Friday, June 15, 2012

ಮೈ ದಿಲ್ಲಿ ಹೂ.....ಪಯಣ .2 .... ವಿಸ್ಮಯ ಕುತಬ್ ಮಿನಾರ್ !!!


ಹಳೆಯ ದುಃಖದ ನೆನಪುಗಳನ್ನು ದಾಟಿ ಮುಂದುವರೆದೆ, ಕುತುಬ್ ಮಿನಾರ್ ತನ್ನ ಚೆಲುವನ್ನು ನನ್ನ ಕ್ಯಾಮರಾದ ಎದುರು ಅನಾವರಣ ಮಾಡುತ್ತಾ ಹೋಯ್ತು.ಬನ್ನಿ ಈ  "ಕುತಬ್  ಮಿನಾರ್" ಬಗ್ಗೆ ಸ್ವಲ್ಪ ತಿಳಿಯೋಣ  , ಈ ಸ್ಮಾರಕ ಯುನೆಸ್ಕೋ ಗುರುತಿಸಿರುವ ಒಂದು "ಅಂತರಾಷ್ಟೀಯ  ಸ್ಮಾರಕ "  ಇದನ್ನು ಕೆಂಪು ಇಟ್ಟಿಗೆ ಹಾಗು ಮಾರ್ಬಲ್ ನಿಂದ ನಿರ್ಮಾಣ ಮಾಡಲಾಗಿದೆ , ಕುತಬ್ ಮಿನಾರ್ ಭಾರತದ ಅತ್ಯಂತ ಎತ್ತರದ ಗೋಪುರ ವಾಗಿದೆ.   72.5 meters (237.8 ft), ಎತ್ತರ , ಕೆಳಮಟ್ಟದಲ್ಲಿ 14.3 meters ಹಾಗು ತುದಿಯಲ್ಲಿ2.7 meters.  ಸುತ್ತಳತೆಯ ಈ ಗೋಪುರದ  ತುತ್ತ ತುದಿ  ಏರಲು 379  ಮೆಟ್ಟಿಲುಗಳಿವೆ.1981 ರ ಡಿಸೆಂಬರ್ 4  ರ ಘಟನೆಯ ನಂತರ ಪ್ರವಾಸಿಗಳನ್ನು ಕುತಬ್ ಮಿನಾರ್ ಹತ್ತಿ ನೋಡಲು ಬಿಡುತ್ತಿಲ್ಲಾ, ಆದರೆ ಅದಕ್ಕಿಂತ ಮೊದಲು ಅಂದರೆ ಘಟನೆಯ  ಹಿಂದಿನ ದಿನ ನಾನೂ  ಸಹ ಅದನ್ನು ಹತ್ತಿ ದೆಹಲಿಯ ಸೌಂದರ್ಯ ಸವಿದಿದ್ದೇನೆ.1192  ರಲ್ಲಿ "ಕುತುಬುದ್ದೀನ್  ಐಬಕ್ "  ಇದರ ನಿರ್ಮಾಣ ಪ್ರಾರಂಭಿಸಿ ಹಾಗೂ"ಶಂಸ್ -ಉದ್  -ದಿನ್-   ಇಲ್ತುತ್ಮಿಶ್" ಮುಕ್ತಾಯ ಗೊಳಿಸುತ್ತಾನೆ ಆದರೆ ಯಾವಾಗ  ಪೂರ್ಣ ಗೊಳಿಸಲಾಯಿತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲಾ. ಇದರ ನಿರ್ಮಾಣಕ್ಕೆ ಮೊದಲು ಜೈನ ಹಾಗು ಹಿಂದೂ  ದೇವಾಲಯಗಳನ್ನು  ಕೆಡವಲಾಯಿತೆಂದು  ಹೇಳುತ್ತಾರೆ. ಇಂದಿಗೂ  ಹಳೆಯ ಕುರುಹುಗಳನ್ನು ಅಲ್ಲಿ ಕಾಣಬಹುದಾಗಿದೆ.ಬನ್ನಿ ಚಂದದ ಕುತಬ್ ಮಿನಾರ್ ದರ್ಶನ ಮಾಡೋಣ
ಕಲೆಯ ಆಗರ ಈ ಮಿನಾರು
ಕಲೆಯ ಮೆರುಗು ಹೆಚ್ಚಿಸಿದ ನಕ್ಷತ್ರ ದ ಆಕಾರ
ಸೌಂದರ್ಯದ ಕಲೆಯ ಅನಾವರಣ ಇಲ್ಲಿದೆ.
ಮತ್ತೊಂದು ಅಮೋಘ ನೋಟ.

