Saturday, February 4, 2012

ಬನ್ನಿ ಹೋಗೋಣ ಹೊನ್ನ ಮೇಟಿ ಬೆಟ್ಟಕ್ಕೆ !!!ನೆನಪಿನ ಪುಟ ...04


ಮುಂಜಾವಿನ  ಚಳಿಗೆ  ಬೆಂಕಿಯ ಆಸರೆ.
 ಬುರುಡೆ ಕ್ಯಾಂಪಿನಲ್ಲಿ ರಾತ್ರಿ ಮಲಗಿದ ನಮಗೆ ಬಳಲಿಕೆಯಿಂದ ನಿದ್ದೆ ಬಂದು ಎಚ್ಚರವಾದಾಗ ದೂರದಲ್ಲಿ ಹಕ್ಕಿಗಳ ಚಿಲಿಪಿಲಿ , ನವಿಲಿನ ಕೂಗು ಕೇಳುತ್ತಲಿತ್ತು , ಕ್ಯಾಂಪಿನ ಹೊರಗೆ ಬಂದು ನೋಡಿದರೆ ಚಳಿ ಚಳಿ ನಡುಕ ಶುರು ಆಯ್ತು ,ಅಡಿಗೆ  ಮನೆ ಮುಂದೆ ಆನೆ ಬೆಂಕಿ  [ ರಾತ್ರಿವೇಳೆ ಕಾಡು ಪ್ರಾಣಿಗಳು ಹತ್ತಿರ ಬರದಿರಲಿ ಎಂದು ಹಾಕುವ ಬೆಂಕಿ..... ನಾವು ಅದನ್ನು ಆನೆ ಬೆಂಕಿ ಅಂದೆವು.] ಉರಿಯುತ್ತಿತ್ತು.ನಾವೂ ಹತ್ತಿರ ಹೋದೆವು  ಬೆಂಕಿಯ ಹಿತವಾದ ಶಾಖಕ್ಕೆ  ದೇಹವನ್ನು ಒಡ್ಡಿ ಕುಳಿತೆವು, ಸಾ ಟೀನೋ..... ಕಾಪಿನೋ .. ಅಂದರು ಗಾರ್ಡ್, ಚಳಿಯಿದೆ ಕಾಫಿನೇ ಮಾಡಿ ಅಂದೆವು , ತೆಗೆದು ಕೊಂದು ಹೋಗಿದ್ದ ಸ್ಕಿಮ್ಮೆಡ್ ಮಿಲ್ಕ್, ಹಾಗು ಬ್ರೂ ಕಾಫಿಪುದಿಯಿಂದ ಕ್ಷಣದಲ್ಲಿ ಕಾಫಿ ತಯಾರ್, .......ಬಿಸಿ ಬಿಸಿ ಕಾಫಿ ಕುಡಿದು   ತಯಾರಾದೆವು,ಇವತ್ತು "ಹೊನ್ನ ಮೇಟಿ  ಕಲ್ಲು " ಕಾರ್ಯಕ್ರಮ ಇದೆ ಎಷ್ಟೊತ್ತಿಗೆ ಹೊರಡೋದು , ಅದು ಎಷ್ಟು ದೂರ ಇದೆ ,ಮಧ್ಯಾಹ್ನ ಊಟಕ್ಕೆ ಇಲ್ಲೇ ಬರಬಹುದಾ ಅಂತಾ ನೂರಾರು ಪ್ರಶ್ನೆ ನಮ್ಮಿಂದ ಆರಣ್ಯ ಇಲಾಖೆ ಸಿಬ್ಬಂಧಿಗೆ ಅವರು ಇನ್ನೆನುತಿಂಡಿ ತಿಂದು ಹೊರಡೋಣ ಸರ್ , "ಹೊನ್ನ ಮೇಟಿ ಕಲ್ಲು" ಇಲ್ಲೇ   ಹತ್ರಾ ಮಧ್ಯಾಹ್ನ ಊಟಕ್ಕೆ ಇಲ್ಲೇ ಇರಬಹುದು ಅಂದರು. ಸರಿ ಅಂತಾ ನಾವೂಸಿದ್ದರಾಗಿ ಬೆಳಗಿನ ಉಪಹಾರ, ಅವರೆಕಾಳಿನ.. ಉಪ್ಪಿಟ್ಟು,ಸ್ವಲ್ಪ ಸ್ವೀಟುಗಳು,ಕುರುಕಲು ತಿಂಡಿ, ಟೀ ಸೇವಿಸಿ ಸಿದ್ದರಾಗಿ ಕಾರಿನ ಬಳಿ ಬಂದೆವು.ಸಾ ಬೇಗ ಬಂದ್ಬಿಡಿ ಮಧ್ಯಾನ ಊಟಕ್ಕೆ ಅಂದರು ಒಬ್ಬರು ಗಾರ್ಡ್ , ಜೊತೆಯಲ್ಲಿ "ಹೊನ್ನ ಮೇಟಿ ಕಲ್ಲು"   ತೋರಿಸಲು ಮತ್ತೊಬ್ಬರು  ಸಿಬ್ಬಂದಿ ಬಂದರು, ಪಯಣ ಆರಂಭ.
ಕಾಡಿನ ಗೇಂ ರೂಟ್ ನಲ್ಲಿ ನಿಧಾನವಾಗಿ ಚಲಿಸಿತ್ತು ಸಫಾರಿ ಕಾರು.ದಾರಿಯುದ್ದಕ್ಕೂ  ಕಾಡಿನ ಹಾದಿಯಲ್ಲಿ ಸುಂದರ ದೃಶ್ಯಗಳ ಅನಾವರಣ. ಕಾರಿನ ಸುಂದರ ಪುಷ್ಪಗಳ ದರ್ಶನ ನಡೆದಿತ್ತು.
ಸುಂದರ ವನಸಿರಿ
  
ಹಸಿರಹೊದಿಕೆ ಹೊದ್ದ ಭೂರಮೆ 










































 


















                                                                                                                        
ಹೊನ್ನ ಮೇಟಿ ಕಲ್ಲು ನಾವಿದ್ದ ಬುರುಡೆ ಕ್ಯಾಂಪಿನಿಂದ ಸುಮಾರು ಇಪ್ಪತ್ತು ಕಿ.ಮಿ ದೂರವಿತ್ತು, ಹೆದ್ದಾರಿಗಳಲ್ಲಿ ಇದು ಕಾಲು ಘಂಟೆಯ ಹಾದಿಯಾದರೂ ಕಾಡಿನ  ಬೆಟ್ಟಗಳನ್ನು ಬಳಸಿ ಸಾಗುವ  ಗೇಂ ರೂಟಿನಲ್ಲಿ ಒಂದು ಕಿ.ಮಿ.ಕ್ರಮಿಸಲು ಕನಿಷ್ಠ ಹತ್ತು ನಿಮಿಷ ಬೇಕಾಗುತ್ತದೆ.ಹಾದಿಯ ಎರಡೂ ಬದಿಯ ಕಾಡಿನ ಒಳಗಿಂದ ಯಾವ ಕ್ಷಣದಲ್ಲಾದರೂ  ಆನೆ, ಜಿಂಕೆ, ಹುಲಿ ,ಚಿರತೆ,ಕಾಟಿ, ಮುಂತಾದ ವನ್ಯ ಜೀವಿಗಳು ಸಾಗುವ  ಹಾದಿಗೆ ಅಡ್ಡಲಾಗಿ ನುಗ್ಗಬಹುದು. ಹಾಗಾಗಿ ನಿಶ್ಯಬ್ದವಾಗಿ ಕ್ಯಾಮರ ಹಿಡಿದು ಕುಳಿತ್ತಿದ್ದೆವು, ವೇಣು ಮಾತ್ರ ತದೇಕ ಚಿತ್ತರಾಗಿ ವಾಹನ ಚಾಲನೆಯ ಕಾರ್ಯದಲ್ಲಿ ತಲ್ಲೀನರಾಗಿದ್ದರು.ದಾರಿಯಲ್ಲಿ ಪ್ರತ್ಯಕ್ಷವಾಯಿತು ಕಿತ್ತಲೆಮರ ಹಾಗು ಕಾಫಿ ಗಿಡಗಳ ಸಾಲು. ನಮಗೆ ಅಚ್ಚರಿ ಇದ್ಯಾರಪ್ಪಾ ಈ ದತ್ತ ಕಾಡಿನಲ್ಲಿ ಕಿತ್ತಳೆ ಹಾಗು ಕಾಫಿ ಬೆಳೆಯೋರು ಅಂತಾ , ವಿಚಾರಿಸಲಾಗಿ ಇದು ಬಿರ್ಲಾಸಂಸ್ಥೆಯ    ಗುಂಪಿಗೆ ಸೇರಿದ   "ಹೊನ್ನ ಮೇಟಿ ಎಸ್ಟೇಟ್" ಎಂದು.ಕಾಡಿನ ನಡುವೆ ಸಾವಿರಾರು ಎಕರೆ ಪ್ರದೇಶದಲ್ಲಿ ಹೊನ್ನ ಮೇಟಿ ಎಸ್ಟೇಟ್ ಇದೆ.ವಿಶ್ರಾಂತಿಗಾಗಿ ಇಳಿದ ನಾವು ಹಾಗೆ ಅದಾಡಿ ಅಲ್ಲಿದ್ದ ಸಿಬ್ಬಂದಿ ಅನುಮತಿ ಪಡೆದು ಗಿಡದಲ್ಲೇ ಹಣ್ಣಾದ  ಕಿತ್ತಳೆ ಹಣ್ಣನ್ನು ಕಿತ್ತು ತಿಂದು  ಖುಷಿಪಟ್ಟೆವು,
ಮರದಲ್ಲೇ ಹಣ್ಣಾದ ಕಿತ್ತಳೆ ಹಣ್ಣು
ಅಕ್ಕ ಪಕ್ಕದ ಹಾದಿಯಲ್ಲಿ ಕಾಫಿ ಗಿಡದಿಂದ ಕಾಫಿ ಕಾಯಿ, ಹಾಗು ಹಣ್ಣುಗಳ ಘಮ ಘಮ ವಾಸನೆ ನಮ್ಮ ಮನಸನ್ನುಪ್ರಶಾಂತ ಗೊಳಿಸಿತ್ತು.
ಕಾಫಿ ಹಣ್ಣು ಹಾಗು ಕಾಯಿ ಹೊತ್ತ ಕಾಫಿಗಿಡ
ಕಾಫಿ ಹಣ್ಣಿನ  ಗೊಂಚಲು 
ಕಾಫಿ ಗಿಡದಲ್ಲಿ ಕಾಯಿಗಳ ನಡುವೆ ಹಣ್ಣಾದ ಕಾಫಿ ಹಣ್ಣು.
ಅದ್ಯಾವ ಮಾಯದಲ್ಲೋ ನಮ್ಮಲ್ಲಿನ ಕೆಲವರಿಗೆ ಜಿಗಣೆಗಳು [ಇಂಬಳಿ ] ಕಾಲಿಗೆ ಹತ್ತಿದ್ದವು .ಅವುಗಳನ್ನು ಕೊಡವಿಕೊಂಡು ಪಯಣ ಮುಂದುವರೆಯಿತು.


ಕಡಿದಾದ ಹಾದಿಯಲ್ಲಿ 
       ಮುಂದಿನ ಹಾದಿ ಬಹಳ ಕಷ್ಟದ   ಹಾದಿಯೇ ಸರಿ  , ವಾಹನ ಚಾಲಕರಿಗೆ ಈ ದಾರಿಯಲ್ಲಿ ಸಾಗಲು  ಗಟ್ಟಿಯಾದ ಗುಂಡಿಗೆ ಬೇಕು ,ಸಮುದ್ರ ಮಟ್ಟದಿಂದ ಸುಮಾರು 2500 ಅಡಿಗಳಿಗೂ ಎತ್ತರದ ಬೆಟ್ಟಗಳ ಸಾಲಿನ ನಡುವೆ ಸಾಗುವ ಇಕ್ಕಟ್ಟಿನ ಹಾದಿ ಆಯತಪ್ಪಿದರೆ ಪಾತಾಳ ಕಾಣಿಸುತ್ತದೆ ನಾವೂ ಸಹ ಇಷ್ಟು ಎತ್ತರದ ಪ್ರದೇಶದಲ್ಲಿ ಕಾರು ಇಕ್ಕಟ್ಟಾದ ಹಾದಿಯಲ್ಲಿ ಚಲಿಸುವಾಗ ಕಾಣುತ್ತಿದ್ದ ಪ್ರಪಾತಗಳನ್ನು ನೋಡಿ ಉಸಿರು ಬಿಗಿಹಿಡಿದು ಮಿಸುಕಾಡದೆ ಕುಳಿತ್ತಿದ್ದೆವು. ಅರಣ್ಯ ಸಿಬ್ಬಂದಿ ಮಾತ್ರ ತನಗೂ ಇದಕ್ಕೂ ಸಂಬಂದ ವಿಲ್ಲ ಅಂತಾ ಸ್ಥಿತ ಪ್ರಜ್ಞನಂತೆ ಕುಳಿತಿದ್ದರು. ಇಂತಹ ಸಮಯದಲ್ಲೂ ತಾಳ್ಮೆ ಕಳೆದುಕೊಳ್ಳದೆ ವಾಹನ ಚಲಿಸಿದ ವೇಣುಗೋಪಾಲ್ ನಮ್ಮನ್ನು ಸುರಕ್ಷಿತವಾಗಿ ಹೊನ್ನಮೇಟಿ ಕಲ್ಲು  ಪ್ರದೇಶ ತಲುಪಿಸಿದರು.
ಹೊನ್ನ ಮೇಟಿ ಕಲ್ಲಿನಿಂದ ಕಾಣುವ ಗಿರಿ ಶ್ರೇಣಿ


Tuesday, January 24, 2012

ಕಾಡಿನಲ್ಲಿ ಜಗದ ಕಣ್ಣಿಗೆ ಕಾಣದೆ ಅಡಗಿದೆ ವಿಸ್ಮಯಗಳ ಬುರುಡೆ ಕ್ಯಾಂಪು !!!! ನೆನಪಿನ ಪುಟ --03

ಬುರುಡೆ ಕ್ಯಾಂಪು


ಕಳೆದ ಸಂಚಿಕೆಯಲ್ಲಿ ಗುಂಡಾಲ್ ಅಣೆಕಟ್ಟಿನಿಂದ ಬುರುಡೆ ಹಾದಿಯ ಅನುಭವಗಳನ್ನು ಓದಿ ಮೆಚ್ಚಿದ್ದೀರಿ , ಬನ್ನಿ  ಮುಂದೆ  ಸಾಗೋಣ ............... ಗುಂಡಾಲ್ ನಿಂದ  ಬಂದ ನಮಗೆ ಈ ಬುರುಡೆ ಕ್ಯಾಂಪ್ ನಲ್ಲಿ ಇಂದಿನ ವಾಸ್ತವ್ಯ ಆಗಿತ್ತು.ನಮ್ಮ ಲಗೇಜುಗಳನ್ನು ಕಾರಿನಿಂದ ಇಳಿಸಿ , ತಂದಿದ ರೇಶನ್ , ಹಾಗು ರೆಡಿ ಟು ಈಟ್ ನ ಕೆಲವು ಸಾಮಗ್ರಿಗಳನ್ನು ಅಲ್ಲಿನ ಸಿಬ್ಬಂದಿಗಳ ಕೈಗೆ ಹಸ್ತಾಂತರಿಸಿದೆವು. ಅಲ್ಲಿನ ಸಿಬ್ಬಂದಿಗೆ ನಾವು ಬರುವ ಮಾಹಿತಿ ಮೊದಲೇ ತಿಳಿದಿದ್ದ ಕಾರಣ. ನಮಗೆ ಆ ತಾಣದಲ್ಲಿ  ರೂಂ ಗಳನ್ನು ಒದಗಿಸಿದರು.  ಆಯಾಸವಾಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದ ನಮಗೆ ತಿನ್ನಲು ಬಿಸ್ಕತ್ತು , ಮಿಕ್ಸ್ಚರ್ ಹಾಗು ಟೀ ತಂದ ಒಬ್ಬ ಸಿಬ್ಬಂದಿ ಸಾ ತಗಳಿ, ಅಂತಾ ತಂದಿಟ್ಟರು. ತಂದಿಟ್ಟ ಕಪ್ಪುಗಳ ಮೇಲೆ ಅರಣ್ಯ ಇಲಾಖೆಯ ಮುದ್ರೆ ಹಾಗು ಹುಲಿಯ ಚಿತ್ರ ನೋಡಿ  ಸಂತಸವಾಯಿತು.

