿಗಳೊಂದಿಗೆ ಹೆಸರಕತ್ತೆಯ ಮೇಲೆ ರಕ್ಷಣಾ ಸಾಮಗ್ರಿ ಹೊರಿಸಿಕೊಂಡು ಹಿಮಪರ್ವತದ ದಾರಿಯಲ್ಲಿ ತೆರಳಿದ್ದ ವೇಳೆ ನಾನು ಪ್ರಚಂಡ ರಭಸದಿಂದ ಬೀಸಿದ ಹಿಮಪಾತಕ್ಕೆ ನನ್ನ ರೈಫೆಲ್ ಸಮೇತ ಕಾಲು ಜಾರಿ ಬಿದ್ದು ಅಸುನೀಗಿದೆ.ನನ್ನ ಸಂಗಾತಿಗಳು ಹೇಗೋ ಬಚವಾಗಿಬಿಟ್ಟರು.ನನ್ನ ಶವಕ್ಕಾಗಿ ಎಷ್ಟೋ ಹುಡುಕಾಟ ನಡೆಸಿದ ಸೇನೆಯ ತುಕಡಿ ಪತ್ತೆಹಚ್ಚಲು ಸಾಧ್ಯವಾಗದೆ ಕೈಚೆಲ್ಲಿ ಸುಮ್ಮನಾಗಿಬಿಟ್ಟರು!!! ಆದರೆ ನಾನು ಅನಾಥವಾಗಿ ಹಿಮದ ರಾಶಿಯ ನಡುವೆ ಸಿಕ್ಕಿ ಬಿದ್ದಿದ್ದೆ!! ಆಗ ತಕ್ಷಣ ನೆನಪಿಗೆ ಬಂದವನೇ ನನ್ನ ಸಹ ಸಿಪಾಯಿ ಪ್ರೀತಂ ಸಿಂಗ್ ?? ಹಾಗಾಗಿ ಅವನ ಕನಸಿನಲ್ಲಿ ಕಾಣಿಸಿಕೊಂಡು ಅವನಿಗೆ ನಾನು ಹಾಗು ನನ್ನ ರೈಫೆಲ್ ಬಿದ್ದಿರುವ ಜಾಗತೋರಿಸಿದೆ.ಅವನೂ ಸಹ ಹಿರಿಯ ಅಧಿಕಾರಿಗಳು ನನ್ನ ಶವ ಸಿಗದ ಬಗ್ಗೆ ಸಭೆನದೆಸಿದ್ದ ಜಾಗಕ್ಕೆ ತೆರಳಿ ವಿಚಾರ ತಿಳಿಸಿದ!!, ಮೊದಲು ನಂಬದ ನನ್ನ ಮೇಲಿನ ಅಧಿಕಾರಿಗಳು ಮನಸ್ಸು ಬದಲಾಯಿಸಿ ಮರುದಿನ ಹುಡುಕಾಟ ಶುರುಮಾಡಿದರು,ನಾನು ಪ್ರೀತಂ ಸಿಂಗ್ ನಿಗೆ ಕನಸಿನಲ್ಲಿ ತೋರಿದ ಜಾಗಕ್ಕೆ ನಾಲ್ಕು ಸಿಪಾಯಿಗಳೊಂದಿಗೆ ಬಂದು ಹಿಮದ ಮಧ್ಯೆ ನನ್ನು ಹುಡುಕಲು ಪ್ರಾರಂಭಿಸಿದರು.ಮೊದಲು ಹಿಮ ಕಡಿಯುತ್ತಿದ್ದ ಗುದ್ದಲಿಗೆ ನನ್ನ ಹೆಮ್ಮೆಯ ರೈಫೆಲ್ ತಗುಲಿ ಅದನ್ನು ಹೊರತೆಗೆಯಲಾಯಿತು ನಂತರ ಸ್ವಲ್ಪವೆದೂರದಲ್ಲಿ ಹಿಮದ ಕಡಿತದಿಂದ ವಿರೂಪವಾದ ನನ್ನ ಶವ ದೊರೆತಿತ್ತು!! ಪ್ರೀತಂ ಸಿಂಗ್ ಹೇಳುತ್ತಿದ್ದ ತಾನು ಕನಸಿನಲ್ಲೇ ನೋಡಿದ ರೀತಿಯಲ್ಲಿಯೇ ಶವ ಕಂಡಿದೆಂದು !! ಯೇನುಮಾಡಲಿ ನನ್ನ ಮಾತು ಯಾರಿಗೂ ಕೇಳದು ಎಲ್ಲವನ್ನು ನಾನುಮೂಕವಾಗಿ ನೋಡುತ್ತಾ ದೇಶಸೇವೆ ಮಾಡಲು ಸಾಧ್ಯ ವಾಗದ ಬಗ್ಗೆ ನನ್ನಲ್ಲಿಯೇ ಕೊರಗಿದೆ.