Saturday, March 5, 2011

ಈ ಹಾಡಿನ ಬಗ್ಗೆ ಬರೆಯಲೇ ಬೇಕಾಗಿದೆ !!!!!ಬಳಲಿದ ದೇಹಕ್ಕೆ ಔಷಧಿಯಂತೆ ಬಂದಿತ್ತು ಈ ಹಾಡು!!!

ಕಳೆದ ಸ್ವಲ್ಪ ದಿನಗಳಿಂದ ಬ್ಲಾಗ್ ಲೋಕದಿಂದ ವಿಮುಖನಾಗಿದ್ದೆ. ಕೆಲಸದ ಒತ್ತಡ ಇತ್ಯಾದಿಗಳಿಂದ ಬಳಲಿ ಕಳೆದ ಮಾರ್ಚ್ ಒಂದನೇ ತಾರೀಖು  ಅನಾರೋಗ್ಯಕ್ಕೆ ತುತ್ತಾಗಿ  ಆಸ್ಪತ್ರೆ ಸೇರಿಕೊಂಡು ಹೊರ ಲೋಕದ ಸಂಪರ್ಕ ಕಳೆದುಕೊಂಡು ಆಸ್ಪತ್ರೆ ಬೆಡ್ಡಿನ ಮೇಲೆ ನನ್ನ ದೇಹ ಚಾಚಿಕೊಂಡೆ.ಎಲ್ಲರಿಗೂ ಆತಂಕ.ಹಲವು ಪ್ರಶ್ನೆಗಳು ಉತ್ತರಿಸಲು ಶಕ್ತಿಯಿಲ್ಲದೆ ನಿತ್ರಾಣವಾದ ದೇಹ , ಶುಶ್ರೂಷೆಗೆ ಓಡಾಡುತ್ತಿರುವ ವೈಧ್ಯರುಗಳು,ನರ್ಸುಗಳು, ಸಿಸ್ಟರ್ಗಳು,  ನನ್ನ ದೇಹ ಬಗೆದುಹಾಕಲು  ಸಿದ್ದವಾದಂತೆ ಕಾಣುತ್ತಿದ್ದ ಬಗೆ ಬಗೆಯ  ಯಂತ್ರಗಳು .ಒಟ್ಟಿನಲ್ಲಿ ಅಸಹಾಯಕನಾಗಿ ವೈಧ್ಯರುಗಳು ಸೂಚನೆನೀಡಿದಂತೆ  ಆಡುತ್ತಿದ್ದ ಬೊಂಬೆಯಂತಾಗಿದ್ದೆ.ಧಣಿದು ಅನಾರೋಗ್ಯದಿಂದ ಬಳಲಿದ ದೇಹ ವಿರಾಮ ಬಯಸಿ ಈ ಸ್ಥಿತಿ ಒದಗಿಸಿತ್ತು. ಮೊದಲ ದಿನ ನನ್ನಅನಾರೋಗ್ಯದ ಕಾರಣ ತಿಳಿಯಲು ನೂರೆಂಟು ತರಹದ ಪರೀಕ್ಷೆಗಳ ಸರಮಾಲೆ.ಬಗೆ ಬಗೆಯ ಯಂತ್ರಗಳ ಮುಂದೆ ಬೆತ್ತಲಾದ ಮನಸ್ಸಿನೊಡನೆ ,ಅರೆಬೆತ್ತಲ ದೇಹದೊಡನೆ ನಿಂತು ಅವುಗಳ ಹದ್ದಿನ ಕಣ್ಣಿನ  ಧಾಳಿಗೆ ತುತ್ತಾದೆ. ದೇಹವನ್ನು ತಡಕಾಡಿದ ಯಂತ್ರಗಳು ನನ್ನ ಅನಾರೋಗ್ಯದ ಬಗ್ಗೆ ದೇಹ ಸ್ಥಿತಿಯ ವಿಚಾರವನ್ನು ಚಿತ್ರೀಕರಿಸಿ, ಫೋಟೋ ಹಾಗು ಕಾಗದದಲ್ಲಿ ಮುದ್ರಿಸಿ ಉಗಿಯುತ್ತಿದ್ದವು, ವೈಧ್ಯ ಕಾಣದ್ದನ್ನು ಯಂತ್ರಗಳು ಕಂಡು ನನ್ನ ದೇಹದಲ್ಲಿ ಅಡಗಿದ್ದ ರೋಗಗಳ ಮೇಲೆ ಆರೋಪ ಪಟ್ಟಿ ಸಾಕ್ಷಿ ಸಮೇತ ದಾಖಲೆ ಒದಗಿಸಿದ್ದವು. ತಕ್ಷಣ ಶುರುವಾಯಿತು ಯುದ್ದ .  