|
ನಂಗೊಂದ್ ಚಿಟ್ಟೆ ನಿಂಗೊಂದ್ ಚಿಟ್ಟೆ |
ಅದೊಂದು ಶನಿವಾರ ಮನೆಯಲ್ಲೇ ಕುಳಿತಿದ್ದವನಿಗೆ ಗೆಳೆಯ ಸತ್ಯ ಫೋನ್ ಮಾಡಿ ಬಾಲು "ನಾಳೆ ಎಲ್ಲಾರು ಹೋಗೋಣ ರೆಡಿ ಇರಿ" ಅಂದು ಬನ್ನಿ ನಗುವನಹಳ್ಳಿಗೆ ಹೋಗೋಣ"ಅಂತಾ ಕರೆದರೂ."ಅಲ್ಲೇನ್ ಸಾರ್" ವಿಶೇಷ ಅಂತಾ ಮಾತಿಗೆ ಎಳೆದೆ "ಅಲ್ಲಿಗೆ ಪ್ರತೀವರ್ಷ ಈ ಸೀಸನ್ ನಲ್ಲಿ "ಬೀ ಈಟರ್ಸ್" ಇರ್ತಾವೆ ಫೋಟೋ ತೆಗೆಯೋಕೆ ಒಳ್ಳೆ ಅವಕಾಶ ಬನ್ನಿ ಅಂದ್ರೂ !!"ಸರಿ ನಡೀರಿ ಸಾರ್ ಅಂತಾ ಹೇಳಿ, ನಾಳೆ ಎಷ್ಟೊತ್ತಿಗೆ ಅಂದ್ರೆ ಬೆಳಿಗ್ಗೆ ಐದು ಘಂಟೆಗೆ ಮನೆಬಿಟ್ಟು ನಮ್ಮ ಮನೆಗೆ ಬಂದ್ಬಿಡಿ" ಅಂದ್ರೂ !!! ನಗುವನ ಹಳ್ಳಿ ಬಗ್ಗೆ ಸ್ವಲ್ಪ ಹೇಳ್ತೀನಿ ಕೇಳಿ ಈ ಊರು ಮಂಡ್ಯಾ ಜಿಲ್ಲೆಯ ಶ್ರೀ ರಂಗ ಪಟ್ಟಣ ತಾಲೂಕಿನ ಒಂದು ಗ್ರಾಮ , ಶ್ರೀ ರಂಗ ಪಟ್ಟಣದಿಂದ ಸುಮಾರು ಆರು ಕಿ.ಮಿ. ಇದೆ. ಮೈಸೂರಿನಿಂದ ಸುಮಾರು ಹನ್ನೆರಡು ಕಿ.ಮಿ.ಇದೆ. ಕಾವೇರಿಯ ತಟದಲ್ಲಿ ಈ ಊರಿಗೆ ಸಂಬಂಧಿಸಿದ ಜಮೀನುಗಳಿದ್ದು ಇಲ್ಲಿ " BLUE -TAILED BEE EATER"[ ಕನ್ನಡ ದಲ್ಲಿ" ಜೇನು ಹಿಡುಕ' , "ಚಿಟ್ಟೆ ಹಿಡುಕ" ಹಕ್ಕಿಅನ್ನುತಾರೆ.ನಾವು "ಬೀ ಈಟರ್ " ಹಕ್ಕಿ ಅನ್ನೋಣ ಬಿಡಿ].ಹಕ್ಕಿಗಳು ಕಾಣ ಸಿಗುತ್ತವೆ.ಮಾರ್ಚಿ ಯಿಂದ ಮೇ ಅಂತ್ಯದವರೆಗೆ ಅವುಗಳ ಸಂತಾನ ಕ್ರಿಯೆ ಪ್ರಾರಂಭ ಆದ ಕಾರಣ ಬಹಳಷ್ಟು ಜನ ಇಲ್ಲಿಗೆ ಛಾಯಾಗ್ರಾಹಕರಿಗೆ ಇದು ನೆಚ್ಚಿನ ತಾಣ. ಇಲ್ಲಿ ತೆಗೆದ ಎಷ್ಟೋ "ಬೀ ಈಟರ್ ಹಕ್ಕಿ" ಚಿತ್ರಗಳು ಹಲವಾರು ದಿನಪತ್ರಿಕೆ /ವಾರಪತ್ರಿಕೆ ಗಳಲ್ಲಿ ಪ್ರಕಟಗೊಂಡಿವೆ, ಹಾಗು ಇಲ್ಲಿ ತೆಗೆದ"ಬೀ ಈಟರ್ ಹಕ್ಕಿ" ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ.