ಕಪ್ಪಿನ ಮೇಲೂ ವನ್ಯ ಜೀವಿ ಚಿತ್ರ 

ಬಹಳ ಖುಷಿಯಿಂದ ಇದನ್ನು ತಿಂದು ಮುಗಿಸಿದ ನಾವು ಅಲ್ಲಿನ  ಸುತ್ತ ಮುತ್ತ ಪರಿಸರ ಪರಿಚಯ ಮಾಡಿಕೊಳ್ಳಲು ಕ್ಯಾಮರ ಹೊತ್ತು ನಡೆದೆವು. ಬನ್ನಿ ಇಲ್ಲಿನ ಪರಿಸರ ಪರಿಚಯ ಮಾಡಿಕೊಳ್ಳೋಣ.

Tuesday, January 17, 2012

..ಗುಂಡಾಲು ಅಣೆಕಟ್ಟಿನಿಂದ ಬುರುಡೆ ಕ್ಯಾಂಪಿನ ಕಾನನದ ಹಾದಿಯಲ್ಲಿ !!!ಕಾಡಿನ ಅಡಚಣೆಗಳ ದಾಟಿ ....ನೆನಪಿನ ಪುಟ ..02 ...

ನಮ್ಮ ಕಾಡಿಗೂ  ಬಂದಿರಾ !!!!


ನಮಸ್ಕಾರ ಮೊದಲ ಸಂಚಿಕೆಯನ್ನು ಆಪ್ತವಾಗಿ ಸ್ವೀಕರಿಸಿದ ನಿಮಗೆ ಧನ್ಯವಾದಗಳು. ಬನ್ನಿ ಎರಡನೇ ಸಂಚಿಕೆಯಲ್ಲಿ ನಿಮಗೆ ಕಾಡಿನ ಹಾದಿಯಲ್ಲಿ ಎದುರಾಗುವ ಅಡಚಣೆಗಳ ಪರಿಚಯ ಮಾಡಿಸುತ್ತೇನೆ. ಹೌದು ನಾವೀಗ ಹೋಗುವ ಜಾಗವೇ ಹಾಗಿದೆ ................???????

ಮೊದಲ ಸಾರಿ ಇಲ್ಲಿಗೆ ಬರುವ ಮೊದಲು  "ಕಾಕನ ಕೋಟೆಯ" ಕಾಡನ್ನು ನೋಡಿದ್ದ ನಮಗೆ ಈ ಕಾಡು ಸಹ ಅದೇ ರೀತಿ ಇರಬಹುದೆಂಬ ಅನಿಸಿಕೆ ಇತ್ತು ...!!! ಬಂದಮೇಲೆ ಇಲ್ಲಿನ ಪರಿಸರ ಒಡ್ಡುವ ಸವಾಲು ನಮಗೆ ಪ್ರಕೃತಿಯ ಹೊಸ ವಿಚಾರಗಳನ್ನು ಕಲಿಸಿಕೊಟ್ಟಿತು.ನಮ್ಮ ತಂಡ ಇಲ್ಲಿಗೆ ಸುಮಾರು ಎರಡು ಸಾರಿ ಹೋದಾಗಲೂ  ಹೊಸ ಹೊಸ ಅನುಭವ ಹೊತ್ತು ಬಂದಿದೆ.

   ಕೊಳ್ಳೆಗಾಲದಿಂದ  ಗುಂದಾಲ್ ಆಣೆಕಟ್ಟು ಹಾದಿಯಲ್ಲಿ  ಅಣೆಕಟ್ಟೆ ಪ್ರದೇಶದ ಸಮೀಪ ಎಡಕ್ಕೆ ಒಂದು ಹಾದಿ ನಿಮ್ಮನ್ನು ಅಲ್ಲೇ ಇರುವ ಚೆಕ್ ಪೋಸ್ಟ್ ಬಳಿ ಕರೆದುಕೊಂಡು ಹೋಗುತ್ತದೆ.  ಚೆಕ್ ಪೋಸ್ಟ್ ಬಳಿ ಸ್ವಲ್ಪ ನಿಲ್ಲೋಣ ಬನ್ನಿ ,    

ಗುಂಡಾಲ್ ಅಣೆಕಟ್ಟಿನ  ವಿಹಂಗಮ ಸುಂದರ ನೋಟ

        ನಿಮಗೆ ಅಲ್ಲಿ ಸುಂದರ ಪರಿಸರದ ಅನಾವರಣ ಆಗುತ್ತದೆ.

 ಸುಂದರ ನಿರ್ಮಲವಾದ ವಾತಾವರಣ ನೀಡುವ ಸ್ವಾಗತ ಇದು 


ಗುಂದಾಲ್ ದ್ಯಾಮಿನಿಂದ ಬುರುಡೆ ಕ್ಯಾಂಪಿಗೆ ಸುಮಾರು ೨೩ ಕಿ.ಮೀ  ದೂರದ ದಟ್ಟ ಕಾನನದ ಹಾದಿ !! ಒಂದು ಬದಿ ಆಳವಾದ ಕಣಿವೆ ಇನ್ನೊದು ಬದಿ ಕಾಡಿನ ಬೆಟ್ಟದ ಗೋಡೆ ಮಧ್ಯೆ ಸಾಗಿದ ನಮ್ಮ ಕಾರು ಸುಮಾರು ೧೦ ಕಿ.ಮೀ/ಘಂಟೆಗೆ  ವೇಗದಿಂದ ತೆವಳುತ್ತಿತ್ತು !! ಮೊದಲ ಸ್ವಾಗತ ನೀಡಿದ ಸಾರಂಗಗಗಳ  ಜೋಡಿ ಮೊಡಿಮಾಡಿತ್ತು!!!  

ಸ್ವಾರ್ಥ ವಿಲ್ಲದ ನಮ್ಮ ಕಾಡಿಗೆ ಸ್ವಾಗತ ನಿಮಗೆ

     

                                                   

 

 



.

 

 

 

 

ದಾರಿಯಲ್ಲಿ  ಕಡಿದಾದ   ಬಂಡೆಗಳು  ನೀರಿನ  ಜಾರಿಯಲ್ಲಿ  ಅಡಗಿ ವಾಹನಗಳು ತೊಂದರೆಗೆ ಈಡಾಗುವ ಸಂಭವ ವಿದ್ದುಆತಂಕದಲ್ಲೇ ಸಾಗಿ ಗುರಿ ಮುಟ್ಟಿದೆವು. ಕಾನನದ ಹಾದಿಯ ಪಯಣ ನಮ್ಮನ್ನು ಮುಧಗೊಳಿಸಿ  ಮೋಡಿ ಮಾಡಿತ್ತು !!! 



ಹಾದಿಯಲ್ಲಿ  ಸಿಕ್ಕ  ಸಾರಂಗ 




ಹಾಗೆ ತೆವಳಿದ ನಾವು ಕಾಡಿನೊಳಗೆ ಲೀನವಾಗಿ ಸಾಗಿದೆವುಮುಂದೆ  ನಮಗೆ ಲಾಂಗೂರ್ ಕೋತಿಗಳ ಹಿಂಡು ಹಾದಿಯ ಪಕ್ಕದಲ್ಲಿದ್ದ ಮರಗಳಲಿ ಗೋಚರಿಸಿದವು.ನಾವೂ ಸಹ ನಿಧಾನವಾಗಿ ಕಾರಿನಿಂದ ಇಳಿದು ನೋಡಿದರೆ ನಮ್ಮನ್ನು ಕಂಡು ಕೋತಿಗಳು ಪರಾರಿಯಾಗಲು ಆರಂಭಿಸಿದವು. ಕ್ಷಣಾರ್ಧದಲ್ಲಿ ಇಡೀ ತಂಡ ಮಾಯವಾಗಿತ್ತು    ಫೋಟೋ ತೆಗೆಯಲು ಆಗಲಿಲ್ಲವಲ್ಲಾ ಅಂತಾ ಯೋಚಿಸುತ್ತಾ ನಿಂತಿದ್ದ ನಮಗೆ ಅದ್ಭುತ ಚಿತ್ರ ಒಂದು ಸಿಕ್ಕಿತು.

ಲಾಂಗೂರ್ ಕೋತಿ ಹಾರಿದೆ ನೋಡಿ !!!

  ಲಾಂಗೂರ್ ಕೋತಿಯೊಂದು ಮರದಿಂದ ಇನ್ನೊಂದು ಮರಕ್ಕೆ ಹಾರುವ ಸಾಹಸ ಕಂಡು ವಿಸ್ಮಯ ವಾಯಿತು ಕಾಡಿನ ಹಾದಿಯೇ ಹಾಗೆ  ಯಾವ ಕ್ಷಣದಲ್ಲಿ ಯಾವ ಪವಾಡ ಬೇಕಾದರೂ ಆಗಬಹುದು , ಕ್ಷಣಾರ್ಧದಲ್ಲಿ ನಿಮಗೆ ಅರಿವಿಲ್ಲದೆ   ಅಪಾಯ ಎದುರಾಗಬಹುದು , ಅಥವಾ ನೀವೂ ಊಹಿಸದೇ ಇರುವ ಪ್ರಾಣಿಯ ದರ್ಶನವಾಗಬಹುದು ,  ಕಾಡಿನ ಹಾದಿಯಲ್ಲಿ  ಇಂತಹ ಹಲವಾರು  ಘಟನೆಗಳು  ನಮಗೆ ಆಗಿದೆ  .ಆದರೆ  ಇಂತಹ ಘಟನೆಗಳಿಂದ   ನಮ್ಮ ತಾಳ್ಮೆ  ಹೆಚ್ಹಾಗಿ  ಪರಿಸರದ ಜೊತೆ  ಹೇಗೆ  ಹೊಂದಿಕೊಳ್ಳಬೇಕೂ  ಎಂಬ  ರೀತಿಯನ್ನು  ನಾವು  ಕಲಿತೆವು .

ಕಾಡಿನ ಹಾದಿಯಲ್ಲಿ ತೆವಳುತ್ತಾ ಕಾಡಿನ ಪರಿಸರ ಅನುಭವಿಸುತ್ತಾ ತೆರಳಿದ್ದ , ಸವಾಲಿನ ರಸ್ತೆಯಲ್ಲಿ ನಗು ನಗುತ್ತಾ ಕಾರ್ ಡ್ರೈವ್ ಮಾಡುತ್ತಿದ್ದರೂ ವೇಣುಗೋಪಾಲ್ , ನಮ್ಮ ತಂಡದ ಕಾರು ಚಾಲನೆಯ ಅತ್ಯಂತ ಅನುಭವಿ ಇವರು , ಕಾಡಿನ ದುರ್ಗಮ ಹಾದಿಯಲಿ ತಾಳ್ಮೆಯಿಂದ ಯಾವುದೇ ಕಾರಣಕ್ಕೂ ಪರಿಸರಕ್ಕೆತೊಂದರೆ  ಮಾಡದೆ ಕಾರ್ ಚಾಲನೆ ಮಾಡುವ ಕಾರ್ಯದಲ್ಲಿದ್ದರು. [ನಾವಿದ್ದ ಚಿಕ್ಕ ಕಾಡಿನ  ಹಾದಿಯಲ್ಲಿ ಒಂದು ಕಡೆ ಬೆಟ್ಟ ಹಾಗು ಕಾಡು ಮತ್ತೊಂದು ಬದಿಯಲ್ಲಿ ಆಳವಾದ ಪ್ರಪಾತ ಇದ್ದು ವಾಹನ ಚಾಲನೆಯಲ್ಲಿ ಸ್ವಲ್ಪ ತಪ್ಪಿದರೂ ಕಾರು ಇಲ್ಲಾ ಬೆಟ್ಟಕ್ಕೆ ಡಿಕ್ಕಿ ಯಾಗುವುದು  ಅಥವಾ ಪ್ರಪಾತಕ್ಕೆ ಜಾರುವುದು ಆಗುತ್ತಿತ್ತು. ] ಸ್ವಲ್ಪ ಹಾದಿ ಕ್ರಮಿಸಿದ ನಮಗೆ ಎದುರಾಗಿದ್ದು  ಒಂದು ಬಂಡೆಯ ಇಳಿಜಾರು ಹಾದಿ ಅದರಮೇಲೆ ಹರಿಯುತ್ತಿರುವ ಜರಿ !!!   

ಕಾಡಿನ ಮದ್ಯೆ ಎದುರಿಸಿದ ಸವಾಲು

          

ಸ್ವಲ್ಪ ತಪ್ಪಿದರೂ ಪ್ರಪಾತ ಸೇರಿಸುವ ಹಾದಿಯಲ್ಲಿ ವೇಣು  ಮೆರೆದ ಸಾಹಸ.


