Sunday, September 2, 2012

ಪಂಚ ಪುಸ್ತಕ ಬಿಡುಗಡೆಯಲ್ಲಿ ಬ್ಲಾಗರ್ಸ್ ತುಂಟಾಟ !!!! ಪ್ಲೀಸ್ ಯಾರಿಗೂ ಹೇಳ್ಬೇಡಿ !!!!



ಕಳೆದ ಶನಿವಾರ 25/08/2012 ರಂದು  ಬೆಂಗಳೂರಿನ   ಬಸವನಗುಡಿ "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್  ಕಲ್ಚರ್ " ವಾಡಿಯಾ ಹಾಲ್ ನಲ್ಲಿ   ಎಂಥಾ ಮಜಾ ಗೊತ್ತಾ ......???  ಬ್ಲಾಗ್ ಲೋಕದ ಐದು ಜನ  ಗೆಳೆಯರ  ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ. ಐದೂ ಜನರೂ ಬ್ಲಾಗ್ ಲೋಕದಲ್ಲಿ ಅಸಮಾನ್ಯರೆ ಬಿಡಿ. ಅಲ್ಲಿ ನಡೆದ ಕಾರ್ಯಕ್ರಮದ ನಗೆ ನೋಟ ಇಲ್ಲಿದೆ. ಎಲ್ಲರ ಫೋಟೋಗಳಿಗೆ ನಗೆ ಶೀರ್ಷಿಕೆ ನೀಡುವ ಪ್ರಯತ್ನ  ದಯಮಾಡಿ ಯಾರೂ ತಪ್ಪು ತಿಳಿಯದೆ ನಕ್ಕು ನನ್ನನ್ನು ಮನ್ನಿಸಿ.ನಗು ಬರದಿದ್ದರೆ ಸುಮ್ಮನೆ ಕಂಪ್ಯೂಟರ್ ಸ್ಕ್ರೀನ್ ಗೆ ಒಂದು ಗುದ್ದು ಕೊಟ್ಟು ಚಿಂದಿ ಉಡಾಯ್ಸಿ . ನೀವ್ ರೆಡಿನಾ ?????......ಬನ್ನಿ ಹೀಗೆ  ಜೊತೆಯಾಗಿ ಸಾಗೋಣ. .......................................






ಹಾಯ್  ನಿಮಗೆ ಸ್ವಾಗತ



 

 

ಶಿಡ್ಲಘಟ್ಟದಲ್ಲಿ  ಎಲ್ಲಾ ಓ.ಕೆ.ನಾ




 

ಏನ್ಮಾಡೋದು  ಆಫಿಸ್ಗೆ ರಜಾ ಇಲ್ಲಾ ಸಾರ್







ಯಾರಿಗೆ ಸಹಾಯ ಮಾಡ್ಲಿ ಸಾರ್







ದೂರದಲ್ಲಿ ಪಿಸುಮಾತಾಡಿದ  ಮಂಜು





ನೀವ್ ನೋಡೋ ಫೋಟೋ ಇಲ್ಲಿಲ್ಲಾ







 
ಸಧ್ಯ ಬಜಾವಾದೆ







ಪ್ರೀತಿಯ ಅಳಿಮಯ್ಯ  ಹೂ ಕೊಟ್ಟ ಸಮಯ.




ನಂ ಕ್ಯಾಮರ ಕೈ ಕೊಟ್ಟಿದೆ ಸಾರ್









ಯಾರ್ಯಾರ್  ಫೋಟೋದಲ್ಲಿ ಹ್ಯಾಗೆ ಹ್ಯಾಗೆ ಬರ್ತೀವೋ ಯಾರಿಗ್  ಗೊತ್ತು




 


ಪಕ್ಕದಲ್ಲಿರುವ  ಸುಂದರ ಹುಡುಗರ ಬದಲು  ಇನ್ಯಾರ ಫೋಟೋ ಕ್ಲಿಕ್ಕಿಸಿದಿರೀ  ಮಲ್ಲಿಕ್








ನಮ್ಮ ಬದರಿ ಎಲ್ಲರ ಅಚ್ಚು ಮೆಚ್ಚು








ಏನ್ ಮಾಡೋದು ಬೇಗ ಹೋಗ್ಬೇಕೂ ಸಾರ್  ಬೇಜಾರ್ ಆಗುತ್ತೆ ಅಂದಾ ಇಬ್ಬರು


















ಎತ್ತಣ ''ಇಟ್ಟಿಗೆ ಸಿಮೆಂಟು''  ಎತ್ತಣ " ಜಲನಯನ '' ಆದರೂ ನಾವ್ ಹಿಂಗೆ ಸಾರ್ .










ಏನ್ ಸಾರ್ ಸಮಾಚಾರ .....









ನಿಮ್ಮ  ಹೊಟ್ಟೆ ಫೋಟೋ ತೆಗೀಲಾ  ಬದರಿ ಸರ್






ನೋಡಿ ಸಾರ್  ಬಡವರ ಹೊಟ್ಟೆ ಮೇಲೆ ಕಣ್ಣು ಇವರಿಗೆ






ಯಾಕ್ರೀ  ಶ್ರೀಕಾಂತ್  ಹೊಟ್ಟೆ ಫೋಟೋ ತೆಗೆದ್ರೀ ??