ಸ್ವಲ್ಪ ಕಟ್ ಮಾಡಿದ್ರೆ ಮಾರನೆಯ ದಿನ ಭಾನುವಾರ ಮುಂಜಾನೆ ಬೆಳಿಗ್ಗೆ ಆರು ಘಂಟೆಗೆ ನಗುವನಹಳ್ಳಿ ಕಾವೇರಿ ತೀರಕ್ಕೆ ಪ್ರವೇಶ !!!! ಆ ಪ್ರದೇಶ ಸೇರುತ್ತಿದ್ದಂತೆ ಸ್ವಾಗತ ಕೋರಿದ್ದು ಎರಡು ವ್ಯಾಗನ್ ಆರ್ ಕಾರುಗಳು ಹಾಗು ಕೆಲವು ಛಾಯ ಗ್ರಾಹಕರು.
|
ಊಟ, ತಿಂಡಿ,ಮಾಡುವ ಮನೆ ಸ್ಟುಡಿಯೋ ,ವಿಶ್ರಾಂತಿ ಮಂದಿರ ಎಲ್ಲಾ ಕಾರುಗಳೇ!!!
|
ಹಕ್ಕಿಗಳಿಗೆ ತಿರುಮಂತ್ರ ಸುಂದರ ಚಿತ್ರಗಳ ತೆಗೆಯುವ ತಂತ್ರ !!! |
|
ಹಾಗೆ ಮುಂದುವರೆದ ನಮಗೆ ಕಂಡಿದ್ದು ಒಬ್ಬ ಛಾಯ ಗ್ರಾಹಕರು ಹಕ್ಕಿಗೆ ಕಾಣದಂತೆ ಮರೆಯಾಗಿ ಫೋಟೋ ತೆಗೆಯಲು ಸಣ್ಣ ಟೆಂಟು ನಿರ್ಮಿಸುತ್ತಿದ್ದರು. ಇಂತಹ ಹಲವಾರು ಟೆಂಟು ಗಳು ದೂರಕ್ಕೆ ಯಾವುದು ಮಿಲಿಟರಿ ಕ್ಯಾಂಪ್ ಇರಬೇಕೂ ಅನ್ನಿಸುವಂತೆ ಕಾಣುತಿತ್ತು .
|
ಉಶ್ ಗಲಾಟೆ ಮಾಡ್ಬೇಡಿ ಪ್ಲೀಸ್ !!! |
ಹತ್ತಿರದಲ್ಲಿ ಒಂದು ಗುಂಪು ತಮ್ಮ ಕ್ಯಾಮರಾಗಳನ್ನು ಟ್ರೈ ಪಾಡಿಗೆ ಫಿಟ್ ಮಾಡಲು ಪ್ರಯತ್ನಿಸುತ್ತಿದ್ದರು. ಸ್ವಲ್ಪ ಗದ್ದಲವಿತ್ತು ಬಹುಷಃ ಹೊಸಬರು ಇರಬೇಕು ಅನ್ನಿಸಿತು. ಇವರನ್ನು ದಾಟಿ ಮುಂದೆ ಹೋದೆ.