ನಮ್ಮ ಕಾರು ಇಳಿಜಾರಿನ ಬಂಡೆಯ ಮೇಲೆಹರಿವ  ಜರಿಯೊಳಗೆ ಹಾದು ಹೇರ್ ಪಿನ್ ನಂತಹ ಏರುಮುಖದ ಹಾದಿಯ ದಿನ್ನೆಯನ್ನು ಹತ್ತ ಬೇಕಾಗಿತ್ತು. ಜೊತೆಗೆ ಬಂಡೆಯ ಮೇಲೆ ಹರಿವ ನೀರಿನ ಒಳಗೆ ಕಲ್ಲಿದ್ದು ಅದು ಕಾರಿನ ಎಂಜಿನ್ಗೆ ಹಾನಿಮಾಡುವ ಭಯ ಒಂದು ಕಡೆ , ಆದರೂ ನಮ್ಮಲ್ಲಿ ಕೆಲವರು ಕಾರಿನಿಂದ ಇಳಿದು ಸುತ್ತಲ ಪರಿಸರ ಅವಲೋಕನ ಮಾಡಿ ಯಾವುದೇ  ಅಪಾಯ ವಿಲ್ಲವೆಂದು ಕಾತರಿ ಪಡಿಸಿಕೊಂಡು ಕಾರನ್ನು ಆ ಹಾದಿಯಲ್ಲಿ ಮೇಲೆತರಲು  ವೇಣುಗೋಪಾಲ್ ಗೆ  ಅನುವುಮಾಡಿದೆವು. ಅವರೂ ಸಹ ಚಾಕಚಕ್ಯತೆ ಯಿಂದ  ಕಾರನ್ನು ಬಂಡೆ ದಾಟಿಸುವಲ್ಲಿ  ಯಶಸ್ವಿಯಾದರು .ಇಪ್ಪತ್ತ  ಮೂರು ಕಿ.ಮಿ ದಾರಿಯನ್ನು ಕ್ರಮಿಸಲು ಸುಮಾರು ನಾಲ್ಕು ಘಂಟೆ  ಕಾಲ ತೆಗೆದು ಕೊಂದು ಸಾಹಸದಿಂದ  ಬುರುಡೆ ಕ್ಯಾಂಪಿಗೆ ಬಂದೆವು...............................................ಇಲ್ಲಿ ವೀರಪ್ಪನ್ ಇದ್ದನಂತೆ .!!!!!!

ಬುರುಡೆ  ಕ್ಯಾಂಪ್ 

ಸುಸ್ತಾಯ್ತು  ಇವತ್ತು ಇಲ್ಲೇ ರಾತ್ರಿ  ಕಳಿಬೇಕೂ ಮತ್ತೆ ಸಿಕ್ತೀನಿ ಮುಂದಿನ ಸಂಚಿಕೆಯಲ್ಲಿ .............ನೀವೂ ಸಹ ಸ್ವಲ್ಪ ವಿಶ್ರಮಿಸಿ.


Monday, January 9, 2012

ಬಿಳಿಗಿರಿಯ ಬನದಲ್ಲಿ ,ದೊಡ್ಡ ಸಂಪಿಗೆ ಮರದ ಸನಿಹದಲ್ಲಿ !!! ನೆನಪಿನ ಪುಟಗಳಿಂದ ...1 ನೇ ಸಂಚಿಕೆ.



ದೊಡ್ಡ ಸಂಪಿಗೆ ಮರ 
 ನಮಸ್ಕಾರ  ೨೦೧೨ ರ ಶುಭಾಶಯಗಳು ತಮಗೆ, ಈ ವರ್ಷದಲ್ಲಿ ನನ್ನ ಬ್ಲಾಗ್ ಪುಟವನ್ನು ವಿಶೇಷವಾಗಿ ಪ್ರಾರಂಭಿಸಬೇಕೆಂಬ ಕಾರಣ  ಬಿಳಿಗಿರಿ ಬನದಲ್ಲಿ ಸರಣಿಯ ಲೇಖನವನ್ನು ಪುನಃ  ನಿಮ್ಮೊಡನೆ ಪ್ರೀತಿಯಿಂದ ಹಂಚಿಕೊಳ್ಳುತ್ತಿದ್ದೇನೆ. ಕಳೆದ ಬಾರಿ ಪ್ರಕಟಗೊಂಡಾಗ ಹೆಚ್ಚಿನ ಜನ ಈ ಲೇಖನ ಓದಲು ಸಾಧ್ಯವಾಗದ ಕಾರಣ  ನನ್ನ ಪ್ರೀತಿಯ ಕಾಡಿನ ಅನುಭವಗಳ ಸರಣಿ ಮತ್ತೊಮ್ಮೆ  ಪರಿಷ್ಕರಿಸಿದ ಲೇಖನವನ್ನು  ಎಲ್ಲರೊಡನೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ವೀರಪ್ಪನ್ ಓಡಾಡಿದ ದಟ್ಟ ಕಾನನದಲ್ಲಿ ಓಡಾಡಿದ ಅನುಭವಗಳ  ಹಲವರು ನೋಡದ ಸುಂದರ ಕಾಡಿನ ತಾಣಗಳ ಚಿತ್ರಗಳೊಡನೆ ಈ ಸರಣಿ ನಿಮ್ಮ ಮಡಿಲಿಗೆ ಹಾಕಿದ್ದೇನೆ . ಎಂಟು ಸಂಚಿಕೆಯ ಮೊದಲ ಕಂತು ಈ ಸಂಚಿಕೆಯಿಂದ ಪ್ರಾರಂಭವಾಗುತ್ತಿದೆ. ಬನ್ನಿ ಸುಂದರ ಬಿಳಿಗಿರಿ ಬನದೊಳಗೆ ಹೋಗೋಣ.

Friday, December 30, 2011

ಅಜ್ಞಾನಿ ಯೊಬ್ಬ ಪ್ರಾರಂಭಿಸಿದ ಬ್ಲಾಗ್ ಗೆ ನಾಲ್ಕು ವರ್ಷವಂತೆ !!!! ಹಾಗೂ ನಿಮಗೆ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳಂತೆ!!!



ಬ್ಲಾಗ್ ಗೆಳೆಯರ ಬಳಗ.


ನಮಸ್ಕಾರ ಕೇವಲ ನಾಲ್ಕು ವರ್ಷದ ಹಿಂದಿನ ಮಾತು  , ಮೂರುಜನ  ಸ್ನೇಹಿತರ ಗುಂಪೊಂದು   ಟೀ ಕುಡಿಯಲು ಮೈಸೂರಿನ ಇರ್ವಿನ್ ರಸ್ತೆಯ ಒಂದು ಹೋಟೆಲಿನಲ್ಲಿ ಸೇರಿತ್ತು. ಸೇರಿದ್ದ ಮೂರುಜನರಲ್ಲಿ ಒಬ್ಬರು ಶರತ್  ಮಾತಾಡುತ್ತಾ  [ಅವರು ಆಗಲೇ ಸ್ಥಳೀಯ ಆಂಗ್ಲ ಪತ್ರಿಕೆಗೆ  ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು ] ನಿಮಗೆ ಗೊತ್ತಾ ಬಾಲು, ಇತ್ತೀಚೆಗಂತೂ ವಿಜ್ಞಾನ  ಬಹಳ ಮುಂದುವರೆದಿದೆ , ನಿಮಗೆ ಅಚ್ಚರಿ ಆಗುತ್ತೆ ನಾನು ಈಗ ಅಂತರ್ಜಾಲದಲ್ಲಿ  ಬ್ಲಾಗ್ ಅಂತಾ ಪುಟ ಮಾಡಿದ್ದೇನೆ ಹಾಗು ಅದರಲ್ಲಿ  ಇಂಗ್ಲೀಶ್ ನಲ್ಲಿ  ಬರೆಯುತ್ತಿದ್ದೇನೆ , ನಾನು ಬರೆದ ತಕ್ಷಣ ಪ್ರಪಂಚದ ಯಾವುದೋ ದೇಶದಿಂದ ಫೀಡ್ ಬ್ಯಾಕ್ ಸಿಗುತ್ತೆ ಸಾರ್ ಅಂದ್ರೂ ,  ಮತ್ತೊಬ್ಬ ಗೆಳೆಯ ಸಾಫ್ಟ್ ವೇರ್  ಟೆಕ್ಕಿ  ಗುರುದತ್ ಸಹ ಅದಕ್ಕೆ ದನಿ ಗೂಡಿಸಿದರು, ಮೊದಲು ಈ ಮಾತನ್ನು ಕೇಳಿ ಬ್ಲಾಗಿನ ಗಂಧ ಗಾಳಿ ಇಲ್ಲದ ನಾನು ಬಿಟ್ಟ ಬಾಯಿ ಬಿಟ್ಟಂತೆ ಹೌದಾ  ಅಂದಿದ್ದೆ. ಮನದಲ್ಲಿ ಅರೆ ನಾನೂ ಬ್ಲಾಗ್ ಮಾಡ ಬಹುದಾ ಅನ್ನಿಸಿದ್ದು ನಿಜ  ಆದರೆ ಈ ಅಜ್ಞಾನಿಗೆ  ಮನೆಯಲ್ಲಿ  ಕಂಪ್ಯೂಟರ್ , ಇಂಟರ್ನೆಟ್ ಇದ್ದರೂ ಬ್ಲಾಗ್ ಬಗ್ಗೆ ಏನೂ  ತಿಳುವಳಿಕೆ ಇರಲಿಲ್ಲ.  ಸರಿ ಆತ್ಮೀಯ ಗೆಳೆಯ ಗುರುದತ್ ನನ್ನು ಕಾಡಿ ಹೇಗೆ ಸಾರ್ ಬ್ಲಾಗ್ ಮಾಡೋದು ಅಂದೇ , ಬಾಲು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ , ಗೂಗಲ್ ಸರ್ಚ್ ಗೆ ಹೋಗಿ ಅಲ್ಲಿ ಜಾಲಾಡಿ ಅಲ್ಲಿ ಸಿಗುತ್ತೆ ಮಾಹಿತಿ ಅಂದ್ರೂ .
ಬ್ಲಾಗ್ ಗೆಳೆಯರು ಹೀಗೂ ಉಂಟು

Saturday, December 24, 2011

ರಫಿ ಯಾಕೋ ಇಂದು ನಿನ್ನ ನೆನಪಾಗಿದೆ.ನನ್ನ ಮನದಲ್ಲಿ ನಿನ್ನ ಹಾಡುಗಳ ನೆನಪಿನ ಚಿಲುಮೆ ಉಕ್ಕಿದೆ.!!!!

