|
ನಿಸರ್ಗದ ಮಡಿಲು. |
ನಡೆಯುತ್ತಾ ಪಕ್ಕದ ಕಾಫಿ ಎಸ್ಟೇಟ್ ಒಂದರಲ್ಲಿ ನಿಸರ್ಗದ ಸವಿ ಸವಿಯುತ್ತಾ ಇರಲು ಜೊತೆಯಲ್ಲಿ ಬಂದಿದ್ದವರು ಬನ್ನಿ ಸಾರ್ ಇವರನ್ನು ಪರಿಚಯ ಮಾಡಿಕೊಳ್ಳಿ ಪಕ್ಕದವರ ಪರಿಚಯ ಇದ್ದರೆ ಒಳ್ಳೆಯದು ಅಂತಾಹೇಳಿ ಬಂಗಲೆಯ ಬಾಗಿಲು ತಟ್ಟಲು ಶುರುಮಾಡಿದರು.ಹೊರಗಡೆ ಬಂದ ಮಾಲೀಕರು ಅಪರಿಚಿತ ಮುಖಗಳ ನಡುವೆ ಪರಿಚಿತ ಮುಖ ಕಂಡು ಓ ನೀವಾ !! ಏನ್ಸಮಾಚಾರ ಅಂದರು!! ಇವರೂ ಬೆಂಗಳೂರ್ನವರೂ ನಿಮ್ಮ ಪಕ್ಕದ ತೋಟ ತಗತಾವ್ರೆ ಅಂದಾಗ ಹೌದಾ ಬನ್ನಿ ಒಳಗೆ ಅಂತ ಒಳಗೆ ಕರೆದು ಪರಿಚಯವಾಗಿ ,ಖುಷಿಪಟ್ಟರು. ಕುರುಕು ತಿಂಡಿ , ಕಾಫಿ ಸಮಾರಾಧನೆ ಆಯ್ತು.ಒಳಗೆ ಗೆಳೆಯನನ್ನು ಮಾತಿಗೆ ಬಿಟ್ಟುನಾನು ಮನೆಯ ಹೊರಗೆ ನಿಸರ್ಗನೋಟ ಸವಿಯಲು ಹೊರಗಡೆ ಬಂದು ಕ್ಯಾಮರ ಕಿಂಡಿಯೊಳಗೆ ಇಣುಕಿದೆ.ಸುತ್ತಲೂ ವಿವಿಧ ಬಗೆಯ ,ವಿವಿಧ ಬಣ್ಣಗಳ ಪುಷ್ಪಗಳ ಸೌಂದರ್ಯ ಮನಸೂರೆಗೊಂಡಿತ್ತು.ಚಕಚಕನೆ ಚಿತ್ರಗಳು ನನ್ನ ಕ್ಯಾಮರಾದಲ್ಲಿ ಸೆರೆ ಯಾಗುತ್ತಿತ್ತು
|
ಇದು ಸಾರಂಗದ ಕೊಂಬು ಅಲ್ಲಣ್ಣ !!! |
|
ಬಾ ಮಳೆಯೇ ಬಾ !!!ಸ್ವಾಗತ ನಿನಗೆ. |
.ಜೇಬಿನಲ್ಲಿದ್ದ ಕುರುಕುತಿಂಡಿ ಸೇವಿಸುತ್ತಾ ಬೇಕಾದ ಚಿತ್ರಗಳನ್ನು ತೆಗೆಯಲು ಖುಷಿಯಾಗಿತ್ತು.ಸ್ವರ್ಗದಲ್ಲಿ ಎಲ್ಲ ಕಡೆ
|
ಹೂವಿಂದ ಹೂವಿಗೆ ಹಾರುವ ದುಂಬಿ |
ಸೌಂದರ್ಯ ತುಂಬಿರಲು
|
ಹೂವಿಗೂ ದುಂಬಿಗೂ !!!ನಿಸರ್ಗ ಮಿಲನ. |
|
ಯಾವ ಹೂವು ಯಾವ ದುಂಬಿಗೋ!! |
ಎಷ್ಟನ್ನು ನೋಡಲು ಸಾಧ್ಯ ?? ಬನ್ನಿ ಕೆಲವು ನೋಟ ನೋಡೋಣ
|
ಬಿಳಿ ಹೂವಿಗೆ ಕಪ್ಪು ದುಂಬಿಯ ಪ್ರೀತಿಯ ಚುಂಬನ!! |
|