ಅನತಿ ದೂರದಲ್ಲಿ ಹಕ್ಕಿಗಳ ಚಲನ ವಲನ ಗಮನಿಸುತ್ತಾ ತಮಗೆ ಬೇಕಾದ ಸನ್ನಿವೇಶಕ್ಕಾಗಿ ಕಾದ ಇಬ್ಬರು ಛಾಯಾಗ್ರಾಹಕರು ಕಾಣಿಸಿದರು.ಅವರಿಗೆ ಸ್ವಲ್ಪ ಸಮೀಪ ಒಂದು ಹಕ್ಕಿ ಕುಳಿತಿತ್ತು ಸತ್ಯ ಅದನ್ನು ತೋರಿಸಿ ಬಾಲು ಅದೇ "ಬೀ ಈಟರ್ " ಹಕ್ಕಿ ಅಂದ್ರೂ. ಹಕ್ಕಿಗಳ ಛಾಯ ಚಿತ್ರ ತೆಗೆಯುವುದು ಬಹಳ ಕಷ್ಟದ ಕೆಲಸ ತಪಸ್ಸಿನಂತೆ ಏಕಾಗ್ರತೆಯಿಂದ ಘಂಟೆಗಟ್ಟಲೆ ಕಾಯಬೇಕಾಗುತ್ತದೆ.ಕೆಲವೊಮ್ಮೆ ಕಾದ ಬಳಿಕವೂ ನಿಮಗೆ ಉತ್ತಮ ಚಿತ್ರ ಬರದೆ ನಿಮ್ಮ ಸಹನೆ ಪರೀಕ್ಷೆಯಾಗುವುದೂ ಉಂಟು. ಒಟ್ಟಿನಲ್ಲಿ ಈ ಸನ್ನಿವೇಶ ಮನುಷ್ಯರಿಗೆ ತಾಳ್ಮೆ ಕಲಿಸುತ್ತದೆ.
|
ಪಕ್ಷಿ ಛಾಯಾಗ್ರಹಣ ಒಂದು ತಪಸ್ಸಿನಂತೆ |
|
"ನಾನೇ ರೀ" ಬೀ ಈಟರ್ ಹಕ್ಕಿ ಅಂದ್ರೆ |
|
ಎಲ್ಲಿವೆ ಬೀ ಈಟರ್ ಹಕ್ಕಿಗಳು. |
|
ಅಲ್ಲಿ ಅಲ್ಲಿ ಕುಳಿತಿವೆ ನೋಡಿ !!! |
ಎಲ್ಲರೂ ನಿಶ್ಶಬ್ದವಾಗಿ ನಮ್ಮ ನಮ್ಮ ಕಾರ್ಯ ದಲ್ಲಿ ತಲ್ಲೀನರಾಗಿ ಫೋಟೋ ತೆಗೆಯುವ ಕಾಯಕ ನಡೆಸಿದ್ದೆವು.
ಹಾಗೆ ನನಗೆ ಅನುಕೂಲಕರ ಜಾಗ ಹುಡುಕುವ ಸಮಯದಲ್ಲಿ ಅಚ್ಚರಿಯಂತೆ ಕಂಡುಬಂದಿದ್ದು ಕ್ಯಾಮರ ದಿಂದ ಹೊರತೆಗೆದ ಉಪಯೋಗಿಸಿದ ಸೆಲ್ ಅನ್ನು ಅಲ್ಲಿಯೇ ಬಿಸಾಡಿ ಹೋಗಿದ್ದ ಯಾರೋ ಪಕ್ಷಿಪ್ರಿಯ ಫೋಟೋ ಗ್ರಾಫಾರ್!!!!! ಬೇಸರ ದಿಂದ ಅದನ್ನು ನನ್ನ ಬ್ಯಾಗಿಗೆ ಸೇರಿಸಿ ಮುಂದುವರೆದೆ ಸ್ವಲ್ಪ ದೂರದಲ್ಲಿ ಕಂಡ ನೆಲದ ಬಿಲದಲ್ಲಿ ಹಕ್ಕಿ ಗೂಡೆಂದು ಇಣುಕಿ ನೋಡಿದರೆ ಅಲ್ಲಿಯೂ ನನ್ನನ್ನು ಅಣಕಿಸಿ ನಗುತಿತ್ತು ಮತ್ತೊಂದು ಸೆಲ್ಲು !!!! ಅನತಿ ದೂರದಲ್ಲಿ ತಿಂದು ಉಂಡು ಬಿಸಾಕಿದ ಪ್ಲಾಸ್ಟಿಕ್ ಕವರ್ಗಳು, ಸಾಚೆಟ್ ಗಳು, ಇನ್ನೂ ಹಲವಾರು ತ್ಯಾಜ್ಯ ವಸ್ತುಗಳು ಕಂಡು ಬಂತು !!!
