ಪ್ರವೇಶದಲ್ಲಿ ಕಂಡ ಸಿನಿಮ ಯೂನಿಟ್ ವಾಹನಗಳು |
ದಾಂಡೇಲಿ ಕಥೆಯನ್ನು ಮೆಲಕು ಹಾಕುತ್ತಾ ರೆಸಾರ್ಟ್ ಆವರಣ ಪ್ರವೇಶಿಸಿದೆ, ಅರೆ ..... ಇದೇನು ಕಾಡಿನ ಈ ಪ್ರದೇಶಕ್ಕೆ ಇವರ್ಯಾಕೆ ಬಂದರು ??? ಹೌದು ಇವರ್ಯಾಕೆ ಬಂದರು.. ? ಇಲ್ಲಿನ ಜೀವಿಗಳ ಜೀವನಕ್ಕೆ ತೊಂದರೆ ಮಾಡಲು ........... !!? ಹೌದು ದಾಂಡೇಲಿ ಅಭಯಾರಣ್ಯ ವನ್ಯ ಜೀವಿ ವೈವಿಧ್ಯತೆಗೆ ಹೆಸರುವಾಸಿ ಆದರೆ ಆವರಣ ಪ್ರವೇಶಿಸಿದಂತೆ ನಮಗೆ ಕಂಡದ್ದು ಸಿನಿಮ ಯೂನಿಟ್ ವಾಹನಗಳ ದರ್ಶನ , ದೊಡ್ಡ ದೊಡ್ಡ ಸ್ಪಾಟ್ ಲೈಟ್ ಗಳು, ದೊಡ್ಡದಾದ ಜನರೇಟರ್ ಗಳು, ಕ್ಯಾಮರಾಗಳು , ಜೊತೆಗೆ ಸಿನಿಮಾ ಶೂಟಿಂಗ್ ಮಾಡುವ ಸಡಗರದ ದೊಡ್ಡ ಗಲಾಟೆ , ಶಬ್ಧ , ಇತ್ಯಾದಿಗಳೆಲ್ಲಾ ಸೇರಿ , ಇದು ಜಂಗಲ್ ಲಾಡ್ಜೋ ಅಥವಾ ಸ್ಟುಡಿಯೋ ನೋ ಎನ್ನುವ ಅನುಮಾನ ಬಂದಿತು,
ಸಾರಿ ಸಾರ್ ಎಲ್ಲಾ ಬುಕ್ ಆಗಿದೆ. |
ಆದರೂ ನೋಡೋಣ ಅಂತಾ ಮುಂದೆ ಸಾಗಿದೆವು. ಸ್ವಾಗತ ನೀಡಿದ ಅಲ್ಲಿನ ಸಿಬ್ಬಂಧಿ ನಗುಮುಖದಿಂದ ಬರ ಮಾದಿಕೊಂಡರು , ಏನ್ ಸಾರ್ ರೂಮ್ಸ್ ಬುಕ್ ಆಗಿದೆಯಲ್ವಾ ?? ಎಂಬ ನಮ್ಮ ಶ್ರೀಧರ್ ಮಾತಿಗೆ , ಇಲ್ಲಾ ಸಾರ್ ಮಾಹಿತಿ ಸಿಕ್ಕಿಲ್ಲ ಎಲ್ಲಾ ರೂಂ ಗಳೂ ಬುಕ್ ಆಗಿವೆ ನಿಮಗೆ ಇಲ್ಲಾ ಸಾರ್ ಅಂತಾ ಹೇಳಿ ದಾಗ ನಮ್ಮ ಶ್ರೀಧರ್ ಒಂದು ಕ್ಷಣ ತಬ್ಬಿಬ್ಬಾದರು , ನಂತರ ಏನೂ ಯೋಚನೆ ಬೇಡ ಸಾರ್ ಎಲ್ಲಾ ರೆಡಿ ಇದೆ ಬನ್ನಿ ಅಂತಾ ನಮ್ಮ ರೂಂ ಗಳನ್ನೂ ತೋರಿದರು .