ನಿಮ್ಮ ಫೋಟೋಗೆ ನನ್ನ ದೊಡ್ಡ ನಮಸ್ಕಾರ








3 ಕೆ.ರೂಪ ಸತೀಶ್   ಬಂದ್ರೂ  ಜಾಗಾ ಬಿಡಿ






ಫೋಟೋ ತೆಗೀತಾರೆ  ಈ ಕಡೆ ನೋಡ್ರಪ್ಪಾ








ಎಲ್ಲಾ  ಹೊಸ ಮುಖಗಳೇ ಆಲ್ವಾ ....??






ಏನಿದು  ಕುಚುಕೂ ಕುಚುಕೂ ........ಇವರಿಬ್ಬರ್ದೂ






ಯಾರೋ ಬ್ಲಾಗ್ ಮಂದಿ ಅಂತೆ  ಪುಸ್ತಕ ಬಿಡುಗಡೆ ಮಾಡ್ತಾರಂತೆ







ಜಾಲಿ ಬಾರಿನ ಹುಡುಗ  ನನ್ನ ಹಿಂದೆ ಇದ್ದಾನೆ  ಹುಷಾರು







ನಾವಿದ್ದೀವಿ  ಏರ್ಸಿ ಬಿಡಿ  ಬದರಿ ಸಾರ್







ಆಹಾ ..... ಖಾಲಿ ಪ್ಲಾಸ್ಟಿಕ್  ಲೋಟವೆ  ......, ಏನೀ ನಿನ್ನಯ ಮಾಯೆ







ಹೆದರ್ ಬೇಡಾ ಅಜಾದು ......ನಾನಿದ್ದೇನೆ .ಒಂದ್  ಕೈ  ನೋಡೇಬಿಡೋಣ










ರೂಪಕ್ಕನ 3 ಕೆ ಗುಂಪಿನ ಜೊತೆ ದಿನಕರ @ ಪದೆಯಪ್ಪನ್
\





 ನನ್ನ ಆಸೆ ಚೌಚೌಬಾತು  ..............ಅದನು ತಿಂದೂ ನೀವು ಆಡಿ  ಕನ್ನಡ ಮಾತು.








ನಮ್ ಫೋಟೋ ಯಾಕೆ..?ಬೇಡ ಬಿಡೀ ಸಾರ್ ಅಂದ್ರೂ  ನಮ್ಮ ಆಹಾರ  ಮಂತ್ರೀ





ಫೋಟೋ ನೋಡಿ ಬೇಸರ  ಆಯ್ತಾ  ಸ್ವಲ್ಪ ಬ್ರೇಕ್ ತಗೋಳಿ.









ಈ ದೊಡ್ಡವರ ಸಹವಾಸ ಸಾಕೋ ಸಾಕು.





ಬಾಳ್ ಚಲೋ   ಮಂದಿ ಬರ್ತಾರ್ರೀ





ಯಾರಾದ್ರೂ  ಬೇಗ ಬಂದು ಕಾರ್ಯಕ್ರಮ ಶುರುಮಾಡಿ ಸಾರ್








ಕಾರ್ಯಕ್ರಮ ಪ್ರಾರಂಭ  ಆಗ್ತಾ ಇದೆ ದಯವಿಟ್ಟು ಒಳಗೆ ಬನ್ನಿ








ನಾವ್ ಬಂದ್ವಿ ಕಾರ್ಯಕ್ರಮ ಶುರು ಮಾಡಿ ಮತ್ತೆ







ಏನ್ ಸಮಾಚಾರ  ...??ಖುಷಿಯಾಯ್ತು ನಿಮ್ಮನ್ನು ನೋಡಿ







ಒಂದ್ಸಾರಿ  ಹೇಳಿದ್ರೆ ಗೊತ್ತಾಗಲ್ವಾ ....? ಹುಸಿಮುನಿಸು







ಬಹಳ ಸಂತೋಷ ನಿಮ್ಮನ್ನು ಕಂಡಿದ್ದು.... ಸಿರ್ಸಿ ಮಾರಿಕಾಂಬೆ ಕೃಪೆ ನಿಮಗಿರಲಿ.












ನಮ್ ಹೆಂಡ್ರು ಎಲ್ಲಿ .......??







ಇವ್ರು  ಹಾಗೆ......!!!! ಯಾವಾಗಲೂ  ನನ್ನ ಹುಡುಕ್ತಾನೆ ಇರ್ತಾರೆ ....










 ಸದ್ದಿಲ್ಲದೇ  ಬಂದ ಡೀಸೆಂಟ್  ಜೋಡಿ







ಅಮ್ಮಾ  ಪುಸ್ತಕ ಬಿಡುಗಡೆ ಅಂದ್ರೆ   ಲಾಲಿ ಪಪ್  ತಿಂದ ಹಾಗೆ ಆಲ್ವಾ ..??









 
ನಮ್ ಪ್ರಕಾಶ  ಏನೇ ಮಾಡಿದರೂ ಖುಷಿನೇ





ಗಾನ ಕೋಗಿಲೆಗಳ  ನಗುವಿನ ಮೋಡಿ 










ಕಾರ್ಯಕ್ರಮಕ್ಕೆ ನಾವ್ ರೆಡಿ






ಒಂದಾಗಿ ಬಿಡುಗಡೆ ಮಾಡೋಣ ಬನ್ನಿ






ಬಂದ್ವೂ ನೋಡಿ!!!ನೀವ್ ಕಾಯುತ್ತಿರುವ  ಪುಸ್ತಕಗಳು  ಹೊರಗೆ




ತಗೋಳಿ ಎಲ್ಲರೂ......   ಪುಸ್ತಕ ಬಿಡುಗಡೆ ಮಾಡೋಣ


 ಯಾವ್  ಯಾವ್ ಪುಸ್ತಕ  ಬಿಡಗಡೆ ಆದ್ವೂ .....???






