Sunday, June 26, 2011

ಬಿಳಿಗಿರಿ ಕಾನನದಲ್ಲಿ ಮೌನವಾಗಿ ಇದ್ದರು !!!! ಇವರೇ ಸ್ವಾಮಿ ಅಲ್ಲದ ಸ್ವಾಮಿ ನಿರ್ಮಲಾನಂದ !!!!!!! ಪಯಣ ...4



ಅರೆ ಇದೇನು ಸ್ವಾಮೀಜಿಯಬಗ್ಗೆ ಅಂತೀರಾ !!!! ಹೌದು ಇವಾಗ ಎಲ್ಲೆಲ್ಲೂ ಸ್ವಾಮಿಜಿಗಳದ್ದೆ ಸುದ್ದಿ.ಆದರೆ ಇಲ್ಲೊಬ್ಬ ಸ್ವಾಮಿಜೀ ಮೌನವಾಗಿ ಇದ್ದು  ಶಿಷ್ಯರಿಲ್ಲದೆ ಬರೀ ಗೆಳೆಯರೊಡನೆ ಸಂಪರ್ಕ ಇಟ್ಟುಕೊಂಡು , ಅಂತರಾಷ್ಟ್ರೀಯ ಮಟ್ಟದಲ್ಲಿ ಮೌನವಾಗಿಯೇ ಸುದ್ದಿ ಮಾಡಿ ವನಸುಮದಂತೆ ಇದ್ದು ಮರೆಯಾದರು.ಇವರು ಮನಸ್ಸು ಮಾಡಿದ್ದರೆ ಬೇರೆ ಸ್ವಾಮಿಜಿಗಳಂತೆ ಮೆರೆಯ ಬಹುದಿತ್ತು ಆದರೆ ತನ್ನದೇ ಹಾದಿಯಲ್ಲಿ ಕಾಡಿನೊಳಗೆ ಇದ್ದುಕೊಂಡೇ ಸಾಧಿಸಿ ಮರೆಯಾದರು.                                                                       
ಸ್ವಚ್ಛವಾದ  ಪರಿಸರದ ಸ್ವಾಗತ ನಿಮಗೆ.

ಬನ್ನಿ ನಮ್ಮ ಪಯಣದ ಇಂದಿನ ಭೇಟಿ ಒಂದು ಆಶ್ರಮಕ್ಕೆ ಅಲ್ಲಿಗೆ  ಹೋಗೋಣ. ನಾನು ಬಹಳಷ್ಟು ಸಾರಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದರೂ ಇಲ್ಲಿಗೆ ಬಂದಿರಲಿಲ್ಲ . ದಾರಿಯಲ್ಲಿ ಆಶ್ರಮದ ಬಾಗಿಲು ಕಂಡರೂ ಆಸಕ್ತಿ ಯಿಲ್ಲದೆ ಇಲ್ಲಿಗೆ ಬಾರದೆ ಹೊರಟು ಬಿಡುತ್ತಿದ್ದೆ . ಒಮ್ಮೆ ಗೆಳೆಯರೊಬ್ಬರು ಬಲವಂತವಾಗಿ ಇಲ್ಲಿಗೆ ಕರೆದುಕೊಂಡು ಬಂದರು  ನಾನು ಇಲ್ಲಿಗೆ ಬರುವ ವೇಳೆಗಾಗಲೇ ಸ್ವಾಮೀ ನಿರ್ಮಲಾನಂದ ಇಹ ಲೋಕದಿಂದ ಹೊರಟು ಹೋಗಿದ್ದರು . ಆದರೆ ಇಲ್ಲಿನ ಪರಿಸರದ ಚಿತ್ರ ಕ್ಲಿಕ್ಕಿಸುತ್ತಾ ಸುಮ್ಮನೆ ಅಡ್ಡಾಡಿದ ಅನುಭವ ಮೊದಲನೆಯದು. ನಂತರ ಇಲ್ಲಿನ ನಿಶಬ್ದ ವಾತಾವರಣಕ್ಕೆ ಮನಸೋತು ಹಲವು ಬಾರಿ ಬಂದಾಗ ಇಲ್ಲಿನ ವಿಸ್ಮಯದ ಬಗ್ಗೆ ಆಸಕ್ತಿ ಮೂಡಿ ವಿಚಾರ ತಿಳಿಯಿತು . ಬನ್ನಿ ಸ್ವಾಮೀ,                                 "ನಿರ್ಮಲಾನಂದ ಸ್ವಾಮೀ "ಯಾರು ಎಂದು ತಿಳಿಯೋಣ.                                             