ಗೋಲ್ ಘರ್ ನಲ್ಲಿ ಊಟ ಉಪಹಾರ |
ನಮ್ಮ ಲಗ್ಗೇಜ್ ಗಳನೆಲ್ಲಾ ರೂಂ ನಲ್ಲಿ ಇಳಿಸಿ , ಸ್ವಲ್ಪ ವಿಶ್ರಾಂತಿ ಪಡೆದು ಮಧ್ಯಾಹ್ನದ ಊಟಕ್ಕೆ ಗೋಲ್ ಘರ್ ಕಡಗೆ ಬಂದೆವು, ಒಳ್ಳೆಯ ರುಚಿಯಾದ ಆಹಾರ ಸೇವನೆ ಆಯಿತು, ಅಲ್ಲೇ ಇದ್ದ ಒಂದು ಬೆಕ್ಕು ಮಕ್ಕಳನ್ನು ಸೆಳೆದಿತ್ತು, ಎಲ್ಲಾ ಮಕ್ಕಳು ಆ ಬೆಕ್ಕನ್ನು ಹಿಂಬಾಲಿಸಿ ಅದಕ್ಕೆ ತಿಂಡಿ ಹಾಕಿ ಸಂಭ್ರಮ ಪಟ್ಟರು, ಮುಂದಿನ ಕಾರ್ಯಕ್ರಮಕ್ಕೆ ಸಿದ್ಧವಾದೆವು. ಮುಂದಿನ ಕಾರ್ಯಕ್ರಮ ಜೀಪ್ ಸಫಾರಿ
ಅಣಶಿ ಅರಣ್ಯ ಪ್ರದೇಶಕ್ಕೆ ಸ್ವಾಗತ |
ಅರಣ್ಯ ಚೆಕ್ ಪೋಸ್ಟ್ |
ಸಂಜೆ ನಾಲ್ಕು ಘಂಟೆಗೆ ನಮ್ಮ ಅರಣ್ಯ ಯಾನ ಆರಂಭ ವಾಯಿತು. ಅಣಶಿ ಅರಣ್ಯ ಪ್ರದೇಶಕ್ಕೆ ನಮ್ಮನ್ನು ಕರೆದು ಕೊಂದು ಹೊಗಲಾಯಿತು. ಆದರೆ ನಮ್ಮ ಅದೃಷ್ಟ ಕೋಟ ಆಗಿತ್ತು ಯಾವುದೇ ವನ್ಯ ಜೀವಿ ಕಾಣ ಸಿಗಲಿಲ್ಲ. ಜೊತೆಗೆ ಸಣ್ಣದಾಗಿ ಮಳೆ ಹನಿ ಬೀಳ ತೊಡಗಿತು ,
ಪ್ರಕೃತಿ ವೀಕ್ಷಣಾ ಸ್ಥಳ |
ಬಾನಲ್ಲಿ ಮೂಡಿದ ಬಣ್ಣದ ಚಿತ್ತಾರ |
ಕಾಡಿನಲ್ಲಿ ಒಂದೆಡೆ ನಮ್ಮನ್ನೆಲ್ಲಾ ಇಳಿಸಿ ವೀಕ್ಷಣಾ ಸ್ಥಳಕ್ಕೆ ಕರೆದು ಕಂಡು ಹೊಗಲಾಯಿತು. ಅಲ್ಲಿದ್ದ ವೀಕ್ಷಣಾ ಸ್ಥಳದಿಂದ ಪ್ರಕೃತಿಯನ್ನು ನೋಡಲು ಬಹಳ ಸಂತಸವಾಯಿತು. ನಮ್ಮ ಕ್ಯಾಮರ ದಿಂದ ಒಂದಷ್ಟು ಚಿತ್ರಗಳನ್ನು ಸೆರೆ ಹಿಡಿದು ಮುಂದೆ ಸಾಗಿದೆವು . ನಮ್ಮ ಜೊತೆ ಇದ್ದ ಜಂಗಲ್ ಲಾಡ್ಜ್ ಸಿಬ್ಬಂಧಿಗೆ ಅರಣ್ಯದ ಬಗ್ಗೆ ಅಂತಹ ಮಾಹಿತಿ ಇರಲಿಲ್ಲ , ಅವರು ನಮ್ಮಂತಹ ಪ್ರವಾಸಿಗರ ಜೊತೆ ಮಾಹಿತಿ ಹಂಚಿ ಕೊಳ್ಳುವ ಉತ್ಸಾಹ ತೊರಲಿಲ್ಲ. ಅಲ್ಲಿನ ಅರಣ್ಯದ ಬಗ್ಗೆ ನಾವೇ ಕೇಳಿದ ಪ್ರಶ್ನೆಗಳಿಗೂ ಉತ್ತರ ನೀಡುವ ಆಸಕ್ತಿ ಅವರಲ್ಲಿ ಕಾಣಲಿಲ್ಲ . ಜಂಗಲ್ ಲಾಡ್ಜಸ್ ಬಗ್ಗೆ ಇದ್ದ ಒಂದು ಕಲ್ಪನೆಕರಗುತ್ತಾ ಇರುವ ಭಾವನೆ ಉಂಟಾಯಿತು ನಮಗೆ.
ವೀಕ್ಷಣ ಗೋಪುರ |
ಮತ್ತೊಂದೆಡೆ ಕಂಡ ರಮ್ಯ ನೋಟ |
ಮುಂದೆ ಸಾಗಿದ ನಮಗೆ ವನ್ಯ ಜೀವಿಗಳೂ ಕಾಣಲಿಲ್ಲ, ಸಿಬ್ಬಂಧಿಗಳೂ ನಿರುತ್ಸಾಹ ದಿಂದ ಇದ್ದರು ಪ್ರಕೃತಿಯೂ ಸಹಕರಿಸಲಿಲ್ಲ. ಯಾಕೋ ಬೋರ್ ಆದ ಸಫಾರಿ ಇದಾಗಿತ್ತು. ಇಂತಹವೆಲ್ಲಾ ಎಷ್ಟೋ ಜನರಿಗೆ ಆಗಿರುತ್ತೆ ಅಂತಾ ಸಮಾಧಾನ ಮಾಡಿಕೊಂಡ ನಾವುಗಳು ಇರೋದರಲ್ಲೇ ಖುಷಿ ಪಡೋಣ ಎಂಬ ಪಾಲಿಸಿಗೆ ಹೊಂದಿಕೊಂಡೆವು. ಅಲ್ಲೊಂದು ವೀಕ್ಷಣಾ ಗೋಪುರದಲ್ಲಿ ನನಗೆ ಸುಂದರ ರಮ್ಯ ನೋಟ ಸಿಕ್ಕಿತು. ,
ಕಾಡಿನಲ್ಲಿ ಪ್ರವಾಸಿಗಳು ಸುರಿದ ತ್ಯಾಜ್ಯಗಳನ್ನು ನೋಡಿ |
ಅಲ್ಲೇ ಸನಿಹದಲ್ಲಿ ನಮಗೆ ದರ್ಶನ ನೀಡಿತ್ತು ಪ್ಲಾಸ್ಟಿಕ್ ಬಾಟಲ, ಬಿಸ್ಕೆಟ್ ಪ್ಯಾಕೆಟ್ ಗಳ ರಾಪರ್ , ಬಿಯರ್ ಬಾಟಲ , ಇತರ ತ್ಯಾಜ್ಯ ವಸ್ತುಗಳು, ದಟ್ಟ ಕಾಡಿನಲ್ಲಿ ಇವನ್ನೆಲ್ಲ ಸುರಿದು ವನ್ಯ ಜೀವಿಗಳ ಬಗ್ಗೆ ಉದ್ದುದ್ದ ಮಾತಾಡುವ ನಮ್ಮ ಬಗ್ಗೆ ಅಸಹ್ಯ ಹುಟ್ಟಿತು . ಇದರ ಬಗ್ಗೆ ನಮ್ಮ ಜೊತೆಯಲ್ಲಿದ್ದ ಸಿಬ್ಬಂಧಿಗಳಿಗೆ ಹೇಳಿದರೆ ಅಯ್ಯೋ ಬಿಡಿ ಸಾರ್ ಇವೆಲ್ಲಾ ಕಾಮನ್ ಅಂದ್ರು . ವಿಷಾದದ ಮುಖ ಹೊತ್ತು ಜಂಗಲ್ ಲಾಡ್ಜ್ ಗೆ ವಾಪಸ್ಸಾದೆವು,
ಚಿತ್ರೀಕರಣದ ಭರಾಟೆ |
ಹೈ ಬೀಮ್ ಲೈಟ್ ನ ಬೆಳಕು ಹಾಗು ಲಾಡ್ಜ್ ತುಂಬಾ ಚಿತ್ರೀಕರಣ ಸಾಮಗ್ರಿ ಗಳ ಚೆಲ್ಲಾಟ |