ಕೆಂಪು ವರ್ತುಲ !!! ಅರಳಿದ ಕುಸುಮ !! |
|
ಅರಳಿದ ಹೂಗಳ ಗುಚ್ಛಕ್ಕೆ ದುಂಬಿಯ ಸ್ಪರ್ಶ ಸುಖ!!! ಹೂಗಳ ಲೋಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ನನ್ನ ಗೆಳೆಯ ಅನಿಲ್ ಲೋ ಬಾಲೂ ಏನೂ ತಿನ್ನೋ ಯೋಚನೆ ಇಲ್ವ್ಚಾ ತಗೊಳೋ ಅಂತಾ ಕುರುಕಲು ತಿಂಡಿ ಹಾಗು ಕಾಫಿ ತಂದುಕೊಟ್ಟು ಗೆಳೆತನ ಮೆರೆದಿದ್ದ.ಕೊಡು ಗುರು ಒಂತರಾ ಚಳಿಗೆ ಇದು ಮಜಾವಾಗಿದೆ ಅಂತಾ ಹೇಳಿ ಕಾಫಿ ಗುಟುಕಿಸುತ್ತಾ ಕುರುಕಲು ತಿಂಡಿ ತಿನ್ನಲು ಶುರು ಮಾಡಿದೆ. ಹಾಗೆ ತೋಟದ ಕಲ್ಲಿನ ಮೇಲೆ ಒಂದು ಹಕ್ಕಿ ತೋರಿಸಿ ಲೋ ಬಾಲು, ಅದು ತೆಗಿ!!! ಚೆನ್ನಾಗಿದೆ. ಅಂದಾ ಆ ಕಡೆ ತಿರುಗಿ ಕ್ಯಾಮರಾ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಆ ಹಕ್ಕಿ ಪುರ್ ಅಂತಾ ಹಾರಿ ಹೋಯಿತು ,ಸ್ವಲ್ಪ ಸಮಯ ಬಿಟ್ಟು ಮತ್ತೆ ಅದೇ ಕಲ್ಲಿನ ಮೇಲೆ ಕುಳಿತು ಕೊಂಡಿತು. ಮತ್ತೆ ಫೋಟೋ ತೆಗೆಯಲು ತಿರುಗಿದರೆ ಪುರ್ ಅಂತ ಹಾರಿ ಆಟಾ ಆಡಿಸಿತು. ಹಲವಾರು ಭಾರಿ ಆಟ ಆಡಿಸಿದ
ಈ ಹಕ್ಕಿ ಕೊನೆಗೆ ನನ್ನ ಕ್ಯಾಮರಾ ಬಲೆಗೆ ಬಿತ್ತು. ನೀಲಿ ಮಂಡೆ ಪೀಪಿ [pied bush chaat] ಅಂತಾ ಕರೆಯೋ ಈ ಹಕ್ಕಿ ಕೀಟ ಭಕ್ಷಕ .ನೋಡಲು ಸುಂದರವಾಗಿದ್ದು. ತುಂಬಾ ಚಂಚಲವಾದ ಹಕ್ಕಿ.ಕಿರುಗುಟ್ಟುವ ಹಾಗೆ ಶಿಳ್ಳೆ ಹೊಡೆಯುತ್ತದೆ. ನಂತರ ತೋಟದಿಂದ ಚಿಕ್ಕಮಗಳೂರಿಗೆ ವಾಪಸ್ಸು ಬಂದ ನಮಗೆ ಹೊಟ್ಟೆ ಚುರುಗುಟ್ಟಲು ಆರಂಭಿಸಿತ್ತು . ಪೇಟೆ ಮುಖ್ಯ ರಸ್ತೆಯಲ್ಲಿರುವ