                                                 
1924 ರ ಡಿಸೆಂಬರ್ ನಲ್ಲಿ ಕೇರಳದಲ್ಲಿ ಬಾಲಕೃಷ್ಣನ್[ಸ್ವಾಮೀ ನಿರ್ಮಲಾನಂದರ ಮೊದಲ ಹೆಸರು ] ಎಂಬ ಮಗುವಿನ ಜನನವಾಗುತ್ತದೆ, ಬಾಲ್ಯ ಕಳೆದ ಆ ಜೀವ  ಇಪ್ಪತ್ತು ವರ್ಷ ಕ್ಕೆ ಕಾಲಿಟ್ಟ ಆ ಸಮಯದಲ್ಲಿ  ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ  1943 ರಲ್ಲಿ  ಸೈನಿಕರಾಗಿ ಸೇರುತ್ತಾರೆ ಅಲ್ಲಿನ ಸೈನಿಕ ಅಂಚೆ ಇಲಾಖೆಯ ಸೇವೆ ಇವರದು,ಎರಡನೇ ಮಹಾಯುದ್ದ ನಡೆದಾಗ ಇವರ ಸೇವೆ ನಾಲ್ಕು ವರುಷಗಳ  ಕಾಲ ಯೂರೋಪ್ ನಲ್ಲಿ ಮುಂದುವರೆಯಿತು. ಎರಡನೇ ಮಹಾಯುದ್ದದ ಭೀಕರತೆ ,ರಕ್ತಪಾತ ವನ್ನು ಹತ್ತಿರದಿಂದ ಕಂಡ ಇವರು ಶಾಂತಿ ಜೀವನದತ್ತ ಮುಖ ತಿರುಗಿಸಲು ಪ್ರೇರಣೆಯಾಗುತ್ತದೆ. ಭಾರತಕ್ಕೆ ಬಂದ ಇವರು ಅಧ್ಯಯನ ಮುಂದುವರೆಸಿ "ಟಾಲ್ ಸ್ಟಾಯ್", "ತೋರೋ", "ಮಹಾತ್ಮಾ ಗಾಂಧೀ" "ರಾಮಕೃಷ್ಣ ಪರಮ ಹಂಸ" "ವಿವೇಕಾನಂದ"  ಇವರ ಬದುಕು ಬೋದನೆಗಳ ಪ್ರಭಾವಕ್ಕೆ  ಮನಸ್ಸು ಕೊಡುತ್ತಾರೆ ಹಾಗು ಇವುಗಳಿಂದ ಪ್ರಭಾವಿತರಾಗುತ್ತಾರೆ.ನಂತರ ಭಾರತದ ಉದ್ದಗಲಕ್ಕೂ ಸಂಚರಿಸಿ ದೇಶವನ್ನು  ಅರಿತುಕೊಳ್ಳುವ  ಕಾರ್ಯ ಮಾಡುತ್ತಾರೆ.ಈ ವೇಳೆಯಲ್ಲಿ ಹಲವಾರು ಸಾಧು , ಸಂತರು, ಕ್ರಿಶ್ಚಿಯನ್ ಪಾದ್ರಿಗಳು, ಫಕೀರರು, ಗಳ ಪರಿಚಯವಾಗಿ ಅವರ ವಿಚಾರ ಧಾರೆ   ಅರಿತುಕೊಳ್ಳುತ್ತಾರೆ. "ವಿನೋಬಾ ಭಾವೆ  'ಯವರ "ಭೂಧಾನ"ಚಳುವಳಿಯಲ್ಲಿ ಭಾಗವಹಿಸಿ     ತಮ್ಮತನ   ಮೆರೆಯುತ್ತಾರೆ. ಇದಾದ ಮೇಲೆ 1959 ರಿಂದ 1964 ವರೆಗೆ ಮತ್ತೊಮ್ಮೆ ಯೂರೋಪ್ , ಮಧ್ಯ ಪ್ರಾಚ್ಯ ,ಅಮೇರಿಕಾ ಜಪಾನ್ ರಾಷ್ಟ್ರಗಳಿಗೆ ಪ್ರವಾಸ ಮಾಡುತ್ತಾರೆ. ಆ ಸಮಯದಲ್ಲಿ ವಿಶ್ವದ ಹಲವಾರು ದೇಶಗಳಲ್ಲಿ   ಚಾಲ್ತಿಯಲ್ಲಿದ್ದ ಹಲವು ಧರ್ಮಗಳ,ಬಗ್ಗೆ , ದಾರ್ಶನಿಕರ  ಬಗ್ಗೆ ಅರಿತುಕೊಳ್ಳುತ್ತಾರೆ . ನಂತರ ವಾಪಸ್ಸು ತಾಯ್ನಾಡಿಗೆ ಬಂದುನೆಲೆಸಲು ನಿರ್ಧರಿಸಿ 1964 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರಿಗೆ ಬಂದು ಅಲ್ಲಿ ಪ್ರಸಿದ್ದ  ಸ್ವಾತಂತ್ರ ಹೋರಾಟಗಾರ '' ತಗಡೂರು ಶ್ರೀ ರಾಮಚಂದ್ರ ರಾಯ" ರನ್ನು ಭೇಟಿ ಮಾಡಿ ಕೆಲ ಕಾಲ ಅಲ್ಲಿಯೇ ನೆಲೆಸುತ್ತಾರೆ.