ಅಲ್ಲಿಗೆ ಬಂದ ನಮಗೆ ಎದುರಾದದ್ದೇ ಚಿತ್ರೀಕರಣ ತಂಡ ದೊಡ್ಡ ಹೈ ಬೀಮ್ ಲೈಟ್ ಗಳ ಬೆಳಕಿಗೆ ಅಲ್ಲಿನ ರಾತ್ರಿ ಕೂಡ ಬೆಳಕಾಗಿತ್ತು, ಅಲ್ಲಿನ ಮರಗಳಲ್ಲಿದ್ದ ಪಕ್ಷಿಗಳು, ಕೋತಿಗಳು ವಿಚಿತ್ರವಾಗಿ ಕೂಗುತ್ತಿದ್ದವು, ಇದ್ಯಾವುದೂ ಆ ಚಿತ್ರೀಕರಣ ತಂಡಕ್ಕೆ ಗೊತ್ತಿರಲಿಲ್ಲ. ಅದರ ಬಗ್ಗೆ ಜಂಗಲ್ ಲಾಡ್ಜ್ ನವರೂ ಸಹ ತಲೆ ಕೆದಿಸಿಕೊಂಡಿರಲಿಲ್ಲ ,ಜಂಗಲ್ ಲಾಡ್ಜ್ ನವರ ಉದ್ದೇಶ ಪರಿಸರ ಉಳಿಸುವ ಪ್ರವಾಸ ಎಂಬ ಕಲ್ಪನೆ ಇಲ್ಲಿ ಕಾಣಲಿಲ್ಲ . ಜಂಗಲ್ ಲಾಡ್ಜ್ ನವರ ಉದ್ದೆಶದಬಗ್ಗೆ ಈ ಲಿಂಕ್ ನೋಡಿ http://junglelodges.com/index.php/about-us.html
Our objective
The Company promotes Eco-tourism, wildlife tourism, adventure tourism and various outdoor activities like trekking, camping, white water rafting, fishing etc., that are non consumptive components of eco-tourism and in general help in environment conservation.
ಲಾಡ್ಜ್ ನಲ್ಲಿದ್ದ ಇತರ ಪ್ರವಾಸಿಗರಿಗೂ ಇಂತದೆ ಕಿರಿ ಕಿರಿ ಆಗಿದ್ದರೂ ಯಾರೂ ಮಾತಾಡದ ಸನ್ನಿವೇಶ , ಜೊತೆಗೆ ಆಕ್ಷನ್ , ಕಟ್ , ಹಾಗು ಇತರ ತಂತ್ರಜ್ಞರಿಗೆ ನೀಡುವ ಆಜ್ಞೆಯ ದೊಡ್ಡ ಮಾತುಗಳ ಗದ್ದಲ , ತಂತ್ರಜ್ನರ ಗಲಾಟೆ ಎಲ್ಲಾ ಸೇರಿ ಅಲ್ಲಿ ಕಾಡಿನ ಮದ್ಯದಲ್ಲಿನ ಸಂತೆ ಯಾಗಿತ್ತು .