ಇವತ್ತು   {೨೪ ಡಿಸೆಂಬರ್ ೨೦೧೧ } ಮುಂಜಾನೆ ಎದ್ದವನಿಗೆ , ಯಾಕೋ ಬೇಸರವಾಗಿ  ಮನಸ್ಸಿಗೆ ಹಿತವಾದ ಹಾಡು ಕೇಳುವ ಆಸೆಯಾಗಿ  ಬಾನ್ಸುರಿ ಸಿ.ಡೀ. ಹುಡುಕುತ್ತಿದ್ದೆ. ಅಲ್ಲೇ ಇದ್ದ ಪತ್ರಿಕೆಯಲ್ಲಿ  ಒಂದು ಹೆಡ್ ಲೈನ್ ಕಣ್ಣಿಗೆ ಬಿತ್ತು.  "ಮೊಹಮದ್ ರಫಿ ಜನುಮದಿನ  ೨೪ ನೆ ಡಿಸೆಂಬರ್ ರಂದು  ಮರೆಯಲಾರದ ಮಹಾ ಗಾಯಕ ಎಂದು". ನೋಡಿದ ತಕ್ಷಣ ಮೊಹಮದ್ ರಫಿ ಹಾಡಿನ  ಸಿ.ಡೀ ತೆಗೆದು ಮುಂಜಾನೆಯೇ ಹಾಕಿಕೊಂಡು ಕುಳಿತೆ. ಮನಸಿಗೆ ಹಿತವಾಯಿತು.ಮನದಲ್ಲಿ ರಫಿ ಹಾಡಿನ ನೆನಪುಗಳ ಚಿಲುಮೆಗೆ ಜೀವಬಂದು ಚಿಮ್ಮಲು ಶುರುವಾಯಿತು. ಆ ಚಿಲುಮೆಯ ಫಲ ಶ್ರುತಿಯೇ ಈ ಲೇಖನ.ಹೌದು ನನ್ನ ಜೀವಿತ ಕಾಲದಲ್ಲಿ ಕಂಡ ಒಬ್ಬ ಅಪ್ರತಿಭ ಗಾಯಕ , ಇವರ ಯಾವ ಹಾಡು ಇಷ್ಟಾ ಆಗೋಲ್ಲಾ ಹೇಳಿ. ಶಾಸ್ತ್ರೀಯ ಸಂಗೀತಕ್ಕೂ ಸೈ, ಪ್ರೇಮ ಸಂಗೀತಕ್ಕೂ ಸೈ, ಘಜಲ್ ಹಾಡಲೂ ಸೈ, ಯಾಹೂ ಅಂತಾ ಕುಣಿತದ ಹಾಡಿಗೂ ಸೈ, ಯಾವ ಭಾಷೆಯ ಹಾಡಾದರೂ ಹಾಡಲು ಸೈ. ಯಾರೂ ಏನೇ ಅಂದ್ರೂ ಈ ಗಾಯಕನ ನಂತರ ಮತ್ತೊಬ್ಬ ರಫಿ ಹುಟ್ಟಲು ಸಾಧ್ಯವಿಲ್ಲಾ ಬಿಡಿ. ಹೌದು ಸಾರ್ ರಫಿ ಯಾ ಹಾಡನ್ನು ಕೇಳುತ್ತಿದ್ದರೆ  ಆತನ  ನಿಷ್ಕಲ್ಮಶ ನಗು ಮುಖದ ಚಿತ್ರಗಳೇ  ಕಾಣುತ್ತವೆ. ಕಪಟ ಅರಿಯದ  ಸಭ್ಯ ಜೀವನ ನಡೆಸಿದ , ಅಜಾತ ಶತ್ರು ಇವರು.
ಮೊಹಮದ್ ರಫಿ
ಮೊಹಮ್ಮದ್ ರಫಿ ಅವರು ಹಜ್ಜಿ ಅಲಿ ಮೊಹಮ್ಮದ್ ಅವರ ಆರನೆಯ ಕಿರಿಯ ಪುತ್ರರಾಗಿದ್ದಾರೆ.ಅವರು ಪಂಜಾಬ್ ರಾಜ್ಯದ (ಬ್ರಿಟಿಶ್ ಭಾರತ)  ಅಮೃತಸರ   ಬಳಿಯ "ಕೊಟ್ಲಾ ಸುಲ್ತಾನ್ ಸಿಂಗ್ "ಗ್ರಾಮದಲ್ಲಿ ಜನಿಸಿದ್ದಾರೆ ಮೊಹಮದ್  ರಫಿ ಅವರನ್ನು ಚಿಕ್ಕವರಿರುವಾಗ ಫೀಕಾ ಎಂದು ಸಂಕ್ಷಿಪ್ತ ನಾಮದಿಂದ ಕರೆಯಲಾಗುತ್ತಿತ್ತು.ಅವರು ಹಳ್ಳಿಯಲ್ಲಿ ಫಕೀರ್ ಅವರ ಹಾಡುಗಳ ಮೂಲಗಳನ್ನು ಅನುಕರಿಸುತ್ತಿದ್ದರು. ರಫಿ ಅವರ ತಂದೆ ೧೯೩೫-೩೬, ರಲ್ಲಿ ಲಾಹೋರ್,ಗೆ ಹೋಗಿ ನೆಲೆಸಿದರು,ನಂತರ ಅವರ ಕುಟುಂಬ ಅವರನ್ನು ಹಿಂಬಾಲಿಸಿತು. ರಫಿ ಅವರ ಕುಟುಂಬವು ಲಾಹೋರ್ ನ ನೂರ್ ಮೊಹಲ್ಲಾದಲ್ಲಿ ಒಂದು ಪುರುಷರಿಗಾಗಿ ಸಲೂನ್ ನನ್ನು ಹೊಂದಿದೆ. ಅವರ ಅಳಿಯ ಸಂಬಂಧಿ ಮೊಹಮ್ಮದ್ ಹಮೀದ್ ಇದರ ಒಡೆಯರಾಗಿದ್ದು ಅವರೇ ರಫಿಯವರಲ್ಲಿನ ಪ್ರತಿಭೆ ಗುರ್ತಿಸಿ ಸಂಗೀತ ಲೋಕಕ್ಕೆ ಪ್ರೊತ್ಸಾಹಿಸಿದರು. ನಂತರ ರಫಿ ಅವರು ಶಾಸ್ತ್ರೀಯ ಸಂಗೀತವನ್ನು ಉಸ್ತಾದ್ ಬಡೆ ಗುಲಾಮ್ ಅಲಿ ಖಾನ್, ಉಸ್ತಾದ್ ಅಬ್ದುಲ್ ವಹೀದ್ ಖಾನ್ , ಪಂಡಿತ ಜೀವನ್ ಲಾಲ್ ಮಟ್ಟೂ ಮತ್ತು ಫಿರೋಜ್ ನಿಜಾಮ್ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು.
ರಫಿ ಅವರು ೧೩ನೇಯ ವರ್ಷ ವಯಸ್ಸಿನವರಗಿದ್ದಾಗ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಸಂಗೀತ ಕಚೇರಿ ನೀಡಿದ್ದಾರೆ.ಕೆ.ಎಲ್ ಸೈಗಲ್ ಅವರ ಸಂಗೀತ ಕಚೇರಿಯಲ್ಲಿ ಅವರಿಗೆ ಈ ಪ್ರದರ್ಶನದ ಅವಕಾಶ ದೊರೆಕಿತು. ರಫಿ ಅವರು ಶ್ಯಾಮ್ ಸುಂದರ ಅವರ ಮಾರ್ಗದರ್ಶನದಲ್ಲಿ ಚೊಚ್ಚಿಲ ಹಿನ್ನಲೆಗಾಯಕರಾಗಿ "ಸೊನಿಯೆ ನೀ,ಹೀರಿಯೆ ನೀ" ಎಂಬ ಹಾಡನ್ನು  ಪಂಜಾಬಿ  ಚಿತ್ರ ಗುಲ್ ಬಲೊಚ್ ನಲ್ಲಿ ಜೀನತ್ ಬೇಗಮ್ ರೊಂದಿಗೆ ಹಾಡಿದ್ದಾರೆ. ಅದೇ ವರ್ಷ ರಫಿ ಅವರನ್ನು ಲಾಹೋರ್ ನ ಆಲ್ ಇಂಡಿಯಾ ರೇಡಿಯೊ ಕೇಂದ್ರದಲ್ಲಿ ಅವರಿಗಾಗಿ ಹಾಡಲು ಆಮಂತ್ರಿಸಲಾಗಿತ್ತು. ಅವರು ತಮ್ಮ ವೃತ್ತಿಪರತೆಯನ್ನು ಚೊಚ್ಚಿಲ ಚಿತ್ರ ಶ್ಯಾಮ್ ಸುಂದರ್ ಅವರ-ನಿರ್ದೇಶಿತ ೧೯೪೧ ರಲ್ಲಿನ ಗುಲ್ ಬಲೊಚ್ ಮತ್ತು ಅದರ ಬೆನ್ನ ಹಿಂದೆಯೇ ಬಾಂಬೆ ಚಿತ್ರ ಗಾಂವೊ ಕಿ ಗೌರಿ,ಯಲ್ಲಿಯೂ ಹಿನ್ನಲೆ ಗಾಯಕರಾಗಿದ್ದಾರೆ.

ಲೈಲಾ ಮಜ್ನೂ (೧೯೪೫)ಮತ್ತು ಜುಗ್ನು ಚಿತ್ರಗಳಲ್ಲಿ ರಫಿ ಅವರು ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಲೈಲಾ-ಮಜ್ನೂ ದಲ್ಲಿ ಅವರು 'ತೇರಾ ಜಲ್ವಾ'ದ ಗೀತೆಯಲ್ಲಿನ ಕೋರಸ್ ನಲ್ಲಿ ಕಾಣಿಸಿಕೊಂಡಿದ್ದರು.
ರಫಿ ಅವರು ೧೯೪೪ ರಲ್ಲಿ ಬಾಂಬೆಗೆ (ಈಗಿನ ಮುಂಬಯಿ)ಬಂದು ಸಹೋದರರೊಂದಿಗೆ ಬೆಹೆಂಡಿ ಬಜಾರ್ ನ ವಾಣಿಜ್ಯ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಹತ್ತಡಿಯ ಚಿಕ್ಕ ಕೋಣೆಯೊಂದನ್ನು ಬಾಡಿಗೆ ಪಡೆದರು. ಇಲ್ಲಿ ತನ್ವೀರ್ ನಕ್ವಿ ಅವರು ಅವರನ್ನು ಕೆಲವು ಚಲನಚಿತ್ರ ನಿರ್ಮಾಪಕರಿಗೆ ಪರಿಚಯಿಸಿದರು.ಅದರಲ್ಲಿ ಅಬ್ದುರ್ ರಶೀದ್ ಕರ್ದಾರ್,ಮೆಹಬೂಬ್ ಖಾನ್ ಮತ್ತು ನಟ-ನಿರ್ದೇಶಕ ನಜೀರ್ ಅವರನ್ನು ಪರಿಚಯಿಸಿದರು. ಚೌಪಾಟಿಯ ಸಮುದ್ರಕ್ಕೆ ಮುಖಮಾಡಿ ಅವರು ಪ್ರತಿ ನಿತ್ಯ ಮುಂಜಾನೆ ರಿಯಾಜ್ ಮಾಡುವುದು ಅವರ ದಿನದ ರೂಢಿಯಾಗಿತ್ತು. ಮುಂಬಯಿನಲ್ಲಿಯೂ ಸಹ ಶ್ಯಾಮ್ ಸುಂದರ್ ಅವರು ರಫಿ ಅವರಿಗೆ ಜಿ.ಎಂ.ದುರಾನಿಯವರೊಂದಿಗೆ ಅವರಿಗೆ 'ಅಜಿ ದಿಲ್ ಹೊ ಕಾಬು ಮೈ ತೊ ದಿಲದಾರ್ ಕಿ ಐಸಿ ತೈಸಿ..'ಹಾಡಿನಲ್ಲಿ ಯುಗಳ ಗೀತೆ ಹಾಡಿದ್ದು ಗಾವೊಂ ಕಿ ಗೌರಿ ಚಿತ್ರದ್ದು ಮೊದಲ ಹಿಂದಿ ಹಾಡಿದ ಧ್ವನಿ ಮುದ್ರಣದ ಚಲನಚಿತ್ರವಾಗಿತ್ತು. ಹಲವು ಹಾಡುಗಳೂ ಆಗ ಧ್ವನಿಮುದ್ರಣಗೊಂಡವು.
ಮಹಾತ್ಮಾ ಗಾಂಧಿ ಅವರ ಹತ್ಯೆಯ ನಂತರ ಹುಸನ್ಲಾಲ್ ಭಗತರಾಮ್-ರಾಜೆಂದ್ರ ಕೃಷ್ಣನ್-ಅವರ 'ಸುನೊ ಸುನೊ ಏಯೆ ದುನಿಯಾವಾಲೊ,ಬಾಪೂಜಿ ಕಿ ಅಮರ್ ಕಹಾನಿ..'ಎಂಬ ಹಾಡನ್ನು ಹಾಡಿದ್ದಾರೆ. ಭಾರತದ ಪ್ರಧಾನ ಮಂತ್ರಿ "ಜವಾಹರ ಲಾಲ್ ನೆಹರೂ " ಅವರು ರಫಿಯವರನ್ನು ಕರೆದು ಮನೆಯಲ್ಲಿ ಹಾಡಲು ಆಮಂತ್ರಿಸಿದ್ದರು. ರಫಿ ಅವರು ನೆಹರೂ  ಅವರಿಂದ ಭಾರತದ ಸ್ವಾತಂತ್ರ್ಯ ದಿನದಂದು ರಜತ ಪದಕ ಪಡೆದುಕೊಂಡರು. ಆಗ ೧೯೪೯, ರಲ್ಲಿ ರಫಿ ಹಲವು ಜನಪ್ರಿಯ ಹಾಡುಗಳನ್ನು ಸಂಗೀತ ನಿರ್ದೇಶಕರಾದ ನೌಶಾದ್ ರೊಂದಿಗೆ (ಚಾಂದಿನಿ ರಾತ್ , ದಿಲ್ಲಗಿ ಮತ್ತುದುಲಾರಿ ) ಶ್ಯಾಮ್ ಸುಂದರ್ ಅವರ (ಬಜಾರ್ ) ಮತ್ತು ಹುಸ್ನಲಾಲ್ ಭಗತರಾಮ್ (ಮೀನಾ ಬಜಾರ್ ).
ರಫಿ ಅವರ ಮೊದಲ ಹಾಡು ನೌಶಾದ್ ರೊಂದಿಗೆ "ಹಿಂದುಸ್ತಾನ್ ಕೆ ಹಮ್ ಹೈ",ಶ್ಯಾಮ್ ಕುಮಾರ್ ಅವರೊಂದಿಗೆ ಅಲಾಉದ್ದೀನ್ ಮತ್ತು ಇನ್ನುಳಿದವರೊಂದಿಗೆ ಸಾಥ್ ನೀಡಿದ್ದಾರೆ.ಎ.ಆರ್ ಕರ್ದಾರ್ ಅವರ ಪೆಹೆಲೆ ಆಪ್ (೧೯೪೪)ರಲ್ಲಿ ಮೂಡಿ ಬಂತು. ಅದೇ ವೇಳೆಗೆ ೧೯೪೫ ರ ಚಲನಚಿತ್ರ ಗಾವೊಂ ಕೆ ಗೊರಿ ಗಾಗಿ "ಅಜಿದಿಲ್ ಹೊ ಕಾಬೂ ಮೈ"ಹಾಡನ್ನು ಹಾಡಿದರು. ಅವರು ಈ ಹಾಡನ್ನೇ ತಮ್ಮ ಮೊದಲ ಹಿಂದಿ ಭಾಷೆಯ ಹಾಡೆಂದು ಪರಿಗಣಿಸುತ್ತಾರೆ.
ರಫಿ ಎರಡು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಫಿ ಅವರು ೧೯೪೫ ರಲ್ಲಿ "ತೇರೆ ಜಲ್ವಾ ಜಿಸ್ ನೆ ದೇಖಾ"ದಲ್ಲಿನ ಸಮೂಹ ಗಾಯಕರೊಂದಿಗೆ ಚಿತ್ರ ಲೈಲಾ ಮಜ್ನೂ ದಲ್ಲಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ನೌಶಾದ್ ರಿಗಾಗಿ ಹಲವು ಹಾಡಿಗೆ ಅವರು ಕೋರಸ್ ಆಗಿದ್ದಾರೆ.ಅದರಲ್ಲಿ "ಮೇರೆ ಸಪ್ನೊಂ ಕಿ ರಾಣಿ,ರೂಹಿ ರೂಹಿ"ಇದನ್ನು ಕೆ.ಎಲ್ ಸೈಗಲ್ ಅವರೊಂದಿಗೆ ಶಹಾಜಾನ್ (೧೯೪೬)ಚಿತ್ರದಲ್ಲಿ ಹಾಡಿದ್ದಾರೆ. ರಫಿ ಅವರು "ತೇರೆ ಖಿಲೊನಾ ಟೂಟಾ ಬಲಕ್"ಹಾಡನ್ನು ಮೆಹಬೂಬ್ ಖಾನ್ ಅವರಅನ್ ಮೋಲ್ ಘಡಿ (೧೯೪೬) ಮತ್ತು ಯುಗಳ ಗೀತೆಯೊಂದನ್ನು ನೂರ್ ಜಹಾನ್ ಅವರೊಂದಿಗೆ ೧೯೪೭ ರ ಚಿತ್ರಜುಗ್ನು ,ದಲ್ಲಿ "ಯಹಾ ಬದ್ಲಾ ವಫಾ ಕಾ" ಹಾಡಿಗೂ ಧ್ವನಿ ನೀಡಿದ್ದಾರೆ. ಭಾರತ ಪಾಕಿಸ್ತಾನ ಇಬ್ಬಾಗದ  ನಂತರ ರಫಿ ಭಾರತದಲ್ಲಿರಲು ನಿರ್ಧರಿಸಿ ತಮ್ಮ ಕುಟುಂಬವನ್ನು ಮುಂಬಯಿಗೆ ಸ್ಥಳಾಂತರಿಸಿದರು. ಅದೇ ರೀತಿ ನೂರ್ ಜಹಾನ್  ಪಾಕಿಸ್ತಾನಕ್ಕೆ ಕ್ಕೆ ಮರಳಿ ಹಾಡುಗಾರ ಅಹ್ಮದ್ ರಶ್ದಿವರೊಂದಿಗೆ ಜೋಡಿಯಾದರು.

