ದಿಲ್ಲೀ ಯಲ್ಲಿ ಕಂಡ ಬುದ್ದನ ಕಲಾಕೃತಿ |
ಲೇ .ಕರ್ನಲ್ ನಂದಕುಮಾರ್ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ "ಕುತಬ್ ಮಿನಾರ್" ನಿಂದಾ ಹೊರಗೆ ಬಂದು ಮಾತುಮುಗಿಸಿದೆ ..ನಂತರ ಕರ್ನಾಟಕ ಭವನದತ್ತಾ ಮೆಟ್ರೋ ರೈಲು ಹಿಡಿದು ದಾವಿಸಿ ಬಂದೆವು.ಬಂದ ಸ್ವಲ್ಪ ಸಮಯಕ್ಕೆ ಗೆಳೆಯ ನಂದಕುಮಾರ್ ತನ್ನ ಮಿಲಿಟರಿ ವಾಹನದಲ್ಲಿ ಬಂದು ನಮ್ಮನ್ನು ಕರೆದುಕೊಂಡು ಅವರ ಮನೆಗೆ ಹೊರಟರು ದಾರಿಯಲ್ಲಿ ಉಭಯ ಕುಶಲೋಪರಿ, ನನ್ನ ಜೊತೆಯಲ್ಲಿದ್ದವರ ಪರಿಚಯ ಇತ್ಯಾದಿ ನಡೆಯಿತು. ನನ್ನ ಜೊತೆಯಲ್ಲಿದ್ದವರ ಹೊಟ್ಟೆ ಹಸಿದು ನನ್ನ ಕಡೆ ಕೆಕ್ಕರಿಸಿಕೊಂಡು ನೋಡುತ್ತಿದ್ದರು..........!.ನನಗೆ ಪೀಕಲಾಟ ಶುರುವಾಗಿ......... ದೇವ್ರೇ ಬೇಗ ಊಟ ಕೊಡಿಸಪ್ಪಾ ಅಂತಾ ಮನದಲ್ಲಿ ಬೇಡಿಕೊಳ್ಳುತ್ತಿದ್ದೆ.......ನಂದಕುಮಾರ್ ಮನೆಗೆ ತಲುಪಿ ಉಸ್ಸಪ್ಪಾ ಅಂತಾ ನಿಟ್ಟುಸಿರು ಬಿಟ್ಟ ನಮಗೆ ತಕ್ಷಣ ಕುಡಿಯಲು ತಣ್ಣನೆ ನೀರು ಬಂತು, ಆದರೆ ಆ ಬಿಸಿಲ ಜಳಕ್ಕೆ ಎಷ್ಟು ಹೊತ್ತು ತಡೆದೀತು?ಮತ್ತೆ ಸಂಕಟ ಶುರು ಆಗಿ ಗೆಳೆಯನ ಯಾವ ಮಾತುಗಳೂ ಕಿವಿಗೆ ತಲುಪುತ್ತಿರಲಿಲ್ಲ.ಅಷ್ಟರಲ್ಲಿ ಊಟಕ್ಕೆ ಏಳಿ ಅಂತಾ ಹೇಳಿದ್ದೆ ತಡಾ ದಡಕ್ಕನೆ ಊಟದ ಟೇಬಲ್ ಮುಂದೆ ಹಪಹಪಿಸಿ ಕುಳಿತೆವು. ಆಗ ಬಂದಿತ್ತು ರುಚಿ ರುಚಿಯಾದ ಬೆಂಗಳೂರಿನ ಊಟ. ಹಸಿದಿದ್ದ ಹೊಟ್ಟೆಗೆ ರುಚಿಯಾದ ಕರ್ನಾಟಕದ ಊಟ ತೃಪ್ತಿ ನೀಡಿತು.ಲೇ ಕರ್ನಲ್ ನಂದಕುಮಾರ್ ಕುಟುಂಬ ನನ್ನ ಪರಿಚಯ ಇದ್ದ ಕಾರಣ ಸ್ವಲ್ಪ ಹೊತ್ತು ಹರಟೆ ಹೊಡೆದು , ಅವರ ಕಾರಿನಲ್ಲಿ ಡೆಲ್ಲಿ ಸುತ್ತಲು ಹೊರಟೆವು.ಕಾರು ಹೊರಟಿತು ಬನ್ನಿ ನಮ್ಮ "ಡಿಫೆನ್ಸ್ ಆಫಿಸರ್ಸ್ ಕ್ಲಬ್ "ನೋಡೋರಂತೆ ಅಂತಾ ಕಾರನ್ನು ಅಲ್ಲಿಗೆ ತಿರುಗಿಸಿದರು.
ಚೈನಾ ಸರ್ಪದ ಪ್ರತಿಮೆ |
ತುಂಬಿದ ಹೊಟ್ಟೆಯ ಮನಗಳಿಗೆ ಅದ್ಭುತ ಕಲಾಕೃತಿಗಳ ದರ್ಶನ ಭಾಗ್ಯ ಸಿಕ್ಕಿತ್ತು.ಸವಾರಿ ಮುಂದೆ ಹೊರಟಿದ್ದು " ಚಾಂದನಿ ಚೌಕ " ಕಡೆಗೆ.