ಹೀರೋ ಹೀರೋಯಿನ್ ನಟನೆ ಇಲ್ಲಿದೇ |
ಭಯಾನಕ ಸನ್ನಿವೇಶ ಸೃಷ್ಟಿಸಲು ಮಾಡಿದ್ದ ಬೆಳಕಿನ ವ್ಯವಸ್ಥೆ |
ಲಿಂಕ್ ಇಲ್ಲಿದೆ http://junglelodges.com/index.php/resorts/kali.html
"Both Dandeli Wildlife Sanctuary and its adjacent Anshi National Park house huge tracts of moist- deciduous forest. Although a know habitat of the rare black panther, the large size of the forest makes spotting them very difficult. Yet, many of our guests have spotted it and other wild animals such as spotted deer, sambar, barking deer, sloth bear, gaur (Indian bison), wild boars, fox, jackal, pangolin and elephants. Our guests have also had frequent sighting of the great pied hornbill, yellow footed pigeon, crested serpent eagle, adjutant stork, black crested baza and peafowls. The forests of Dandeli and Anshi are home to over 200 species of birds. From the Camp, one can sight Malabar hornbills nesting across the river. Ashy swallow shirkes, drongos, minivets, iora, brahminy kites, and many others birds can be spotted from the camp. "
ಅಲ್ಲಿನ ಗೋಲ್ ಘರ್ ನಲ್ಲಿ ಊಟ ಮಾಡಿ ರೂಮಿಗೆ ಮಲಗಲು ಬಂದರೆ ಚಿತ್ರೀಕರಣ ತಂಡದ ಗದ್ದಲ ಸರಿ ರಾತ್ರಿವರೆಗೆ ನದೆದಿತ್ತು. ಅಂತೂ ಇಂತೂ ಯಾವಾಗಲೋ ನಿದ್ದೆ ಬಂದಿತ್ತು . ........ !!! ದೂರದಲ್ಲಿ ಎಲ್ಲೋ ಕಲರವ ಕೇಳಿತ್ತು .
10 comments:
ಓಯ್ ಮಾರಾಯ್ರೇ ಎಲ್ಲೆಲ್ಲಿ ಹೋಗ್ತೀರಾ... ನಿಮ್ಮ ಮಂಡೆ ಸಮ ಉಂಟಾ,,>?? ದಾಂಡೇಲಿ ತಂಕ ಹೋಗಿದ್ದಾ.. ಓಕೆ..ಅಲ್ಲಿಂದ ಈ ಪಿರಿ ಪಿರಿ ಸುದ್ದಿ ಗಮ್ಮತ್ ಆತ್ರೀ..
ಚಿತ್ರ ಲೇಖನ ಪ್ರಕೃತಿ ನೋಡ್ಬೇಕಂದ್ರೆ ನಿಮ್ ಬ್ಲಾಗಿಗ್ಬಂದ್ರೆ ಸಾಕು.
ಅಬ್ಬಾ ಅದೆಲ್ಲೆಲ್ಲಿ ಓಡಾಡ್ತೀರಿ... ಸಮಯ ಹೇಗೆ ಸಿಗುತ್ತೆ ನಿಮಗೆ ಹಹಹಹ... ತುಂಬಾ ಗ್ರೇಟ್ ಸರ್ ನೀವು ಎಷ್ಟು ತಾಳ್ಮೆಯಿಂದ ಹೊಸ ಸ್ಥಳ ವೀಕ್ಷಿಸಿ ನಮ್ಮೊಂದಿಗೆ ಎಲ್ಲಾ ಸಂಗತಿಗಳನ್ನುಹಂಚಿಕೊಳ್ಳುತ್ತೀರಿ ಧನ್ಯವಾದಗಳು
@ ಅಜಾದ್ :- ಇದು ಎರಡು ವರ್ಷದ ಹಿಂದಿನ ಪ್ರವಾಸದ ಅನುಭವ. ಅವಾಗ ಮಂಡೆ[ ಸಮ] ಸರಿಯಿತ್ತು ಮರ್ರೆ ,ಯಾಕೆ ನಿಮಗೆ ಇದನ್ನು ಓದಿ ಮಂಡೆ ಬಿಸಿ ಆಯ್ತಾ .
