Tuesday, May 10, 2011

ಪಿ.ಯೂ.ಸಿ ಸ್ವಾಮೀ ಪಿ.ಯೂ.ಸಿ.!!!!! ಫಲಿತಾಂಶದ ಹಲವು ಮುಖಗಳು.

ಹೌದೂ ಸಾರ್ ಈಗ ಎಲ್ಲೆಲ್ಲೂ ಪಿ.ಯೂ.ಸಿ.ಜ್ವರ .ಇವತ್ತು ತಾನೇ ವೆಬ್ಸೈಟ್ ನಲ್ಲಿ ಪಿ.ಯೂ.ಸಿ. ಫಲಿತಾಂಶ ಹೊರ ಬಂದಿದೆ. ಬೆಳಿಗ್ಗೆ ಪೇಪರ್ ನಲ್ಲಿಯೂ ಇದೆ ವಿಚಾರ  ಇವತ್ತು ಸಂಜೆ ಪಿ.ಯೂ.ಸಿ.ಫಲಿತಾಂಶ ಪ್ರಕಟಣೆ ಆಗುತ್ತೆ ಅದಕಾಗಿ ಈ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಪಡೆಯಬಹುದು ಎಂದು ನಾಲ್ಕಾರು ವೆಬ್ ವಿಳಾಸ ನೀಡಿ ಸುದ್ದಿ ನೀಡಿ ಪಿ .ಯೂ.ಸಿ.ಪರೀಕ್ಷೆ ಬರೆದ ಹೈಕಳ ಹೃದಯ ಬಡಿತ ಜಾಸ್ತಿ ಮಾಡಿದ್ದವು. ಇನ್ನು ಟಿ.ವಿ.ಚಾನಲ್ ಗಳ ಸ್ಟೈಲೇ ಬೇರೆ ಬಿಡಿ. ಕನ್ನಡ ಸುದ್ದಿ ಚಾನಲ್ ನ  ನ್ಯೂಸ್ ನಲ್ಲಿ  ವರದಿಗಾರ್ತಿ  ಒಬ್ಬರು ರೈಲ್ವೆ ಹಳಿಗಳ ಹತ್ತಿರ ನಿಂತು ಕೊಂಡು ಹೇಳುತ್ತಿದ್ದರು '' ಇವತ್ತು ಪಿ.ಯೂ.ಸಿ. ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ  ಪರೀಕ್ಷೆಯಲ್ಲಿ  ಫೈಲ್ ಆದ ವಿಧ್ಯಾರ್ಥಿಗಳು  ಆತ್ಮಹತ್ಯೆಗೆ ಒಳಗಾಗುವ ಸಂಭವವಿದ್ದು  ಈ ಬಗ್ಗೆ ತಂದೆ ತಾಯಿಯರು  ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸುವುದು ಸೂಕ್ತ" ವೆಂದು ಹೇಳುತ್ತಿದ್ದರು.ಅಲ್ಲಾ ಸ್ವಾಮೀ ಇದನ್ನು ಹೇಳಲು ರೈಲ್ವೆ ಹಳಿಯ ಬಳಿ ಹತ್ತಿರ ಯಾಕೆ  ಹೋಗಬೇಕೂ ??ಸುಮ್ಮನೆ ಸ್ಟುಡಿಯೋ  ದಲ್ಲೇ  ಇದನ್ನು  ಹೇಳಬಹುದಿತ್ತಲ್ವಾ ?? ಅನ್ನಿಸಿತು. 