ನಾವ್ ಬಿಡುಗಡೆ ಮಾಡಿದ ಪುಸ್ತಕಗಳು ಇವು






ಪ್ರಕಾಶ  ನನ್  ಬಟಾಣಿ      ಎಲ್ಲಿ .....??





ಎಲ್ಲರಿಗೂ ಎರಡು ಕೈ ಬೇಕಾದ್ರೆ  ನನಗೆ ಮಾತ್ರಾ ಒಂದೇ ಕೈ ಸಾಕು




ನಮ್ ಪುಸ್ತಕ ನಮ್ಮ ಖುಷಿ








ಬ್ಲಾಗ್  ಜಗತ್ತು ನನಗೆ ಹೊಸದು ... ಆದರೂ ಒಳ್ಳೆ ಕಾರ್ಯಕ್ರಮ






ಜಾಲಿ ಬಾರಲ್ಲಾ  ಬಿಡಿ  ಇವರು ಜಾಲಿ ಬ್ಲಾಗರ್ಸ್







ಪ್ರಕಾಶನ  ತಿಳಿ ಹಾಸ್ಯ   ಜೀವನದ  ನೈಜ ಘಟನೆಗಳ ಹೂರಣ.




ಲಾಲಿ ಪಪ್  ತಿಂತಾ  ಯಾವ್ ಯಾವ್ ಪುಸ್ತಕಾ ಅಂತಾ ನೋಡೋಣ ಬನ್ನಿ






ಈ ಪುಸ್ತಕ ಓದಿದರೆ  ಪ್ರೀತಿ , ಸ್ನೇಹ ಮೂಡೋದು  ಗ್ಯಾರಂಟೀ






ದೇಸಾಯರ ಕನವರಿಕೆ  ಹನಿ ಹನಿಗಳಾಗಿ  ಮೂಡಿ ಬಂದಾಗಿನ ಕಿಕ್




ಪ್ರೀತಿಯಿಂದ  ಬ್ಲಾಗಿಸಿ  ಭಾರಿಸೋಣ ಕನ್ನಡ ಡಿಂಡಿಮ







ಅಜಾದಣ್ಣನ  ಬಟಾಣಿ ಚಿಕ್ಕಿ ,,ಆಹಾ  ಕಟುಂ  ಕಟುಂ   ಬೊಂಬಾಟ್





ಪ್ರಕಾಶಣ್ಣನ ತಿಳಿ ಹಾಸ್ಯಕ್ಕೆ  ಯಾವ ಹೆಸರೂ ಇಲ್ಲ







ಸುಗಂದ ತೀಡುವ ವಸಂತ ಪವನ



ಪಾತರಗಿತ್ತಿಯ  ಪಕ್ಕವನೇರಿ .............!!!