ಅನಾರೋಗ್ಯದ ವಿರುದ್ಧ ಸಮರ ಸಾರಿದವು  ಮಾತ್ರೆಗಳು, ಹಾಗೂ ಚುಚ್ಚುಮದ್ದುಗಳು . ಮೊದಲ ರಾತ್ರಿ ಆಸ್ಪತ್ರೆ ವಾರ್ಡಿನಲ್ಲಿ ಮಾತ್ರೆಗಳು ನೀಡಿದ ಕಿಕ್ ನೊಂದಿಗೆ ಕಣ್ತುಂಬ ನಿದ್ರೆ ಬಂತು,[ ಮಾತ್ರೆಗಳಲ್ಲಿ ಸ್ಟಿರೀಯಾಯಿಡ್ಸ್ ಇರುವುದಾಗಿ ಕೇಳಿದ್ದ ನೆನಪು] ಮುಂಜಾವಿನಲ್ಲಿ ಎಚ್ಚರಗೊಂಡೆ ಪಕ್ಕದ ಬೆಡ್ಡಿನಲ್ಲಿದ್ದ  ಒಬ್ಬರು  ವಿಷ್ಣು ಸಹಸ್ರನಾಮ ಕೇಳಿ ಪುನೀತರಾಗುತ್ತಿದರು. ಮಾರನೆಯ ದಿನ ಅದೇ ರಾಗ  ಅದೇ ಹಾಡು ನನಗೋ ಹೊರಗಡೆ ಸಂಪರ್ಕವಿಲ್ಲದೆ ಮನಸ್ಸು ರಾಡಿಯಾಗಿ, ವಾರ್ಡಿನಲ್ಲಿಯ ಪ್ರಪಂಚ ಬೇಸರ ಹುಟ್ಟಿಸಿ  ಜೀವನದ ಬಗ್ಗೆ ಹೇಸಿಗೆಯಾಗಿ  ಕೆಟ್ಟ ಆಲೋಚನೆಗಳು ಮನದಲ್ಲಿ ಅವತರಿಸಿ ಹುಚ್ಚು ಹಿಡಿಸಿ ಹುಚ್ಛನಾಗುವಂತಾಗಿದ್ದೆ ಮತ್ತೆ  ರಾತ್ರಿ ಕಳೆಯಲು ಸಿದ್ಧನಾಗುತ್ತಿದ್ದೆ.    ರಾತ್ರಿಯ ನೀರವತೆಯಲ್ಲಿ ಬೀಸಿದ ಗಾಳಿಯಲ್ಲಿ  ಎಲ್ಲಿಂದಲೋ ತೂರಿಬಂತು ಈ ಹಾಡು " ಯಾರಿಗಿಲ್ಲ ನೋವು   ,ಯಾರಿಗಿಲ್ಲ ಸಾವು......ವ್ಯರ್ಥ ವ್ಯಸನದಿಂದ  ಸಿಹಿಯು ಕೂಡ ಬೇವು........!!!!  ರಾಡಿಯಾಗಿದ್ದ ಮನಸ್ಸಿಗೆ ತೇಲಿಬಂದ ಹಾಡಿನ ಈ ಪದಗಳು  ಮಸಿನ ಗೂಡಿನೊಳಗೆ ತೂರಿಕೊಂದವು.ಮತ್ತೊಮ್ಮೆ ಮನ  ಹಾತೊರೆದು ಕಿವಿಯಿಟ್ಟು ಕೇಳಿದಾಗ 
"ಬಾಳ ಕದನದಲ್ಲಿ ಭರವಸೆಗಳು ಬೇಕು !!!ನಾಳೆ ನನ್ನದೆನ್ನುವಾ ನಂಬಿಕೆಗಳು ಬೇಕು !!! ............ ಜೀವರಾಶಿಯಲ್ಲಿ ಮಾನವರಿಗೆ ಆಧ್ಯತೆ !! ನಾವೇ ಮೂಢರಾದರೆ ಜ್ಞಾನಕೆಲ್ಲಿ ಪೂಜ್ಯತೆ " ..............