                                                                                                      ೧}ನಮ್ಮ ಮನೆಯ ಹತ್ತಿರ  ಒಬ್ಬ ಅಂಗಡಿಯವರು  ಸಾರ್,  ಸ್ವೀಟ್ ತೆಗೊಳ್ಳಿ  ನನ್ನ ಮಗ ಬಸವರಾಜ ಪಿ.ಯೂ.ಸಿ.ಯಲ್ಲಿ ಹೆಚ್ಚು ಅಂಕ ಪಡೆದು ಪಾಸಾದ , ನಿಮಗೆ ಗೊತ್ತಲ್ಲಾ ಸಾರ್  "ನಾವು ಅಂತಾ ಸಿರಿವಂತರಲ್ಲಾ, ನಮಗೆ ನೆಟ್ಟಗೆ ವಿಧ್ಯೆ ಹತ್ತಲಿಲ್ಲ , ಓದುವ ವಯಸ್ಸಿನಲ್ಲಿ  ನಮ್ಮ ಮನೆಯಲ್ಲಿ ಕಡು ಬಡತನ,  ಹೊಟ್ಟೆ ತುಂಬಿದರೆ ಸಾಕಿತ್ತು  , ಅಪ್ಪನಿಗಿದ್ದ  ಸಂಪಾದನೆ ನಮ್ಮ ಸಂಸಾರ ತೂಗಿಸಲು ಆಗುತ್ತಿರಲಿಲ್ಲ , ಹಸಿವು ಬಡತನದಿಂದ  ನನ್ನ ವಿಧ್ಯೆ ನೈವೇಧ್ಯೆ ಆಗಿಹೋಯಿತು. ಅವತ್ತಿನ ಸಂಕಟಕ್ಕೆ ನನ್ನ ಮಗ ಇವತ್ತು ಸಮಾಧಾನ ಒದಗಿಸಿದ " ಅಂದ್ರೂ. ನಾನು ನೋಡಿದಂತೆ ಇವರ ಪರಿಚಯ ಮೂರು ವರ್ಷಗಳದ್ದು  ಇವರ ಮಗ ಬಸವರಾಜು ಪಾಪ ಯಾವಾಗಲೂ ಅಪ್ಪನಿಗೆ ಬೆನ್ನೆಲುಬಾಗಿ ಯಾವಾಗಲೂ ಅಂಗಡಿ ಕೆಲಸ ಮಾಡುತ್ತಿದ್ದ , ಕಾಲೇಜು ಬಿಟ್ಟರೆ  ಟ್ಯೂಶನ್ ಗೆ ಹೋಗಲು  ದುಡ್ಡಿರದಕಾರಣ ಅವನೇ ಓದಬೇಕಾಗಿತ್ತು, ಯಾವಾಗ ಓದುತ್ತಿದ್ದನೋ ಗೊತ್ತಿಲ್ಲಾ ಸರ್ಕಾರಿ ಕಾಲೇಜಿನಲ್ಲಿ ಓದಿ ಸಾಧಿಸಿದ್ದಾ !!!!    