ನಂತರ ಅಂದು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಜ್ಜನರಾಗಿದ್ದ" ಶ್ರೀ  ಬಿ .ರಾಚಯ್ಯ " ರವರ ಸಹಕಾರದಿಂದ  ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆನಿಂತು  ಆಶ್ರಮ ಕಟ್ಟುತ್ತಾರೆ .                                          
ಶೀರ್ಷಿಕೆ ಸೇರಿಸಿ
   ಮುಂದಿನ ಹಾದಿ  ನಿಶಬ್ದವಾಗಿ ನಿರಂತರ ಹನ್ನೊಂದು ವರುಷಗಳ ಮೌನ ವ್ರತ ಆಚರಣೆ . ಮೌನವಾಗಿಯೇಇವರು ಪತ್ರಗಳ ಮೂಲಕ ಜಗತ್ತಿನ  ಪ್ರಮುಖ ವ್ಯಕ್ತಿಗಳ ಒಡನಾಟ ಇಟ್ಟು ಕೊಂಡಿದ್ದರು. ಅಂತರಾಷ್ಟ್ರೀಯ ಮುಖಂಡರಾಗಿದ್ದ  ಹಲವಾರು ದೇಶಗಳ  ಮುಖಂಡರೊಂದಿಗೆ  ಪತ್ರ ವ್ಯವಹಾರ ಇತ್ತು. ತನ್ನ ಆಶ್ರಮದಲ್ಲಿ , ಟಿ.ವಿ. ,ಟೆಲೆಫೋನ್,  ಯಾವುದೇ ಸಂಪರ್ಕ ವಿಲ್ಲದೆ  ಬರಿ ಪತ್ರ ಬರೆಯುವ ಮೂಲಕ  ಹೊರ ಪ್ರಪಂಚದ ಸಂಪರ್ಕ ಇಟ್ಟುಕೊಂಡಿದ್ದರು. ಈ ಸಮಯ ದಲ್ಲಿ ಹಲವಾರು ಪುಸ್ತಕಗಳನ್ನು ಬರೆದ ಇವರು ಜಗತ್ತಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.ಇವರು ಬರೆದ ಪುಸ್ತಕ ಗಳಲ್ಲಿ   "  A GARLAND OF FOREST FLOWERS "   ಪುಸ್ತಕ  ಜಗತ್ತಿನಲ್ಲಿ ಪ್ರಸಿದ್ದಿ ಪಡೆದು ಅಂತರಾಷ್ಟ್ರ್ರೀಯ  ಮನ್ನಣೆ ಪಡೆದಿದೆ.  ಇವರ ಈ  ಕಾರ್ಯ ವನ್ನು ಗುರುತಿಸಿರುವ ವಿಶ್ವ ಇವರಿಗೆ 
1] 10 th edition 'international who's who of intellectuals" award  2] 15 th 'men of achivements 3] ' international man of the year 1990-91  4] 4 th edition 'Distinguished leadership award " in religion and spirituality 5] 1 st edition  'The most admired men and women of the year '