|
"ಇದರಲ್ಲಿ ನಮ್ಮ ತಪ್ಪಿಲ್ಲಾ ನಮ್ಮನ್ನುಮನುಷ್ಯರು ಎಸೆದುಹೊಗಿದ್ದಾರೆ" ಅಂದವು ಈ ಸೆಲ್ಲುಗಳು |
|
ಹಕ್ಕಿ ಗೂಡಿನೊಳಗೆ ನಕ್ಕ ಈ ಸೆಲ್ಲು ನನ್ನನ್ನು ನೋಡಿ ಅಣಕಿಸಿತು. |
|
ಒಮ್ಮೆ ನನಗೋ ಅಚ್ಚರಿ , ನಾವೆಲ್ಲಾ ಈ ಸುಂದರ ಪರಿಸರ ಹಾಳುಮಾಡಿ ಹಕ್ಕಿಗಳ ಚಿತ್ರ ತೆಗೆದು ಪತ್ರಿಕೆಗಳಲ್ಲಿ , ದೇಶ, ವಿದೇಶಗಳ ಸ್ಪರ್ಧೆಗಳಲ್ಲಿ ಪ್ರಕಟಿಸಿ ಹೆಸರು ಹಣ ಗಳಿಸಲು ಹಾ ತೊರೆಯುತ್ತಿರುವ ಖಳನಾಯಕರೆ ಇರಬೇಕು ಅನ್ನಿಸುತಿತ್ತು.ಪರಿಸರ ರಕ್ಷಕರೆಂದು ವಿಶ್ವಕ್ಕೆ ಹಕ್ಕಿಗಳ ಬಗ್ಗೆ ಮಾಹಿತಿ ನೀಡುವೆ ಎಂದು ಹೆಮ್ಮೆ ಪಡುವ ನಾವು ಮಾಡುತ್ತಿರುವ ಇಂತಹ ಕೆಲಸ ಪರಿಸರಕ್ಕೆ ಮಾಡುತ್ತಿರುವ ಅಪಕಾರ ಅನ್ನಿಸತೊಡಗಿತು.ಮತ್ತೊಮ್ಮೆ ಯಾರೋ ಕೆಲವರು ಮಾಡಿರಬಹುದಾದ ಕೆಲಸಕ್ಕೆ ಎಲ್ಲರನ್ನು ಯಾಕೆ ತೆಗಳಬೇಕೂ ಅನ್ನಿಸಿತು. ಆದರೂ ಪರಿಸರ ಕಾಳಜಿ ಇರುವ ಗೆಳೆಯರು ಈ ಪ್ರದೇಶದಲ್ಲಿ ಹರಡಿರುವ ತ್ಯಾಜ್ಯ ವಸ್ತುಗಳನ್ನು ತೆಗೆಯುವ ಕಾರ್ಯಕ್ರಮ ಹಾಕಿ ಕೊಳ್ಳುವುದು ಒಳ್ಳೆಯದು.ಎಲ್ಲರು ಕೈಜೋಡಿಸಿದರೆ ಇದು ಅಸಾಧ್ಯದ ಕಾರ್ಯವಲ್ಲ . |
ಬೇಸರ ಗೊಂಡ ಮನಸ್ಸಿಗೆ ಮುದನೀದಲೋ ಎಂಬಂತೆ ಕಾವೇರಿ ಅಲ್ಲಿಯೇ ಜುಳು ಜುಳು ನಾದ ಹೊಮ್ಮಿಸುತ್ತಾ ಹರಿದಿದ್ದಳು. ಹಾಗೆ ಕ್ರಮಿಸಿದ ನಾನು ಎಲ್ಲರಿಂದ ದೂರವಾದ ನಿಶಬ್ದವಾದ ಒಂದು ಜಾಗ ಹುಡುಕಿ ಕೊಂಡೆ ನನ್ನ ಅದೃಷ್ಟಕ್ಕೆ ಬೀ ಈಟರ್ ಗಳು ನನ್ನ ಕ್ಯಾಮರ ಮುಂದೆ ಸಹಕರಿಸಿ ಹೊಸ ಲೋಕವನ್ನು ತೆರೆದವು. ಈ ಸುಂದರ ಹಕ್ಕಿಯ ಮಾಯಾ ಜಾಲದೊಳಗೆ ನಾ ಕಳೆದು ಹೋದೆ ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿಯೋಣ. " BLUE -TAILED BEE EATER"[ ಕನ್ನಡ ದಲ್ಲಿ" ಜೇನು ಹಿಡುಕ' , "ಚಿಟ್ಟೆ ಹಿಡುಕ" } ಸಾಮಾನ್ಯವಾಗಿ ರೆಕ್ಕೆ ಹಾಗು ನೆತ್ತಿ ಕಂಡು ಹಸುರು ಬಣ್ಣ ಹೊಂದಿದ್ದು,ಕಣ್ಣು ಹಾಗು ಕೊಕ್ಕಿನ ಭಾಗ ಕಪ್ಪು ಬಣ್ಣ ಕಂಡು ಬರುತ್ತದೆ.