  ಬನ್ನಿಮುಂದಕ್ಕೆ ಹೋಗೋಣ , ಅಲ್ಲಿ ಕಾಣುತ್ತಿದೆ ನೋಡಿ ಒಂದು ಸ್ಥಂಭ .


ವಿಸ್ಮಯ ಸ್ಥಂಭ

ಇಲ್ಲಿ ನೋಡ ಬಹುದಾದ ಮತ್ತೊಂದು ವಿಸ್ಮಯ ಕ್ರಿ.ಷ  ೧೦೫೨ ರಲ್ಲಿ ನಿಲ್ಲಿಸಿರುವ ಅಶೋಕ ಸ್ಥಂಭ   ಹೌದು ಕುತಬ್ ಮಿನಾರ್ ಆವರಣದಲ್ಲಿ ಒಂದು ಸ್ಥಂಭವಿದೆಇದನ್ನು ಆಶೋಕ ಸ್ಥಂಭ ಎಂದೂ ಕರೆಯುತ್ತಾರೆ , ಇದು 7  ಮೀಟರ್ [23 ಅಡಿ ] ಎತ್ತರ ಹಾಗು 6 ಟನ್ ತೂಕದ ಈ ಸ್ಥಂಭವನ್ನು ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯ [ 345 -413 ] ಸಮಯದಲ್ಲಿ ನಿರ್ಮಾಣವಾಯಿತೆಂದು ಹೇಳುತ್ತಾರೆ, ಇದಕ್ಕೂ ಸಹ ನಿಖರವಾದ ಸಮಯ ನಿರ್ಧಾರ ಆಗಿಲ್ಲ. ಈ ಲೋಹದ ಸ್ಥಂಭ  ಹಲವು ಶತಮಾನಗಳಿಂದ  ಬಿಸಿಲು, ಮಳೆ, ಗಾಳಿ, ಹವಾಮಾನ ವೈಪರಿತ್ಯ ಇವುಗಳನ್ನು ಎದುರಿಸಿಯೂ ಸಹ ತುಕ್ಕು ಹಿಡಿದಿಲ್ಲ  ಇದರ ಬಗ್ಗೆ ಲೋಹ ತಜ್ಞರು ವಿಶ್ವಾದ್ಯಂತ ಅಚ್ಚರಿಗೊಂಡು ಸಂಶೋಧನೆ ನಡೆಸುತ್ತಿದ್ದಾರೆ. ನಿಖರವಾದ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲಾ. ಹಲವರು ಹಾಲು ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದು ಒಮ್ಮತದ ಅಭಿಪ್ರಾಯ ಬರಬೇಕಾಗಿದೆ.ಈ ಕಲಾ ಲೋಕದಲ್ಲಿ ವಿಹಾರ ಮಾಡುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ  ಹಾಗೆ ಹೊರಗಡೆ ಬರಲು ಹೊರಟ ನನಗೆ ಒಂದು  ಚಿತ್ರ ತೆಗೆಯಲು ಆಸೆಯಾಗಿ ಹುಡುಕಿದಾಗ ಚಾವಣಿ ಯಲ್ಲಿದ್ದ ಈ ಚಕ್ರ ಕಣ್ಣಿಗೆ ಬಿತ್ತು
ಕಲೆಯ ಮೂಡಿಸಿದ ಚಾವಣಿ