 ಮುಂತಾದ ಪ್ರಶಸ್ತಿಗಳನ್ನು   ಪ್ರಧಾನ ಮಾಡಿ  ಗೌರವಿಸಿದೆ. ಇಷ್ಟೆಲ್ಲಾ ಸಾಧನೆ ಮಾಡಿ ಎಲ್ಲಾ ಧರ್ಮಗಳ ಬಗ್ಗೆ  ಗೌರವ ಯುತವಾಗಿ  ಪ್ರವಚನ ಮಾಡಿ ನಿಜವಾದ ವಿಶ್ವ ಮಾನವನಾಗಿ ,  ಶಿಷ್ಯರನ್ನು ಬೆಳಸದೆ , ಭಕ್ತರನ್ನು ಬೆಳೆಸದೆ  ಅಭಿಮಾನಿಗಳನ್ನೂ, ಸ್ನೇಹಿತರನ್ನೂ ಸಂಪಾದಿಸಿ  " ವಿಶ್ವ ಶಾಂತಿನಿಕೇತನ "  ಆಶ್ರಮ ಕಟ್ಟಿ  ವಿಶ್ವ ಮಾನವತಾವಾದಿಯಾಗಿ  ಕಾನನದ ಸುಮವಾಗಿ  ಮೌನದಿಂದಲೇ ಸಾಧಿಸಿ ಬದುಕಿದರು  1997  ರ ಜನವರಿ 10   ರಂದು  ಇಹ ಲೋಕ ದಿಂದ ಪ್ರಯಾಣ ಬೆಳೆಸಿದರು .  1997 ರಲ್ಲಿ ಇವರ ದೇಹ ತ್ಯಾಗದ ಬಗ್ಗೆ  ಒಂದು  ದೊಡ್ಡ ಚರ್ಚೆಯೇ  ಪತ್ರಿಕೆಗಳಲ್ಲಿ ಹಾಗು ಸಮಾಜದಲ್ಲಿ  ಆಗ ದೇಶಾದ್ಯಂತ ನಡೆದು ಹೋಗಿತ್ತು.  ಬನ್ನಿ ಆಶ್ರಮದ ಒಳಗಡೆ ಕೆಲವು ದೃಶ್ಯಗಳನ್ನು  ನೋಡೋಣ.