ಜುಳು ಜುಳು ಹರಿಯುವ ಕಾಲದ  ಹೊಳೆಯಲ್ಲಿ








ನಿಮ್ಮ  ಜ್ಞಾನದ ಹಣತೆ ನಿರಂತರ ಬೆಳಗಲಿ 






ನಿಮ್ಮ ಜ್ಞಾನದ  ಸಿರಿ ಎಲ್ಲರಿಗೂ ಸಿಗಲಿ





ಕಲಾದೇವಿಯ ಹೆಮ್ಮೆಯ ಪುತ್ರಿಗೆ  ಪ್ರೀತಿಯ ನಮನ





ಬನ್ನಿ ಲೇಖಕರೆ  ಮಾತಾಡಿ







ಇರಪ್ಪಾ  ಇನ್ನೂ ಇದೆ    ಮೈಕ್ ತೆಗೀಬೇಡಾ







 ನನ್ನೆಲ್ಲಾ  ಸುಂದರ ಕನವರಿಕೆ  ನಿಮ್ಮದಾಗಲಿ






 ನಮ್ಮ  ಬರವಣಿಗೆಯ  ಇಟ್ಟಿಗೆಗೆ  ಬೇಕು ನಿಮ್ಮೆಲ್ಲರ ಪ್ರೋತ್ಸಾಹದ ಸಿಮೆಂಟು






ಪ್ರೀತಿಯಿಂದ ಬ್ಲಾಗಿಸೋಣ  ಬನ್ನಿ







ನಾವಿಬ್ಬರೂ  right  selection ನೇ





ನಿಮ್ಮ  ಪ್ರತಿಭೆ  ಮತ್ತಷ್ಟು ಬೆಳಗಲಿ





ದಿಗ್ವಾಸ  ಸ್ವಲ್ಪ ಬೀರು ಮಂದಹಾಸ



ಈ ಹುಡುಗ  ಪ್ರತಿಭಾವಂತಾ ಸಾರ್




ನಿಮ್ಮಿಂದ  ಮತ್ತಷ್ಟು ಹಾಡು ಹುಟ್ಟಿಬರಲಿ .....ಮಣಿಕಾಂತಾ








ನಿಮ್ಮ ಚಂದದ  ನಿರೂಪಣೆಗೆ ನಮ್ಮ ಸಲಾಂ






ಇದೊಂದು ಸುವರ್ಣ ಗಳಿಗೆ





ಅಮ್ಮಾ  ............ಬೇಜಾರು





ಬನ್ನಿ ಸ್ವಲ್ಪ ತರ್ಲೆ ಮಾಡೋಣ 






 ದಿನಕರ್  ಮೊಗೆರಾ ತಲೆಗೆ ಇಲ್ಲಿ ನಡೆದಿದೆ  ಜ್ಞಾನ ಸಿಂಚನ






 ಕ್ಯಾಮರ ಹಿಂದಿನ ಅನಿಲ್...... ನಗು  ಯಾರಿಗೆ






 
ನಾ ಇಟ್ಟಿಗೆ ಆದರೆ  ಅವಳೇ ಸಿಮೆಂಟು  ಇದಕ್ಕೆ ಬೇಡಾ ಯಾವ ಸೆಂಟಿಮೆಂಟು 







 ಇಲ್ಲಿ ನೋಡಿ ಮ್ಯಾಚಿಂಗ್ ಮ್ಯಾಚಿಂಗ್[ ತಲೆಗಳನ್ನ ಮಾತ್ರಾ  ನೋಡಿ ]






ಯಾಕೋ ಗ್ಯಾಸ್ ಮಹಾದೇವ ಜ್ಞಾಪಕಕ್ಕೆ ಬಂದಾ 







ನನ್ನೆತ್ತರಕ್ಕೆ ನೀ ಬೆಳೆಯಬಲ್ಲೆಯಾ ...................!!!

 

 

 

 

 

 




ದೊಡ್ಡವರೆಲ್ಲಾ  ಜಾಣರಲ್ಲಾ .........!!!








ಕದ್ದು  ನೋದೊದ್ರಾಗೆ  ಮಜಾ ಐತೆ











ಬಾ ಗೆಳೆಯ  ಬಾಂಗ್ರಾ  ಡ್ಯಾನ್ಸ್  ಮಾಡೋಣ .........ಬಲ್ಲೆ ಬಲ್ಲೆ 

 

 

 








ನಮ್ಮ  ಸಂ ..................ಸಾರ  ನನ್ನ ಕೈಲಿದೆ






ನಗೆಯ ಕಾಂತಿ   ಚೆಲ್ಲಿದೆ ನೋಡಿ







ಬ್ಲಾಗ್ ಲೋಕ ಅಂದ್ರೆ ಇದೆಲ್ಲಾ ಇದ್ಯಾ ...........!!!












ಇವರೆಲ್ಲಾ ಯಾರೂ  ಒಂದೂ ಅರ್ಥಾ ಆಗ್ತಿಲ್ಲಾ ರೀ







ಮಂಜು ಕರಗುವ ಸಮಯ








ಆಯ್ತು ಮಣಿಕಾಂತ್  ಸಾರ್ ಹಾಗೆ ಮಾಡ್ತೀನಿ 







ನಮ್ ಹುಡುಗರೂ  ರೀ





 

ಕೀಟ್ಲೆ  ಪ್ರಕಾಶಣ್ಣನ  ಜೊತೆ  ಯುವ ಜೋಡಿ








 

ಇದು ಮಾತೋ ..... ಅಥವಾ  ರೂಪೋ  ಹೇಳಿ






 

ಹ ಹ ಹ  ನಾವು ಮಾತಾಡಿದ್ದು ಮಾತು  ಆಲ್ವಾ ...........!!








ಕೈ ಕೊಟ್ಟ ನಮ್ ಮಾವ ನೋಡಿ ಕೊಡುವ ಪೋಸು ......!!!!









ಕಿವಿ  ಹಿಂಡೋದು  ಹೀಗೆ .....!!!!







 

ಭಲೇ  ಪ್ರಕಾಶ









ಹೂ ಕೊಡೋಕೆ   ನಮ್ಮಾಕಿ  ಸಿಕ್ತಿಲ್ಲಾ








 

ಹೂ ಕೊಡೋಕೆ ಹುಡುಕಿದ್ದು ನಮ್ಮ ಶ್ರೀಮತೀನ  ಸಾರ್








ವಾವ್  ವಾವ್  ಕ್ಯಾ ಕಮಾಲ್  ಕರ್ದಿಯಾ  ಮೈನೆ







ನಂಬರ್ ಸರಿಯಿದೆ ಆದ್ರೆ   ......ನಿಮ್ಮಿಂದಾ .ಕಾಲ್ ಬರೋಲ್ಲಾ  ಯಾಕೆ.???










ಇವರ ಸಹವಾಸ ಸರಿಯಿಲ್ಲಾ  ಸಾರ್ ... ಫೋಟೋ ದಲ್ಲಿ ಅಣಕಿಸ್ತಾರೆ







ನಮಸ್ಕಾರ ಶಿವೂ ಸರ್  ನಿಮ್ಮದು ವಂಡರ್ ಕಣ್ಣು ಸಾರ್








3.ಕೆ  ಬಳಗ  ಕರೆಯಿತು  ಶಿವೂ  ಬನ್ನೀ ಅಂತಾ









 

ಇವ್ರು  ಸುಮ್ನೆ ಹೀಗೆ ನಿಂತರೆ??  ............ಡೌಟು  ... ಸಾರ್

ಅದ್ಸರಿ ಇಲ್ಲಿ ನಡೆದದ್ದು ಏನು........!!!!!! ಇವರೆಲ್ಲಾ ಏನ್ ಮಾಡಿದ್ರೂ ....??