 ೨}    ಅನತಿ ದೂರದಲ್ಲಿ ಒಂದು ಮನಯಲ್ಲಿ ಗಲಾಟೆ ನಡೆಯುತ್ತಿತ್ತು." ಲೇ  ಹಿಡ್ಕೊಳ್ಳೆ ಅವನ್ನ  ಇವತ್ತು ಹುಟ್ಲಿಲ್ಲಾ ಅನ್ನಿಸ್ಬಿಡ್ತೀನಿ "  "ಕೇಳಿದ್ದೆಲ್ಲಾ ಕೊಡ್ಸಿ ಹೊಸ ಬೈಕ್ ತೆಕ್ಕೊಟ್ಟು, ಸಾವಿರಾರು ರುಪಾಯಿ ಕೊಟ್ಟು ಪಾಠ ಹೇಳಿಸಿದರೆ  ಕಾಲೇಜಲ್ಲಿ ಮಜಾ ಮಾಡಿ ಪಿ.ಯೂ.ಸಿ.ಯಲ್ಲಿ  ಬರಿ ಐವತ್ತು ಪರ್ಸೆಂಟ್ ತಗೊಂಡಿದ್ದಾನೆ " ನಾಚಿಕೆ ಆಗೋಲ್ವಾ  ಸರೀಕರ ಎದುರು ನಮ್ಮ ಮರ್ಯಾದೆ ಮಣ್ಣು ಪಾಲಾಯ್ತು" ಅಂತಾ  ಅಪ್ಪಾ ಬಯ್ತಿದ್ರೆ , ಮಗಾ ಹೇಳಿದಾ ನೋಡಿ ಅಪ್ಪಾ  "ನೀವೇನು ನನ್ನ ಮೇಲಿನ ಪ್ರೀತಿಯಿಂದ ಇವೆಲ್ಲಾ ತೆಕ್ಕೊಟ್ಟಿಲ್ಲಾ, ನಾನು ಪಿ.ಯೂ.ಸಿ.ಪರೀಕ್ಷೆಯಲ್ಲಿ ಓಡುವ ಜೂಜಿನ ಕುದುರೆ ಅಂತಾ ತಿಳಿದು  ಕೊಡಿಸಿದ್ರೀ !!! "ನನ್ನ  ಮಾತು ನೀವು ಯಾವತ್ತಾದರೂ  ಕೇಳಿ ಮರ್ಯಾದೆ ಕೊಟ್ರಾ ?, ನಾನು ಪಿ.ಯೂ.ಸಿ.ಕಾಮರ್ಸ್ ತಗೋತೀನಿ ಅಂದೇ , ಆದ್ರೆ ನೀವು ನಾನು ಸೈನ್ಸೆ ಓದಬೇಕು ಅಂತಾ    ಹಟಾ          ಹಿಡಿದು ಬಲವಂತವಾಗಿ ಸೈನ್ಸ್ ಕೊಡ್ಸಿದ್ರೀ , ಈಗ ನನ್ನನ್ನೇ  ವಿಲನ್ ಮಾಡಿ ಅವಮಾನ ಮಾಡ್ತೀರಾ!!"   ಅಂತಾ ಆಳುತ್ತಾ ಆ ಹುಡುಗ ಹೇಳಿದ ಮಾತು ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ .






೩}ಕ್ಯಾತ :- " ಏನ್ಲಾ  ಆಯ್ತು ರಿಜಲ್ಟೂ??"  

   
 ತಿಮ್ಮ :-  " ಮೂರು ಹೋಗವೆ  ಮೂರು ಆಗವೆ ",       
    
 ಕ್ಯಾತ :- "ಓಗಿ ಎಲ್ಲಾರು  ಕುರಿ /ಎಮ್ಮೆ ಮೆಯ್ಸು   
  
   ತಿಮ್ಮ :-  ನಾನೇನು ಮಾಡನೇ " ಆ  ಹೆಣ್ಣು ಇಂಗ್ ಮಾಡ್ತು "                       


  ಕ್ಯಾತ :-   "ಆ ಕೋತಿ ನೆಮ್ಕಂಡು ಇನ್ಗಾದೆ ಅನ್ನು "                                      

ತಿಮ್ಮ :- "ಅನ್ಗೆಲ್ಲಾ ಅನ್ಬ್ಯಾಡಾ,   ಕ್ವಾಪಾ ಬತ್ತುದೆ ನಂಗೆ "                            

ಕ್ಯಾತ :- ಅವಳ್ದೆನಾಯ್ತು  ಪರೀಕ್ಸೆ??                                                            

ತಿಮ್ಮ :- "ನಮ್ ಸವಿತಾ    ಪ್ರಸ್ಟ್ ಕ್ಲಾಸ್ ಪಾಸು  ಕಣನ್ನೋ"                     

ಕ್ಯಾತಾ :- "ಸರಿ ಬುಡು ಅವ್ಳು ಮುಂದಕ್ಕೆ ಓದಿ ದೊಡ್ ಆಫಿಸರ್ ಆಗಿ ಬತ್ತಾಳೆ "  "ಇನ್ನು ನೀನು ನೆಟ್ಗೆ ಓದೋದ ಬುಟ್ಟು ಅವಳ ಹಿಂದೆ ನಾಯಿ ಯಂಗೆ ಅಲಿತಾ ಲವ್ವು ಅನ್ಕಂಡು ನೆಗೆದು ಬಿದ್ದು  ಪಿ.ಯೂ.ಸಿ.ಡುಮ್ಕಿ  ವಡಕಂಡೆ " "ಅವಳ್ತವೆ ಜವಾನಾ  ಆಯ್ತಿಯೇ ಬುಡು ನೀ ಅದಕ್ಕೆ ಲಾಯಕ್ಕೂ!!!"                                          