ಹಾಡು ಕೇಳುತ್ತ  ಮನಸು ಹಗುರವಾಗಿ ಭರವಸೆಯ ಬೆಳಕು ಚೆಲ್ಲಿದಂತಾಗಿ ಮೈಮರೆತು ಹಾಗೆ ನಿದ್ರಾಪರವಶನಾದೆ. ಮತ್ತೊಮ್ಮೆ ಎಚ್ಚರವಾದಾಗ ಸಿಸ್ಟರ್ ಒಬ್ಬರು ಏನ್ ಸಾರ್ ಇಷ್ಟೊಂದು ನಿದ್ದೆ ಮಾಡಿ ಗೆಲುವಾಗಿದ್ದೀರಾ ಅಂದ್ರು. ಅವರು ನೀಡಿದ ಮಾತ್ರೆ ಹಾಗೂ ಚುಚ್ಚುಮದ್ದು ಸ್ವೀಕರಿಸಿ  ನನ್ನ ಮೊಬೈಲ್ ನಲ್ಲಿದ್ದ  ಹಾಡುಗಳಲ್ಲಿ  ಈ ಹಾಡನ್ನು ಹುಡುಕಿದಾಗ  ಮನಕೆ ಮತ್ತೊಮ್ಮೆ ಕೇಳುವ ಬಯಕೆ ಯಾಗಿ ಈ ಹಾಡನ್ನು ಕೇಳಲು ಶುರುಮಾಡಿದೆ. ಪಕ್ಕದ ಬೆಡ್ಡಿನಲ್ಲಿದ್ದವರು ಸರ್ ಸ್ವಲ್ಪ ಸೌಂಡ್ ಕೊಡಿ  ನಾನು ಕೇಳ್ತೀನಿ ಯಾಕೋ ಈ ಹಾಡು ಮನಸಿಗೆ ಸಮಾಧಾನ ಕೊಡ್ತಿದೆ ಅಂದ್ರು. ಇಬ್ಬರೂ ಹಾಡನ್ನು ಕೇಳಿದ್ವಿ.  ನಂತರ ಈ ಹಾಡನ್ನು ಆಸ್ಪತ್ರೆ ಬಿಡುವವರೆಗೂ ಕನಿಷ್ಠ  ಐವತ್ತು ಭಾರಿ ಕೇಳಿದ್ದೆ. ನೊಂದ ಮನಕ್ಕೆ ಸುಲಭ ಮಾತುಗಳಲ್ಲಿ  ಸಾಂತ್ವನ ನೀಡಿ ಸತೈಸಿದ  ಈ ಹಾಡನ್ನು ಬರೆದ ಕೈಗಳಿಗೆ ಮನಸ್ಸು ನಮನ ಸಲ್ಲಿಸಿತ್ತು. ಹಾಡಿನ ಮೂಲಕ ನನ್ನ ಮನಸ್ಸು ಶಾಂತವಾಗಿ ಅನಾರೋಗ್ಯ ಶಮನಾಗಿ  ಅರ್ಧ ಔಷಧಿಗಳಿಂದ ಹಾಗೂ ಇನ್ನರ್ಧ ಈ ಹಾಡಿನಿಂದ  ಆರೋಗ್ಯ ಮತ್ತೆ ಪಡೆದು  ಮನೆಗೆ ಬಂದೆ. ಅಂದಹಾಗೆ ಒಂದು ಕನ್ನಡ  ಚಿತ್ರದ ಹಾಡು  ನನ್ನ ಮನಸ್ಸಿನ ನೋವನ್ನು ಶಮನ ಗೊಳಿಸಿತ್ತು. ಆ ಹಾಡು ಯಾವುದು ಗೊತ್ತೇ 1993 ರಲ್ಲಿ ಬಿಡುಗಡೆಯಾದ "ಆಕಸ್ಮಿಕ" ಚಿತ್ರದ್ದು, ಹಂಸಲೇಖ ಸಾಹಿತ್ಯ ಬರೆದು  ,ಸಂಗೀತ ನೀಡಿ  ಡಾ// ರಾಜಕುಮಾರ್  ಹಾಡಿದ "ಬಾಳುವಂತ ಹೂವೆ "ಬಾಡುವಾಸೆ ಏಕೆ ?? "  ಸಾಹಿತ್ಯ ರಚಿಸಿದ ಕೈಗಳಿಗೆ ಹಾಗೂ  ಹಾಡಿದ ಗಾಯಕನಿಗೆ  ನನ್ನ ಮನಃಪೂರ್ವಕ   ನಮನಗಳು.

