ನಮಸ್ಕಾರ ಬನ್ನಿ ಒಂದು ಚಾರಣದ ವಿಚಾರ ಹೇಳ್ತೀನಿ! ಅದೆನನಿಸ್ತೋ ವೇಣು ಫೋನ್ ಮಾಡಿ ಬಾಲು ನನ್ನ ಫ್ರೆಂಡ್ಸ್ ಜೊತೆ ಬೇಡಗುಳಿ ಜೋಡಿಗೆರೆ ಟ್ರೆಕ್ಕಿಂಗ್ ಹೋಗೋಣ ಅಂತ ಇದೀನಿ ಬರ್ತಿರ ಅಂದ್ರು ! ನಂಗು ಅದೆನನ್ಸಿತೋ ಕಾಣೆ ಆಯ್ತು ಅಂದೇ! ಆ ದಿನ ಬಂತು ನಂಗೆ ಗೊತ್ತಿಲ್ದೆ ಅವರ ಗುಂಪಿನ ಸ್ನೇಹಲೋಕದೊಳಗೆ ಮುಳುಗಿ ಹೋದೆ! ನಂತರ ಪ್ರಾರಂಭ ನಮ್ಮ ಯಾನ ! ಮದ್ಯಾಹ್ನ ೨.೩೦ ಗಂಟೆ ಗೆ ಚಾಮರಾಜ ನಗರ ದಿಂದ ಪುನ್ಜುರ್ ಮಾರ್ಗ ಬೆದಗುಲಿಗೆ ಪ್ರಯಾಣ ,ಮಳೆರಾಯನ ಕಣ್ಣಾಮುಚ್ಚಾಲೆ ಯೊಂದಿಗೆ ನಮ್ಮ ಪ್ಲಾನ್ ಅಲ್ಲೋಲ ಕಲ್ಲೋಲ ಆಗುವ ಹೆದರಿಕೆ ಆಗಿ ನಮ್ಮ ವಾಸ್ತವ್ಯ ಜೋಡಿಕೆರೆಗೆ ಬದಲಾಗಿ ಬೇಡಗುಳಿ ಅರಣ್ಯ ವಸತಿ ಗೃಹ ದಲ್ಲಿ ವಾಸ್ತವ್ಯ [ಮಳೆ ರಾಯನ ಕೃಪೆಯಿಂದ ಬದಲಾದ ಪ್ಲಾನ್ ನಮಗೆ ತುಂಬಾ ಅನುಕೂಲ ಆಯಿತು! ಜೋಡಿಗೆರೆ ಯಲ್ಲಿ ಕ್ಯಾಂಪ್ ಹಾಕಿದ್ದರೆ ಉಳಿಯುವ ಸೌಕರ್ಯ ದ ಕೊರತೆ ಇಂದ ನಮ್ಮಲ್ಲಿ ಯಾರಿಗೆ ಏನು ಆಗ್ತಿತ್ತೋ ಗೊತ್ತಿಲ್ಲ !ಆದ್ರೆ ಥ್ಯಾಂಕ್ಸ್ ಟು ಮಳೆರಾಯ ] ರಾತ್ರಿ ವಿವಿಧ ಚಾರಣ ಸದಸ್ಯರ ಕಲಾ ಪ್ರದರ್ಶನ [ಅದ್ರಲ್ಲಿ ನನ್ನ ಹಾಡು ಯಾವ ಗರ್ಧಬ ಗಾನ ಕ್ಕೂ ಕಡಿಮೆ ಇರ್ಲಿಲ್ಲ ಬಿಡಿ!].ಹಾಗೆ ತಿಂದು ಉಂಡು ನಿದ್ರಾ ಲೋಕಕ್ಕೆ ಜಾರಿದೆವು!ಮುಂಜಾವು ಎದ್ದು ಚಾರಣಕ್ಕೆ ಸಿದ್ಧವಾಗಿ ಬೇಡಗುಳಿ ಇಂದ ಜೋಡಿಕೆರೆ ಕಡೆ ಸಾಗಿದವು ಹೆಜ್ಜೆಗಳು! ಆಹಾ! ಆ! ಐಯೋ! ಊಉಚ್! ಮುಂತಾದ ಶಬ್ದ ಗಳ ಸುರಿಮಳೆ ಚಾರಣಿಗರ ಬಾಯಿಂದ ಬರಲು ಪ್ರಾರಂಭ ! ಆಗಲೇ ಗೊತ್ತಾಗಿದ್ದು ನಾವು ಜಿಗಣೆ ಲೋಕದೊಳಗೆ ಬಂದೆವೆಂದು! ಹಾಗು