ಎದೆಯ ಭಾಗ ಕಂಡು ಬಣ್ಣ ಹೊಂದಿದ್ದು ಬಾಲದ ಪುಕ್ಕಗಳು ನೀಲಿ ಬಣ್ಣ ಹೊಂದಿದ್ದು ಈ ಹಕ್ಕಿಗೆ ಬಣ್ಣಗಳ ಸುಂದರ ಅಲಂಕಾರ ನೀಡಿರುತ್ತದೆ. ಈ ಹಕ್ಕಿ ಗಳು ನೆಲದಲ್ಲಿ ಬಿಲ/ಪೊಟರೆ ಯಲ್ಲಿ ವಾಸ ಮಾಡುತ್ತವೆ " ಹಾಗು ಇವು ಗುಂಪುಗಳಲ್ಲಿ ವಾಸ ಮಾಡುತ್ತವೆ,ಇವುಗಳು ಮರ ಗಳಿಂದ ಹಾರುವ ಕೀಟ,ಹಾರುವ ಚಿಟ್ಟೆಗಳನ್ನು ಕೊಕ್ಕಿನಲ್ಲಿ ಹಿಡಿದು ಗಿಡಗಳಿಂದ ಚಾಚಿದ ಕಡ್ಡಿಗಳ ಮೇಲೆ ಕುಳಿತು ಕುಕ್ಕಿ ಕುಕ್ಕಿ ತಿನ್ನುತ್ತಾ ಇರುವುದನ್ನು ಕಾಣ ಬಹುದು.ನನ್ನ ಕ್ಯಾಮರಾ ಕಣ್ಣಿಗೆ ಬೀ ಈಟರ್ ಹಕ್ಕಿ ಪೋಸ್ ನೀಡಿದ್ದು ಹೀಗಿತ್ತು.
|
ನಾನು " BLUE -TAILED BEE EATER"[ ಕನ್ನಡ ದಲ್ಲಿ" ಜೇನು ಹಿಡುಕ' , "ಚಿಟ್ಟೆ ಹಿಡುಕ" } |
|
ವಾಹ್ ಎಂತಹ ಚಿಟ್ಟೆ !!!! |
|
ಯಾರಲ್ಲಿ ???? |
|
ನಗೊಂದ್ ಚಿಟ್ಟೆ ನಿಂಗೊಂದ್ ಚಿಟ್ಟೆ |
|
ಹೆಲಿಕಾಪ್ಟರ್ ಚಿಟ್ಟೆ ನನಗೆ ಬಹಳ ಇಷ್ಟಾ |
|
ನನ್ನ ಸಂದರ್ಶನ ಬೇಡಪ್ಪಾ |
|
ಇಂದೆನಗೆ ಆಹಾರ ಸಿಕ್ಕಿತು. |
|
ಯಾವ ಚಿಟ್ಟೆ ಯಾವ ಹಕ್ಕಿಗೋ |
|
ಮನುಷ್ಯರ ಕಾಟ ತಪ್ಪಿಸಲು ಹಕ್ಕಿಗಳು ನಡೆಸಿರುವ ಸಭೆಯೇ ??? |
|
"ಹಕ್ಕಿ ಚಿತ್ರ ಹೆಕ್ಕಲು ಕಾಯ್ದ ಛಾಯಾ ಸುರರು"
ದಣಿವಾಗುವಷ್ಟು ಕಾಲ ಫೋಟೋ ತೆಗೆಯುತ್ತಲೇ ಇದ್ದೆ ಅಷ್ಟರಲ್ಲಿ ಸತ್ಯ ಹೊಟ್ಟೆ ಹಸಿತೀದೆ ನಿಮ್ಮ ಸ್ನೇಹಿತರೂ ಮುಂದೆ ಬಂಡೀಪುರ ಹೋಗಬೇಕಂತೆ ಬನ್ನಿ ಹೋಗೋಣ ಅಂತಾ ಕೈ ಹಿಡಿದು ಎಳೆದೊಯ್ದರು. ಸುಂದರ ಹಕ್ಕಿಗಳಿಗೆ ಮನದಲ್ಲಿ ನಮಿಸಿ ಸುಂದರ ನೆನಪುಗಳ ಮೂಟೆ ಯೊಡನೆ ಮನೆಗೆ ಬಂದೆ. ನಡೆದ ಘಟನೆಯನ್ನು ನಿಮ್ಮ ಮುಂದೆ ಬಿಚ್ಚಿದ್ದೇನೆ ಸ್ವೀಕರಿಸುವುದು ನಿಮ್ಮ ಕೆಲಸ ಏನಂತೀರಾ ?? |
34 comments:
ಬಾಲು ಸರ್...