32 comments:

PARAANJAPE K.N. said...

ನಮಸ್ಕಾರ ಬಾಲೂ ಅವರಿಗೆ, ಏನಾಯ್ತು ಸಾರ್. ಈಗ ಹೇಗಿದ್ದೀರಿ?. ಆರೋಗ್ಯಭಾಗ್ಯ ಚೆನ್ನಾಗಿರಲಿ. ಹೌದು, ಕೆಲವು ಹಾಡುಗಳೇ ಹಾಗೇ. ಮನದ ಬೇಗುದಿ ತಣಿಸಿ ಆಹ್ಲಾದ ಕೊಡುತ್ತವೆ.

ಮನಸು said...

ಸಂಗೀತಕ್ಕೆ ಕಾಯಿಲೆಯನ್ನು ಗುಣಮಾಡಿಸುವಂತ ಮಾಂತ್ರಿಕ ಶಕ್ತಿ ಇರುತ್ತೆ ಎಂದು ಕೇಳಿದ್ದೆ. ನಿಮ್ಮ ಅನುಭವವೇ ನಿಜ ಎನಿಸಿತು. ಅಂದಹಾಗೆ ನಿಮ್ಮ ಆರೋಗ್ಯ ಈಗ ಹೇಗಿದೆ. ಆದಷ್ಟು ಬೇಗ ಚೇತರಿಸಿಕೊಳ್ಳಿ. ಸದಾ ಸಂತಸದ ಆರೋಗ್ಯ ನಿಮ್ಮದಾಗಲಿ
ವಂದನೆಗಳು

ಸುಮ said...

ಸಾಹಿತ್ಯ , ಸಂಗೀತ , ನೃತ್ಯ ,ಇತ್ಯಾದಿ ಕಲೆಗಳು ನಮ್ಮ ಮನಕ್ಕೆ ಶಾಂತಿ ನೀಡಿ ಅದರ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡುತ್ತವೆ. ನಿಮ್ಮ ಅನುಭವ ಇದನ್ನು ಸಾಬಿತು ಪಡಿಸುತ್ತದೆ ಅಲ್ಲವೇ?
ಈಗ ಹೇಗಿದ್ದೀರಿ ಸರ್ ?

sunaath said...

ಬಾಲು,
ನಿಮಗೆ ಮೈ ಸರಿ ಇರಲಿಲ್ಲವೆಂದು ಓದಿ ಕಳವಳವಾಗಿದೆ. ಬೇಗನೇ ಪೂರ್ಣರೂಪದಲ್ಲಿ ಚೇತರಿಸಿಕೊಳ್ಳುವಿರಿ ಎಂದು ಹಾರೈಸುತ್ತೇನೆ.

ಮನಮುಕ್ತಾ said...

ಬಾಲುರವರೆ,
ನಿಮ್ಮ ಆರೋಗ್ಯ ಶೀಘ್ರವಾಗಿ ಗುಣ ಹೊ೦ದಿ ಮತ್ತೆ ನೀವು ನಿಮ್ಮ ದೈನ೦ದಿನ ಚಟುವಟಿಗಳಲ್ಲಿ ತೊಡಗುವ೦ತಾಗಲಿ.

ನಿಜ ..ಸ೦ಗೀತದ ಶಕ್ತಿ ಅಗಾಧ..
ನಮಸ್ತೆ.

Dr.D.T.Krishna Murthy. said...

ಬಾಲೂ ಸರ್;ಮೊದಲಿಗೆ ನೀವು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.ನೀವು ಇಷ್ಟಪಟ್ಟ ಹಾಡು ನಿಜಕ್ಕೂ ಒಳ್ಳೆಯ ಸಾಹಿತ್ಯವಿರುವ ಸುಂದರ ಹಾಡು.

ಸುಬ್ರಮಣ್ಯ said...