 

 







ವಂಡರ್  3.ಕೆ  ಗ್ರೂಪ್  ವಿತ್  ವಂಡರ್ ಕಣ್ಣು







ಆಪತ್ಕಾಲದ  ನೆಂಟರು  ಇವರು






 

ಸದ್ದಿಲ್ಲದೇ  ವರದಿ ಬರೆದವರು ಇವರು






ಹಲವು ಪ್ರತಿಭೆಗಳ ಆತ್ಮೀಯ  ಸಂಗಮ







ಬಾರೋ ರಾಜ ಕುಮಾರ .............!!!......ಅಮ್ಮ  ಏನ್ ಮಾಡ್ತಿದೆ??







 

ಕಾರ್ಯಕ್ರಮ ಮುಗಿದರೂ  ಯಾರೂ ಜಾಗ ಬಿಡಲೊಲ್ಲರು








ಇವರ ಬಗ್ಗೆ  ಆಮೇಲೆ ಹೇಳ್ತೀನಿ ಅಂದ ಪ್ರಕಾಶಣ್ಣ  ಕೊನೆಗೂ ಹೇಳಲಿಲ್ಲಾ










ಮತ್ತೊಮ್ಮೆ  ನಾವು ಪುಸ್ತಕ ಬಿಡುಗಡೆ ಮಾಡಿದ್ದು ಹೀಗೆ 







ಗುಬ್ಬಚ್ಚಿ  ಗೆಳೆಯನಿಗೆ ಗುಬ್ಬಚ್ಚಿ  ನೆನಪಿನ ಕಾಣಿಕೆ ನೀಡಿದ ಪ್ರಚಂಡರು





3.ಕೆ ಬಳಗದ ನಲಿವು






 

ಈ ಕಾರ್ಯಕ್ರಮ  ಯಾರೂ ಕೆಮ್ಮನ್ಗಿಲ್ಲಾ ಸಾರ್






 ಈ ಕಾರ್ಟೂನ್ ನನಗೆ ಇಷ್ಟಾ  ಆಯ್ತು........!!!!




ಗೆಳೆಯನ ಬೆನ್ನಹಿಂದೆ  ಸಂತಸದಿ ಸದ್ದಿಲ್ಲದೇ ನಿಂತ  ಸತ್ಯಣ್ಣನ  ಕುಟುಂಬ





ಇಟ್ಟಿಗೆ , ಸಿಮೆಂಟು,  ಜಲ, ನಯನ   ಎಲ್ಲದರ  ಸಮ್ಮಿಲನ.





 

ಪುಸ್ತಕ ಬರೆದ ತಪ್ಪಿಗೆ ಹಸ್ತಾಕ್ಷರ ನೀಡುವ ಶಿಕ್ಷೆ






 

 ನಿಜವಾಗಲೂ ಬರೆದದ್ದು ಇದೆ ಗೊತ್ತಾ







 ನೋಡೀ ಸ್ವಾಮೀ ನಾ ಬರೆಯೋದು ಹೀಗೆ 






 

 

ಉಮೇಶ್ ದೇಸಾಯರ  ಅಂಬೋಣ ಇಲ್ಲಿದೆ











 ನಾವೆಲ್ಲಾ ಖುಶಿ ಪಟ್ಟೆವು ಗೊತ್ತಾ








ಪುಸ್ತಕ ಬಿಡುಗಡೆ  ಆಯ್ತು ,ಈಗ ಚೆಕ್ ಬರೆಯುವ ಸಮಯ








 

ಈಗಲಾದರೂ   ಪ್ಲೀಸ್   ಮದುವೇ    ಮಾಡ್ಸಿ ಮಾವ







ಎಲ್ಲಾ  ಅಳಿಯಂದಿರೂ  ಮದುವೇ ಆದ್ರೆ  ನನ್ಕಥೆ ಏನು....  ಹೋಗ್  ಹೋಗು   ಅಳಿಯ







 

ಇಲ್ಲಿ ಓದಿದ್ದನ್ನು  ಯಾರಿಗೂ ಹೇಳ್ಬೇಡಿ ಪ್ಲೀಸ್








ಹೋಗಿ ಬರ್ತೀವಿ ಎಲ್ಲರಿಗೂ ಥ್ಯಾಂಕ್ಸ್



 

ಫೋಟೋಗಳು  ಚೆನ್ನಾಗಿದ್ಯಾ ....??? ಖುಶಿಆಯ್ತಾ ...??? ಮತ್ತೆ ಸಿಗೋಣ  .... !!!

ಹೇಗಿತ್ತು ನಮ್ಮ ಬ್ಲಾಗರ್ಸ್ ತುಂಟಾಟ  ಸ್ವಲ್ಪ  ಐಸೀ  ಸ್ವಲ್ಪ ಸ್ಪೈಸೀ  ಆಲ್ವಾ , ಆದ್ರೆ ಪ್ಲೀಸ್ ಇದನ್ನು  ಯಾರಿಗೂ  ಹೇಳ್ಬೇಡಿ .....ಆಯ್ತಾ  ?

Wednesday, August 22, 2012

ಹುಚ್ಚಾ ... ಸಾರ್ ಹುಚ್ಚಾ ..........................????