ರಫಿ ಆಗಿನ ಹಲವು ಗಾಯಕರ ಪ್ರಭಾವಕ್ಕೊಳಗಾದರು.ಉದಾಹರಣೆಗೆ ಕೆ.ಎಲ್ ಸೈಗಲ್,ತಲತ್ ಮೆಹಮೂದ್ ಮತ್ತು ಅಧಿಕವಾಗಿ ಜಿ.ಎಂ ದುರಾನಿಯವರ ಶೈಲಿಗಳನ್ನು ಅವರ ಹಾಡುಗಳಲ್ಲಿ ಕೇಳಬಹುದಾಗಿದೆ. ಅವರು ತಮ್ಮ ಇಂತಹ ಮಾದರಿಗಳಲ್ಲಿ "ಹಮ್ಕೊ ಹಸ್ತೆ ದೇಖ್ ಜಮಾನಾ ಜಲತಾ ಹೈ (ಹಮ್ ಸಬ್ ಚೋರ್ ಹೈ, ೧೯೫೬)] ಮತ್ತು"ಖಬರ್ ಕಿಸಿ ಕೊ ನಹಿ, ವೊ ಕಿಧರ್ ದೇಖತೆ (ಬೆಕಸೂರ್, ೧೯೫೦), ಇತ್ಯಾದಿಗಳಲ್ಲಿ ತಮ್ಮನ್ನು ಪ್ರಭಾವಿಸಿದವರೊಂದಿಗೆ ಹಾಡಿದ್ದಾರೆ.
ಕುಟುಂಬದೊಡನೆ ರಫಿ

ರಫಿ ಅವರು ೧೯೪೫ ರಲ್ಲಿ ತಮ್ಮ ಸಂಭಂಧಿ ಬಶಿರಾ,ಅವರ ಸಂಕ್ಷಿಪ್ತವಾದ "ಮಾಝಿ"ಅವರನ್ನು ತಮ್ಮ ಹಳ್ಳಿಯಲ್ಲಿಯೇ ವಿವಾಹವಾದರು.ಅವರು ನಾಲ್ಕು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ಅವರು ಅತ್ಯಂತ ಶಿಸ್ತಿನ ವ್ಯಕ್ತಿ ಧಾರ್ಮಿಕ ಸ್ವಭಾವದ ಉತ್ತಮ ವ್ಯಕ್ತಿಯಾಗಿದ್ದರು  ಅವರು ಕುಟುಂಬದ ವ್ಯಕ್ತಿ,ಧ್ವನಿ ಮುದ್ರಣದ ಕೊಠಡಿಯಿಂದ ಅಲ್ಲಿನ ವರೆಗೂ ಅವರು ಶಿಸ್ತಿನ ಸಿಪಾಯಿ ಆಗಿದ್ದಾರೆ. ಅವರು ಚಲನಚಿತ್ರಗಳ ಸಮಾರಂಭಗಳಲ್ಲಿ ಭಾಗವಹಿಸುತ್ತಿರಲಿಲ್ಲ,ಅವರು ಧೂಮಪಾನ ಅಥವಾ ಮದ್ಯಪಾನ ಮಾಡುತ್ತಿರಲಿಲ್ಲ. ಅವರು ತಮ್ಮ ರಿಯಾಜ್ (ಸಂಗೀತ ಅಭ್ಯಾಸ)ವನ್ನು ಮುಂಜಾನೆ ೩ ರಿಂದ ೭ ರವರೆಗೆ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದರು. ಅವರ ಹವ್ಯಾಸಗಳೆಂದರೆ ಕೇರಮ್ ಮತ್ತು ಬ್ಯಾಂಡ್ಮಿಟನ್ ಮತ್ತು ಪತಂಗ ಹಾರಿಸುವಿಕೆ.  
ಸರ್ವಪಲ್ಲಿ ರಾಧಾಕೃಷ್ಣನ್  ರೊಂದಿಗೆ ರಫಿ
ತಮ್ಮ ೪೦ ವರ್ಷಗಳ ವೃತ್ತಿ ಜೀವನದಲ್ಲಿ ರಫಿ ಸುಮಾರು ೨೬,೦೦೦ ಚಲನಚಿತ್ರಗೀತೆಗಳಿಗೆ ಕಂಠದಾನ ಮಾಡಿದ್ದಾರೆ ಅವರ ಹಾಡುಗಳಲ್ಲಿ ಶಾಸ್ತ್ರೀಯದಿಂದ ಹಿಡಿದು ದೇಶಭಕ್ತಿ ಗೀತೆಗಳ ವರೆಗೆ ವಿಸ್ತರಿಸಿವೆ.ಕವಾಲಿಗಳಿಂದ ಹಿಡಿದು ಘಜಲ್ಸ್ ಮತ್ತು ಭಜನ್ಸ್ ಮತ್ತು ಮೃದು ಮಧುರ ಪ್ರೇಮ ಗೀತೆಗಳು ಅವರ ಪ್ರಮುಖ ಕೊಡುಗೆಗಳಾಗಿವೆ. ಅವರು ಹಿಂದಿ  ಮತ್ತು ಉರ್ದು  ಭಾಷೆಗಳಲ್ಲಿ ಅತ್ಯುತ್ತಮ ಹಿಡಿತ ಹೊಂದಿದ್ದರಿಂದ ಅವರಿಗೆ ಈ ವಿಭಿನ್ನತೆ ಸಾಧನೆ ಸಾಧ್ಯವಾಗಿದೆ. ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ,ಅದರಲ್ಲಿ  ಹಿಂದಿ ,ಕೊಂಕಣಿ,  ಉರ್ದು , ಭೋಜಪುರ್,ಒರಿಯಾ,ಬೆಂಗಾಲಿ, ಪಂಜಾಬಿ,ಮರಾಠಿ,ಸಿಂಧಿ, ಕನ್ನಡ,ಗುಜರಾತಿ, ,ಮಾಘಿ, ಮತ್ತು ಇನ್ನೂ ಹಲವಾರು ಭಾಷೆ  ಗಳಲ್ಲಿಯೂ ಕಂಠದಾನ ಮಾಡಿದ ಖ್ಯಾತಿ ಅವರದು. ಅವರು ಕೆಲವು ಇಂಗ್ಲೀಶ್ ಪರ್ಸಿಯನ್,  ಸ್ಪಾನಿಶ್  ಮತ್ತು ಡಚ್ ಹಾಡುಗಳನ್ನೂ ಧ್ವನಿ ಮುದ್ರಣ ಮಾಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಜುಲೈ ೨೪,೨೦೧೦ ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಅವರ ಧ್ವನಿ ಎಂದರೆ "ಸುಮಾರು೧೦೧ ಪ್ರಕಾರದಲ್ಲಿ "ಐ ಲೌ ಯು"ವನ್ನು ಒಂದೇ ಹಾಡಿನಲ್ಲಿ ಹೇಳಿಸಬೇಕೆಂದರೆ ಮೊಹಮ್ಮದ ರಫಿ ಅವುಗಳನ್ನೆಲ್ಲಾ ಬಲ್ಲರು ಎಂದು ವರ್ಣಿಸಿದೆ. ಅತ್ಯಂತ ಸಣ್ಣ ಪ್ರಕಾರದ ಮರಿ ಪ್ರೀತಿ,ಎಳೆಯ ವಯಸ್ಸಿನ ಅಪಕ್ವ ಪ್ರೇಮದ ರೋಮಾಂಚನ,ಯಾವುದೇ ನಿರೀಕ್ಷೆಗಳಿಲ್ಲದ ಪ್ರೀತಿಯ ತತ್ವ ಮತ್ತು ಹೃದಯ ಭಗ್ನವಾದ ದುರಂತ ಪ್ರೇಮ-ಹೀಗೆ ಯಾವುದನ್ನೂ ಅವರು ಸಮರ್ಪಕ ಭಾವಗಳಲ್ಲಿ ಅಭಿವ್ಯಕ್ತಿಗೊಳಿಸುವಲ್ಲಿ ಸಫಲರಾಗಿದ್ದಾರೆ. ಅದು ಬರೀ ಪ್ರೇಮವಲ್ಲ,ಅದು ಜೀವನದ ನವರಸಗಳ ಸಂಗಮವಿದ್ದಂತೆ ತೋರಿಸಿದ್ದಾರೆ-ವಿಫಲ ಕವಿಯೊಬ್ಬನ ಮರೆವುಗಳಿವೆ,ಕವಿಯೊಬ್ಬನ ಸಕ್ರಿಯ ಕ್ರಿಯಾಶೀಲತೆ ಇದೆ,ಓರ್ವ ಸಾಲದ ಹೊರೆಹೊತ್ತ ರೈತನೊಬ್ಬನ ನಿರಾಸೆ ಇದೆ,ಹೀಗೆ ಇವರೆಲ್ಲರ ಸೂಕ್ತ ಸಂದರ್ಭದ ಧ್ವನಿಯಾಗಿದ್ದಾರೆ.ರಫಿ ಅವರ ನಾಲ್ಕು ದಶಕಗಳ ಈ ವೃತ್ತಿ ಜೀವನವು ಪ್ರತಿ ಋತು ಮತ್ತು ಪ್ರತಿ ಕಾರಣಕ್ಕೂ ಸೂಕ್ತವಾಗಿತ್ತು."ಅವರು ೫ ನ್ಯಾಶನಲ್ ಅವಾರ್ಡ್ಸ್ ರಾಷ್ಟ್ರೀಯ ಪುರಸ್ಕಾರ ಮತ್ತು ಆರು ಬಾರಿ ಫಿಲಂ ಫೇರ್ ಅವಾರ್ಡ್ ಗೆ ಪಾತ್ರರಾಗಿದ್ದಾರೆ.  ೧೯೬೭ ರಲ್ಲಿ ಪಧ್ಮ ಶ್ರೀ  ಪ್ರಶಸ್ತಿಯನ್ನು ಭಾರತ ಸರ್ಕಾರ ರಫಿಯವರಿಗೆ ನೀಡಿ ಸತ್ಕರಿಸಿತು.
 ರಫಿಯವರ ವ್ರುತ್ತಿಬದ್ದತೆಗೆ  ಸಾಕ್ಷಿಯಾಗಿ ಹಲವಾರು ಘಟನೆಗಳು ನಡೆದಿದ್ದರೂ  ಲತಾ ಮಂಗೇಶ್ಕರ್ ಹಾಗು ರಫಿಯವರ ಈ ಘಟನೆ ಮರೆಯಲಾಗದ್ದು . ಇದು ಹಿಂದಿ ಚಿತ್ರರಂಗದ ಐತಿಹಾಸಿಕ ಘಟನೆಯಾಗಿ ಉಳಿದಿದೆ.
ಮೊಹಮದ್ ರಫಿ ಹಾಗು ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಆಗ ರಫಿಯ ಬೇಡಿಕೆ ಪರಿಗಣಿಸಿ ೧೯೬೨-೧೯೬೩ ರಲ್ಲಿ ತಮ್ಮ ಬೇಡಿಕೆಯಡಿ ತಮ್ಮ ರಾಜಧನದ ಪ್ರಮಾಣದ ಶೇಕಡಾ ೫ ರಷ್ಟರ ಪಾಲು ಕೇಳಲು ಅದೇ ಅರ್ಧದಷ್ಟು ಪಾಲು ಕೇಳಲು ಆಗ್ರಹಿಸಿದಾಗ ಅದು ಸಂಯೋಜಕರ ಗಲಿಬಿಲಿಗೆ ಕಾರಣವಾಗುತ್ತದೆ. ಲತಾ ಅವರ ಬೇಡಿಕೆ ಹಿನ್ನಲೆಯಲ್ಲಿ ಈ ಜೋಡಿ ಹಾಡಿಗಾಗಿ ಸಂಗೀತ ನಿರ್ದೇಶಕರುಗಳು ಅರ್ಧ ಸಂಭಾವನಾ ರಾಜಧನಕ್ಕೊಪ್ಪಬೇಕಲ್ಲದೇ ೫ ರ ಶೇಕಡಾವನ್ನು ಸಂಯೋಜನಕನ ಪಾಲಿಗಿರಲೆಂದು ಹೇಳಿದ್ದರು. ರಫಿ ಹೇಳುವಂತೆ ತಮ್ಮ ಹಾಡಿಗಾಗಿನ ಬೇಡಿಕೆಯ ಸಂಭಾವನೆ ನೀಡಿದ ಅನಂತರ ನಿರ್ಮಾಪಕ-ತಮ್ಮ ಜವಾಬ್ದಾರಿ ಕೊನೆಯಾಗುವುದೆಂದು ಹೇಳಿಕೆ ನೀಡಿದ್ದಾರೆ. ಅದರ ನಂತರ ಚಿತ್ರ ಯಶಸ್ಸಾದರೆ ಚಿತ್ರ ನಿರ್ಮಾಪಕನಿಗೆ ಉತ್ತಮ ಅದೃಷ್ಟ,ಅದಕ್ಕೆ ಗ್ರಾಮ್ಕೊ (HMV)ದ ಸಂಭಾವನೆಯನ್ನು ಅವರೇ ಪಡೆಯುವ ಅವಕಾಶ ಪಡೆಯುತ್ತಾರೆ.
ಒಂದು ಚಿತ್ರ ವಿಫಲವಾದರೆ ಈಗಾಗಲೇ ತಾನು ತನ್ನ ಹಾಡಿಗೆ ಸಂಭಾವನೆ ಪಡೆದಿದ್ದು ಹೀಗಾಗಿ ಚಿತ್ರ ನಿರ್ಮಾಪಕ ಮತ್ತು ತಾವು ಆ ಜವಾಬ್ದಾರಿ ಕಳೆದುಕೊಳ್ಳುತ್ತೇವೆ,ಎನ್ನುತ್ತಾರೆ. ರಫಿ ಹೇಳುವಂತೆ "ನಾವು ಹಿನ್ನಲೆ ಗಾಯಕರಾಗಿ ಹಾಡನ್ನು ಸೃಜಿಸಲಾರೆವು,ನಾವು ಕೇವಲ ಅದನ್ನು ಪರದೆ ಮೇಲೆ ಸಂಗೀತ ನಿರ್ದೇಶಕ ಹೇಳಿದಂತೆ ಮರು-ಸೃಷ್ಟಿ ಮಾಡುತ್ತೇವೆ. ನಾವು ಹಾಡುತ್ತೇವೆ,ಅವರು ಸಂಭಾವನೆ ನೀಡುತ್ತಾರೆ,ಅಲ್ಲಿಗೆ ನಮ್ಮಿಬ್ಬರ ಬದ್ದತೆ ಮುಗಿಯಿತು