ತಿಮ್ಮ:- ಊ ಕಣಣ್ಣಾ ಅಂಗೆ ಆಗದೆ  ನಾ ಪೆಲಾದಾಗಿಂದ ಆ ಹೆಣ್ಣು ನನ್ ನೋಡ್ತಾನೆ ಇಲ್ಲಾ ಕಣಣ್ಣಾ ಅದ್ಕೆ  ಶಾನೆ ಬೇಜಾರಾಗಿ "ರಕ್ತ ಕಣ್ಣೀರು" ಪಿಚ್ಚರ್ ಗೆ ಹೊಂಟೆ, ಬಂದಿಯಾ ನೀನೂವೆ ??                                                                          

ಕ್ಯಾತ :- ಅಲ್ಲಾ ಕನ್ಲಾ  ಪಿ.ಯೂ.ಸಿ.ಪೇಲಾಗಿ ಇನ್ನೂ ಇನ್ಗಾಡ್ತಿಯಲ್ಲಾ ,ನಿಂಗೆ ಬುದ್ದಿ ಐತಾ  ??                                                                                             

ತಿಮ್ಮ :- ಏ ಬುಡು ಅಣ್ಣಾ  ಅದ್ಯಾಕೋ ಕಾಣೆ  ಓದುಕೇ ಅಂತಾ ಕುಂತಾಗ್ಲೆಲ್ಲಾ  ಪುಸ್ತಗ್ದಲ್ಲಿ ಅವಳೇ ಕಂಡು  ಅಕ್ಸರ ಕಾನ್ಸುದೆ ಇಲ್ಲಾ, ಅದ್ಕೆ ತೀರ್ಮಾನ ಮಾಡಿವ್ನಿ  ಮೊದ್ಲು ಲವ್ವು ಆಮೇಕೆ ಓದು, !!!   ಅಂತಾ  "ಪ್ರೀತಿನೆ ಆ ದ್ಯಾವ್ರು ತಂದಾ ಆಸ್ತಿ ನನ್ನ ಬಾಳಿಗೆ" [ಹಾಡು ಹೇಳ್ತಾ ಮುಂದೆ ಹೊರಟ  ತಿಮ್ಮ]
                                                                                                                      ಈ ಡೈಲಾಗ್ ಕೇಳ್ತಾ ಅಲ್ಲೇ ಇದ್ದ  ನಾನು  ಅಚ್ಚರಿ  ಗೊಂಡಿದ್ದೆ.
ಮೇಲಿನ ಮೂರು ಘಟನೆಗಳು  ನಾನು ನೋಡಿದವು ಈ ಜಮಾನದ   .ಪಿ.ಯೂ.ಸಿ. ಸ್ವಾಮೀ ಪಿ.ಯೂ.ಸಿ. ನೀವ್ ಹುಷಾರು ಸ್ವಾಮೀ . ನಿಮ್ಮ ಮಕ್ಕಳು ಹುಷಾರು.ಏನಂತೀರಾ.????

17 comments:

shivu.k said...

ಬಾಲು ಸರ್,
ತಮಾಷೆಯಾಗಿ ಬರೆದಿದ್ದರೂ ಸತ್ಯ ಸಂಗತಿಗಳನ್ನು ಬರೆದಿದ್ದೀರಿ..ನಾಳೆ ಏನೇನು ಆಗುತ್ತೋ ಮತ್ತು ಕೆಟ್ಟದ್ದನ್ನೆ ಪ್ರಸಾರಮಾಡಲು ಕಾಯುವ ಈ ವಾಹಿನಿಗಳ ಅವತಾರಗಳನ್ನು ನೋಡಬೇಕೋ ಗೊತ್ತಿಲ್ಲ.
ಸಮಯೋಜಿತ ಬರಹಕ್ಕೆ ಧನ್ಯವಾದಗಳು.

Pradeep Rao said...