"ಮಯೂರ ಹೋಟೆಲ್" ಗೆ ತೆರಳಿ ಬೋಂಡಾ ಸೂಪ್ , ಹಾಗು ದೋಸೆ ತಿಂದುಕಾಫಿ ಹೀರಿ ಹೊರಬಂದೆವು. ಆದರೂ ಯಾಕೋ ಬೆಳಿಗ್ಗೆ ಚಿಕ್ಕಮಗಳೂರಿನ ಟೌನ್ ಕ್ಯಾಂಟೀನ್ ತುಪ್ಪದ ದೋಸೆ ರುಚಿ ಕಾಡುತ್ತಿತ್ತು. ನೀವೂ ಸಹ ಚಿಕ್ಕಮಗಳೂರಿಗೆ ಬಂದರೆ ಮರೆಯದೆ" ಟೌನ್ ಕ್ಯಾಂಟೀನ್" ನಲ್ಲಿನ ತುಪ್ಪದ ದೋಸೆ ತಿನ್ನಿ ಚೆನ್ನಾಗಿರುತ್ತೆ.ನಂತರ ನಾನು ಶ್ರೀನಿವಾಸ್ ಈ ಊರಲ್ಲಿ ಏನಾದರೂ ವಿಶೇಷ ಇದ್ಯಾ ಊರಿಗೆ ತೆಗೆದುಕೊಂಡು ಹೋಗಲು ಅಂದೇ ಸಾರ್" ಪಾಂಡು ರಂಗ ಕಾಫಿ" ಪುಡಿ ತಗೊಳ್ಳಿ ಇಲ್ಲಿ ತುಂಬಾ ಪ್ರಸಿದ್ದಿ ಅಂದ್ರು ಪಾಂಡುರಂಗ ಕಾಫಿ ಅಂಗಡಿಗೆ ತೆರಳಿ ಕಾಫಿ ಪ್ರಿಯನಾದ
ನಾನು ಸುಮಾರು ಒಂದೂವರೆ ಕಿಲೋ ಕಾಫಿ ಪುಡಿ ಖರೀದಿಸಿದೆ.ಉತ್ತಮ ಪ್ಯಾಕ್ಕಿಂಗ್ ನಿಂದ ಕಾಫಿಯ ಸುವಾಸನೆ ಚೆನ್ನಾಗಿತ್ತು. ನೀವೂ ಸಹ ಇಲ್ಲಿಗೆ ಬಂದರೆ ಒಮ್ಮೆ ಇಲ್ಲಿನ ಕಾಫಿಪುಡಿ ಖರೀದಿಸಿ ಚೆನ್ನಾಗಿರುತ್ತದೆ.ಈ ಪಾಂಡುರಂಗ ಕಾಫಿ ಪುಡಿ ಬಗ್ಗೆ ಹಲವರು ಅಂತರ್ಜಾಲದಲ್ಲಿ ಉತ್ತಮ ಅಭಿಪ್ರಾಯ ಬರೆದಿರುವುದು ಸುಳ್ಳಲ್ಲಾ .ನಂತರ ಸಾರ್ ನಿಮ್ಮತೋಟದ ಬಾಗಿಲನ್ನು ಹೇಗೆ ಮಾಡಿಸಬೇಕೆಂದು ತೋರಿಸುತ್ತೇನೆ ಬನ್ನಿ ಅಂತ ಹತ್ತಿರದ ಮತ್ತೊಂದು ಎಸ್ಟೇಟ್ ಗೆ ಕರೆದೊಯ್ದರು. ದೋ ಎಂದು ಮಳೆ ಸುರಿಯುತ್ತಿದರೂ ನೆನೆದುಕೊಂಡೇ ತೋಟದೊಳಗೆ ಹೋದೆವು. ಅಲ್ಲಿನ ಯಜಮಾನರು ಸಂತಸದಿಂದ ನಮ್ಮನ್ನು ಸ್ವಾಗತಿಸಿ ಕಾಫಿ ಬಿಸ್ಕತ್ ನೀಡಿ ಉಪಚರಿಸಿದರು.ಒಬ್ಬ ಕೆಲಸದವರು ನಮಗೆ ಮಳೆಯಲ್ಲಿ ತೋಟ ತೋರಿಸಲು ಬಂದರು.ವರ್ಷಧಾರೆಗೆ ಸಾತ್ ನೀಡುವಂತೆ ಮರಗಳ ನಡುವಿನಿಂದ ಕೀಟಗಳ ಗಿರ್ ಅಂತ ಹಾಡು ತೇಲಿಬಂತು. ಇದು ಏನು ಅಂತಾ ಕೇಳಿದ ನನ್ನನ್ನು ಬನ್ನಿ ಸಾರ್ ಇದರ ಫೋಟೋ ತೆಗಿರಿ ಅಂತ ಒಂದು ಮರದ ಸನಿಹಕರೆದೊಯ್ದರು. ಅಲ್ಲಿ ನೋಡಿದರೆ