ಲತಾ,ಈ ಹೇಳಿಕೆಯು ಸಂಭಾವನಾ ವಿಷಯದಲ್ಲಿ ಇದು ಅಸ್ಥಿರತೆಯನ್ನು ಹುಟ್ಟು ಹಾಕುತ್ತದೆ ಎನ್ನುತ್ತಾರೆ. ಲತಾ ಅವರು ನಂತರ ತಾವು ರಫಿಯೊಂದಿಗೆ ಹಾಡುವುದಿಲ್ಲ ಎಂದು ಹೇಳಿದರು,ಆದರೆ ರಫಿ ಒಬ್ಬರೇ ಆಗ ಲತಾ ಜೊತೆ ಹಾಡಲು ಉತ್ಸುಕತೆ ತೋರಿದ್ದರು. ಅದಾದ ನಂತರ ಎಸ್.ಡಿ ಬರ್ಮನ್ ಅವರ ಸಂಧಾನದ ಮೂಲಕ ತಮ್ಮ ನಿರ್ಧಾರ ಬದಲಿಸಿ ಜೊತೆಯಾಗಿ ಹಾಡಲು ಒಪ್ಪಿದರು.
ಮೋಹದ ರಫಿ  ಹಾಡುಗಳು ಇಂದಿಗೂ ಅಮರ.
ರಫಿ ಅವರು ಜುಲೈ೩೧,೧೯೮೦,ಗುರುವಾರ ರಾತ್ರಿ ೧೦:೫೦ ರ ಸುಮಾರು ಹೃದಯಾಘಾತಕ್ಕೊಳಗಾಗಿ ಮೃತರಾದರುಅವರ ಕೊನೆಯ ಹಾಡು "ಶ್ಯಾಮ್ ಫಿರ್ ಕ್ಯುಂವ್ ಉದಾಸ್ ಹೈ ದೋಸ್ತ್"(ಆಸ್ ಪಾಸ್ )ಇದಕ್ಕಾಗಿ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಅವರ ಹಾಡಿಗೆ ಧ್ವನಿ ನೀಡಿದ್ದು ತಮ್ಮ ಸಾವಿನ ಕೆಲವು ಗಂಟೆಗಳ ಮುಂಚೆ ಧ್ವನಿಮುದ್ರಣ ಮಾಡಿದ್ದರು. ಅವರು ನಾಲ್ವರು ಪುತ್ರರು (ಸಈದ್ ರಫಿ,ಖಲೀಲ್ ರಫಿ,ಹಮಿದ್ ರಫಿ,ಶಾಹಿದ್ ರಫಿ)ಮೂವರು ಪುತ್ರಿಯರಾದ (ಪರವೀನ್,ನಸ್ರೀನ್,ಯಾಸ್ಮಿನ್)ಮತ್ತು ೧೮ ಮೊಮ್ಮಕ್ಕಳನ್ನು ಅಗಲಿದ್ದಾರೆ.ಅಂದು ಭಾರತೀಯ ಸಂಗೀತ ರಂಗದಲ್ಲಿ ಒಂದು ಮರೆಯಲಾರದ ದ್ವನಿ ಅಸ್ತಂಗತವಾಯಿತು. ಆದರೆ ಅವರು ಹಾಡಿರುವ ಹಾಡುಗಳು ಪ್ರತಿಕ್ಷಣವೂ  ವಿಶ್ವದೆಲ್ಲೆಡೆ ಪ್ರಸರಿಸುತ್ತಾ ಅವರನ್ನು ಜೀವಂತವಾಗಿ ಇಟ್ಟಿವೆ. ರಫಿಯ ಬಗ್ಗೆ ಎಷ್ಟು ಬರೆದರೂ ಸಾಲದಷ್ಟು ಮಾಹಿತಿಗಳು ನಮ್ಮ ಸುತ್ತ ಹರಡಿವೆ. ರಫಿಯ ನೆನಪಲ್ಲಿ  ಅಂತರಜಾಲದಿಂದ  ಮಾಹಿತಿ ಹೆಕ್ಕಿ , ಚಿತ್ರಗಳನ್ನು ಗೂಗಲ್ ಸರ್ಚ್ ನಲ್ಲಿ ಇಳಿಸಿ, ವಿಕಿ ಪೀಡಿಯಾ ಸಹಕಾರ ಪಡೆದು  ಈ ಲೇಖನವನ್ನು ಭಟ್ಟಿ ಇಳಿಸಿದ್ದೇನೆ. ಇವರಿಗೆಲ್ಲಾ  ಕೃತಜ್ಞತೆಗಳು . ರಫಿಯನೆನಪಿನಲ್ಲಿ ಇವತ್ತು ರಫಿ ಹಾಡನ್ನು ಕೇಳುತ್ತಾ ಅಗಲಿದ ಭಾರತದ ನಕ್ಷತ್ರಕ್ಕೆಪ್ರೀತಿಯ  ನಮನ  ಸಲ್ಲಿಸೋಣ ಬನ್ನಿ
ಗೌರವ ಪ್ರಶಸ್ತಿಗಳು
  • ೧೯೪೮ - ರಫಿ ಅವರು ಭಾರತ ಪ್ರಧಾನಿ ಯವರಿಂದ  ಭಾರತದ ಮೊದಲ ಸ್ವಾತಂತ್ರ್ಯ ದಿನದಂದು ಬೆಳ್ಳಿ ಪದಕ ಪಡೆದರು
  • ೧೯೬೭ -  ಪಧ್ಮ ಶ್ರೀ  ಪುರಸ್ಕಾರ ಭಾರತ ಸರ್ಕಾರದಿಂದ  ನೀಡಲಾಯಿತು.
  • ೧೯೭೪ - ಫಿಲ್ಮ್ ವರ್ಲ್ಡ್ ಮ್ಯಾಗ್ಜಿನ್ ನಿಂದ ಬೆಸ್ಟ್ ಸಿಂಗರ್ ಅವಾರ್ಡ್ ನ್ನು "ತೇರೀ ಗಲಿಯೊಮೆ ನಾ ರಖೆಂಗೇ ಕದಮ್ ಆಜ್ ಕೆ ಬಾದ್" ಹಾಡಿಗೆ ಪ್ರಶಸ್ತಿ ಬಂತು (ಹವಸ್,೧೯೭೪).
  • ೨೦೦೧ - ರಫಿ ಅವರನ್ನು "ಸಹಸ್ರಮಾನದ ಅತ್ಯುತ್ತಮ ಗಾಯಕ" ಪ್ರಶಸ್ತಿಯನ್ನು ಮುಂಬಯಿನಲ್ಲಿನ ಹೀರೋ ಹೊಂಡಾ  ಮತ್ತು ಸ್ಟಾರ್ ಡಸ್ಟ್ ಮ್ಯಾಗ್ಜಿನ್ ಗಳು ಜನವರಿ ೭, ೨೦೦೧ರಲ್ಲಿ ನೀಡಿದವು. ರಫಿ ಈ ಜನಮತದಲ್ಲಿ ೭೦% ರಷ್ಟು ಮತ ಪಡೆದರು.
ರಾಷ್ಟ್ರೀಯ ಚಲನ ಚಿತ್ರ ಪುರಸ್ಕಾರ :

ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
೧೯೫೭ "ಜಿನ್ಹೆನಾ ನಾಜ್ ಹೈ ಹಿಂದ್ ಪಾರ್r" ಪ್ಯಾಸಾ ಸಚಿನ್ ದೇವ್ ಬರ್ಮನ್ ಸಾಹಿರ್ ಲಿಸಿಯಾನ್ವಿ
೧೯೬೪ "ಚಾಹೂಂಗಾ ಮೈ ತುಜೆ " ದೋಸ್ತಿ ಲಕ್ಷ್ಮೀಕಾಂತ್-ಪ್ಯಾರೇಲಾಲ್ ಮಜ್ರೂಹ್ ಸುಲ್ತಾನ್ ಪುರಿ
೧೯೬೬ "ಬಾಹಾರೋಂ ಫೂಲ್ ಬರಸಾವೊ" ಸೂರಜ್‌‌‌ ಶಂಕರ್ ಜೈಕಿಶನ್ Shailendra
೧೯೬೭] "ಬಾಬುಲ್ ಕಿ ದುವಾಯೆ" ನೀಲ್ ಕಮಲ್‌ ರವಿ ಸಾಹೀರ್ ಲುದಿಯಾನ್ವಿ
೧೯೭೭ "ಕ್ಯಾ ಹುವಾ ತೇರಾ ವಾದಾ" ಹಮ್ ಕಿಸಿಸಿಸೆ ಕಮ್ ನಹಿ ರಾಹುಲ ದೇವ್ ಬರ್ಮನ್ ಮಜ್ರೂಹ್ ಸುಲ್ತಾನ್ ಪುರಿ
ಫಿಲಂ ಫೇರ್ ಪ್ರಶಸ್ತಿಗಳು .:
ಕಿಶೋರ್ ಕುಮಾರ್ ಜೊತೆ ರಫಿ ಸಲ್ಲಾಪ !!!!

ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
೧೯೬೦ "ಚೌದಹ್ವೀಂ ಕಾ ಚಾಂದ್ ಹೊ" "ಚೌದಹ್ವೀಂ ಕಾ ಚಾಂದ್ " ಬಾಂಬೆ ರವಿ ಶಕೀಲ್ ಬದಾಯೂನಿ
೧೯೬೧ "ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ" ಸಸುರಾಲ್ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೪ "ಚಾಹೂಂಗಾ ಮೈ ತುಝೆ" ದೋಸ್ತಿ ಲಕ್ಷ್ಮೀಕಾಂತ-ಪ್ಯಾರೆಲಾಲ್ ಮಜ್ರೂಹ್ ಸುಲ್ತಾನ್ ಪುರಿ
೧೯೬೬ "ಬಹಾರೋ ಫೂಲ್ ಬರಸಾವೊ" ಸೂರಜ್‌‌‌ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೮ "ದಿಲ್ ಕೆ ಝರೋಂಕೆ ಮೆ" ಬ್ರಹ್ಮಚಾರಿ ಶಂಕರ್ ಜೈಕಿಶನ್ ಶೈಲೇಂದ್ರ
೧೯೭೭ "ಕ್ಯಾ ಹುವಾ ತೇರಾ ವಾದಾ" ಹಮ್ ಕಿಸಿಸೆ ಕಮ್ ನಹಿ ರಾಹುಲ ದೇವ್ ಬರ್ಮನ್ ಮಜ್ರೂಹ್ ಸುಲ್ತಂಪುರಿ
ನಾಮನಿರ್ದೇಶಿತಗೊಂಡಿದ್ದು :
ವರ್ಷ ಹಾಡು (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
1961 "ಹುಸ್ನವಾಲೇ ತೇರಾ ಜವಾಬ್ ನಹೀ" ಘರಾನಾ ರವಿ ಶಕೀಲ್ ಬದಾಯುನಿ
1962 "ಏ ಗುಲಾಬದನ್ ಏ ಗುಲಾಬದನ್" ಪ್ರೊಫೆಸರ್ ಶಂಕರ್ ಜೈಕಿಶನ್ ಶೈಲೇಂದ್ರ
1963 "ಮೇರೆ ಮೆಹಬೂಬ್ ತುಝೆ" ಮೇರೆ ಮೆಹಬೂಬ್ ನೌಶಾದ್ ಶಕೀಲ್ ಬದಾಯುನಿ
1965 "ಛೂ ಲೇನೆ ದೊ ನಾಜುಕ್ ಹೋಂಟೋಂಕೊ" ಕಾಜಲ್ ರವಿ
೧೯೬೮ "ಮೈ ಗಾಂವೂ ತುಮ್ ಸೋ ಜಾವೊ" ಬ್ರಹ್ಮಚಾರಿ ಶಂಕರ್ ಜೈಕಿಶನ್ ಶೈಲೇಂದ್ರ
೧೯೬೯ "ಬಡಿ ಮಸ್ತಾನಿ ಹೈ" ಜೀನೆ ಕಿ ರಾಹ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೦ "ಖಿಲೋನಾ, ಜಾನ್ ಕರ್" ಖಿಲೋನಾ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೩ "ಹಮ್ ಕೊ ತೊ ಜಾನ್ ಸೆ ಪ್ಯಾರಿ" ನೈನಾ ಶಂಕರ್ ಜೈಕಿಶನ್ ಹಸರತ್ ಜೈಪುರಿ
೧೯೭೪ "ಅಚ್ಛಾ ಹೀ ಹುವಾ ದಿಲ್ ಟೂಟ್ ಗಯಾ" ಮಾ ಬಹೆನ್ ಓರ್ ಬೀವಿ ಶಾರದಾ ಖಮರ ಜಲಾಲಾಬಾದಿ, ವೇದ್ಪಾಲ್ ವರ್ಮಾ
೧೯೭೭ "ಪರ್ಧಾ ಹೈ ಪರ್ಧಾ" ಅಮರ್ ಅಕ್ಬರ್ ಅಂತೋನಿ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೮ "ಆದಮೀ ಮುಸಾಫಿರ್ ಹೈ" ಅಪ್ನಾಪನ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೭೯ "ಚಲೋ ರೇ ಡೋಲಿ ಉಠಾವೊ ಕಹಾರ್" ಜಾನಿ ದುಶ್ಮನ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ವರ್ಮಾ ಮಲಿಕ್
೧೯೮೦ "ಮೇರೆ ದೋಸ್ತ್ ಕಿಸ್ಸಾ ಯೆಹೆ" ದೋಸ್ತಾನಾ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೮೦ "ದರ್ದ್-ಎ-ದಿಲ್ ದರ್ದ್-ಎ-ಜಿಗರ್" ಕರ್ಜ್ ಲಕ್ಷ್ಮಿಕಾಂತ್-ಪ್ಯಾರೆಲಾಲ್ ಆನಂದ್ ಭಕ್ಷಿ (/೦}
೧೯೮೦ "ಮೈನೆ ಪೂಛಾ ಚಾಂದ್ ಸೆ" ಅಬ್ದುಲ್ಲ್ಹಾ ರಾಹುಲ ದೇವ್ ಬರ್ಮನ್ ಆನಂದ್ ಭಕ್ಷಿ (/೦}
ಇತರ ಪ್ರಶಸ್ತಿಗಳು :
ವಿಜೇತ
ವರ್ಷ (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ
1957 ತುಮ್ಸಾ ನಹಿ ದೇಖಾ   ಓ.ಪಿ.ನಯ್ಯರ್ ಮಜ್ರೂಹ್ ಸುಲ್ತಂಪುರಿ
೧೯೬೫ ದೋಸ್ತಿ ಲಕ್ಷ್ಮಿಕಾಂತ-ಪ್ಯಾರೆಲಾಲ್ ಮಜ್ರೂಹ್ ಸುಲ್ತಂಪುರಿ
೧೯೬೬ ಆರ್ಜೂ ಶಂಕರ್ ಜೈಕಿಶನ್ ಹಸರತ್ ಜೈಪುರಿ
 
ಸುರ್ ಶೃಂಗಾರ್ ಪ್ರಶಸ್ತಿ 
ವಿಜೇತ
ವರ್ಷ (ಚಿತ್ರೀಕರಣ) ಸಂಗೀತ ನಿರ್ದೇಶಕ ಗೀತರಚನಕಾರ



1964ಚಿತ್ರಲೇಖಾರೋಶನ್
ಸಾಹಿರ್ ಲುಧಿಯಾನ್ವಿ    

Sunday, December 11, 2011

ಕನ್ನಡ ಚಿತ್ರರಂಗದ ಪ್ರಯೋಗ ಶೀಲ ಸಂಗೀತ ನಿರ್ದೇಶಕ ಜಿ.ಕೆ.ವಿ.ನಿಮಗೆ ಗೊತ್ತೇ ???