ಸಾರ್ ಫಲಿತಾಂಶದ ಸಮಯದಲ್ಲಿನ ಮೂರ ವಿವಿಧ ಸನ್ನಿವೇಷಗಳನ್ನು ಚೆನ್ನಾಗಿ ನಿರೂಪಿಸಿದ್ದೀರಿ.. ನಾನು ಪಿಯೂಸಿ ಒದುತ್ತಿದ್ದಾಗಿನ ಇಂಥ ಹಲವಾರು ಸನ್ನಿವೇಶಗಳು ನೆನಪಾದವು.. ಒಂದೇ ಬೀದಿಯಲ್ಲಿ ಇದ್ದು ಪಿಯೂಸಿ ಒದಿದ ಮೂರು ಜನರದ್ದು ಮೂರು ಬೇರೆ ಬೇರೆ ಥರ ಕಥೆಯಾಗಿತ್ತು ಆಗ.. ನಿಮ್ಮ ಈ ಲೇಖನ ದೊಂದಿಗೆ ಆ ದಿನಗಳನ್ನು ನೆನಪಿಸಿದಕ್ಕೆ ಧನ್ಯವಾದಗಳು!

Ittigecement said...

ಬಾಲೂ ಸರ್...

ಸಕಾಲಿಕ ಲೇಖನ..

ಇಲ್ಲಿ ಬಳಸಿದ ಹಳ್ಳಿ ಸೊಗಡಿನ ಭಾಷೆ ಬಹಳ ಇಷ್ಟವಾಗಿಬಿಡುತ್ತದೆ...

ನಾನು ಪಿಯುಸಿಯಲ್ಲಿ ಡುಮುಕಿ ಹೊಡೆದ ಘಟನೆ ನೆನಪಾಯಿತು...

ಕ್ಷಣ... ಚಿಂತನೆ... said...

ಸರ್‍,
ಪಿಯುಸಿ ಫಲಿತಾಂಶ ಅಥವಾ ಇನ್ನಾವುದೇ ಪರೀಕ್ಷಾ ಫಲಿತಾಂಶವನ್ನು ಮಕ್ಕಳು ಮತ್ತು ಅವರ ಪೋಷಕರು ತುಂಬಾ ಸೀರಿಯಸ್ಸಾಗಿ ತೆಗೆದುಕೊಳ್ಳಬಾರದು ಎಂದು ನನ್ನ ಅನಿಸಿಕೆ. ಏಕೆಂದರೆ, ಒತ್ತಡ ಎಂತಹ ಸ್ಥಿತಿಯನ್ನೂ ತಂದು ಬಿಡುವ ಸಾಧ್ಯತೆ ಇರುತ್ತದೆ.ಮಕ್ಕಳಿಗೆ ಧೈರ್ಯ ತುಂಬುವಂತಹ ಮನೋಭಾವವನ್ನು ಬೆಳೆಸಬೇಕು.

ಇನ್ನೂ ಫಲಿತಾಂಶವೇ ಬಂದಿರಲಿಲ್ಲ, ಅದಾಗಲೇ ಟಿವಿಯಲ್ಲಿ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ವಿಚಾರ ಬಿತ್ತರವಾಗುತ್ತಿತ್ತು.

ಸಕಾಲಿಕ ಬರಹ.

ಸ್ನೇಹದಿಂದ,

ಸೀತಾರಾಮ. ಕೆ. / SITARAM.K said...

chennaagide lekhana

ಸುಬ್ರಮಣ್ಯ said...

ಚನ್ನಾಗಿದೆ ಬಾಲು ಅಣ್ಣ

Dr.D.T.Krishna Murthy. said...

ಬಾಲೂ ಸರ್;ಸಕಾಲಿಕ ಬರಹ.ಚೆನ್ನಾಗಿದೆ.

Deep said...

ಸಂಧರ್ಭಕ್ಕೆ ತಕ್ಕಂತೆ ಬರೆದಿದ್ದೀರಿ ಬಾಲು!!!
ಕ್ಯಾತನ ಎಪಿಸೋಡು ಮಜವಾಗಿತ್ತು.. ಹೀಗೆ ಇರ್ಬೇಕು ಸಾರ್ ಲೈಫು ....