@ suguna:- ಇದು ಎರಡು ವರ್ಷದ ಹಿಂದಿನ ಪ್ರವಾಸದ ಅನುಭವ, ಹಳೆಯ ಅನುಭವಗಳನ್ನು ಹಂಚಿ ಕೊಳ್ಳುತ್ತಿದ್ದೇನೆ ಅಷ್ಟೇ
ಬಹುತೇಕ ಅರಣ್ಯ ಇಲಾಖೆ ಅಧಿಕಾರಿಗಳು ಇದೆ ರೀತಿ ನಿರ್ಲಕ್ಷ್ಯ ತಾಳುತ್ತಾರೆ .. ಅದೇ ರೀತಿ ಹಳೆ ದೇವಸ್ಥಾನಗಳ ಕಥೆ ಕೂಡ ಹೀಗೆ ಆಗಿದೆ.. ಅವುಗಳೆಲ್ಲ ಹಾಳು ಬಿದ್ದಿವೆ .. ಆ ಅಧಿಕಾರಿಗಳು ಕೂಡ ಇದೆ ರೀತಿ 'ನಾವೇನ್ ಮಾಡೋಕ್ಕೆ ಆಗುತ್ತೆ ಸರ್ ?" ಎಂದು ಹೇಳುತ್ತಾರೆ ..
ಮುಂದುವರೆದ ಪ್ರವಾಸ ನಿಮ್ಮ ಕುತೂಹಲ ತಣಿಸಿತೋ ಇಲ್ಲವೊ.. ನಮಗೆ ಒಳ್ಳೆ ಔತಣ.. ನಿಮ್ಮ ಪ್ರವಾಸದ ಅನುಭವದ ಬಟ್ಟೆಯನ್ನು ಒಣಗಿಸುವ ರೀತಿ ಇಷ್ಟವಾಗುತ್ತದೆ. ಅಲ್ಲಿ ಎಲ್ಲವು ಇರುತ್ತದೆ. ಹೇಗೆ ಇರಬೇಕು ಹೇಗೆ ಇರಬಾರದು ಏನನ್ನು ನಿರೀಕ್ಷೆ ಮಾಡಬಹುದು ಎಲ್ಲವೂ ಬಿಡಿ ಬಿಡಿಯಾಗಿ ಸಾಗುತ್ತಾ ಹೋಗುತ್ತದೆ. ಇಷ್ಟವಾಯಿತು ಪ್ರವಾಸದ ಮೂರನೇ ಭಾಗ ಮುಂದುವರೆಯಲಿ
ತುಂಬಾ ಚೆನ್ನಾಗಿದೆ ಬಾಲಣ್ಣ
ದಾಂಡೇಲಿ ನೋಡಿ ತುಂಬಾ ದಿನವಾಗಿತ್ತು :)
೨ ವರ್ಷದ ಹಿಂದಿನದನ್ನೂ ನಿನ್ನೆ ಮೊನ್ನೆ ನೋಡಿರೋ ತರ ತೋರಿಸೋ ನಿಮಗೊಂದು ನಮನ
ಪ್ರವಾಸ ಪ್ರೀತಿ ಜೊತೆ ಅದನ್ನ ಎಲ್ಲರಿಗೂ ಇಷ್ಟಪಟ್ಟು ತೋರಿಸೋದು ಖುಷಿ ನೀಡುತ್ತೆ
ಬಾಲು ಸರ್,
ದಾಂಡೇಲಿ ಪ್ರವಾಸ ಚೆನ್ನಾಗಿರುವಾಗಲೇ ಸಿನಿಮಾದವರು ಅಲ್ಲಿದ್ದದ್ದು ಖಂಡಿತ ಮೊಸರಲ್ಲಿ ಕಲ್ಲು ಸಿಕ್ಕಿದಂತೆ. ಅರಣ್ಯಾದಿಕಾರಿಗಳ ನಿರ್ಲಕ್ಷ್ಯತನದಿಂದ ಇವೆಲ್ಲ ಆಗುತ್ತವೆ..ಅವೆಲ್ಲ ಬದಿಗಿಟ್ಟು ನೋಡಿದರೆ...ದಾಂಡೇಲಿ ಬಲು ಶಾಂತ ಅಲ್ವ...