ಜಿ . ಕೆ .ವಿ .

ಮೊನ್ನೆ ಹಾಗೆ ಹಳೆಯ ಚಿತ್ರಗೀತೆ ಕೇಳುತ್ತಿದ್ದೆ , "ಆಗದು ಎಂದು ಕೈಲಾಗದು ಎಂದೂ ಕೈಕಟ್ಟಿ ಕುಳಿತರೆ" ಹಾಡು ಬರುತ್ತಿತ್ತು , ಪಕ್ಕದಲ್ಲಿ ಕುಳಿತಿದ್ದ ನನ್ನ ಮಗ [ ಆಧುನಿಕ ಸಂಗೀತ ಪ್ರಿಯ ] ಕೇಳಿದ, ಅಪ್ಪ... ಈ ಹಾಡಿನ ಸಂಗೀತ ಚೆನ್ನಾಗಿದೆ ಮ್ಯೂಸಿಕ್ ಕಂಪೋಸರ್ ಯಾರು ಅಂತಾ ಕೇಳಿದ. ನನಗೂ ಅಚ್ಚರಿಯಾಗಿ ಆ ಸಂಗೀತ ನಿರ್ದೇಶಕರ ಹೆಸರು ಹೇಳಿ ಈ ಹಾಡಿನ ಸಂಗೀತ ಯಾಕೆ ಇಷ್ಟ ಆಯ್ತು? ಎಂದೇ , ಅದಕ್ಕೆ ಅವನು ಈ ಹಾಡನ್ನು ಟಿ.ವಿ.ಯಲ್ಲಿ ನೋಡಿದ್ದೇ ಅಲ್ಲಿನ ದೃಶ್ಯಗಳಲ್ಲಿ ಬರುವ ಮೆಷಿನ್ ಶಬ್ಧಗಳನ್ನೂ ಹಾಡಿಗೆ ಪೂರಕವಾಗುವಂತೆ ಸಂಗೀತದಲ್ಲಿ ನುಡಿಸಿ ಹಾಡಿನಲ್ಲಿ ತಂದಿದ್ದಾರೆ ,ಆ ಹಾಡಿನ ದೃಶ್ಯಕ್ಕೂ ಸಂಗೀತಕ್ಕೂ ಬಹಳ ಹೊಂದಾಣಿಕೆ ಇದೆ ಅದಕ್ಕೆ ಅವತ್ತಿನಿಂದ ಈ ಹಾಡಿನ ಸಂಗೀತಗಾರ ಯಾರು ಎಂಬ ಬಗ್ಗೆ ಕುತೂಹಲ ಇತ್ತು ಅದಕ್ಕೆ ಕೇಳಿದೆ ಅಂದಾ ....!
ಇವತ್ತಿನ ಪೀಳಿಗೆಗೆ ಆ ಅದ್ಭುತ  ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಾರದು ,ಆದರೆ ಹಾಡಿನ ಪರಿಚಯವಂತೂ ಇದ್ದೆ ಇರುತ್ತದೆ . ಆದರೆ ನಿಮಗೆ ತಿಳಿದಿರಬಹುದು ಈ ವ್ಯಕ್ತಿಯ ಬಗ್ಗೆ  ಸ್ವಲ್ಪ ಕ್ಲೂ ಬೇಕಾ ???  ೧] ಕನ್ನಡ ಚಿತ್ರ ರಂಗದಲ್ಲಿ  ಭೀಮ್ ಸೇನ್ ಜೋಷಿ , ಬಾಲ ಮುರಳಿ ಕೃಷ್ಣ , ಮನ್ನಾಡೆ, ಜೇಸುದಾಸ್, ಸುಮನ್ ಕಲ್ಯಾಣ್ ಪುರ್  ರಂತಹ ದಿಗ್ಗಜಗಳಿಂದ     ಕನ್ನಡ  ಚಿತ್ರಗಳಲ್ಲಿ ಹಾಡು ಹೇಳಿಸಿದ   ಸಾಹಸಿ,
೨] ಡಾ./.ರಾಜ್ ಕುಮಾರ್ ಸಾಮಾನ್ಯ ನಟ ಆಗಿದ್ದ ಕಾಲದಲ್ಲಿ ಅವರ ಪ್ರತಿಭೆಗೆ ಮಾರುಹೋಗಿ  "ಸಂಪತ್ತಿಗೆ ಸವಾಲ್ ", "ಮಹಿಷಾಸುರ ಮರ್ಧಿನಿ" ಚಿತ್ರಗಳಿಗಿಂತ ಮೊದಲೇ ಹಾಡನ್ನು ಹಾಡಿಸಿದ ಪ್ರಯೋಗ ಶೀಲ,
೩} ಸಂಗೀತ ನಿರ್ದೇಶನದ ಜೊತೆಗೆ  ಕನ್ನಡ ಭಾಷೆಯ ಚೆಲುವಿಗೆ ಸೋತು ತಾನು ಕನ್ನಡ ಹಾಡನ್ನು ಹಾಡಿ, ಆ ಸುಂದರ ಹಾಡುಗಳು ಇಂದಿಗೂ ಜನಮನದಲ್ಲಿ ನಿಲ್ಲುವಂತೆ ಮಾಡಿದ  ಛಲವಾದಿ ವ್ಯಕ್ತಿ.
 ೪] ಕನ್ನಡ ದಲ್ಲಿ ನಿರ್ಮಾಣವಾದ ಬಾಂಡ್ ಚಿತ್ರಗಳಿಗೆ  ವಿದೇಶಿ  ಸಂಗೀತ ಸಾಧನಗಳ ಮೂಲಕ ಸಂಗೀತ ನೀಡಿದ ಸಂಗೀತ ನಿರ್ದೇಶಕ.
ಈಗ ಗೊತ್ತಾಗಿರಬೇಕು ???  ಆಲ್ವಾ  !!!!  ಅಯ್ಯೋ ಗೊತಾಗ್ಲಿಲ್ವಾ ???ಹೋಗ್ಲಿ ಬಿಡಿ  ಕೊನೆಯದಾಗಿ  ಒಂದು ಕ್ಲೂ ........................................!!
೪]ಕನ್ನಡ ಚಿತ್ರ ಒಂದಕ್ಕೆ ಅಗತ್ಯ ವಿದ್ದ ಶಹನಾಯಿ ವಾದನಕ್ಕೆಈ ದೇಶದ  ಖ್ಯಾತ ಶಹನಾಯಿ ವಾದಕರಾದ  ಉಸ್ತಾದ್ ಬಿಸ್ಮಿಲ್ಲಾ ಖಾನ್ ರವರನ್ನು ಕರೆತಂದು  ಅವರ ಸಂಗೀತ ಮಾಂತ್ರಿಕತೆಯನ್ನು ಕನ್ನಡಿಗರಿಗೆ ಪರಿಚಯಿಸಿದ ಮಾಂತ್ರಿಕ.

ಜಿ.ಕೆ ವೆಂಕಟೇಶ್

 ಅದ್ಭತ ಗಾಯಕಿ ಸುಮನ್ ಕಲ್ಯಾಣ್ ಪೂರ್

ಅದ್ಭುತ ಗಾಯಕ ಮನ್ನಾ ಡೇ

ಪಂಡಿತ್ ಭೀಮ್ ಸೇನ್ ಜೋಷಿ 
ಕರ್ನಾಟಕ ಸಂಗೀತ ದಿಗ್ಗಜ  ಬಾಲ ಮುರಳಿ ಕೃಷ್ಣ  
ಉಸ್ತಾದ್ ಬಿಸ್ಮಿಲ್ಲಾ ಖಾನ್
ಈಗ ಗೊತ್ತಾಗಿರುತ್ತೆ ಬಿಡಿ !! ಹೌದು  ನಿಮ್ಮ ಅನಿಸಿಕೆ ಸರಿ  ನಾನು ಈಗ ಬರೆಯಲು ಹೊರಟಿರುವುದು ಕನ್ನಡ ಚಿತ್ರ ರಂಗದ ಒಬ್ಬ  ಮಹಾನ್  ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಬಗ್ಗೆ . ಹೌದು ನಾನು ಬಾಲ್ಯ ದಿಂದಲೂ ಕನ್ನಡ ಚಿತ್ರ ರಂಗದ ಬಹಳಷ್ಟು ಹಾಡುಗಳನ್ನು ರೇಡಿಯೋ ದಲ್ಲಿ ಕೇಳುತ್ತಾ ಬೆಳೆದವನು.ಚಿಕ್ಕವನಿದ್ದಾಗಿನಿಂದಲೂ  ಇವರ ಸಂಗೀತದ ಹಾಡುಗಳು ನನ್ನ ಗಮನ ಸೆಳೆಯುತ್ತಿದ್ದವು. "ಸಂಧ್ಯಾ ರಾಗದ  ಈ ಪರಿಯ ಸೊಬಗು " " ದೂರದ ಬೆಟ್ಟದ ಪ್ರೀತಿನೆ ಆ ದ್ಯಾವ್ರು ತಂದಾ " "ಬಂಗಾರದ ಮನುಷ್ಯದ  ಎಲ್ಲಾ ಹಾಡುಗಳು  " ಭೂತಯ್ಯನ ಮಗ ಅಯ್ಯು , ಕಸ್ತೂರಿ ನಿವಾಸ, ಹಾಲು ಜೇನು, ಸನಾದಿ  ಅಪ್ಪಣ್ಣ  ,ಸಂಪತ್ತಿಗೆ ಸವಾಲು,  ಚಿತ್ರದ  ಎಲ್ಲಾ ಹಾಡುಗಳು   ಇನ್ನೂ ಬಹಳಷ್ಟು    ನನ್ನ ಅಚ್ಚುಮೆಚ್ಚಿನ ಹಾಡುಗಳಾಗಿ ಉಳಿದವು ಹಾಗು ಇಂದಿಗೂ ಉಳಿದಿವೆ.   ಬನ್ನಿ ಜಿ.ಕೆ.ವೆಂಕಟೇಶ್ ಬಗ್ಗೆ ತಿಳಿಯೋಣ.                                                                                                                    ಗುರ್ಜದ ಕೃಷ್ಣದಾಸ ವೆಂಕಟೇಶ [ ಜಿ.ಕೆ.ವೆಂಕಟೇಶ್ ಮೂಲ ಹೆಸರು ] ಮೂಲತಃ  ತೆಲುಗಿನವರು, ೨೧-೦೯-೧೯೨೭ ರಲ್ಲಿ ಜನನ , ಚಿಕ್ಕ ವಯಸ್ಸಿನಲ್ಲಿ ತನ್ನ ಅಣ್ಣ ಜಿ.ಕೆ.ಎಸ.ಪತಿ ಅವರಿಂದ ವೀಣಾ ವಾದನ ಕಲಿಕೆ , ನಂತರ  ಮುಂದಿನ ವರ್ಷಗಳಲ್ಲಿ ಸಹ ವೀಣಾ ವಾದಕರಾಗಿ S. V. ವೆಂಕಟರಮನ್ , S. M. ಸುಬ್ಬಯ್ಯ  ನಾಯ್ಡು and C. R. ಸುಬ್ಬುರಾಮನ್ .     ಮುಂತಾದವರಿಗೆ  ಸಾಥ್ ನೀಡಿ ಸಂಗೀತದ ಗರಡಿಯಲ್ಲಿ ಪಳಗಿದರು. ನಂತರ ಒಳ್ಳೆಯ ಹಾಡುಗಾರರೂ ಆಗಿ ತಯಾರಾದ ಕಾರಣ  ಆಕಾಶವಾಣಿ ಯಲ್ಲೂ        ಸಹ ಇವರು ಗಾಯಕರಾಗಿ ಹಾಡಿದ್ದರು . ಆ ನಂತರದ ದಿನಗಳಲ್ಲಿ ಎಂ.ಎಸ.ವಿಶ್ವನಾಥನ್ ,  ಎಸ.ಎಂ ಸುಬ್ಬಯ್ಯ ನಾಯ್ಡು  ಮುಂತಾದ ಗೆಳೆಯರ ಗರಡಿಯಲ್ಲಿ ಸಿನಿಮಾಗಳಿಗೆ ರಾಗ ಸಂಯೋಜನೆ ಕೆಲಸ ಕಲಿತರು . ನಂತರ ತಾವೇ ಸಂಗೀತ ನಿರ್ದೇಶನಕ್ಕಿಳಿದು  ೧೯೫೨ ರಲ್ಲಿ ಮಲಯಾಳಂ ಭಾಷೆಯಲ್ಲಿ ತಯಾರಾಗಿ ತಮಿಳಿಗೆ ಡಬ್ ಆದ   "ನಡಿಗೈ"    ಚಿತ್ರಕ್ಕೆ ಮೊದಲ ಸಂಗೀತ ನಿರ್ದೇಶಿಸಿದರು  , ಮುಂದೆ ೧೯೫೫ ರಲ್ಲಿ  ಡಾ// ರಾಜ್ ಕುಮಾರ್ ಅಭಿನಯದ   "ಸೋದರಿ"      ಚಿತ್ರಕ್ಕೆ ಸ್ವರ ಸಂಯೋಜನೆ ಮಾಡಿದರು  ಎರಡನೇ ಪ್ರಯತ್ನ ಯಶಸ್ವಿಯಾಗಿ ಕನ್ನಡ ಜನರ ಮನಸ್ಸಿಗೆ ಹತ್ತಿರವಾದರು. ಮುಂದೆ ಅದೇ ವರ್ಷ " ಓಹಿಲೇಶ್ವರ  '' ಎಂಬ ಚಿತ್ರದ ಸಂಗೀತ ನೀಡುವ ಅವಕಾಶ ಸಿಕ್ಕಿತು  ಆ ಚಿತ್ರದಲ್ಲಿ ಅಂದರೆ ೧೯೫೫ ರಲ್ಲೇ  ರಾಜಕುಮಾರ್   ಕಂಪನಿ ನಾಟಕದ  ಕಲಾವಿದರಾದ ಕಾರಣ ಹಾಡುಗಾರಿಕೆ   ಇದ್ದೆ ಇರುತ್ತದೆ ಎಂಬ  ಉತ್ಸಾಹದಿಂದ ರಾಜಕುಮಾರ್ ರವರ  ದ್ವನಿಯಲ್ಲಿ "   ಶರಣು "    ಎಂಬ ಭಕ್ತಿ ಪ್ರಧಾನ  ಗೀತೆಯನ್ನು ಹಾಡಿಸಿದರು. ಇದು ರಾಜಕುಮಾರ  ಬದುಕಿನಲ್ಲಿ ಪ್ರಥಮವಾಗಿ ಕನ್ನಡ ಚಿತ್ರರಂಗದ ಲ್ಲಿ  ಚಿತ್ರದಲ್ಲಿ ನಟಿಸಿದ ಜೊತೆಗೆ ಹಾಡಿದ  ಗಾಯಕ  ಎಂಬ ಇತಿಹಾಸಕ್ಕೆ ನಾಂದಿಯಾಯಿತು.                                                                                                                                     [ http://www.raaga.com/player4/?id=170399&mode=100&rand=0.5298554935387211 ]  ರಲ್ಲಿ ಈ ಹಾಡನ್ನು ಕೇಳಬಹುದು. 


 ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಲ್ಲಿ  ತನ್ನ ಪ್ರತಿಭೆ  ಮೆರೆದ  ಜಿ.ಕೆ.ವೆಂಕಟೇಶ್  , ಟಿ. ಜಿ.ಲಿಂಗಪ್ಪ, ವಿಜಯ ಭಾಸ್ಕರ್  ರವರೊಂದಿಗೆ  ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಅಂದಿನ ದಿನಗಳಲ್ಲಿ  ಪಿ.ಬಿ. ಶ್ರೀನಿವಾಸ್  ರಂತ  ಹೊಸ ಗಾಯಕರನ್ನು  ಹೆಚ್ಚು ಅವಕಾಶ ನೀಡಿ  ಬೆಳಸಿದ ಜಿ.ಕೆ.ವೆಂಕಟೇಶ್  , ಕನ್ನಡದಲ್ಲಿ ತಯಾರಾದ   ಜೇಮ್ಸ್ ಬಾಂಡ್ ಶೈಲಿಯ           ಚಿತ್ರಗಳಿಗೆ   ಆಧುನಿಕ ವಾಧ್ಯಗಳೊಂದಿಗೆ  ಸಂಗೀತ ನೀಡಿ ದರು.  ಇಂತಹ ಪ್ರಯೋಗಕ್ಕೆ ಕನ್ನದಲ್ಲಿ ಬಹಳ ಪ್ರೋತ್ಸಾಹ ಸಿಕ್ಕಿತು.  ಆ ದಿನಗಳಲಿ  ವಿಶ್ವಾದ್ಯಂತ  ಪ್ರಸಿದ್ದಿ ಹೊಂದಿದ್ದ "ಬೀಟಲ್ಸ್ "     ಹಾಡಿನ ಕಡೆ  ಯುವಕರು ಮುಖ ಮಾಡಿದ್ದನ್ನು ಕಂಡು ಕನ್ನಡ ದಲ್ಲಿ ತಾವೂ ಸಹ ಪ್ರಯೋಗ ಮಾಡಿ   ಡಾ// ರಾಜಕುಮಾರ್ ಅಭಿನಯಿಸಿದ  ಲಗ್ನ ಪತ್ರಿಕೆ ಎಂಬ  ಹಾಸ್ಯ ಚಿತ್ರದಲ್ಲಿ ಸೀನು ಸುಬ್ಬು  ಹಾಡನ್ನು  ವೇಗವಾಗಿ ಹಾಡಿಸಿ ಕೇಳಲು ಇಂಗ್ಲೀಷಿನ  ಬೀಟಲ್ಸ್  ತಂಡದ ಹಾಡಿನಂತೆ  ತಯಾರುಮಾಡಿ ಕೊಟ್ಟು ಗೆದ್ದರು ಇವತ್ತಿಗೂ ಈ ಹಾಡು ವೇಗವಾಗಿ   ಹಾಡಲಾದ  ಕನ್ನಡ ಪಾಪ್   ಹಾಡು , ಹೀಗೆ ಪ್ರಯೋಗ ಮಾಡುತ್ತಾ ಜಿ.ಕೆ.ವೆಂಕಟೇಶ್   ಬಹಳಷ್ಟು ಹಿಟ್  ಗೀತೆಗಳನ್ನು ನೀಡಿದ್ದಾರೆ. ೧೯೫೫ ರ ವರ್ಷದಲ್ಲಿ   ಸಂಗೀತ ನೀಡಿದ ಕನ್ನಡ ದ  ಸೋದರಿ  ಚಿತ್ರದಿಂದ ೧೯೮೫  ರಲ್ಲಿ  ಅಂತಿಮವಾಗಿ  ಸಂಗೀತ ನೀಡಿದ  ಅದೇ ಕಣ್ಣು  ಚಿತ್ರದ ವರೆಗೆ   ಕನ್ನಡ ಚಿತ್ರ ರಂಗದಲ್ಲಿ ಸಂಗೀತ  ದಿಗ್ಗಜರಾಗಿ ಮೆರೆದು  ಅರವತ್ತೊಂದು  ಕನ್ನಡ ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿ  ಕನ್ನಡಕ್ಕೆ ಮಧುರ ಹಾಡುಗಳ ಕೊಡುಗೆ ನೀಡಿದ್ದಾರೆ.

ಮತ್ತೊಂದು ವಿಶೇಷ ಅಂದರೆ  ಕನ್ನಡದಲ್ಲಿ ಸಂಗೀತ ನೀಡಿದ ಮೊದಲ ಚಿತ್ರ ಹಾಗು ಕೊನೆಯ ಚಿತ್ರ ಎರಡೂ ಡಾ// ರಾಜಕುಮಾರ್  ರವರ ಚಿತ್ರಗಳೇ ಆಗಿದ್ದು  ಇತಿಹಾಸ, ಮತ್ತೊಂದು  ವಿಚಾರ ಡಾ// ರಾಜಕುಮಾರ್ ರವರಲ್ಲಿನ ಗಾಯಕನನ್ನು  ಪ್ರಥಮವಾಗಿ , ಓಹಿಲೇಶ್ವರ  ಚಿತ್ರದಲ್ಲಿ, ನಂತರ  ಎಸ. ಜಾನಕಿಯವರ ಜೊತೆ  ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ  "ತುಂಬಿತು ಮಾನವ " ' ಹಾಡಿನಲ್ಲಿ,
ಯಾರೇ ಕೂಗಾಡಲಿ ಅಂತಾ ಹಾಡಿದರು ರಾಜಕುಮಾರ್

ಮೂರನೆಯದಾಗಿ ಸಂಪತ್ತಿಗೆ ಸವಾಲ್  ಚಿತ್ರದ ಯಾರೇ ಕೂಗಾಡಲಿ ಹಾಡಿನ ಮೂಲಕ [ ಈ ಹಾಡನ್ನು ಹಾಡಲು  ಪಿ.ಬಿ.ಶ್ರೀನಿವಾಸ  ರವರು ನಿರಾಕರಿಸಿದ ಕಾರಣ  , ಈ ಹಾಡಿನಲ್ಲಿ  ನಾಯಕ ನಟ ರಾಜ್ ಕುಮಾರ್  ರವರಿಗೆ  ಈ ಹಾಡಿನಿಂದ  ಅವಮಾನವಾಗಬಾರದು  ಎಂಬ ಕಾರಣವೆಂದು ಹೇಳುತ್ತಾರೆ ] ಗಾಯಕನ ಪಟ್ಟ ಒದಗಿಸಿದರು. ಕನ್ನಡ ಚಿತ್ರಗಳಲ್ಲಿ ಹಲವು ಬಗೆಯ ಪ್ರಯೋಗ ಮಾಡಿ ಯಶಸ್ವಿಯಾದರು . ಸಂಧ್ಯಾ ರಾಗದಲ್ಲಿ "ಪಂಡಿತ್ ಭೀಮಸೇನ್ ಜೋಷಿ,"        " ಗಾನ ಗಾರುಡಿಗ  ಬಾಲಮುರಳಿ ಕೃಷ್ಣ "  , ಸನಾದಿ ಅಪ್ಪಣ್ಣ ಚಿತ್ರದಲ್ಲಿ  ಚಿತ್ರದ ನಾಯಕ ನಟನ  ಅಭಿನಯಕ್ಕೆ ಪೂರಕವಾಗ ಬೇಕೆಂಬ ಕಾರಣದಿಂದ  "ಉಸ್ತಾದ್ ಬಿಸ್ಮಿಲ್ಲಾ ಖಾನ್ "     ಕಲಾವತಿ ಚಿತ್ರದಲ್ಲಿ  ಪ್ರಸಿದ್ದ ಗಾಯಕರಾದ  " ಮನ್ನಾಡೆ "   , ಸುಮನ್ ಕಲ್ಯಾಣ್ ಪೂರ್ ,  ಶಂಕರ್ ಸುಂದರ್ ಚಿತ್ರಕ್ಕೆ ಯೇಸುದಾಸ್  ರಂತಹ ಮಹಾನ್ ಗಾಯಕರನ್ನು ಕರೆಸಿ ಕನ್ನಡ ಚಿತ್ರಗಳಲ್ಲಿ ಹಾಡಿಸಿದ  ಪ್ರಯೋಗ ಶೀಲ ಸಂಗೀತ ನಿರ್ದೇಶಕ ಇವರಾದರು.   ಬನ್ನಿ ಇವರ  ಕೆಲವು ಹಿಟ್ ಹಾಡುಗಳ ಪರಿಚ ಮಾಡಿಕೊಳ್ಳೋಣ
  
ಜಿ.ಕೆ.ವೆಂಕಟೇಶ್ 

  • ಆಹಾ  ಮೈಸೂರು  ಮಲ್ಲಿಗೆ  , [ಬಂಗಾರದ  ಮನುಷ್ಯ ]
  • ಆಡಿಸಿ  ನೋಡು , ಬೀಳಿಸಿ  ನೋಡು  [ಕಸ್ತೂರಿ ನಿವಾಸ]
  • ಎಲ್ಲಿ  ಮರೆಯಾದೆ  ,[ಭಕ್ತ  ಕುಂಬಾರ]  
  • ಪ್ರೀತಿನೆ  ಆ  ದ್ಯಾವ್ರು  ತಂದ  ಆಸ್ತಿ  ನಮ್ಮ  ಬಾಳಿಗೆ  ,[ ದೂರದ ಬೆಟ್ಟ] [ ಈ ಹಾಡಿನಲ್ಲಿ  ಕುಲುಮೆಯಲ್ಲಿ ಕಬ್ಬಿಣ ಕುಟ್ಟುವ ಶಬ್ದವನ್ನು ಹಾಡಿಗೆ ಪೂರಕವಾಗಿ ಬಳಸಲಾಗಿದೆ ]
  • ಕನ್ನಡದಾ  ಮಕ್ಕಳೆಲ್ಲ  ಒಂದಾಗಿ  ಬನ್ನಿ  , [ಕಣ್ತೆರೆದು ನೋಡು,]
  • ಇಳಿದು  ಬಾ  ತಾಯಿ , [ಅರಿಸಿನ  ಕುಂಕುಮ]  
  • ರವಿವರ್ಮನ  ಕುಂಚದ   ಕಲೆ ,  [ಸೊಸೆ  ತಂದ  ಸೌಭಾಗ್ಯ]  
  • If you come today, it's too early ,  [ಆಪರೇಷನ್  ಡೈಮಂಡ್ ರಾಕೆಟ್]
  • ಬಾಳು  ಬೆಳಕಾಯಿತು  ,  [ಹಾಲು  ಜೇನು]
  • ನಿನದೆ  ನೆನಪು  ದಿನವು  ಮನದಲ್ಲಿ  , [ರಾಜ  ನನ್ನ  ರಾಜ] 
  • ರಾಧಿಕೆ ನಿನ್ನ ಸರಸ ಇದೇನೇ [ತಂದೆ ಮಕ್ಕಳು ]  [ ಈ ಹಾಡು ಮೂಲತಃ ಹಿಂದಿಯ ಬೇಟಿ ಬೀಟಾ ಚಿತ್ರದದ್ದಾದರೂ  ಅಲ್ಲಿನ ಹಾಡು ರಾಧೀಕೆ ತೆರೆ ಬಾನ್ಸುರಿ  ಹಾಡನ್ನು ಮಹಮದ್ ರಫಿ ಹಾಡಿದ್ದರು ಅದರಿಂದ ಸ್ಪೂರ್ತಿಗೊಂಡು ಅದೇ ಶೈಲಿಯಲ್ಲಿ  ಎ.ಪಿ.ಬಾಲಸುಬ್ರಮಣ್ಯಂ ರವರಿಂದ  ಹಾಡಿಸಿ ಆ ಹಾಡು ಕೂಡ ಕನ್ನಡದಲ್ಲಿ ಹಿಟ್ ಆಯಿತು ಇಂದಿಗೂ  ಕೂಡ ಜನಪ್ರೀಯ ಹಾಡುಗಳಲ್ಲಿ ಒಂದಾಗಿದೆ.]   
  • ನೀ ಬಂದು ನಿಂತಾಗ  [ ಕಸ್ತೂರಿ ನಿವಾಸ ][  ಆ ಕಾಲದಲ್ಲಿಯೇ ಈ ಹಾಡಿನಲ್ಲಿ  ಸ್ಟೀರಿಯೋ ರೆಕಾರ್ಡಿಂಗ್ ಮಾಡಲಾಗಿದೆ. ಇದರಲ್ಲಿನ ಗಿಟಾರ್ ವಾದನ , ಪಿ.ಬಿ.ಶ್ರೀನಿವಾಸ್, ಎಸ.ಜಾನಕಿ ಅವರುಗಳ ಹಾಡಿಗೆ ಪೂರಕವಾಗಿ ನುಡಿಸಲಾಗಿದ್ದು ಅದು   ಈ ಗೀತೆಯ ಹೈ ಲೈಟ್ ಆಗಿ   ಅಂದಿನ ಕಾಲಕ್ಕೆ ಕನ್ನಡ ಚಿತ್ರಗಳಲ್ಲಿ ಪ್ರಥಮ ಸ್ಟೀರಿಯೋ  ರೆಕಾರ್ಡಿಂಗ್ ಹಾಡಾಗಿ  ಈ ಹಾಡು ಉತ್ತಮ ಸ್ಟೀರಿಯೋ ಸಂಗೀತದ ಸ್ಪಷ್ಟ  ಅನುಭವ ನೀಡಿ ಹಿಟ್ ಆಯಿತು.                                                                                                                            *ನಾರಿಯ  ಸೀರೆ  ಕದ್ದ , ರಾಧೆಯ  ಮಾನವ  ಗೆದ್ದ  , [ದಾರಿ  ತಪ್ಪಿದ  ಮಗ]