ಆಶ್ರಮದ ಒಳಗಡೆ  ಇರುವ  ಸ್ವಾಮೀ ನಿರ್ಮಲಾನಂದರ  ಸಮಾಧಿ
ಸಮಾಧಿಯ ಮುಂಭಾಗ
ಸಮಾಧಿಯ ಒಂದು ಪಾರ್ಶ್ವದಲ್ಲಿ ನ  ನೋಟ

ಸಮಾಧಿಯ ಹಿಂಭಾಗದಲ್ಲಿನ  ಬರಹ
ಸಮಾಧಿಯ ಮತ್ತೊಂದು ಪಾರ್ಶ್ವದಲ್ಲಿನ ಬರಹ.

Sunday, June 19, 2011

"ಬಿಳಿಗಿರಿ" ಕಾನನದ ಒಡೆಯ ರಂಗನ ಕಾಣುವ ಬನ್ನಿರಿ!!!ಸ್ವಲ್ಪ ಪುರಾಣ, ಇತಿಹಾಸ ,ಜಾನಪದ ಎಲ್ಲದರ ರಸಾಯನ ಸವಿಯಿರಿ!!!!ಪಯಣ..3


 ಶ್ರೀಬಿಳಿಗಿರಿ ರಂಗನಾಥ ಸ್ವಾಮೀ.
ಕಳೆದ ಸಂಚಿಕೆಯಲ್ಲಿ "ಬಿಳಿಗಿರಿ " ಬೆಟ್ಟಗಳ ಶ್ರೇಣಿಯ ಬಗ್ಗೆ ತಿಳಿದೆವು, ಈ ಸಂಚಿಕೆಯಲ್ಲಿ" ಬಿಳಿಗಿರಿ ರಂಗನಾಥ" ಸ್ವಾಮಿಯ ಬಗ್ಗೆ ಇರುವ ಮಾಹಿತಿಯನ್ನು ತಿಳಿಯುವ.                                                   
ಶ್ರೀ  ಬಿಳಿಗಿರಿ ರಂಗ ಸ್ವಾಮೀ {ಚಿತ್ರ ಕೃಪೆ ಅಂತರ್ಜಾಲ ಚಾಮರಾಜ ನಗರ ಜಿಲ್ಲೆ ವೆಬ್ಸೈಟ್}
                                                                                                         ಪೌರಾಣಿಕ ಹಿನ್ನೆಲೆ :- ಬ್ರಹ್ಮ ಪುತ್ರನಾದ ವಸಿಷ್ಠ ಋಷಿಯು ವಿಶ್ವಾಮಿತ್ರರ ಕೋಪದಿಂದ  ಶಾಪ ಗ್ರಸ್ತರಾದ ತನ್ನ ಪುತ್ರರೆಲ್ಲರನ್ನೂ ಕಳೆದುಕೊಂಡು ,ಸಂತಾನ  ಅಪೇಕ್ಷೆಯಿಂದ ವೆಂಕಟಾದ್ರಿಯಲ್ಲಿ ಶ್ರೀ ವೆಂಕಟರಮಣ ಸ್ವಾಮಿಯನ್ನು ಪ್ರಾರ್ಥಿಸಲು , ಆ ಸ್ವಾಮಿಯಿಂದ  ಸಂದೇಶ ಪಡೆದು ಆಣತಿಯಂತೆ  ಕಾವೇರಿ ನದಿಯ ದಕ್ಷಿಣಕ್ಕೆ ಇರುವ ಶ್ವೇತಾದ್ರಿಯಲ್ಲಿ ತಪಸ್ಸನ್ನು ಮಾಡಲು ಬಿಳಿಗಿರಿ ಬೆಟ್ಟ ತಲುಪಿ ಅಲ್ಲಿನ ಉನ್ನತ ಶಿಖರ ದಲ್ಲಿ ಕಂಡುಬಂದ" ಔದುಂಬರ ವೃಕ್ಷದ" ಕೆಳಗೆ ತಪಸ್ಸು ಮಾಡಿ ಶ್ರೀಮನ್ನಾರಾಯಣನ ಅನುಗ್ರಹ ಪಡೆದರೆಂದೂ,ಆ ಅನುಗ್ರಹದಿಂದ "ಶಕ್ತಿ" ಎಂಬ ಮಗನನ್ನು ಪಡೆದು ಧನ್ಯ ರಾದರೆಂದೂ, ಆ ಮಗುವಿನ ಸಂತತಿಯವರೇ ಮುಂದೆ ಮಹಾಭಾರತ ರಚಿಸಿದ "ವ್ಯಾಸ ಮಹರ್ಷಿ " ಗಳೆಂದೂ ತಿಳಿಸುತ್ತಾರೆ ವಸಿಷ್ಠ ಋಷಿಗಳು  ಮೇಷ ಮಾಸದ ವಿಶಾಖ ನಕ್ಷತ್ರದಲ್ಲಿ  ಶ್ವೇತಾದ್ರಿ ಗಿರಿಯಲ್ಲಿ ಶ್ರೀ ಶ್ರೀನಿವಾಸನ ಪ್ರತಿಷ್ಟಾಪನೆ  ಮಾಡಿದರೆಂದೂ  ಹೇಳುತ್ತಾರೆ.                                     