"ಮೈ ದಿಲ್ಲಿ ಹೂ" ಅಂತಾ ಧೀರನಂತೆ ಪೋಸ್ ಕೊಟ್ಟ ಕುತಬ್ ಮಿನಾರ್ 
ಸುಂದರ ಚಿತ್ರ ತೆಗೆದು ಹೊರಗೆ ಬಂದಾಗ ನನ್ನ ಮೊಬೈಲ್  ಟ್ರಿನ್ ಟ್ರಿನ್ ಆಯಿತು ಹಲೋ ಬಾಲು ಎಲ್ಲಿದ್ದೀರಾ ಅಂತಾ ಗೆಳೆಯ ಲೇ .ಕರ್ನಲ್ ನಂದಕುಮಾರ್ ಕೇಳುತ್ತಿದ್ದರು  , .....!!!!! ನಾನಾ ಕುತಬ್ ಮಿನಾರ್ ಬಳಿ ಇದ್ದೀನಿ ಅಂದೇ.........!!!.                                   ಕುತಬ್ ಮಿನಾರ್ ಕಿಸಿಕ್ ಅಂತಾ ನಕ್ಕು" ಮೈ ದಿಲ್ಲಿ ಹೂ" ಅಂತೂ. ನಾನೂ ನಗುತ್ತಾ  ಕಣ್ಣು ಹೊಡೆದು ಮತ್ತೆ ಬರುವೆ ಅಂತಾ ಹೇಳಿ ಬಂದೆ  .........!!!!

3 comments:

Srikanth Manjunath said...

ಕುತುಬ್ ಮಿನಾರ್..ಅಂದ ಕಂಗಳನ್ನು ತುಂಬಿ ನಿಲ್ಲುತ್ತದೆ..ನಿಮ್ಮ ಛಾಯಾ ಚಿತ್ರ ಬಲು ಸುಂದರ...ಅದರ ಬಗ್ಗೆ ಮಾಹಿತಿ ಪರಿಪೂರ್ಣ..ಒಳ್ಳೆಯ ಪ್ರವಾಸ ಕಥಾನಕ...
ಅವಘಡ ಆಗಲು ಬಿಡದೆ ಇಂತಹ ಸ್ಮಾರಕಗಳನ್ನು ರಕ್ಷಿಸಬೇಕು..ಇಲಾಖೆ ಸುಂದರ ಪರಿಸರ ಸೃಷ್ಟಿ ಮಾಡಿದೆ ಅನ್ನುವುದು ಹೆಗ್ಗಳಿಕೆ..ಪ್ರವಾಸಿಗರು ಹತ್ತಿ ಇಳಿದು, ಅಲ್ಲಿ ಉಗಿದು, ಹಾಳು ಮಾಡಿ ಕಡೆಗೆ ಸಂರಕ್ಷಣ ವೇದಿಕೆ ಸ್ಥಾಪಿಸಿ ಜನರ ಹಣವನ್ನು ಹಾಳು ಮಾಡುವುದರ ಬದಲು ಸ್ಮಾರಕದ ತುತ್ತ ತುದಿಗೆ ತಲುಪುವುದನ್ನು ನಿಷೇದ ಮಾಡಿರುವುದು ಒಳ್ಳೆಯ ನಿರ್ಧಾರ...ಲೇಖನ ತುಂಬಾ ಸುಂದರವಾಗಿದೆ..

sunaath said...

ಅದ್ಭುತ!...ಮಿನಾರ್ ಹಾಗು ಲೇಖನ ಎರಡೂ!

ಮನದಾಳದಿಂದ............ said...

ಬಾಲಣ್ಣ,
ದೆಹಲಿಗೆ ಬಂದು ಏಳೆಂಟು ವರ್ಷವಾದರೂ ಕೂಡಾ ಕುತುಬ್ ಮಿನಾರ್ ಗೆ ಭೇಟಿ ಕೊಟ್ಟಿದ್ದು ಕೇವಲ ಎರಡು ಬಾರಿ ಮಾತ್ರ!
1981 ರ ಆ ಘೋರ ಘಟನೆ ನೀವು ಹೇಳಿದ ಮೇಲಷ್ಟೇ ನನಗೆ ತಿಳಿದಿದ್ದು. ಗೊತ್ತೇ ಇರಲಿಲ್ಲ!
ಅತ್ಯುತ್ತಮ ಚಿತ್ರಗಳೊಂದಿಗೆ ಉತ್ತಮ ಮಾಹಿತಿಯುಳ್ಳ ಲೇಖನ