ಹೀಗೂ ಜಿಗಣೆ ಹಾಗು ನಮ್ಮ ಮದ್ಯೆ ನಡದೇ ಇತ್ತು ಜುಗಲ್ಬಂದಿ ಆಟ ! ನನ್ನ ಮೇಲೆ ಏನ್ ಸಿಟ್ಟಿತ್ತೋ ಕಾಣೆ ನನ್ನ ಕಾಲ ಮೇಲೆ ಜಿಗಣೆ ದಾಳಿ ಚೆನ್ನಾಗಿಯೇ ನಡೆಯಿತು ಅನ್ನಿ! ನಂತರ ನೋವ ಮರೆಸುವ ಸ್ವರ್ಗ ಲೋಕದೊಳಗೆ ಬಂದೆವು ನೋಡಿ ಆಗ್ಲೇ ಗೊತ್ತಾಗಿದ್ದು ಹಿರಿಯರ ಅನುಭವ ಸತ್ಯ ಅಂತ! [ನೋವಿಲ್ದೆ ನಲಿವಿಲ್ಲ ! ಜೀವನದಲ್ಲಿ ಕಷ್ಟ ಪಟ್ರೆ ಸುಖ ಸಿಗುತ್ತೆ! ಎಷ್ಟು ಸತ್ಯ ನೋಡಿ !] ಹಾಗೆ ಬೆದುಗುಲಿ ಜಿಗಣೆ ಗಳು ಕಚ್ಚಿದರೆ ಕಂಡಿತ ಸ್ವರ್ಗ ಸಿಗುತ್ತೆ! ಹಾಗು ಹೀಗೂ ದಾರಿಯಲ್ಲಿ ನಿಲಿವಿಗೇನು ಕೊರತೆ ಇರ್ಲಿಲ್ಲ ! ಕಣ್ತಣಿಸುವ ಮನ ಮೋಹಕ ದೃಶ್ಯ ಗಳ ನೋಟ ! ಆನೆ, ಕಾಡು ಎಮ್ಮೆ ಕೋಣ [ಕಾಟಿ],ಹಂದಿ , ಜಿಂಕೆ ಗಳ ದರ್ಶನ , ನಮ್ಮನು ಸ್ವರ್ಗದ ಹಬ್ಬದಲ್ಲಿ ಮಿಂದ ಅನುಭವ ಮಾಡಿಸಿತು! ಕಾಡಿನ ಪುಷ್ಪಗಳ ಮೋಹಕ ನಗು,ಹಾಗು ಅವುಗಳ ಬಣ್ಣದ ಚಿತ್ತಾರ ನಮ್ಮ ಸಮರಗಳಲ್ಲಿ ಸೆರೆಯಾದವು! ಸೋಲಿಗರ ಹಾದಿ ಯಲ್ಲಿ ಸಿಕ್ಕ ಕಾಡಿನ ಮಕ್ಕಳ ಮುಗ್ದತೆ, ನಗು ಮುಖ, ಅವರ ಜೀವನದ ದರ್ಶನ ಸವಿಯುವ ಅವಕಾಶ ಸಿಕ್ಕ ನಾವು ಮೂಕರಾದೆವು! ವಾಪಸ್ಸು ಹೋಗಬೇಕೆನ್ನುವ ಕಟು ವಾಸ್ತವ ಲೋಕಕ್ಕೆ ಕರೆತಂದಾಗ ನಮಗೆ ಅರಿವಿಲ್ಲದ ಮೌನ ಆವರಿಸಿತು! ನೆನಪಿನ ಮೂಟೆ ಕಟ್ಟೆ ಒಡೆದಾಗ ಮೂಡಿಬಂದಿದ್ದೇ ಈ ನನಪಿನ ಸವಿ ಕತೆ! ಹೀಗಿದೆ....? ಫೋಟೋ ಗಳನ್ನೂ ಹೆಚ್ಚು ಪ್ರಕಟ ಮಾಡಲು ಅವಕಾಶ ಇಲಾಸ ಕಾರಣ
ಸದ್ಯವಾಗುವಸ್ತು ಮಾತ್ರ ಪ್ರಕಟಿಸಿದ್ದೇನೆ !ಕ್ಷಮಿಸಿ!
ಸದ್ಯವಾಗುವಸ್ತು ಮಾತ್ರ ಪ್ರಕಟಿಸಿದ್ದೇನೆ !ಕ್ಷಮಿಸಿ!
No comments:
Post a Comment