ನಂತರ ನನ್ನ ಕುಟುಂಬ ದವರನ್ನು
ನತೋಲಾ ಪಾಸ್ ಗೆ ಕರೆಸಿ ನನ್ನ ಅಂತ್ಯ ಸಂಸ್ಕಾರವನ್ನು ಸಕಲ ಮರ್ಯಾದೆಗಳೊಂದಿಗೆ ಮಾಡಲಾಯಿತು.ನನ್ನ ಬಂಧುಗಳು ಶೋಕ ಭರಿತರಾಗಿ ನನ್ನ ಸ್ವಗ್ರಾಮಕ್ಕೆ ತೆರಳಿ ಉಳಿದ ಕಾರ್ಯ ಮಾಡಿದರೆಂದು ತಿಳಿಯಿತು. ಮುಂದಿನ ದಿನಗಳಲ್ಲಿ ನನ್ನ ಸಂಗಾತಿಗಳಾಗಿದ್ದ ಸಿಪಾಯಿಗಳೊಂದಿಗೆ ನಾನು ಕರ್ತವ್ಯ ಮುಂದುವರೆಸಿ ಭಾರತ ಮಾತೆಯ ಸೇವೆಯಲ್ಲಿ ತೊಡಗಿದೆ ಭಾರತ ಚೀನಾ ಗಡಿಯಲ್ಲಿ ನತೋಲ ಪಾಸ್ ನಲ್ಲಿಯೇ ನೆಲೆಸಲು ನಿರ್ಧರಿಸಿದೆ . ನಾನು ಸಹ ರಾತ್ರಿಯ ವೇಳೆ ಗಸ್ತು ತಿರುಗಿ ನಿದ್ದೆ ಮಾಡುತ್ತಿದ್ದ ನನ್ನ ಹಲವು ಸ್ನೇಹಿತರಿಗೆ ಕಪಾಳ ಮೋಕ್ಷ ಮಾಡಿ ಎಚ್ಚರಿಸಿ ಕರ್ತವ್ಯ ಪಾಠ ಮಾಡಿದ್ದೇನೆ ನಂತರ ಅವರ ಕನಸಿನಲ್ಲಿ ಕಾಣಿಸಿಕೊಂಡು ಅವರ ಜೊತೆ ಇರುವುದಾಗಿ ತಿಳಿಸಿದ್ದೇನೆ.ಇದರಿಂದ ನನ್ನ ಸ್ನೇಹಿತರೂ ನನ್ನ ಬಗ್ಗೆ ಹೆಮ್ಮೆಯಿಂದ ಜೊತೆಯಲ್ಲಿ ಇದ್ದು ನನ್ನ ಬಗ್ಗೆ ಭಯವಿಲ್ಲದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ!!,ಭಾರತೀಯ ಸೇನೆಯ ಅಧಿಕಾರಿಗಳು ಸಹ ನನ್ನ ಇರುವಿಕೆ ಬಗ್ಗೆ ನಂಬಿಕೆ ಇಂದ ನನಗೆ ಒಂದು ಸಮಾಧಿ ನಿರ್ಮಿಸಿದ್ದಾರೆ.ಮೊದ ಮೊದಲು ಚೀನಿ ಸೈನಿಕರೂ ನನ್ನನ್ನುನಂಬುತ್ತಿರಲಿಲ್ಲ ಕ್ರಮೇಣ ಅವರಿಗೂ ನನ್ನ ಇರುವಿಕೆ ಬಗ್ಗೆ ನಂಬಿಕೆ ಬಂದಿದೆ.ಆ ಕಥೆ ಕೇಳಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಾಗದ ಕೆಲವೇ ಮೀಟರುಗಳ ಹತ್ತಿರ ಚೀನಾ ದೇಶದ ಸೈನಿಕರ ತಾಣವಿದೆ