ಒಂದು ಕೀಟ ಮರವನ್ನು ಅಪ್ಪಿಕೊಂಡು ಕುಳಿತಿದೆ.ಇದೆ ಆ ಜೀರುಂಡೆ ಇವು ಮರಗಳ ಕಾಂಡಕ್ಕೆ ಅಂಟಿಕೊಂಡು ಕೋರಸ್ ಹಾಡುಗಾರ ರಂತೆ ಕಿರ್ರ್ರ್ ಅಂತಾ ಶಬ್ದ ಹೊಮ್ಮಿಸುತ್ತಾ ಕುಳಿತಿರುತ್ತವೆ ಶಬ್ದ ಕೇಳಲು ನಮಗೆ ಕರ್ಕಶವಾಗಿದ್ದರೂ !!! ಇವುಗಳ ಹಾಡು ಕೇಳುತ್ತಾ ಮುನ್ನಡೆಯುವುದು ಅನಿವಾರ್ಯ ವಾಗಿತ್ತು.ಇವುಗಳ ಹೊಂದಾಣಿಕೆ ಹೇಗಿತ್ತೆಂದರೆ ಒಂದು ಮರದ ಬಳಿ ನೀವು ತೆರಳಿದರೆ ಆ ಮರದಿಂದ ಶಬ್ದ ಬರುವುದು ನಿಂತು ಹೋಗಿ ಉಳಿದ ಮರಗಳಿಂದ ಶಬ್ದ ಮುಂದುವರೆದಿರುತ್ತದೆ.ನೀವು ಮುಂದೆ ತೆರಳಿದಂತೆ ನಿಮ್ಮನ್ನು ಈ ಜೀರುಂಡೆಗಳ ಶಬ್ದ ಹಿಂಬಾಲಿಸುವಂತೆ ಭಾಸವಾಗುತ್ತದೆ.ತೋಟ ನೋಡಿ ಸುಸ್ತಾದ ನಮಗೆ ಗಂಟೆ ಎಂಟು ಆಗಿದ್ದು ಗೊತ್ತೇ ಇರ್ಲಿಲ್ಲಾ !!ಲೋ ಬಿಂದು ಹೊರಡೋಣ ಇನ್ನೂ ಮೈಸೂರಿಗೆ ಬಸ್ಸು ಹಿಡಿಯಬೇಕು ಅಂದೇ. ಸರಿ ಅಂತ ಅಲ್ಲಿಂದ ಹೊರಟು ರಾತ್ರಿ ಒಂಬತ್ತು ಘಂಟೆಗೆ ಹಾಸನ ತಲುಪಿ ಸ್ನೇಹಿತನಿಗೆ ವಿಧಾಯ ಹೇಳಿ ನಾನು ಅನಿಲ್, ಹಾಗು ಅವನ ಮಗ ಅಜಂತ್ ಮೈಸೂರಿನ ಬಸ್ಸನ್ನು ಏರಿ ಕುಳಿತೆವು.ರಾತ್ರಿ ಒಂಬತ್ತು ವರೆಗೆ ಹೊರಟ ಬಸ್ಸಿನಲ್ಲಿ ಟಿಕೆಟ್ ಪಡೆದು ಬಸ್ಸು ಚಲಿಸಿ ತಂಗಾಳಿ ಬೀಸುತ್ತಿದ್ದಂತೆ ನಿದ್ರಾದೇವಿಯ ಮಡಿಲಿಗೆ ಶರಣಾಗಿದ್ದೆನು!! ಹನ್ನೊಂದು ವರೆಗೆ ಅನಿಲ್ ಲೋ ಬಾಲೂ ಮೈಸೂರು ಬಂತು ಎಳೋ........!!!! ಅಂದಾಗಲೇ ವಾಸ್ತವ ಕ್ಕೆ
ಬಂದಿದ್ದೆ.ಒಂದು ಸುಂದರ ಭಾನುವಾರ ಚಿಕ್ಕಮಗಳೂರಿನಲ್ಲಿ ಕಳೆದ ಸುದರ ಕ್ಷಣಗಳ ನೆನಪಿನ ಮೂಟೆ ಹೊತ್ತು ಮೈಸೂರಿಗೆ ಬಂದಿದ್ದೆ.ಥ್ಯಾಂಕ್ಸ್ ಚಿಕ್ಕಮಗಳೂರು ನಾನು ಮತ್ತೊಮ್ಮೆ ನಿನ್ನ ಬಳಿಗೆ ಬರುವೆ. ನಿನ್ನ ನೆನಪು ನನ್ನ ಮನದಲ್ಲಿ ಹಸಿರಾಗಿದೆ,ಅಲ್ಲಿಯ ವರೆಗೆ ನಿನಗೆ ನನ್ನ ಶುಭ ವಿದಾಯ . |