ಬಾಲು ಅಣ್ಣ ಅದು ನಂದೂ ಮೆಚ್ಚಿನ ಹಾಡು. ಆ ಹಾಡನ್ನು ಹೈಸ್ಕೂಲ್ ನಲ್ಲಿ ಪದ್ಯ ಇಟ್ಟರೆ ಚನ್ನಾಗಿರುತ್ತಿತ್ತು ಅಂತ ಅನೇಕಸಲ ಅನ್ನಿಸುತ್ತಿತ್ತು!!

ಅದಿರಲಿ ಆಸ್ಪತ್ರೆಗೆ ಸೇರಿದ ಕಾರಣವೇನು??

shivu.k said...

ಬಾಲು ಸರ್,

ಇದೆಂತ ಕತೆ ನಿಮ್ಮದು...ಇದ್ದಕ್ಕಿದ್ದಂತೆ ಆಸ್ಪತ್ರೆನಾ...ಈಗ ಹೇಗಿದ್ದೀರಿ...ಬೇಗ ಆರೋಗ್ಯ ಸುಧಾರಿಸಲಿ...ಮನಸ್ಸಿಗೆ ಮುದನೀಡುವ ಹಾಡುಗಳು ಅದಕ್ಕಾಗಿ ಸಹಕರಿಸಲಿ..ಅಂಥ ಸನ್ನಿವೇಶದಲ್ಲಿ ಆಸ್ಪತ್ರೆಯ ಸನ್ನಿವೇಶವನ್ನು ಚಿತ್ರಿಸುವ ನಿಮ್ಮ ಸುಪ್ತಮನಸ್ಸಿಗೆ ನಮೋ ನಮಃ...ಫೋನ್ ಮಾಡುತ್ತೇನೆ..

balasubramanya said...

@ ಪರಾಂಜಪೆ , ಸರ್ ಏನೂ ಭಯ ಪಡುವಂತಹ ಆತಂಕವಿಲ್ಲ ಬಿಡುವಿಲ್ಲದ ಕಾರ್ಯಭಾರದ ಒತ್ತಡ ಹಾಗು ಆಹಾರ ವೆತ್ಯಾಸದಿಂದ ಸುಸ್ತಾಗಿ ಹೀಗಾಗಿತ್ತು. ನಿಮ್ಮ ಹಾರೈಕೆಗಳಿಗೆ ಶರಣು.ಆ ಸಂಧರ್ಬದಲ್ಲಿ ಈ ಹಾಡು ಹಿತವಾಗಿ ಸಾಂತ್ವನ ನೀಡಿತ್ತು.ಹಾಗು ಆಹ್ಲಾದ ಒದಗಿಸಿತ್ತು.

balasubramanya said...

ಪ್ರಿಯ ಸಹೋದರಿ ಸುಗುಣ , ಈಗ ಆರೋಗ್ಯ ಸುಧಾರಿಸಿ ಮೊದಲಿನಂತೆ ಆಗುತ್ತಿದೆ. ಯಾಕೊಕಾಣೆ ಆ ಸಂಧರ್ಬದಲ್ಲಿ ಈ ಹಾಡು ಮನದಲ್ಲಿ ನಿಂತುಬಿಟ್ಟಿತು.ನಿಮ್ಮ ಶುಭ ಹಾರೈಕೆಗಳಿಗೆ ನಮೋನಮಃ .

balasubramanya said...

ಸುಮಾ ಮೇಡಂ , ನಿಮ್ಮ ಮಾತು ನಿಜ ಆ ಸಂಧರ್ಭದಲ್ಲಿ ಒಣಗಿಹೋಗಿದ್ದ ಮನಸ್ಸಿಗೆ ಉಲ್ಲಾಸದ ಸಿಂಚನ ಮೂಡಿಸಿದ ಈ ಹಾಡು ಮುದ ನೀಡಿತ್ತು. ಈಗ ನನ್ನ ಆರೋಗ್ಯ ಸುಧಾರಿಸಿದೆ.ನಿಮ್ಮ ಪ್ರೀತಿಯ ಶುಭ ಹಾರೈಕೆಗೆ ಶರಣಾದೆ.

balasubramanya said...

@ಸುನಾತ್ ಸರ್ , ನಿಮ್ಮ ಆಶೀರ್ವಾದ ಪೂರ್ವಕ ಹಾರೈಕೆ ನನ್ನ ಆರೋಗ್ಯ ಸುಧಾರಿಸಲು ಸಹಕಾರಿಯಾಗಿದೆ. ನಿಮ್ಮ ಹಾರೈಕೆಗೆ ನಮಸ್ಕಾರಗಳು.

balasubramanya said...