ದೇವರ ಅಭಿಷೇಕಕ್ಕೆ ಮುಂಜಾನೆ  ನೀರು ತರುವುದು
ಆ ಸಮಯದಲ್ಲಿ    ದ್ವಜಾರೊಹಣ ಪೂರ್ವಕ ನವಾಹ ಮಹೋತ್ಸವವು ಪ್ರಾರಂಭವಾಗಿ  ಈವತ್ತಿನ ವರೆಗೂ ನಡೆದುಕೊಂಡು ಬರುತ್ತಿರುವುದಾಗಿ ತಿಳಿಸಲಾಗಿದೆ. ಸೀತಾನ್ವೇಷಣೆ ಸಮಯದಲ್ಲಿ ಇಲ್ಲಿಗೆ ಶ್ರೀ ರಾಮನ ಆಗಮನವಾಗಿತ್ತೆಂದೂ ಹೇಳುತ್ತಾರೆ."ಮೋಹಿನಿ ಭಸ್ಮಾಸುರ" ಘಟನೆ ನಂತರ  ಶಿವನೂ ಸಹ ಇಲ್ಲಿ ನೆಲೆನಿಂತನೆಂದೂ ಅದಕ್ಕೆ ಸಾಕ್ಷಿ ಇಲ್ಲಿರುವ "ಗಂಗಾಧರೇಶ್ವರ" ದೇವಾಲಯವೆಂದೂ ಹೇಳುತ್ತಾರೆ.[ಮಾಹಿತಿ ಕೃಪೆ :-ಶ್ರೀ ಬಿಳಿಗಿರಿ ರಂಗನಾಥ ಸ್ವಾಮೀ ಮಹಾತ್ಮೆ ಬರೆದವರು ಜಿ .ಹೆಚ್ .ಕೃಷ್ಣ ಮೂರ್ತಿ ಮೈಸೂರು]
                                                                 
ಶ್ರೀ ಬಿಳಿಗಿರಿ  ರಂಗನಾಥ ಸ್ವಾಮೀ ಅಭಿಷೇಕ [ ಕೃಪೆ ಅಂತರ್ಜಾಲ ಚಾಮರಾಜನಗರ ವೆಬ್ಸೈಟ್]
                                                                                        ಐತಿಹಾಸಿಕ ಹಿನ್ನೆಲೆ :- ಇಲ್ಲಿನ ದೇವಾಲಯದ ಬಗ್ಗೆ ಐತಿಹಾಸಿಕ ಹಿನ್ನೆಲೆಯ ಶಾಸನ ೧೬೬೭ ರ ಮುದ್ದುರಾಜನ  ತಾಮ್ರ ಶಾಸನ ವಾಗಿದೆ.ಹಿಂದೆ ಇಲ್ಲಿ ಜೈನ ಮುನಿ ಒಬ್ಬರು ಇಲ್ಲಿ "ಶ್ರವಣ''ಎಂಬ ಹೆಸರಿನಿಂದ ನೆಲೆಸಿದ್ದರೆಂದು ಹೇಳಲಾಗಿದ್ದರೂ  ಅದರ ಕುರುಹು ಯಾವುದು ಇಲ್ಲಿ ದೊರೆಯುವುದಿಲ್ಲಾ. ನಂತರ ಶ್ರೀನಿವಾಸನಿಗೆ  "ಬಿಳಿಕಲ್ಲು ಶ್ರೀನಿವಾಸ" ಅಥವಾ "ಬಿಳಿಕಲ್ಲು ವೆಂಕಟರಮಣ"  ಎಂಬ ಹೆಸರಿನಿಂದ ಕರೆಯುತ್ತಿದ್ದರೆಂದೂ  ಆನಂತರ  "ಬಿಳಿಗಿರಿ ರಂಗನಾಥ" ಎಂದು ಆಯಿತೆಂದೂ ಹೇಳುತ್ತಾ ಅದಕ್ಕೆ ಒಂದು ಸ್ವಾರಸ್ಯವಾದ ಕಥೆ ಹೇಳುತ್ತಾರೆ . ಒಮ್ಮೆ ಶ್ರೀ ರಂಗ ಪಟ್ಟಣದ  "ಟಿಪ್ಪೂ ಸುಲ್ತಾನ"  ಬೇಟೆಯಾಡುತ್ತಾ ಇಲ್ಲಿಗೆ ಬಂದ ನೆಂದೂ ಆ ಸಮಯದಲ್ಲಿ  ಇಲ್ಲಿನ ಬಗ್ಗೆ ವಿಚಾರಿಸಲಾಗಿ  ಶ್ರೀನಿವಾಸನ ದೇವಾಲಯವೆಂದು ಹೇಳಿದರೆ ಅದನ್ನು ನಾಶ ಮಾಡಬಹುದೆಂದೂ  ಊಹಿಸಿ,, ಟಿಪ್ಪೂ ಸುಲ್ತಾನನಿಗೆ ರಂಗನಾಥ ಸ್ವಾಮಿಯ ಬಗ್ಗೆ ಇರುವ ಗೌರವ ತಿಳಿದು ಇದನ್ನು" ಬಿಳಿಗಿರಿ ರಂಗನಾಥ ಸ್ವಾಮೀ "ಎಂದು ಹೇಳಿದರೆಂದು ಅಂದಿನಿಂದ ಇಲ್ಲಿ ದೇವರನ್ನು " ಬಿಳಿಗಿರಿ ರಂಗನಾಥ ಸ್ವಾಮೀ" ಎಂದು ಕರೆಯಾಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ [ ಮೈಸೂರು ಗೆಜೆಟ್ ನಲ್ಲಿ ದಾಖಲಿದೆ,]