22 comments:
ಫೋಟೋಗಳು ನಿಜಕ್ಕೂ ಚನ್ನಾಗಿವೆ!!!
ನಿಸರ್ಗದ ಕೆಲವು ಅಪೂರ್ವ ಚಿತ್ರಗಳನ್ನು ಕೊಟ್ಟಿದ್ದೀರಿ. ಧನ್ಯವಾದಗಳು.
ಮಲೆನಾಡಿನ ರಂಗು ರಂಗಿನ ಸುಂದರಿಯರನ್ನ ಸೆರೆಹಿಡಿದು ನಮಗೂ ತೋರಿಸಿದ್ದಕ್ಕೆ ಧನ್ಯವಾದಗಳು
ಎಲ್ಲ ಫೋಟೋಗಳೂ ಅದ್ಭುತವಾಗಿವೆ
ಸುಬ್ರಹ್ಮಣ್ಯ ಮಾಚಿಕೊಪ್ಪ ಅವರೇ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.
ಸುನಾಥ್ ಸಾರ್ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಲಾಂ.
ದಿಲೀಪ್ ಹೆಗ್ಡೆ ಸರ್ ನಿಮ್ಮ ಅನಿಸಿಕೆ ತಲುಪಿದೆ , ಥ್ಯಾಂಕ್ಸ್.
superb photos sir
ಗುರುಮೂರ್ತಿ ಸರ್ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು .
ಬಾಲು ಸರ್,
ಸಿಕಾಡ ಮತ್ತು ಇನ್ನಿತರ ಫೋಟೊಗಳು ತುಂಬಾ ಚೆನ್ನಾಗಿವೆ. ಚಿಕ್ಕಮಗಳೂರಿನ ಅನೇಕ ವಿಚಾರಗಳನ್ನು ಹೇಳಿದ್ದೀರಿ..ನಾನು ಕಳೆದ ವರ್ಷ ಹೋಗಿದ್ದೆ. ಅಲ್ಲಿನ ಕಾಫಿ ರುಚಿ ತುಂಬಾ ಚೆನ್ನಾಗಿರುತ್ತದೆ.
ಅದ್ಭುತ ಚಿತ್ರಗಳು. ಅದಕ್ಕೊಪ್ಪುವ ವಿವರಣೆಗಳು. ಪ್ರಕೃತಿಯ ಸೌ೦ದರ್ಯವನ್ನು ಸೆರೆ ಹಿಡಿಯುವಲ್ಲಿ ನಿಮಗೆ ವಿಶೇಷ ಜಾಣ್ಮೆ ಇದೆ. ನಾವೂ ಮುಳ್ಳಯ್ಯನ ಗಿರಿಗೆ ಹಾಗೂ ಕೆಮ್ಮಣ್ಣು ಗು೦ಡಿಗೆ ಹೋಗಿ ಬರುವಾಗ ಚಿಕಮಗಳೂರಿನ ಹೋಟೆಲ್ ಮಯೂರ ದಲ್ಲಿ ಬೋ೦ಡ, ಸೂಪ್ ತೆಗೆದುಕೊ೦ಡಿದ್ದೆವು. ಚೆನ್ನಾಗಿತ್ತು! ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.