ನೀವು ಕ್ಯಾಮರಾ ಬದಲಿಸಿದ್ದು ಒಳ್ಳೆಯದಾಯ್ತು...
ನಮಗಿನ್ನು ರಸದೌತಣ...
ಇನ್ನಷ್ಟು ಫೋಟೊ ಲೇಖನಗಳು ಬರಲಿ...
ಸೊಗಸಾದ ಫೋಟೊಲೇಖನಕ್ಕೆ ಧನ್ಯವಾದಗಳು...
ಓಹ್ ಬಾಲೂ, ಸೂಪರ್ ಆಗಿದೆ ಚಿತ್ರಗಳು ಮತ್ತು ನಿಮ್ಮ ಹಕ್ಕಿಗಳ ಮೇಲಿನ ಕಾಮೆಂಟ್ಸ್. ಹ್ಯಾಟ್ಸ್ ಆಫ್ ಬಾಲು. ಇನ್ನೂ ಬೇಕಾದಷ್ಟು ಬರಲಿ ನಿಮ್ಮಿಂದ.
ಬಾಲೂ ಸೂಪರ್ ಚಿತ್ರಗಳು ಮತ್ತು ಎಂದಿನಂತೆ ನಿಮ್ಮ ಕಾಮೆಂಟರಿ ಸಹಾ....ಜೈ ಹೋ...
ಬಾಲು ಸರ್,
ಮಸ್ತ್ ಫೋಟೋಸ್...
ಬಾಲು, ಶೀರ್ಷಿಕೆಗಳು ತುಂಬಾ ಚನ್ನಾಗಿವೆ ...
ಸ್ಥಳ ಪರಿಚಯಕ್ಕೆ ತುಂಬಾ ಥ್ಯಾಂಕ್ಸ್,
ನೀವು ಹೇಳಿದ ಮತ್ತು ಬರೆದ ಸಂಗತಿ ನೋಡಿದ್ರೆ ಖೇದ ಆಗುತ್ತೆ...
ಅಣ್ಣಾವ್ರ ಒಂದು ಹಾಡಿನ ಒಂದು ಸಾಲು ಜ್ಞಾಪಕಕ್ಕೆ ಬಂತು..
"ಪ್ರಾಣಿಗಳೇನು ಗಿದಮರವೇನು ಬಿಡಲಾರ ಬಿಡಲಾರ ,
ಬಳಸುವುನೆಲ್ಲ .. ಉಳಿಸುವುದಿಲ್ಲ .. ತನ್ನ ಹಿತಕಾಗಿ ಹೋರಾಡುವ ..."
ಬೀ ಈಟರ ಹಕ್ಕಿಗಳಂತೆಯೇ ಸುಂದರವಾದ ನಗುವಿನಹಳ್ಳಿಯ
ಪ್ರಕೃತಿಸೌಂದರ್ಯವನ್ನು ನೋಡಿ ಖುಶಿಯಾಯಿತು.