@ ಮನಮುಕ್ತಾ [ಲತಾಶ್ರೀ],ಮೇಡಂ ನಿಮ್ಮ ಮಾತುಗಳು ನಿಜ ಸಂಗೀತಕ್ಕೆ ಅದರದೇ ಆದ ಶಕ್ತಿ ಇದೆ. ನಿಮ್ಮ ಶುಭ ಹಾರೈಕೆಗಳಿಗೆ ಹೃದಯತುಂಬಿ ಮಾತು ಬರದಾಗಿದೆ ನಿಮಗೆ ಆಭಾರಿ.

balasubramanya said...

@ಡಾ// ಕೃಷ್ಣಮೂರ್ತಿ ,ಸರ್ ನಿಮ್ಮ ಮಾತುನಿಜ ಆ ಹಾಡಿನ ಸಾಹಿತ್ಯ ನೊಂದ ಮನಸ್ಸಿಗೆ ಸಾಂತ್ವನ ಹೇಳುವ ಶಕ್ತಿ ಹೊಂದಿದೆ. ಮನಸಿನ ಆತ್ಮ ಸ್ತೈರ್ಯ ಹೆಚ್ಚಿಸಿದೆ. ಈಗ ನನ್ನ ಆರೋಗ್ಯ ಸುಧಾರಿಸಿದೆ. ನಿಮ್ಮ ಶುಭಾಶಿರ್ವಾದಗಳಿಗೆ ನನ್ನ ಕ್ರುತ್ಜನತಾ ಪೂರ್ವಕ ನಮಸ್ಕಾರಗಳು.

balasubramanya said...

@ ಸುಬ್ರಮಣ್ಯ ಮಾಚಿಕೊಪ್ಪ , ನಿಮ್ಮ ಅನಿಸಿಕೆ ನಿಜ ಈ ಹಾಡನ್ನು ಪಟ್ಯ ಕ್ರಮದಲ್ಲಿ ಅಳವಡಿಸಿದರೆ ನಿಜಕ್ಕೂ ಒಳ್ಳೆಯದು.ಮಕ್ಕಳ ಆತ್ಮಸ್ತೈರ್ಯ ಹೆಚ್ಚಿಸಲು ಇದು ಸಹಕಾರಿಯಾಗುತ್ತದೆ. ಊರಿನಿದ ಹೊರಗಡೆ ಅನಿವಾರ್ಯವಾಗಿ ತಿಂದ ಆಹಾರ ಇವುಗಳಿಂದ ಅನಿಯಮಿತ ಕೆಲಸದ ಒತ್ತಡಗಳ ಕಾರಣ ದೇಹ ಧಣಿದು ಕುಸಿದು ಬಿಟ್ಟಿದ್ದೆ ಅಷ್ಟೇ .ಈಗ ನಾನು ಆರೋಗ್ಯವಾಗಿದ್ದೇನೆ.ಪ್ರಿಯ ಸಹೋದರ ನಿಮ್ಮ ನಿಜವಾದ ಕಾಳಜಿಗೆ ಹೃದಯ ತುಂಬಿಬಂದಿದೆ.

balasubramanya said...

@ ಶಿವೂ.ಕೆ. , ಸ್ನೇಹಿತರ ಶುಭ ಹಾರಿಕೆಯ ಫಲವಾಗಿ ಈಗ ನನ್ನ ಆರೋಗ್ಯ ಸುಧಾರಿಸಿದೆ. ದೈನಂದಿನ ಕೆಲಸದ ಒತ್ತಡದಿಂದ ಹೀಗಾಗಿತ್ತು.ನಿಮ್ಮ ಶುಭ ಹಾರೈಕೆಗಳಿಗೆ ಮನ ತುಂಬಿಬಂದು ಬೆರಗಾಗಿದೆ.ನಿಮ್ಮ ಶುಭ ಹಾರೈಕೆಗಳಿಗೆ ಶರಣು ಶಿವೂ.

ಅನಂತ್ ರಾಜ್ said...

nimma arogya beda sudharisali...baalu sir. nammella shubha haaraike yaavagaloo nimmodane ide...

shubhavagali
ananth

prabhamani nagaraja said...