ಬಾಲು ಅವರೇ,
ಚಂದದ ಚಿತ್ರಗಳೊಂದಿಗೆ ಮಲೆನಾಡಿನ ಅನುಭವವನ್ನು ಹಂಚಿಕೊಂದಿದ್ದೀರಾ,
ಧನ್ಯವಾದಗಳು.
ಶಿವೂ ಸರ್ ನಿಮ್ಮ ಅನಿಸಿಕೆ ತಲುಪಿದೆ ಥ್ಯಾಂಕ್ಸ್.
ಪ್ರಭಾಮಣಿ ನಾಗರಾಜ್ ರವರೆ ನೀವು ನನ್ನ ಪುಟಕ್ಕೆ ಬಂದಿದ್ದು ಸಂತೋಷ ,ಆಗಾಗ ಬರುತ್ತಿರಿ ನಿಮ್ಮ ಅನಿಸಿಕೆ ಬರುತ್ತಿರಲಿ.. ನಿಮ್ಮ ಬ್ಲಾಗಿಗೆ ಭೆತಿನೀದುತ್ತೇನೆ ಧನ್ಯವಾದಗಳು.
ಮನದಾಳದಿಂದ ಪ್ರವೀಣ್ ರವರೆ ನಿಮ್ಮ [ಮಲೆನಾಡಿನ ಅನುಭವ ಹಂಚಿಕೊಂದಿರುವ ಬಗ್ಗೆ??? ಕ್ಷಮಿಸಿ ತಮಾಷೆಗೆ!!! ಬೆರಳಚ್ಚುತಪ್ಪೆಂದು ಗೊತ್ತು] ಅನಿಸಿಕೆ ಚೆನ್ನಾಗಿದೆ ಹಾಗೆ ಬೆನ್ನು ತಟ್ಟುತ್ತಿರಿ!!!
Beautiful pictures...
ಬಾಲು ಸರ್ ,
ಫೋಟೊಗಳು ತುಂಬಾ ಚೆನ್ನಾಗಿವೆ. "ಮಲೆನಾಡಿನ ಮಳೆ ಹಾಡಿನ ಪಿಸು ಮಾತಿನ ಹೊಸತನ " ಹಾಡಿನ ನೆನಪು ತರ್ತಾ ಇದೆ ...
ತುಂಬಾ ಚೆನ್ನಾಗಿ ಬಂದಿವೆ ಫೋಟೋಗಳು! ಜೊತೆಗೆ ವಿವರಣೆ!
ಸುಮನ ದೀಪಕ್ ನಿಮ್ಮ ಅನಿಸಿಕೆ ಹೀಗೆ ಬರಲಿ.ನಿಮಗೆ ಥ್ಯಾಂಕ್ಸ್ .
ಶ್ರೀ ಪ್ರಸಾದ್ ರವರೆ ನಿಮ್ಮ ಅನಿಸಿಕೆಗೆ ಧನ್ಯವಾದಗಳು.ನಿಮ್ಮ ಭೇಟಿ ಹೀಗೆ ಆಗುತ್ತಿರಲಿ.
ಸೀತಾರಾಂ ಸರ್ ನಿಮ್ಮ ಅನಿಸಿಕೆ ತಲುಪಿದೆ .ಥ್ಯಾಂಕ್ಸ್
ಬಾಲು...
ಸುಂದರ ಫೋಟೊಗಳು..
ಅದಕ್ಕೆ ತಕ್ಕ ಒಕ್ಕಣಿಕೆಗಳು...
ಮಲೆನಾಡಿನ "ನಮ್ಮೂರಿಗೆ" ಹೋಗಿ ಬಂದಂತಾಯಿತು...
ಅಭಿನಂದನೆಗಳು..
ಪ್ರಕಾಶ್ ಹೆಗ್ಡೆ ಸರ್ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.ಆಗಾಗ ನನ್ನ ಪುಟಕ್ಕೆ ಬಂದು ನಿಮ್ಮ ಅನಿಸಿಕೆ ತಿಳಿಸುತ್ತಿರಿ.
Post a Comment