ಇದು ಸುಮಾರು ಇಪ್ಪತ್ತು  ವರ್ಷಗಳ ನೆನಪು , ನಾನು ಒಂದು ಪಟ್ಟಣದಲ್ಲಿ ಕೆಲಸದಲ್ಲಿದ್ದೆ. ನಾನಿದ್ದ ಆಫಿಸ್ ಬಳಿ ಒಬ್ಬ  ಅಲೆಮಾರಿ  ಭಿಕ್ಷುಕ ಅಲೆದಾಡುತ್ತಿದ್ದ. ಹರಿದ ಕೊಳಕು ಮಾಸಲು ಪ್ಯಾಂಟು, ಹರಿದ ಅಂಗಿ ಧರಿಸಿಕೊಂಡು , ಮೈಯೆಲ್ಲಾ ಕೊಳಕಾಗಿ, ಮುಖ ಮುಚ್ಚುವಂತಾ ಗಡ್ಡ ,ಬಿಟ್ಟುಕೊಂಡು  ಅಲೆದಾಡುತ್ತಿದ್ದ .ಅವನಿಗೆ ತಲೆ ಸರಿ ಇಲ್ಲಾ ಸಾರ್ , ಸುಮ್ಮನೆ ತನಗೆ ತಾನೇ ಮೆತ್ತಗೆ ಮಾತಾಡುತ್ತಾನೆ. ಅವನ ಮಾತು ಯಾರಿಗೂ ಕೇಳೋಲ್ಲ. ಅವನೂ ಸಹ ಯಾರ ಜೊತೆಗೂ ಮಾತಾಡಲ್ಲಾ . ಬೀದಿಯಲ್ಲಿ ನೆಲಕ್ಕೆ  ಬಿದ್ದ ಆಹಾರ ಸೇವಿಸುತ್ತಾನೆ., ಮೊನ್ನೆ ನೋಡಿ ಸಾರ್  ನಮ್ಮ ಕ್ಯಾಂಟೀನ್ ಮುಂದೆ ಚರಂಡಿಯಲ್ಲಿ ಬಿದ್ದ ಅನ್ನವನ್ನು ತಿನ್ನುತ್ತಿದ್ದಾ. ಅಂತಾ ಕ್ಯಾಂಟೀನ್ ಯಜಮಾನ  ನಾರಾಯಣ ಹೇಳ್ತಾ ಇದ್ದರು . ಅಲೆದಾಡುತ್ತಿದ್ದ  ಕೆಲವು ಮಕ್ಕಳು  ಅವನನ್ನು ಹುಚ್ಚಾ ಅಂತಾ ಕಲ್ಲು ಹೊಡೆದು ಪೀಡಿಸುತ್ತಿದ್ದರು. ಆದರೂ ಅವನು ಯಾವುದೇ ಪ್ರತಿಕ್ರಿಯೆ ತೋರದೆ  ತನ್ನ ಪಾಡಿಗೆ ತಾನು ನೋವನ್ನು ಅನುಭವಿಸುತ್ತಿದ್ದನು. ನಾವುಗಳೂ ಸಹ ಅವನ ಬಗ್ಗೆ ಅಯ್ಯೋ ಅನ್ನಿಸಿ  ಕೆಲವೊಮ್ಮೆ ಕ್ಯಾಂಟೀನ್ ನವರಿಗೆ ದುಡ್ಡುಕೊಟ್ಟು ತಿಂಡಿ,ಕಾಫಿ ಕೊಡಲು ಹೇಳುತ್ತಿದ್ದೆವು. ಒಟ್ಟಿನಲ್ಲಿ ಸಾರ್ವಜನಿಕರ ಅನುಕಂಪಕ್ಕೆ ಒಳಗಾಗಿದ್ದ ಆ ವ್ಯಕ್ತಿ.

ಒಂದು ದಿನ  ಆಫಿಸ್ ಗೆ ತೆರಳುತ್ತಿದ್ದೆ. ಛೆ ಯಾರನ್ನ ನಂಬೋದ್ರೀ , ಕೆಟ್ಟ ಜನ , ಅಲ್ಲಾ ಅವನ್ನ ನಂಬಿದ್ವಲ್ಲಾ  ಎಂತಾ ಜನಾ ನಾವು................!!! ಅವನಿಗೆ   ಸರಿಯಾಗಿ ಆಯ್ತು ಬಿಡಿ , ಅಂತಾ ತಲೆಗೆ ಒಂದರಂತೆ ಮಾತು ಜನ ಆಡುತ್ತಿದ್ದರು.ಇದೇನಿದು ಅಂತಾ ನನಗೂ ಅಚ್ಚರಿ.  [ಈ ದಿನಗಳಂತೆ ಅಂದು ಮಾಧ್ಯಮಗಳ  ಪ್ರಚಲತೆ ಇರಲಿಲ್ಲ ಬಿಡಿ , ಅದರಿಂದಾ ಒಂದು ಘಟನೆ ಜನರಿಗೆ ತಲುಪಲು ಕೆಲವು ದಿನಗಳೇ ಬೇಕಾಗುತ್ತಿತ್ತು. ಕೆಲವೊಮ್ಮೆ ವರದಿಯೇ ಆಗುತ್ತಿರಲಿಲ್ಲ .] ಹಾಗೆ ಮುಂದುವರೆದೆ  ಎದುರಿಗೆ ಬಂದ ಗೆಳೆಯನೊಬ್ಬ. ಲೋ ಗುರು ನೀನು ತಿಂಡಿ ಕೊಡಿಸುತ್ತಿದ್ದೆಯಲ್ಲಾ  ಆ  ಹುಚ್ಹ  ಅವನನ್ನು ಪೋಲಿಸ್ ಅರೆಸ್ಟ್ ಮಾಡಿದ್ದಾರೆ ಅಂದಾ .......!!! ಯಾಕೋ ಏನ್ಸಮಾಚಾರ ?   ಅಂದೇ......!!! ಬಹಳ  ಖತರ್ನಾಕ್ ಜನ ಕಣೋ ಅವ್ನೂ ...ನಿನ್ನೆ ರಾತ್ರಿ  ಗಸ್ತಿನಲ್ಲಿದ್ದ ಪೋಲಿಸ್ ನವರ ಕೈಗೆ ಸಿಕ್ಕಿದ್ದಾನೆ ಪಾಪಿ ಅಂದಾ..    !!! ಅದೇನು ಸರಿಯಾಗಿ ಹೇಳಪ್ಪಾ ನನಗೆ ಅರ್ಥಾ ಆಗ್ತಿಲ್ಲಾ  ಅಂತಾ ಕೇಳಿದೆ. ಅವನು ಹೇಳಿದ್ದು ಇಷ್ಟು .