ಒಮ್ಮೆ ನಾನು ಒಂದು ಬಿಳಿ ಕುದುರೆ ಹತ್ತಿ ರಾತ್ರಿ ಗಡಿ ಪಕ್ಕದಲ್ಲಿ ಹೋಗುತ್ತಿರುವುದನ್ನು ನೋಡಿ ನಮ್ಮ ದೇಶದ ಸೈನಿಕ ಅಧಿಕಾರಿಗಳಿಗೆ ಪತ್ರ ಬರೆದದರಂತೆ. ಸ್ವಾಮೀ ನಿಮ್ಮ ಒಬ್ಬ ಸೈನಿಕ ನಮ್ಮ ಅನುಮತಿಯಿಲ್ಲದೆ ಇಲ್ಲಿ ಬಿಳಿ ಕುದುರೆ ಮೇಲೆ ಕುಳಿತು ಗಸ್ತು ತಿರುಗುತ್ತಿದ್ದಾನೆ ಅವನನ್ನು ಮತ್ತೊಮ್ಮೆ ಕಂಡರೆ ಶೂಟ್ ಮಾಡಿ ಸಾಯಿಸ್ತಿವಿ ಅಂತ ಹೇಳಿದರಂತೆ ಆಗ ನನ್ನ ಸೇನೆಯ ಅಧಿಕಾರಿಗಳು ಅವರನ್ನುನಂಬಿಸಲು ಹರ ಸಾಹಸಮಾಡಿ ಒಪ್ಪಿಸಿದ್ದಾರೆ.ಈಗ ನೋಡಿ ಇಲ್ಲಿ ನಡೆಯುವ ಭಾರತ ಚೀನಾ ಗಡಿಯ ಎರಡೂ ಕಡೆಯ ಅಧಿಕಾರಿಗಳ ಸಭೆಯಲ್ಲಿ ನನಗೂ ಸಹ ಒಂದು ಕುರ್ಚಿಹಾಕಿ ಗೌರವಿಸುತ್ತಾರೆ.ಇದು ಪ್ರತಿ ತಿಂಗಳಿಗೊಮ್ಮೆ ನಡೆಯುವುದಾಗಿ ನನ್ನ ಸ್ನೇಹಿತ ಹೇಳಿದ [ಗಡಿಯಲ್ಲಿನ ಚೀನಿ ಭಾರತೀಯ ಸೇನಾ ಅಧಿಕಾರಿಗಳ ಸಭೆಯಲ್ಲಿ ಇಂದಿಗೂ ಒಂದು ಕುರ್ಚಿ ಹಾಕಿ ಹರ್ಭಜನ್ ಸಿಂಗ್ ಆತ್ಮ ಅಲ್ಲಿ ಕುಳಿತಿದೆ ಎಂದು ಭಾವಿಸಿ ಸಭೆ ನಡೆಸುವುದಾಗಿ ತಿಳಿದು ಬಂತು]ಚೀನಿಯರೂ ಸಹ ನನ್ನನ್ನು ನಂಬಿದ್ದಾರೆ.ಹಾಲಿ ನಾನು ನಾತೋಲ ಪಾಸ್ ನಲ್ಲಿ ವಾಸವಾಗಿದ್ದೇನೆ