ಬಾಲು ಸರ್,
ಈಗ ನಿಮ್ಮ ಆರೋಗ್ಯ ಹೇಗಿದೆ? ಬೇಗ ಗುಣಮುಖರಾಗಿರಿ. ವಿಶ್ರಾ೦ತಿ ತೆಗೆದುಕೊಳ್ಳಿ. ನಿಮ್ಮ ಕಷ್ಟದ ದಿನಗಳಲ್ಲಿ ಸ್ಪೂರ್ತಿ ತು೦ಬಿದ ಆ ಹಾಡನ್ನು ಬರೆದ ಸಾಹಿತಿಗೆ ನನ್ನದೂ ನಮನಗಳು. ಸ೦ಗೀತದ ಮಹತ್ವ ಸಾರುವ ನಿಮ್ಮ ಅನುಭವ ಬಹಳ ಉಪಯುಕ್ತವಾಗಿವೆ ಸರ್. ಹ೦ಚಿಕೊ೦ಡ ನಿಮಗೆ ಧನ್ಯವಾದಗಳು.

balasubramanya said...

@ ಅನಂತ್ ರಾಜ್ ಸರ್ ನಿಮ್ಮ ಶುಭ ಆಶಿರ್ವಾದಗಳಿಗೆ ಕೃತಜ್ಞ , ನಿಮ್ಮ ಪ್ರೀತಿಗೆ ನಮಸ್ಕಾರಗಳು.

balasubramanya said...

@prabhamani nagaraja ,ಮೇಡಂ ನಿಮ್ಮ ಶುಭ ಹಾರೈಕೆಗಳಿಗೆ ಕೃತಜ್ಞ. ಹೌದು ಆ ಸಮಯದಲ್ಲಿ ಯಾಕೋ ಗೊತ್ತಿಲ್ಲ ಅ ಹಾಡು ಸಂಜೀವಿನಿಯಂತೆ ಬಂತು. ಮನಸಿಗೆ ಸಾಂತ್ವನ ಹೇಳಿದ ಹಾಗೆ ಆಯಿತು.ನಿಮ್ಮ ಅನಿಸಿಕೆ ಹಾಗು ಶುಭ ಹಾರೈಕೆಗಳಿಗೆ ನನ್ನ ನಮಸ್ಕಾರಗಳು.

ದಿನಕರ ಮೊಗೇರ said...

sir,
tubaa sogasaada haaDu adu...
chaitanya tumbuvudu sahaja...

take care sir...

balasubramanya said...

@ ದಿನಕರ ಮೊಗೆರ , ನಿಮ್ಮ ಅನಿಸಿಕೆ ನಿಜ ನಿಮ್ಮ ಪ್ರೀತಿಯ ಹಾರೈಕೆಗೆ ಸಲಾಂ.

ಅಪ್ಪ-ಅಮ್ಮ(Appa-Amma) said...

ಪ್ರೀತಿಯ ಬಾಲು,

ನಿಮ್ಮ ಅನಾರೋಗ್ಯದ ಬಗ್ಗೆ ಓದಿ ಹೆದರಿಕೆಯಾಯ್ತು. ಎಲ್ಲಾ ಕ್ಷೇಮವೇ..

ನಿಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಿ.

ಇನ್ನೂ ಆ ಹಾಡು...
ಹಂಸಲೇಖ ನೀಡಿರುವ ಸಾಲುಗಳು ಜೀವಕ್ಕೆ ಗ್ಲೂಕೋಸ್ ನೀಡುವಂತಿವೆ. ವಿಜಯ ಕರ್ನಾಟಕದ ’ಹಾಡು ಹುಟ್ಟಿದ ಸಮಯ’ ಅಂಕಣದಲಿ ಹಂಸಲೇಖ ಆ ಹಾಡು ಹುಟ್ಟಿದ ಗಳಿಗೆ ಮತ್ತು ಅದು ಮಾಡಿದ ಪ್ರಭಾವದ ಬಗ್ಗೆ ಓದಿದ ನೆನಪು.

ಗಿರೀಶ್.ಎಸ್ said...

Balu sir.
get well soon...

Ashok.V.Shetty, Kodlady said...