ರಾತ್ರಿ  ಗಸ್ತಿನಲ್ಲಿದ್ದ  ಪೋಲಿಸ್    ತಿರುಗುತ್ತಾ  ಪೋಸ್ಟ್ ಆಫಿಸ್ ಹತ್ತಿರ ಬಂದರಂತೆ  ಆಗ ವ್ಯಕ್ತಿ ಒಬ್ಬ ಪೋಸ್ಟ್ ಡಬ್ಬದ ಹತ್ತಿರ  ಏನನ್ನೋ ಹಾಕುತ್ತಾ  ಅನುಮಾನಾಸ್ಪದವಾಗಿ     ಓಡಾಡುತ್ತಿದ್ದ ಅದನ್ನು ಕಂಡು ಹತ್ತಿರ ಹೋದಾಗ  ಓಡಲು  ಶುರುಮಾಡಿದ , ಪೋಲಿಸ್ ನವರು ಬೆನ್ನಟ್ಟಿ ಅವನನ್ನು ಹಿಡಿದರೆ  , ಅವನನ್ನು ನೋಡಿ ಅಚ್ಚರಿ ........!!! ಅದೇ ಅದೇ ಹುಚ್ಚಾ .....!!!! ಅವನ ಬಳಿ ಇದ್ದ  ಗಂಟನ್ನು ತಪಾಸಣೆ ಮಾಡಿದಾಗ ಹಲವಾರು ದಾಖಲೆಗಳನ್ನು ಕಂಡರಂತೆ. ಮಾರನೆದಿನ ಅಂಚೆ ಕಚೇರಿಗೆ ತೆರಳಿ  ಇವನು ಪೋಸ್ಟ್ ಮಾಡಿದ್ದ  ಪೋಸ್ಟ್ ದಾಖಲೆ ತೆಗೆದಾಗ ಇವನೊಬ್ಬ ಕುಖ್ಯಾತ ಕಳ್ಳಾ , ಕೊಲೆಗಾರ ಅಂತಾ ಗೊತ್ತಾಯಿತು. ಯಾವುದೋ ರಾಜ್ಯದಿಂದ  ಇಲ್ಲಿಗೆ  ಬಂದು ಹುಚ್ಚನಂತೆ ನಾಟಕವಾಡಿ  ತಲೆಮರೆಸಿಕೊಂಡಿದ್ದ ಒಬ್ಬ ಅಪರಾಧಿ ಹೀಗೆ ಬಲೆಗೆ ಬಿದ್ದಿದ್ದಾ. .................!!!!.ಅವತ್ತೇ ನನಗೆ ಒಂದು  ವಿಚಿತ್ರ ಸತ್ಯದ ದರ್ಶನ ಆಗಿತ್ತು. .

Sunday, August 12, 2012

ಬನ್ನಿ ಹೇಳೋಣ ಹೆಮ್ಮೆಯಿಂದ ನಾವೆಲ್ಲಾ ಭಾರತೀಯರೆಂದು.!!!!!