Thursday, June 9, 2011

ಬೆಳ್ಳಿ ಬೆಟ್ಟಗಳ ಮಡಿಲಿನಲ್ಲಿ !!!! ಬಿಳಿಗಿರಿ ಶ್ರೇಣಿಯ ವಿಚಾರ ತಿಳಿಯೋಣ ಬನ್ನಿ!!!! ಪಯಣ..02

ಬಿಳಿಗಿರಿಗೆ ಸ್ವಾಗತ !!!

ಕಳೆದ ಸಂಚಿಕೆಯಲ್ಲಿ  ಯಳಂದೂರಿನ ಪರಿಚಯ ಮಾಡಿಕೊಂಡ ಬಹಳಷ್ಟು ಮಿತ್ರರು ಖುಷಿಪಟ್ಟು ಹಾರೈಸಿದ್ದಾರೆ.ಎಲ್ಲರಿಗೂ ಧನ್ಯವಾದಗಳು.ಮುಂದೆ ನಮ್ಮ ಪಯಣ ಬಿಳಿಗಿರಿ ಬೆಟ್ಟದ ಕಡೆಗೆ ಸಾಗಿತು.
                   
ಅರಣ್ಯದ ನಡುವೆ ಸಾಗುವ ಹಾದಿ !!!!
                                                                                                               
ಹಸಿರ ಚಪ್ಪರದ ಸ್ವಾಗತ ನಿಮಗೆ 
   
ಹಸಿರ ಒಡಲಲ್ಲಿ , ಸಾಗುವ ಹಾದಿ

 ಬಿಳಿಗಿರಿ ರಂಗನ ಬೆಟ್ಟಕ್ಕೆ ಎರಡು  ಕಡೆಯಿಂದ ಬರಬಹುದು. ಯಳಂದೂರಿನಿಂದ ಹತ್ತಿರದ 28 ಕಿ.ಮಿ   ಹಾದಿ ಇದ್ದು ಕಡಿಮೆ ಕಾಡು ಸಿಗುತ್ತದೆ.ಚಾಮರಾಜ ನಗರ ಕಡೆಯಿಂದ ಕೆ.ಗುಡಿ ಮಾರ್ಗ ವಾಗಿ ತೆರಳಿದರೆ   49   ಕಿ.ಮಿ .ದಾರಿ ಪ್ರವಾಸಿಗರಿಗೆ ಸುಮಾರು ಎರಡು ಘಂಟೆಗಳ ಕಾಲ ಕಾಡಿನ ದರ್ಶನ ಮಾಡಿಸುತ್ತದೆ.                         
ನನ್ನನ್ನು ನೋಡಲು ಬನ್ನಿ ಇಲ್ಲಿಗೆ.
ನಾವೂ ಇಲ್ಲಿದ್ದೇವೆ!!!
   