ಒಮ್ಮೊಮ್ಮೆ ಅನ್ನಿಸುತ್ತೆ.. ಮಕ್ಕಳು ನಮಗಿಂತ ಚನ್ನಾಗಿರಲಿ ..
ಇನ್ನು ಮೇಲೆ ಬರಲಿ ....
ನಮ್ಮ ಕೈಲಿ ಅಗದಿದ್ದನ್ನ ಮಕ್ಕಳು ಮಾಡಲಿ ....
ಅಂತ ಆಶಾಭಾವನೆ ಇಟ್ಟು ಕೊಳ್ಳೋದೇ ತಪ್ಪು ಅಂತ..

ಲೇಖನ ಚನ್ನಾಗಿದೆ...

ಸವಿಗನಸು said...

chennagide sir....

ಸಾಗರದಾಚೆಯ ಇಂಚರ said...

Baalu sir
nimma lekhana PUC makkalige sakaalikavaagide

olleya saandarbhika baraha result banda hottinalli

ದಿನಕರ ಮೊಗೇರ said...

sakaalika lekhana......

thank you...

sunaath said...

ಸೂಪರ್!

Unknown said...

ಸೂಪರ್ ಆಗಿದೆ ಬಾಲು ಅವರೇ, ಇದ್ರಲ್ಲಿ ತಮಾಷೇನೂ ಇದೆ, ಬುದ್ಧಿವಾದಾನೂ ಇದೆ.

Sandeep K B said...

ಸರ್ ಚಂದ ಬರೆದಿದ್ದೀರ ...ಇವಾಗ SSLC ಪರೀಕ್ಸೆ ಪಲಿತಂಸ ಕೂಡ ಬಂದಿದೆ ....

balasubramanya said...

@shivu.ಕೆ , ಪ್ರದೀಪ್ ರಾವ್ ,ಪ್ರಕಾಶಣ್ಣ ,ಕ್ಷಣ... ಚಿಂತನೆ... bhchandru ,ಸೀತಾರಾಮ. ಕೆ. / SITARAM.K ,ಸುಬ್ರಮಣ್ಯ ಮಾಚಿಕೊಪ್ಪ ,Dr.D.T.krishna Murthy. ,Deep ,ಸವಿಗನಸು,ಸಾಗರದಾಚೆಯ ಇಂಚರ,ದಿನಕರ ಮೊಗೇರ ,
ಸುನಾಥ್, ಸತ್ಯಪ್ರಕಾಶ್ ,Sandeep.K.B ಎಲ್ಲರಿಗೂ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು.

Badarinath Palavalli said...

ಫಲಿತಾಂಶದ ಹಿನ್ನಲೆಯ ಬರಹವು ಸಮಯೋಚಿತವಾಗಿದೆ.

ಸುದ್ದಿ ವಾಹಿನಿಯ ವರದಿಗಾರ್ತಿಯ ವರದಿ ಕೊಡುವ ಅವಸರಕ್ಕೆ ಏನೆಂದು ನಾ ಹೇಳಲಿ...

Manjunatha Kollegala said...

ಹಾಗ್ ಹ್ಯಾಗಾಗುತ್ತೆ... ರಿಸಲ್ಟ್ ಬಂದು ರೈಲು ಹಳೀ ಮೇಲೆ ಒಂದೈದಾರು ಕಂದಮ್ಮಗಳ ಹೆಣಾನಾದ್ರೂ ಚೆಲ್ಲಾಡಿದ್ರೆ ತಾನೇ ಇವರ TRP ಭಿಕ್ಷಾಪಾತ್ರೆ ತುಂಬೋದು. ಆಯಮ್ಮ ಹಾಗೆ ರೈಲು ಹಳೀಮೇಲೆ ನಿಂತು ರೈಲು ಬಿಡ್ತಾ ಇರ್ಬೇಕಾದರೇ ಹಿಂದಿನಿಂದ ಒಂದು ರೈಲು ಬರಬೇಕಿತ್ತು. ಟಿಆರ್ಪೀ ಇನ್ನೂ ಜೋರಾಗಿರೋದು