ಬನ್ನಿ ನನ್ನ ಮಲಗುವ ಕೊಟಡಿ ತೋರಿಸ್ತೀನಿ [ಮೇಲಿನ ಚಿತ್ರ ನಾತೋಲಾ ಪಾಸ್ ನಲ್ಲಿರುವ ಹರ್ಭಜನ್ ಸಿಂಗ್ ನ ಅಧಿಕೃತ ಕೊಟಡಿ ]ನನಗೆ ಸೇನೆಯಿಂದ ಒಂದು ಮನೆ ಇದ್ದು ಅದರಲ್ಲಿ ಒಬ್ಬ ಸೈನಿಕನಿಗೆ ನೀಡಬಹುದಾದ ಎಲಾ ಸವಲತ್ತನ್ನು ನನಗೆ ನೀಡಲಾಗಿದೆ ,ಇದುವರೆವಿಗೂ ನನಗೆ ಸಂಬಳ,ಭತ್ಯೆ ನೀಡಲಾಗಿದೆ, ನನ್ನ ಕೆಲಸದಲ್ಲಿ ನನಗೆ ಭಡ್ತಿ ನೀಡಿ ನನ್ನನ್ನು ಸತ್ಕರಿಸಲಾಗಿದೆ.ಸೇನೆಯ ಅಧಿಕಾರಿಗೆ ಸಿಗುವ ಎಲ್ಲಾ ಸವಲತ್ತುಗಳು ನನಗೆ ನೀಡಲಾಗಿದೆ.[ಈ ಬಗ್ಗೆ ಸೇನೆಯಲ್ಲಿ ಅಧಿಕೃತ ದಾಖಲೆಗಳು ಇರುವುದು ನಿಜವಂತೆ ] ನಾನು ಸಹ ಪ್ರತಿದಿನ ಜೀಪಿನಲ್ಲಿ ನನ್ನ ಸಮವಸ್ತ್ರ ಧರಿಸಿ ಗಡಿಯ ಗುಂಟ ತಿರುಗಾಡಿ ಬರುತ್ತೇನೆ ನನ್ನ ಮನೆಯಲ್ಲಿ ಯಾವಾಗಲೂ ಒಂದು ಜ್ಯೋತಿ ನಂದದೆ ಉರಿಯುತ್ತಿದೆ.ನಾನು ಪ್ರತಿ ವರ್ಷದಲ್ಲಿ ಸೆಪ್ಟೆಂಬರ್ ಅಥವಾ ನವೆಂಬರ್ ನಲ್ಲಿ ನನ್ನ ಹುಟ್ಟೂರಿಗೆ ರಜದ ಮೇಲೆ ಬರುತ್ತಿದ್ದೆ ಆಗಲೂ ಸಹ ನನಗೆ ಎರಡು ತಿಂಗಳ ರಜೆ ಮಂಜೂರಿ ಮಾಡಿ ಗೌರವ ಪೂರ್ವಕವಾಗಿ ನನ್ನ ಎಲ್ಲಾ ಸಾಮಗ್ರಿಗಳ ಜೊತೆ ಆರ್ಡರ್ಲಿ ಯೊಬ್ಬರು ಜೀಪಿನಲ್ಲಿ ಇತ್ತು ಚಾಲಕನ ಪಕ್ಕದ ಸೀಟಿನಲ್ಲಿ ನನ್ನ ಭಾವ ಚಿತ್ರ ಇರಿಸಿ ಗಡಿ ಭಾಗದಿಂದ ಪಯಣ ಆರಂಭಿಸಿ ಅಸ್ಸಾಂ ನ ಸಿಲಿಗುರಿ ಸೇರಿ ,ಒಂದು ದಿನ ವಿಶ್ರಾಂತಿ ಪಡೆದು ಮರುದಿನ ರೈಲಿನಲ್ಲಿ ಪಯಣ ಆರಂಭಿಸಿ ಪಂಜಾಬ್ ರಾಜ್ಯದ ಜಾಲಂದರ್ ನಲ್ಲಿರುವ ರೆಜಿಮೆಂಟಿನ ಕಾರ್ಯಾಲಯದ ಸಮೀಪದ ಧಾರ್ಮಿಕ ಕ್ಷೇತ್ರದಲ್ಲಿ ಒಂದು ದಿನ ಉಳಿದು ಕೊಂಡು