ಹತ್ತಿರ ಬಂದೀರ ಹುಷಾರ್!!!
    ಅದೃಷ್ಟ ವಿದ್ದವರಿಗೆ  ಕೆಲ ಒಮ್ಮೆ  ಆನೆ,ಚಿರತೆ, ಹುಲಿ, ಕಾಡೆಮ್ಮೆ, ಜಿಂಕೆ ಮುಂತಾದ ವನ್ಯ ಜೀವಿಗಳನ್ನು ಕಾಣುವ ಸೌಭಾಗ್ಯ ಸಿಗುತ್ತದೆ.ಬಿಳಿಗಿರಿ ರಂಗನ ದರ್ಶನಕ್ಕೆ ಮೊದಲು  ಬಿಳಿಗಿರಿ ರಂಗನ ಬೆಟ್ಟ ಶ್ರೇಣಿಯ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.ಬಿಳಿಗಿ ರಂಗನ ಬೆಟ್ಟದ ಶ್ರೇಣಿಯನ್ನು ಬಿ.ಆರ್.ಹಿಲ್ಲ್ಸ್ ರೇಂಜ್ ಅಂತಾನೂ ಕರೀತಾರೆ. ಇವು ಕರ್ನಾಟಕದ ಪೂರ್ವ ಹಾಗು ದಕ್ಷಿಣ ಭಾಗದಲ್ಲಿ ಹರಡಿರುವ ಬೆಟ್ಟಗಳ ಸಾಲು ,    ಹಾಗು ಪಶ್ಚಿಮ ಹಾಗು ಪೂರ್ವ ಘಟ್ಟಗಳ ಸಂಗಮ ಸ್ಥಳದಲ್ಲಿ ಇವು  ಕೊಂಡಿ ಗಳಾಗಿವೆ
ಬಿಳಿಗಿರಿ ಬೆಟ್ಟದ ಶ್ರೇಣಿಯ ನಕ್ಷೆ.

ಕರ್ನಾಟಕ ಹಾಗು ತಮಿಳುನಾಡು ರಾಜ್ಯದ ಗಡಿಯಲ್ಲಿ ಸಾಗಿರುವ ಈ ಗಿರಿ ಶ್ರೇಣಿ ಸದಾ ಮೋಡಗಳಿಂದ ಅಲಂಕೃತ ಗೊಂಡು ದೂರಕ್ಕೆ ಬೆಳ್ಳಿಯ ಬೆಟ್ಟಗಳಂತೆ ಗೋಚರಿಸುತ್ತವೆ  ಹಾಗಾಗಿ ಇವು" ಬಿಳಿ ಗಿರಿ " ಅಥವಾ  ಬಿಳಿಯ ಬೆಟ್ಟಗಳು" ಎಂದೇ ಹೆಸರು ಗಳಿಸಿವೆ ಬನ್ನಿ  ಬಿಳಿಗಿರಿಯ ನೋಟ ನೋಡೋಣ.
ಬಿಳಿಗಿರಿ ಬೆಟ್ಟಗಳ ಸುತ್ತಾ ಮೇಘ ನರ್ತನ!!!!
ಬಿಳಿಗಿರಿ ಶ್ರೇಣಿಗೆ  ಮೋಡಗಳ  ಅಲಂಕಾರ !!!
ಬನ್ನಿ ಈ ಗಿರಿ ಶ್ರೇಣಿಗಳ ಬಗ್ಗೆ  ವಿಕಿ ಪೀಡಿಯಾ  ದಲ್ಲಿ ತಿಳಿಯೋಣ.                  The Biligiriranga Hills, (Kannada: ಬಿಳಿಗಿರಿರಂಗನ ಬೆಟ್ಟ) commonly called B R Hills, is a hill range situated in south-eastern Karnataka, at its border with Tamil Nadu in South India. The area is called Biligiriranga Swamy Temple Wildlife Sanctuary or simply BRT Wildlife Sanctuary. It is a protected reserve under the Wildlife Protection Act of 1972. Being at the confluence of the Western Ghats and the Eastern Ghats, the sanctuary is home to eco-systems that are unique to both the mountain ranges. The site was declared a Tiger Reserve in December 2010. 
The hills are in the Yelandur and Kollegal Taluks of Chamarajanagar District of Karnataka. The hills are contiguos with the Sathyamangalam Wildlife Sanctuary to the south, in the Erode District of Tamil Nadu. The hills that give the range its name are situated 90 kilometres (56 mi) from Mysore and 254 kilometres (158 mi) from Bangalore. The hills may be reached either from Yelandur or via Chamarajanagar.
The hills are located at the easternmost edge of the Western Ghats and support diverse flora and fauna in view of the various habitat types supported. A wildlife sanctuary of 322.4 square kilometres (124.5 sq mi) was created around the temple on 27 June 1974, and enlarged to 539.52 square kilometres (208.31 sq mi) on 14 January 1987. The sanctuary derives its name Biligiri from the white rock face that constitutes the major hill crowned with the temple of Lord Rangaswamy or from the white mist and the silver clouds that cover these lofty hills for a greater part of the year.