ಬಾಲು ಸರ್,

ನಿಮ್ಮ ಆರೋಗ್ಯದ ವಿಷ್ಯ ಕೇಳಿ ಬೇಸರವಾಯಿತು, ಬೇಗ ಗುಣಮುಖರಾಗಿ...
ಈ ಹಾಡು ತುಂಬಾ ಚೆನ್ನಾಗಿದೆ... Get well soon..

balasubramanya said...

@ ಅಪ್ಪ-ಅಮ್ಮ(Appa-Amma):-ನಿಮ್ಮ ಆತ್ಮೀಯವೆನ್ನಿಸುವ ನುಡಿಗಳಿಗೆ ಹೇಗೆ ಕೃತಜ್ಞತೆ ಅರ್ಪಿಸಬೇಕೋ ತಿಳಿಯದಾಗಿದೆ. ಹಾರೈಕೆಗಳಿಗೆ ಶರಣು. ನಿಮ್ಮ ಅನಿಸಿಕೆ ನಿಜ ಆ ಸಮಯದಲ್ಲಿ ಆ ಹಾಡು ವರವಾಗಿ ತೇಲಿಬಂತು.

balasubramanya said...

@ಗಿರೀಶ್ ಎಸ್:- ನಿಮ್ಮ ಪ್ರೀತಿಯ ಹಾರೈಕೆಗಳಿಗೆ ವಂದನೆಗಳು.

balasubramanya said...

@ashokkodlady:- ನಿಮ್ಮ ಪ್ರೀತಿಯ ಶುಭ ಹಾರೈಕೆಗಳಿಗೆ ಕೃತಜ್ಞತೆಗಳು..

ಡಾ. ಚಂದ್ರಿಕಾ ಹೆಗಡೆ said...

ನಿಜವಾಗ್ಲೂ ... ನನ್ನ ಮಗು ಹೊಟ್ಟೆಯಲ್ಲಿ ಇದ್ದಾಗ ಸ್ವಲ್ಪ ವಿರಾಮ ತೆಗೆಯುವ ವೈದ್ಯರ ಸಲಹೆಯ ಮೇರೆಗೆ ೫-೬ ತಿಂಗಳು ಆರಾಮ? ವಿರಾಮದಲ್ಲಿ ಮನೆಯೊಳಗೇ ಇದ್ದೆ. injection ಎಂದರೆ ಭಯವಾಗುತ್ತಿದ್ದ ನನಗೆ.. ಆ ನೆಪದಿಂದ ಆದರು ಮನೆಯಿಂದ ಹೊರಗಡೆ ಹೋಗಬಹುದಲ್ಲ ಅಂತ ಚುಚ್ಚಿಸಿಕೊಳ್ಳುವದೇ ಖುಷಿಯಾಯಿತು! ವಿಪರ್ಯಾಸ ನೋಡಿ! ಹಾಡು ಕೇಳುವದೇ ನನ್ನ ಮನರಂಜನೆಗೆ ಮಾರ್ಗವಾಗಿತ್ತು!.... ಹಾಡು ಯಾವಾಗಲು ಮನಸ್ಸಿಗೆ ಚೈತನ್ಯವನ್ನು ,... ಜೀವನ ಸಾಧ್ಯತೆಗಳನ್ನು ಹೆಚ್ಚಿಸುವದು...

balasubramanya said...

@ಡಾ. ಚಂದ್ರಿಕಾ ಹೆಗಡೆ:- ನನ್ನ ಬ್ಲಾಗಿಗೆ ನಿಮ್ಮ ಪ್ರಥಮ ಭೇಟಿ ನೀಡಿದ್ದೀರಿ ನಿಮಗೆ ಸ್ವಾಗತ. ಭೇಟಿ ಮುಂದುವರೆಯಲಿ. ನಿಮ್ಮ ಅನಿಸಿಕೆ ಜೊತೆ ನಿಮ್ಮ ಅನುಭವ ಹಂಚಿಕೊಂಡಿದ್ದೀರಿ ನಿಮ್ಮ ಮಾತು ನಿಜ. ಹಾಡುಗಳು ಮನಕ್ಕೆ ಮುದನೀಡಿ ಚೈತನ್ಯ ಗೊಳಿಸುತ್ತವೆ

Deep said...

balu,

Bega recover agi, form ge banni :-)

balasubramanya said...

@Deep , ನಿಮ್ಮ ಹಾರೈಕೆಗೆ ಥ್ಯಾಂಕ್ಸ್