ನಂತರ ಸೇನೆಯ ಜೀಪಿನಲ್ಲಿ ಆರ್ಡರ್ಲಿ ಜೊತೆ ನನ್ನ ಸ್ವಗ್ರಾಮ ದ ನನ್ನ ಮನೆ ಮನೆ ತಲುಪುತ್ತಿದ್ದೆ.ಅಲ್ಲಿ ನನ್ನ ಮನೆಯಲ್ಲಿ ನನಗಾಗಿ ಒಂದು ಕೊಟಡಿ ಸಿದ್ದವಾಗಿರುತ್ತಿತ್ತು.[ಮೇಲಿನ ಚಿತ್ರದಲ್ಲಿ ಬಂಧುಗಳು ನನಗಾಗಿ ಕಾಯುತ್ತಿರುವ ದೃಶ್ಯ ]ಅಲ್ಲಿಯೂ ಸಹ ನನಗೆ ನನ್ನ ಗ್ರಾಮದ ಜನರಿಂದ ಗೌರವ ಸಿಗುತ್ತಿತ್ತು.ನನ್ನ ತಾಯಿ ತಂದೆಯವರೊಂದಿಗೆ ಅವರ ಕನಸಿನಲ್ಲಿ ಕಾಣಿಸಿಕೊಂಡು ಮಾತಾಡುತ್ತಿದ್ದೆ.ನನ್ನ ತಾಯಿಗೆ ನನಗೆ ವಯಸ್ಸಾದ ಕಾರಣಇಲ್ಲಿಗೆ ಬಂದಾಗ ಉಳಿದುಕೊಳ್ಳಲು ಒಂದು ಕೊಟಡಿ ಬೇಕೆಂದು ಹೇಳಿದ್ದೆ ಅದನ್ನೂ ಸಹ ನನಗಾಗಿ ಕಟ್ಟಲಾಗಿದೆ ಈಗ ನಾನು ಬಂದಾಗ ಉಳಿಯುವುದು ಇಲ್ಲಿಯೇ.ಎರಡು ತಿಂಗಳ ರಜೆ ಮುಗಿಸಿ ಮತ್ತೆ ನಾನು ನನ್ನ ಕರ್ತವ್ಯಕ್ಕೆ
ನಾತೋಲ ಪಾಸ್ ಗೆ ತೆರಳಿ ಹಾಜರಾಗುತ್ತಿದ್ದೆ.ನನಗೆ ನಾತೋಲ ಪಾಸ್ ಅಂದ್ರೆ ಬಹಳ ಇಷ್ಟ ಅದಕ್ಕೆ ಅಲ್ಲಿಯೇ ಉಳಿದಿದ್ದೇನೆ ಇಂದಿಗೂ ನಾನು ಅಲ್ಲಿಯೇ ಇದ್ದೇನೆ.ಆದ್ರೆ ಇತ್ತೀಚಿಗೆ ನನ್ನ ಜೊತೆಯಲ್ಲಿದ್ದ ಸಿಪಾಯಿ ಒಬ್ಬ ನನಗೆ ಭಾರತೀಯ ಸೇನೆ ನೀಡುತ್ತಿರುವ ಸವಲತ್ತುಗಳ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿ ನನ್ನ ಸವಲತ್ತಿಗೆ ಕತ್ತರಿ ಹಾಕಿದ್ದಾನೆ ಆದರೂ ನಾನು ಇಲ್ಲೇ ಇದ್ದು ದೇಶ ಸೇವೆ ಮುಂದುವರೆಸಿಕೊಂಡು ಹೋಗುತ್ತೇನೆ .ನನ್ನ ಕಥೆ ಓದಿದ ನಿಮಗೆ ನನ್ನ ಶುಭ ಕಾಮನೆಗಳು.ನಾನು ಸತ್ತಮೇಲೂ ತಾಯಿ ಭಾರತಿಯ ಸೇವೆ ಮಾಡುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ ನೀವು ಸಹ ಭಾರತ ಮಾತೆಯ ನೆಚ್ಚಿನ ಮಕ್ಕಳಾಗಿ ಬಾಳಿರೆಂದು ಹಾರೈಸುತ್ತೇನೆ
ನಮಸ್ಕಾರ.ಮೇರಾ ಭಾರತ್ ಮಹಾನ್ .