ಚಂದದ ಚಿತ್ರಗಳು ಬಾಲು ಅಣ್ಣ
ಸಾರ್ ಫೋಟೋಗಳು ತುಂಬಾ ಚೆನ್ನಾಗಿದೆ. ಇದು ಯಾವ ಕ್ಯಾಮೆರಾದಲ್ಲಿ ತೆಗೆದದ್ದು ಹಾಗು ಯಾವ ಲೆನ್ಸ್ ಬಳಿಸಿದಿರಿ ಎಂದು ಹೇಳುತ್ತೀರ Please?
ಫೋಟೋಗಳನ್ನು ನಾಚಿಸುವ ಬರವಣೆಗೆ, ಬೀ-eater ಸೃಷ್ಟಿಕರ್ಥನಿಗು.. ಗೊತ್ತಿಲ್ಲದ ವರ್ಣನೆ .
ತುಂಬಾ ಚೆನ್ನಾಗಿದೆ , (ಕೆಲಸದ ಕಾರಣದಿಂದ ಸ್ವಲ್ಪ ತಡವಾಗಿ ಓದಿದೆ ....)
nice photos and article
sir, superb photography
olleya baraha
ಬಾಲೂ ಸರ್;ಅದ್ಭುತ ಫೋಟೋಗಳು!ಅದ್ಭುತ ಬರಹ!
ಬಾಲು ಸರ್,
ನಾನು ನಗುವನ ಹಳ್ಳಿಗೆ ಸುಮಾರು ಬಾರಿ ಹೋಗಿದ್ದೇನೆ. ಅಲ್ಲಿನ ವಾತಾವರಣ ನಾವು ಹೋದಾಗ ನೀವು ಹೇಳಿದಷ್ಟು ಕೆಟ್ಟದಾಗಿರಲಿಲ್ಲ. ಈಗ ಅದು ಎಲ್ಲರಿಗೂ ಗೊತ್ತಾಗಿ ಎಲ್ಲಾ ಛಾಯಾಗ್ರಾಹಕರು ಈ ಸೀಜನ್ನಿನಲ್ಲಿ ಬರುತ್ತಾರೆ.
ನಾನು ಮತ್ತು ಮಲ್ಲಿಕಾರ್ಜುನ್ ಹೋದರೆ ಅಲ್ಲಿ ತುಂಬಾ enjoy ಮಾಡುತ್ತೇವೆ..ಮತ್ತಷ್ಟು ಫೋಟೊಗಳನ್ನು ಹಾಕಿ.
ಅದ್ಭುತವಾದ , ಮನಸೆಳೆಯುವ ಚಿತ್ರಗಳು ಮತ್ತು ಉತ್ತಮ ನಿರೂಪಣೆ. ಅಭಿನಂದನೆಗಳು.
@ಸಿಮೆಂಟು ಮರಳಿನ ಮಧ್ಯೆ :-)ಪ್ರಕಾಶಣ್ಣ ಪ್ರೀತಿ ಮಾತಿಗೆ ಕೃತಜ್ಞ.
@ಸತ್ಯಪ್ರಕಾಶ್ s :-)nimma aashirvaada irali.
@ಜಲನಯನ :-)ಅಜಾದ್ ಸರ್ ಥ್ಯಾಂಕ್ಸ್.
@ಗಿರೀಶ್.ಎಸ್:-) ಥ್ಯಾಂಕ್ಸ್.
@Deep :-)ಥ್ಯಾಂಕ್ಸ್ ದೀಪು ನಿಮ್ಮ ಭೇಟಿ ಮುಂದುವರೆಸಿ.
@sunaath :-)ನಿಮ್ಮ ಮಾತು ನಿಜ ಸರ್. ಆ ಪ್ರದೇಶ ಸುಂದರವಾಗಿದೆ. ಮೆಚ್ಚಿದ್ದಕ್ಕೆ ವಂದನೆಗಳು. ಪ್ರೀತಿ ಇರಲಿ.
@ ಸುಬ್ರಮಣ್ಯ ಮಾಚಿಕೊಪ್ಪ:-) ಪ್ರಿಯ ಸಹೋದರ ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್.