ದೇಶದ  ಸ್ವಾಂತ್ರ್ಯ ಪಡೆದ ನಂತರ ದ್ವಜ ಹಾರಿದ  ಸ್ಥಳ 

ಹೌದು  ಆಗಸ್ಟ್ ಹದಿನೈದು ಮತ್ತೆ ಬಂದಿದೆ. ಎಲ್ಲೆಲೂ ದೇಶದ ಹೆಮ್ಮೆಯ ಸ್ವಾತಂತ್ರ್ಯೋತ್ಸವ ಆಚರಣೆ ಬಗ್ಗೆ  ಸಿದ್ಧತೆ ನಡೆದಿದೆ. ಪ್ರತೀ ಶಾಲೆಯಲ್ಲಿ  ತಮ್ಮ ಮಕ್ಕಳನ್ನು  ಪ್ರತಿಭಾ ಪ್ರದರ್ಶನಕ್ಕೆ ಅಣಿಗೊಳಿಸುವ ಕಾರ್ಯ ನಡೆದಿದೆ.ಹೆಮ್ಮೆಯ ಆಚರಣೆಯ ಭರದಲ್ಲಿ  ನಾವು ಮೆಲುಕುಹಾಕುವ  ಘಟನೆಗಳು ನೆನಪಿಗೆ ಬರುತ್ತಿದೆ.ಹೌದು ಸ್ವಾತಂತ್ರ್ಯ ಹಬ್ಬದ ಆಚರಣೆಯ  ಸಮಯದಲ್ಲಿ  ನಾವೆಲ್ಲಾ ಭಾರತೀಯರೆಂಬ ಭಾವನೆಯ ದೀಪ ಬೆಳಗಿಸ ಬೇಕಾದ ಸಮಯ ಬಂದಿದೆ. ಸ್ವಾತಂತ್ರ್ಯ  ಬಂದು 65 ವರ್ಷಗಳು  ಪೂರೈಸಿದ್ದರೂ   ನಮಗೆ ಕೆಲವು ಸಾಮಾನ್ಯ ವಿಚಾರಗಳು ಅರ್ಥವಾಗಿಲ್ಲಾ ......!ಬನ್ನಿ  ನಮಗೆ ಅರ್ಥವಾಗಿಲ್ಲದ   ಕೆಲವು ವಿಚಾರಗಳನ್ನು ಗಮನಿಸೋಣ
ಬೋಲೋ ಭಾರತ ಮಾತಾಕಿ  ಜೈ
.
1) 2012 ಕ್ಕೆ ಆಚರಿಸುತ್ತಿರುವ  ಸ್ವಾತಂತ್ರ್ಯ ದಿನಾಚರಣೆ  65 ನೆಯದೋ ಅಥವಾ  64 ನೆಯದೋ ಎಂಬ ಗೊಂದಲ ಪ್ರತೀವರ್ಷದಂತೆ  ಈ ವರ್ಷವೂ ಕೂಡ ಇರುತ್ತದೆ. ಕೆಲವು ಆಹ್ವಾನ ಪತ್ರಿಕೆಗಳು . 65 ಎಂದರೆ  ಕೆಲವು 64 ಎನ್ನುತ್ತವೆ. ಇದೆ ಉದಾಹರಣೆ ಮುಖ್ಯ ಅತಿಥಿಗಳ ಭಾಷಣ ದಲ್ಲಿಯೂ  ಕಂಡುಬರುತ್ತದೆ.

Saturday, July 28, 2012

ಮೈ ದಿಲ್ಲಿ ಹೂ ....ಪಯಣ:-) 7 ಬಾನಂಗಳದ ಮೋಡಗಳ ಲೋಕದೊಳಗೆ !!!!


ದೆಹಲಿಯ ನೆನಪು  ನಗುವ ಹೂವಿನಂತೆ.     
ಹೆಂಡತಿ ..........ಕಾಲ್ ಮಾಡ್ತಾ ಇದ್ದಳು.!!!! ರೀ  ಏನ್ ಸಮಾಚಾರ , ಮನೆಗೆ ಬಾರೋ ಯೋಚನೆ ಇಲ್ವಾ ಅಥವಾ ದೆಹಲಿಯಲ್ಲೇ ಬಿಡಾರ ಮಾಡೋ ಯೋಚನೆ ಮಾಡಿಬಿಟ್ರಾ...........!!!! ಅನ್ನುತ್ತಾ ಹುಸಿಮುನಿಸು ತೋರಿದಳು. ಇಲ್ಲಾ ಮಾರಾಯ್ತಿ  ನಾಳೆ ವಾಪಸ್ಸು  ಹೊರಟಿದ್ದೇನೆ ಅಂದೇ. ಓ ಹೌದಾ ಸರಿ ಹಾಗಿದ್ರೆ  ನೀವು ಬೆಂಗಳೂರಿನ ಶ್ರೀಧರ್  ಮನೆಗೆ ಬನ್ನಿ ನಾನೂ ಅಲ್ಲಿಗೆ ಬರ್ತಾ ಇದ್ದೀನಿ. ವೇಣು , ಶ್ರೀಧರ್ ಎಲ್ಲಾ  ದಾಂಡೇಲಿ ಗೆ ಹೋಗೋದಿಕ್ಕೆ  ನಮ್ಮ ಕುಟುಂಬವನ್ನೂ ಸೇರಿಸಿ ಬುಕ್  ಮಾಡಿದ್ದಾರೆ , ಅಂದ್ಲೂ .............!!! ಸರಿ ಮಾರಾಯ್ತಿ  ಅಮ್ಮನವರ ಅಪ್ಪಣೆ ಅಂತಾ ಫೋನ್ ಇಟ್ಟೇ. ಅಷ್ಟರಲ್ಲಿ  ನನ್ನ ಕೋ ಬ್ರದರ್  ವೇಣು ಫೋನ್ ಬಂದು ಬಾಲು ನಾಳೆ ಬರ್ತಾ ಇದೀರಂತೆ  ಬೆಂಗಳೂರ್ ಗೆ ಬನ್ನಿ ನಾಳೆ ಎಲ್ಲಾರೂ ದಾಂಡೇಲಿ  ಹೋಗಲು ಬುಕ್ ಮಾಡಿದ್ದೇನೆ  , ಮಿಸ್ ಮಾಡ್ಬೇಡಿ ಆಮೇಲೆ ಅಂದ್ರೂ. ಆಯ್ತು ಅಂತಾ ಹೇಳಿದೆ. ರಾತ್ರಿಯೆಲ್ಲಾ ದೆಹಲಿಯಲ್ಲಿ ಕಳೆದ ದಿನಗಳ  ಮೆಲಕು ಹಾಕುತ್ತಾ  ನಿದ್ದೆಗೆ ಜಾರಿದೆ.