ನೀವು ಒಮ್ಮೆ ಯಾದರೂ ನತೋಲಾ ಪಾಸ್ಗೆ ಬಂದು ನಾನಿದ್ದ ಜಾಗವನ್ನು ನೋಡಿದರೆ ನನಗೆ ಖುಷಿಯಾಗುತ್ತದೆ.ನಿಮ್ಮ ಬರುವಿಕೆಯನ್ನು ನಾನು ಕಾಯುತ್ತೇನೆ
7 comments:
ನಾನಂತೂ ನಯಾ ಪೈಸಾ ನಂಬುವುದಿಲ್ಲ!!!
ಹಾಯ್ ಬೆಂಗಳುರಲ್ಲೂ ಇದರ ಬಗ್ಗೆ ಓದಿದ್ದೆ.
ಒಳ್ಳೇ ಬರಹ
ಒಳ್ಳೇ ಮಾಹಿತಿ! ನ೦ಬಲು ಮನಸ್ಸು ಒಫ್ಫುತ್ತಿಲ್ಲ! ಆದರೂ ಜಗತ್ತಿನಲ್ಲಿ ನಮ್ಮ ಅರಿವಿಗೇ ಸಿಗದ ಹಲವಾರು ವಿಷಯಗಳಿವೆ.
What we know here is very little & what we ignore is of immense!
ಸುಬ್ರಮಣ್ಯ ಮಾಚಿಕೊಪ್ಪ ರವರೆ , ಕೆ ಸೀತಾರಾಮ ರವರೆ . ನಿಮ್ಮ ಅನಿಸಿಕೆ ತಲುಪಿದೆ. ನಂಬುವ ಕೆಲವು ಸೈನ್ಯಾಧಿಕಾರಿಗಳ ಪ್ರಾರ್ಥನೆಯ ಬಗ್ಗೆ ಶಿಲಾನ್ಯಾಸದ ಚಿತ್ರ ಸಿಕ್ಕಿದೆ ಪ್ರಕಟಿಸಿದ್ದೇನೆ ನೋಡಿ!!!
ಅಲ್ಲ ಮಾರಾಯರೇ ಅದು ದೆವ್ವಾನೆ ಆಗಿದ್ರೆ ಅದೊಂದು ಪುಂಗಿ ದೆವ್ವ. ಅದಕ್ಕೆ ಅಷ್ಟೆಲ್ಲ ದೇಶ ಪ್ರೇಮ ಇದ್ರೆ ಅದು ಯಾಕೆ ಅರುಣಾಚಲ ಪ್ರದೇಶ ನ ಕಾಪಡಬಾರದು???. ಚೀನಾ ದವರು ಅಲ್ಲಿ ಬಹಳ ಗಲಭೆ ಮಾಡ್ತಾ ಇದ್ದರಲ್ಲ?
ಹೋಗ್ಲಿ ಬಿಡಿ ದೆವ್ವಕ್ಕೆ ಸ್ವಲ್ಪ ಸಾಮಾನ್ಯ ಜ್ಞಾನ ಕಡಿಮೆ ಇದೆ ಅನ್ಸುತ್ತೆ.