@Pradeep Rao :-)ಮೆಚ್ಚುಗೆ ಮಾತಿಗೆ ಥ್ಯಾಂಕ್ಸ್. ನನ್ನ ಕ್ಯಾಮರ canon 30d , ಲೆನ್ಸ್ ೧೦೦-೪೦೦
@ Sandeep.K.B:-) ಹ ಹ ಹ ನಿಮ್ಮ ಮೆಚ್ಚುಗೆಗೆ ನಾನು ನಾಚಿದ್ದೇನೆ. ನಿಮ್ಮ ಹೃದಯದಿಂದ ಬಂದಿರುವ ಪ್ರೀತಿಯ ಮಾತುಗಳಿಗೆ ಜೈ ಹೋ. ಸರ್
@ಸೀತಾರಾಮ. ಕೆ. / SITARAM.K:-) ಜೈ ಹೋ ಸರ್.
@ ಸಾಗರದಾಚೆಯ ಇಂಚರ :-) ನಿಮ್ಮ ಪ್ರೀತಿ ಮಾತುಗಳಿಗೆ ಮನತುಂಬಿದೆ ಗುರುಮೂರ್ತಿ ಸರ್.ಥ್ಯಾಂಕ್ಸ್.
@Dr.D.T.krishna Murthy.:-) ಗುರುಗಳೇ ಶರಣು.
@shivu.k :-) ನಿಮ್ಮ ಮಾತುಗಳು ನಿಜ ಶಿವೂ . ಅಲ್ಲಿನ ವಾತಾವರಣ ನಿಜವಾಗಿಯೂ ಒಳ್ಳೆಯದೇ. ಆದರೆ ಇತ್ತೀಚಿಗೆ ಕಂಡಿರುವ ದೃಶ್ಯಗಳು ಇಲ್ಲಿವೆ.ಅದನ್ನು ಸರಿಪಡಿಸಬೇಕಾದ ಹೊನೆಗಾರಿಗೆ ನಮ್ಮೆಲ್ಲರದು ಆಲ್ವಾ.ಒಂದು ದಿನ ನೀವೇ ನನ್ನ ಜೊತೆ ಬನ್ನಿ ಈ ಪ್ರದೇಶದ ಸ್ವಚ್ಛತೆ ಬಗ್ಗೆ ಏನಾದರು ಮಾಡೋಣ. ಆಲ್ವಾ .ಏನಂತೀರ. ಮುಕ್ತವಾದ ಅನಿಸಿಕೆಗೆ ಥ್ಯಾಂಕ್ಸ್.
@ಮಂಜುಳಾದೇವಿ:-)ನಿಮ್ಮ ಪ್ರೀತಿಯ ಮಾತುಗಳಿಗೆ ಗೌರವ ಪೂರ್ವಕ ಥ್ಯಾಂಕ್ಸ್.
Sundara chitragalu sir.
@HegdeG :-) ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ನಿಮ್ಮ ಭೇಟಿ ಮುಂದುವರೆಸಿ.
ಬಾಲು ಸರ್,
ನಮಗೆ ಗೊತ್ತಿರದಿದ್ದ ಹೊಸ (??) ಸ್ಥಳದ ಪರಿಚಯ ಮಾಡಿಕೊಟ್ಟಿದ್ದೀರಿ. ಹಾಗೆಯೇ ಅಲ್ಲಿನ ಪರಿಸರ, ಪಕ್ಷಿಗಳನ್ನೂ ಚಿತ್ರಮೂಲಕ ತೋರಿಸಿದ್ದೀರಿ. ಅಲ್ಲಿಗೆ ಭೇಟಿ ಕೊಡುವಂತಹ ಬರಹ-ಚಿತ್ರಗಳು ಚೆನ್ನಾಗಿವೆ.
ಧನ್ಯವಾದಗಳು.
ಕ್ಷಣ... ಚಿಂತನೆ... bhchandru :-)ಚಂದ್ರು ಸರ್ ಅಲ್ಲಿಗೆ ಒಮ್ಮೆ ಭೇಟಿಕೊಡಿ ನಿಮಗೆ ಖುಷಿಯಾಗುತ್ತೆ . ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.
beautiful article and photos.
neevu ee post madida samyadalli nanu sirsi kade hogiddarinda miss agittu.ivattu nodide.thanx for info about Naguvinahalli
Post a Comment