ಧಾರವಾಹಿ ಹೀಗೆ ನಿಧಾನಿಸಿ ಬರೆದರೆ ನಾವು ಮೈಸೂರಿನ ಮೈಲಾರಿ ಹೋಟೆಲಿನ ಮುಂದೆ ಆಮರಣಾಂತ ಸರದಿ ಉಪವಾಸ ಕೂರುತ್ತೇವೆ, ಎಚ್ಚರಿಕೆ...
ಪ್ರಕೃತಿ ವೀಕ್ಷಣಾ ಸ್ಥಲದಲ್ಲೇ ಆ ಸಿನಿಮಾದವರು ಒಂದು ಹಾಡು ಚಿತ್ರೀಕರಿಸಿರುತ್ತಾರೆ!
ಸ್ಥಳ ತೋರಲು ಬರುವ ಸಿಬ್ಬಂದಿಗೆ ಸ್ಥಳ ಪುರಾಣಗೊತ್ತಿಲ್ಲವೆಂದರೆ, ಅವರ ಶ್ರದ್ಧೆಯ ಶೂನ್ಯತೆ ಅರಿವಾಗುತ್ತದೆ.
ಮನುಜ ತನ್ನ ಪರಿಸರ ಹಾಳುಗೆಡವುವುದಲ್ಲದ ನಿರ್ಮಲ ಕಾಡನ್ನೂ ಕೆಡಿಸುತ್ತಾನೆ.
ಸಿನಿಮಾದವರನ್ನೂ ಹಿಗ್ಗಾ ಮುಗ್ಗ ಬೈಬೇಡಿ ಸಾರ್, ಅದೇ ನಮ್ ಹೊಟ್ಟೇ ಪಾಡು. :-
ನೀವು ಕೊಟ್ಟ ಲಿಂಕ್ ಓದಿದೆ.
೪ನೇ ಭಾಗಕ್ಕಾಗಿ ಕಾಯುತ್ತಿದ್ದೇವೆ.
ಅನುಭವ ತುಂಬ ಚೆನ್ನಾಗಿದೆ ಅನ್ಸುತ್ತೆ ಬಾಲಣ್ಣ....
ದಾಂಡೇಲಿ, ನಾಗರಹೊಳೆ.. ಎರಡು ಕಡೆ ಇದೇ ರೀತಿ ಅನುಭವ ನನಗೂ ಆಗಿದೆ... ಸಫಾರಿ ಅಂತ ಹೋದ್ರೆ ಯಾವುದೇ ಪ್ರಾಣಿ ಕಾಣೋದಿಲ್ಲ... :) ಕಾಡಿನ ಬಗ್ಗೆ ಅಲ್ಲಿನವರಿಗೆ ಸರಿಯಾದ ಮಾಹಿತಿ ಇರೋದಿಲ್ಲ... ಏನೋ ಕಾಟಾಚಾರಕ್ಕೆ ಕೆಲಸ ಮಾಡೋ ಹಾಗೆ ಕಾಣುತ್ತೆ...
Post a Comment