ನಂಗೆ ಯಾಕೆ ಹೀಗೆ ಅನ್ನಿಸ್ತು ಅಂದ್ರೆ ನಮ್ಮ ದೇಶದಲ್ಲಿ ಅತ್ಯಂತ ಭ್ರಷ್ಟ ವಾಗಿರೋ ಇಲಾಕೆ ಅಂದ್ರೆ ಅದು ಸೈನ್ಯ. ಅಧಿಕಾರಿಗಳು ಸೈನಿಕರನ್ನ ಜೀತದ ಆಳುಗಲಿಗಿಂತ ಕೆಟ್ಟದಾಗಿ ನಡೆಸಿಕೊಳ್ಳುವುದು, ಹಣ ದುರುಪಯೋಗ ಮುಂತಾದವು ತೀರ ಮುಚ್ಚಿಟ್ಟ ಸತ್ಯ ಏನಲ್ಲ. ಸೈನ್ಯದ ಅಧಿಕಾರಿಗಳೇ ಆತನ ಸಂಬಳ, ಇನ್ನು ಮುಂತಾದ ಸೌಲಬ್ಯ ಗಳನ್ನೂ ದುರುಪಯೋಗ ಮಾಡಲು ಈ ಕಥೆ ಕಟ್ಟಿರಬಹುದು, ಅದನ್ನು ಹಲವರು ಜನ ನಂಬಿ ಬರುತ್ತಲಿರಬಹುದು.
ನಮಸ್ಕಾರ ಬಾಲು ಸಾರ್ ನಿಮ್ಮ ಸಿಟ್ಟು ನನಗೆ ಅರ್ಥ ಆಗುತ್ತೆ. ಆದ್ರೆ ಇದನ್ನು ನಂಬುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ .ಆದ್ರೆ ಇಂಥಹ ಒಂದು ಘಟನೆ ನಡೆದಿದೆ,ಅದಕ್ಕೆ ಒಂದು ಸ್ಥಳ ಇದೆ !!! ಅದು ಸಿಕ್ಕಿಂ ರಾಜ್ಯದ ಒಂದು ಪ್ರವಾಸಿ ಆಕರ್ಷಣೆ ಆಗಿದೆ, ಅದಕ್ಕೆ ಸಂಭಂದಿಸಿದಂತೆ ರಕ್ಷಣಾ ಇಲಾಖೆಯಲ್ಲಿ ದಾಖಲೆಗಳು ಇದೆ !!! ಇದಲ್ಲವ ಸೋಜಿಗ.ನೀವು ಹೇಳಿದ ಮಾತಿನಲ್ಲಿಯೂ ಸತ್ಯ ವಿರಬಹುದು.ಆದ್ರೆ ಸೈನ್ಯಾಧಿಕಾರಿಗಳಲ್ಲಿ ಯೆಷ್ಟುಜನರನ್ನು ಮೂರ್ಖರಾಗಿಸಲು ಸಾಧ್ಯ ??? ನೀವು ನಬದಿದ್ದರೂ ಪರವಾಗಿಲ್ಲಾ !!!ಈ ಜಾಗ ನೋಡಿದ್ದೀರಾ?? ಹಾಗಿಲ್ಲದಿದ್ದರೆ ಒಮ್ಮೆ ಹೋಗಿ ನೋಡಿ ಬನ್ನಿ !!!
ಒಳ್ಳೆ ಬರಹ
ನಂಬೋದು ಕಷ್ಟ
ಜಗತ್ತಿನಲ್ಲಿ ನಮ್ಮ ಅರಿವಿಗೆ ಮೀರಿದ ಎಷ್ಟೋ ಸಂಗತಿಗಳು ಇರುತ್ತವೆ ಬಾಲೂ ಸಾರ್. ನನಗೂ ನಂಬೋದಕ್ಕೆ ಆಗುತ್ತಿಲ್ಲ ಆದರೂ ಇದ್ದರೂ ಇರಬಹುದೇನೋಪ್ಪಾ?
Post a Comment